ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148 ಕುರಿತು ಕಾಂಪ್ರೆಹೆನ್ಸಿವ್ ಗೈಡ್
ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148 ತಿಳಿಸುವಂತೆ ಒಬ್ಬ ವ್ಯಕ್ತಿಯ ಟ್ಯಾಕ್ಸೇಬಲ್ ಇನ್‌ಕಮ್ ಐಟಿ ಇಲಾಖೆಯ ಮೌಲ್ಯಮಾಪನದಿಂದ ತಪ್ಪಿಸಿಕೊಂಡಿದ್ದರೆ, ಅವರು ಟ್ಯಾಕ್ಸ್ ಕಂಪ್ಲಯಂಟ್ ಆಗಿದ್ದಾರೆ ಎಂದು ಸಾಬೀತುಪಡಿಸಲು ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸುವಂತೆ ಅಸೆಸಿಂಗ್ ಅಧಿಕಾರಿ ನೋಟಿಸ್ ನೀಡುತ್ತಾರೆ. ಈ ಲೇಖನವು ಐಟಿಎಯ ಈ ಸೆಕ್ಷನ್‌ನ ಪ್ರಮುಖ ಅಂಶಗಳನ್ನು ಸಾರಾಂಶದ ಮೂಲಕ ತಿಳಿಸುತ್ತದೆ. ಆದ್ದರಿಂದ ನೀವು ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿದ್ದರೆ, ಸ್ಕ್ರೋಲ್ ಮಾಡಿ!
ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148 ಎಂದರೇನು?
ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148ರ ಪ್ರಕಾರ, ಟ್ಯಾಕ್ಸ್‌ಪೇಯರ್‌ಗಳು ಅವರ ಇನ್‌ಕಮ್ ಲೆಕ್ಕಾಚಾರದಿಂದ ತಪ್ಪಿಸಿಕೊಂಡಿದ್ದರೆ ಅಸೆಸಿಂಗ್ ಅಧಿಕಾರಿ ಅವರಿಗೆ ನೋಟಿಸ್ ನೀಡಬಹುದು. ಅವರು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಒದಗಿಸುವ ಅಗತ್ಯವಿದೆ:
- ಅಸೆಸ್ಸೀಯ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್
- ಅಸೆಸ್ಸೀಯ ಹೊರತಾಗಿನ ವ್ಯಕ್ತಿಯ ಇನ್‌ಕಮ್ ಟ್ಯಾಕ್ಸ್ ರಿಟರ್ನ್
ನೆನಪಿಡಿ, ಅಸೆಸ್ಸೀ 30 ದಿನಗಳ ಒಳಗೆ ಅಥವಾ ನೋಟಿಸ್‌ನಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದೊಳಗೆ ಇನ್‌ಕಮ್ ಟ್ಯಾಕ್ಸ್ ರಿಟರ್ನ್‌ಗಳನ್ನು ಒದಗಿಸಬೇಕು.
ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್ ನೀಡಲು ಯಾರು ಅರ್ಹರು?
ಸೆಕ್ಷನ್ 151ರ ಪ್ರಕಾರ, ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್ ನೀಡಲು ಬೇಕಾದ ಅರ್ಹತಾ ಮಾನದಂಡಗಳನ್ನು ಕೆಳಗಿನ ಅಂಶಗಳು ಸಂಕ್ಷಿಪ್ತವಾಗಿ ತಿಳಿಸುತ್ತವೆ:
- ಸಿಐಟಿ ಅಥವಾ ಪಿಸಿಐಟಿ ಅಥವಾ ಡಿಐಟಿ ಅಥವಾ ಪಿಡಿಐಟಿಯ ಪೂರ್ವ ಅಪ್ರೂವಲ್‌ನೊಂದಿಗೆ ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ 3 ವರ್ಷದೊಳಗೆ ಅಸೆಸಿಂಗ್ ಅಧಿಕಾರಿ ನೋಟಿಸ್ ನೀಡಿದರೆ.
- ಪಿಸಿಸಿಐಟಿ ಅಥವಾ ಪಿಡಿಜಿಐಟಿ ಇಲ್ಲದೇ ಇದ್ದಲ್ಲಿ ಸಿಸಿಐಟಿ ಅಥವಾ ಡಿಜಿಐಟಿಯ ಪೂರ್ವ ಅಪ್ರೂವಲ್‌ನೊಂದಿಗೆ, ಪಿಸಿಸಿಐಟಿ ಅಥವಾ ಪಿಡಿಜಿಐಟಿಯ ಪೂರ್ವ ಅಪ್ರೂವಲ್‌ನೊಂದಿಗೆ ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ 3 ವರ್ಷಗಳ ನಂತರ ಅಸೆಸಿಂಗ್ ಅಧಿಕಾರಿ ನೋಟಿಸ್ ನೀಡಿದರೆ.
ಸೆಕ್ಷನ್ 148 ರ ಅಡಿಯಲ್ಲಿ ನೋಟಿಸ್ ನೀಡುವ ಮೊದಲು ಪರಿಗಣಿಸಬೇಕಾದ ಅಂಶಗಳು ಯಾವುವು?
ಪ್ರಶ್ನೆ ಎದುರಾಗಿರುವ ಟ್ಯಾಕ್ಸ್‌ಪೇಯರ್‌ಗೆ ನೋಟಿಸ್ ನೀಡುವ ಮೊದಲು ಅಸೆಸಿಂಗ್ ಅಧಿಕಾರಿಯು ಈ ಕೆಳಗಿನ ಅಂಶಗಳನ್ನು ಪರಿಗಣಿಸುತ್ತಾರೆ:
- ಟ್ಯಾಕ್ಸ್‌ಪೇಯರ್‌ಗಳ ಟ್ಯಾಕ್ಸೇಬಲ್ ಇನ್‌ಕಮ್ ನಿರ್ದಿಷ್ಟ ಮೌಲ್ಯಮಾಪನ ವರ್ಷದ ಮೌಲ್ಯಮಾಪನದಿಂದ ತಪ್ಪಿಸಿಕೊಂಡಿದೆ ಎಂದು ಸಾಬೀತುಪಡಿಸುವ ನಿಜವಾದ ಪುರಾವೆಗಳ ಆಧಾರದ ಮೇಲೆ ಅಸೆಸಿಂಗ್ ಅಧಿಕಾರಿ ನೋಟಿಸ್ ನೀಡುತ್ತಾರೆ.
- ನೋಟೀಸ್ ಕಳುಹಿಸುವ ಮೊದಲು ಅಸೆಸಿಂಗ್ ಅಧಿಕಾರಿ ಕಡ್ಡಾಯವಾಗಿ ಲಿಖಿತ ನೋಟಿಸ್ ಅನ್ನು ನೀಡಬೇಕು. ಈ ಲಿಖಿತ ನೋಟಿಸ್, ಮೌಲ್ಯಮಾಪನದಿಂದ ಇನ್‌ಕಮ್ ಟ್ಯಾಕ್ಸ್ ವಂಚನೆಗೆ ಸಂಬಂಧಿಸಿದಂತೆ ಟ್ಯಾಕ್ಸ್‌ಪೇಯರ್ ಅನ್ನು ಅನುಮಾನಿಸಲು ಕಾರಣವನ್ನು ಸೂಚಿಸಬೇಕು.
- ಟ್ಯಾಕ್ಸ್‌ಪೇಯರ್ ತನ್ನ ಮರು-ಮೌಲ್ಯಮಾಪನ ಅಥವಾ ಮೌಲ್ಯಮಾಪನವನ್ನು ಪೂರ್ಣಗೊಳಿಸಿದ ಕುರಿತ ಅಗತ್ಯ ಡಾಕ್ಯುಮೆಂಟ್‌ಗಳು ಮತ್ತು ಹೆಚ್ಚುವರಿ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ಭಾವಿಸೋಣ. ಅಂತಹ ಸಂದರ್ಭದಲ್ಲಿ, ಅಸೆಸಿಂಗ್ ಅಧಿಕಾರಿಯು ಅಭಿಪ್ರಾಯಗಳಲ್ಲಿನ ವ್ಯತ್ಯಾಸಗಳ ಆಧಾರದ ಮೇಲೆ ನೋಟಿಸ್ ನೀಡಲು ಸಾಧ್ಯವಿಲ್ಲ.
- ಅಸೆಸಿಂಗ್ ಅಧಿಕಾರಿಯು ಒಂದು ವೇಳೆ ಆತನಿಗೆ ಅಥವಾ ಆಕೆಗೆ ಒದಗಿಸಿದ ಮಾಹಿತಿಯನ್ನು ಹೊರತುಪಡಿಸಿ ಯಾವುದೇ ಹೊಸ ಮಾಹಿತಿಯನ್ನು ಆತ ಅಥವಾ ಆಕೆ ಕಂಡುಕೊಂಡರೆ ನೋಟಿಸ್ ನೀಡಬಹುದು.
- ಟ್ಯಾಕ್ಸ್‌ಪೇಯರ್, ಆತ ಅಥವಾ ಆಕೆಯ ಟ್ಯಾಕ್ಸೇಬಲ್ ಇನ್‌ಕಮ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲವಾಗಬಹುದು. ಅಂತಹ ಸಂದರ್ಭದಲ್ಲಿ, ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148 ಮತ್ತು ಸೆಕ್ಷನ್ 147 ಆ ವ್ಯಕ್ತಿಗೆ ನೋಟಿಸ್ ನೀಡಲು ಅಸೆಸಿಂಗ್ ಅಧಿಕಾರಿಗೆ ಅಧಿಕಾರ ನೀಡುತ್ತದೆ.
ಕಾಲಾವಧಿಯೊಳಗೆ ಯಾವ ಅಧಿಕಾರಿಗಳು ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್ ಅನ್ನು ನೀಡಬಹುದು
ಟ್ಯಾಕ್ಸ್ ವಂಚನೆಗಾಗಿ ಟ್ಯಾಕ್ಸ್‌ಪೇಯರ್‌ಗೆ ಅಧಿಕಾರಿಯೊಬ್ಬರು ನೋಟಿಸ್ ನೀಡಬಹುದಾದ ಕಾಲಾವಧಿಯನ್ನು ಈ ಕೆಳಗೆ ಗಮನಿಸಿ:
- ಸೆಕ್ಷನ್ 149ರ ಪ್ರಕಾರ, 148ರ ಅಡಿಯಲ್ಲಿ ನೋಟಿಸ್ ನೀಡಲಾಗುವುದು
- ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ 3 ವರ್ಷಗಳವರೆಗೆ ಅಥವಾ
- ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ 10 ವರ್ಷಗಳವರೆಗೆ, ಅಸೆಸಿಂಗ್ ಅಧಿಕಾರಿಯು ಟ್ಯಾಕ್ಸೇಬಲ್ ಇನ್‌ಕಮ್‌ನ ಉಪಸ್ಥಿತಿಯನ್ನು ಸೂಚಿಸುವ ಪುರಾವೆಗಳು ಅಥವಾ ಖಾತೆಯ ಪುಸ್ತಕಗಳು, ಡಾಕ್ಯುಮೆಂಟ್‌ಗಳನ್ನು ಹೊಂದಿರಬೇಕು. ಈ ಇನ್‌ಕಮ್, ಖಾತೆಯ ಪುಸ್ತಕಗಳಲ್ಲಿನ ಎಂಟ್ರಿ/ಎಂಟ್ರಿಗಳು ಅಥವಾ ಘಟನೆ, ಸಂದರ್ಭ, ಟ್ರಾನ್ಸಾಕ್ಷನ್‌ಗೆ ಸಂಬಂಧಿಸಿದ ವೆಚ್ಚಗಳು ಅಥವಾ ಅಸೆಟ್ ರೂಪದಲ್ಲಿ ಇರಬೇಕು. ಹೆಚ್ಚುವರಿಯಾಗಿ, ತಪ್ಪಿಸಿಕೊಳ್ಳುವ ಇನ್‌ಕಮ್ ಐವತ್ತು ಲಕ್ಷ ರೂಪಾಯಿಗಳಿಗೆ ಸಮನಾಗಿರಬೇಕು ಅಥವಾ ಮೀರಿರಬೇಕು ಅಥವಾ ಆ ಅಮೌಂಟ್ ಅನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರಬೇಕು.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಸೆಸಿಂಗ್ ಅಧಿಕಾರಿಯು ಗಮನಾರ್ಹವಾದ ಬಹಿರಂಗಪಡಿಸದ ಇನ್‌ಕಮ್‌ನ ಅಸ್ತಿತ್ವವನ್ನು ಸೂಚಿಸುವ ಗಣನೀಯ ಪುರಾವೆಗಳನ್ನು ಹೊಂದಿದ್ದರೆ, ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ಮೂರು ವರ್ಷಗಳಿಗಿಂತ ಹೆಚ್ಚು ಕಳೆದಿದ್ದರೂ ಸಹ, ಇನ್ನೂ ಹತ್ತು ವರ್ಷಗಳ ಒಳಗೆ ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್ ಅನ್ನು ನೀಡಬಹುದು.
ಆದಾಗ್ಯೂ, ಈ ಕೆಳಗಿನ ಕಾರಣಗಳ ಆಧಾರದ ಮೇಲೆ ಅಧಿಕಾರಿಯು ನೋಟಿಸ್ ಕಳುಹಿಸಬಹುದು ಎಂಬುದನ್ನು ಗಮನಿಸಿ:
- ಸೆಕ್ಷನ್ 139, 148 ಅಥವಾ 142(1)ರ ಪ್ರಕಾರ ಟ್ಯಾಕ್ಸ್‌ಪೇಯರ್ ತನ್ನ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಸಬ್‌ಮಿಟ್ ಮಾಡಲು ವಿಫಲನಾಗುತ್ತಾನೆ; ಅಥವಾ,
- ಮೌಲ್ಯಮಾಪನದ ಟ್ಯಾಕ್ಸೇಬಲ್ ಅನ್ನು ಮೌಲ್ಯಮಾಪನ ಮಾಡಲು ಅಗತ್ಯವಿರುವ ವಾಸ್ತವಿಕ ಮಾಹಿತಿಯನ್ನು ಬಹಿರಂಗಪಡಿಸಲು ವ್ಯಕ್ತಿಯು ವಿಫಲನಾಗುತ್ತಾನೆ.
ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್‌ಗೆ ಉತ್ತರಿಸುವಾಗ ಪರಿಗಣಿಸಬೇಕಾದ ವಿಷಯಗಳು
ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ 1961ರ ಸೆಕ್ಷನ್ 148 ರ ಅಡಿಯಲ್ಲಿ ನೀಡಲಾದ ನೋಟಿಸ್‌ಗೆ ಉತ್ತರಿಸಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ:
- ಮೊದಲನೆಯದಾಗಿ, ನೋಟಿಸ್ ಕಳುಹಿಸಲು ಅಸೆಸಿಂಗ್ ಅಧಿಕಾರಿಯನ್ನು ಪ್ರೇರೇಪಿಸಿದ ಕಾರಣಗಳನ್ನು ಕಂಡುಹಿಡಿಯಿರಿ. ಕಾರಣಗಳು ಲಭ್ಯವಿಲ್ಲದಿದ್ದರೆ, ವ್ಯಕ್ತಿಗಳು ಅದರ ಕಾಪಿ ಅನ್ನು ಕೋರಬಹುದು.
- ವ್ಯಕ್ತಿಗಳು ಸಮರ್ಥನೀಯ ಕಾರಣಗಳನ್ನು ಕಂಡುಕೊಂಡರೆ, ಕಾನೂನು ಸಮಸ್ಯೆಗಳನ್ನು ತಪ್ಪಿಸಲು ಅವರು ತಕ್ಷಣವೇ ಟ್ಯಾಕ್ಸ್ ರಿಟರ್ನ್ಸ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಅವರು ಈಗಾಗಲೇ ಸೆಕ್ಷನ್ 148ರ ಅಡಿಯಲ್ಲಿ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಿದ್ದರೆ, ಅವರು ಅಸೆಸಿಂಗ್ ಅಧಿಕಾರಿಗೆ ಕಾಪಿಯನ್ನು ಸಬ್‌ಮಿಟ್ ಮಾಡಬೇಕು.
- ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವಾಗ ಜಾಗರೂಕರಾಗಿರಿ. ಯಾವುದೇ ವೆಚ್ಚಗಳು ಅಥವಾ ಇನ್‌ಕಮ್ ಅನ್ನು ಮಿಸ್ ಮಾಡುವುದು ವ್ಯಕ್ತಿಯು ಕಾನೂನು ದಂಡವನ್ನು ಎದುರಿಸಲು ಕಾರಣವಾಗಬಹುದು.
ಕಾನೂನು ಸಂಕೀರ್ಣತೆಗಳನ್ನು ತಪ್ಪಿಸಲು ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148ರ ಬಗ್ಗೆ ಈ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಆದಾಗ್ಯೂ, ಅಂತಹ ಅನನುಕೂಲತೆಯನ್ನು ತಪ್ಪಿಸಲು ಟ್ಯಾಕ್ಸ್ ಕಂಪ್ಲಯಂಟ್ ಆಗಿ ಉಳಿಯಲು ವ್ಯಕ್ತಿಗಳು ತಮ್ಮ ಇನ್‌ಕಮ್ ಅನ್ನು ಪ್ರತಿ ಮೌಲ್ಯಮಾಪನ ವರ್ಷದಲ್ಲಿ ಮೌಲ್ಯಮಾಪನ ಮಾಡಬೇಕು.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಮೌಲ್ಯಮಾಪನದಿಂದ ₹50,00,000 ಅಥವಾ ಅದಕ್ಕಿಂತ ಹೆಚ್ಚಿನದನ್ನು ತಪ್ಪಿಸುವ ಸಂದರ್ಭದಲ್ಲಿ ಅಪ್ಲಿಕೇಬಲ್ ಆಗುವ ಮರು-ಮೌಲ್ಯಮಾಪನದ ಕಾಲಮಿತಿ ಏನು?
ಕೇಂದ್ರ ಬಜೆಟ್ 2021ರ ಪ್ರಕಾರ, ಒಬ್ಬ ವ್ಯಕ್ತಿಯು ಟ್ಯಾಕ್ಸ್ ಮೌಲ್ಯಮಾಪನದಿಂದ ₹50,00,000 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ತಪ್ಪಿಸಿದರೆ, ಮರು-ಮೌಲ್ಯಮಾಪನವು 10 ವರ್ಷಗಳವರೆಗೆ ವ್ಯಾಲಿಡ್ ಆಗಿರುತ್ತದೆ ಎಂದು ನಿರ್ಮಲ್ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ.
ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148ರ ಅಡಿಯಲ್ಲಿ ಟ್ಯಾಕ್ಸ್‌ಪೇಯರ್ ನೋಟಿಸ್‌ನ ವ್ಯಾಲಿಡಿಟಿ ಅನ್ನು ಪ್ರಶ್ನಿಸಬಹುದೇ?
ಟ್ಯಾಕ್ಸೇಬಲ್ ಇನ್‌ಕಮ್ ನಿರ್ಣಯಿಸಲು ಅಸೆಸಿಂಗ್ ಅಧಿಕಾರಿ ಹೇಳಿದ ಕಾರಣಗಳನ್ನು ಟ್ಯಾಕ್ಸ್‌ಪೇಯರ್ ಇನ್‌ವ್ಯಾಲಿಡ್ ಎಂದು ಕಂಡುಕೊಳ್ಳಬಹುದು. ಅಂತಹ ಸಂದರ್ಭದಲ್ಲಿ, ಆತ ಅಥವಾ ಆಕೆ ಅಂತಹ ನೋಟಿಸ್ ಅನ್ನು ಹೈಯರ್ ಅಥಾರಿಟಿ ಅಥವಾ ಅಸೆಸಿಂಗ್ ಅಧಿಕಾರಿಯ ಮುಂದೆ ಪ್ರಶ್ನೆ ಮಾಡಬಹುದು. ಆತ ಅಥವಾ ಆಕೆ ಪ್ರಕರಣವನ್ನು ಗೆದ್ದರೆ, ನ್ಯಾಯಾಲಯವು ಟ್ಯಾಕ್ಸೇಬಲ್ ಇನ್‌ಕಮ್‌ನ ಮೌಲ್ಯಮಾಪನವನ್ನು ತಡೆಯಬಹುದು. ಆದಾಗ್ಯೂ, ಆ ನ್ಯಾಯಾಲಯದ ವಿಚಾರಣೆಯಲ್ಲಿ ಟ್ಯಾಕ್ಸ್‌ಪೇಯರ್ ವಿಫಲರಾದರೆ, ಅಸೆಸಿಂಗ್ ಅಧಿಕಾರಿ ಮರು-ಮೌಲ್ಯಮಾಪನದೊಂದಿಗೆ ಮುಂದುವರಿಯಬಹುದು.
ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148ರ ಉದ್ದೇಶವೇನು?
ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 148 ಮೌಲ್ಯಮಾಪನಗಳನ್ನು ರೀ-ಓಪನ್ ಮಾಡಲು ನೋಟಿಸ್‌ಗಳನ್ನು ನೀಡುವುದಕ್ಕೆ ಸಂಬಂಧಿಸಿದೆ. ಟ್ಯಾಕ್ಸ್‌ಪೇಯರ್‌ರ ಇನ್‌ಕಮ್ ಅನ್ನು ಮರು ಮೌಲ್ಯಮಾಪನ ಮಾಡಲು ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳಿಗೆ ಅಧಿಕಾರ ನೀಡುವುದು ಮತ್ತು ಇನ್‌ಕಮ್ ಮೌಲ್ಯಮಾಪನದಿಂದ ತಪ್ಪಿಸಿಕೊಂಡಿದೆ ಎಂದು ನಂಬಲು ಕಾರಣವಿದ್ದರೆ ಅಗತ್ಯ ಹೊಂದಾಣಿಕೆಗಳನ್ನು ಮಾಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಈ ಸೆಕ್ಷನ್ ಮರುಮೌಲ್ಯಮಾಪನಕ್ಕಾಗಿನ ಕ್ರಮಗಳನ್ನು ಪ್ರಾರಂಭಿಸಲು, ಹಾಗೆ ಮಾಡಲು ವ್ಯಾಲಿಡ್ ಆದ ಕಾರಣಗಳಿದ್ದರೆ ಕಾನೂನು ಚೌಕಟ್ಟನ್ನು ಒದಗಿಸುತ್ತದೆ.