ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80DDB
ಇತ್ತೀಚಿನ ಜಾಗತಿಕ ಆರೋಗ್ಯ ಬಿಕ್ಕಟ್ಟಿನಿಂದಾಗಿ, ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚವನ್ನು ಗಣನೀಯವಾಗಿ ಉಳಿಸಲು ಹೆಲ್ತ್ ಇನ್ಶೂರೆನ್ಸ್ ಮೇಲೆ ಜನರ ಅವಲಂಬನೆ ಹೆಚ್ಚಾಗುತ್ತಿದೆ. ಆದಾಗ್ಯೂ, ರೆಗ್ಯುಲರ್ ಹೆಲ್ತ್‌ಕೇರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಪಡೆಯಲು ಸಾಧ್ಯವಾಗದ ವ್ಯಕ್ತಿಗಳು, ಐಟಿ ಆ್ಯಕ್ಟ್‌ನ ಸೆಕ್ಷನ್ 80DDB ಮೂಲಕ ತಮ್ಮ ಟ್ಯಾಕ್ಸ್ ಲಯಬಿಲಿಟಿಯನ್ನು ಉಳಿಸಬಹುದು. ಇದರ ಅಡಿಯಲ್ಲಿ, ನಿಮ್ಮ ಅವಲಂಬಿತರಿಂದ ಅಥವಾ ನಿಮ್ಮಿಂದ ಉಂಟಾಗುವ ವೈದ್ಯಕೀಯ ವೆಚ್ಚಗಳ ಮೇಲೆ ನೀವು 80DDB ಡಿಡಕ್ಷನ್ ಅನ್ನು ಆನಂದಿಸಬಹುದು.
ಚೆನ್ನಾಗಿದೆ ಅಲ್ಲವೇ?
ಇನ್ಕಮ್ ಟ್ಯಾಕ್ಸ್‌ನಲ್ಲಿ 80DDB ಏನೆಂದು ಈಗ ನಿಮಗೆ ತಿಳಿದಿದೆ. ನಿಮಗೆ ಚೆನ್ನಾಗಿ ಅರ್ಥವಾಗಲು ಸಹಾಯವಾಗುವ ಅರ್ಹತೆ, ಕ್ಲೈಮ್ ಪ್ರಕ್ರಿಯೆ ಮತ್ತು ಇತರ ಅಂಶಗಳ ಬಗ್ಗೆ ಈಗ ಮಾತಾಡೋಣ.
80DDB ಡಿಡಕ್ಷನ್: ಯಾರು ಇದನ್ನು ಪಡೆಯಬಹುದು?
ಸೆಕ್ಷನ್ 80DDB ಅಡಿಯಲ್ಲಿ ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಲು ಅರ್ಹತಾ ಮಾನದಂಡಗಳನ್ನು ಈಗ ನೋಡೋಣ -
- ಕೇವಲ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳು (HUF) ಮಾತ್ರ ಸೆಕ್ಷನ್ 80DDB ಗೆ ಅರ್ಹರಾಗಿರುತ್ತಾರೆ.ಮತ್ತು
- ವ್ಯಕ್ತಿ ಅಥವಾ ಹೆಚ್.ಯು.ಎಫ್, ಭಾರತದ ಪ್ರಜೆಯಾಗಿರಬೇಕು. ಅನಿವಾಸಿ ವ್ಯಕ್ತಿಗಳು ಅಥವಾ ಕಾರ್ಪೊರೇಟ್ ಮೌಲ್ಯಮಾಪಕರು ಈ ಸೆಕ್ಷನ್‌ನ ಅಡಿಯಲ್ಲಿ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.ಮತ್ತು
- ಅರ್ಹತೆ ಪಡೆಯಲು, ನೀವು ಟ್ಯಾಕ್ಸ್ ಪೇಯರ್ ಆಗಿರಬೇಕು ಮತ್ತು ನಿಮ್ಮ ಅವಲಂಬಿತರನ್ನು ಬಾಧಿಸುವ ಕಾಯಿಲೆಗಳ ಚಿಕಿತ್ಸೆಗಾಗಿ, ವೈದ್ಯಕೀಯ ವೆಚ್ಚವನ್ನು ಪಡೆದಿರಬೇಕು.
ಈ ಸಂದರ್ಭದಲ್ಲಿ, ಅವಲಂಬಿತರು ಎಂದು ಇವರನ್ನು ಕರೆಯಲಾಗುತ್ತದೆ:
- ಒಂದುವೇಳೆ ಮೌಲ್ಯಮಾಪಕರು ಒಬ್ಬ ವ್ಯಕ್ತಿಯಾಗಿದ್ದರೆ, ವ್ಯಕ್ತಿಯ ಸಂಗಾತಿ, ಮಕ್ಕಳು, ಒಡಹುಟ್ಟಿದವರು ಮತ್ತು ಪೋಷಕರನ್ನು ಅವಲಂಬಿತರು ಎನ್ನಲಾಗುತ್ತದೆ.
- ಮೌಲ್ಯಮಾಪಕರು ಹೆಚ್.ಯು.ಎಫ್ ಆಗಿದ್ದರೆ, ಹಿಂದೂ ಅವಿಭಜಿತ ಕುಟುಂಬದ ಯಾವುದೇ ಸದಸ್ಯರನ್ನು ಅವಲಂಬಿತ ಎಂದು ಪರಿಗಣಿಸಬಹುದು.
80DDB ಕಾಯಿಲೆಗಳ ಪಟ್ಟಿ: ನೀವು ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದಾದ ಕಾಯಿಲೆಯ ಹೆಸರು
ಕೆಳಗೆ ನೀಡಲಾದ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80DDB ಅಡಿಯಲ್ಲಿ ನಿರ್ದಿಷ್ಟಪಡಿಸಿದ ಕಾಯಿಲೆಗಳನ್ನು ನಾವೀಗ ನೋಡೋಣ -
ನರವೈಜ್ಞಾನಿಕ ಕಾಯಿಲೆಗಳು (ನ್ಯೂರೋಲಾಜಿಕಲ್ ಕಾಯಿಲೆಗಳು)
ಈ ಡಿಡಕ್ಷನ್ 40% ಮತ್ತು ಅದಕ್ಕಿಂತ ಹೆಚ್ಚಿನ ನರವೈಜ್ಞಾನಿಕ ಅಂಗವೈಕಲ್ಯದಿಂದ ಬಳಲುತ್ತಿರುವ ರೋಗಿಗಳನ್ನು ಕವರ್ ಮಾಡುತ್ತದೆ. ಇದು ಒಳಗೊಳ್ಳುವ ಕಾಯಿಲೆಗಳು -
- ಅಟಾಕ್ಸಿಯಾ
- ಪಾರ್ಕಿನ್ಸನ್ ಕಾಯಿಲೆ
- ಮೋಟಾರ್ ನ್ಯೂರಾನ್ ಕಾಯಿಲೆ
- ಬುದ್ಧಿಮಾಂದ್ಯತೆ
- ಹೆಮಿಬಾಲಿಸ್ಮಸ್
- ಕೊರಿಯಾ
- ಡಿಸ್ಟೋನಿಯಾ ಮಸ್ಕ್ಯುಲೋರಮ್ ಡಿಫಾರ್ಮನ್ಸ್
- ಅಫೇಸಿಯಾ
ಇದು ಒಳಗೊಳ್ಳುವ ಇತರ ಕಾಯಿಲೆಗಳು
- ತೀವ್ರ ಮೂತ್ರಪಿಂಡ ವೈಫಲ್ಯ
- ಮಾರಣಾಂತಿಕ ಕ್ಯಾನ್ಸರ್
- ಥಲಸ್ಸೆಮಿಯಾ
- ಹಿಮೋಫಿಲಿಯಾ
- ಏಡ್ಸ್
ಸೆಕ್ಷನ್ 80DDB ಅಡಿಯಲ್ಲಿ ಡಿಡಕ್ಷನ್ ಅನ್ನು ಕ್ಲೈಮ್ ಮಾಡುವುದು ಹೇಗೆ?
80DDB ಅಡಿಯಲ್ಲಿ ಟ್ಯಾಕ್ಸ್ ಪ್ರಯೋಜನಗಳನ್ನು ಹೇಗೆ ಕ್ಲೈಮ್ ಮಾಡುವುದು ಎಂಬುದರ ಕುರಿತು ಕೆಳಗಿನ ಪಾಯಿಂಟರ್‌ಗಳನ್ನು ಗಮನಿಸಿ:
80DDB ಡಿಡಕ್ಷನ್ ಅನ್ನು ಪಡೆಯುವ ಮೊದಲು ಪರಿಗಣಿಸಬೇಕಾದ 3 ಅಂಶಗಳು
ನಿಮ್ಮ ಟ್ಯಾಕ್ಸ್ ಡಿಡಕ್ಷನ್ ಅನ್ನು ಪಡೆಯಲು, ಮೊದಲು ಈ ಪಾಯಿಂಟರ್‌ಗಳನ್ನು ಪರಿಗಣಿಸಿ:
- ಅರ್ಹ ಟ್ಯಾಕ್ಸ್ ಪೇಯರ್ ಆಗಿ, ನೀವು ಮೆಡಿಕಲ್ ಸರ್ಟಿಫಿಕೇಟ್‌ನ ಹಾರ್ಡ್ ಕಾಪಿಯನ್ನು ನೀಡಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರದಿಂದ ಅನುಮೋದನೆಗೊಂಡ ಆಸ್ಪತ್ರೆಯಲ್ಲಿ ಕೆಲಸ ಮಾಡುವ ತಜ್ಞರಿಂದ ಮೆಡಿಕಲ್ ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳಿ. ಸರ್ಟಿಫಿಕೇಟ್ ರೋಗಿಯ ಹೆಸರು ಮತ್ತು ವಯಸ್ಸು, ಕಾಯಿಲೆಯ ಸ್ವರೂಪ ಮತ್ತು ಸರ್ಟಿಫಿಕೇಟ್ ನೀಡುವ ತಜ್ಞರ ಹೆಸರು ಹಾಗೂ ರಿಜಿಸ್ಟ್ರೇಷನ್ ನಂಬರ್‌ನಂತಹ ವಿವರಗಳನ್ನು ಹೊಂದಿರಬೇಕು.
- ನಿರ್ದಿಷ್ಟ ಕಾಯಿಲೆಗೆ ನೀವು ಅರ್ಹ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ವೆಚ್ಚಗಳು ವೈದ್ಯರಿಗೆ ಪಾವತಿಸುವ ಫೀಸ್, ಡಯಾಗ್ನೋಸ್ಟಿಕ್ ಟೆಸ್ಟ್‌ನ ವೆಚ್ಚಗಳು, ಔಷಧಿಗಳು ಮತ್ತು ಚಿಕಿತ್ಸೆಗೆ ನೇರವಾಗಿ ಸಂಬಂಧಿಸಿದ ಇತರ ವೆಚ್ಚಗಳನ್ನು ಒಳಗೊಂಡಿರಬಹುದು. ಸರಿಯಾದ ದಾಖಲೆಗಳು ಮತ್ತು ವೆಚ್ಚಗಳ ರಿಸಿಪ್ಟ್‌ಗಳನ್ನು ಇಟ್ಟುಕೊಳ್ಳಿ.
- ನೀವು ಕುಟುಂಬದ ಅವಲಂಬಿತ ಸದಸ್ಯರಿಗೆ ಡಿಡಕ್ಷನ್ ಅನ್ನು ಕ್ಲೈಮ್ ಮಾಡುತ್ತಿದ್ದರೆ, ಅವರು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಪ್ರಕಾರ 'ಅವಲಂಬಿತರು' ಎಂಬ ಪದಕ್ಕೆ ಸರಿಯಾಗಿ ಹೊಂದುತ್ತಾರೆ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ 80DDB ಡಿಡಕ್ಷನ್ ಅನ್ನು ಕ್ಲೈಮ್ ಮಾಡಲು ಅಗತ್ಯವಿರುವ ಡಾಕ್ಯುಮೆಂಟುಗಳು
1. ಮೆಡಿಕಲ್ ಸರ್ಟಿಫಿಕೇಟ್
ಟ್ಯಾಕ್ಸ್ ಪೇಯರ್ ಆಗಿ, ನಿಮ್ಮ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡುವಾಗ ನೀವು ಅಥರೈಸ್ಡ್ ಮೆಡಿಕಲ್ ವೈದ್ಯರಿಂದ ನೀಡಿದ ಮೆಡಿಕಲ್ ಸರ್ಟಿಫಿಕೇಟ್ ಅನ್ನು, ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ಗೆ ಸಬ್ಮಿಟ್ ಮಾಡಬೇಕು. ಇದು ವೈದ್ಯಕೀಯ ಚಿಕಿತ್ಸೆ ಅಥವಾ ಮಾಡಿದ ಚಿಕಿತ್ಸೆಗೆ ಪುರಾವೆಯಂತೆ ಕೆಲಸ ಮಾಡುತ್ತದೆ.
ನೀವು ಯಾರಿಂದ ಇದನ್ನು ಪಡೆಯಬಹುದು ಎಂಬುದನ್ನು ತಿಳಿಯಲು ಕೆಳಗಿನ ಟೇಬಲ್ ಅನ್ನು ನೋಡಿ:
ಕಾಯಿಲೆಗಳು | ಸರ್ಟಿಫಿಕೇಟ್‌ಗಳು |
---|---|
ನರವೈಜ್ಞಾನಿಕ ಕಾಯಿಲೆ (ನ್ಯೂರೋಲಾಜಿಕಲ್ ಕಾಯಿಲೆಗಳು) | ನ್ಯೂರೋಲಾಜಿಸ್ಟ್‌ನಿಂದ ಪಡೆದ ಪ್ರಿಸ್ಕ್ರಿಪ್ಷನ್ (ನರವಿಜ್ಞಾನದಲ್ಲಿ ಡಾಕ್ಟರೇಟ್ ಆಫ್ ಮೆಡಿಸಿನ್ ಅಥವಾ ಯಾವುದೇ ಸಮಾನ ಪದವಿಗಳು) |
ತೀವ್ರ ಮೂತ್ರಪಿಂಡ ವೈಫಲ್ಯ | ನೆಫ್ರಾಲಜಿಸ್ಟ್‌ನಿಂದ ಪಡೆದ ಪ್ರಿಸ್ಕ್ರಿಪ್ಷನ್ (ನೆಫ್ರಾಲಜಿಯಲ್ಲಿ ಡಾಕ್ಟರೇಟ್ ಆಫ್ ಮೆಡಿಸಿನ್ ಅಥವಾ ಇತರ ಸಮಾನ ಪದವಿ). ಅಥವಾ, ಯೂರೋಲಾಜಿಸ್ಟ್‌ನಿಂದ ಪ್ರಿಸ್ಕ್ರಿಪ್ಷನ್ (ಮಾಸ್ಟರ್ ಆಫ್ ಚಿರುರ್ಜಿಯಾ ಅಥವಾ ಇತರ ಸಮಾನ ಪದವಿಗಳು) |
ಮಾರಣಾಂತಿಕ ಕ್ಯಾನ್ಸರ್ | ಆಂಕೊಲಾಜಿಸ್ಟ್‌ನಿಂದ ಪಡೆದ ಪ್ರಿಸ್ಕ್ರಿಪ್ಷನ್ (ಆಂಕೊಲಾಜಿಯಲ್ಲಿ ಡಾಕ್ಟರೇಟ್ ಆಫ್ ಮೆಡಿಸಿನ್ ಅಥವಾ ಇತರ ಸಮಾನ ಪದವಿಗಳು) |
ಹೆಮಟೊಲಾಜಿಕಲ್ ಡಿಸಾರ್ಡರ್ಸ್ (ತಲಸ್ಸೆಮಿಯಾ ಮತ್ತು ಹಿಮೋಫಿಲಿಯಾ) | ತಜ್ಞರಿಂದ ಪಡೆದ ಪ್ರಿಸ್ಕ್ರಿಪ್ಷನ್ (ಹೆಮಟಾಲಜಿಯಲ್ಲಿ ಡಾಕ್ಟರೇಟ್ ಆಫ್ ಮೆಡಿಸಿನ್ ಪದವಿ ಅಥವಾ ಇತರ ಸಮಾನ ಪದವಿಗಳು) |
ಏಡ್ಸ್ | ವೈದ್ಯರಿಂದ ಪಡೆದ ಪ್ರಿಸ್ಕ್ರಿಪ್ಷನ್ (ಸಾಮಾನ್ಯ ಅಥವಾ ಇಂಟರ್ನಲ್ ಮೆಡಿಸಿನ್‌ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಇತರ ಸಮಾನ ಪದವಿಗಳು) |
ಗಮನಿಸಿ: ಮೇಲೆ ತಿಳಿಸಲಾದ ವೈದ್ಯಕೀಯ ಪದವಿಗಳು ಭಾರತೀಯ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟಿರಬೇಕು.
ಅಲ್ಲದೆ, ನೆನಪಿಡಬೇಕಾದ 2 ಮುಖ್ಯ ವಿಷಯಗಳು:
- ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ
ಈ ಸಂದರ್ಭದಲ್ಲಿ, ಅವನು / ಅವಳು ಅದೇ ಆಸ್ಪತ್ರೆಯಿಂದ ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳಬಹುದು. ಹಾಗಾಗಿ ಈ ಮೊದಲು ನೀಡಿದ ಸೂಚನೆಯಂತೆ ಸರ್ಕಾರಿ ಆಸ್ಪತ್ರೆಯಿಂದ ಪಡೆದುಕೊಳ್ಳಬೇಕಿಲ್ಲ.
- ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ
ಅವನು/ಅವಳು ಪೂರ್ಣ ಸಮಯ ಕೆಲಸ ಮಾಡುವ ವೈದ್ಯರಿಂದ ಮೆಡಿಕಲ್ ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳಬೇಕು.
2. ಸೆಲ್ಫ್-ಡಿಕ್ಲರೇಶನ್ ಡಾಕ್ಯುಮೆಂಟ್
ನೀವು ಸೆಲ್ಫ್-ಡಿಕ್ಲರೇಶನ್ ಸರ್ಟಿಫಿಕೇಟ್ ಅನ್ನು ತೋರಿಸುವ ಅಗತ್ಯವಿದೆ. ಇದು ನೀವು ಮಾಡಿದ ವೈದ್ಯಕೀಯ ವೆಚ್ಚಗಳ ಪುರಾವೆಯಂತೆ ಕೆಲಸ ಮಾಡುತ್ತದೆ. ಆದ್ದರಿಂದ, ಅಂಗವಿಕಲ ಅವಲಂಬಿತರ ತರಬೇತಿ ಮತ್ತು ಪುನರ್ವಸತಿ ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಈ ಡಾಕ್ಯುಮೆಂಟ್ ಒಳಗೊಂಡಿರಬೇಕು.
3. 80DDB ಫಾರ್ಮ್
ಹೊಸ ನಿಯಮದ ಪ್ರಕಾರ, ನೀವು ಪ್ರಿಸ್ಕ್ರಿಪ್ಷನ್ ಮತ್ತು ಫಾರ್ಮ್ 10-1 ಅನ್ನು ಸಬ್ಮಿಟ್ ಮಾಡುವ ಅಗತ್ಯವಿಲ್ಲ. ಆದರೆ ಅವಲಂಬಿತ ಸದಸ್ಯರು ಆಟಿಸಂ ಮತ್ತು ಸೆರೆಬ್ರಲ್ ಪಾಲ್ಸಿಯಂತಹ ಅಂಗವೈಕಲ್ಯಗಳಿಂದ ಬಳಲುತ್ತಿದ್ದರೆ, ಆಗ ಇದು ಅತ್ಯಗತ್ಯ.
80DDB ಗಾಗಿ ಫಾರ್ಮ್ ಅನ್ನು ಭರ್ತಿ ಮಾಡುವುದು ಹೇಗೆ?
80DDB ಫಾರ್ಮ್ ಅನ್ನು ಭರ್ತಿ ಮಾಡಲು ಹಂತ-ಹಂತವಾದ ಗೈಡ್ ಅನ್ನು ಫಾಲೋ ಮಾಡಿ:
- ಹಂತ 1: ರೋಗಿಯ ಹೆಸರು, ವಿಳಾಸ, ತಂದೆಯ ಹೆಸರನ್ನು ಭರ್ತಿ ಮಾಡಿ.
- ಹಂತ 2: ಹೆಸರು ಮತ್ತು ವ್ಯಕ್ತಿಯ ವಿಳಾಸ ಮತ್ತು ವ್ಯಕ್ತಿಯೊಂದಿಗೆ ಇರುವ ಅವಲಂಬಿತ ರೋಗಿಯ ಸಂಬಂಧವನ್ನು ಬರೆಯಿರಿ.
- ಹಂತ 3: ಕಾಯಿಲೆಯ ಹೆಸರನ್ನು ನಮೂದಿಸಿ. ಅಲ್ಲದೆ, ಅಂಗವೈಕಲ್ಯದ ಪ್ರಮಾಣವನ್ನು ಸೂಚಿಸಿ (ಉದಾಹರಣೆಗೆ, 40% ಅಥವಾ ಹೆಚ್ಚು).
- ಹಂತ 4: ಮೆಡಿಕಲ್ ಸರ್ಟಿಫಿಕೇಟ್ ಅನ್ನು ನೀಡುವ ವೈದ್ಯರ ಹೆಸರು, ವಿಳಾಸ, ರಿಜಿಸ್ಟ್ರೇಷನ್ ಮತ್ತು ಅರ್ಹತೆಯನ್ನು ಭರ್ತಿ ಮಾಡಿ. ಆಸ್ಪತ್ರೆಯ ಹೆಸರು ಮತ್ತು ವಿಳಾಸವನ್ನು ನಮೂದಿಸಿ.
- ಹಂತ 5: "ವೆರಿಫಿಕೇಶನ್" ಸೆಕ್ಷನ್ ಅನ್ನು ಭರ್ತಿ ಮಾಡಿ. ಅಲ್ಲದೆ, ಫಾರ್ಮ್‌ನಲ್ಲಿ ನೀವು ಮತ್ತು ಸರ್ಕಾರಿ ಆಸ್ಪತ್ರೆಯ ಮುಖ್ಯಸ್ಥರು ಸರಿಯಾಗಿ ಸಹಿ ಮಾಡಬೇಕು. ಅವನು/ಅವಳು ಜನರಲ್ ಅಥವಾ ಇಂಟರ್ನಲ್ ಮೆಡಿಸಿನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
80DDB ಡಿಡಕ್ಷನ್‌ನ ಲಿಮಿಟ್: ನೀವು ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
80DDB ಅಡಿಯಲ್ಲಿನ ಡಿಡಕ್ಷನ್ ಸಂಪೂರ್ಣವಾಗಿ ವೈದ್ಯಕೀಯ ವೆಚ್ಚವನ್ನು ಹೊಂದಿರುವ ನಿಮ್ಮ ಅವಲಂಬಿತರ ವಯಸ್ಸನ್ನು ಆಧರಿಸಿದೆ. ಆದ್ದರಿಂದ ವಯಸ್ಸಿನ ಕೆಟಗರಿಯನ್ನು ನಾವೀಗ ನೋಡೋಣ:
ಕೆಟಗರಿ | ವಯಸ್ಸಿನ ವಿವರಣೆ |
---|---|
ಹಿರಿಯ ನಾಗರಿಕರು (ಸೀನಿಯರ್‌ಗಳು) | ಹಿರಿಯರು ಎಂದು ವರ್ಗೀಕರಿಸಲಾದ ವ್ಯಕ್ತಿಗಳು ಭಾರತೀಯ ನಿವಾಸಿಗಳಾಗಿದ್ದು ಮತ್ತು ನಿರ್ದಿಷ್ಟ ವರ್ಷದಲ್ಲಿ 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. |
ಸೂಪರ್ ಸೀನಿಯರ್ಸ್ | ಸೂಪರ್ ಸೀನಿಯರ್ ಸಿಟಿಜನ್‌ಗಳು ನಿರ್ದಿಷ್ಟ ವರ್ಷದಲ್ಲಿ 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಿವಾಸಿಗಳಾಗಿರಬೇಕು. |
ಟ್ಯಾಕ್ಸ್ ಡಿಡಕ್ಷನ್‌ಗಳ ಗರಿಷ್ಠ ವಿನಾಯತಿ ಎಂದರೆ ನಿಜವಾಗಿ ಪಾವತಿಸಿದ ವೈದ್ಯಕೀಯ ವೆಚ್ಚ ಅಥವಾ ₹40,000, ಇವುಗಳಲ್ಲಿ ಯಾವುದು ಮೊದಲು ಬರುವುದೋ ಅದು. ಇದನ್ನು ಪರಿಗಣಿಸಿ, ಡಿಡಕ್ಷನ್‌ನ ಮೊತ್ತವು ಈ ಕೆಳಗಿನಂತಿರುತ್ತದೆ:
ವಯಸ್ಸು | 80DDB ಡಿಡಕ್ಷನ್‌ನ ಮೊತ್ತ |
---|---|
60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು | ₹40,000 ಅಥವಾ ನಿಜವಾದ ವೈದ್ಯಕೀಯ ವೆಚ್ಚ, ಯಾವುದು ಕಡಿಮೆಯೋ ಅದು |
60 ವರ್ಷಗಳು ಅಥವಾ ಅದಕ್ಕೂ ಮೆಲ್ಪಟ್ಟವರು | ₹1,00,000 ಅಥವಾ ನಿಜವಾದ ವೈದ್ಯಕೀಯ ವೆಚ್ಚ, ಯಾವುದು ಕಡಿಮೆಯೋ ಅದು |
80 ವರ್ಷಗಳು ಅಥವಾ ಅದಕ್ಕೂ ಮೆಲ್ಪಟ್ಟವರು | ₹1,00,000 ಅಥವಾ ನಿಜವಾದ ವೈದ್ಯಕೀಯ ವೆಚ್ಚ, ಯಾವುದು |
ಎಂಪ್ಲಾಯರ್ ಅಥವಾ ಇನ್ಶೂರರ್‌ಗಳಿಂದ ರಿಇಂಬರ್ಸ್ ಮೊತ್ತದ ಮೂಲಕ ಕಡಿಮೆ ಮಾಡಿ
ಉದಾಹರಣೆ: ನಿಮ್ಮ ಎಂಪ್ಲಾಯರ್ ಅಥವಾ ಇನ್ಶೂರರ್‌ಗಳು ವೈದ್ಯಕೀಯ ವೆಚ್ಚವನ್ನು ರಿಇಂಬರ್ಸ್ ಮಾಡಿದರೆ, ಆ ಕ್ರೆಡಿಟ್ ಅನ್ನು 80DDB ಡಿಡಕ್ಷನ್‌ನಲ್ಲಿ ಸರಿಹೊಂದಿಸಲಾಗುತ್ತದೆ. ಉದಾಹರಣೆಗೆ, ನೀವು ₹60,000 ಮೌಲ್ಯದ ವೈದ್ಯಕೀಯ ವೆಚ್ಚವನ್ನು ಮಾಡಿದರೆ, ನೀವು ₹40,000 ಟ್ಯಾಕ್ಸ್ ವಿನಾಯಿತಿಯನ್ನು ಪಡೆಯಬಹುದು. ಆದರೆ, ನಿಮ್ಮ ಇನ್ಶೂರರ್‌ಗಳು ನಿಗದಿತ ಕಾಯಿಲೆಗಳಿಗೆ ₹30,000 ವೈದ್ಯಕೀಯ ವೆಚ್ಚವನ್ನು ರಿಇಂಬರ್ಸ್ ಮಾಡುತ್ತಾರೆ ಎಂದು ಭಾವಿಸೋಣ. ಆಗ, ನೀವು ಸೆಕ್ಷನ್ 80DDB ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ ಅಡಿಯಲ್ಲಿ ಕೇವಲ ₹10,000 ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು.
ನೆನಪಿಡಿ, ರಿಇಂಬರ್ಸ್‌ಮೆಂಟ್ ಮೊತ್ತವು, ಅನುಮತಿಸುವ ₹ 40,000 ಕ್ಕಿಂತ ಹೆಚ್ಚಿದ್ದರೆ, ಆಗ ನೀವು ಟ್ಯಾಕ್ಸ್ ಡಿಡಕ್ಷನ್ ಅನ್ನು ಆನಂದಿಸಲು ಸಾಧ್ಯವಿಲ್ಲ. ಆದಾಗ್ಯೂ, ಅವಲಂಬಿತರು ಹಿರಿಯ ನಾಗರಿಕರಾಗಿದ್ದರೆ, ನೀವು ₹1,00,000 ಗಳ ಟ್ಯಾಕ್ಸ್ ವಿನಾಯಿತಿಯನ್ನು ಆನಂದಿಸಬಹುದು.
ಬಾಟಮ್ ಲೈನ್
ಪ್ರಸ್ತುತ ಆರೋಗ್ಯ ಬಿಕ್ಕಟ್ಟಿನಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವುದಕ್ಕಾಗಿ ಟ್ಯಾಕ್ಸ್ ಪ್ರಯೋಜನಗಳನ್ನು ವಿಸ್ತರಿಸಲು ಸರ್ಕಾರ ಪ್ಲ್ಯಾನ್ ಮಾಡಿದೆ. ಆದ್ದರಿಂದ ಯಾವುದೇ ತೊಂದರೆಯಿಲ್ಲದೆ 80DDB ಡಿಡಕ್ಷನ್ ಅನ್ನು ಆನಂದಿಸಲು ಈ ಮೇಲಿನ ಪಾಯಿಂಟರ್‌ಗಳನ್ನು ನೆನಪಿನಲ್ಲಿಡಿ.
ಪದೇ ಪದೇ ಕೇಳಲಾದ ಪ್ರಶ್ನೆಗಳು
80DDB ಅಡಿಯಲ್ಲಿನ ಡಿಡಕ್ಷನ್‌ಗಳು 80DD ಅಡಿಯಲ್ಲಿನ ಡಿಡಕ್ಷನ್‌ಗಳಿಗಿಂತ ಹೇಗೆ ಭಿನ್ನವಾಗಿವೆ?
80DD ಯಲ್ಲಿ, ಅಂಗವಿಕಲ ಅವಲಂಬಿತರಿಗೆ ವೈದ್ಯಕೀಯ ಚಿಕಿತ್ಸೆಗಳ ಮೇಲೆ ನೀವು ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಆನಂದಿಸಬಹುದು. ಅದೇ ಸಮಯದಲ್ಲಿ, 80DDB ಸ್ವತಃ ಅಥವಾ ಅವಲಂಬಿತ ವೈದ್ಯಕೀಯ ಚಿಕಿತ್ಸೆಗಳಿಗೆ ಮಾಡುವ ವೈದ್ಯಕೀಯ ವೆಚ್ಚಗಳ ಮೇಲೆ ಟ್ಯಾಕ್ಸ್ ಪ್ರಯೋಜನಗಳನ್ನು ಖಾತ್ರಿಗೊಳಿಸುತ್ತದೆ.
80DDB ಡಿಡಕ್ಷನ್‌ಗಳ ಅಡಿಯಲ್ಲಿ ಪಾರ್ಶ್ವವಾಯು (ಪ್ಯಾರಾಲಿಸಿಸ್) ಕವರ್ ಆಗುತ್ತದೆಯೇ?
ಪಾರ್ಶ್ವವಾಯು ನರವೈಜ್ಞಾನಿಕ ಕಾಯಿಲೆಯ ಅಡಿಯಲ್ಲಿ ಬರುವುದರಿಂದ, ಇದು 80DDB ಪಟ್ಟಿಯ ಅಡಿಯಲ್ಲಿ ಕವರ್ ಆಗುತ್ತದೆ.