ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 80GG ಅಡಿಯಲ್ಲಿ ಡಿಡಕ್ಷನ್‌ಗಳು

ಭಾರತದಂತಹ ದೇಶದಲ್ಲಿ, ಬಾಡಿಗೆ ಇನ್‌ಫ್ಲೇಷನ್‌ ಪ್ರಮುಖ ಸಮಸ್ಯೆಯಾಗಿ ಉಳಿದಿದೆ, ವಿಶೇಷವಾಗಿ ಮುಂಬೈನಂತಹ ಮೆಟ್ರೋ ನಗರಗಳಲ್ಲಿ, ಸೆಕ್ಷನ್ 80GG ಅಡಿಯಲ್ಲಿನ ಟ್ಯಾಕ್ಸ್ ಪ್ರಯೋಜನಗಳು ದೊಡ್ಡ ಸಹಾಯವಾಗಿ ಬರುತ್ತವೆ. ಈ ವಿಶೇಷ ಪ್ರಾವಿಶನ್ ಹೌಸ್ ರೆಂಟ್ ಅಲೋಯನ್ಸ್ (ಹೆಚ್‌ಆರ್‌ಎ) ಪಡೆಯದ ಮತ್ತು ಬಾಡಿಗೆ ವೆಚ್ಚವನ್ನು ತಾವಾಗಿಯೇ ಭರಿಸುತ್ತಿರುವ ಜನರಿಗೆ ಅಪ್ಲಿಕೇಬಲ್ ಆಗುತ್ತದೆ.

ಸಾಮಾನ್ಯವಾಗಿ, ಪಾವತಿಸಿದ ಬಾಡಿಗೆಗೆ ಸೆಕ್ಷನ್ 80GG ಡಿಡಕ್ಷನ್ ಅನ್ನು ಪಡೆಯಲು, ಸ್ವಯಂ ಉದ್ಯೋಗಿ ಮತ್ತು ಸ್ಯಾಲರೀಡ್ ವ್ಯಕ್ತಿಗಳು ಕೆಲವು ಷರತ್ತುಗಳನ್ನು ಅನುಸರಿಸಬೇಕು. ಗರಿಷ್ಠ ಡಿಡಕ್ಷನ್ ಲಿಮಿಟ್, ಅರ್ಹತೆಯ ಅವಶ್ಯಕತೆಗಳು ಇತ್ಯಾದಿಗಳನ್ನು ಒಳಗೊಂಡಂತೆ ಅಂತಹ ಎಲ್ಲಾ ವಿವರಗಳನ್ನು ಈ ಲೇಖನ ಕವರ್ ಮಾಡುತ್ತದೆ.

ಒಮ್ಮೆ ನೋಡಿ!

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ 80GG ಅಡಿಯಲ್ಲಿ ಗರಿಷ್ಠ ಡಿಡಕ್ಷನ್ ಲಿಮಿಟ್

ಸೆಕ್ಷನ್ 80GG ಅಡಿಯಲ್ಲಿ, ನೀವು ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಯಾವುದೇ ಸಮಯದಲ್ಲಿ ಹೆಚ್‌ಆರ್‌ಎ ಅನ್ನು ಸ್ವೀಕರಿಸದಿದ್ದಲ್ಲಿ ನೀವು ವಾರ್ಷಿಕ ₹.60,000ವರೆಗೆ ಕ್ಲೈಮ್ ಮಾಡಬಹುದು. ಮತ್ತು, ಡಿಡಕ್ಷನ್ ಕ್ವಾಂಟಮ್ ಈ ಕೆಳಗಿನವುಗಳಲ್ಲಿ ಕನಿಷ್ಠ ಆಗಿರಬೇಕು:

  • ತಿಂಗಳಿಗೆ ₹5000.
  • ಬಾಡಿಗೆಯಾಗಿ (ವಾರ್ಷಿಕವಾಗಿ) ಪಾವತಿಸಿದ ಒಟ್ಟು ಅಮೌಂಟ್ ಮೈನಸ್ ಸರಿಹೊಂದಿಸಲಾದ ಒಟ್ಟು ಇನ್‌ಕಮ್‌ನ 10%.
  • ಒಟ್ಟು ಹೊಂದಾಣಿಕೆಯ ವಾರ್ಷಿಕ ಇನ್‌ಕಮ್‌ನ 25%.

ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಕೆಳಗಿನ 80GG ಡಿಡಕ್ಷನ್ ಕ್ಯಾಲ್ಕುಲೇಷನ್ ವಿವರಣೆಯನ್ನು ತಿಳಿಯಿರಿ:

ನಿಮ್ಮ ವಾರ್ಷಿಕ ಇನ್‌ಕಮ್‌ ₹8 ಲಕ್ಷ ಎಂದು ಭಾವಿಸೋಣ, ನೀವು ಪ್ರಸ್ತುತ ನಿಮ್ಮ ಉದ್ಯೋಗದಾತರಿಂದ ಮನೆ ಬಾಡಿಗೆ ಅಲೋಯನ್ಸ್ ಅನ್ನು ಪಡೆಯುತ್ತಿಲ್ಲ ಮತ್ತು ನೀವು ಮಾಸಿಕ ₹11,000 ಅನ್ನು ಮನೆ ಬಾಡಿಗೆಯಾಗಿ ಪಾವತಿಸುತ್ತಿದ್ದೀರಿ. ನಂತರ, ಮೇಲೆ ತಿಳಿಸಲಾದ ಮೂರು ಷರತ್ತುಗಳ ಪ್ರಕಾರ, ಅಪ್ಲಿಕೇಬಲ್ ಆಗುವ ಟ್ಯಾಕ್ಸ್ ವಿನಾಯಿತಿ ಅಮೌಂಟ್‌ಗಳು ಹೀಗಿವೆ:

  • ಮೊದಲ ಪಾಯಿಂಟ್ ಅಡಿಯಲ್ಲಿ ಮಾಸಿಕ ₹5,000 (ವಾರ್ಷಿಕ ₹60,000).
  • ₹52,000 {(11,000*12) - (8,00,000*10%)}
  • ₹2,00,000 (8,00,000*25%)

ಇವುಗಳಲ್ಲಿ ಕಡಿಮೆ ಅಮೌಂಟ್ ಸೆಕ್ಷನ್ 80GG ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಆಗಿ ಅಪ್ಲಿಕೇಬಲ್ ಆಗುವುದರಿಂದ, ನೀವು ಕೇವಲ ₹52,000 ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ. ನೀವು ಪಾವತಿಸುತ್ತಿರುವ ಬಾಡಿಗೆಯು ವರ್ಷಕ್ಕೆ ₹ 1 ಲಕ್ಷವನ್ನು ಮೀರಿದರೆ, ಅದಕ್ಕಾಗಿ ನಿಮ್ಮ ಜಮೀನುದಾರರ ಪ್ಯಾನ್ ಕಾರ್ಡ್ ಅನ್ನು ನೀವು ಸಬ್‌ಮಿಟ್ ಮಾಡಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ.

ಗರಿಷ್ಠ 80GG ಡಿಡಕ್ಷನ್ ಲಿಮಿಟ್ ಮತ್ತು ಅದನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ ಎಂಬುದರ ಕುರಿತು ಈಗ ನಿಮಗೆ ತಿಳಿದಿದೆ, ಕ್ಲೈಮ್ ಪ್ರೊಸೆಸ್ ಜೊತೆ ಮುಂದುವರಿಯುವ ಮೊದಲು ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ ಪ್ರಕಾರ ಅರ್ಹತೆಯ ಅವಶ್ಯಕತೆಗಳನ್ನು ಚೆಕ್ ಮಾಡಿ.

[ಮೂಲ]

80GG ಅಡಿಯಲ್ಲಿ ಬಾಡಿಗೆ ಡಿಡಕ್ಷನ್ ಅನ್ನು ಕ್ಲೈಮ್ ಮಾಡಲು ಅರ್ಹತೆಯ ಪ್ಯಾರಾಮೀಟರ್‌ಗಳು

ಮೊದಲೇ ಹೇಳಿದಂತೆ, ತಮ್ಮ ಸ್ಯಾಲರಿಯ ಪ್ಯಾಕೇಜ್‌ನ ಭಾಗವಾಗಿ ಹೆಚ್‌ಆರ್‌ಎ ಪಡೆಯುವ ಜನರು ಸೆಕ್ಷನ್ 80GG ಅಡಿಯಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಮೇಲಿನ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ. ಅದರ ಹೊರತಾಗಿ, 80GGಗೆ ಫಾರ್ಮ್ 10 BA ಅನ್ನು ಫೈಲ್ ಮಾಡುವ ಮೊದಲು ನೀವು ಪೂರೈಸಬೇಕಾದ ಕೆಲವು ಷರತ್ತುಗಳು ಇಲ್ಲಿವೆ. ಅವುಗಳನ್ನು ಚೆಕ್ ಮಾಡಿ!

  • ನೀವು ಪ್ರಸ್ತುತ ವಾಸಿಸುತ್ತಿರುವ ವಸತಿ ಸೌಕರ್ಯ ನಿಮ್ಮ ಅಥವಾ ನಿಮ್ಮ ಸಂಗಾತಿಯ ಮತ್ತು ಮೈನರ್ ಮಗುವಿನ ಮಾಲೀಕತ್ವ ಹೊಂದಿರಬಾರದು. ವಾಸ್ತವವಾಗಿ, ಸೆಕ್ಷನ್ 80GG ಮತ್ತೊಂದು ನಗರದಲ್ಲಿ ಸ್ವಯಂ-ನೆಲೆಸಿರುವ ಪ್ರಾಪರ್ಟಿಯನ್ನು ಹೊಂದಿರುವ ಜನರಿಗೆ ಸಹ ಅಪ್ಲಿಕೇಬಲ್ ಆಗುವುದಿಲ್ಲ.
  • ಸ್ವಯಂ ಉದ್ಯೋಗಿ ಮತ್ತು ಸಂಬಳ ಪಡೆಯುವ ವ್ಯಕ್ತಿಗಳು ಮಾತ್ರ ಈ ವಿಭಾಗದ ಅಡಿಯಲ್ಲಿ ಟ್ಯಾಕ್ಸ್ ವಿನಾಯಿತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ; ಕಂಪನಿಗಳು ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ.
  • ನೀವು ಯಾವುದೇ ಬಿಸಿನೆಸ್/ಕೆಲಸದ ಚಟುವಟಿಕೆಯನ್ನು ನಡೆಸಲು ಬಾಡಿಗೆ ಮನೆಯನ್ನು ಬಳಸುತ್ತಿದ್ದರೆ, ಸೆಕ್ಷನ್ 80GG ಡಿಡಕ್ಷನ್ ನಿಮಗೆ ಅಪ್ಲಿಕೇಬಲ್ ಆಗುವುದಿಲ್ಲ.

ಐಟಿ ಆ್ಯಕ್ಟ್‌ನ ಈ ನಿರ್ದಿಷ್ಟ ಸೆಕ್ಷನ್‌ನ ಅಡಿಯಲ್ಲಿ ಕೆಲವು ವಿನಾಯಿತಿಗಳು ಲಭ್ಯವಿವೆ ಎಂಬುದನ್ನು ಗಮನಿಸಿ, ಅದು ಅದರ ಪ್ರಯೋಜನಗಳನ್ನು ಹೆಚ್ಚಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ತಮ್ಮ ಪೋಷಕರೊಂದಿಗೆ ವಾಸಿಸುವ ಜನರು ಬಾಡಿಗೆ ಡಿಡಕ್ಷನ್ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು. ಅವರು ಮಾಡಬೇಕಾಗಿರುವುದು ಏನೆಂದರೆ ಅವರ ಪೋಷಕರೊಂದಿಗೆ ಬಾಡಿಗೆ ಒಪ್ಪಂದವನ್ನು ಮಾಡುವುದು.

ಬಾಡಿಗೆ ಒಪ್ಪಂದವು ವಾರ್ಷಿಕ ಬಾಡಿಗೆ ವೆಚ್ಚ ₹ 60,000 ಎಂದು ತೋರಿಸಬೇಕು ಎಂಬುದನ್ನು ನೀವು ತಿಳಿದಿರಬೇಕು. ನಿಮ್ಮ ಪೋಷಕರು ನಿವೃತ್ತರಾಗಿದ್ದು, ಸೀನಿಯರ್‌ ಸಿಟಿಜನ್‌ಗಳು ಆಗಿದ್ದರೆ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಆದಾಗ್ಯೂ, ಜಂಟಿ ಮಾಲೀಕತ್ವದ ಸಂದರ್ಭದಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಮೇಲಿನ ಬಾಡಿಗೆ ಡಿಡಕ್ಷನ್ ಪ್ರಯೋಜನವು ಅಪ್ಲಿಕೇಬಲ್ ಆಗುವುದಿಲ್ಲ.

[ಮೂಲ]

ಪ್ರಾಪರ್ಟಿ ಮಾಲೀಕರಿಗೆ ಸೆಕ್ಷನ್ 80GG ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 80GG ಪ್ರಾಪರ್ಟಿ ಮಾಲೀಕರಿಗೆ ಟ್ಯಾಕ್ಸ್ ವಿನಾಯಿತಿಗಳನ್ನು ಕ್ಲೈಮ್ ಮಾಡಲು ಅನುಮತಿಸುತ್ತದೆ; ಆದಾಗ್ಯೂ, ಅವರು ಅದಕ್ಕೆ ಅರ್ಹರಾಗಲು ಕೆಲವು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಉದಾಹರಣೆಗೆ:

  • ನೀವು ಮಾಲೀಕತ್ವ ಹೊಂದಿರುವ ಪ್ರಾಪರ್ಟಿಯು ನಿಮ್ಮ ಕೆಲಸದ ಸ್ಥಳದಿಂದ ಬೇರೆ ನಗರದಲ್ಲಿರಬೇಕು. ಸೆಕ್ಷನ್ 80GG ಪ್ರಯೋಜನಗಳು ನಗರದೊಳಗೆ ಪ್ರಾಪರ್ಟಿಯನ್ನು ಹೊಂದಿದ್ದರೂ ಬಾಡಿಗೆ ಜಾಗದಲ್ಲಿ ವಾಸಿಸುವವರಿಗೆ ಅಪ್ಲಿಕೇಬಲ್ ಆಗುವುದಿಲ್ಲ.
  • ನೀವು ವಾಸಿಸುತ್ತಿರುವ ಪ್ರಾಪರ್ಟಿಗೆ ನೀವು ಬಾಡಿಗೆಯನ್ನು ಪಾವತಿಸಬೇಕು.

ಆಗಾಗ್ಗೆ, ಜನರು ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಬಹು ಉದ್ಯೋಗದಾತರನ್ನು ಬದಲಾಯಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅವರು ಕೇವಲ ಒಂದು ತಿಂಗಳವರೆಗೆ ಹೆಚ್‌ಆರ್‌ಎ ಸ್ವೀಕರಿಸಿದರೆ, ಅವರು ಸೆಕ್ಷನ್ 80GG ಅಡಿಯಲ್ಲಿ ಪಾವತಿಸಿದ ಬಾಡಿಗೆಗೆ ಟ್ಯಾಕ್ಸ್ ವಿನಾಯಿತಿಗಳನ್ನು ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ.

ಈ ಎಲ್ಲಾ ಮಾಹಿತಿಯೊಂದಿಗೆ, ಸೆಕ್ಷನ್ 80GG ಅಡಿಯಲ್ಲಿ ನಿಮ್ಮ ಟ್ಯಾಕ್ಸ್ ಲಯಬಿಲಿಟಿಯನ್ನು ಕಡಿಮೆ ಮಾಡಲು ನಿಮಗೆ ಸುಲಭವಾಗುತ್ತದೆ. ಆದಾಗ್ಯೂ, ಮುಂದುವರಿಯುವ ಮೊದಲು, ಆ ಆರ್ಥಿಕ ವರ್ಷದ ನಿಮ್ಮ ಎಲ್ಲಾ ಪೇಸ್ಲಿಪ್‌ಗಳನ್ನು ಚೆಕ್ ಮಾಡಿ, ಖಚಿತಪಡಿಸಿಕೊಳ್ಳಿ!

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸೆಕ್ಷನ್ 80GG ಡಿಡಕ್ಷನ್ ಅನ್ನು ಪಡೆಯಲು ಫಾರ್ಮ್ 10BA ಅನ್ನು ಫೈಲ್ ಮಾಡುವುದು ಕಡ್ಡಾಯವೇ?

ಹೌದು, ಬಾಡಿಗೆ ಪ್ರಾಪರ್ಟಿ ಮೇಲೆ ಪಾವತಿಸಿದ ಬಾಡಿಗೆಗೆ ಡಿಡಕ್ಷನ್ ಅನ್ನು ಪಡೆಯಲು ಬಯಸುವ ಟ್ಯಾಕ್ಸ್‌ಪೇಯರ್‌ಗಳು ಐಟಿಆರ್ ಅನ್ನು ಫೈಲ್ ಮಾಡುವ ಮೊದಲು ಫಾರ್ಮ್ 10BAನಲ್ಲಿ ಸ್ಟೇಟ್‌ಮೆಂಟ್‌ ಅನ್ನು ಪ್ರಸ್ತುತಪಡಿಸಬೇಕು.

[ಮೂಲ]

ಸೆಕ್ಷನ್ 80GG ಅಡಿಯಲ್ಲಿ ಡಿಡಕ್ಷನ್ ಅನ್ನು ಕ್ಲೈಮ್ ಮಾಡಲು ಯಾವ ವಿವರಗಳನ್ನು ಸಬ್‌ಮಿಟ್ ಮಾಡಬೇಕು?

ಮನೆ ಬಾಡಿಗೆ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ನೀವು ಈ ಕೆಳಗಿನ ವಿವರಗಳನ್ನು ಒದಗಿಸಬೇಕು:

  • ಪ್ಯಾನ್ ಕಾರ್ಡ್
  • ಪಾವತಿಸಿದ ಅಮೌಂಟ್ ವಿವರಗಳು
  • ಜಮೀನುದಾರರ ಹೆಸರು ಮತ್ತು ವಿಳಾಸ
  • ಪೇಮೆಂಟ್ ಮೋಡ್‌ಗೆ ಸಂಬಂಧಿಸಿದ ವಿವರಗಳು
  • ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಯಾವುದೇ ಇತರ ವಸತಿ ಪ್ರಾಪರ್ಟಿಯನ್ನು ಹೊಂದಿಲ್ಲ ಎಂದು ದೃಢೀಕರಿಸುವ ಡಿಕ್ಲರೇಷನ್.