ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 194A

ಫಿಕ್ಸ್‌ಡ್‌ ಡೆಪಾಸಿಟ್‌ಗಳ ಮೇಲಿನ ಇಂಟರೆಸ್ಟ್‌ ಅನ್ನು ವಾರ್ಷಿಕವಾಗಿ ಕ್ರೆಡಿಟ್ ಮಾಡುವಾಗ ಲೋನ್ ನೀಡುವ ಸಂಸ್ಥೆಗಳು ನಿರ್ದಿಷ್ಟ ಅಮೌಂಟ್ ಅನ್ನು ಟ್ಯಾಕ್ಸ್ ಆಗಿ ಡಿಡಕ್ಟ್ ಮಾಡುತ್ತವೆ ಎಂದು ನಿಮಗೆ ತಿಳಿದಿದೆಯೇ? ಈ ಡಿಡಕ್ಷನ್ ಅನ್ನು ಟಿಡಿಎಸ್ ಎಂದು ಕರೆಯಲಾಗುತ್ತದೆ, ಇದು ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 194A ಅಡಿಯಲ್ಲಿ ಬರುತ್ತದೆ.

ಈ ಟ್ಯಾಕ್ಸ್ ಸುರಕ್ಷಿತ ಮತ್ತು ಅಸುರಕ್ಷಿತ ಕ್ರೆಡಿಟ್ ಫಾರ್ಮ್‌ಗಳಲ್ಲಿ ಮರುಪಾವತಿಸಲಾದ ಇಂಟರೆಸ್ಟ್ ಮೇಲೂ ಅಪ್ಲಿಕೇಬಲ್ ಆಗುತ್ತದೆ.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 194A ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ವೇರಿಯೇಬಲ್‌ಗಳನ್ನು ಅರ್ಥಮಾಡಿಕೊಳ್ಳಲು ಓದಿ.

ಇನ್‌ಕಮ್‌ ಟ್ಯಾಕ್ಸ್‌ನಲ್ಲಿ ಸೆಕ್ಷನ್ 194A ಎಂದರೇನು?

ಸೆಕ್ಷನ್ 194A ಕೆಲವು ಇಂಟರೆಸ್ಟ್ ಪೇಮೆಂಟ್‌ಗಳಿಂದ ಟಿಡಿಎಸ್ ಡಿಡಕ್ಟ್ ಮಾಡಬೇಕು ಎಂದು ಹೇಳುತ್ತದೆ. ಈ ಇಂಟರೆಸ್ಟ್ ಫಿಕ್ಸ್‌ಡ್‌ ಡೆಪಾಸಿಟ್‌ಗಳು, ಮುಂಗಡಗಳು ಮತ್ತು ಲೋನ್‌ಗಳ ಮೇಲೆ ಬ್ಯಾಂಕುಗಳು ಪಾವತಿಸುವ ಇಂಟರೆಸ್ಟ್‌ ಅನ್ನು ಒಳಗೊಂಡಿರುತ್ತದೆ. ಇದು ಅಸುರಕ್ಷಿತ ಲೋನ್ ಫಾರ್ಮ್‌ಗಳಿಗೆ ಪಾವತಿಸಿದ ಇಂಟರೆಸ್ಟ್ ಅನ್ನು ಸಹ ಒಳಗೊಂಡಿದೆ.

ಆದಾಗ್ಯೂ, ಸೆಕ್ಯುರಿಟೀಸ್ ಗಳಲ್ಲಿನ ಇಂಟರೆಸ್ಟ್ ಈ ಸೆಕ್ಷನ್‌ನ ಅಡಿಯಲ್ಲಿ ಬರುವುದಿಲ್ಲ. ಇದಲ್ಲದೆ, ನಿವಾಸಿಗೆ ಪೇಮೆಂಟ್ ಮಾಡಿದಾಗ ಮಾತ್ರ ಸೆಕ್ಷನ್ 194A ಅಡಿಯಲ್ಲಿ ಟಿಡಿಎಸ್ ಅನ್ನು ಡಿಡಕ್ಟ್ ಮಾಡಲಾಗುತ್ತದೆ. 

[ಮೂಲ]

ವಿವರವಾದ ತಿಳುವಳಿಕೆಗಾಗಿ ಆ್ಯಕ್ಟ್‌ಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಚೆಕ್‌ ಮಾಡುವುದು ಅತ್ಯಗತ್ಯ. ಈ ಟ್ಯಾಕ್ಸ್ ಅನ್ನು ಪಾವತಿಸಲು ಸರ್ಕಾರವು ಕೆಲವು ಜನರನ್ನು ಕಡ್ಡಾಯ ಮಾಡುತ್ತದೆ.

ಟಿಡಿಎಸ್ ಪಾವತಿಸಲು ಈ ಸ್ಪೆಸಿಫಿಕೇಷನ್‌ಗಳನ್ನು ಕೆಳಗಿನ ಸೆಕ್ಷನ್‌ನಲ್ಲಿ ನೀವು ಕಾಣಬಹುದು.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 194A ಅಡಿಯಲ್ಲಿ ಟಿಡಿಎಸ್ ಪಾವತಿಸಲು ಯಾರು ಲಯಬಲ್ ಆಗಿರುತ್ತಾರೆ?

ಕೆಳಗಿನ ವ್ಯಕ್ತಿಗಳು ಟಿಡಿಎಸ್ ಅನ್ನು ಪಾವತಿಸಬೇಕಾಗುತ್ತದೆ -

  • ಕಂಪನಿ, ಪಾಲುದಾರಿಕೆ ಸಂಸ್ಥೆ, ಬಿಓಐ, ಎಏಪಿ, ಇತ್ಯಾದಿ ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳನ್ನು ಹೊರತುಪಡಿಸಿ ಇನ್‌ಕಮ್‌ ಟ್ಯಾಕ್ಸ್‌ ಮೌಲ್ಯಮಾಪನ ಮಾಡುತ್ತದೆ.
  • ಹಿಂದಿನ ವರ್ಷದಲ್ಲಿ ಸೆಕ್ಷನ್ 44AB ಅಡಿಯಲ್ಲಿ ಮೌಲ್ಯಮಾಪನಕ್ಕೆ ಲಯಬಲ್ ಆಗಿರುವ ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳು.
  • ಅಂತಹ ಇಂಟರೆಸ್ಟ್ ಅನ್ನು ಪಾವತಿಸಲಾಗುವ ಅಥವಾ ಕ್ರೆಡಿಟ್ ಮಾಡಲಾಗುವ ಆರ್ಥಿಕ ವರ್ಷದಲ್ಲಿ ಬಿಸಿನೆಸ್ ಸಂದರ್ಭದಲ್ಲಿ ವಾರ್ಷಿಕ ಟರ್ನ್‌ಓವರ್ ₹1 ಕೋಟಿ ಮತ್ತು ವೃತ್ತಿಪರರಿಗೆ ₹50 ಲಕ್ಷ ಮೀರಿರುವ ಒಬ್ಬ ವ್ಯಕ್ತಿ ಅಥವಾ ಎಚ್‌ಯುಎಫ್. 

[ಮೂಲ]

ನಮೂದಿಸಿದ ವ್ಯಕ್ತಿಗಳು ಸೆಕ್ಷನ್ 194A ಅಡಿಯಲ್ಲಿ ಟಿಡಿಎಸ್ ಪಾವತಿಸಲು ಬಾಧ್ಯತೆ ಹೊಂದಿರುತ್ತಾರೆ. ಆದಾಗ್ಯೂ, ಟಿಡಿಎಸ್ ಡಿಡಕ್ಟ್ ಮಾಡಿದಾಗ ವ್ಯಾಖ್ಯಾನಿಸುವ ಕೆಲವು ಪ್ಯಾರಾಮೀಟರ್‌ಗಳನ್ನು ಹೊಂದಿಸಲಾಗಿದೆ.

ಸೆಕ್ಷನ್ 194A ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಯಾವಾಗ ಅಪ್ಲಿಕೇಬಲ್ ಆಗುತ್ತದೆ?

ಒಂದು ಆರ್ಥಿಕ ವರ್ಷದಲ್ಲಿ ಕ್ರೆಡಿಟ್ ಆಗುವ ಸಾಧ್ಯತೆಯಿರುವ ಅಂತಹ ಇಂಟರೆಸ್ಟ್ ಅಮೌಂಟ್ ನಿರ್ದಿಷ್ಟಪಡಿಸಿದ ಲಿಮಿಟ್ ಅನ್ನು ಮೀರಿದರೆ ಟ್ಯಾಕ್ಸ್ ಡಿಡಕ್ಟರ್ ಅಥವಾ ಪೇಯರ್ ಟಿಡಿಎಸ್ ಅನ್ನು ಡಿಡಕ್ಟ್ ಮಾಡುತ್ತಾರೆ.

ಅಮೌಂಟ್ ₹40,000 ಮೀರಿದರೆ ಆಗ ಪೇಯರ್

  • ಲೋನ್ ನೀಡುವ ಬಿಸಿನೆಸ್‌ನಲ್ಲಿ ಭಾಗವಹಿಸುವ ಸಹಕಾರ ಸಂಘ
  • ಲೋನ್ ನೀಡುವ ಇನ್‌ಸ್ಟಿಟ್ಯೂಷನ್‌ಗಳು
  • ಅಂಚೆ ಕಚೇರಿ (ಕೇಂದ್ರ ಸರ್ಕಾರವು ಡೆಪಾಸಿಟ್ ಪಾವತಿಸಲು ಸೂಚಿಸಿದಾಗ).

ಆರ್ಥಿಕ ವರ್ಷ 2018-19ರಿಂದ ಸೀನಿಯರ್‌ ಸಿಟಿಜನ್‌ಗಳಿಗೆ 194A ಅಡಿಯಲ್ಲಿ ₹50,000ವರೆಗೆ ಗಳಿಸಿದ ಇನ್‌ಕಮ್‌ನಿಂದ ಯಾವುದೇ ಟಿಡಿಎಸ್ ಅನ್ನು ಡಿಡಕ್ಟ್ ಮಾಡಲಾಗುವುದಿಲ್ಲ ಎಂಬುದನ್ನು ಗಮನಿಸಿ.

ಹೆಚ್ಚುವರಿಯಾಗಿ, ಸೆಕ್ಷನ್ 194A ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಈ ಕೆಳಗಿನ ಇಂಟರೆಸ್ಟ್ ಇನ್‌ಕಮ್‌ ಮೂಲಗಳನ್ನು ನಿರ್ದಿಷ್ಟವಾಗಿ ಸೂಚಿಸುತ್ತದೆ -

  • ಬ್ಯಾಂಕ್ ಡೆಪಾಸಿಟ್
  • ರಿಕರಿಂಗ್ ಡೆಪಾಸಿಟ್ ಮೇಲಿನ ಸ್ಕೀಮ್‌ಗಳು
  • ಅಂಚೆ ಕಚೇರಿ ಡೆಪಾಸಿಟ್‌ಗಳು
  • ಫಿಕ್ಸ್‌ಡ್‌ ಡೆಪಾಸಿಟ್ ಸ್ಕೀಮ್‌ಗಳು 

[ಮೂಲ]

ನಿಲ್/ಕಡಿಮೆ ಟಿಡಿಎಸ್ ಡಿಡಕ್ಷನ್ ಯಾವಾಗ ನಡೆಯುತ್ತದೆ?

ಟಿಡಿಎಸ್‌ಗೆ ಕಡಿಮೆ ದರ ಅಥವಾ ಶೂನ್ಯ ಅಪ್ಲಿಕೇಬಲ್ ಆಗುವುದು ಈ ಕೆಳಗಿನ ಸನ್ನಿವೇಶಗಳಲ್ಲಿ.

ಸೆಕ್ಷನ್ 197A ಅಡಿಯಲ್ಲಿ ಫಾರ್ಮ್ 15G/15H ಮೂಲಕ ಡಿಕ್ಲರೇಷನ್

ಕೆಲವು ಡಿಕ್ಲರೇಷನ್‌ಗಳನ್ನು ಸಬ್‌ಮಿಟ್‌ ಮಾಡಿದರೆ ಸ್ವೀಕರಿಸುವವರು ಅವನ/ಅವಳ ಪ್ಯಾನ್‌ನೊಂದಿಗೆ ಸಂಬಂಧಿಸಿದ ಪೇಯರ್‌ಗೆ ಸೆಕ್ಷನ್ 197A ಪ್ರಕಾರ ಡಿಕ್ಲರೇಷನ್ ಅನ್ನು ಸಬ್‌ಮಿಟ್‌ ಮಾಡಿದಾಗ ಯಾವುದೇ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡಲಾಗುವುದಿಲ್ಲ.

ಇದಕ್ಕಾಗಿ, ಅವರು ಕೆಲವು ಷರತ್ತುಗಳನ್ನು ಪೂರೈಸಬೇಕು -

  • ಸ್ವೀಕರಿಸುವವರು ಒಬ್ಬ ವ್ಯಕ್ತಿ ಆಗಿರಬೇಕು, ಕಂಪನಿ ಅಥವಾ ಸಂಸ್ಥೆಯಲ್ಲ. ಹಿಂದಿನ ವರ್ಷದ ಒಟ್ಟು ಇನ್‌ಕಮ್‌ ಮೇಲಿನ ಅವರ ಟ್ಯಾಕ್ಸ್ ನಿಲ್ ಆಗಿರಬೇಕು
  • ಒಟ್ಟು ಇನ್‌ಕಮ್‌ ಸಂಬಂಧಿತ ಆರ್ಥಿಕ ವರ್ಷದ ವಿನಾಯಿತಿ ಲಿಮಿಟ್ ಅನ್ನು ಮೀರಿರಬಾರದು. ವ್ಯಕ್ತಿಗೆ ಅಪ್ಲಿಕೇಬಲ್ ಆಗುವ ಮೂಲ ವಿನಾಯಿತಿ ಲಿಮಿಟ್ ಅನ್ನು ಅವಲಂಬಿಸಿ ಈ ಅಮೌಂಟ್ ರೂ.2,50,000, ರೂ. 3,00,000 ಅಥವಾ ರೂ 5,00,000 ಮೀರಬಾರದು.
  • ಒಟ್ಟು ಟ್ಯಾಕ್ಸೇಬಲ್ ಇನ್‌ಕಮ್‌ ₹5 ಲಕ್ಷ ವಿನಾಯಿತಿ ಲಿಮಿಟ್‌ಗಿಂತ ಕಡಿಮೆ ಇರುವ ಸೀನಿಯರ್‌ ಸಿಟಿಜನ್‌ ಟ್ಯಾಕ್ಸ್‌ಪೇಯರ್‌ಗಳು ತಮ್ಮ ಎಫ್‌ಡಿ ಇಂಟರೆಸ್ಟ್ ಮೇಲಿನ ಈ ಡಿಡಕ್ಷನ್ ಅನ್ನು ತಡೆಯಲು ತಮ್ಮ ಬ್ಯಾಂಕ್‌ಗಳಿಗೆ ಫಾರ್ಮ್ 15H ಸಬ್‌ಮಿಟ್‌ ಮಾಡಬಹುದು. 

[ಮೂಲ]

ಸೆಕ್ಷನ್ 197ರ ಅಡಿಯಲ್ಲಿ ಫಾರ್ಮ್ 13ರ ಮೂಲಕ ಡಿಕ್ಲರೇಷನ್

ಸ್ವೀಕರಿಸುವವರು ಕಡಿಮೆ ಟ್ಯಾಕ್ಸ್ ಡಿಡಕ್ಷನ್ ಸರ್ಟಿಫಿಕೇಟ್ ಅನ್ನು ಪಡೆಯಲು ಮೌಲ್ಯಮಾಪನ ಅಧಿಕಾರಿಗೆ ನಮೂನೆ ನಂ.13ರಲ್ಲಿ ಅಪ್ಲೈ ಮಾಡಬಹುದು.

ಟ್ಯಾಕ್ಸ್‌ಪೇಯರ್‌ಗಳು ಪರಿಗಣಿಸಬೇಕಾದ ಕೆಲವು ಅಂಶಗಳು ಇಲ್ಲಿವೆ -

  • ಅಪ್ಲಿಕೇಷನ್‌ಗೆ ಯಾವುದೇ ಸಮಯದ ಲಿಮಿಟ್ ಇಲ್ಲ. ನಿಜವಾದ ಟ್ಯಾಕ್ಸ್ ಡಿಡಕ್ಷನ್ ಮೊದಲು ವ್ಯಕ್ತಿಗಳು ಯಾವುದೇ ಸಮಯದಲ್ಲಿ ಅದನ್ನು ಫೈಲ್ ಮಾಡಬಹುದು.
  • ಪ್ಯಾನ್ ಇಲ್ಲದ ವ್ಯಕ್ತಿಗಳು ಸರ್ಟಿಫಿಕೇಟ್‌ಗೆ ಅಪ್ಲೈ ಮಾಡುವಂತಿಲ್ಲ.
  • ಸ್ವೀಕರಿಸುವವರು ಅಂತಹ ಸರ್ಟಿಫಿಕೇಟ್‌ನ ನಕಲನ್ನು ಟಿಡಿಎಸ್ ಕಡಿಮೆ ದರವನ್ನು ಡಿಡಕ್ಟ್ ಮಾಡಲು ಅಥವಾ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡಲು ಜವಾಬ್ದಾರರಾಗಿರುವ ವ್ಯಕ್ತಿಗೆ ಒದಗಿಸಬೇಕಾಗುತ್ತದೆ. 

[ಮೂಲ]

ಸೆಕ್ಷನ್ 194A ಟಿಡಿಎಸ್ ದರ ಎಂದರೇನು?

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ 194A ಪ್ರಕಾರ, 10% ಟಿಡಿಎಸ್ ಅನ್ನು ಡಿಡಕ್ಟ್ ಮಾಡಲಾಗುತ್ತದೆ.

ಸ್ವೀಕರಿಸುವವರು ಅವನ/ಅವಳ ಪ್ಯಾನ್ ಅನ್ನು ಡಿಡಕ್ಟರ್‌ಗೆ ಒದಗಿಸದಿದ್ದರೆ, ನಂತರ 20% ಟಿಡಿಎಸ್ ಅಪ್ಲಿಕೇಬಲ್ ಆಗುತ್ತದೆ.

ದರ ವಿತರಣೆಯನ್ನು ವಿವರಿಸಲು ಒಂದು ಕೋಷ್ಟಕ ಇಲ್ಲಿದೆ.    

ಪೇಮೆಂಟ್ ಮಾಡಲಾಗಿರುವುದು ಟಿಡಿಎಸ್ ದರ
ಪ್ಯಾನ್ ಒದಗಿಸಿದ ಅಸೆಸ್ಸೀಗಳು 10%
ಪ್ಯಾನ್ ಒದಗಿಸದ ಅಸೆಸ್ಸೀಗಳು 20%

ಈ ಅಂಶಗಳ ಆಧಾರದ ಮೇಲೆ, ವ್ಯಕ್ತಿಗಳು 194A ಟಿಡಿಎಸ್ ಡಿಡಕ್ಷನ್ ಲಿಮಿಟ್ ಮತ್ತು ಸ್ಪೆಸಿಫಿಕೇಷನ್ ಅನ್ನು ಅರ್ಥಮಾಡಿಕೊಳ್ಳಬಹುದು. 

ಬ್ಯಾಂಕ್‌ಗಳು, ಅಂಚೆ ಕಚೇರಿ ಮತ್ತು ಸಹಕಾರ ಸಂಘಗಳಿಗೆ ಡಿಡಕ್ಷನ್ ಲಿಮಿಟ್ ₹ 50,000 ಆಗಿದೆ ಎಂಬುದನ್ನು ಗಮನಿಸಿ. ಇತರ ಹಣಕಾಸು ಇನ್‌ಸ್ಟಿಟ್ಯೂಷನ್‌ಗಳಿಗೆ ಇದು ₹ 5,000 ಆಗಿದೆ.

ಉದಾಹರಣೆಗೆ, ಬ್ಯಾಂಕ್ ಗ್ರಾಹಕರಿಗೆ ಫಿಕ್ಸ್‌ಡ್‌ ಡೆಪಾಸಿಟ್‌ ಮೇಲೆ 70,000 ಇಂಟರೆಸ್ಟ್ ಅನ್ನು ಪಾವತಿಸುತ್ತದೆ. ಈ ಅಮೌಂಟ್ ₹50,000ದ ಲಿಮಿಟ್‌ಗಿಂತ ಹೆಚ್ಚಿರುವುದರಿಂದ, ಪಾವತಿಸಬೇಕಾದ ಇಂಟರೆಸ್ಟ್ ಮೇಲೆ 10% ರಷ್ಟು ಟಿಡಿಎಸ್ ಅನ್ನು ಡಿಡಕ್ಟ್ ಮಾಡಲು ಬ್ಯಾಂಕ್ ಲಯಬಲ್ ಆಗಿರುತ್ತದೆ, ಅದೆಷ್ಟೆಂದರೆ 70,000. ಅಮೌಂಟ್ ಅನ್ನು ಗ್ರಾಹಕರ ಖಾತೆಗೆ ಮಾತ್ರ ಕ್ರೆಡಿಟ್ ಮಾಡಿದರೂ ಸಹ ಟಿಡಿಎಸ್ ಅಪ್ಲಿಕೇಬಲ್ ಆಗುತ್ತದೆ. 

[ಮೂಲ]

ಸೆಕ್ಷನ್ 194A ಡೆಪಾಸಿಟ್‌ಗೆ ಗಡು ಏನು?

ಈ ಸೆಕ್ಷನ್ ಅಡಿಯಲ್ಲಿ ಪೇಮೆಂಟ್ ಟೈಮ್‌ಲೈನ್ ಈ ಕೆಳಗಿನಂತಿರುತ್ತದೆ -

  • ವ್ಯಕ್ತಿಗಳು ಏಪ್ರಿಲ್‌ನಿಂದ ಫೆಬ್ರವರಿ ನಡುವೆ ಮುಂದಿನ ತಿಂಗಳ 7ನೇ ತಾರೀಕಿನ ಮೊದಲು ಟಿಡಿಎಸ್ ಅನ್ನು ಡೆಪಾಸಿಟ್ ಮಾಡಬೇಕು.
  • ಟ್ಯಾಕ್ಸ್ ಡಿಡಕ್ಷನ್ ಮಾರ್ಚ್‌ನಲ್ಲಿ ನಡೆದರೆ ವ್ಯಕ್ತಿಗಳು ಏಪ್ರಿಲ್ 30 ಅಥವಾ ಅದಕ್ಕೂ ಮೊದಲು ಅಮೌಂಟ್ ಅನ್ನು ಡೆಪಾಸಿಟ್ ಮಾಡಬೇಕಾಗುತ್ತದೆ. 

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 194A ಬಗ್ಗೆ ಟ್ಯಾಕ್ಸ್‌ಪೇಯರ್‌ಗಳು ತಿಳಿದಿರಬೇಕಾದ ಕೆಲವು ಮೂಲಭೂತ ಮಾಹಿತಿಗಳು ಇವು. ಟ್ಯಾಕ್ಸ್‌ ಪ್ರಯೋಜನಗಳನ್ನು ಕ್ಲೈಮ್ ಮಾಡುವ ಪ್ರೊಸೆಸ್ ಅನ್ನು ಸುಗಮಗೊಳಿಸಲು ಇದು ಅವರಿಗೆ ಸಹಾಯ ಮಾಡುತ್ತದೆ. ಮೇಲಾಗಿ, ಸಮಯಕ್ಕೆ ಸರಿಯಾಗಿ ಟಿಡಿಎಸ್ ಮತ್ತು ಆಯಾ ಟ್ಯಾಕ್ಸ್ ಅನ್ನು ಪಾವತಿಸುವುದು ಅನಗತ್ಯ ಪೆನಲ್ಟಿಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸೆಕ್ಷನ್ 194A ಅಡಿಯಲ್ಲಿ ನಾನು ಟಿಡಿಎಸ್ ಅನ್ನು ಹೇಗೆ ಡೆಪಾಸಿಟ್ ಮಾಡಬಹುದು?

ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ ಮತ್ತು ಟ್ಯಾಕ್ಸ್ ಪೇಮೆಂಟ್ ಚಲನ್‌ನಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.. ನಂತರ, ಪೇಮೆಂಟ್ ವಿಧ, ಟ್ಯಾಕ್ಸ್ ಕೋಡ್, ಇತ್ಯಾದಿಗಳನ್ನು ಆಯ್ಕೆಮಾಡಿ ಮತ್ತು ಟ್ಯಾಕ್ಸ್‌ಪೇಯರ್‌ ಪಾವತಿಸಬೇಕಾದ ಟಿಡಿಎಸ್/ಟಿಸಿಎಸ್ ಅನ್ನು ಕ್ಲಿಕ್ ಮಾಡಿ ಮತ್ತು ಮರುನಿರ್ದೇಶಿಸಿದಂತೆ ಮುಂದುವರಿಯಿರಿ. 

[ಮೂಲ]

ಸೆಕ್ಷನ್ 194A ಅಡಿಯಲ್ಲಿ ಟಿಡಿಎಸ್ ಪಾವತಿಸಿದ ನಂತರ ನಾನು ಪುರಾವೆ ಅಥವಾ ಡಾಕ್ಯುಮೆಂಟ್ ಅನ್ನು ಪಡೆಯುತ್ತೇನೆಯೇ?

ಹೌದು, ಟಿಡಿಎಸ್ ಡಿಡಕ್ಷನ್ ಮೇಲೆ, ಡಿಡಕ್ಟರ್ ಫಾರ್ಮ್ 16Aನಲ್ಲಿ ಟಿಡಿಎಸ್ ಸರ್ಟಿಫಿಕೇಟ್ ಅನ್ನು ನೀಡುತ್ತಾರೆ. ಸಂಬಂಧಿತ ಟ್ಯಾಕ್ಸ್ ಪೇಮೆಂಟ್ ಮೂಲದ ಪರವಾಗಿ ಡಿಡಕ್ಟೀ ಈ ಸರ್ಟಿಫಿಕೇಟ್ ಅನ್ನು ಸ್ವೀಕರಿಸುತ್ತಾರೆ. 

[ಮೂಲ]