ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಫಾರ್ಮ್ 15H ಎಂದರೇನು: ಫಾರ್ಮ್ 15H ಅನ್ನು ಡೌನ್‌ಲೋಡ್ ಮಾಡಿ ಮತ್ತು ಭರ್ತಿ ಮಾಡಿ

60 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ನಿವಾಸಿಗಳು ತಮ್ಮ ಟ್ಯಾಕ್ಸ್ ಲಯಬಿಲಿಟಿಯು ವಿನಾಯಿತಿ ಲಿಮಿಟ್‌ಗಿಂತ ಕಡಿಮೆಯಿದ್ದರೆ ಫಾರ್ಮ್ 15H ಅನ್ನು ಸಬ್‌ಮಿಟ್‌ ಮಾಡಬೇಕು ಎಂದು ನಿಮಗೆ ತಿಳಿದಿದೆಯೇ?

ಈ ಫಾರ್ಮ್ ಒಂದು ಹಣಕಾಸು ವರ್ಷಕ್ಕೆ ವ್ಯಾಲಿಡ್ ಆಗಿರುವುದರಿಂದ, ಅದನ್ನು ಸಮಯಕ್ಕೆ ಸರಿಯಾಗಿ ಸಬ್‌ಮಿಟ್‌ ಮಾಡುವುದು ಮುಖ್ಯವಾಗಿದೆ. ಹೆಚ್ಚುವರಿಯಾಗಿ, ಇಂಟರೆಸ್ಟ್‌ ಇನ್‌ಕಮ್‌ ಮೇಲೆ ಬ್ಯಾಂಕ್ ಯಾವುದೇ ಟಿಡಿಎಸ್‌ ಅನ್ನು ಡಿಡಕ್ಟ್‌ ಮಾಡುವುದಿಲ್ಲ ಎಂದು ಇದು ಖಚಿತಪಡಿಸುತ್ತದೆ.

ಈ ಫಾರ್ಮ್, ಅದರ ಉಪಯೋಗಗಳು ಮತ್ತು ಫಾರ್ಮ್ 15H ಅನ್ನು ಹೇಗೆ ಭರ್ತಿ ಮಾಡುವುದು ಎಂಬುದರ ಕುರಿತು ಪ್ರಮುಖ ಸಂಗತಿಗಳನ್ನು ತಿಳಿಯಲು ಸ್ಕ್ರೋಲ್ ಮಾಡುತ್ತಿರಿ.

[ಮೂಲ]

ಫಾರ್ಮ್ 15H ಎಂದರೇನು?

ಫಾರ್ಮ್ 15H ಎನ್ನುವುದು ಟಿಡಿಎಸ್ ಅನ್ನು ಟ್ಯಾಕ್ಸ್ ಡಿಡಕ್ಷನ್ ಮಾಡದಿರಲು 60 ವರ್ಷಕ್ಕಿಂತ ಮೇಲ್ಪಟ್ಟ ಸೀನಿಯರ್ ಸಿಟಿಜನ್‌ಗಳು ಸಲ್ಲಿಸುವ ಸೆಲ್ಫ್ ಡಿಕ್ಲರೇಷನ್ ಸ್ಟೇಟ್‌ಮೆಂಟ್‌ ಆಗಿದೆ. ಇದು ಅಸೆಸ್ಸೀಯ ಒಟ್ಟು ಇನ್‌ಕಮ್‌ ಟ್ಯಾಕ್ಸೇಬಲ್ ಲಿಮಿಟ್ ಅನ್ನು ಮೀರದಿದ್ದಾಗ ರೆಕರಿಂಗ್ ಡೆಪಾಸಿಟ್‌ಗಳು ಅಥವಾ ಫಿಕ್ಸ್‌ಡ್‌ ಸೇವಿಂಗ್ಸ್‌ ಮೇಲಿನ ಇಂಟರೆಸ್ಟ್‌ ಮೇಲಿನ ಟಿಡಿಎಸ್‌ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಕೇಳಿಕೊಳ್ಳುವ ವಿನಂತಿ ಆಗಿದೆ.

ಸೀನಿಯರ್‌ ಸಿಟಿಜನ್‌ಗಳ ಉಳಿತಾಯದಿಂದ ಗಳಿಸಿದ ಇಂಟರೆಸ್ಟ್ ಮೇಲೆ ಟಿಡಿಎಸ್ ವಿನಾಯಿತಿಯನ್ನು ಭಾರತ ಸರ್ಕಾರವು ಅನುಮತಿಸುತ್ತದೆ. ಈ ಡೆಪಾಸಿಟ್‌ಗಳಿಂದ ಬರುವ ವಾರ್ಷಿಕ ಇಂಟರೆಸ್ಟ್‌ ಇನ್‌ಕಮ್‌ ₹50,000 ಮೀರಿದಾಗ ಟಿಡಿಎಸ್ ಡಿಡಕ್ಟ್‌ ಮಾಡಲಾಗುತ್ತದೆ.

ಅಪ್ಲಿಕೇಬಲ್‌ ಆಗುವ ಹಣಕಾಸು ವರ್ಷಕ್ಕೆ ಇಂಟರೆಸ್ಟ್ ಪೇಮೆಂಟ್‌ ಮಾಡುವ ಮೊದಲು ವ್ಯಕ್ತಿಗಳು ಫಾರ್ಮ್ 15H ಅನ್ನು ಡಿಡಕ್ಟರ್‌ಗೆ ಒದಗಿಸಬೇಕಾಗುತ್ತದೆ. ಹಿಂದಿನ ವರ್ಷದಲ್ಲಿ ಗಳಿಸಿದ ಇನ್‌ಕಮ್‌ ಟ್ಯಾಕ್ಸೇಬಲ್‌ ಇನ್‌ಕಮ್‌ ಬ್ರಾಕೆಟ್‌ನಲ್ಲಿ ಬರುವುದಿಲ್ಲ ಎಂದು ತಿಳಿಸಲು 15H ಫಾರ್ಮ್ ಅನ್ನು ಬಳಸಲಾಗುತ್ತದೆ.

[ಮೂಲ]

ಇನ್‌ಕಮ್‌ ಟ್ಯಾಕ್ಸ್‌ 15H ಫಾರ್ಮ್ ಡೌನ್‌ಲೋಡ್‌ಗೆ ಹಂತಗಳು ಯಾವುವು?

ಫಾರ್ಮ್ ಅನ್ನು ಡೌನ್‌ಲೋಡ್ ಮಾಡುವ ಹಂತಗಳು-

  • ಹಂತ 1: ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ "ಡೌನ್‌ಲೋಡ್‌ಗಳು" ಆಯ್ಕೆಯಿಂದ "ಆಫ್‌ಲೈನ್ ಯುಟಿಲಿಟೀಸ್" ಆಯ್ಕೆಮಾಡಿ.

  • ಹಂತ 2: ಲಭ್ಯವಿರುವ ಡೌನ್‌ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಜಿಪ್ ಫೈಲ್ ಅನ್ನು ಎಕ್ಸ್‌ಟ್ರಾಕ್ಟ್‌ ಮಾಡಿ.

  • ಹಂತ 3: ಮರುನಿರ್ದೇಶಿಸಲಾದ ಪುಟದಲ್ಲಿ, ಅಗತ್ಯವಿರುವ ಕ್ಷೇತ್ರಗಳನ್ನು ಅಪ್‌ಡೇಟ್ ಮಾಡಿ ಮತ್ತು XML ಅನ್ನು ರಚಿಸಿ. ಮುಂದೆ, ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ರಚಿಸಲಾದ XML ಫೈಲ್ ಅನ್ನು ಅಪ್‌ಲೋಡ್ ಮಾಡಿ.

  • ಹಂತ 4: ಇ-ಫೈಲ್ ಮೆನುಗೆ ಹೋಗಿ ಮತ್ತು "ಸಬ್‌ಮಿಟ್‌ ಫಾರ್ಮ್ 15H" ಆಯ್ಕೆಮಾಡಿ. ಹಣಕಾಸು ವರ್ಷ, ಫಾರ್ಮ್ ಹೆಸರು, ಕ್ವಾರ್ಟರ್ ಮತ್ತು ಫೈಲಿಂಗ್ ವಿಧವನ್ನು ಆಯ್ಕೆಮಾಡಿ. "ವ್ಯಾಲಿಡೇಟ್" ಮೇಲೆ ಕ್ಲಿಕ್ ಮಾಡಿ.

  • ಹಂತ 5: ಅಂತಿಮವಾಗಿ, XML ಮತ್ತು ಡಿಎಸ್‌ಸಿ ಫೈಲ್ ಅನ್ನು ಅಟ್ಯಾಚ್‌ ಮಾಡಿ ಮತ್ತು "ಸಬ್‌ಮಿಟ್‌" ಮೇಲೆ ಕ್ಲಿಕ್ ಮಾಡಿ.

ಜಾಬ್ ಅನ್ನು ಸರಳಗೊಳಿಸಲು ಇದೇ ರೀತಿಯ ಸೇವೆಗಳನ್ನು ನೀಡುವ ಆರ್ಥಿಕ ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಸಹ ನೀವು ಪರಿಶೀಲಿಸಬಹುದು.

[ಮೂಲ]

ಫಾರ್ಮ್ 15H ಅನ್ನು ಭರ್ತಿ ಮಾಡುವುದು ಮತ್ತು ಸಬ್‌ಮಿಟ್‌ ಮಾಡುವುದು ಹೇಗೆ?

ಅಗತ್ಯವಿರುವ ಪ್ರತಿಗಳ ಸಂಖ್ಯೆಯನ್ನು ನೀವು ಡೌನ್‌ಲೋಡ್ ಮಾಡಬಹುದು ಮತ್ತು ಪ್ರಿಂಟ್ ಮಾಡಬಹುದು. ನಂತರ, ಸೀನಿಯರ್‌ ಸಿಟಿಜನ್‌ ಅಪ್ಲಿಕೆಂಟ್‌ಗಳು ಈ ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ಅದನ್ನು ಆಯಾ ಬ್ಯಾಂಕ್ ಅಥವಾ ಪ್ರಾಧಿಕಾರಕ್ಕೆ ಸಬ್‌ಮಿಟ್‌ ಮಾಡಬೇಕು.

ಫೈಲಿಂಗ್ ಮಾಡಿದ ನಂತರ 15H ಫಾರ್ಮ್ ಅನ್ನು ಹೇಗೆ ಸಬ್‌ಮಿಟ್‌ ಮಾಡಬೇಕು ಎಂಬುದರ ಹಂತಗಳು ಇಲ್ಲಿವೆ.

ಭಾಗ 1. ಸೀನಿಯರ್‌ ಸಿಟಿಜನ್‌ ಸೂಕ್ತವಾದ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದು ಒಳಗೊಂಡಿರುವುದೇನೆಂದರೆ-

  • ಅಪ್ಲಿಕೆಂಟ್ ಹೆಸರು
  • ಪ್ಯಾನ್ ವಿವರಗಳು
  • ವಸತಿ ಸ್ಟೇಟಸ್ ಮತ್ತು ವಿಳಾಸ
  • ಜನನ ದಿನಾಂಕ
  • ನಮೂದಿಸಿದ ಆದಾಯ ಕುರಿತ ಹಣಕಾಸು ವರ್ಷ
  • ಸಂಪರ್ಕ ಮಾಹಿತಿ, ಇತ್ಯಾದಿ.
  • ಉಲ್ಲೇಖಿಸಲಾದ ಮೌಲ್ಯಮಾಪನ ವರ್ಷದ ಮೊದಲು, ಯಾವುದೇ ವರ್ಷಗಳಲ್ಲಿ ಸೀನಿಯರ್‌ ಸಿಟಿಜನ್‌ರನ್ನು ಅಸೆಸ್ ಮಾಡಿದ್ದರೆ 'ಹೌದು' ಎಂದು ನಮೂದಿಸಿ
  • ಅಪ್ಲಿಕೆಂಟ್‌ಗಳು ಸಬ್‌ಮಿಟ್‌ ಮಾಡಲು ಬಯಸುವ ತಮ್ಮ ಡಿಕ್ಲರೇಷನ್‌ಗೆ ಒಟ್ಟು ಇನ್‌ಕಮ್‌ ಅನ್ನು ನಮೂದಿಸಿ.
  • ಪ್ರಸಕ್ತ ವರ್ಷದ ಅಂದಾಜು ಒಟ್ಟು ಇನ್‌ಕಮ್‌ ಮತ್ತು ಹಿಂದಿನ ವರ್ಷದ ಅಂದಾಜು ಇನ್‌ಕಮ್‌ ಅನ್ನು ನಮೂದಿಸಿ.
  • ಈ ಡಿಕ್ಲರೇಷನ್ ಅನ್ನು ಭರ್ತಿ ಮಾಡಲಾದ ಒಟ್ಟು ಇನ್‌ಕಮ್‌ನೊಂದಿಗೆ ಅಪ್ಲಿಕೆಂಟ್‌ಗಳು ಭರ್ತಿ ಮಾಡಿದ ಫಾರ್ಮ್‌ಗಳ ನಿಖರ ಸಂಖ್ಯೆ.
  • ಫೈಲ್ ಮಾಡಲಾದ ಡಿಕ್ಲರೇಷನ್‌ನ ಇನ್‌ಕಮ್‌ ವಿವರಗಳು.
  • ಅಸೆಸ್ಸೀಯ ಸಹಿಗಳು.

ಈ ಫಾರ್ಮ್‌ನ ಮುಂದಿನ ಭಾಗವು ಅಸೆಸ್ಸೀ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂಬ ಡಿಕ್ಲರೇಷನ್/ವೆರಿಫಿಕೇಷನ್‌ಗಾಗಿ ಆಗಿದೆ. ಇಲ್ಲಿ ಒದಗಿಸಲಾದ ಮಾಹಿತಿಯು ಅವರ ಜ್ಞಾನ ಮತ್ತು ನಂಬಿಕೆಯ ಮಟ್ಟಿಗೆ ಸರಿಯಾಗಿದೆ ಮತ್ತು ಐಟಿ ಕಾಯಿದೆ, 1961ರ ನಿಬಂಧನೆಗಳ ಪ್ರಕಾರ ಲೆಕ್ಕಹಾಕಿದ ಅವರ ಒಟ್ಟು ಇನ್‌ಕಮ್‌ ಮೇಲಿನ ಟ್ಯಾಕ್ಸ್ ಹಿಂದಿನ ವರ್ಷಕ್ಕೆ ನಿಲ್ ಆಗಿರುತ್ತದೆ ಎಂದು ಅವರು ಡಿಕ್ಲೇರ್‌ ಮಾಡಬೇಕು.

ಈಗ 15H ಫಾರ್ಮ್‌ನ ಇತರ ಉಪಯೋಗಗಳು ಏನೆಂದು ಪರಿಶೀಲಿಸೋಣ.

[ಮೂಲ]

ಫಾರ್ಮ್ 15Hನ ಉಪಯೋಗಗಳು

ಫಾರ್ಮ್ 15H ಅನೇಕ ಕ್ಷೇತ್ರಗಳಲ್ಲಿ ಉಪಯುಕ್ತವಾಗಿದೆ. ಪಟ್ಟಿ ಅವುಗಳನ್ನು ವಿವರವಾಗಿ ವಿವರಿಸುತ್ತದೆ.

  • ಕಾರ್ಪೊರೇಟ್ ಬಾಂಡ್‌ಗಳಿಂದ ಬರುವ ಇನ್‌ಕಮ್‌ ಮೇಲಿನ ಟಿಡಿಎಸ್ - ಕಾರ್ಪೊರೇಟ್ ಬಾಂಡ್‌ಗಳಿಂದ ಗಳಿಸಿದ ₹5,000 ಮೀರಿದ ಇನ್‌ಕಮ್ ಮೇಲೆ ಟಿಡಿಎಸ್ ಅಪ್ಲಿಕೇಬಲ್ ಆಗುತ್ತದೆ. ಯಾವುದೇ ಟಿಡಿಎಸ್ ಡಿಡಕ್ಷನ್‌ಗಾಗಿ ವಿನಂತಿಯನ್ನು ಸಲ್ಲಿಸಲು ವ್ಯಕ್ತಿಯು ಫಾರ್ಮ್ 15H ಅನ್ನು ವಿತರಕರಿಗೆ ಸಬ್‌ಮಿಟ್‌ ಮಾಡಬೇಕಾಗುತ್ತದೆ. ಆದಾಗ್ಯೂ, ಕೆಲವು ನಿರ್ದಿಷ್ಟ ಕ್ರೈಟೀರಿಯಾಗಳನ್ನು ಪೂರೈಸುವ ಅಗತ್ಯವಿದೆ. ಆದ್ದರಿಂದ, ಪ್ರೊಸೆಸ್ ಅನ್ನು ಸುಗಮಗೊಳಿಸಲು ಫಾರ್ಮ್ 15H ಅನ್ನು ಯಾವಾಗ ಸಬ್‌ಮಿಟ್‌ ಮಾಡಬೇಕು ಎಂಬುದನ್ನು ಪರಿಶೀಲಿಸಲು ಶಿಫಾರಸು ಮಾಡಲಾಗಿದೆ.
  • ಫಿಕ್ಸ್‌ಡ್‌ ಡೆಪಾಸಿಟ್‌ಗಳಿಂದ ಬರುವ ಇಂಟರೆಸ್ಟ್ ಇನ್‌ಕಮ್‌ ಮೇಲಿನ ಟಿಡಿಎಸ್ - ಈ ಫಾರ್ಮ್ ಸೀನಿಯರ್‌ ಸಿಟಿಜನ್‌ಗಳಿಗೆ ಅವರ ಒಟ್ಟು ಇನ್‌ಕಮ್‌ ಟ್ಯಾಕ್ಸೇಬಲ್‌ ಲಿಮಿಟ್‌ ಅನ್ನು ಮೀರದಿದ್ದಾಗ ಬ್ಯಾಂಕ್‌ಗಳ ರೆಕರಿಂಗ್ ಡೆಪಾಸಿಟ್‌ಗಳು ಮತ್ತು ಫಿಕ್ಸ್‌ಡ್‌ ಡೆಪಾಸಿಟ್‌ಗಳ ಇಂಟರೆಸ್ಟ್ ಮೇಲಿನ ಟ್ಯಾಕ್ಸ್ ಅನ್ನು ಉಳಿಸಲು ಸಹಾಯ ಮಾಡುತ್ತದೆ.
  • ಇಪಿಎಫ್‌ ವಿತ್‌ಡ್ರಾವಲ್‌ ಮೇಲೆ ಟಿಡಿಎಸ್‌ - ಆದರ್ಶಪ್ರಾಯವಾಗಿ, ಕಂಪನಿಯಲ್ಲಿ ಐದು ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಮೊದಲು ವಿತ್‌ಡ್ರಾವಲ್‌ ಮಾಡಿದಾಗ ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಬಾಕಿಗಳ ಮೇಲೆ ಟಿಡಿಎಸ್‌ ಅನ್ನು ವಿಧಿಸಲಾಗುತ್ತದೆ. ಆದಾಗ್ಯೂ, ಒಬ್ಬ ವ್ಯಕ್ತಿಯು ₹50,000 ಅಥವಾ ಅದಕ್ಕಿಂತ ಹೆಚ್ಚಿನ ಅಮೌಂಟ್ ಅನ್ನು ಹೊಂದಿದ್ದರೆ, ಸರ್ಕಾರವು ವಿನಾಯಿತಿಯನ್ನು ಅನುಮತಿಸುತ್ತದೆ. ಇಪಿಎಫ್ ಬ್ಯಾಲೆನ್ಸ್‌ನಲ್ಲಿ ಟಿಡಿಎಸ್ ಡಿಡಕ್ಷನ್ ಅನ್ನು ತಪ್ಪಿಸಲು ನೀವು ಈ ಫಾರ್ಮ್ ಅನ್ನು ಸಲ್ಲಿಸಲು ಲಯಬಲ್ ಆಗಿರುತ್ತೀರಿ. ಮೇಲೆ ಹೇಳಿದ ಕಾರಣಕ್ಕಾಗಿ 15H ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡುವ ಮೊದಲು, ಅರ್ಹತಾ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ. ಇಪಿಎಫ್ ಬ್ಯಾಲೆನ್ಸ್ ನಿಗದಿತ ಟ್ಯಾಕ್ಸ್ ಬ್ರಾಕೆಟ್‌ನಲ್ಲಿ ಬೀಳಬಾರದು.
  • ಅಂಚೆ ಕಚೇರಿಗಳಲ್ಲಿನ ಡೆಪಾಸಿಟ್‌ಗಳ ಇನ್‌ಕಮ್‌ ಮೇಲೆ ಟಿಡಿಎಸ್ - ಸೀನಿಯರ್‌ ಸಿಟಿಜನ್‌ಗಳು ಆಯಾ ಶಾಖೆಗಳಲ್ಲಿನ ಡೆಪಾಸಿಟ್‌ಗಳ ಇನ್‌ಕಮ್‌ ಮೇಲೆ ಟಿಡಿಎಸ್ ಅನ್ನು ಡಿಡಕ್ಟ್‌ ಮಾಡಿದ ಅಂಚೆ ಕಚೇರಿಗೆ ಫಾರ್ಮ್ 15H ಅನ್ನು ಸಬ್‌ಮಿಟ್‌ ಮಾಡಬಹುದು. ಆದ್ದರಿಂದ, ಕ್ರೈಟೀರಿಯಾಗಳನ್ನು ಪೂರೈಸಿದರೆ ಟಿಡಿಎಸ್ ಡಿಡಕ್ಷನ್ ಅನ್ನು ತಪ್ಪಿಸಲು ಅವರು ವಿನಂತಿಸಿಕೊಳ್ಳಬಹುದು. 
  • ಬಾಡಿಗೆಯ ಮೇಲಿನ ಟಿಡಿಎಸ್ - ವರ್ಷದಲ್ಲಿ ₹1.8 ಲಕ್ಷಕ್ಕಿಂತ ಹೆಚ್ಚಿನ ಬಾಡಿಗೆ ಪೇಮೆಂಟ್‌ಗಳು ಟಿಡಿಎಸ್‌ಗೆ ಲಯಬಲ್‌ ಆಗುತ್ತವೆ. ಸೀನಿಯರ್‌ ಸಿಟಿಜನ್‌ ಆತನ/ಆಕೆಯ ಬಾಡಿಗೆದಾರರಿಗೆ ಫಾರ್ಮ್ 15H ಸಬ್‌ಮಿಟ್‌ ಮಾಡಬಹುದು ಮತ್ತು ಟಿಡಿಎಸ್‌ ಡಿಡಕ್ಷನ್ ಅನ್ನು ತಪ್ಪಿಸಲು ಅವರನ್ನು ವಿನಂತಿಸಬಹುದು. ಆದಾಗ್ಯೂ, ಹಿಂದಿನ ವರ್ಷದ ಒಟ್ಟು ಇನ್‌ಕಮ್‌ ಮೇಲೆ ಪಾವತಿಸಿದ ಟ್ಯಾಕ್ಸ್‌ ನಿಲ್‌ ಆಗಿದೆಯೇ ಎಂದು ನೀವು ಪರಿಶೀಲಿಸಬೇಕು.

ಸೀನಿಯರ್‌ ಸಿಟಿಜನ್‌ ಆಯಾ ಕಾರಣಗಳಿಗಾಗಿ ಫಾರ್ಮ್ 15H ಅನ್ನು ಸಬ್‌ಮಿಟ್‌ ಮಾಡಲು ಕೊನೆಯ ದಿನಾಂಕವನ್ನು ಸಹ ಪರಿಶೀಲಿಸಬೇಕು. ಇದು ಎಲ್ಲಾ ಪ್ಯಾರಾಮೀಟರ್‌ಗಳನ್ನು ಪೂರೈಸಿರುವುದನ್ನು ಮತ್ತು ಟಿಡಿಎಸ್‌ ಪೇಮೆಂಟ್‌ನಲ್ಲಿ ಯಾವುದೇ ದೋಷಗಳಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ.

[ಮೂಲ]

ಫಾರ್ಮ್ 15H ಅರ್ಹತಾ ಕ್ರೈಟೀರಿಯಾ ಎಂದರೇನು?

ಇವುಗಳು ಫಾರ್ಮ್ 15Hನ ಸಬ್‌ಮಿಟ್‌ನೊಂದಿಗೆ ಮುಂದುವರಿಯುವ ಮೊದಲು ಪರಿಶೀಲಿಸಬೇಕಾದ ಕೆಲವು ಪ್ಯಾರಾಮೀಟರ್‌ಗಳಾಗಿವೆ.

  • ಅಪ್ಲಿಕೆಂಟ್‌ಗಳು ಭಾರತೀಯ ನಿವಾಸಿಯಾಗಿರಬೇಕು
  • ಅವನು/ಅವಳು ಒಬ್ಬ ವೈಯಕ್ತಿಕ ಟ್ಯಾಕ್ಸ್ ಅಸೆಸ್ಸೀ ಆಗಿರಬೇಕೇ ಹೊರತು ಒಂದು ಸಂಸ್ಥೆ ಅಲ್ಲ
  • ಒಬ್ಬ ವ್ಯಕ್ತಿಯು ಕನಿಷ್ಠ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು
  • ಅಸೆಸ್ಸೀಯ ಟ್ಯಾಕ್ಸ್ ಲಯಬಿಲಿಟಿಯು ಹಣಕಾಸು ವರ್ಷಕ್ಕೆ ನಿಲ್ ಆಗಿರಬೇಕು.

ಫಾರ್ಮ್ 15H ವಿನಾಯಿತಿ ಲಿಮಿಟ್ ಎಂದರೇನು?

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ ಪ್ರಕಾರ ವಿನಾಯಿತಿ ಲಿಮಿಟ್‌ಗಿಂತ ಕಡಿಮೆ ಇನ್‌ಕಮ್‌ ಹೊಂದಿರುವ ಸೀನಿಯರ್‌ ಸಿಟಿಜನ್‌ಗಳು ಈ ಫಾರ್ಮ್ ಅನ್ನು ಸಬ್‌ಮಿಟ್‌ ಮಾಡಬೇಕು.

ಅದರ ನಿಯಮಗಳು ಈ ಕೆಳಗಿನಂತಿವೆ -

  • 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಮತ್ತು ₹2.5 ಲಕ್ಷ ಇನ್‌ಕಮ್‌ ಹೊಂದಿರುವವರಿಗೆ ಟ್ಯಾಕ್ಸ್‌ ವಿನಾಯಿತಿಗಳು ಅಪ್ಲಿಕೇಬಲ್‌ ಆಗುತ್ತವೆ
  • ಯಾವುದೇ ಟ್ಯಾಕ್ಸ್ ಲಯಬಿಲಿಟಿ ಇಲ್ಲದ 80 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಮತ್ತು ₹5 ಲಕ್ಷದವರೆಗಿನ ಉಳಿತಾಯದಿಂದ ಬರುವ ಇನ್‌ಕಮ್‌ ಹೊಂದಿರುವವರು ಆಯಾ ಬ್ಯಾಂಕ್‌ಗೆ ಫಾರ್ಮ್ 15H ಅನ್ನು ಸಬ್‌ಮಿಟ್‌ ಮಾಡಬಹುದು.
  • 60 ರಿಂದ 80ರ ವಯೋಮಿತಿಯಲ್ಲಿ ಬರುವವರು ಮತ್ತು ₹3 ಲಕ್ಷ ಇನ್‌ಕಮ್‌ ಹೊಂದಿರುವವರಿಗೂ ಟ್ಯಾಕ್ಸ್‌ನಿಂದ ವಿನಾಯಿತಿ ನೀಡಲಾಗಿದೆ.

ಇದು ಇನ್‌ಕಮ್‌ ಟ್ಯಾಕ್ಸ್‌ ವಿನಾಯಿತಿಗೆ ಫಾರ್ಮ್ 15Hನಲ್ಲಿ ಇರುವ ಕೆಲವು ಪ್ರಮುಖ ಮಾಹಿತಿಯಾಗಿದೆ. ಹಣಕಾಸು ವರ್ಷದ ಆರಂಭದಲ್ಲಿ ಫಾರ್ಮ್ 15H ಅನ್ನು ಡೆಪಾಸಿಟ್ ಮಾಡಬೇಕು, ಇಲ್ಲದಿದ್ದರೆ ಇನ್‌ಕಮ್‌ ಒದಗಿಸುವವರು ಟಿಡಿಎಸ್‌ ಅನ್ನು ಡಿಡಕ್ಟ್‌ ಮಾಡಲು ಲಯಬಲ್ ಆಗಿರುತ್ತಾರೆ. ಈ ವರ್ಷ ಫಾರ್ಮ್ 15H ಸಲ್ಲಿಸಲು ಕೊನೆಯ ದಿನಾಂಕ 15ನೇ ಜುಲೈ 2023 ಆಗಿದೆ. ಆದ್ದರಿಂದ, ಈ ಫಾರ್ಮ್ ಅನ್ನು ಸಮಯಕ್ಕೆ ಸರಿಯಾಗಿ ಸಬ್‌ಮಿಟ್ ಮಾಡಲು ಅಪ್‌ಡೇಟ್‌ಗಳು ಮತ್ತು ನಿಯಮಗಳ ಮೇಲೆ ಗಮನವನ್ನು ಇಟ್ಟುಕೊಳ್ಳುವುದು ಅತ್ಯಗತ್ಯ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ಫಾರ್ಮ್ 15H ಅನ್ನು ಬ್ಯಾಂಕ್‌ನಲ್ಲಿ ಸಬ್‌ಮಿಟ್‌ ಮಾಡುವುದು ಅವಶ್ಯವೇ?

ಹೌದು, ನೀವು ನಿಮ್ಮ ಸಂಬಂಧಿತ ಬ್ಯಾಂಕ್‌ನಲ್ಲಿ ಫಾರ್ಮ್ 15H ಅನ್ನು ಸಬ್‌ಮಿಟ್‌ ಮಾಡಬೇಕು.

ಫಾರ್ಮ್ 15H ಅನ್ನು ನೇರವಾಗಿ ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಗೆ ಸಬ್‌ಮಿಟ್‌ ಮಾಡುವುದು ಕಡ್ಡಾಯವೇ?

ಇಲ್ಲ, ನೀವು ಈ ಫಾರ್ಮ್‌ಗಳನ್ನು ನೇರವಾಗಿ ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಗೆ ಸಬ್‌ಮಿಟ್‌ ಮಾಡುವ ಅಗತ್ಯವಿಲ್ಲ. ಬದಲಾಗಿ, ನೀವು ಅದನ್ನು ಡಿಡಕ್ಟರ್ ಮೂಲಕ ಮಾಡಬಹುದು.