ಐಟಿಆರ್-4(ITR-4) ಫಾರ್ಮ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ಮಾಹಿತಿ
ಭಾರತೀಯ ಸರ್ಕಾರವು ತನ್ನ ನಾಗರಿಕರಿಗೆ ಏಳು ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಕೆಟಗರಿಗಳನ್ನು ನಿರ್ದಿಷ್ಟಪಡಿಸುತ್ತದೆ. ಇವುಗಳಲ್ಲಿ ಐಟಿಆರ್-4. ಐಟಿಆರ್-4 ಅನ್ನು ಪಾಲುದಾರಿಕೆಗಳು/ಹೆಚ್‌ಯುಎಫ್/ವ್ಯಕ್ತಿಗಳು/ಬಿಸಿನೆಸ್ ಮಾಲೀಕರು (ತಯಾರಕರು, ಸಗಟು ವ್ಯಾಪಾರಿಗಳು, ಆನ್‌ಲೈನ್ ಮಾರಾಟಗಾರರು, ಇತ್ಯಾದಿ) ಫೈಲ್ ಮಾಡುತ್ತಾರೆ, ಅವರ 2021-22ರ ನೆಟ್ ಇನ್‌ಕಮ್ ₹50 ಲಕ್ಷದವರೆಗೆ ಇತರ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಈ ರಿಟರ್ನ್ ಅನ್ನು ಯಾರು ಫೈಲ್ ಮಾಡಬೇಕು ಎಂಬ ಅರ್ಹತಾ ನಿಯಮಗಳನ್ನು ನೀವು ಚೆಕ್ ಮಾಡಬಹುದು.
ಅಲ್ಲದೆ, ಈ ಲೇಖನದ ಮೂಲಕ, ನೀವು ಐಟಿಆರ್ ಫೈಲ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಹೇಗೆ ಫೈಲ್ ಮಾಡಬಹುದು ಎಂಬುದರ ಕುರಿತು ವಿವರವಾದ, ಹಂತ-ಹಂತದ ಅಂಶಗಳನ್ನು ನಾವು ನಿಮಗೆ ನೀಡುತ್ತೇವೆ. ಐಟಿಆರ್-4 ಫಾರ್ಮ್‌ನ ಪ್ರಮುಖ ವಿವರಗಳಿಂದ ಪ್ರಾರಂಭಿಸೋಣ.
ಐಟಿಆರ್-4(ITR-4) ಫಾರ್ಮ್ ಎಂದರೇನು?
ಐಟಿಆರ್-4 ಸುಗಮ್ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಫಾರ್ಮ್‌ಗಳಲ್ಲಿ ಒಂದಾಗಿದೆ. ಇದು ಪ್ರಿಸಂಪ್ಟಿವ್ ಇನ್‌ಕಮ್ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಂಡಿರುವ ಟ್ಯಾಕ್ಸ್‌ಪೇಯರ್‌ಗಳಿಗೆ. ಈ ಸ್ಕೀಮ್ ಅನ್ನು ಸೆಕ್ಷನ್ 44AD, ವಿಭಾಗ 44AE, ಮತ್ತು ಸೆಕ್ಷನ್ 44ADAನಲ್ಲಿ ವಿವರಿಸಲಾಗಿದೆ. ಆದಾಗ್ಯೂ, ಬಿಸಿನೆಸ್ ಟರ್ನ್ಓವರ್ 44AD ಸಂದರ್ಭದಲ್ಲಿ ₹2 ಕೋಟಿಗಳನ್ನು ಮತ್ತು 44AE ಸಂದರ್ಭದಲ್ಲಿ 50 ಲಕ್ಷಗಳನ್ನು ಮೀರಿದರೆ ಅಸೆಸ್ಸೀ ಆರ್ಥಿಕ ವರ್ಷದ ಯಾವುದೇ ಸಮಯದಲ್ಲಿ 10ಕ್ಕಿಂತ ಹೆಚ್ಚು ವೆಹಿಕಲ್‌ಗಳನ್ನು ಹೊಂದಿದ್ದರೆ ಟ್ಯಾಕ್ಸ್‌ಪೇಯರ್ ಐಟಿಆರ್-3 ಅನ್ನು ಫೈಲ್ ಮಾಡಬೇಕಾಗುತ್ತದೆ.
ಐಟಿಆರ್-4(ITR-4) ಸ್ಟ್ರಕ್ಚರ್
ಐಟಿಆರ್-4(ITR-4) ಫಾರ್ಮ್‌ನ ಸ್ಟ್ರಕ್ಚರ್ ಏನು?
ಐಟಿಆರ್-4 ಫಾರ್ಮ್ ಅನ್ನು ಹಲವಾರು ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಭಾಗವು ವ್ಯಕ್ತಿಯ ಟ್ಯಾಕ್ಸ್ ಡಿಕ್ಲರೇಷನ್‌ನ ವಿವಿಧ ಅಂಶಗಳ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುತ್ತದೆ. ಐಟಿಆರ್-4 ಸ್ಟ್ರಕ್ಚರ್ ಅನ್ನು ನೋಡೋಣ!
- ಭಾಗ ಎ ಹೆಸರು, ಜನನ ದಿನಾಂಕ ಮತ್ತು ವಿಳಾಸದಂತಹ ಎಲ್ಲಾ ಸಾಮಾನ್ಯ ಮಾಹಿತಿಯನ್ನು ಒಳಗೊಂಡಿದೆ
- ಭಾಗ ಬಿ ಸ್ಯಾಲರಿ, ಮನೆ ಪ್ರಾಪರ್ಟಿ, ಇತರ ಮೂಲಗಳಿಂದ ಬರುವ ಇನ್‌ಕಮ್‌ನಂತಹ ಐದು ಪಾವತಿ ವಿಭಾಗದಿಂದ ಬರುವ ಗ್ರಾಸ್ ಇನ್‌ಕಮ್ ಅನ್ನು ಒಳಗೊಂಡಿದೆ
- ಭಾಗ ಸಿ ಡಿಡಕ್ಷನ್‌ಗಳು ಮತ್ತು ಒಟ್ಟು ಟ್ಯಾಕ್ಸೇಬಲ್ ಇನ್‌ಕಮ್‌ಗಾಗಿ ಇದೆ
- ಭಾಗ ಡಿ ಟ್ಯಾಕ್ಸ್ ಸ್ಟೇಟಸ್ ಮತ್ತು ಟ್ಯಾಕ್ಸ್ ಲೆಕ್ಕಾಚಾರಗಳಿಗೆ ಇದೆ
- ಶೆಡ್ಯೂಲ್ ಬಿಪಿ ಬಿಸಿನೆಸ್ ಅಥವಾ ವೃತ್ತಿಯಿಂದ ಬರುವ ಇನ್‌ಕಮ್ ಮೇಲಿನ ವಿವರಗಳನ್ನು ಹೊಂದಿದೆ
- ಶೆಡ್ಯೂಲ್ ಐಟಿ ಮುಂಗಡ ಟ್ಯಾಕ್ಸ್ ಮತ್ತು ಸ್ವಯಂ ಮೌಲ್ಯಮಾಪನ ಟ್ಯಾಕ್ಸ್ ಪೇಮೆಂಟ್‌ಗಳ ವಿವರಗಳನ್ನು ಒಳಗೊಂಡಿದೆ
- ಶೆಡ್ಯೂಲ್ ಟಿಸಿಎಸ್ ಮೂಲದಲ್ಲಿ ಸಂಗ್ರಹಿಸಲಾದ ಟ್ಯಾಕ್ಸ್‌ನ ವಿವರಗಳನ್ನು ಹೊಂದಿದೆ
- ಶೆಡ್ಯೂಲ್ ಟಿಡಿಎಸ್-1 ಸ್ಯಾಲರಿಯಿಂದ ಮೂಲದಲ್ಲಿ ಟ್ಯಾಕ್ಸ್ ಡಿಡಕ್ಷನ್ ಬಗ್ಗೆ ವಿವರಗಳನ್ನು ಹೊಂದಿದೆ
- ಶೆಡ್ಯೂಲ್ ಟಿಡಿಎಸ್-2 ಸ್ಯಾಲರಿಯನ್ನು ಹೊರತುಪಡಿಸಿ ಯಾವುದೇ ಇನ್‌ಕಮ್ ಮೂಲದ ಮೇಲಿನ ಮೂಲದಲ್ಲಿ ಡಿಡಕ್ಟ್ ಮಾಡಲಾದ ಟ್ಯಾಕ್ಸ್‌ಗಗಳನ್ನು ನಿರ್ದಿಷ್ಟಪಡಿಸುತ್ತದೆ.
ಐಟಿಆರ್-4(ITR-4) ಫಾರ್ಮ್ ಅನ್ನು ಫೈಲ್ ಮಾಡಲು ಯಾರು ಅರ್ಹರು?
ಐಟಿಆರ್-4ಗೆ ಯಾರು ಅರ್ಹರು ಎಂಬ ಪಟ್ಟಿ ಇಲ್ಲಿದೆ. ನೀವು ಈ ವರ್ಗದ ಅಡಿಯಲ್ಲಿ ಬಂದರೆ, ನೀವು ಐಟಿಆರ್-4 ಆಯ್ಕೆಯ ಅಡಿಯಲ್ಲಿ ನಿಮ್ಮ ಇನ್‌ಕಮ್ ಅನ್ನು ಘೋಷಿಸಬೇಕು.
ಐಟಿಆರ್-4 ಅನ್ನು ಆರ್‌ಎನ್‌ಓಆರ್ (ರೆಸಿಡೆಂಟ್ ಅದರ್ ದ್ಯಾನ್ ನಾಟ್ ಆರ್ಡಿನರೀಲಿ ರೆಸಿಡೆಂಟ್) ಅಥವಾ ಲಿಮಿಟೆಡ್ ಲಯಬಿಲಿಟಿ ಪಾರ್ಟ್‌ನರ್‌ಶಿಪ್ ಅಲ್ಲದ ಸಂಸ್ಥೆ ಆದರೆ ನಿವಾಸಿಯಾಗಿರುವ ಮತ್ತು 2021-22ರ ವರ್ಷಕ್ಕೆ ₹50 ಲಕ್ಷಗಳನ್ನು ಮೀರದ ಇನ್‌ಕಮ್ ಅನ್ನು ಹೊಂದಿರುವ ವ್ಯಕ್ತಿಗಳು ಅಥವಾ ಹಿಂದೂ ಅವಿಭಕ್ತ ಕುಟುಂಬಗಳು ಫೈಲ್ ಮಾಡಬಹುದು. ಅಲ್ಲದೆ, ಅವರ ಆದಾಯವು ಈ ಕೆಳಗಿನ ವಿಭಾಗದ ಅಡಿಯಲ್ಲಿ ಬರುತ್ತದೆ:
- ₹2 ಕೋಟಿಗಳವರೆಗಿನ ಗ್ರಾಸ್ ಟರ್ನ್‌ಓವರ್ ಹೊಂದಿರುವ ಬಿಸಿನೆಸ್‌ನಿಂದ ಪಡೆದ ಇನ್‌ಕಮ್ ಅನ್ನು ಸೆಕ್ಷನ್ 44AD ಅಡಿಯಲ್ಲಿ ಪ್ರಿಸಂಪ್ಟಿವ್ ಆಧಾರದ ಮೇಲೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ. ಪರ್ಯಾಯವಾಗಿ, ಸೆಕ್ಷನ್ 44AE ಅಡಿಯಲ್ಲಿ, ಇದು ಹತ್ತು ಸರಕು ಸಾಗಣೆಗಳಿಂದ ಬರುವ ಇನ್‌ಕಮ್‌ಗೆ ಸಂಬಂಧಿಸಿದೆ.
- ₹50 ಲಕ್ಷದವರೆಗಿನ ಗ್ರಾಸ್ ರಸೀದಿಯೊಂದಿಗೆ ಸೆಕ್ಷನ್ 44ADA ಅಡಿಯಲ್ಲಿ ಪ್ರಿಸಂಪ್ಟಿವ್ ಆಧಾರದ ಮೇಲೆ ಕ್ಯಾಲ್ಕುಲೇಟ್ ಮಾಡುವ ಇನ್‌ಕಮ್‌ನ ವೃತ್ತಿಯಿಂದ ಪಡೆದ ಇನ್‌ಕಮ್.
- ಸ್ಯಾಲರಿ ಅಥವಾ ಪೆನ್ಷನ್‌ನಿಂದ ಬರುವ ಇನ್‌ಕಮ್
- ಒಂದು ಮನೆ ಪ್ರಾಪರ್ಟಿಯಿಂದ ಇನ್‌ಕಮ್
- ಇತರ ಮೂಲಗಳ ಅಡಿಯಲ್ಲಿ ಟ್ಯಾಕ್ಸೇಬಲ್ ಆಗುವ ಫ್ಯಾಮಿಲಿ ಪೆನ್ಷನ್‌ನಿಂದ ಬರುವ ಇಂಟರೆಸ್ಟ್ ಇನ್‌ಕಮ್
ಗಮನಿಸಬೇಕಾದ ಅಂಶಗಳು:
- ಸೆಕ್ಷನ್ 44AD, 44AE, 44ADA ಅಡಿಯಲ್ಲಿ ಕಂಪ್ಯೂಟ್ ಮಾಡಲಾದ ಪ್ರಿಸಂಪ್ಟಿವ್ ಇನ್‌ಕಮ್ ಅನ್ನು ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರತಿ ನಷ್ಟ, ಅಲೋಯನ್ಸ್, ಡೆಪ್ರಿಸಿಯೇಷನ್ ಅಥವಾ ಡಿಡಕ್ಷನ್ ಅನ್ನು ಪರಿಗಣಿಸಿದ ನಂತರ ಕ್ಯಾಲ್ಕುಲೇಟ್ ಮಾಡಲಾಗುತ್ತದೆ ಎಂದು ಭಾವಿಸಲಾಗಿದೆ.
- ಸಂಗಾತಿಯ ಅಥವಾ ಮೈನರ್ ಮಗುವಿನ ಇನ್‌ಕಮ್ ಅನ್ನು ಅಸೆಸ್ಸೀ ಇನ್‌ಕಮ್‌ನೊಂದಿಗೆ ಸೇರಿಸಬೇಕಾದರೆ, ಕ್ಲಬ್ ಮಾಡಿ ಇನ್‌ಕಮ್ ₹50 ಲಕ್ಷದ ಬ್ರಾಕೆಟ್‌ನೊಳಗೆ ಬಂದರೆ ಈ ಫಾರ್ಮ್ ಅನ್ನು ಬಳಸಿ.
ಇವು ಐಟಿಆರ್-4 ಅರ್ಹತಾ ನಿಯಮಗಳು.
ಐಟಿಆರ್-4(ITR-4) ಫಾರ್ಮ್ ಫೈಲ್ ಮಾಡಲು ಯಾವ ವ್ಯಕ್ತಿಗಳು ಅರ್ಹರಲ್ಲ?
ಐಟಿಆರ್-4 ಫಾರ್ಮ್ ಅನ್ನು ಯಾರು ಫೈಲ್ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾದರೂ, ಈ ಫಾರ್ಮ್ ಅನ್ನು ಫೈಲ್ ಮಾಡುವುದು ಅಗತ್ಯವಿಲ್ಲದ ವ್ಯಕ್ತಿಗಳ ವರ್ಗವೂ ಇದೆ. 2021-22ರ ವಾರ್ಷಿಕ ವರ್ಷಕ್ಕೆ ಈ ಜನರು ಯಾರು ಎಂಬುದನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
ಐಟಿಆರ್-4 ರಿಟರ್ನ್ಸ್ ಅನ್ನು ಈ ಕೆಳಗಿನ ವ್ಯಕ್ತಿಯು ಫೈಲ್ ಮಾಡಬೇಕಾಗಿಲ್ಲ:
- ಭಾರತದ ಹೊರಗೆ ಇರುವ ಯಾವುದೇ ಖಾತೆಯಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿದವರು
- 2020-21ನೇ ಸಾಲಿನಲ್ಲಿ ಪಟ್ಟಿ ಮಾಡದ ಈಕ್ವಿಟಿ ಶೇರುಗಳನ್ನು ಹೊಂದಿರುವವರು
- ಭಾರತದ ಹೊರಗಿನ ಯಾವುದೇ ಮೂಲದಿಂದ ಬರುವ ಇನ್‌ಕಮ್
- ಒಂದು ಕಂಪನಿಯ ಡೈರೆಕ್ಟರ್ ಆಗಿರುವವರು
- ಭಾರತದ ಹೊರಗೆ ಇರುವ ಯಾವುದೇ ಹಣಕಾಸು ಅಸೆಟ್ ಅನ್ನು ಹೊಂದಿರುವವರು
ಅಲ್ಲದೆ, ಸೆಕ್ಷನ್ B ಪ್ರಕಾರ, ಒಬ್ಬ ವ್ಯಕ್ತಿಯು ಹಿಂದಿನ ವರ್ಷದಲ್ಲಿ ಪಡೆದ ಈ ಕೆಳಗಿನ ಯಾವುದೇ ವರ್ಗಗಳಿಂದ ಇನ್‌ಕಮ್ ಅನ್ನು ಹೊಂದಿದ್ದರೆ ಈ ರಿಟರ್ನ್ಸ್ ಅನ್ನು ಬಳಸಲು ಸಾಧ್ಯವಿಲ್ಲ:
- ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ 44AD, 44ADA, 44AE ಅಡಿಯಲ್ಲಿ ಕ್ಯಾಲ್ಕುಲೇಟ್ ಮಾಡುವ ಅಗತ್ಯವಿಲ್ಲದ ಬಿಸಿನೆಸ್‌ಗಳು ಅಥವಾ ವೃತ್ತಿಗಳಿಂದ ಬರುವ ಇನ್‌ಕಮ್, ಲಾಭಗಳು ಅಥವಾ ಗೇನ್ಸ್, ಉದಾಹರಣೆಗೆ ಬ್ರೋಕರೇಜ್, ಕಮಿಷನ್, ಏಜೆನ್ಸಿ ಅಥವಾ ಊಹಾತ್ಮಕ ಬಿಸಿನೆಸ್‌ನಿಂದ ಬರುವ ಇನ್‌ಕಮ್‌ಗಳು
- ಕ್ಯಾಪಿಟಲ್ ಗೇನ್ಸ್
- ಒಂದಕ್ಕಿಂತ ಹೆಚ್ಚು ಮನೆ ಪ್ರಾಪರ್ಟಿಯಿಂದ ಇನ್‌ಕಮ್
- ಲಾಟರಿಯಲ್ಲಿ ಗೆದ್ದಿದ್ದರಿಂದ ಬರುವ ಇನ್‌ಕಮ್
- ರೇಸ್ ಕುದುರೆಗಳನ್ನು ಹೊಂದುವುದರಿಂದ ಅಥವಾ ನಿರ್ವಹಿಸುವುದರಿಂದ ಬರುವ ಇನ್‌ಕಮ್
- ಸೆಕ್ಷನ್ 115BBDA ಅಥವಾ ಸೆಕ್ಷನ್ 115BBEಯಂತಹ ವಿಶೇಷ ಪ್ರಕರಣಗಳ ಅಡಿಯಲ್ಲಿ ಟ್ಯಾಕ್ಸೇಬಲ್ ಆಗಿರುವ ಇನ್‌ಕಮ್
- ಸೆಕ್ಷನ್ 5A ಅಡಿಯಲ್ಲಿ ಹಂಚಬೇಕಾದ ಇನ್‌ಕಮ್
- ₹5,000ಕ್ಕಿಂತ ಹೆಚ್ಚಿನ ಕೃಷಿಯಿಂದ ಬರುವ ಇನ್‌ಕಮ್
ಈ ಕೆಳಗಿನ ವರ್ಗಗಳ ಅಡಿಯಲ್ಲಿ ನಷ್ಟ/ಡಿಡಕ್ಷನ್/ಪರಿಹಾರ/ಟ್ಯಾಕ್ಸ್ ಕ್ರೆಡಿಟ್‌ನ ಯಾವುದೇ ಕ್ಲೈಮ್‌ಗಳನ್ನು ಹೊಂದಿದ್ದರೆ ವ್ಯಕ್ತಿಯು ಈ ಫಾರ್ಮ್ ಅನ್ನು ಬಳಸಲು ಸಾಧ್ಯವಿಲ್ಲ ಎಂದು ಸೆಕ್ಷನ್ C ನಿರ್ದಿಷ್ಟಪಡಿಸುತ್ತದೆ:
- ಯಾವುದೇ ಇನ್‌ಕಮ್ ಹೆಡ್ ಅಡಿಯಲ್ಲಿ ತರಲಾದ ಅಥವಾ ಮುಂದುವರಿಯುವ ಯಾವುದೇ ನಷ್ಟ
- ಇತರ ಮೂಲಗಳಿಂದ ಬರುವ ಇನ್‌ಕಮ್ ಅಡಿಯಲ್ಲಿ ನಷ್ಟ
- ಸೆಕ್ಷನ್ 90, 90A, ಅಥವಾ 91ರಿಂದ ಕ್ಲೈಮ್ ಮಾಡಲಾದ ಯಾವುದೇ ಪರಿಹಾರ
- ಸೆಕ್ಷನ್ 5ರ ಅಡಿಯಲ್ಲಿನ ಯಾವುದೇ ಡಿಡಕ್ಷನ್ ಕ್ಲೈಮ್
- ಬೇರೆ ಯಾವುದೇ ವ್ಯಕ್ತಿಯ ಕೈಯಲ್ಲಿ ಮೂಲದಲ್ಲಿ ಡಿಡಕ್ಟ್ ಮಾಡಲಾದ ಟ್ಯಾಕ್ಸ್‌ನ ಯಾವುದೇ ಡಿಡಕ್ಷನ್ ಕ್ಲೈಮ್
ಈ ವರ್ಗಗಳ ಅಡಿಯಲ್ಲಿ ಬರುವ ವ್ಯಕ್ತಿಗಳು ಐಟಿಆರ್ -4 ಕೆಟಗರಿಯ ಅಡಿಯಲ್ಲಿ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಬೇಕಾಗಿಲ್ಲ.
ಐಟಿಆರ್-4(ITR-4) ಫಾರ್ಮ್ ಫೈಲ್ ಮಾಡುವುದು ಹೇಗೆ?
ನೀವು ಐಟಿಆರ್-4 ಫಾರ್ಮ್ ಅನ್ನು ಫೈಲ್ ಮಾಡಲು ಎರಡು ಮಾರ್ಗಗಳಿವೆ. ಒಂದು ಆನ್‌ಲೈನ್ ವಿಧಾನದ ಮೂಲಕ, ಮತ್ತು ಇನ್ನೊಂದು ಆಫ್‌ಲೈನ್ ಮೋಡ್ ಮೂಲಕ. ಐಟಿಆರ್-4 ಅನ್ನು ಹೇಗೆ ಫೈಲ್ ಮಾಡುವುದು ಎಂಬುದನ್ನು ಕಂಡುಹಿಡಿಯೋಣ.
ಐಟಿಆರ್-4(ITR-4) ಫೈಲಿಂಗ್‌ನ ಆಫ್‌ಲೈನ್ ವಿಧಾನ
ಈ ಕೆಳಗಿನ ಸಂದರ್ಭಗಳಲ್ಲಿ ಮಾತ್ರ ನೀವು ಐಟಿಆರ್-4 ಫಾರ್ಮ್ ಅನ್ನು ಆಫ್‌ಲೈನ್‌ನಲ್ಲಿ ಫೈಲ್ ಮಾಡಬಹುದು:
- ನೀವು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್ ಸಿಟಿಜನ್ ಆಗಿದ್ದರೆ
- ನಿಮ್ಮ ಇನ್‌ಕಮ್ ₹5 ಲಕ್ಷಕ್ಕಿಂತ ಹೆಚ್ಚಿಲ್ಲದಿದ್ದರೆ, ಮತ್ತು ಐಟಿಆರ್‌ನಲ್ಲಿ ರಿಫಂಡ್ ಅನ್ನು ಕ್ಲೈಮ್ ಮಾಡುವ ಅಗತ್ಯವಿಲ್ಲದವರು
ಐಟಿಆರ್ -4 ಫಾರ್ಮ್ ಅನ್ನು ನೀವು ಹೇಗೆ ಫೈಲ್ ಮಾಡಬಹುದು ಎಂಬ ಪ್ರೊಸೆಸ್ ಇಲ್ಲಿದೆ.
- ಐಟಿಆರ್ -4 ಅನ್ನು ಫಿಸಿಕಲ್ ಪೇಪರ್‌ನಲ್ಲಿ ಒದಗಿಸಿ
- ಬಾರ್-ಕೋಡ್ ಮಾಡಿದ ರಿಟರ್ನ್ ಒದಗಿಸಿ
ಫಿಸಿಕಲ್ ಪೇಪರ್ ಅನ್ನು ಸ್ವೀಕರಿಸಿದ ನಂತರ ಇನ್‌ಕಮ್ ಟ್ಯಾಕ್ಸ್ ಇಲಾಖೆ ಸ್ವೀಕೃತಿಯನ್ನು ನೀಡುತ್ತದೆ. ಐಟಿಆರ್-4 ಅನ್ನು ಆಫ್‌ಲೈನ್‌ನಲ್ಲಿ ಹೇಗೆ ಫೈಲ್ ಮಾಡುವುದು ಎನ್ನುವುದಕ್ಕೆ ಇದು ಉತ್ತರಿಸುತ್ತದೆ.
ಮುಂದೆ, ಆನ್‌ಲೈನ್ ಪ್ರೊಸೆಸ್ ಬಗ್ಗೆ ತಿಳಿಯಿರಿ.
ಐಟಿಆರ್-4(ITR-4) ಫೈಲ್ ಮಾಡುವ ಆನ್‌ಲೈನ್ ವಿಧಾನ
ಇ-ಫೈಲಿಂಗ್ ವೆಬ್ ಪೋರ್ಟಲ್ https://www.incometax.gov.in/iec/foportal/ನಲ್ಲಿ ಐಟಿಆರ್-4 ಫಾರ್ಮ್ ಅನ್ನು ವಿದ್ಯುನ್ಮಾನವಾಗಿ ಫೈಲ್ ಮಾಡಿ. ನೀವು ಈ ಕೆಳಗಿನ ಯಾವುದೇ ರೀತಿಯಲ್ಲಿ ಫೈಲಿಂಗ್‌ಗಳನ್ನು ವೆರಿಫೈ ಮಾಡಬಹುದು:
- ವೆರಿಫಿಕೇಷನ್ ಭಾಗಕ್ಕೆ ಡಿಜಿಟಲ್ ಸಹಿ ಮಾಡುವುದರ ಮೂಲಕ
- ಪ್ರಮಾಣೀಕರಿಸಲು ಇವಿಸಿ ಅಥವಾ ಎಲೆಕ್ಟ್ರಾನಿಕ್ ವೆರಿಫಿಕೇಷನ್ ಕೋಡ್ ಬಳಸುವುದರ ಮೂಲಕ
- ಆಧಾರ್ ಓಟಿಪಿ ಬಳಸುವುದರ ಮೂಲಕ
- ಐಟಿಆರ್-ವಿ ಆಗಿರುವ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ವೆರಿಫಿಕೇಷನ್ ಫಾರ್ಮ್ ಕಾಪಿಯನ್ನು ಭರ್ತಿ ಮಾಡಿ ಮತ್ತು ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸುವುದು:
ಸೆಂಟ್ರಲೈಸ್‌ಡ್ ಪ್ರೊಸೆಸಿಂಗ್ ಸೆಂಟರ್, ಇನ್‌ಕಮ್ ಟ್ಯಾಕ್ಸ್ ಇಲಾಖೆ, ಬೆಂಗಳೂರು- 560500, ಕರ್ನಾಟಕ.
ಫಾರ್ಮ್ ಫೈಲ್ ಮಾಡಿದ 30 ದಿನಗಳ ಒಳಗೆ ಈ ವೆರಿಫಿಕೇಷನ್ ಫಾರ್ಮ್ ಐಟಿಆರ್-ವಿ ಕಚೇರಿಯನ್ನು ತಲುಪಬೇಕು. ಅಲ್ಲದೆ, ಇ-ಫೈಲಿಂಗ್‌ಗಾಗಿ ರಿಜಿಸ್ಟರ್ ಮಾಡಲು ನೀವು ಬಳಸಿದ ಇಮೇಲ್‌ನಲ್ಲಿಯೇ ಸಿಪಿಸಿ ನಿಮಗೆ ಐಟಿಆರ್-ವಿ ಸ್ವೀಕೃತಿಯನ್ನು ದೃಢಪಡಿಸುತ್ತದೆ.
ಆನ್‌ಲೈನ್‌ನಲ್ಲಿ ಐಟಿಆರ್-4 ಫೈಲ್ ಮಾಡುವುದು ಹೇಗೆ?
ನಿಮ್ಮ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಕಾಪಿ ನಿಮಗೆ ಸಿಗದಿದ್ದರೆ ಏನು ಮಾಡಬೇಕು?
2021-22ರ ವಾರ್ಷಿಕ ವರ್ಷಕ್ಕೆ ಐಟಿಆರ್-4 ಫೈಲಿಂಗ್‌ನಲ್ಲಿ ಕೆಲವು ಪ್ರಮುಖ ಬದಲಾವಣೆಗಳಿವೆ. ಅವು ಈ ಕೆಳಗಿನಂತೆ ತೋರಿಸಲಾಗಿದೆ:
- ಈ ಕೆಳಗಿನ ಮಾನದಂಡಗಳನ್ನು ಪೂರೈಸುವ ವೈಯಕ್ತಿಕ ಟ್ಯಾಕ್ಸ್‌ಪೇಯರ್‌ಗಳು ಐಟಿಆರ್-1 ಅನ್ನು ಸಹ ಭರ್ತಿ ಮಾಡಬೇಕು:
- ಬ್ಯಾಂಕಿನಲ್ಲಿ ₹1 ಕೋಟಿಗಿಂತ ಹೆಚ್ಚಿನ ಕ್ಯಾಶ್ ಡೆಪಾಸಿಟ್ ಮಾಡುವವರು
- ವಿದೇಶ ಪ್ರಯಾಣಕ್ಕೆ ₹2 ಲಕ್ಷಕ್ಕಿಂತ ಹೆಚ್ಚಿನ ವೆಚ್ಚ ಭರಿಸುವವರು
- ವಿದ್ಯುತ್‌ಗಾಗಿ ₹1 ಲಕ್ಷಕ್ಕಿಂತ ಹೆಚ್ಚಿನ ವೆಚ್ಚ
ಟ್ಯಾಕ್ಸ್‌ಪೇಯರ್ ವೆಚ್ಚ ಅಥವಾ ಡೆಪಾಸಿಟ್ ಅಮೌಂಟ್ ಅನ್ನು ಸೂಚಿಸಬೇಕು.
- ಭಾಗ ಎಯಲ್ಲಿ, "ಸರ್ಕಾರಿ" ಚೆಕ್ ಬಾಕ್ಸ್ ಅನ್ನು "ಕೇಂದ್ರ ಸರ್ಕಾರ" ಮತ್ತು "ರಾಜ್ಯ ಸರ್ಕಾರ" ಎಂದು ಬದಲಾಯಿಸಲಾಗಿದೆ.
- "ನೇಚರ್ ಆಫ್ ಎಂಪ್ಲಾಯ್‌ಮೆಂಟ್"ನಲ್ಲಿ, "ನಾಟ್ ಅಪ್ಲಿಕೇಬಲ್" ಎಂಬ ಚೆಕ್ ಬಾಕ್ಸ್ ಅನ್ನು ಪರಿಚಯಿಸಲಾಗಿದೆ.
- ಈ ಸೆಕ್ಷನ್ ಅಡಿಯಲ್ಲಿ ಸಲ್ಲಿಸಿದ ರಿಟರ್ನ್ಸ್ ಅನ್ನು ಎರಡು ಕೆಟಗರಿಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ "ನಾರ್ಮಲ್ ಫೈಲಿಂಗ್" ಮತ್ತು "ಫೈಲ್‌ಡ್ ರೆಸ್ಪಾನ್ಸಸ್ ಟು ನೋಟಿಸಸ್" ಕೆಟಗರಿಗಳು.
- ಟ್ಯಾಕ್ಸ್ ಡಿಡಕ್ಷನ್‌ಗೆ ಇರುವ ಶೆಡ್ಯೂಲ್ VI-Aನಲ್ಲಿ ಕೆಲವು ಬದಲಾವಣೆಗಳಿವೆ. 80EEA ಮತ್ತು 80EEB ಅಡಿಯಲ್ಲಿ ಡಿಡಕ್ಷನ್‌ಗಳನ್ನು ಸೇರಿಸಲು ಇದನ್ನು ತಿದ್ದುಪಡಿ ಮಾಡಲಾಗಿದೆ. ಸೆಕ್ಷನ್ 80G ಅಡಿಯಲ್ಲಿ ದೇಣಿಗೆಗಳ ವಿವರಗಳನ್ನು ನಮೂದಿಸಲು ಡ್ರಾಪ್-ಡೌನ್ ಮೆನು ಇದೆ.
- 2020ರ ಏಪ್ರಿಲ್ 1ರಿಂದ 2020ರ ಜೂನ್ 30ರ ನಡುವೆ ಮಾಡಿದ ಇನ್‌ವೆಸ್ಟ್‌ಮೆಂಟ್, ಪೇಮೆಂಟ್‌ಗಳು ಅಥವಾ ವೆಚ್ಚಗಳಿಗಾಗಿ ಟ್ಯಾಕ್ಸ್ ಡಿಡಕ್ಷನ್ ವಿವರಗಳು.
- ಶೆಡ್ಯೂಲ್ ಬಿಪಿ(BP)ಯಲ್ಲಿ, ದಿನಾಂಕದ ಮೊದಲು ಯಾವುದೇ ಎಲೆಕ್ಟ್ರಾನಿಕ್ ಮೋಡ್‌ನಿಂದ ಬರುವ ಆದಾಯವನ್ನು ಒಳಗೊಂಡಿರುವ ಗ್ರಾಸ್ ಟರ್ನ್‌ಓವರ್ ಅಥವಾ ರಸೀದಿಗಳು.
2021-22ರ ವಾರ್ಷಿಕ ವರ್ಷಕ್ಕೆ ಐಟಿಆರ್-4 ರಲ್ಲಿನ ಬದಲಾವಣೆಗಳು ಇವು.
ಕೊನೆಯಲ್ಲಿ ತಿಳಿಸುವುದಾದರೆ, ಐಟಿಆರ್-4 ಅನ್ನು ಫೈಲ್ ಮಾಡುವುದು ಹೇಗೆ ಮತ್ತು ಐಟಿಆರ್-4 ಎಂದರೇನು ಎಂದು ನಾವು ನಿಮಗೆ ಹೇಳಿದ್ದೇವೆ. ನಿಮ್ಮ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲಿಂಗ್ ಅನ್ನು ಇಂದೇ ಪೂರ್ಣಗೊಳಿಸಿ!
ಪದೇ ಪದೇ ಕೇಳಲಾದ ಪ್ರಶ್ನೆಗಳು
ಪ್ರೊಫೆಷನಲ್ ಸರ್ವೀಸ್ ಒದಗಿಸುವ ವ್ಯಕ್ತಿಯು ಪ್ರಿಸಂಪ್ಟಿವ್ ಸ್ಕೀಮ್ ಅನ್ನು ಪಡೆಯುತ್ತಾನೆಯೇ?
ಹೌದು, ₹50 ಲಕ್ಷಕ್ಕಿಂತ ಹೆಚ್ಚು ಗಳಿಸದ ಯಾವುದೇ ವೃತ್ತಿಪರರು ಐಟಿಆರ್-4ರ ಅಡಿಯಲ್ಲಿ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಬಹುದು. 44ADA ಅಡಿಯಲ್ಲಿ, ಇದನ್ನು ಸ್ವತಂತ್ರ ವೃತ್ತಿಪರರಿಗೂ ಕವರ್ ಮಾಡಲು ವಿಸ್ತರಿಸಲಾಗಿದೆ.
ರೆಸಿಡೆಂಟ್ ಬಟ್ ನಾಟ್ ಆರ್ಡಿನರೀಲಿ ರೆಸಿಡೆಂಟ್ ಎಂದರೆ ಅರ್ಥ ಏನು?
ಒಬ್ಬ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ 182 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಭಾರತದಲ್ಲಿದ್ದರೆ ಅಥವಾ ಅವನು ಆರ್ಥಿಕ ವರ್ಷದಲ್ಲಿ 60 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮತ್ತು ಹಿಂದಿನ ನಾಲ್ಕು ಆರ್ಥಿಕ ವರ್ಷಗಳಲ್ಲಿ 365 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಭಾರತದಲ್ಲಿದ್ದರೆ ಆತನನ್ನು ರೆಸಿಡೆಂಟ್(ನಿವಾಸಿ) ಎಂದು ಪರಿಗಣಿಸಲಾಗುತ್ತದೆ
ಒಬ್ಬ ವ್ಯಕ್ತಿಯು ಆರ್ಥಿಕ ವರ್ಷದ ಹಿಂದಿನ 10 ವರ್ಷದಲ್ಲಿ ಎರಡು ವರ್ಷ ನಿವಾಸಿಯಾಗಿದ್ದರೆ ಮತ್ತು ಅವನು ಏಳು ಆರ್ಥಿಕ ವರ್ಷಗಳಲ್ಲಿ 730 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಭಾರತದಲ್ಲಿದ್ದರೆ ಆತನನ್ನು ಆರ್ಡಿನರಿ ರೆಸಿಡೆಂಟ್ ಎಂದು ಪರಿಗಣಿಸಲಾಗುತ್ತದೆ.
ಆದಾಗ್ಯೂ, ಅವರು 1ನೇ ಪ್ರಾವಿಶನ್ ಅನ್ನು ಅನುಸರಿಸಿಕೊಂಡು ಆದರೆ 2ನೇ ಪ್ರಾವಿಶನ್ ಅನ್ನು ಅನುಸರಿಸದಿದ್ದರೆ ಅವರನ್ನು ರೆಸಿಡೆಂಟ್ ಎಂದು ಪರಿಗಣಿಸಲಾಗುತ್ತದೆ ಆದರೆ ಆರ್ಡಿನರಿ ರೆಸಿಡೆಂಟ್ ಅಲ್ಲ.