ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್‌ಕಮ್‌ ಟ್ಯಾಕ್ಸ್‌ನಲ್ಲಿ ಫಾರ್ಮ್ 15G ಎಂದರೇನು?

ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಇಂಟರೆಸ್ಟ್ ಇನ್‌ಕಮ್‌ ₹40,000 ಮತ್ತು ಸೀನಿಯರ್‌ ಸಿಟಿಜನ್‌ಗಳಿಗೆ ₹50,000 ಮೀರಿದರೆ ಮೂಲದಲ್ಲಿ ಫಿಕ್ಸ್‌ಡ್‌ ಡೆಪಾಸಿಟ್‌ಗಳ ಮೇಲೆ 10% ಟ್ಯಾಕ್ಸ್‌ ಡಿಡಕ್ಟ್‌ ಮಾಡಲಾಗುತ್ತದೆ. 15G ಫಾರ್ಮ್ ಎನ್ನುವುದು ಫಿಕ್ಸ್‌ಡ್‌ ಡೆಪಾಸಿಟ್‌ ಹೋಲ್ಡರ್‌ ತಮ್ಮ ಇಂಟರೆಸ್ಟ್‌ ಇನ್‌ಕಮ್‌ನಿಂದ ಟಿಡಿಎಸ್‌ ಡಿಡಕ್ಷನ್ ಅನ್ನು ತಪ್ಪಿಸಲು ಸಬ್‌ಮಿಟ್‌ ಮಾಡುವ ಡಿಕ್ಲರೇಷನ್ ಫಾರ್ಮ್.

ಅರ್ಹತೆ ಅಥವಾ 15G ಫಾರ್ಮ್ ಮತ್ತು ಇತರ ಮಾಹಿತಿಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಲು ಬಯಸುವಿರಾ? ಹೌದು ಎಂದಾದರೆ, ಸ್ಕ್ರೋಲ್ ಮಾಡುವುದನ್ನು ಮುಂದುವರಿಸಿ.

ಫಾರ್ಮ್ 15Gಗೆ ಅರ್ಹತೆ: ಯಾರು ಅದನ್ನು ಸಬ್‌ಮಿಟ್‌ ಮಾಡಬಹುದು?

ಈ ಕೆಳಗಿನ ಐಟಿಆರ್‌ ಫಾರ್ಮ್ 15G ಅರ್ಹತಾ ಮಾನದಂಡಗಳನ್ನು ನೋಡೋಣ:

ಮಾನದಂಡ 15Gಗೆ ಅರ್ಹತಾ ಮಾನದಂಡಗಳು
ಸಿಟಿಜನ್‌ಶಿಪ್‌ ಭಾರತೀಯ
ವಯಸ್ಸಿನ ಲಿಮಿಟ್ 60 ವರ್ಷ ಅಥವಾ ಅದಕ್ಕಿಂತ ಕಡಿಮೆ
ಟ್ಯಾಕ್ಸ್ ಲಯಬಿಲಿಟಿ ನಿಲ್
ಇಂಟರೆಸ್ಟ್ ಇನ್‌ಕಮ್‌ ಇಂಟರೆಸ್ಟ್ ಒಳಗೊಂಡಂತೆ ಒಟ್ಟು ಟ್ಯಾಕ್ಸೇಬಲ್‌ ಇನ್‌ಕಮ್‌ ಬೇಸಿಕ್ ಎಕ್ಸೆಂಪ್ಷನ್ ಲಿಮಿಟ್‌ಗಿಂತ ಕಡಿಮೆಯಿರಬೇಕು, ಅದು, ಹಣಕಾಸು ವರ್ಷ 2022-2023ರವರೆಗೆ ₹2,50,000 ಮತ್ತು ಹಣಕಾಸು ವರ್ಷ 2023-24ರಿಂದ ₹3,00,000.

[ಮೂಲ]

ನೀವು ಫಾರ್ಮ್ 15G ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು?

ಹೆಚ್ಚಿನ ಆರ್ಥಿಕ ಇನ್‌ಸ್ಟಿಟ್ಯೂಷನ್‌ಗಳು ತಮ್ಮ ಶಾಖೆಗಳಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ 15G ಅನ್ನು ಒದಗಿಸುತ್ತವೆ. ಆದರೆ ಅನುಕೂಲಕ್ಕಾಗಿ, ನೀವು ಅದನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಅಧಿಕೃತ ಇಪಿಎಫ್‌ಓ ​​ಪೋರ್ಟಲ್‌ಗೆ ಭೇಟಿ ನೀಡಿ. ಅಲ್ಲದೆ, ನೀವು ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಫಾರ್ಮ್ 15G ಅನ್ನು ಡೌನ್‌ಲೋಡ್ ಮಾಡಬಹುದು.

[ಮೂಲ]

ಫಾರ್ಮ್ 15G ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಭರ್ತಿ ಮಾಡುವುದು ಹೇಗೆ?

‘15G ಫಾರ್ಮ್ ಅನ್ನು ಹೇಗೆ ಭರ್ತಿ ಮಾಡುವುದು’ ಎಂಬ ನಿಮ್ಮ ಹುಡುಕಾಟವನ್ನು ಇಲ್ಲಿಗೆ ಕೊನೆಗೊಳಿಸಿ ಮತ್ತು ಕೆಳಗೆ ತಿಳಿಸಲಾದ ಸರಳ ಹಂತಗಳನ್ನು ಅನುಸರಿಸಿ:

ಆನ್‌ಲೈನ್ ಪ್ರಕ್ರಿಯೆ

ಫಾರ್ಮ್ 15G ಅನ್ನು ಆನ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡಲು ನಿಮ್ಮ ಬ್ಯಾಂಕ್ ನಿಮಗೆ ಅನುಮತಿ ನೀಡಿದರೆ, ನೀವು ಅದನ್ನು ನೇರವಾಗಿ ಆನ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡಬಹುದು. ಈ ಸರಳ ಹಂತ-ವಾರು ಗೈಡ್ ಅನ್ನು ಅನುಸರಿಸಿ:

  • ಹಂತ 1: ನಿಮ್ಮ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಆಗಿ.
  • ಹಂತ 2: ಆನ್‌ಲೈನ್ ಫಿಕ್ಸೆಡ್ ಡೆಪಾಸಿಟ್ ಟ್ಯಾಬ್ ಆಯ್ಕೆಮಾಡಿ. ಇದು ನಿಮ್ಮ ಫಿಕ್ಸ್‌ಡ್‌ ಅಕೌಂಟ್‌ ವಿವರಗಳನ್ನು ಒಳಗೊಂಡಿರುವ ಮತ್ತೊಂದು ಪುಟಕ್ಕೆ ಮರುನಿರ್ದೇಶಿಸುತ್ತದೆ.
  • ಹಂತ 3: ಫಾರ್ಮ್ 15G ಅನ್ನು ರಚಿಸಿ. ಆನ್‌ಲೈನ್ ಫಾರ್ಮ್ ತೆರೆಯಲು ಅದರ ಮೇಲೆ ಕ್ಲಿಕ್ ಮಾಡಿ.
  • ಹಂತ 4: ನೀವು ಪ್ರಸ್ತುತ ಫಿಕ್ಸ್‌ಡ್‌ ಡೆಪಾಸಿಟ್‌ ಹೊಂದಿರುವ ನಿಮ್ಮ ಬ್ಯಾಂಕ್‌ ಶಾಖೆಯ ವಿವರಗಳೊಂದಿಗೆ ನಿಮ್ಮ ಹೆಸರು, ಇನ್‌ಕಮ್‌ ಟ್ಯಾಕ್ಸ್‌ ಸ್ಟೇಟಸ್‌ ಮತ್ತು ಇತರ ಸಂಬಂಧಿತ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ.
  • ಹಂತ 5: ನಿಮ್ಮ ಇನ್‌ಕಮ್‌ ವಿವರಗಳನ್ನು ಬರೆಯಿರಿ ಮತ್ತು ಆನ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡುವ ಮೊದಲು ಎಲ್ಲಾ ವಿವರಗಳನ್ನು ಚೆಕ್‌ ಮಾಡಿ.

ಆಫ್‌ಲೈನ್ ಪ್ರಕ್ರಿಯೆ

ಹಂತ 1: 15G ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.

ಹಂತ 2: ಫಾರ್ಮ್ ಎರಡು ಸೆಕ್ಷನ್ ಗಳನ್ನು ಹೊಂದಿದೆ. ಭಾಗ 1 ರಲ್ಲಿ, ಭರ್ತಿ ಮಾಡಿ:

  • ಟ್ಯಾಕ್ಸ್ ಪೇಯರ್‌ ಹೆಸರು
  • ಪಾನ್ ಕಾರ್ಡ್ ವಿವರಗಳು
  • ಇನ್‌ಕಮ್‌ ಟ್ಯಾಕ್ಸ್‌ ಸ್ಟೇಟಸ್ (ನೀವು ಒಬ್ಬ ವ್ಯಕ್ತಿಯಾಗಿರಬಹುದು ಅಥವಾ ಹೆಚ್‌ಯುಎಫ್‌ಅಥವಾ ಏಓಪಿಯಿಂದ ಬರುತ್ತಿರುವವರಾಗಿರಬಹುದು)
  • ಹಿಂದಿನ ವರ್ಷ (ಇಲ್ಲಿ, ಹಿಂದಿನ ವರ್ಷ ಎಂದರೆ ನಿಮ್ಮ ಟ್ಯಾಕ್ಸ್ ಡಿಡಕ್ಷನ್ ಅನ್ನು ಕ್ಲೈಮ್ ಮಾಡುವ ಕಳೆದ ಹಣಕಾಸು ವರ್ಷ)
  •  ವಸತಿ ಸ್ಥಿತಿ (ಪಟ್ಟಣ, ನಗರ, ರಾಜ್ಯ, ಫ್ಲಾಟ್ ಸಂಖ್ಯೆ ಇತ್ಯಾದಿ)
  • ಸಂಪರ್ಕ ವಿವರಗಳು (ಇಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆ)
  • 1961ರ ಇನ್‌ಕಮ್‌ ಟ್ಯಾಕ್ಸ್‌ ಕಾಯಿದೆಯ ಅಡಿಯಲ್ಲಿ ನೀವು ಅಸೆಸ್‌ ಆಗಿದ್ದೀರಾ ಎಂದು ನಮೂದಿಸಲು ಸರಿಯಾದ ಬಾಕ್ಸ್‌ನಲ್ಲಿ ಟಿಕ್ ಮಾಡಿ.
  • ನಿಮ್ಮ ಅಂದಾಜು ಇನ್‌ಕಮ್‌
  • ಹಿಂದಿನ ಹಣಕಾಸು ವರ್ಷದಲ್ಲಿ ನೀವು 15G ಫಾರ್ಮ್ ಅನ್ನು ಹೊರತುಪಡಿಸಿ ಇತರ ಫಾರ್ಮ್‌ಗಳನ್ನು ಭರ್ತಿ ಮಾಡಿದ್ದರೆ ಉಲ್ಲೇಖಿಸಿ
  •  ನೀವು ಭರ್ತಿ ಮಾಡುತ್ತಿರುವ ಈ ಫಾರ್ಮ್‌ನಲ್ಲಿ ನಿಮ್ಮ ಇನ್‌ಕಮ್‌ ವಿವರಗಳನ್ನು ಭರ್ತಿ ಮಾಡಿ. ಬರೆಯಬೇಕಾದ ವಿವರಗಳೆಂದರೆ
  • ಇನ್‌ವೆಸ್ಟ್‌ಮೆಂಟ್‌ ಖಾತೆಯ ಐಡೆಂಟಿಫಿಕೇಷನ್ ನಂಬರ್
  • ಇನ್‌ಕಮ್‌ನ ಸ್ವರೂಪ
  • ಟ್ಯಾಕ್ಸ್ ಡಿಡಕ್ಟಿಬಲ್ ಸೆಕ್ಷನ್
  • ಇನ್‌ಕಮ್‌ ಅಮೌಂಟ್‌

ಹಂತ 3: ಸರಿಯಾಗಿ ಸಹಿ ಮಾಡಿದ ಫಾರ್ಮ್ ಅನ್ನು ಬ್ಯಾಂಕ್‌ಗೆ ಸಬ್‌ಮಿಟ್‌ ಮಾಡಿ.

ಫಾರ್ಮ್ 15Gಯ ಭಾಗ II ಅನ್ನು ಡಿಡಕ್ಟರ್ ಭರ್ತಿ ಮಾಡುತ್ತಾನೆ. ಡಿಡಕ್ಟರ್ ಎಂದರೆ ಟಿಡಿಎಸ್ ಅನ್ನು ಸರ್ಕಾರಕ್ಕೆ ಡೆಪಾಸಿಟ್ ಮಾಡಲು ಜವಾಬ್ದಾರರಾಗಿರುವ ವ್ಯಕ್ತಿ.

ಇ-ಫೈಲಿಂಗ್ ಫಾರ್ಮ್ 15G: ಡಿಡಕ್ಟರ್‌ ಏನೆಲ್ಲಾ ತಿಳಿದುಕೊಳ್ಳುವುದು ಅವಶ್ಯಕ?

ಒಂದು ವೇಳೆ ನೀವು ಡಿಡಕ್ಟರ್‌ ಆಗಿದ್ದರೆ, ನೀವು ಫಾರ್ಮ್ 15G ಅನ್ನು ಇ-ಫೈಲ್ ಮಾಡುವುದು ಅವಶ್ಯ. ಅದರಂತೆ, ನೀವು ವ್ಯಾಲಿಡ್ ಅನ್ನು ಹೊಂದಿರಬೇಕು. ಅಲ್ಲದೆ, ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.

ತಯಾರಿ

ಡಿಡಕ್ಟರ್‌ಟ್ಯಾಕ್ಸ್‌ಪೇಯರ್‌ಗೆ ಯುನಿಕ್‌ ಐಡೆಂಟಿಫಿಕೇಷನ್‌ ನಂಬರ್‌ (ಯುಐಎನ್‌) ಒದಗಿಸುತ್ತಾರೆ. ಹಣಕಾಸು ವರ್ಷದ ಪ್ರತಿ ತ್ರೈಮಾಸಿಕದಲ್ಲಿ 15G ಫಾರ್ಮ್‌ನ ಸ್ಟೇಟ್‌ಮೆಂಟ್‌ ಅನ್ನು ಫೈಲ್ ಮಾಡಲು ಈ ಐಡೆಂಟಿಫಿಕೇಷನ್‌ ನಂಬರ್‌ ಅಗತ್ಯವಿದೆ. ಇದು ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿರುತ್ತದೆ:

  • 9 ಅಂಕೆಗಳ ಆಲ್ಫಾನ್ಯೂಮರಿಕ್ ಅಕ್ಷರಗಳು
  • ಹಣಕಾಸು ವರ್ಷ
  • ಟಿಎಎನ್

ಇ-ಫೈಲಿಂಗ್

  • ಇ-ಫೈಲಿಂಗ್‌ಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗೆ ಭೇಟಿ ನೀಡಿ. "ಇ-ಫೈಲ್" ಆಯ್ಕೆಮಾಡಿ ಮತ್ತು "ಆನ್‌ಲೈನ್ ಫಾರ್ಮ್ ಅನ್ನು ಸಿದ್ಧಪಡಿಸಿ ಮತ್ತು ಸಬ್‌ಮಿಟ್‌ ಮಾಡಿ" ಮೇಲೆ ಕ್ಲಿಕ್ ಮಾಡಿ

  • "ಫಾರ್ಮ್ 15G" ಆಯ್ಕೆಮಾಡಿ ಮತ್ತು ಎಕ್ಸ್‌ಎಂಎಲ್‌ ಜಿಪ್ ಫೈಲ್ ಅನ್ನು ರಚಿಸಿ

  • ಜಿಪ್ ಫೈಲ್‌ಗಾಗಿ ನಿಮ್ಮ ಡಿಜಿಟಲ್ ಸಹಿಯನ್ನು ರಚಿಸಿ

  • ಮತ್ತೆ, ಇಲ್ಲಿ ಲಾಗ್ ಇನ್ ಆಗಿ.

  • "ಇ-ಫೈಲ್" ವಿಭಾಗಕ್ಕೆ ನ್ಯಾವಿಗೇಟ್ ಮಾಡಿ ಮತ್ತು ನಿಮ್ಮ ಫಾರ್ಮ್ 15G ಅನ್ನು ಅಪ್‌ಲೋಡ್ ಮಾಡಿ

  • ಫಾರ್ಮ್ ಅನ್ನು ಆಯ್ಕೆ ಮಾಡಿ ಮತ್ತು "ವ್ಯಾಲಿಡೇಟ್" ಮೇಲೆ ಕ್ಲಿಕ್ ಮಾಡಿ

  • ವಿವರಗಳನ್ನು ವ್ಯಾಲಿಡೇಟ್ ಮಾಡಿದ ನಂತರ, ಜಿಪ್ ಮತ್ತು ಸಹಿ ಫೈಲ್ ಅನ್ನು ಲಗತ್ತಿಸಿ ಮತ್ತು ಅವುಗಳನ್ನು ಅಪ್ಲೋಡ್ ಮಾಡಿ.

ಫಾರ್ಮ್ 15G ಅನ್ನು ಹೇಗೆ, ಎಲ್ಲಿ ಮತ್ತು ಯಾವಾಗ ಸಬ್‌ಮಿಟ್‌ ಮಾಡಬೇಕು?

ಹೇಗೆ?

ಬ್ಯಾಂಕ್‌ಗಳಿಗೆ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡಲು ಮೇಲೆ ತಿಳಿಸಿದ ಇದೇ ಪ್ರಕ್ರಿಯೆ ಅನ್ನು ಅನುಸರಿಸಿ.

ಯಾವಾಗ?

ಫಾರ್ಮ್ 15G ಸಬ್‌ಮಿಟ್‌ ಮಾಡಲು ಯಾವುದೇ ಕೊನೆಯ ದಿನಾಂಕವಿಲ್ಲ. ಕೆಲವು ಆರ್ಥಿಕ ಸಂಸ್ಥೆಗಳು ವಾರ್ಷಿಕ ಡಿಡಕ್ಷನ್ ಬದಲಿಗೆ ಟಿಡಿಎಸ್‌ ಅನ್ನು ತ್ರೈಮಾಸಿಕವಾಗಿ ಡಿಡಕ್ಟ್‌ಗೊಳಿಸುತ್ತವೆ. ಆದ್ದರಿಂದ, ಹಣಕಾಸು ವರ್ಷದ ಆರಂಭದಲ್ಲಿ ಫಾರ್ಮ್ ಅನ್ನು ಸಬ್‌ಮಿಟ್‌ ಮಾಡುವುದು ಬುದ್ಧಿವಂತಿಕೆ ಆಗಿದೆ.

ಎಲ್ಲಿ?

ಬ್ಯಾಂಕ್‌ಗಳನ್ನು ಹೊರತುಪಡಿಸಿ, ನೀವು ಈ ಕೆಳಗಿನ ಸ್ಥಳಗಳಲ್ಲಿ ಫಾರ್ಮ್ 15G ಅನ್ನು ಸಬ್‌ಮಿಟ್‌ ಮಾಡಬಹುದು:

  • ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಅಕಾಲಿಕ ಇಪಿಎಫ್ ವಿತ್‌ಡ್ರಾವಲ್‌ ಸಮಯದಲ್ಲಿ)
  • ಬ್ಯಾಂಕುಗಳು ಮತ್ತು ಅಂಚೆ ಕಚೇರಿ
  • ಲೈಫ್ ಇನ್ಶೂರೆನ್ಸ್ ಕಂಪನಿಗಳು
  • ಕಾರ್ಪೊರೇಟ್ ಬಾಂಡ್‌ಗಳನ್ನು ವಿತರಿಸುವ ಕಂಪನಿಗಳು

ಪಿಎಫ್ ವಿತ್‌ಡ್ರಾವಲ್‌ಗೆ ಫಾರ್ಮ್ 15G ಅನ್ನು ಭರ್ತಿ ಮಾಡುವುದು ಹೇಗೆ?

ಫಾರ್ಮ್ 15G ಅನ್ನು ಎಲ್ಲಿ ಸಬ್‌ಮಿಟ್‌ ಮಾಡಬೇಕು ಎಂಬುದರ ಕುರಿತು ಈಗ ನೀವು ತಿಳಿದಿರುವಿರಿ, ಫಾರ್ಮ್ 15G ಅನ್ನು ಭರ್ತಿ ಮಾಡುವ ಸರಳ ಪ್ರೊಸೆಸ್ ಅನ್ನು ಕೆಳಗೆ ನೋಡಿ:

  • ಹಂತ 1: ಸದಸ್ಯರಿಗೆ ಇರುವ ಇಪಿಎಫ್‌ಓ ಯುಎಎನ್‌ ಪೋರ್ಟಲ್‌ಗೆ ಲಾಗ್ ಇನ್ ಆಗಿ.
  • ಹಂತ 2: ಆನ್‌ಲೈನ್ ಸೇವೆಗಳು ಮತ್ತು ಕ್ಲೈಮ್ ಆಯ್ಕೆಮಾಡಿ (ಫಾರ್ಮ್ 19,10C, 31).
  • ಹಂತ 3: ಬ್ಯಾಂಕಿನ ಕೊನೆಯ 4 ಅಂಕೆಗಳನ್ನು ಚೆಕ್ ಮಾಡಿ.
  • ಹಂತ 4: "ನಾನು ಅಪ್ಲೈ ಮಾಡಲು ಬಯಸುತ್ತೇನೆ" ಆಯ್ಕೆಮಾಡಿ ಮತ್ತು ಫಾರ್ಮ್ 15G ಅನ್ನು ಅಪ್‌ಲೋಡ್ ಮಾಡಿ.

ಬಾಟಮ್ ಲೈನ್: ನೀವು ಫಾರ್ಮ್ 15G ಅನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಯಾಕೆ ಅವಶ್ಯ?

ಸರಳವಾಗಿ ಹೇಳುವುದಾದರೆ, ನಿಮ್ಮ ಫಿಕ್ಸ್‌ಡ್‌ ಡೆಪಾಸಿಟ್‌ಗಳಿಂದ ಟಿಡಿಎಸ್ ಡಿಡಕ್ಟ್ ಮಾಡಿದರೆ, ನೀವು ಟಿಡಿಎಸ್ ಅಮೌಂಟ್ ಕಳೆದುಕೊಳ್ಳುವುದು ಮಾತ್ರವಲ್ಲದೆ, ಅಪ್ಲಿಕೇಬಲ್ ಆಗುವ ಕಾಂಪೌಂಡ್ ಇಂಟರೆಸ್ಟ್‌ಗಳನ್ನು ಸಹ ಕಳೆದುಕೊಳ್ಳುತ್ತೀರಿ. ಆದ್ದರಿಂದ, ಫಾರ್ಮ್ 15G ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಟ್ಯಾಕ್ಸ್ ಲಯಬಿಲಿಟಿಯನ್ನು ಕಡಿಮೆ ಮಾಡಿ. ಇದು ಐಟಿಆರ್ 15G ಫಾರ್ಮ್‌ನ ಉಪಯೋಗ ಆಗಿದೆ. ಆದರೆ ನೀವು ತಿಳುವಳಿಕೆಯುಳ್ಳ ಆರ್ಥಿಕ ನಿರ್ಧಾರವನ್ನು ಮಾಡಲು ಮುಂದುವರಿಯುವ ಮೊದಲು ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಓದಿರುವುದನ್ನು ಖಚಿತಪಡಿಸಿಕೊಳ್ಳಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಫಾರ್ಮ್ 15G ಅನ್ನು ಯಾರು ಸಬ್‌ಮಿಟ್‌ ಮಾಡಲು ಸಾಧ್ಯವಿಲ್ಲ?

ಫಾರ್ಮ್ 15G ಸಬ್‌ಮಿಟ್‌ ಮಾಡಲು ಸಾಧ್ಯವಾಗದೇ ಇರುವ ಈ ಕೆಳಗಿನ ವ್ಯಕ್ತಿಗಳು ಮತ್ತು ಘಟಕಗಳನ್ನು ಗಮನಿಸಿ:

  • ಪ್ರೈವೇಟ್ ಮತ್ತು ಪಬ್ಲಿಕ್ ಸೆಕ್ಟರ್ ಕಂಪನಿಗಳು
  • ಎನ್‌ಆರ್‌ಐ ಅಥವಾ ನಾನ್-ರೆಸಿಡೆಂಟ್ಸ್ ಆಫ್ ಇಂಡಿಯನ್‌
  • ಪಾಲುದಾರಿಕೆ ಕಂಪನಿಗಳು
  • ವ್ಯಕ್ತಿಗಳ ಒಟ್ಟು ಇನ್‌ಕಮ್‌ ಬೇಸಿಕ್‌ ಟ್ಯಾಕ್ಸ್ ಎಕ್ಸೆಂಪ್ಷನ್ ಲಿಮಿಟ್ ಅನ್ನು ಮೀರಿದೆ.

[ಮೂಲ]

ಮೈನರ್ ಫಾರ್ಮ್ 15G ಅನ್ನು ಆನ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡಬಹುದೇ?

ಇಲ್ಲ. ಮೈನರ್ ಫಾರ್ಮ್ 15G ಅನ್ನು ಆನ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡಲು ಸಾಧ್ಯವಿಲ್ಲ.

ನೀವು ಫಾರ್ಮ್ 15G ಅನ್ನು ಕಡ್ಡಾಯವಾಗಿ ಭರ್ತಿ ಮಾಡುವುದು ಅವಶ್ಯವೇ?

ಇಲ್ಲ, ಇದು ಕಡ್ಡಾಯವಲ್ಲ. ಆದರೆ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ನಿಮ್ಮ ಇಂಟರೆಸ್ಟ್ ಇನ್‌ಕಮ್ ₹40,000 ಮೀರಿದರೆ ನಿಮ್ಮ ಟ್ಯಾಕ್ಸ್ ಲಯಬಿಲಿಟಿಯನ್ನು ಕಡಿಮೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.