ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 115bac
ಈಗ ಹಿಂದೂ ಅವಿಭಜಿತ ಕುಟುಂಬಗಳು ಮತ್ತು ವ್ಯಕ್ತಿಗಳು, ಹಣಕಾಸು ವರ್ಷ 2020-21 ರಿಂದ ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆಯ್ಕೆ ಮಾಡಲು ಅರ್ಹರಾಗಿದ್ದಾರೆ. ಈ ಹಣಕಾಸು ವರ್ಷದಿಂದ, ವ್ಯಕ್ತಿಯೊಬ್ಬನು ಐಚ್ಚಿಕವಾಗಿ ಹೊಸ ಟ್ಯಾಕ್ಸ್ ರೆಜಿಮ್‌ನ ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ಅನ್ನು ಪಾವತಿಸಲು ಆಯ್ಕೆ ಮಾಡಿಕೊಳ್ಳಬಹುದು. ಈ ಹೊಸ ರೆಜಿಮ್, ಹಿಂದೂ ಅವಿಭಜಿತ ಕುಟುಂಬಗಳು ಮತ್ತು ಕಡಿಮೆ ಟ್ಯಾಕ್ಸ್ ದರಗಳು ಮತ್ತು ಕಡಿಮೆ ಸಂಖ್ಯೆಯ ವಿನಾಯಿತಿಗಳು ಅಥವಾ ಡಿಡಕ್ಷನ್‌ಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಲಭ್ಯವಿದೆ.
ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 115BAC ಗೆ ಸಂಬಂಧಿಸಿದ ಅನೇಕ ಪ್ರಮುಖ ಅಂಶಗಳನ್ನು ನಾವೀಗ ನೋಡೋಣ.
ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 115BAC ಎಂದರೇನು?
2020 ಬಜೆಟ್‌ನ ಭಾಷಣದ ಸಮಯದಲ್ಲಿ, ಭಾರತದ ಹಣಕಾಸು ಸಚಿವರು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್, 1961 ಕ್ಕೆ ಹೊಸ ಸೆಕ್ಷನ್ 115BAC ಯ ಸೇರಿಕೆಯನ್ನು ಘೋಷಿಸಿದರು. ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 115BAC ಹಣಕಾಸು ವರ್ಷ 2020-21 ರಿಂದ ಜಾರಿಗೆ ಬಂದಿದೆ ಮತ್ತು ಇದು ಹಿಂದೂ ಅವಿಭಜಿತ ಕುಟುಂಬಗಳು ಮತ್ತು ವ್ಯಕ್ತಿಗಳಿಗಾಗಿ, ಹೊಸ ಮತ್ತು ಐಚ್ಛಿಕ ಇನ್ಕಮ್ ಟ್ಯಾಕ್ಸ್ ರೆಜಿಮ್‌ನೊಂದಿಗೆ ವ್ಯವಹರಿಸುತ್ತದೆ.
ಹೊಸ ವ್ಯವಸ್ಥೆಯು 1ನೇ ಏಪ್ರಿಲ್ 2020 ರಿಂದ (ಹಣಕಾಸು ವರ್ಷ2020-21) ಗಳಿಸಿದ ಇನ್ಕಮ್‌ಗೆ ಅನ್ವಯಿಸುತ್ತದೆ. ಇದು ಮೌಲ್ಯಮಾಪನ ವರ್ಷ 2021-22ಕ್ಕೆ ಸಂಬಂಧಿಸಿದೆ.
ಹೊಸ ರೆಜಿಮ್‌ನ ಪ್ರಮುಖ ಲಕ್ಷಣವೆಂದರೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳಲ್ಲಿ ಗಣನೀಯ ಇಳಿಕೆಯಾಗಿದೆ. ಆದಾಗ್ಯೂ, ಈ ಹೊಸ ದರಗಳು ಅಸ್ತಿತ್ವದಲ್ಲಿರುವ ಅಥವಾ ಹಳೆಯ ರೆಜಿಮ್‌ನಲ್ಲಿ ಪ್ರಸ್ತುತ ಲಭ್ಯವಿರುವ, ಕೆಲವು ಪ್ರಮುಖ ಡಿಡಕ್ಷನ್‌ಗಳು ಮತ್ತು ವಿನಾಯಿತಿಗಳ ವೆಚ್ಚದಲ್ಲಿ ಬರುತ್ತವೆ. ಸೆಕ್ಷನ್ 115BAC ಕ್ಯಾಲ್ಕುಲೇಟರ್, ಟ್ಯಾಕ್ಸ್‌ಗಳನ್ನು ಕ್ಯಾಲ್ಕುಕೇಶನ್ ಮಾಡಲು ಸೂಕ್ತವೆಂದು ಸಾಬೀತುಪಡಿಸಬಹುದಾದರೂ, ಅನ್ವಯವಾಗುವ ಸ್ಲ್ಯಾಬ್ ದರಗಳ ಬಗ್ಗೆ ಜನರು ತಿಳಿದಿರಬೇಕು.
ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 115BAC ಪ್ರಕಾರ ಹೊಸ ಸ್ಲ್ಯಾಬ್ ದರಗಳು ಯಾವುವು?
ವಾರ್ಷಿಕ ಇನ್ಕಮ್ | ಹೊಸ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರ |
---|---|
₹2.5 ಲಕ್ಷವರೆಗೆ ನಿಲ್ | ವಿನಾಯಿತಿ ನೀಡಲಾಗಿದೆ |
₹2.5 ಲಕ್ಷದಿಂದ ಮೇಲ್ಪಟ್ಟು ₹5 ಲಕ್ಷದವರೆಗೆ | 5% |
₹5 ಲಕ್ಷದಿಂದ ಮೇಲ್ಪಟ್ಟು ₹7.5 ಲಕ್ಷದವರೆಗೆ | 10% |
₹7.5 ಲಕ್ಷದಿಂದ ಮೇಲ್ಪಟ್ಟು ₹10 ಲಕ್ಷದವರೆಗೆ | 15% |
₹10 ಲಕ್ಷದಿಂದ ಮೇಲ್ಪಟ್ಟು ₹12.5 ಲಕ್ಷದವರೆಗೆ | 20% |
₹12.5 ಲಕ್ಷದಿಂದ ಮೇಲ್ಪಟ್ಟು ₹15 ಲಕ್ಷದವರೆಗೆ | 25% |
₹15 ಲಕ್ಷಕ್ಕಿಂತ ಮೇಲ್ಪಟ್ಟು | 30% |
ಟ್ಯಾಕ್ಸ್‌ಗಳನ್ನು ಕ್ಯಾಲ್ಕುಲೇಟ್ ಮಾಡಲು ಇನ್ಕಮ್ ಟ್ಯಾಕ್ಸ್ ಕ್ಯಾಲ್ಕುಲೇಟರ್ 115BAC ಅನ್ನು ಬಳಸಬಹುದು. ಈ ಟೂಲ್, ಯೂಸರ್‌ಗಳಿಂದ ಹಲವಾರು ಡೇಟಾವನ್ನು ಕೇಳುತ್ತದೆ. ಇವುಗಳನ್ನು ನಮೂದಿಸಿದ ನಂತರ, ಅಗತ್ಯವಿರುವ ಫಲಿತಾಂಶವನ್ನು ಸ್ಕ್ರೀನ್ ಮೇಲೆ ಡಿಸ್‌ಪ್ಲೇ ಮಾಡಲಾಗುತ್ತದೆ.
ಸೆಕ್ಷನ್ 115BAC ನಲ್ಲಿ ಹೊಸ ಟ್ಯಾಕ್ಸ್ ರೆಜಿಮ್‌ಗೆ ಇರುವ ಅರ್ಹತಾ ಕ್ರೈಟೀರಿಯಗಳು ಯಾವುವು?
ಮೌಲ್ಯಮಾಪನ ವರ್ಷ 2021-22 ರಲ್ಲಿ, ಹಿಂದೂ ಅವಿಭಜಿತ ಕುಟುಂಬಗಳು ಮತ್ತು ವ್ಯಕ್ತಿಗಳು ಹೊಸ (ಕಡಿಮೆಯಾದ) ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳ ಪ್ರಕಾರ ಇನ್ಕಮ್ ಟ್ಯಾಕ್ಸ್ ಅನ್ನು ಪಾವತಿಸುವ ಆಯ್ಕೆಯನ್ನು ಮಾಡಬಹುದು, ಆದರೆ ಅದಕ್ಕಾಗಿ ಸಂಬಂಧಿತ ಹಣಕಾಸು ವರ್ಷದಲ್ಲಿ ಅವರ ಒಟ್ಟು ಇನ್ಕಮ್, ಈ ಕೆಳಗೆ ನೀಡಲಾದ ಕಂಡೀಶನ್‌ಗಳನ್ನು ಪೂರೈಸಬೇಕು -
ಕೆಳಗಿನವುಗಳ ಅಡಿಯಲ್ಲಿ ನೀಡಲಾದ ಯಾವುದೇ ಡಿಡಕ್ಷನ್‌ಗಳಿಲ್ಲದೆ ಅಥವಾ ವಿನಾಯಿತಿಗಳಿಲ್ಲದೆ ಅದೇ ಕ್ಯಾಲ್ಕುಲೇಶನ್ ಅನ್ನು ಮಾಡಲಾಗುತ್ತದೆ -
- ಚಾಪ್ಟರ್ VI-A ಸೆಕ್ಷನ್ 80CCD/ 80JJAA ಅಡಿಯಲ್ಲಿ ಬರುವವರನ್ನು ಹೊರತುಪಡಿಸಿ
- ಸೆಕ್ಷನ್ 35/ 35AD/ 35CCC
- ಸೆಕ್ಷನ್ 57 ರ ಕ್ಲಾಸ್ (iIA)
- ಸೆಕ್ಷನ್ 24b
- ಸೆಕ್ಷನ್ 10/10AA/16 ರ ಕ್ಲಾಸ್ (5)/(13A)/(14)/(17)/(32)
- ಸೆಕ್ಷನ್ 32(1)/ 32AD/ 33AB/ 33ABA
ಮೇಲೆ ಹೇಳಲಾದ ಡಿಡಕ್ಷನ್‌ಗಳಿಂದ ಅಥವಾ ಹೌಸ್ ಪ್ರಾಪರ್ಟಿಯಿಂದ ಹಿಂದಿನ ಮೌಲ್ಯಮಾಪನ ವರ್ಷದಿಂದ ನಷ್ಟವನ್ನು ಸೆಟ್ ಮಾಡದೆಯೇ ಕ್ಯಾಲ್ಕುಲೇಶನ್ ಮಾಡಲಾಗುತ್ತದೆ.
ಯಾವುದೇ ಅಗತ್ಯತೆಗಳು ಅಥವಾ ಪರ್ಕ್ವಿಸೈಟ್ಸ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಡಿಡಕ್ಷನ್ ಅಥವಾ ವಿನಾಯಿತಿ ಇಲ್ಲದೆ ಇದನ್ನು ಕ್ಯಾಲ್ಕುಲೇಟ್ ಮಾಡಲಾಗುತ್ತದೆ.
ಸೆಕ್ಷನ್ 32 ರ ಕ್ಲಾಸ್ (iIA) ಅಡಿಯಲ್ಲಿ ಯಾವುದೇ ಡೆಪ್ರಿಸಿಯೇಶನ್ ಅನ್ನು ಕ್ಲೈಮ್ ಮಾಡದೆಯೇ ಈ ಕ್ಯಾಲ್ಕುಲೇಶನ್ ಅನ್ನು ಮಾಡಲಾಗುತ್ತದೆ.
ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 115BAC ಅಡಿಯಲ್ಲಿ ವಿನಾಯಿತಿಗಳು ಮತ್ತು ಡಿಡಕ್ಷನ್‌ಗಳು ಯಾವುವು?
ಹೊಸ ಇನ್ಕಮ್ ಟ್ಯಾಕ್ಸ್ ರೆಜಿಮ್‌ನ ಅಡಿಯಲ್ಲಿ ಹೆಚ್ಚಿನ ಇನ್ಕಮ್ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 115BAC ಅಡಿಯಲ್ಲಿ, ಕೆಳಗೆ ತಿಳಿಸಲಾದವುಗಳನ್ನು ಅನುಮತಿಸಲಾಗಿದೆ.
ಸೆಕ್ಷನ್ 80CCD(2) ಅಡಿಯಲ್ಲಿ ಡಿಡಕ್ಷನ್ (ವ್ಯಕ್ತಿಯ ಪೆನ್ಷನ್ ಅಕೌಂಟ್‌ಗೆ ಎಂಪ್ಲಾಯರ್‌ಗಳ ಕೊಡುಗೆ).
ಟೂರ್ ಅಥವಾ ಟ್ರಾವೆಲ್ ಅಥವಾ ಟ್ರಾನ್ಸ್‌ಫರ್‌ಗಳ ವೆಚ್ಚಕ್ಕೆ ಯಾವುದೇ ಭತ್ಯೆ.
ಆಫೀಸ್ ಡ್ಯೂಟಿಗಳ ನಿರ್ವಹಣೆಗಾಗಿ ಸಾಗಣೆ ಭತ್ಯೆ.
ಸೆಕ್ಷನ್ 80JJAA ಅಡಿಯಲ್ಲಿ ಡಿಡಕ್ಷನ್ (ಹೆಚ್ಚುವರಿ ಎಂಪ್ಲಾಯೀಯ ವೆಚ್ಚ).
ಕೆಲವು ಸಂದರ್ಭಗಳಲ್ಲಿ ಎಂಪ್ಲಾಯೀಗಳಿಗೆ ದೈನಂದಿನ ಭತ್ಯೆ ನೀಡಲಾಗುತ್ತದೆ.
ವಿಕಲಚೇತನ ಎಂಪ್ಲಾಯೀಗಳಿಗೆ (ದಿವ್ಯಾಂಗರು) ಸಾರಿಗೆ ಭತ್ಯೆ.
ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 115BAC ಅಡಿಯಲ್ಲಿ ಯಾವ ಡಿಡಕ್ಷನ್‌ಗಳು ಅನ್ವಯಿಸುವುದಿಲ್ಲ?
ಹಿಂದಿನ ಸೆಕ್ಷನ್‌ನಲ್ಲಿ ಹೇಳಿದಂತೆ, ಸೆಕ್ಷನ್ 115BAC ಅಡಿಯಲ್ಲಿ ಹಲವಾರು ವಿನಾಯಿತಿಗಳು ಮತ್ತು ಡಿಡಕ್ಷನ್‌ಗಳಿವೆ. ಆದರೆ ಅದೇ ಸಮಯದಲ್ಲಿ, ಈ ಹೊಸ ರೆಜಿಮ್‌ನಲ್ಲಿ ಸ್ಥಗಿತಗೊಂಡಿರುವ ಪ್ರಮುಖವಾದ ಡಿಡಕ್ಷನ್‌ಗಳು ಈ ಕೆಳಗಿನಂತಿವೆ -
ಚಾಪ್ಟರ್ VIA ಅಡಿಯಲ್ಲಿನ ಪ್ರಮುಖ ಡಿಡಕ್ಷನ್‌ಗಳು (ಸೆಕ್ಷನ್ 80C, 80CCC, 80CCD, 80DD, 80DDB, 80E, 80EE, 80EEA, 80G, 80IA, ಇತ್ಯಾದಿ)
ಸೆಕ್ಷನ್ 10(5) ಅಡಿಯಲ್ಲಿ ಲೀವ್ ಟ್ರಾವೆಲ್ ಅಲೋವೆನ್ಸ್
ಸೆಕ್ಷನ್ 10(13A) ಅಡಿಯಲ್ಲಿ ಹೌಸ್ ರೆಂಟ್ ಅಲೋವೆನ್ಸ್ (ಹೆಚ್.ಆರ್.ಎ)
ಸೆಕ್ಷನ್ 10(14) ಅಡಿಯಲ್ಲಿ ಭತ್ಯೆಗಳು
ಸೆಕ್ಷನ್ 16 ರ ಅಡಿಯಲ್ಲಿ ಮನರಂಜನಾ ಭತ್ಯೆ ಮತ್ತು ಉದ್ಯೋಗ/ಪ್ರೊಫೆಷನಲ್ ಟ್ಯಾಕ್ಸ್‌ಗೆ ಡಿಡಕ್ಷನ್
ಸೆಕ್ಷನ್ 32(iIA) ಅಡಿಯಲ್ಲಿ ಡೆಪ್ರಿಸಿಯೇಶನ್
ವೈಜ್ಞಾನಿಕ ಸಂಶೋಧನೆಯ ಮೇಲಿನ ಖರ್ಚು ಅಥವಾ ಡೊನೇಶನ್‌ಗಾಗಿ ಡಿಡಕ್ಷನ್
ಸೆಕ್ಷನ್ 24(ಬಿ) ಅಡಿಯಲ್ಲಿ ಹೋಮ್ ಲೋನ್ ಇಂಟರೆಸ್ಟ್
ಸೆಕ್ಷನ್ 32AD, 33AB, 33ABA, 35AD, 35CCC ಅಡಿಯಲ್ಲಿ ಡಿಡಕ್ಷನ್‌ಗಳು
ಸೆಕ್ಷನ್ 57(iIA) ಅಡಿಯಲ್ಲಿ ಫ್ಯಾಮಿಲಿ ಪೆನ್ಷನ್‌ನಿಂದ ಡಿಡಕ್ಷನ್
ಹಣಕಾಸು ವರ್ಷ 2020-21 ರಲ್ಲಿ ಹೊಸ ರೆಜಿಮ್ ಐಚ್ಛಿಕವಾಗಿದೆ ಎಂಬುದನ್ನು ವ್ಯಕ್ತಿಯು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ಮೇಲೆ ತಿಳಿಸಲಾದ ಎಲ್ಲಾ ಡಿಡಕ್ಷನ್‌ಗಳನ್ನು ಒಳಗೊಂಡಂತೆ ಅಸ್ತಿತ್ವದಲ್ಲಿರುವ ಅಥವಾ ಹಳೆಯ ರೆಜಿಮ್ ಅನ್ನು ಆಯ್ಕೆಮಾಡಿಕೊಳ್ಳುವ ಆಯ್ಕೆ ಯಾವಾಗಲೂ ಇರುತ್ತದೆ.
ಸೆಕ್ಷನ್ 115BAC ನಲ್ಲಿ ಹಳೆಯ ಮತ್ತು ಹೊಸ ಟ್ಯಾಕ್ಸ್ ರೆಜಿಮ್‌ನ ನಡುವಿನ ವ್ಯತ್ಯಾಸವೇನು?
ಪ್ರಸ್ತುತ ಅಥವಾ ಹಳೆಯ ಟ್ಯಾಕ್ಸ್ ರೆಜಿಮ್, ವಿಭಿನ್ನ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳು ಮತ್ತು ಡಿಡಕ್ಷನ್‌ಗಳನ್ನು ನೀಡುತ್ತದೆ. ಆದ್ದರಿಂದ ಇದು ಹೆಚ್ಚಿನ ಟ್ಯಾಕ್ಸ್ ಪೇಯರ್‌ಗಳಿಗೆ ಸೂಕ್ತವಾಗಿದೆ. ವಿವಿಧ ಟ್ಯಾಕ್ಸ್-ಸೇವಿಂಗ್ ಸ್ಕೀಮ್‌ಗಳಲ್ಲಿ ಸಾಕಷ್ಟು ಇನ್ವೆಸ್ಟ್‌ಮೆಂಟ್‌ಗಳನ್ನು ಮಾಡಿದರೆ ಕಡಿಮೆ-ಮಧ್ಯಮ ಇನ್ಕಮ್‌ನ ಗುಂಪಿಗೆ ಸೇರಿದ ಜನರಿಗೆ ಈ ರೆಜಿಮ್ ಹೆಚ್ಚು ಸೂಕ್ತವಾಗಿರುತ್ತದೆ.
ಆದಾಗ್ಯೂ, ಲೈಫ್ ಇನ್ಶೂರೆನ್ಸ್, ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇಎಲ್ಎಸ್ಎಸ್), ನ್ಯಾಷನಲ್ ಪೆನ್ಷನ್ ಸ್ಕೀಮ್ (ಎನ್.ಪಿ.ಎಸ್), ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ (ಎನ್.ಎಸ್.ಸಿ), ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ (ಇಪಿಎಫ್), ಟ್ಯಾಕ್ಸ್ ಸೇವಿಂಗ್ಸ್ ಫಿಕ್ಸೆಡ್ ಡೆಪಾಸಿಟ್ (ಎಫ್.ಡಿ) ನಂತಹ ಸ್ಕೀಮ್‌ಗಳಲ್ಲಿ ಗಣನೀಯವಾಗಿ ಇನ್ವೆಸ್ಟ್ ಮಾಡದವರಿಗೆ ಹೊಸ ಇನ್ಕಮ್ ಪ್ರಯೋಜನಕಾರಿಯಾಗಿದೆ.
ಇವೆಲ್ಲವನ್ನೂ ತಿಳಿಸಿದ ನಂತರ, ಈ ಎರಡು ರೆಜಿಮ್‌ಗಳ ನಡುವೆ ನಿರ್ಧಾರ ಮಾಡಲು ಯಾವುದೇ ರೆಡಿ ಫಾರ್ಮುಲಾ ಇಲ್ಲ ಎಂಬುದನ್ನು ನೀವು ಗಮನಿಸಬೇಕು. ನಿರ್ಧರಿಸುವ ಮೊದಲು ಹಳೆಯ ಮತ್ತು ಹೊಸ ಸ್ಲ್ಯಾಬ್ ದರಗಳ ಪ್ರಕಾರ ಒಟ್ಟು ಟ್ಯಾಕ್ಸ್ ಹೊರಹೋಗುವಿಕೆಯನ್ನು ಕ್ಯಾಲ್ಕುಲೇಟ್ ಮಾಡಬೇಕು.
ಹೊಸ ರೆಜಿಮ್ ಯಾವಾಗ ಉತ್ತಮ?
ಈ ನಿರ್ದಿಷ್ಟ ಸೆಕ್ಷನ್ ಅನ್ನು ಉದಾಹರಣೆಯ ಸಹಾಯದಿಂದ ಇನ್ನಷ್ಟು ಉತ್ತಮವಾಗಿ ವಿವರಿಸಬಹುದು. ಕೆಳಗಿನ ಟೇಬಲ್‌ಗಳನ್ನು ಒಮ್ಮೆ ನೋಡಿ.
₹1,25,0000 ಮೊತ್ತದ ಇನ್ಕಮ್ ಅನ್ನು ಪರಿಗಣಿಸಿ ಈ ಕೆಳಗಿನ ಕ್ಯಾಲ್ಕುಲೇಶನ್ ಅನ್ನು ಮಾಡಲಾಗಿದೆ.
ಹಳೆಯ ರೆಜಿಮ್‌ನ ಪ್ರಕಾರ
ಪ್ಯಾರಾಮೀಟರ್‌ಗಳು | ಫಲಿತಾಂಶದ ಮೊತ್ತ (₹) | ಹಳೆಯ ರೆಜಿಮ್ (₹) |
ಸ್ಯಾಲರಿ | 1250000 | 1250000 |
ಕಳೆಯಿರಿ: ಸ್ಟ್ಯಾಂಡರ್ಡ್ ಡಿಡಕ್ಷನ್ | 50000 | 50000 |
ಕಳೆಯಿರಿ: ಪ್ರೊಫೆಷನಲ್ ಟ್ಯಾಕ್ಸ್ | 2400 | 2400 |
ಗ್ರಾಸ್ ಟೋಟಲ್ ಇನ್ಕಮ್ | 1197600 | 1197600 |
ಕಳೆಯಿರಿ: ಸೆಕ್ಷನ್ 80C ಅಡಿಯಲ್ಲಿ ಡಿಡಕ್ಷನ್ | 150000 | 150000 |
ಒಟ್ಟು ಇನ್ಕಮ್ | 1047600 | 1047600 |
ಇನ್ಕಮ್ ಟ್ಯಾಕ್ಸ್ | - | 126780 |
ಕೂಡಿಸಿ: 4% ಎಜುಕೇಷನ್ ಸೆಸ್ | - | 5071 |
ಒಟ್ಟು ಟ್ಯಾಕ್ಸ್ | - | 131851 |
ಹೊಸ ರೆಜಿಮ್‌ನ ಪ್ರಕಾರ
ಪ್ಯಾರಾಮೀಟರ್‌ಗಳು |
ಫಲಿತಾಂಶದ ಮೊತ್ತ (₹) |
ಹೊಸ ರೆಜಿಮ್ (₹) |
ಸ್ಯಾಲರಿ |
1250000 |
1250000 |
ಕಳೆಯಿರಿ: ಸ್ಟ್ಯಾಂಡರ್ಡ್ ಡಿಡಕ್ಷನ್ |
50000 |
- |
ಕಳೆಯಿರಿ: ಪ್ರೊಫೆಷನಲ್ ಟ್ಯಾಕ್ಸ್ |
2400 |
- |
ಗ್ರಾಸ್ ಟೋಟಲ್ ಇನ್ಕಮ್ |
1197600 |
1250000 |
ಕಳೆಯಿರಿ: ಸೆಕ್ಷನ್ 80C ಅಡಿಯಲ್ಲಿ ಡಿಡಕ್ಷನ್ |
150000 |
- |
ಒಟ್ಟು ಇನ್ಕಮ್ |
1047600 |
- |
ಇನ್ಕಮ್ ಟ್ಯಾಕ್ಸ್ |
- |
125000 |
ಕೂಡಿಸಿ: 4% ಎಜುಕೇಷನ್ ಸೆಸ್ |
- |
5000 |
ಒಟ್ಟು ಟ್ಯಾಕ್ಸ್ |
- |
130000 |
ಮೇಲಿನ ಟೇಬಲ್‌ಗಳಿಂದ, ಎರಡು ರೆಜಿಮ್‌ಗಳ ನಡುವಿನ ಟ್ಯಾಕ್ಸ್ ವ್ಯತ್ಯಾಸವು ₹1851 ಆಗಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಮೇಲೆ ಹೇಳಲಾದ ಇನ್ಕಮ್‌ಗೆ, ಹೊಸ ರೆಜಿಮ್ ಸ್ವಲ್ಪಮಟ್ಟಿಗೆ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಎನ್‌ಪಿಎಸ್, ಎಜುಕೇಷನ್ ಲೋನ್‌ಗಳು, ಹೆಲ್ತ್ ಇನ್ಶೂರೆನ್ಸ್ ಇತ್ಯಾದಿಗಳಲ್ಲಿ ಇನ್ವೆಸ್ಟ್‌ಮೆಂಟ್‌ಗಾಗಿ ಹೆಚ್ಚಿನ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಿದರೆ ಪ್ರಸ್ತುತ ರೆಜಿಮ್, ಟ್ಯಾಕ್ಸ್ ಸೇವಿಂಗ್ಸ್‌ಗೆ ಸಂಬಂಧಿಸಿದಂತೆ ಸಹಾಯಕವಾಗಿರುತ್ತದೆ.
ಹಳೆಯ ರೆಜಿಮ್ ಯಾವಾಗ ಉತ್ತಮ?
ಹಿಂದಿನ ಸೆಕ್ಷನ್‌ನಂತೆಯೇ, ಈ ಕೆಳಗಿನ ಟೇಬಲ್‌ಗಳಲ್ಲಿ ವಿವರಿಸಿದ ಉದಾಹರಣೆಯ ಮೂಲಕ ಇದನ್ನು ಉತ್ತಮವಾಗಿ ವಿವರಿಸಲಾಗಿದೆ.
ಇಲ್ಲಿ ಇನ್ಕಮ್ ಅನ್ನು ₹ 10,00000 ಎಂದು ಪರಿಗಣಿಸಲಾಗಿದೆ.
ಹಳೆಯ ರೆಜಿಮ್‌ನ ಪ್ರಕಾರ
ಪ್ಯಾರಾಮೀಟರ್‌ಗಳು | ಫಲಿತಾಂಶದ ಮೊತ್ತ (₹) | ಹಳೆಯ ರೆಜಿಮ್ (₹) |
ಸ್ಯಾಲರಿ | 1000000 | 1000000 |
ಕಳೆಯಿರಿ: ಸ್ಟ್ಯಾಂಡರ್ಡ್ ಡಿಡಕ್ಷನ್ | 50000 | 50000 |
ಕಳೆಯಿರಿ: ಪ್ರೊಫೆಷನಲ್ ಟ್ಯಾಕ್ಸ್ | 2400 | 2400 |
ಗ್ರಾಸ್ ಟೋಟಲ್ ಇನ್ಕಮ್ | 947600 | 947600 |
ಕಳೆಯಿರಿ: ಸೆಕ್ಷನ್ 80C ಅಡಿಯಲ್ಲಿ ಡಿಡಕ್ಷನ್ | 150000 | 150000 |
ಒಟ್ಟು ಇನ್ಕಮ್ | 797600 | 797600 |
ಇನ್ಕಮ್ ಟ್ಯಾಕ್ಸ್ | - | 72020 |
ಕೂಡಿಸಿ: 4% ಎಜುಕೇಷನ್ ಸೆಸ್ | - | 2881 |
ಒಟ್ಟು ಟ್ಯಾಕ್ಸ್ | - | 74901 |
ಹೊಸ ರೆಜಿಮ್‌ನ ಪ್ರಕಾರ
ಪ್ಯಾರಾಮೀಟರ್‌ಗಳು |
ಫಲಿತಾಂಶದ ಮೊತ್ತ (₹) |
ಹೊಸ ರೆಜಿಮ್ (₹) |
ಸ್ಯಾಲರಿ |
1000000 |
1000000 |
ಕಳೆಯಿರಿ: ಸ್ಟ್ಯಾಂಡರ್ಡ್ ಡಿಡಕ್ಷನ್ |
50000 |
ನಿಲ್ |
ಕಳೆಯಿರಿ: ಪ್ರೊಫೆಷನಲ್ ಟ್ಯಾಕ್ಸ್ |
2400 |
ನಿಲ್ |
ಗ್ರಾಸ್ ಟೋಟಲ್ ಇನ್ಕಮ್ |
947600 |
1000000 |
ಕಳೆಯಿರಿ: ಸೆಕ್ಷನ್ 80C ಅಡಿಯಲ್ಲಿ ಡಿಡಕ್ಷನ್ |
150000 |
ನಿಲ್ |
ಒಟ್ಟು ಇನ್ಕಮ್ |
797600 |
1000000 |
ಇನ್ಕಮ್ ಟ್ಯಾಕ್ಸ್ |
- |
75000 |
ಕೂಡಿಸಿ: 4% ಎಜುಕೇಷನ್ ಸೆಸ್ |
- |
3000 |
ಒಟ್ಟು ಟ್ಯಾಕ್ಸ್ |
- |
78000 |
ಮೇಲಿನ ಟೇಬಲ್‌ಗಳಿಂದ, ಹೇಳಲಾದ ಇನ್ಕಮ್‌ನ ಮೊತ್ತಕ್ಕೆ ಪ್ರಸ್ತುತ ಟ್ಯಾಕ್ಸ್ ರೆಜಿಮ್ ಪ್ರಯೋಜನಕಾರಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಒಬ್ಬ ವ್ಯಕ್ತಿಯು ಎನ್.ಪಿ.ಎಸ್, ಹೆಲ್ತ್ ಇನ್ಶೂರೆನ್ಸ್ ಇತ್ಯಾದಿಗಳಲ್ಲಿನ ಇನ್ವೆಸ್ಟ್‌ಮೆಂಟ್‌ಗಳ ಟ್ಯಾಕ್ಸ್ ಸೇವಿಂಗ್ಸ್‌ಗಾಗಿ ಕಡಿಮೆ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡುತ್ತಾನೆ ಎಂದು ಭಾವಿಸೋಣ. ಆ ಸಂದರ್ಭದಲ್ಲಿ, ಟ್ಯಾಕ್ಸ್-ಸೇವಿಂಗ್ಸ್ ಇನ್ವೆಸ್ಟ್‌ಮೆಂಟ್‌ಗಳನ್ನು ಬಳಸುವ ವ್ಯಕ್ತಿಗಳಿಗೆ ಹೊಸ ರೆಜಿಮ್ ಹೆಚ್ಚು ಪ್ರಯೋಜನಕಾರಿಯಾಗಿದೆ.
ಕಡಿಮೆ ಡಿಡಕ್ಷನ್‌ನ ಕ್ಲೈಮ್‌ನೊಂದಿಗೆ ₹5 ಲಕ್ಷದಿಂದ ₹10 ಲಕ್ಷಗಳ ನಡುವಿನ ಇನ್ಕಮ್ ಬ್ರಾಕೆಟ್ ಹೊಂದಿರುವ ವ್ಯಕ್ತಿಗಳು, ಹೊಸ ರೆಜಿಮ್‌ನಿಂದ ಪ್ರಯೋಜನ ಪಡೆಯುತ್ತಾರೆ ಎಂಬುದನ್ನು ಜನರು ಗಮನಿಸಬೇಕು. ಮತ್ತೊಂದೆಡೆ, ವಾರ್ಷಿಕ ಇನ್ಕಮ್ ₹15 ಲಕ್ಷಕ್ಕಿಂತ ಹೆಚ್ಚಿನ ಇನ್ಕಮ್ ಟ್ಯಾಕ್ಸ್ ಬ್ರಾಕೆಟ್‌ನ ಅಡಿಯಲ್ಲಿ ಬರುವ ವ್ಯಕ್ತಿಗಳು, ಟ್ಯಾಕ್ಸ್-ಸೇವಿಂಗ್ಸ್ ಇನ್ವೆಸ್ಟ್‌ಮೆಂಟ್‌ಗಳನ್ನು ಮಾಡುವ ಮೂಲಕ ಪ್ರಸ್ತುತ ರೆಜಿಮ್‌ನಿಂದ ಹೆಚ್ಚು ಪ್ರಯೋಜನ ಪಡೆಯಬಹುದು.
ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 115BAC ಅಡಿಯಲ್ಲಿ ಹಳೆಯ ಅಥವಾ ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆಯ್ಕೆ ಮಾಡುವುದರ ಬಗ್ಗೆ ತಿಳುವಳಿಕೆಯುತ ನಿರ್ಧಾರವನ್ನು ತೆಗೆದುಕೊಳ್ಳಲು ಈ ಮೇಲೆ ತಿಳಿಸಿದ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಪದೇ ಪದೇ ಕೇಳಲಾದ ಪ್ರಶ್ನೆಗಳು
ವ್ಯಕ್ತಿಯೊಬ್ಬನು ಹೊಸದರಿಂದ ಹಳೆಯ ಇನ್ಕಮ್ ಟ್ಯಾಕ್ಸ್ ರೆಜಿಮ್‌ಗೆ ಬದಲಾಗಬಹುದೇ?
ಹೌದು, ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವಾಗ ಮಾತ್ರ ಹೊಸ ಅಥವಾ ಹಳೆಯ ಇನ್ಕಮ್ ಟ್ಯಾಕ್ಸ್ ರೆಜಿಮ್‌ಗೆ ಬದಲಾಗಬಹುದು.
ಹೊಸ ಇನ್ಕಮ್ ಟ್ಯಾಕ್ಸ್ ರೆಜಿಮ್ ಕಡ್ಡಾಯವೇ?
ಇಲ್ಲ, ಹೊಸ ಇನ್ಕಮ್ ಟ್ಯಾಕ್ಸ್ ರೆಜಿಮ್ ಐಚ್ಛಿಕವಾಗಿದೆ ಮತ್ತು ವ್ಯಕ್ತಿಯೊಬ್ಬನು ತನ್ನ ಸ್ವಂತ ವಿವೇಚನೆಯಿಂದ ಇದನ್ನು ಆಯ್ಕೆ ಮಾಡಬಹುದು.