ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಟಿಡಿಎಸ್ ಅನ್ನು ಕ್ಯಾಲ್ಕುಲೇಟ್ ಮಾಡುವುದು ಹೇಗೆ: ಕ್ಯಾಲ್ಕುಲೇಷನ್ ಮತ್ತು ಫಾರ್ಮುಲಾದ ವಿವರಣೆ

ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್(ಟಿಡಿಎಸ್)ನ ಗುರಿ ಇನ್‌ಕಮ್‌ನ ನಿಜವಾದ ಮೂಲದಿಂದ ಟ್ಯಾಕ್ಸ್ ಸಂಗ್ರಹಣೆ. ಈ ಪರಿಕಲ್ಪನೆಯ ಪ್ರಕಾರ, ಉದ್ಯೋಗದಾತರು ತಮ್ಮ ಉದ್ಯೋಗಿಗಳ ಸ್ಯಾಲರಿಯಿಂದ ಸೆಕ್ಷನ್ 192 ಅಡಿಯಲ್ಲಿ ಮೂಲದಲ್ಲಿ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡುತ್ತಾರೆ (ಅದು ವಿನಾಯಿತಿ ಲಿಮಿಟ್ ಅನ್ನು ಮೀರಿದರೆ) ಮತ್ತು ಅದನ್ನು ಕೇಂದ್ರ ಸರ್ಕಾರದ ಖಾತೆಗೆ ರವಾನೆ ಮಾಡುತ್ತಾರೆ.

ಅಂತೆಯೇ, ಉದ್ಯೋಗಿ ಅಥವಾ ಟ್ಯಾಕ್ಸ್‌ಪೇಯರ್‌ ಫಾರ್ಮ್ 26AS ಅಥವಾ ಉದ್ಯೋಗದಾತರು ನೀಡಿದ ಟಿಡಿಎಸ್ ಸರ್ಟಿಫಿಕೇಟ್ ಆಧಾರದ ಮೇಲೆ ಡಿಡಕ್ಟ್ ಮಾಡಲಾದ ಅಮೌಂಟ್‌ನ ಕ್ರೆಡಿಟ್ ಪಡೆಯಲು ಅರ್ಹರಾಗಿರುತ್ತಾರೆ.

ಟಿಡಿಎಸ್ ಕ್ಯಾಲ್ಕುಲೇಷನ್ ತಾಂತ್ರಿಕತೆಗಳೊಂದಿಗೆ ಮುಂದುವರಿಯುವ ಮೊದಲು, ನೀವು ಆರಂಭದಲ್ಲಿಯೇ ಟಿಡಿಎಸ್ ಅನ್ನು ಯಾವುದರ ಮೇಲೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.

[ಮೂಲ 1]

[ಮೂಲ 2]

ಟಿಡಿಎಸ್ ಅನ್ನು ಯಾವುದರ ಮೇಲೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?

ಟಿಡಿಎಸ್ ಅನ್ನು ಕ್ಯಾಲ್ಕುಲೇಟ್ ಮಾಡುವುದು ಪೇಮೆಂಟ್‌ಗಳ ವಿವಿಧ ಸ್ವರೂಪಗಳನ್ನು ಅವಲಂಬಿಸಿರುತ್ತದೆ.

ಆದ್ದರಿಂದ, ಸ್ಯಾಲರಿ, ಬಿಲ್ ಅಮೌಂಟ್ ಅಥವಾ ಫಿಕ್ಸ್‌ಡ್‌ ಡೆಪಾಸಿಟ್‌ಗಳ ಮೇಲೆ ಟಿಡಿಎಸ್ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡುವುದು ಎಂದು ಆಲೋಚಿಸುವ ವ್ಯಕ್ತಿಗಳು ಮೊದಲು ವಿಭಿನ್ನ ಟಿಡಿಎಸ್ ದರಗಳನ್ನು ತಿಳಿದುಕೊಳ್ಳಬೇಕು.

ಕೆಳಗೆ ನೀಡಲಾದ ಕೋಷ್ಟಕದಲ್ಲಿ, ಟಿಡಿಎಸ್‌ನ ಸಂಬಂಧಿತ ಸೆಕ್ಷನ್‌ಗಳು ಮತ್ತು ದರಗಳೊಂದಿಗೆ ವಿವರವಾದ ಪಟ್ಟಿಯನ್ನು ನೀವು ಕಾಣಬಹುದು.

ಪೇಮೆಂಟ್ ಸ್ವರೂಪ 

ಸಂಬಂಧಿತ ಸೆಕ್ಷನ್‌  1 ಏಪ್ರಿಲ್ 2021ರಿಂದ ಟಿಡಿಎಸ್ ದರ 
ಸ್ಯಾಲರಿಗಳು ಸೆಕ್ಷನ್ 192 ಸಾಮಾನ್ಯ ಸ್ಲ್ಯಾಬ್-ದರ
ಪ್ರಿಮೆಚ್ಯೂರ್ ಪಿಎಫ್ ವಿತ್‌ಡ್ರಾವಲ್‌ ಸೆಕ್ಷನ್ 192A 10.00%
ಸೆಕ್ಯುರಿಟಿಗಳ ಮೇಲೆ ಪಡೆದ ಇಂಟರೆಸ್ಟ್ ಸೆಕ್ಷನ್ 193 10.00%
ಕಂಪನಿಯ ಶೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳ ಮೇಲೆ ಡಿವಿಡೆಂಡ್‌ಗಳನ್ನು ಪಡೆಯಲಾಗಿದೆ ಸೆಕ್ಷನ್ 194 ಮತ್ತು 194K 10.00%
ಸೆಕ್ಯುರಿಟಿಗಳ ಮೇಲಿನ ಇಂಟರೆಸ್ಟ್‌ನ ಹೊರತಾದ ಇಂಟರೆಸ್ಟ್‌ (ಫಿಕ್ಸ್‌ಡ್‌ ಡೆಪಾಸಿಟ್ ಇಂಟರೆಸ್ಟ್) ಸೆಕ್ಷನ್ 194A 10.00%
ಕ್ರಾಸ್‌ವರ್ಡ್‌ಗಳು, ಲಾಟರಿಗಳು ಅಥವಾ ಯಾವುದೇ ಆಟದಿಂದ ಗೆಲುವುಗಳು ಸೆಕ್ಷನ್ 194B 30.00%
ಕುದುರೆ ರೇಸ್‌ಗಳಿಂದ ಗೆಲುವುಗಳು ಸೆಕ್ಷನ್ 194BB 30.00%
ಕಾಂಟ್ರಾಕ್ಟರ್‌ಗಳು ಮತ್ತು ಸಬ್‌-ಕಾಂಟ್ರಾಕ್ಟರ್‌ಗಳ ಪೇಮೆಂಟ್ ಸೆಕ್ಷನ್ 194C 1% (ವೈಯಕ್ತಿಕ/ಹೆಚ್‌ಯುಎಫ್‌), 2% (ಇತರರು)
ದೇಶೀಯ ಕಂಪನಿಗಳಿಂದ ಪಡೆದ ಇನ್ಶೂರೆನ್ಸ್ ಕಮಿಷನ್ ಸೆಕ್ಷನ್ 194D 10.00%
ಇತರರಿಂದ ಪಡೆದ ಇನ್ಶೂರೆನ್ಸ್ ಕಮಿಷನ್ ಸೆಕ್ಷನ್ 194D 5.00%
ಲೈಫ್ ಇನ್ಶೂರೆನ್ಸ್ ಪಾಲಿಸಿಗಳು ಸೆಕ್ಷನ್ 10(10D) ಅಡಿಯಲ್ಲಿ ವಿನಾಯಿತಿ ಹೊಂದಿರುವುದಿಲ್ಲ ಸೆಕ್ಷನ್ 194DA 5.00%
ರಾಷ್ಟ್ರೀಯ ಉಳಿತಾಯ ಸ್ಕೀಮ್‌ ಅಡಿಯಲ್ಲಿ ಡೆಪಾಸಿಟ್‌ಗಳಿಗೆ ಸಂಬಂಧಿಸಿದಂತೆ ಪೇಮೆಂಟ್ 194EE 10.00%
ಮ್ಯೂಚುವಲ್ ಫಂಡ್‌ಗಳು ಅಥವಾ ಯುಟಿಐ ಮೂಲಕ ಘಟಕಗಳ ಮರುಖರೀದಿಯ ಖಾತೆಯ ಮೇಲೆ ಪೇಮೆಂಟ್‌ಗಳು 194F 20.00%
ಲಾಟರಿ ಟಿಕೆಟ್‌ಗಳ ಮಾರಾಟದಲ್ಲಿ ಕಮಿಷನ್, ಬಹುಮಾನ ಇತ್ಯಾದಿ ಸೆಕ್ಷನ್ 194G 5.00%
ಬ್ರೋಕರೇಜ್ ಅಥವಾ ಕಮಿಷನ್ ಸೆಕ್ಷನ್ 194H 5.00%
ಕೃಷಿ ಭೂಮಿಯನ್ನು ಹೊರತುಪಡಿಸಿ ಸ್ಥಿರ ಪ್ರಾಪರ್ಟಿಯನ್ನು ಟ್ರಾನ್ಸ್‌ಫರ್‌ ಮಾಡುವಾಗ ಮಾಡುವ ಪೇಮೆಂಟ್ ಸೆಕ್ಷನ್ 194IA 1.00%
ತಿಂಗಳಿಗೆ ₹50,000 ಮೀರಿದ ಹೆಚ್‌ಯುಎಫ್‌ ಅಥವಾ ವ್ಯಕ್ತಿಯ ಮೂಲಕ ಬಾಡಿಗೆ ಪೇಮೆಂಟ್ ಸೆಕ್ಷನ್ 194IB 5.00%
ಮಷೀನರಿಗಳು ಮತ್ತು ಪ್ಲಾಂಟ್‌ಗಳ ಮೇಲೆ ಬಾಡಿಗೆ 194- I 2.00%
ಸ್ಥಿರ ಪ್ರಾಪರ್ಟಿಗೆ ಬಾಡಿಗೆ 194-I 10.00%
ವೃತ್ತಿಪರ ಶುಲ್ಕ ಪೇಮೆಂಟ್, ಇತ್ಯಾದಿ. 194J 2% (ತಾಂತ್ರಿಕ ಸೇವೆಗಳು, ಗೌರವ ಧನ, ಎಫ್‌ಟಿಎಸ್‌, ಕಾಲ್ ಸೆಂಟರ್), 10% (ಇತರ)
ಹೆಚ್‌ಯುಎಫ್‌/ವ್ಯಕ್ತಿಗಳಿಂದ ವೃತ್ತಿಪರ ಅಥವಾ ಕಮಿಷನ್ ಅಥವಾ ₹50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಬ್ರೋಕರೇಜ್‌ಗೆ ಮಾಡಿದ ಪೇಮೆಂಟ್ 194M 5.00%
ನಿರ್ದಿಷ್ಟ ಅಮೌಂಟ್ ಅನ್ನು ಮೀರಿದ ಕ್ಯಾಶ್ ವಿತ್‌ಡ್ರಾವಲ್‌ 194N 2.00%
ಇ-ಕಾಮರ್ಸ್ ಭಾಗವಹಿಸುವವರ ಮೇಲೆ ಟಿಡಿಎಸ್ (1.10.2020ರಿಂದ ಆರಂಭ) ಸೆಕ್ಷನ್ 194-O 1.00%

ಉದಾಹರಣೆಯೊಂದಿಗೆ ಟಿಡಿಎಸ್ ಕ್ಯಾಲ್ಕುಲೇಷನ್ ಫಾರ್ಮುಲಾ (ಹೊಸ ರೆಜಿಮ್ ಪ್ರಕಾರ)

ವಿಶಿಷ್ಟವಾಗಿ, ಉದ್ಯೋಗದಾತನು ತನ್ನ ಅಂದಾಜು ಒಟ್ಟು ಇನ್‌ಕಮ್‌ಗೆ ಅಪ್ಲಿಕೇಬಲ್ ಆಗುವ 'ಸರಾಸರಿ ದರ'ದಲ್ಲಿ ತನ್ನ ಉದ್ಯೋಗಿಯ ಸ್ಯಾಲರಿಯಿಂದ ಟಿಡಿಎಸ್ ಅನ್ನು ಡಿಡಕ್ಟ್ ಮಾಡುತ್ತಾನೆ.

ಸಾಮಾನ್ಯ ಫಾರ್ಮುಲಾ ಹೀಗಿದೆ:

ಸರಾಸರಿ ಇನ್‌ಕಮ್‌ ಟ್ಯಾಕ್ಸ್‌ ದರ = ಪಾವತಿಸಬೇಕಾದ ಇನ್‌ಕಮ್‌ ಟ್ಯಾಕ್ಸ್‌ (ಸ್ಲ್ಯಾಬ್ ದರಗಳ ಮೂಲಕ ಲೆಕ್ಕಹಾಕಲಾಗಿದೆ) / ಹಣಕಾಸು ವರ್ಷಕ್ಕೆ ಅಂದಾಜು ಇನ್‌ಕಮ್‌.

2021-22ರ ಹಣಕಾಸು ವರ್ಷದಲ್ಲಿ ನೀವು ₹1,00,000 ಮಾಸಿಕ ಸ್ಯಾಲರಿಯನ್ನು ಸ್ವೀಕರಿಸುತ್ತೀರಿ ಎಂದು ಭಾವಿಸೋಣ.

ಒಟ್ಟು ಇನ್‌ಕಮ್‌ ₹12,00,000
ಅಂದಾಜು ಡಿಡಕ್ಷನ್ (ಅಧ್ಯಾಯ VI A ಅಡಿಯಲ್ಲಿ) ₹1,00,000
ಟ್ಯಾಕ್ಸ್ ವಿಧಿಸಬಹುದಾದ ಇನ್‌ಕಮ್‌ ₹11,00,000

ಸೆಕ್ಷನ್ 192ರ ಅಡಿಯಲ್ಲಿ, ಪ್ರಸ್ತುತ ಸ್ಲ್ಯಾಬ್ ದರದ ಪ್ರಕಾರ ನಿಮ್ಮ ಸ್ಯಾಲರಿ ಮೇಲೆ ಟಿಡಿಎಸ್ ₹1,42,500 ಆಗಿರುತ್ತದೆ.

4% ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸೆಸ್ (ಅಂದರೆ ₹5,700) ಸೇರಿಸಿದ ನಂತರ, ನಿಮ್ಮ ನೆಟ್ ಪೇಯೇಬಲ್ ಟ್ಯಾಕ್ಸ್ ₹1,48,200 ಆಗುತ್ತದೆ.

ಆದ್ದರಿಂದ, ನಿಮ್ಮ ಸ್ಯಾಲರಿಯ ಸರಾಸರಿ ಟಿಡಿಎಸ್ ದರವು ₹1,48,200/12,00,000*100 = 12.35%ಗೆ ಸಮನಾಗಿರುತ್ತದೆ.

ಸೆಕ್ಷನ್ 192ರ ಅಡಿಯಲ್ಲಿ, ಪ್ರತಿ ತಿಂಗಳು ಡಿಡಕ್ಟ್ ಮಾಡಲಾದ ನಿಮ್ಮ ಸ್ಯಾಲರಿಯ ಮೇಲೆ ಟಿಡಿಎಸ್ ₹1,00,000ರಲ್ಲಿ 12.35% ಆಗಿರುತ್ತದೆ, ಅಂದರೆ ₹12,350.

[ಮೂಲ]

ಟಿಡಿಎಸ್ ವಿನಾಯಿತಿಗಳ ಸನ್ನಿವೇಶಗಳು

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ ಪ್ರಕಾರ, ನೀವು ಟಿಡಿಎಸ್‌ನಿಂದ ವಿನಾಯಿತಿ ಪಡೆದಿರುವ ಸನ್ನಿವೇಶಗಳು ಇಲ್ಲಿವೆ.

  • ನೀವು ಸೆಕ್ಷನ್ 139 ರ ಅಡಿಯಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡುವ ಅಗತ್ಯವಿಲ್ಲದಿದ್ದರೆ.
  • ಒಂದು ವೇಳೆ ನೀವು ಸೆಕ್ಷನ್ 15G/15H ಅಡಿಯಲ್ಲಿ ಆ ಹಣಕಾಸು ವರ್ಷದ ಆರಂಭದಲ್ಲಿ ಸ್ಪಷ್ಟ ಡಿಕ್ಲರೇಷನ್ ಅನ್ನು ನೀಡಿದರೆ ಮತ್ತು ನಿಮ್ಮ ಉದ್ಯೋಗದಾತರು ಸಂಬಂಧಿತ ನಿಯಮಗಳ ಪ್ರಕಾರ ಅದನ್ನು ವೆರಿಫೈ ಮಾಡುತ್ತಾರೆ.
  • ಸೆಕ್ಷನ್ 194Aನ ಸಬ್‌ಸೆಕ್ಷನ್‌ 3ರ ಅಡಿಯಲ್ಲಿ ನೀವು ವಿಶೇಷವಾಗಿ ವಿನಾಯಿತಿ ಪಡೆದಿದ್ದರೆ.
  • ನೀವು ಸೆಕ್ಷನ್ 197ರ ಅಡಿಯಲ್ಲಿ ಸರ್ಟಿಫಿಕೇಟ್ ಅನ್ನು ಪಡೆದರೆ. ಈ ಸರ್ಟಿಫಿಕೇಟ್ ಉದ್ಯೋಗದಾತರಿಗೆ ಅದರ ವ್ಯಾಲಿಡಿಟಿ ಮತ್ತು ಷರತ್ತುಗಳ ಪ್ರಕಾರ ಕಡಿಮೆ ದರದಲ್ಲಿ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡದಂತೆ ಅಥವಾ ಡಿಡಕ್ಟ್‌ಗೊಳಿಸುವಂತೆ ಸೂಚಿಸುತ್ತದೆ.

ನೀವು ಟಿಡಿಎಸ್ ಅನ್ನು ಹೇಗೆ ಉಳಿಸಬಹುದು?

ಮೇಲೆ ತಿಳಿಸಿದ ಷರತ್ತುಗಳ ಹೊರತಾಗಿ, ಎಲ್ಲಾ ಇತರ ಸಂದರ್ಭಗಳಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 194A ಪ್ರಕಾರ ಟಿಡಿಎಸ್ ಅನ್ನು ವಿಧಿಸಲಾಗುತ್ತದೆ. ಆದಾಗ್ಯೂ, ಟಿಡಿಎಸ್‌ನಿಂದ ಉಂಟಾಗುವ ನಿಮ್ಮ ಟ್ಯಾಕ್ಸ್‌ ಲಯಬಿಲಿಟಿಯನ್ನು ಕಡಿಮೆ ಮಾಡಲು ನೀವು ಕೆಲವು ಕೆಲಸಗಳನ್ನು ಮಾಡಬಹುದು.

ಲೀವ್ ಟ್ರಾವೆಲ್ ಅಲೋಯನ್ಸ್

ವಿನಾಯಿತಿಯನ್ನು ಕ್ಲೈಮ್ ಮಾಡುವ ಮೊದಲು ಪ್ರತಿಯೊಬ್ಬ ಟ್ಯಾಕ್ಸ್‌ಪೇಯರ್‌ ಟ್ರಾವೆಲ್ ಅಲೋಯನ್ಸ್‌ಗಳನ್ನು ಭರಿಸಬೇಕು. ಆದ್ದರಿಂದ, ನಿಮ್ಮ ಸ್ಯಾಲರಿ ಬ್ರೇಕಪ್‌ನಲ್ಲಿ ನೀವು ಟ್ರಾವೆಲ್ ಅಲೋಯನ್ಸ್‌ಗಳನ್ನು ಹೊಂದಿಲ್ಲದಿದ್ದರೆ, ಅವುಗಳನ್ನು ಸೇರಿಸಲು ನಿಮ್ಮ ಉದ್ಯೋಗದಾತರನ್ನು ನೀವು ವಿನಂತಿಸಬಹುದು.

ಮೆಡಿಕ್ಲೈಮ್ ಪ್ರೀಮಿಯಂ

ನಿಮ್ಮ ಪಾವತಿಸಿದ ಪ್ರೀಮಿಯಂನ ಡಿಡಕ್ಷನ್ ಅನ್ನು ಬೆಂಬಲಿಸುವ ಇನ್ಶೂರೆನ್ಸ್ ಸಂಸ್ಥೆಗಳಿಂದ ನೀವು 80D ಟ್ಯಾಕ್ಸ್ ಸರ್ಟಿಫಿಕೇಟ್ ಅನ್ನು ಒದಗಿಸಬಹುದು. ನೀವು ಬ್ಯಾಂಕ್ ಸ್ಟೇಟ್‌ಮೆಂಟ್, ಪಾಸ್‌ಬುಕ್ ಮತ್ತು ವಾಡಿಕೆಯ ಹೆಲ್ತ್‌ ಚೆಕಪ್ ರಸೀದಿಗಳ ಪ್ರತಿಗಳನ್ನು ಪುರಾವೆಯಾಗಿ ಒದಗಿಸಬೇಕಾಗಬಹುದು.

ಮನೆ ಬಾಡಿಗೆ ಅಲೋಯನ್ಸ್

ಆ ಹಣಕಾಸು ವರ್ಷದಲ್ಲಿ ನಿಮ್ಮ ಒಟ್ಟು ಬಾಡಿಗೆಯು ₹1,00,000 ಮೀರಿದರೆ, ಈ ಅಲೋಯನ್ಸ್ ಅನ್ನು ಕ್ಲೈಮ್ ಮಾಡಲು ನಿಮ್ಮ ಜಮೀನು ಮಾಲೀಕರ ಹೆಸರು, ವಿಳಾಸ ಮತ್ತು ಪ್ಯಾನ್ ಅನ್ನು ನೀವು ಒದಗಿಸಬಹುದು. ನಿಮ್ಮ ಜಮೀನು ಮಾಲೀಕರ ಪ್ಯಾನ್ ಅನ್ನು ನೀವು ಹೊಂದಿಲ್ಲದಿದ್ದರೆ, ನೀವು ಫಾರ್ಮ್ 60ರಲ್ಲಿ ಡಿಕ್ಲರೇಷ್ ಅನ್ನು ಪಡೆಯಬೇಕು.

ವಸತಿ ಲೋನ್‌ನ ಇಂಟರೆಸ್ಟ್

ಈ ವಿನಾಯಿತಿಯನ್ನು ಕ್ಲೈಮ್ ಮಾಡಲು, ನೀವು ಸಾಲದಾತರ ಹೆಸರು, ವಿಳಾಸ ಮತ್ತು ಪ್ಯಾನ್ ಮತ್ತು ಲೋನ್ ಅನ್ನು ಪಡೆದ ದಿನಾಂಕ, ಕಂತಿನ ಅಮೌಂಟ್ ಮತ್ತು ವಿಧಿಸಬಹುದಾದ ಇಂಟರೆಸ್ಟ್‌ನಂತಹ ವಿವರಗಳನ್ನು ಹೊಂದಿರುವ ಬ್ಯಾಂಕ್ ಸರ್ಟಿಫಿಕೇಟ್ ಅನ್ನು ಒದಗಿಸಬೇಕು.

ಆಹಾರ ಕೂಪನ್‌ಗಳು

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಪ್ರಕಾರ, ಪ್ರತಿ ಊಟಕ್ಕೆ ₹50 ಮೊತ್ತವನ್ನು ಊಟದ ವೋಚರ್‌ಗಳಿಂದ ವಿನಾಯಿತಿ ಪಡೆಯಬಹುದು. ಆದ್ದರಿಂದ, 25 ಕೆಲಸದ ದಿನಗಳೊಂದಿಗೆ ಒಂದು ತಿಂಗಳಿಗೆ, ನೀವು ₹2,500 ಟ್ಯಾಕ್ಸ್ ವಿನಾಯಿತಿ ಪಡೆಯಬಹುದು.

ಬೋಧನಾ ಶುಲ್ಕ

ಇದಕ್ಕಾಗಿ, ಶಿಕ್ಷಣ ಸಂಸ್ಥೆಯಿಂದ ಸಹಿ ಮಾಡಿದ ಅಥವಾ ಸ್ಟ್ಯಾಂಪ್ ಮಾಡಿದ ನಿಮ್ಮ ಬೋಧನಾ ಶುಲ್ಕ ರಶೀದಿಗಳ ಪ್ರತಿಗಳನ್ನು ನೀವು ಒದಗಿಸಬೇಕು.

ದೇಣಿಗೆಗಳು

ನೀವು ದತ್ತಿ ಸಂಸ್ಥೆಗಳು ಅಥವಾ ಅಧಿಕೃತ ಟ್ರಸ್ಟ್‌ಗಳಿಗೆ ಫಂಡ್‌ಗಳನ್ನು ಒದಗಿಸಿದ್ದರೆ, ಎಲ್ಲಾ ಸಂಬಂಧಿತ ರುಜುವಾತುಗಳನ್ನು ಒಳಗೊಂಡಂತೆ ನಿಮ್ಮ ದೇಣಿಗೆಯ ರಸೀದಿಯನ್ನು ನೀವು ಸಬ್‌ಮಿಟ್‌ ಮಾಡಬಹುದು.

ನ್ಯಾಷನಲ್ ಪೆನ್ಷನ್ ಸ್ಕೀಮ್ (ಎನ್‌ಪಿಎಸ್‌)

ಇಲ್ಲಿ, ನೀವು ಆ ಹಣಕಾಸು ವರ್ಷದ ಡೆಪಾಸಿಟ್ ರಸೀದಿಯ ಪ್ರತಿಯನ್ನು ಸಂಬಂಧಿತ ಬ್ಯಾಂಕ್ ಸ್ಟೇಟ್‌ಮೆಂಟ್‌ನ ಪ್ರತಿಯೊಂದಿಗೆ ಸಬ್‌ಮಿಟ್‌ ಮಾಡಬೇಕು

ಸೆಕ್ಷನ್ 80C ಪ್ರಯೋಜನಗಳು

ನೀವು ಸೆಕ್ಷನ್ 80C ನಲ್ಲಿ ಇನ್‌ವೆಸ್ಟ್‌ ಮಾಡಬೇಕಾಗುತ್ತದೆ ಮತ್ತು ನಿಮ್ಮ ಸ್ಯಾಲರಿಯಲ್ಲಿ ಟಿಡಿಎಸ್ ಉಳಿಸಲು ಸಂಪೂರ್ಣ ಅಮೌಂಟ್ ಅನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)ನಲ್ಲಿ ಇನ್‌ವೆಸ್ಟ್‌ ಮಾಡುವುದು ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ಸುಮಾರು ₹1,50,000 ವಾರ್ಷಿಕ ಟ್ಯಾಕ್ಸ್ ರಿಯಾಯಿತಿಯನ್ನು ನೀಡುತ್ತದೆ.

ತಡವಾದ ಟಿಡಿಎಸ್‌ ಪೇಮೆಂಟ್‌ಗೆ ಇಂಟರೆಸ್ಟ್‌ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ

ಸೆಕ್ಷನ್ 201(1A) ಅಡಿಯಲ್ಲಿ, ತಡವಾದ ಟಿಡಿಎಸ್ ಪೇಮೆಂಟ್‌ನ ಸಂದರ್ಭದಲ್ಲಿ ನೀವು ಇಂಟರೆಸ್ಟ್ ಅನ್ನು ಪಾವತಿಸಬೇಕಾಗುತ್ತದೆ. ಟಿಡಿಎಸ್‌ನ ವಿಳಂಬ ಪೇಮೆಂಟ್‌ ಮೇಲಿನ ಇಂಟರೆಸ್ಟ್ ಅನ್ನು ನಿಗದಿತ ದಿನಾಂಕದಿಂದ ತಿಂಗಳಿಗೆ 1.5% ದರದಲ್ಲಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ.

ನಿಮ್ಮ ಪೇಯೇಬಲ್ ಟಿಡಿಎಸ್ ಅಮೌಂಟ್ ₹5,000 ಎಂದು ಭಾವಿಸೋಣ, ಅಂತಿಮ ದಿನಾಂಕ ಜನವರಿ 13 ಮತ್ತು ನೀವು ಅದನ್ನು ಮೇ 17ರಂದು ಪಾವತಿಸುತ್ತೀರಿ. ನಂತರ, ಟಿಡಿಎಸ್ ಲೇಟ್ ಪೇಮೆಂಟ್ ಇಂಟರೆಸ್ಟ್ ಕ್ಯಾಲ್ಕುಲೇಟರ್ ಪ್ರಕಾರ, ನೀವು ಪಾವತಿಸಬೇಕಾದ ಇಂಟರೆಸ್ಟ್ ₹5,000 x 1.5% p.m. x 5 ತಿಂಗಳು = ₹375.

ಮೇಲಿನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ನಿಖರತೆಯಲ್ಲಿ ಮತ್ತು ಟಿಡಿಎಸ್ ಕ್ಯಾಲ್ಕುಲೇಷನ್‌ನಲ್ಲಿ ನೆರವಾಗುತ್ತದೆ. ಸಂಪೂರ್ಣ ನಿಖರತೆಗಾಗಿ, ವ್ಯಕ್ತಿಗಳು ಆನ್‌ಲೈನ್ ಟಿಡಿಎಸ್ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಿಮ್ಮ ಇನ್‌ಕಮ್‌ನಿಂದ ಡಿಡಕ್ಟ್ ಮಾಡಲಾದ ಟ್ಯಾಕ್ಸ್ ಪ್ರಮಾಣವನ್ನು ಹೇಗೆ ತಿಳಿಯುವುದು?

ನಿಮ್ಮ ಇನ್‌ಕಮ್‌ನಿಂದ ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌ನ ಪ್ರಮಾಣವನ್ನು ತಿಳಿಯಲು, ನೀವು ಫಾರ್ಮ್ 16 ಅಥವಾ ಅವರು ಡಿಡಕ್ಟ್‌ ಮಾಡಿದ ಟ್ಯಾಕ್ಸ್‌ಗೆ ಟಿಡಿಎಸ್ ಸರ್ಟಿಫಿಕೇಟ್ ಅನ್ನು ನೀಡಲು ನಿಮ್ಮ ಉದ್ಯೋಗದಾತರನ್ನು ಕೇಳಬಹುದು.

ಫಾರ್ಮ್ 26ASನಲ್ಲಿ ಟಿಡಿಎಸ್ ಕ್ರೆಡಿಟ್ ಪ್ರತಿಬಿಂಬಿಸದಿದ್ದರೆ ಏನು ಮಾಡಬೇಕು?

ಫಾರ್ಮ್ 26AS ನಲ್ಲಿ ಟಿಡಿಎಸ್ ಕ್ರೆಡಿಟ್ ಪ್ರತಿಬಿಂಬಿಸದಿದ್ದಲ್ಲಿ, ವ್ಯಾಲಿಡ್ ಕಾರಣಗಳನ್ನು ತಿಳಿಯಲು ಉದ್ಯೋಗಿ ಉದ್ಯೋಗದಾತರನ್ನು ಸಂಪರ್ಕಿಸಬೇಕು. ಆದಾಗ್ಯೂ ಫಾರ್ಮ್ 26AS ನೊಂದಿಗೆ ಸ್ವೀಕರಿಸಿದ ಎಲ್ಲಾ ಫಾರ್ಮ್ 16 ಅನ್ನು ಸಮನ್ವಯಗೊಳಿಸುವ ಮೂಲಕ ವ್ಯತ್ಯಾಸಗಳನ್ನು ಚೆಕ್ ಮಾಡಬಹುದು.