ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 80U

ಭಾರತದಲ್ಲಿ, ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಹಲವಾರು ಸೆಕ್ಷನ್‌ಗಳು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಪ್ರಯೋಜನಗಳನ್ನು ಒದಗಿಸುತ್ತವೆ. ಅಂತಹದೇ ಒಂದು ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 80U.

ಈ ತುಣುಕಿನಲ್ಲಿ, ನಾವು 80U ಡಿಡಕ್ಷನ್, ಲಿಮಿಟ್ ಮತ್ತು ಅದರ ವಿವಿಧ ಅಂಶಗಳನ್ನು ಚರ್ಚಿಸಿದ್ದೇವೆ.

ಅವುಗಳ ಬಗ್ಗೆ ವಿವರವಾಗಿ ತಿಳಿಯಲು ಮುಂದೆ ಓದಿ.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 80U ಎಂದರೇನು?

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌, 1961ರ ಸೆಕ್ಷನ್ 80U ಪ್ರಕಾರ, ಅಂಗವೈಕಲ್ಯದಿಂದ ಬಳಲುತ್ತಿರುವ ಟ್ಯಾಕ್ಸ್‌ಪೇಯರ್‌ಗಳು ಟ್ಯಾಕ್ಸ್ ವಿನಾಯಿತಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಸೆಕ್ಷನ್ ಅಡಿಯಲ್ಲಿ ನೀಡಲಾಗುವ ಪ್ರಯೋಜನಗಳನ್ನು ಪಡೆಯಲು ವ್ಯಕ್ತಿಗಳು ಅಧಿಕೃತ ಮೆಡಿಕಲ್ ಅಥಾರಿಟಿಯಿಂದ ಮೆಡಿಕಲ್ ಸರ್ಟಿಫಿಕೇಟ್ ಅನ್ನು ಸಲ್ಲಿಸಬೇಕು.

ಸರ್ಕಾರಿ ಆಸ್ಪತ್ರೆಯಲ್ಲಿ ಪೀಡಿಯಾಟಿಕ್‌ ನ್ಯೂರಾಲಜಿಸ್ಟ್‌, ಸಿವಿಲ್ ಸರ್ಜನ್, ಎಂಡಿ (ನ್ಯೂರಾಲಜಿ), ಸಿಎಂಒ ಅವರು 80U ಡಿಡಕ್ಷನ್ ಅನ್ನು ಪಡೆಯಲು ಅಗತ್ಯವಿರುವ ಮೆಡಿಕಲ್ ಸರ್ಟಿಫಿಕೇಟ್ ಅನ್ನು ಒದಗಿಸಬಹುದು.

ಮೇಲೆ ತಿಳಿಸಿದ ಪ್ಯಾರಾಗ್ರಾಫ್‌ನಿಂದ, ಅಂಗವೈಕಲ್ಯ ಹೊಂದಿರುವ ಭಾರತೀಯ ವಸತಿಯ ಟ್ಯಾಕ್ಸ್‌ಪೇಯರ್‌ಗಳು ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 80U ಅಡಿಯಲ್ಲಿ ಟ್ಯಾಕ್ಸ್ ಪ್ರಯೋಜನಗಳನ್ನು ಆನಂದಿಸಬಹುದು ಎಂಬುದು ಸ್ಪಷ್ಟವಾಗಿದೆ. ಇಲ್ಲಿ, ಸೆಕ್ಷನ್ 80U ಪ್ರಕಾರ ಯಾರು ಅಂಗವಿಕಲರು ಎಂಬ ಪ್ರಶ್ನೆ ಉದ್ಭವಿಸುತ್ತದೆ? ಕೆಳಗಿನ ಸೆಕ್ಷನ್ ವನ್ನು ಓದಿ, ಮತ್ತು ನಿಮಗೆ ಉತ್ತರ ದೊರೆಯುತ್ತದೆ.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 80U ಪ್ರಕಾರ ಅಂಗವೈಕಲ್ಯ ಎಂದರೇನು?

ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ) ಆ್ಯಕ್ಟ್, 1955ರ ಪ್ರಕಾರ, 40% ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಎಂದು ಮೆಡಿಕಲ್ ಅಥಾರಿಟಿ ಪ್ರಮಾಣೀಕರಿಸಿದವರನ್ನು ವಿಕಲ ಚೇತನರು ಎಂದು ವ್ಯಾಖ್ಯಾನಿಸಲಾಗಿದೆ. ಅಂಗವೈಕಲ್ಯಗಳಲ್ಲಿ 7 ವಿಧದ ಸ್ಥಿತಿಗಳು ಅಥವಾ ಸೆಕ್ಷನ್ ಗಳಿವೆ. ಅವುಗಳೆಂದರೆ,

ಕನಿಷ್ಠ ದೃಷ್ಟಿ 80U

ದೃಷ್ಟಿ ದೋಷವನ್ನು (ಶಸ್ತ್ರಚಿಕಿತ್ಸೆಯಿಂದಲೂ ಗುಣಪಡಿಸಲಾಗದ) ಹೊಂದಿರುವ ವ್ಯಕ್ತಿಗಳಿಗೆ ಇನ್‌ಕಮ್‌ ಟ್ಯಾಕ್ಸ್ ವಿನಾಯಿತಿಗಳು ಲಭ್ಯವಿವೆ, ಆದರೆ ನಿರ್ದಿಷ್ಟ ಡಿವೈಸುಗಳ ಅಸಿಸ್ಟೆನ್ಸ್ ತೆಗೆದುಕೊಳ್ಳುವ ಮೂಲಕ ಅವರು ದೃಷ್ಟಿಯನ್ನು ಬಳಸಬಹುದು.

ಅಂಧತ್ವ

20 ಡಿಗ್ರಿ ಕೋನ ಅಥವಾ ದೃಷ್ಟಿ ತೀಕ್ಷ್ಣತೆ 6160ಕ್ಕಿಂತ ಹೆಚ್ಚಿಲ್ಲದ (ಸೂಕ್ತವಾದ ಲೆನ್ಸ್‌ಗಳನ್ನು ಬಳಸಿದ ನಂತರ) ದೃಷ್ಟಿ ಅಥವಾ ದೃಷ್ಟಿ ಕೊರತೆಯನ್ನು ಹೊಂದಿರುವ ವ್ಯಕ್ತಿಗಳು ಈ ಅಂಗವೈಕಲ್ಯದ ವರ್ಗಕ್ಕೆ ಬರುತ್ತಾರೆ. ಈ ವ್ಯಕ್ತಿಗಳು ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ವಾಸಿಯಾಗಿರುವ ಕುಷ್ಠರೋಗ

ಕುಷ್ಠರೋಗದಿಂದ ಚೇತರಿಸಿಕೊಂಡಿರುವ, ಆದರೆ ಕಣ್ಣು, ಕೈ ಅಥವಾ ಪಾದಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಕಳೆದುಕೊಂಡಿರುವ ವ್ಯಕ್ತಿಗಳು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ) ಆ್ಯಕ್ಟ್, 1955ರ ಅಡಿಯಲ್ಲಿ ತಮ್ಮನ್ನು ವಿಕಲ ಚೇತನರು ಎಂದು ತೋರಿಸಬಹುದು. ಯಾವುದೇ ಪ್ರಯೋಜನಕಾರಿ ಉದ್ಯೋಗವನ್ನು ತೆಗೆದುಕೊಳ್ಳಲಾಗದಂತೆ ತಡೆಯುವ ತೀವ್ರವಾದ ವಿರೂಪಗಳನ್ನು ಹೊಂದಿರುವ ಹಿರಿಯ ವ್ಯಕ್ತಿಗಳನ್ನು ಒಳಗೊಂಡ ಎಲ್ಲಾ ವ್ಯಕ್ತಿಗಳಿಗೆ ಈ ವ್ಯಾಖ್ಯಾನವು ಅನ್ವಯಿಸುತ್ತದೆ.

ಲೊಕೊ ಮೋಟಾರ್ ಅಂಗವೈಕಲ್ಯ

ಕಾಲುಗಳ ಅಂಗವೈಕಲ್ಯ ಅಥವಾ ಮೂಳೆಗಳು, ಸ್ನಾಯುಗಳು ಮತ್ತು ಕೀಲುಗಳಿಗೆ ಸಂಬಂಧಿಸಿದ ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳು ಈ ವರ್ಗಕ್ಕೆ ಸೇರುತ್ತಾರೆ.

ಬುದ್ಧಿಮಾಂದ್ಯತೆ

ಸೀಮಿತ ಅಥವಾ ಅಪೂರ್ಣ ಮಾನಸಿಕ ಬೆಳವಣಿಗೆಯನ್ನು ಹೊಂದಿರುವ ವ್ಯಕ್ತಿಗಳು ಈ ಅಂಗವೈಕಲ್ಯ ವರ್ಗಕ್ಕೆ ಸೇರುತ್ತಾರೆ. ಈ ಮೆಡಿಕಲ್ ಪರಿಸ್ಥಿತಿಗಳು ಬುದ್ಧಿಮತ್ತೆಯ ಅಸಹಜ ಮಟ್ಟಗಳಿಗೆ ಕಾರಣವಾಗಬಹುದು.

ಮಾನಸಿಕ ಅಸ್ವಸ್ಥತೆ

ವಿಕಲಚೇತನರ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ) ಆ್ಯಕ್ಟ್, 1955ರ ಪ್ರಕಾರ ಬುದ್ಧಿಮಾಂದ್ಯತೆ ಹೊರತುಪಡಿಸಿದ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಅಂಗವೈಕಲ್ಯವೆಂದು ಪರಿಗಣಿಸಲಾಗುತ್ತದೆ.

ಶ್ರವಣ ದೋಷ

80% ಅಥವಾ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಸೆಕ್ಷನ್ 56ರ ಸಬ್ ಸೆಕ್ಷನ್ 4ರಲ್ಲಿ ಉಲ್ಲೇಖಿಸಿದಂತೆ ₹1,25,000 ಕ್ಲೈಮ್ ಮಾಡಬಹುದು. ತೀವ್ರ ಅಂಗವೈಕಲ್ಯವು ಆಟಿಸಂ, ಬುದ್ಧಿಮಾಂದ್ಯತೆ, ಸೆರೆಬ್ರಲ್ ಪಾಲ್ಸಿ, ಬಹು ಅಂಗವೈಕಲ್ಯಗಳನ್ನು ಸಹ ಒಳಗೊಳ್ಳುತ್ತದೆ.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಒಂದು ಸೆಕ್ಷನ್‌, 80U ಜೊತೆ ನಿಕಟ ಸಂಬಂಧವನ್ನು ಹೊಂದಿದೆ ಮತ್ತು ಡಿಡಕ್ಷನ್‌ಗಳು ವಿಸ್ತಾರವಾಗಿ ಪರಸ್ಪರ ಅವಲಂಬಿಸಿರುತ್ತದೆ. ಆದ್ದರಿಂದ, ವ್ಯಕ್ತಿಗಳು 80U ಮತ್ತು ಸಂಬಂಧಿತ ಸೆಕ್ಷನ್‌ಗಳ ಬಗ್ಗೆ ಕಾಂಪ್ರೆಹೆನ್ಸಿವ್ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿದೆ. ಓದು ಮುಂದುವರಿಸಿ!

[ಮೂಲ]

ಸೆಕ್ಷನ್ 80U ಅಡಿಯಲ್ಲಿ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡುವುದು ಹೇಗೆ?

80U ಡಿಡಕ್ಷನ್‌ ಅನ್ನು ಪಡೆಯಲು, ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಗೆ ಇನ್‌ಕಮ್‌ ಅನ್ನು ವರದಿ ಮಾಡುವಾಗ ವ್ಯಕ್ತಿಗಳು ಅಂಗವೈಕಲ್ಯವನ್ನು ಘೋಷಿಸುವ ಮೆಡಿಕಲ್ ಸರ್ಟಿಫಿಕೇಟ್ ಮತ್ತು ಇತರ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು.

ಸೂಚನೆ: ವಿಕಲ ಚೇತನ ವ್ಯಕ್ತಿಯು ಈ ಡಿಡಕ್ಷನ್‌ ಅನ್ನು ಕ್ಲೈಮ್ ಮಾಡಿದರೆ, ಸೆಕ್ಷನ್ 80DD (ಮುಂದೆ ಚರ್ಚಿಸಲಾಗಿದೆ) ಅಡಿಯಲ್ಲಿ ಯಾವುದೇ ಕುಟುಂಬದ ಸದಸ್ಯರು ಅವನ ಡಿಡಕ್ಷನ್‌ ಮೇಲೆ ಕ್ಲೈಮ್ ಮಾಡಲಾಗುವುದಿಲ್ಲ.

ಸೆಕ್ಷನ್ 80U ಅಡಿಯಲ್ಲಿ ಎಷ್ಟು ಡಿಡಕ್ಷನ್‌ ಲಭ್ಯವಿದೆ ಎಂದು ಅಚ್ಚರಿಗೊಂಡಿದ್ದೀರಾ? ಓದು ಮುಂದುವರಿಸಿ!

ಸೆಕ್ಷನ್ 80U ಅಡಿಯಲ್ಲಿ ಡಿಡಕ್ಷನ್‌ ಲಿಮಿಟ್ ಏನು?

ಸೆಕ್ಷನ್ 80U ಅಡಿಯಲ್ಲಿ ಒದಗಿಸಲಾಗುವ ಡಿಡಕ್ಷನ್‌ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇವುಗಳು,

ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು

40% ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ₹75,000 ಅನ್ನು 80U ಡಿಡಕ್ಷನ್‌ ಆಗಿ ಕ್ಲೈಮ್ ಮಾಡಬಹುದು.

ತೀವ್ರ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು

80% ಅಥವಾ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಸೆಕ್ಷನ್ 56ರ ಸಬ್ ಸೆಕ್ಷನ್ 4ರಲ್ಲಿ ಉಲ್ಲೇಖಿಸಿದಂತೆ ₹1,25,000 ಕ್ಲೈಮ್ ಮಾಡಬಹುದು. ತೀವ್ರ ಅಂಗವೈಕಲ್ಯವು ಆಟಿಸಂ, ಬುದ್ಧಿಮಾಂದ್ಯತೆ, ಸೆರೆಬ್ರಲ್ ಪಾಲ್ಸಿ, ಬಹು ಅಂಗವೈಕಲ್ಯಗಳನ್ನು ಸಹ ಒಳಗೊಳ್ಳುತ್ತದೆ.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಒಂದು ಸೆಕ್ಷನ್‌, 80U ಜೊತೆ ನಿಕಟ ಸಂಬಂಧವನ್ನು ಹೊಂದಿದೆ ಮತ್ತು ಡಿಡಕ್ಷನ್‌ಗಳು ವಿಸ್ತಾರವಾಗಿ ಪರಸ್ಪರ ಅವಲಂಬಿಸಿರುತ್ತದೆ. ಆದ್ದರಿಂದ, ವ್ಯಕ್ತಿಗಳು 80U ಮತ್ತು ಸಂಬಂಧಿತ ಸೆಕ್ಷನ್‌ಗಳ ಬಗ್ಗೆ ಕಾಂಪ್ರೆಹೆನ್ಸಿವ್ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿದೆ. ಓದು ಮುಂದುವರಿಸಿ!

[ಮೂಲ]

ಸೆಕ್ಷನ್ 80U ಅಡಿಯಲ್ಲಿ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು ಯಾವುವು?

80U ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಅಗತ್ಯವಾದ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

  • ಮೆಡಿಕಲ್ ಅಥಾರಿಟಿಯಿಂದ ಅಂಗವೈಕಲ್ಯವನ್ನು ಘೋಷಿಸುವ ಮೆಡಿಕಲ್ ಸರ್ಟಿಫಿಕೇಟ್ (ಸಾಮಾನ್ಯ ಅಂಗವೈಕಲ್ಯಕ್ಕಾಗಿ).
  •  ತೀವ್ರ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಫಾರ್ಮ್ 10-IA (ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 139ರ ಪ್ರಕಾರ)

ಇನ್‌ಕಮ್‌ ಟ್ಯಾಕ್ಸ್‌ನ ಸೆಕ್ಷನ್ 80DD ಮತ್ತು 80U ನಡುವಿನ ವ್ಯತ್ಯಾಸವೇನು?

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್, 1961ರ ಸೆಕ್ಷನ್ 80DD ಪ್ರಕಾರ, ವಿಕಲ ಚೇತನ ವ್ಯಕ್ತಿಯ ಕುಟುಂಬದ ಸದಸ್ಯರು ಅಥವಾ ಆಪ್ತ ಬಂಧುಗಳು ಈ ಸೆಕ್ಷನ್ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು. ವಿಕಲಚೇತನ ವ್ಯಕ್ತಿಯನ್ನು ನೋಡಿಕೊಳ್ಳಲು ಇನ್ಶೂರೆನ್ಸ್ ಪ್ರೀಮಿಯಂ ಆಗಿ ನಿರ್ದಿಷ್ಟ ಮೊತ್ತವನ್ನು ಡೆಪಾಸಿಟ್ ಮಾಡಿದ ವ್ಯಕ್ತಿಗಳಿಗೆ ಈ ಸೆಕ್ಷನ್ ಅನ್ವಯಿಸುತ್ತದೆ.

ಮತ್ತೊಂದೆಡೆ, ವಿಕಲಚೇತನ ವ್ಯಕ್ತಿಗಳು ಸೆಕ್ಷನ್ 80U ಅಡಿಯಲ್ಲಿ ನೀಡಲಾಗುವ ಪ್ರಯೋಜನಗಳನ್ನು ಸ್ವತಃ ಕ್ಲೈಮ್ ಮಾಡಬಹುದು.

ನೆನಪಿಡಿ, 80U ಮತ್ತು 80DD ಅಡಿಯಲ್ಲಿ ದೈಹಿಕ ವಿಕಲಚೇತನರಿಗೆ ಇನ್‌ಕಮ್‌ ಟ್ಯಾಕ್ಸ್‌ ರಿಯಾಯಿತಿ ಒಂದೇ ಆಗಿರುತ್ತದೆ.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್, 1961ರ 80U ಡಿಡಕ್ಷನ್‌ಗಳು ಅಂಗವೈಕಲ್ಯ ಮತ್ತು ತೀವ್ರ ಅಂಗವೈಕಲ್ಯ ಹೊಂದಿರುವ ಟ್ಯಾಕ್ಸ್‌ಪೇಯರ್‌ಗಳಿಗೆ ಆರ್ಥಿಕ ಪರಿಹಾರವನ್ನು ಒದಗಿಸುತ್ತದೆ. ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಲು ಸಿದ್ಧರಿರುವ ವಿಕಲಚೇತನ ವ್ಯಕ್ತಿಗಳು ಅಥವಾ ಸಂಬಂಧಿತ ಕುಟುಂಬದ ಸದಸ್ಯರು ಮೇಲೆ ತಿಳಿಸಲಾದ ವಿವರಗಳನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಸೆಕ್ಷನ್ 80DD ಮತ್ತು 80U ನಡುವಿನ ವ್ಯತ್ಯಾಸವನ್ನು ತಿಳಿಯಬೇಕು.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಅನಿವಾಸಿ ಭಾರತೀಯರು ಸೆಕ್ಷನ್ 80U ಅಡಿಯಲ್ಲಿ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದೇ?

ಇಲ್ಲ, ಅನಿವಾಸಿ ಭಾರತೀಯರು 80U ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲಾಗುವುದಿಲ್ಲ.

ಮೆಡಿಕಲ್ ಸರ್ಟಿಫಿಕೇಟ್ ಅವಧಿ ಮುಗಿದ ನಂತರ ಒಬ್ಬ ವ್ಯಕ್ತಿಯು 80U ಡಿಡಕ್ಷನ್‌ ಅನ್ನು ಕ್ಲೈಮ್ ಮಾಡಬಹುದೇ?

ಹೌದು, ಮೆಡಿಕಲ್ ಸರ್ಟಿಫಿಕೇಟ್ ಮುಕ್ತಾಯ ದಿನಾಂಕದ ಆರ್ಥಿಕ ವರ್ಷದಲ್ಲಿ ವ್ಯಕ್ತಿಗಳು ಇನ್ನೂ ಟ್ಯಾಕ್ಸ್ ವಿನಾಯಿತಿಗಳನ್ನು ಕ್ಲೈಮ್ ಮಾಡಬಹುದು. ಆದಾಗ್ಯೂ, ಮುಂದಿನ ವರ್ಷಗಳಿಂದ ಸೆಕ್ಷನ್ 80U ಪ್ರಯೋಜನಗಳನ್ನು ಪಡೆಯಲು ವ್ಯಕ್ತಿಗಳು ಮಾನ್ಯತೆ ಪಡೆದ ಮೆಡಿಕಲ್ ಅಥಾರಿಟಿಯಿಂದ ಹೊಸ ಸರ್ಟಿಫಿಕೇಟ್ ಅನ್ನು ಪಡೆಯಬೇಕು.

ವಿಕಲಚೇತನರ ಅವಲಂಬಿತರು ಯಾರು?

ವಿಕಲಚೇತನ ವ್ಯಕ್ತಿಗಳ ಅವಲಂಬಿತರಲ್ಲಿ ಸಂಗಾತಿಗಳು, ಪೋಷಕರು, ಮಕ್ಕಳು, ಒಡಹುಟ್ಟಿದವರು ಅಥವಾ ಹಿಂದೂ ಅವಿಭಕ್ತ ಕುಟುಂಬಕ್ಕೆ (ಹಿಂದೂ ಅನ್‌ಡಿವೈಡೆಡ್‌ ಫ್ಯಾಮಿಲಿ-ಎಚ್‌ಯುಎಫ್‌) ಸೇರಿದ ಯಾರಾದರೂ ಒಳಗೊಂಡಿರುತ್ತಾರೆ.