ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು
ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳ ಬಗ್ಗೆ ಎಲ್ಲವೂ
ಭಾರತೀಯ ಜನಗಣತಿ 2011 ರ ಪ್ರಕಾರ, ದೇಶದಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಟ್ಟು ಭಾರತೀಯರ ಸಂಖ್ಯೆ 10.38 ಕೋಟಿ ಆಗಿದೆ, ಇದು 2026 ಕ್ಕೆ 17.32 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಈ ಮಾಹಿತಿಯನ್ನು ಪರಿಗಣಿಸಿದಾಗ, ಉದ್ಭವಿಸುವ ಮುಂದಿನ ಮಹತ್ವದ ಪ್ರಶ್ನೆಯೆಂದರೆ ಇದರ ಪರಿಣಾಮವಾಗಿ ಏಳಬಹುದಾದ ಆರ್ಥಿಕ, ಸಾಮಾಜಿಕ ಮತ್ತು ಹೆಚ್ಚು ಮುಖ್ಯವಾಗಿ, ಹೆಲ್ತ್ ಕೇರ್ ಸವಾಲುಗಳು.
ಇಂತಹ ಲಯಬಿಲಿಟಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಸೀನಿಯರ್ ಸಿಟಿಜನ್ ಮತ್ತು ಸೂಪರ್ ಸೀನಿಯರ್ ಸಿಟಿಜನ್ ಟ್ಯಾಕ್ಸೇಶನ್ ಮೇಲಿನ ವಿನಾಯಿತಿ ಲಿಮಿಟ್ ಅನ್ನು ಮೌಲ್ಯಮಾಪನ ವರ್ಷ 2015-2016 ರಿಂದ ರಿವೈಸ್ ಮಾಡಲಾಗಿದೆ. ಇದಲ್ಲದೆ, ಸೀನಿಯರ್ ಮತ್ತು ಸೂಪರ್-ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಪ್ರಯೋಜನಗಳು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿವೆ.
ಆದರೆ ಭಾರತದಲ್ಲಿ ಯಾರನ್ನು ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್ ಎಂದು ಪರಿಗಣಿಸಲಾಗುತ್ತದೆ? ಬನ್ನಿ ನೋಡೋಣ.
ಭಾರತದಲ್ಲಿ ಯಾರನ್ನು ಸೀನಿಯರ್ ಸಿಟಿಜನ್ ಎಂದು ಪರಿಗಣಿಸಲಾಗುತ್ತದೆ?
ಇನ್ಕಮ್ ಟ್ಯಾಕ್ಸ್ ಪ್ರಕಾರ, ಸೀನಿಯರ್ ಸಿಟಿಜನ್ ಎಂದರೆ ಹಣಕಾಸು ವರ್ಷದ ಯಾವುದೇ ಸಮಯದಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚು, ಆದರೆ 80 ವರ್ಷಗಳಿಗಿಂತ ಕಡಿಮೆ ಇರುವ ನಿವಾಸಿ ವ್ಯಕ್ತಿ.
ಭಾರತದಲ್ಲಿ ಯಾರನ್ನು ಸೂಪರ್ ಸೀನಿಯರ್ ಸಿಟಿಜನ್ ಎಂದು ಪರಿಗಣಿಸಲಾಗುತ್ತದೆ?
ಸೂಪರ್ ಸೀನಿಯರ್ ಸಿಟಿಜನ್ ಎಂದರೆ ಹಣಕಾಸು ವರ್ಷದ ಯಾವುದೇ ಸಮಯದಲ್ಲಿ 80 ವರ್ಷ ಆಗಿರುವ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಬ್ಬ ನಿವಾಸಿ ವ್ಯಕ್ತಿ.
ಕೆಳಗಿನ ವಿವರಗಳು ಸೀನಿಯರ್ ಸಿಟಿಜನ್ ಮತ್ತು ಸೂಪರ್ ಸೀನಿಯರ್ ಸೀನಿಯರ್ ಸಿಟಿಜನ್‌ಗಳ ಸ್ಲ್ಯಾಬ್‌ಗಳು, ಅವುಗಳ ವಿನಾಯಿತಿಗಳು ಮತ್ತು ಅನ್ವಯವಾಗುವ ಟ್ಯಾಕ್ಸ್ ಪ್ರಯೋಜನಗಳನ್ನು ಒಳಗೊಂಡಿವೆ.
ಸೀನಿಯರ್ ಸಿಟಿಜನ್‌ಗಳಿಗಾಗಿ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಹಣಕಾಸು ವರ್ಷ 2023-24 (ಮೌಲ್ಯಮಾಪನ ವರ್ಷ 2024-25)ಕ್ಕಾಗಿ ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು
ಕೇಂದ್ರ ಬಜೆಟ್ 2023 ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಎಲ್ಲಾ ವೈಯಕ್ತಿಕ ಟ್ಯಾಕ್ಸ್ ಪೇಯರ್ ಗಳಿಗೆ ಅವರ ವಯಸ್ಸನ್ನು ಲೆಕ್ಕಿಸದೆ ಒಂದೇ ರೀತಿಯ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳನ್ನು ಪ್ರಸ್ತಾಪಿಸಿದೆ. ಇದು, ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ, ಏಪ್ರಿಲ್ 1, 2023 ರಿಂದ, 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಆದರೆ 80 ಕ್ಕಿಂತ ಕಡಿಮೆ ವಯಸ್ಸಿನ ಸೀನಿಯರ್ ಸಿಟಿಜನ್‌ಗಳು ಮತ್ತು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್ ಸಿಟಿಜನ್‌ಗಳು, 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಾವತಿಸುವ ಟ್ಯಾಕ್ಸ್ ಅನ್ನೇ ಪಾವತಿಸಬೇಕಾಗುತ್ತದೆ ಎಂದು ಸೂಚಿಸುತ್ತದೆ.
ಹಣಕಾಸು ವರ್ಷ2023-24 (ಮೌಲ್ಯಮಾಪನ ವರ್ಷ 2024-25)ಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು - ಹೊಸ ಟ್ಯಾಕ್ಸ್ ರೆಜಿಮ್ (ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಒಂದೇ)
ಹೊಸ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ, 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಟ್ಯಾಕ್ಸ್ ಪೇಯರ್ ಗಳು ಹಣಕಾಸು ವರ್ಷ 2023-24 ಗಾಗಿ ನೀಡಿರುವ ಟ್ಯಾಕ್ಸ್ ದರಗಳನ್ನು ಅನುಸರಿಸಬೇಕಾಗುತ್ತದೆ.
ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು | ಟ್ಯಾಕ್ಸೇಷನ್ ದರ |
---|---|
₹3,00,000 ವರೆಗೆ | ನಿಲ್ |
₹3,00,001 ಮತ್ತು ₹6,00,000 ನಡುವೆ | ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5% |
₹6,00,001 ಮತ್ತು ₹9,00,000 ನಡುವೆ | ₹6,00,000 ಮೀರಿದರೆ ₹15,000 + ನಿಮ್ಮ ಒಟ್ಟು ಆದಾಯದ 10% |
₹9,00,001 ಮತ್ತು ₹12,00,000 ನಡುವೆ | ₹₹9,00,000 ಮೀರಿದರೆ ₹45,000 + ನಿಮ್ಮ ಒಟ್ಟು ಆದಾಯದ 15% |
₹12,00,001 ಮತ್ತು ₹15,00,000 ನಡುವೆ | ₹12,00,000 ಮೀರಿದರೆ ₹90,000 + ನಿಮ್ಮ ಒಟ್ಟು ಆದಾಯದ 20% |
₹15,00,000ಕ್ಕಿಂತ ಹೆಚ್ಚು | ₹15,00,000 ಮೀರಿದರೆ ₹1,50,000 + ನಿಮ್ಮ ಒಟ್ಟು ಆದಾಯದ 30% |
ಹಣಕಾಸು ವರ್ಷ 2023-24 (ಮೌಲ್ಯಮಾಪನ ವರ್ಷ 2024-25) ಕ್ಕಾಗಿ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು - ಹಳೆಯ ಟ್ಯಾಕ್ಸ್ ರೆಜಿಮ್
ಹಣಕಾಸು ವರ್ಷ 2023-23 ಕ್ಕಾಗಿ ಹಳೆಯ ರೆಜಿಮ್ ಅನ್ನು ಆಯ್ಕೆ ಮಾಡುವ 60 ಅಥವಾ ಅದಕ್ಕಿಂತ ಹೆಚ್ಚಿನ ಆದರೆ 80 ಕ್ಕಿಂತ ಕಡಿಮೆ ವಯಸ್ಸಿನ ಸೀನಿಯರ್ ಸಿಟಿಜನ್‌ಗಳು ನೀಡಿರುವ ಇನ್ಕಮ್ ಟ್ಯಾಕ್ಸ್ ದರಗಳನ್ನು ಅನುಸರಿಸಬೇಕಾಗುತ್ತದೆ.
ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು | ಟ್ಯಾಕ್ಸೇಷನ್ ದರ |
---|---|
₹3,00,000 ವರೆಗೆ | ನಿಲ್ |
₹3,00,001 ರಿಂದ - ₹5,00,000 | ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5% |
₹5,00,001 ರಿಂದ - ₹10,00,000 | ₹5,00,000 ಮೀರಿದರೆ ₹10,000 + ನಿಮ್ಮ ಒಟ್ಟು ಆದಾಯದ 20% |
₹10,00,000ಕ್ಕಿಂತ ಹೆಚ್ಚು | ₹10,00,000 ಮೀರಿದರೆ ₹1,10,000 + ನಿಮ್ಮ ಒಟ್ಟು ಆದಾಯದ 30% |
ಇದರ ಜೊತೆ, ಸೀನಿಯರ್ ಸಿಟಿಜನ್‌ಗಳಿಗೆ ಹೆಚ್ಚುವರಿ ಹೆಲ್ತ್ ಮತ್ತು ಎಜುಕೇಷನ್ ಸೆಸ್ ಅನ್ನು ಸಹ 4% ರಲ್ಲಿ ವಿಧಿಸಲಾಗುತ್ತದೆ ಹಾಗೂ ಇದು ಕ್ಯಾಲ್ಕುಲೇಟ್ ಮಾಡಲಾದ ಟ್ಯಾಕ್ಸ್ ಮೊತ್ತಕ್ಕೆ ಅನ್ವಯವಾಗುತ್ತದೆ.
ಹಣಕಾಸು ವರ್ಷ 2023-24 (ಮೌಲ್ಯಮಾಪನ 2024-25) ಕ್ಕಾಗಿ ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು - ಹಳೆಯ ಟ್ಯಾಕ್ಸ್ ರೆಜಿಮ್
ಸೂಪರ್ ಸೀನಿಯರ್ ಸಿಟಿಜನ್ ವರ್ಗದ ಅಡಿಯಲ್ಲಿ ಬರುವ 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಹಣಕಾಸು ವರ್ಷ 2023-24 ಕ್ಕಾಗಿ ಹಳೆಯ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ ಟ್ಯಾಕ್ಸೇಶನ್ ದರವು ಈ ರೀತಿ ಇರುತ್ತದೆ:
ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು | ಟ್ಯಾಕ್ಸೇಷನ್ ದರ |
---|---|
₹5,00,000ವರೆಗೆ | ನಿಲ್ |
₹5,00,001 ರಿಂದ - ₹10,00,000 | ₹5,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 20% |
₹10,00,001ಕ್ಕಿಂತ ಹೆಚ್ಚು | ₹10,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 30% |
ಸೂಪರ್-ಸೀನಿಯರ್ ಸಿಟಿಜನ್‌ಗಳು ಕ್ಯಾಲ್ಕುಲೇಟ್ ಮಾಡಲಾದ ಟ್ಯಾಕ್ಸ್ ಮೊತ್ತದ ಮೇಲೆ ಹೆಚ್ಚುವರಿ 4% ಹೆಲ್ತ್ ಮತ್ತು ಎಜುಕೇಷನ್ ಸೆಸ್ ಅನ್ನು ಪಾವತಿಸಲು ಬಾಧ್ಯರಾಗಿರುತ್ತಾರೆ.
ಹಣಕಾಸು ವರ್ಷ 2022-23 (ಮೌಲ್ಯಮಾಪನ ವರ್ಷ 2023-24)ಕ್ಕಾಗಿ ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು
ಹಿಂದಿನ ಹಣಕಾಸು ವರ್ಷ 2022-23 ಕ್ಕೆ ಜುಲೈ 31 , 2023 ರವರೆಗೆ ರಿಟರ್ನ್ಸ್ ಫೈಲ್ ಮಾಡಬೇಕಾದ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಟ್ಯಾಕ್ಸ್ ಪೇಯರ್ ಗಳು, ಈ ಕೆಳಗಿನ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳನ್ನು ಗಮನಿಸಬೇಕು. ಈ ಸ್ಲ್ಯಾಬ್‌ಗಳು ಬಜೆಟ್ 2023 ಕ್ಕೆ ಮೊದಲು ಮಾತ್ರ ಅನ್ವಯವಾಗುತ್ತವೆ.
ಹಣಕಾಸು ವರ್ಷ 2022-23 (ಮೌಲ್ಯಮಾಪನ ವರ್ಷ 2023-24) ಕ್ಕಾಗಿ ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು - ಹೊಸ ಟ್ಯಾಕ್ಸ್ ರೆಜಿಮ್
ಹಣಕಾಸು ವರ್ಷ 2022-23 ಕ್ಕೆ, ಸೀನಿಯರ್ ಸಿಟಿಜನ್‌ಗಳಿಗೆ (ಅಂದರೆ, 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ (ಅಂದರೆ, 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಈ ಕೆಳಗಿನಂತಿವೆ:
ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು | ಟ್ಯಾಕ್ಸೇಷನ್ ದರ |
---|---|
₹2,50,000 ವರೆಗೆ | ನಿಲ್ |
₹2,50,001 ರಿಂದ ₹5,00,000 | ₹2,50,000 ಮೇಲೆ 5% |
₹5,00,001 ರಿಂದ ₹7,50,000 | ₹5,00,000 ಮೀರಿದರೆ ₹12,500 + 10% |
₹7,50,001 ರಿಂದ ₹10,00,00 | ₹37,500 + ₹7,50,000 ಮೀರಿದರೆ ₹37,500 + 15% |
₹10,00,001 ರಿಂದ ₹12,50,000 | ₹10,00,000 ಮೀರಿದರೆ ₹75,000 + 20% |
₹12,50,001 ರಿಂದ ₹15,00,000 | ₹12,50,000 ಮೀರಿದರೆ ₹1,25,000 + 25% |
₹15,00,000ಕ್ಕಿಂತ ಹೆಚ್ಚು | ₹15,00,000 ಮೀರಿದರೆ ₹1,87,500 + 30% |
ಹಣಕಾಸು ವರ್ಷ 2022-23 (ಮೌಲ್ಯಮಾಪನ ವರ್ಷ 2023-24)ಕ್ಕಾಗಿ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು- ಹಳೆಯ ಟ್ಯಾಕ್ಸ್ ರೆಜಿಮ್
60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತ್ತು 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೀನಿಯರ್ ಸಿಟಿಜನ್‌ಗಳು ಹಣಕಾಸು ವರ್ಷ 2022-23 2022-23 ರ ಹಳೆಯ ಟ್ಯಾಕ್ಸ್ ರೆಜಿಮ್ ನ ದರಗಳನ್ನು ಅನುಸರಿಸಬೇಕು:
ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು | ಟ್ಯಾಕ್ಸೇಷನ್ ದರ |
---|---|
₹3,00,000 ವರೆಗೆ | ನಿಲ್ |
₹3,00,001 ರಿಂದ - ₹5,00,000 | ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5% |
₹5,00,001 ರಿಂದ - ₹10,00,000 | ₹5,00,000 ಮೀರಿದರೆ ₹10,000 + ನಿಮ್ಮ ಒಟ್ಟು ಆದಾಯದ 20% |
₹10,00,000ಕ್ಕಿಂತ ಹೆಚ್ಚು | ₹10,00,000 ಮೀರಿದರೆ ₹1,10,000 + ನಿಮ್ಮ ಒಟ್ಟು ಆದಾಯದ 30% |
ಕ್ಯಾಲ್ಕುಲೇಟ್ ಮಾಡಾಲಾದ ಟ್ಯಾಕ್ಸ್ ಮೊತ್ತಕ್ಕೆ ಅನ್ವಯವಾಗುವ ಹೆಚ್ಚುವರಿ 4% ಹೆಲ್ತ್ ಮತ್ತು ಎಜುಕೇಷನ್ ಸೆಸ್ ಅನ್ನು ಸಹ ವಿಧಿಸಲಾಗುತ್ತದೆ.
ಹಣಕಾಸು ವರ್ಷ 2022-23 (ಮೌಲ್ಯಮಾಪನ ವರ್ಷ 2023-24)ಕ್ಕಾಗಿ ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು - ಹಳೆಯ ಟ್ಯಾಕ್ಸ್ ರೆಜಿಮ್
ಜುಲೈ 31, 2023 ರವರೆಗೆ ರಿಟರ್ನ್ಸ್ ಫೈಲ್ ಮಾಡಲು, 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್ ಸಿಟಿಜನ್‌ಗಳು ನೀಡಲಾದ ಟ್ಯಾಕ್ಸೇಶನ್ ದರವನ್ನು ಅನುಸರಿಸಬೇಕು:
ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು | ಟ್ಯಾಕ್ಸೇಷನ್ ದರ |
---|---|
₹5,00,000ವರೆಗೆ | ನಿಲ್ |
₹5,00,001 ರಿಂದ - ₹10,00,000 | ₹5,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 20% |
₹10,00,001ಕ್ಕಿಂತ ಹೆಚ್ಚು | ₹10,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 30% |
ಕ್ಯಾಲ್ಕುಲೇಟ್ ಮಾಡಲಾದ ಟ್ಯಾಕ್ಸ್ ಮೊತ್ತದ ಮೇಲೆ ಹೆಚ್ಚುವರಿ 4% ಹೆಲ್ತ್ ಮತ್ತು ಎಜುಕೇಷನ್ ಸೆಸ್ ಸಹ ಅನ್ವಯವಾಗುತ್ತದೆ.
₹50 ಲಕ್ಷ ಮೀರಿದರೆ ಆದಾಯಕ್ಕೆ ಸರ್‌ಚಾರ್ಜ್
ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳು ₹50 ಲಕ್ಷಕ್ಕಿಂತ ಹೆಚ್ಚಿನ ಟ್ಯಾಕ್ಸ್ ಗೆ ಒಳಪಡುವ ಆದಾಯವನ್ನು ಹೊಂದಿದ್ದರೆ, ಏಪ್ರಿಲ್ 1, 2023 ರಿಂದ ಅನ್ವಯವಾಗುವ, ಹಣಕಾಸು ವರ್ಷ 2023-24 ರ ಈ ಕೆಳಗಿನ ಸರ್‌ಚಾರ್ಜ್ ಪ್ರಕಾರ, ಟ್ಯಾಕ್ಸ್ ಅನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಟ್ಯಾಕ್ಸೇಬಲ್ ಇನ್ಕಮ್ | ಸರ್‌ಚಾರ್ಜ್ |
---|---|
₹ 50 ಲಕ್ಷಕ್ಕಿಂತ ಹೆಚ್ಚು ಆದರೆ ₹1 ಕೋಟಿಗಿಂತ ಕಡಿಮೆ | 10% |
₹1 ಕೋಟಿಗಿಂತ ಹೆಚ್ಚು ಆದರೆ ₹2 ಕೋಟಿಗಿಂತ ಕಡಿಮೆ | 15% |
₹2 ಕೋಟಿಗಿಂತ ಹೆಚ್ಚು | 25% |
ಹಣಕಾಸು ವರ್ಷ 2022-23 (ಮೌಲ್ಯಮಾಪನ ವರ್ಷ 2023-24)ಕ್ಕಾಗಿ, ₹5 ಕೋಟಿಗಿಂತ ಹೆಚ್ಚಿನ ಆದಾಯದ ಮೇಲಿನ ಅತ್ಯಧಿಕ ಸರ್‌ಚಾರ್ಜ್ 37% ಆಗಿತ್ತು, 2023 ರ ಕೇಂದ್ರ ಬಜೆಟ್‌ನಿಂದ 25% ಕ್ಕೆ ಕಡಿಮೆಯಾಗಿದೆ, ಇದು ಏಪ್ರಿಲ್ 1, 2023 ರಿಂದ ಜಾರಿಗೆ ಬಂದಿರುತ್ತದೆ ಎಂದು ಗಮನಿಸಿ.
60 ಅಥವಾ ಅದಕ್ಕಿಂತ ಹೆಚ್ಚಿನ ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳು
ಹಣಕಾಸು ವರ್ಷ 2023-24 ಕ್ಕಾಗಿ ಹೊಸ ರೆಜಿಮ್ ಅಡಿಯಲ್ಲಿ ಕೇಂದ್ರ ಬಜೆಟ್ 2023 ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳನ್ನು ರಿವೈಸ್ ಮಾಡಿದ ನಂತರ, ಸೀನಿಯರ್ ಸಿಟಿಜನ್‌ಗಳಿಗೆ ಮೂಲ ವಿನಾಯಿತಿ ಲಿಮಿಟ್ ಗಳು ಎರಡೂ ಟ್ಯಾಕ್ಸ್ ರೆಜಿಮ್ ಗಳಿಗೆ ಒಂದೇ ಆಗಿವೆ, ಅಂದರೆ ₹3 ಲಕ್ಷಗಳು. ಹಣಕಾಸು ವರ್ಷ 2022-23 ರಲ್ಲಿ, ಹೊಸ ಟ್ಯಾಕ್ಸ್ ರೆಜಿಮ್ ನ ಮೂಲ ವಿನಾಯಿತಿ ಲಿಮಿಟ್ ₹2.5 ಲಕ್ಷಗಳಾಗಿತ್ತು.
80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳು
ಎರಡೂ ಟ್ಯಾಕ್ಸ್ ರೆಜಿಮ್ ಗಳಲ್ಲಿ ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಮೂಲ ವಿನಾಯಿತಿ ಲಿಮಿಟ್ ಗಳು ವಿಭಿನ್ನವಾಗಿವೆ. ಕೇಂದ್ರ ಬಜೆಟ್ 2023 ಹೊಸ ರೆಜಿಮ್ ಅಡಿಯಲ್ಲಿ ₹ 3 ಲಕ್ಷಗಳ ಮೂಲ ಆದಾಯ ವಿನಾಯಿತಿ ಲಿಮಿಟ್ ಅನ್ನು ಪ್ರಸ್ತಾಪಿಸಿತು, ಇದು ಹಣಕಾಸು ವರ್ಷ 2022-23ಕ್ಕೆ ₹2.5 ಲಕ್ಷವಾಗಿತ್ತು.
ಹಳೆಯ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ, ಅವರು ಎರಡೂ ಹಣಕಾಸು ವರ್ಷಗಳಿಗೆ ₹5 ಲಕ್ಷದವರೆಗಿನ ಮೂಲ ಆದಾಯ ವಿನಾಯಿತಿಯನ್ನು ಕ್ಲೈಮ್ ಮಾಡಬಹುದು.
60 ವರ್ಷ ಮತ್ತು ಮೇಲ್ಪಟ್ಟ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಪ್ರಯೋಜನಗಳು ಲಭ್ಯವಿರುವುದಿಲ್ಲ
ಹಣಕಾಸು ವರ್ಷ 2023-24ಗೆ ಸೀನಿಯರ್ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳು ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆರಿಸಿಕೊಂಡರೆ, ಅವರು ಕೆಲವು ಇನ್ಕಮ್ ಟ್ಯಾಕ್ಸ್ ಪ್ರಯೋಜನಗಳನ್ನು ತ್ಯಜಿಸಬೇಕಾಗುತ್ತದೆ, ಅವುಗಳು ಈ ಕೆಳಗಿನಂತಿವೆ:
- ಹೌಸ್ ರೆಂಟ್ ಅಲೋವೆನ್ಸ್ (ಎಚ್‌ಆರ್‌ಎ)
- ಲೀವ್ ಟ್ರಾವೆಲ್ ಅಲೋವೆನ್ಸ್ (ಎಲ್‌ಟಿಎ)
- ಪ್ರೊಫೆಷನಲ್ ಟ್ಯಾಕ್ಸ್
- ಉದ್ಯೋಗದಾತರಿಂದ ಕನ್ವೆಯನ್ಸ್ ಅಲೋವೆನ್ಸ್, ಸ್ಥಳಾಂತರ ಅಲೋವೆನ್ಸ್, ಅವರ ಉದ್ಯೋಗದ ಅವಧಿಯಲ್ಲಿ ದೈನಂದಿನ ವೆಚ್ಚಗಳು ಸೇರಿದಂತೆ ವಿಶೇಷ ಅಲೋವೆನ್ಸ್
- ಸೆಕ್ಷನ್ 24 ಅಡಿಯಲ್ಲಿ ಹೌಸಿಂಗ್ ಲೋನ್ ಮೇಲೆ ಇಂಟರೆಸ್ಟ್
- ಮಕ್ಕಳ ಎಜುಕೇಷನ್ ಅಲೋವೆನ್ಸ್
- ಸಹಾಯಕರ ಅಲೋವೆನ್ಸ್
- ಅಧ್ಯಾಯ VI-A ಅಡಿಯಲ್ಲಿ 80C, 80D, 80E, 80TTB, ಇತ್ಯಾದಿಗಳಂತಹ ಡಿಡಕ್ಷನ್. ಅಧಿಸೂಚಿತ ಪೆನ್ಷನ್ ಯೋಜನೆ ಮತ್ತು 80JJAA ಅಡಿಯಲ್ಲಿ ಇರುವ ಡಿಡಕ್ಷನ್ ಹೊರತುಪಡಿಸಿ
ಭಾರತದಲ್ಲಿನ ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಪ್ರಯೋಜನಗಳು
ಈ ವಿನಾಯಿತಿಗಳಿಂದ ನೀವು ವಿಶೇಷವಾಗಿ ಪ್ರಯೋಜನ ಪಡೆಯಬಹುದಾದ ಪ್ರಮುಖ ಕ್ಷೇತ್ರಗಳಲ್ಲಿ ಒಂದೆಂದರೆ ಹೆಲ್ತ್ ಕೇರ್. ದೇಶದಲ್ಲಿ ಹೆಚ್ಚುತ್ತಿರುವ ಹೆಲ್ತ್ ಕೇರ್ ವೆಚ್ಚದಿಂದಾಗಿ, ಸರ್ಕಾರವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಮೇಲೆ ಟ್ಯಾಕ್ಸ್ ಪ್ರಯೋಜನಗಳನ್ನು ನೀಡಿದೆ, ಇದು ಚಿಕಿತ್ಸೆಯನ್ನು ಪಡೆಯುವ ಹಣಕಾಸು ಲಯಬಿಲಿಟಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ.
60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು 2022-23 ಮತ್ತು 2023-24 ರ ಹಣಕಾಸುವರ್ಷಗಳಲ್ಲಿ ಪಡೆದುಕೊಳ್ಳಬಹುದಾದ ಕೆಲವು ಸಾಮಾನ್ಯ ಟ್ಯಾಕ್ಸ್ ಡಿಡಕ್ಷನ್ ಗಳು ಮತ್ತು ಪ್ರಯೋಜನಗಳನ್ನು ಈ ರೀತಿ ಇವೆ.
- ಸ್ಟಾಂಡರ್ಡ್ ಡಿಡಕ್ಷನ್
60 ವರ್ಷ ಮೇಲ್ಪಟ್ಟ ಪೆನ್ಷನ್ ದಾರರು ತಮ್ಮ ಪೆನ್ಷನ್ ಮೇಲೆ ಮಾತ್ರ 'ಸ್ಯಾಲರಿಯಿಂದ ಆದಾಯ' ಶೀರ್ಷಿಕೆ ಅಡಿಯಲ್ಲಿ ₹50,000ದ ಸ್ಟಾಂಡರ್ಡ್ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು. ಕುಟುಂಬ ಪೆನ್ಷನ್ ದಾರರು ₹15,000 ವರೆಗಿನ ಸ್ಟಾಂಡರ್ಡ್ ಡಿಡಕ್ಷನ್ ಅನ್ನು ಸಹ ಕ್ಲೈಮ್ ಮಾಡಬಹುದು.
- ಸೆಕ್ಷನ್ 80DDB ಅಡಿಯಲ್ಲಿ ಡಿಡಕ್ಷನ್
2018-19ರ ಕೇಂದ್ರ ಬಜೆಟ್‌ನ ತಿದ್ದುಪಡಿಗಳ ಪ್ರಕಾರ, ಸೀನಿಯರ್ ಸಿಟಿಜನ್‌ಗಳು ನಿರ್ದಿಷ್ಟ ಗಂಭೀರ ಕಾಯಿಲೆಗಳ ವೈದ್ಯಕೀಯ ವೆಚ್ಚಕ್ಕಾಗಿ ₹ 1 ಲಕ್ಷದವರೆಗೆ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು.
- ಹೆಲ್ತ್ ಇನ್ಶೂರೆನ್ಸ್
ಇನ್ಕಮ್ ಟ್ಯಾಕ್ಸ್ ಕಾಯಿದೆಯ ಸೆಕ್ಷನ್ 80D ಅಡಿಯಲ್ಲಿ, ಸಿನಿಯರ್ ಸಿಟಿಜನ್‌ಗಳು ವೈದ್ಯಕೀಯ ಇನ್ಶೂರೆನ್ಸ್ ಕಂತುಗಳಿಗೆ ₹ 50,000 ವರೆಗೆ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು, ಇದು ಇತರೆ ವ್ಯಕ್ತಿಗಳಿಗೆ ₹ 25,000 ಆಗಿದೆ.
- ಉಳಿತಾಯಗಳಿಂದ ಇಂಟರೆಸ್ಟ್
ಸೆಕ್ಷನ್ 80TTB ಅಡಿಯಲ್ಲಿ, ಸೇವಿಂಗ್ಸ್ ಬ್ಯಾಂಕ್ ಖಾತೆಗಳು, ಬ್ಯಾಂಕ್ ಡೆಪಾಸಿಟ್ ಗಳು, ಪೋಸ್ಟ್ ಆಫೀಸ್ ಡೆಪಾಸಿಟ್ ಗಳು ಅಥವಾ ಕೊ-ಆಪರೇಟಿವ್ ಬ್ಯಾಂಕ್ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್‌ಗಳಲ್ಲಿನ ಡೆಪಾಸಿಟ್ ಗಳಿಂದ ಬರುವ ಇಂಟರೆಸ್ಟ್ ಆದಾಯದ ಡಿಡಕ್ಷನ್ ಅನ್ನು, 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಇರುವ ₹ 10,000 ರಿಂದ ಸೀನಿಯರ್ ಸಿಟಿಜನ್‌ಗಳಿಗಾಗಿ ₹ 50,000 ಕ್ಕೆ ವಿಸ್ತರಿಸಲಾಗಿದೆ. ಈ ಪ್ರಯೋಜನವು ವಿಭಿನ್ನ ಫಿಕ್ಸೆಡ್ ಮತ್ತು ಮರುಕಳಿಸುವ ಡೆಪಾಸಿಟ್ ಸ್ಕೀಮ್ ಗಳಿಂದ ಬರುವ ಇಂಟರೆಸ್ಟ್ ಆದಾಯಕ್ಕೂ ಅನ್ವಯಿಸುತ್ತದೆ.
- ರಿವರ್ಸ್ ಅಡಮಾನ ಸ್ಕೀಮ್
ಈ ಸ್ಕೀಮ್ ಅಡಿಯಲ್ಲಿ, ಸೀನಿಯರ್ ಸಿಟಿಜನ್‌ಗಳು ಮಾಲೀಕತ್ವ ಮತ್ತು ಸ್ವಾಧೀನವು ಅವರ ಬಳಿಯೇ ಉಳಿದುಕೊಂಡಿರುವುದು ತಮ್ಮ ಮನೆಯನ್ನು ಜೀವನ ಪರ್ಯಂತ ಅಡಮಾನವಿಟ್ಟು ಪಡೆಯುವ ನಿಯಮಿತ ಕಂತುಗಳು ಇನ್ಕಮ್ ಟ್ಯಾಕ್ಸ್ ನಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿರುತ್ತದೆ.
ಹೀಗಾಗಿ, ಇಂತಹ ಇನ್ಕಮ್ ಟ್ಯಾಕ್ಸ್ ಪ್ರಯೋಜನಗಳೊಂದಿಗೆ, ದೇಶದ ಸೀನಿಯರ್ ಮತ್ತು ಸೂಪರ್-ಸೀನಿಯರ್ ಸಿಟಿಜನ್‌ಗಳ ಮೇಲಿನ ಟ್ಯಾಕ್ಸ್ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನಿಸಿದೆ. ಆದ್ದರಿಂದ, ನೀವು ನಿಮ್ಮ ಇನ್ಕಮ್ ಟ್ಯಾಕ್ಸ್ ಗಳನ್ನು ಪಾವತಿಸುವ ಮೊದಲು, ನಿಮ್ಮ ಸುವರ್ಣ ವರ್ಷಗಳಲ್ಲಿ ನೀವು ಆರ್ಥಿಕವಾಗಿ ಸ್ವತಂತ್ರ ಜೀವನವನ್ನು ಖಚಿತಪಡಿಸಿಕೊಳ್ಳಲು ಅನ್ವಯವಾಗುವ ಟ್ಯಾಕ್ಸ್ ಸ್ಲ್ಯಾಬ್‌ಗಳು, ವಿನಾಯಿತಿಗಳು ಮತ್ತು ನಂತರದ ಟ್ಯಾಕ್ಸ್ ಪ್ರಯೋಜನಗಳನ್ನು ತಿಳಿದುಕೊಳ್ಳಿ.
ಇನ್ನಷ್ಟು ತಿಳಿಯಿರಿ
ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ಸೂಪರ್ ಸೀನಿಯರ್ ಸಿಟಿಜನ್‌ಗಳು ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಟ್ಯಾಕ್ಸ್ ಪ್ರಯೋಜನವನ್ನು ಪಡೆಯಬಹುದೇ?
ಯಾವುದೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿಂದ ಇನ್ಶೂರ್ಡ್ ಆಗಿರದ 80 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ವೈದ್ಯಕೀಯ ಚಿಕಿತ್ಸೆಗಳು ಮತ್ತು ಆರೋಗ್ಯ ತಪಾಸಣೆಗಾಗಿ ಐಟಿ ಆಕ್ಟ್ ನ ಸೆಕ್ಷನ್ 80D ಅಡಿಯಲ್ಲಿ ₹50,000 ವರೆಗಿನ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು.
ಸೀನಿಯರ್ ಸಿಟಿಜನ್‌ಗಳು ತಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ಯಾವ ಫಾರ್ಮ್ ಮೂಲಕ ಫೈಲ್ ಮಾಡಬಹುದು?
ಪೆನ್ಷನ್ ಅಥವಾ ರೆಸಿಡೆನ್ಶಿಯಲ್ ಪ್ರಾಪರ್ಟಿ ಅಥವಾ ಇತರ ಮೂಲಗಳಿಂದ ಸ್ಯಾಲರಿ ಅಥವಾ ಆದಾಯವನ್ನು ಗಳಿಸುವ ಸೀನಿಯರ್ ಸಿಟಿಜನ್‌ಗಳು ತಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗಳನ್ನು ಫೈಲ್ ಮಾಡಲು ಐಟಿಆರ್-1 ಅನ್ನು ಬಳಸಬಹುದು. ಆದಾಯವು ದೀರ್ಘ ಮತ್ತು ಅಲ್ಪಾವಧಿಯ ಕ್ಯಾಪಿಟಲ್ ಗೇನ್(ಬಂಡವಾಳ ಲಾಭ)ಗಳನ್ನು ಒಳಗೊಂಡಿದ್ದರೆ, ಮೇಲಿನ ನಿದರ್ಶನಗಳನ್ನು ಹೊರತುಪಡಿಸಿ, ವ್ಯಕ್ತಿಗಳು ತಮ್ಮ ಆದಾಯವನ್ನು ಐಟಿಆರ್-2 ಮೂಲಕ ಫೈಲ್ ಮಾಡಬೇಕಾಗುತ್ತದೆ.
ಸೀನಿಯರ್ ಸಿಟಿಜನ್ ಎನ್.ಆರ್.ಐಗಳು ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿ ಕ್ಲೈಮ್ ಮಾಡಲು ಅರ್ಹರೇ?
ಇಲ್ಲ, ಇನ್ಕಮ್ ಟ್ಯಾಕ್ಸ್ ಆಕ್ಟ್ ಸೆಕ್ಷನ್ 87A ಅಡಿಯಲ್ಲಿ ಡಿಡಕ್ಷನ್ ಪಡೆಯಲು ವ್ಯಕ್ತಿಗಳು ಪೂರೈಸಬೇಕಾದ ಮೊದಲ ಕ್ರೈಟಿರಿಯ ಎಂದರೆ ಅವರು ಭಾರತದ ನಿವಾಸಿಗಳಾಗಿರಬೇಕು. ಹೀಗಾಗಿ, ಅನಿವಾಸಿಗಳು ಸೆಕ್ಷನ್ 87A ಅಡಿಯಲ್ಲಿ ರಿಯಾಯಿತಿಯನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಸೂಪರ್ ಸೀನಿಯರ್ ಸಿಟಿಜನ್‌ಗಳು ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಟ್ಯಾಕ್ಸ್ ಪ್ರಯೋಜನವನ್ನು ಪಡೆಯಬಹುದೇ?
ಯಾವುದೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿಂದ ಇನ್ಶೂರ್ಡ್ ಆಗಿರದ 80 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ವೈದ್ಯಕೀಯ ಚಿಕಿತ್ಸೆಗಳು ಮತ್ತು ಆರೋಗ್ಯ ತಪಾಸಣೆಗಾಗಿ ಐಟಿ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ₹50,000 ವರೆಗಿನ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು.
ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಬಹುದೇ?
ಹೌದು, ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಬಹುದು. ಆದಾಗ್ಯೂ, ನೀವು ಅನ್ವಯವಾಗುವ ಅರ್ಹತಾ ಕ್ರೈಟಿರಿಯಗಳನ್ನು ಪೂರೈಸಬೇಕು ಮತ್ತು ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಲು ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು.