ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 44AB ಕುರಿತ ವಿವರಣೆ

ಪ್ರತಿ ಹಣಕಾಸು ವರ್ಷವು, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ ಆಫ್ ಇಂಡಿಯಾದ ಅಡಿಯಲ್ಲಿ ಒಬ್ಬ ವ್ಯಕ್ತಿ ಅಥವಾ ಬಿಸಿನೆಸ್‌ನಿಂದ ಟ್ಯಾಕ್ಸ್ ಫೈಲಿಂಗ್ ಅನ್ನು ಬಯಸುತ್ತದೆ. ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 44AB ಅಡಿಯಲ್ಲಿ, ಒಂದು ಸಂಸ್ಥೆ ಅಥವಾ ಎಂಟಿಟಿಯ ವಾರ್ಷಿಕ ಒಟ್ಟು ಟರ್ನ್ಓವರ್ ಮತ್ತು ರಿಸಿಪ್ಟ್‌ಗಳು ನಿಗದಿತ ಲಿಮಿಟ್ ಅನ್ನು ಮೀರಿದರೆ ಟ್ಯಾಕ್ಸ್ ಆಡಿಟ್‌ಗೆ ಕಾರಣವಾಗುತ್ತದೆ.

ಈ ಆಡಿಟ್, ಟ್ಯಾಕ್ಸ್ ಪೇಯರ್‌ಗಳ ಹಣಕಾಸಿಗೆ ಸಂಬಂಧಿಸಿದ ವಸ್ತುಗಳ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ಖಚಿತಪಡಿಸುತ್ತದೆ. 1961 ರ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ ಅನ್ನು ಅನುಸರಿಸುವ ಅಕೌಂಟ್ ಲಾಗ್ ಬುಕ್‌ಗಳೊಂದಿಗೆ ಇನ್ಕಮ್, ಡಿಡಕ್ಷನ್‌ಗಳು ಮತ್ತು ಟ್ಯಾಕ್ಸ್‌ಗಳಂತಹ ಮಾಹಿತಿ.

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 44AB ಎಂದರೇನು?

ಸೆಕ್ಷನ್ 44AB, ಟ್ಯಾಕ್ಸ್ ಆಡಿಟ್‌ನ ರೂಲ್ಸ್ ಮತ್ತು ರೆಗ್ಯುಲೇಶನ್‌ಗಳನ್ನು ವ್ಯಕ್ತಿಗಳು ಮತ್ತು ಬಿಸಿನೆಸ್‌ಗಳಿಗೆ ಹೇಳುತ್ತದೆ. ಇದು ಬಿಸಿನೆಸ್‌ಗಳು ಅಥವಾ ವ್ಯಕ್ತಿಗಳ ಅಕೌಂಟ್‌ಗಳ ಆಡಿಟ್‌ನೊಂದಿಗೆ ವ್ಯವಹರಿಸುತ್ತದೆ. ಈ ಸೆಕ್ಷನ್‌ನ ಅಡಿಯಲ್ಲಿ ಸೂಚಿಸಿದಂತೆ ಅವರು ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತದೆ.

ವಾರ್ಷಿಕ ಒಟ್ಟು ಇನ್ಕಮ್/ರಿಸಿಪ್ಟ್‌ಗಳು ನಿಗದಿತ ಲಿಮಿಟ್ ಅನ್ನು ಮೀರಿದರೆ. ಐಟಿ ಸೆಕ್ಷನ್ 44AB ಅಡಿಯಲ್ಲಿ ಟ್ಯಾಕ್ಸ್ ಆಡಿಟ್ ಮಾಡಲು ಮೌಲ್ಯಮಾಪಕರು ಜವಾಬ್ದಾರರಾಗಿರುತ್ತಾರೆ.

[ಮೂಲ]

ಸೆಕ್ಷನ್ 44AB ಅಡಿಯಲ್ಲಿ ಟ್ಯಾಕ್ಸ್ ಆಡಿಟ್ ಎಂದರೇನು?

ವ್ಯಕ್ತಿಯ ಅಕೌಂಟ್ ಬುಕ್‌ನ ಪರೀಕ್ಷೆ ಅಥವಾ ಮೌಲ್ಯಮಾಪನವನ್ನು ಟ್ಯಾಕ್ಸ್ ಆಡಿಟ್ ಎಂದು ಕರೆಯಲಾಗುತ್ತದೆ. ಈ ಐಟಿ ಆ್ಯಕ್ಟ್ ಅಡಿಯಲ್ಲಿ, ಅಭ್ಯಾಸ ಮಾಡುತ್ತಿರುವ ಚಾರ್ಟರ್ಡ್ ಅಕೌಂಟೆಂಟ್ ಆಡಿಟ್ ಅನ್ನು ನಡೆಸುತ್ತಾರೆ. ನಂತರದಲ್ಲಿ ಈ ಆಡಿಟ್ ರಿಪೋರ್ಟ್‌ಗಳು ಮತ್ತು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ಗೆ ಸಿಎ ಸಬ್ಮಿಟ್ ಮಾಡುತ್ತಾರೆ.

ಹಣಕಾಸು ವರ್ಷದಲ್ಲಿ ಟ್ಯಾಕ್ಸ್, ಇನ್ಕಮ್ ಮತ್ತು ಡಿಡಕ್ಷನ್‌ಗಳನ್ನು ಟ್ರ್ಯಾಕ್ ಮಾಡಲು, ಟ್ಯಾಕ್ಸ್ ಪೇಯರ್ ತನ್ನ ಅಕೌಂಟ್ಸ್ ಬುಕ್‌ಗಳನ್ನು ಮತ್ತಿತರ ಹಣಕಾಸು ರೆಕಾರ್ಡ್‌ಗಳನ್ನು ಸರಿಯಾಗಿ ನಿರ್ವಹಿಸಬೇಕೆಂದು ಈ ಸೆಕ್ಷನ್ ಬಯಸುತ್ತದೆ.

[ಮೂಲ]

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 44AB ನ ಅಪ್ಲಿಕೇಶನ್ ಕ್ರೈಟಿರಿಯಾಗಳು

ಕೆಳಗಿನ ವ್ಯಕ್ತಿಗಳು ಅಥವಾ ಸಂಸ್ಥೆಗಳು, ಚಾರ್ಟರ್ಡ್ ಅಕೌಂಟೆಂಟ್‌ನಿಂದ ಆಡಿಟ್‌ಗೆ ಜವಾಬ್ದಾರರಾಗಿರುತ್ತವೆ -

  • ಯಾವುದೇ ಹಿಂದಿನ ವರ್ಷದಲ್ಲಿ ₹ 1 ಕೋಟಿಗಿಂತ ಹೆಚ್ಚಿನ ಒಟ್ಟು ಟರ್ನ್ಓವರ್/ರಿಸಿಪ್ಟ್‌ಗಳೊಂದಿಗೆ ಬಿಸಿನೆಸ್ ನಡೆಸುತ್ತಿರುವ ವ್ಯಕ್ತಿ. (ಪ್ರಿಸಂಪ್ಟಿವ್ ಸೆಕ್ಷನ್‌ಗಳನ್ನು ಆಯ್ಕೆ ಮಾಡದಿದ್ದರೆ) 

  • ಯಾವುದೇ ಹಿಂದಿನ ವರ್ಷದಲ್ಲಿ ₹ 50 ಲಕ್ಷಕ್ಕಿಂತ ಹೆಚ್ಚಿನ ಪ್ರೊಫೆಷನ್‌ನಲ್ಲಿ ಒಟ್ಟು ಇನ್ಕಮ್/ರಿಸಿಪ್ಟ್‌ಗಳನ್ನು ಹೊಂದಿರುವ ವ್ಯಕ್ತಿಗಳು.

  • ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನ ಪ್ರಿಸಂಪ್ಟಿವ್ ಟ್ಯಾಕ್ಸೇಶನ್ ಸ್ಕೀಮ್ (44AD, 44ADA ಮತ್ತು 44AE) ಅಡಿಯಲ್ಲಿ ಕವರ್ ಆಗುವ ಬಿಸಿನೆಸ್ ಅಥವಾ ಪ್ರೊಫೆಷನ್‌ನಲ್ಲಿರುವ ವ್ಯಕ್ತಿಗಳು. ಆದರೆ ಆ ಸೆಕ್ಷನ್‌ಗಳಲ್ಲಿ ತಿಳಿಸಿರುವ ಡೀಮ್ಡ್ ಪ್ರಾಫಿಟ್‌ಗಿಂತ ಅವರ ಪ್ರಾಫಿಟ್ ಕಡಿಮೆಯಾಗಿದೆ ಎಂದು ಕ್ಲೈಮ್ ಮಾಡುತ್ತಾರೆ.

  • ಒಬ್ಬ ವ್ಯಕ್ತಿ ಅಥವಾ ಬಿಸಿನೆಸ್‌ಗಾಗಿ ₹ 2 ಕೋಟಿ ರೂಗಳನ್ನು ಮೀರಿದ ಸೇಲ್ಸ್ ಟರ್ನ್ಓವರ್ (₹2 ಕೋಟಿಗಿಂತ ಹೆಚ್ಚಿನ ಪ್ರಿಸಂಪ್ಟಿವ್ ಸೆಕ್ಷನ್‌ಗಳು ಅನ್ವಯಿಸುವುದಿಲ್ಲ)

  • ಎರಡು ಅಥವಾ ಹೆಚ್ಚಿನ ಬಿಸಿನೆಸ್‌ಗಳನ್ನು ಹೊಂದಿರುವ ವ್ಯಕ್ತಿಗಳು. ಇಲ್ಲಿ ಪ್ರತಿ ಬಿಸಿನೆಸ್‌ನಿಂದ ಗಳಿಸಿದ ಒಟ್ಟು ರಿಸಿಪ್ಟ್‌ಗಳ ಮೊತ್ತವು, ಆಡಿಟ್‌ನ ಅನ್ವಯವನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಅಗ್ರಿಗೇಟ್ ಗ್ರಾಸ್ ಟರ್ನ್ಓವರ್ ಅನ್ನು ರೂಪಿಸುತ್ತದೆ.

[ಮೂಲ]

ಸೆಕ್ಷನ್ 44AB ಅಡಿಯಲ್ಲಿ ಸಬ್ಮಿಟ್ ಮಾಡಲು ಫಾರ್ಮ್‌ಗಳ ಪಟ್ಟಿ

ಐಟಿ ಡಿಪಾರ್ಟ್‌ಮೆಂಟ್‌ನ ಕಾನೂನುಗಳಿಗೆ ಅನುಸಾರವಾಗಿ, ಅವನ / ಅವಳ ಅಕೌಂಟ್‌ನ ಆಡಿಟ್‌ಗಾಗಿ ಪ್ರಶ್ನೆಯಲ್ಲಿರುವ ವ್ಯಕ್ತಿಯು ಈ ಕೆಳಗಿನ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗುತ್ತದೆ -

1. ಬಿಸಿನೆಸ್ ಅಥವಾ ಎಂಟರ್‌ಪ್ರೈಸ್ ಅನ್ನು ನಡೆಸುತ್ತಿರುವ ವ್ಯಕ್ತಿ -

  • ಫಾರ್ಮ್ ನಂ. 3CA - ಯಾವುದೇ ಇತರ ಕಾನೂನಿನ ಅಡಿಯಲ್ಲಿ, ಈಗಾಗಲೇ ಅಕೌಂಟ್‌ಗಳನ್ನು ಆಡಿಟ್ ಮಾಡಿರುವ ಆಡಿಟರ್‌ಗಳಿಂದ ಭರ್ತಿ ಮಾಡಬೇಕು.

  • ಫಾರ್ಮ್ ನಂ. 3CD - ರಿಪೋರ್ಟ್‌ಗಳೊಂದಿಗೆ ಮೌಲ್ಯಮಾಪಕರಿಂದ ಭರ್ತಿ ಮಾಡಬೇಕು ಮತ್ತು ಆಡಿಟರ್‌ಗಳಿಂದ ಸರ್ಟಿಫಿಕೇಟ್ ಪಡೆಯಬೇಕು.

2. ಪ್ರೊಫೆಷನ್ ಅನ್ನು ನಿರ್ವಹಿಸುತ್ತಿರುವ ವ್ಯಕ್ತಿ -

  • ಫಾರ್ಮ್ ನಂ. 3CB - ಇನ್ಕಮ್ ಟ್ಯಾಕ್ಸ್ ಕಾನೂನನ್ನು ಹೊರತುಪಡಿಸಿ ಯಾವುದೇ ಕಾನೂನಿನ ಅಡಿಯಲ್ಲಿ, ಯಾವುದೇ ಆಡಿಟ್‌ನ ಅಗತ್ಯವಿಲ್ಲದ ಆಡಿಟರ್‌ಗಳಿಂದ ಭರ್ತಿ ಮಾಡಿಸಬೇಕು.
  • ಫಾರ್ಮ್ ನಂ. 3CD - ಮೌಲ್ಯಮಾಪನದಿಂದ ಸಂಗ್ರಹಿಸಿದ ರಿಪೋರ್ಟ್‌ಗಳೊಂದಿಗೆ ಮೌಲ್ಯಮಾಪಕರಿಂದ ಭರ್ತಿ ಮಾಡಬೇಕು ಮತ್ತು ಆಡಿಟರ್‌ಗಳಿಂದ ಸರ್ಟಿಫಿಕೇಟ್ ಪಡೆಯಬೇಕು.

ಸೆಕ್ಷನ್ 44AB ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ಆಡಿಟ್ ರಿಪೋರ್ಟ್ ಫೈಲ್ ಮಾಡುವ ಡ್ಯೂ ಡೇಟ್

ಟ್ಯಾಕ್ಸ್ ಪೇಯರ್ ಟ್ಯಾಕ್ಸ್ ಆಡಿಟ್ ರಿಪೋರ್ಟ್ ಅನ್ನು ಪಡೆದ ನಂತರ, ಯಾವುದೇ ಪೆನಲ್ಟಿಯನ್ನು ತಪ್ಪಿಸಲು ಅವರು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಮೌಲ್ಯಮಾಪನ ವರ್ಷದ ಸೆಪ್ಟೆಂಬರ್ 30 ರಂದು ಅಥವಾ ಅದಕ್ಕೂ ಮೊದಲೇ ಫೈಲ್ ಮಾಡಬೇಕು.

ಸೆಕ್ಷನ್ 44AB ಅಡಿಯಲ್ಲಿ ಅನ್ವಯವಾಗುವ ಪೆನಲ್ಟಿಗಳು ಯಾವುವು?

ಪ್ರೊಫೆಷನ್‌ನಲ್ಲಿರುವ ವ್ಯಕ್ತಿ ಅಥವಾ ಬಿಸಿನೆಸ್ ನಡೆಸುತ್ತಿರುವ ವ್ಯಕ್ತಿಯು ಸೆಕ್ಷನ್ 44AB ಗೆ ಅನುಗುಣವಾಗಿ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಲು ವಿಫಲರಾಗಿದ್ದಾರೆ ಎಂದು ಭಾವಿಸೋಣ. ಆ ಸಂದರ್ಭದಲ್ಲಿ, ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ ನಿಗದಿಪಡಿಸಿದ ಈ ಕೆಳಗಿನ ಪೆನಲ್ಟಿಗಳನ್ನು ಪಾವತಿಸಲು ಅವನು ಜವಾಬ್ದಾರನಾಗಿರುತ್ತಾನೆ -

  • ಹಣಕಾಸು ವರ್ಷದಲ್ಲಿನ ಒಟ್ಟು ಸೇಲ್ಸ್, ಟರ್ನ್ಓವರ್ ಮತ್ತು ಒಟ್ಟು ರಿಸಿಪ್ಟ್‌ಗಳ 0.5% ಅಥವಾ ₹ 1,50,000. ಇವುಗಳಲ್ಲಿ ಯಾವುದು ಕಡಿಮೆಯೋ ಅದು.

ರಾಷ್ಟ್ರೀಯ ವಿಪತ್ತುಗಳು, ಟ್ಯಾಕ್ಸ್ ಆಡಿಟರ್‌ಗಳ ಸಾವು ಅಥವಾ ರಾಜೀನಾಮೆ ಮತ್ತು ಟ್ಯಾಕ್ಸ್ ಪೇಯರ್‌ಗಳ ನಿಯಂತ್ರಣವನ್ನು ಮೀರಿದ ಸಂದರ್ಭಗಳಲ್ಲಿ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌, ಈ ಪೆನಲ್ಟಿಯನ್ನು ಹಿಂಪಡೆಯಬಹುದು.

ಈಗ ನೀವು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 44AB ನ ಆಂತರಿಕ ಅಂಶಗಳ ಬಗ್ಗೆ ತಿಳಿದಿರುವಿರಿ. ಆದ್ದರಿಂದ ಭಾರೀ ಪೆನಲ್ಟಿಗಳನ್ನು ತಪ್ಪಿಸಲು ಡ್ಯೂ ಡೇಟ್‌ಗೂ ಮೊದಲೇ ಅಗತ್ಯವಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ. ಇದು ನಿಮಗೆ ಐಟಿ ಡಿಪಾರ್ಟ್‌ಮೆಂಟ್‌ನೊಂದಿಗೆ ಉತ್ತಮ ರೆಕಾರ್ಡ್ ನಿರ್ವಹಿಸಲು ಸಹ ಸಹಾಯ ಮಾಡುತ್ತದೆ.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸೆಕ್ಷನ್ 44AB ಗೆ 3ನೇ ಪ್ರಾವಿಷನ್ ಏನು?

ಯಾವುದೇ ಇತರ ಕಾನೂನಿನ ಅಡಿಯಲ್ಲಿ ಆಡಿಟಿಂಗ್ ಎನ್ನುವುದು ಸೆಕ್ಷನ್ 44AB ಗೆ 3 ನೇ ಪ್ರಾವಿಷನ್ ಆಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ ನಿಗದಿಪಡಿಸಿದ ಷರತ್ತುಗಳ ಅಡಿಯಲ್ಲಿ ಆಡಿಟ್ ಮಾಡಬೇಕಾಗುತ್ತದೆ.

ಸೆಕ್ಷನ್ 44AB ಅಡಿಯಲ್ಲಿ ಫಾರ್ಮ್ ನಂ. 3CD ಎಂದರೇನು?

ಮೌಲ್ಯಮಾಪಕರು ಫಾರ್ಮ್ 3CD ಅನ್ನು ಒದಗಿಸುತ್ತಾರೆ ಮತ್ತು ಚಾರ್ಟರ್ಡ್ ಅಕೌಂಟೆಂಟ್‌ನಿಂದ ಸರ್ಟಿಫೈಡ್ ಆಗುತ್ತದೆ.. ಸೆಕ್ಷನ್ 44AB ಯ ನಿರ್ದಿಷ್ಟಪಡಿಸಿದ ನಿಯಮಗಳ ಅಡಿಯಲ್ಲಿ ಇದು ಅಕೌಂಟ್ ಬುಕ್‌ಗಳು, ಟ್ಯಾಕ್ಸ್‌ಗಳು, ಡಿಡಕ್ಷನ್‌ಗಳು ಮತ್ತು ಇತರವುಗಳು ಯಾವುದಾದರೂ ಇದ್ದರೆ, ವ್ಯಕ್ತಿಗಳ ಎಲ್ಲಾ ಆಡಿಟರ್ ರಿಪೋರ್ಟ್‌ಗಳನ್ನು ಒಳಗೊಂಡಿರುತ್ತದೆ.