ಇನ್ಕಮ್ ಟ್ಯಾಕ್ಸ್ ರಿಟರ್ನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು
ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್‌ನ ರಚನೆಯು ಅತ್ಯಂತ ಸಂಕೀರ್ಣವಾಗಿದೆ. ಇದಲ್ಲದೆ, ಮಾಹಿತಿಯ ಕೊರತೆ ಮತ್ತು ಅದರ ಬಗೆಗಿರುವ ತಪ್ಪು ಮಾಹಿತಿಯು, ಸಾಮಾನ್ಯವಾಗಿ ಟ್ಯಾಕ್ಸ್ ಪೇಯರ್‌ಗಳನ್ನು ರಿಟರ್ನ್ಸ್ ಫೈಲ್ ಮಾಡುವುದರಿಂದ ನಿರುತ್ಸಾಹಗೊಳಿಸುತ್ತದೆ. ಆದ್ದರಿಂದ, ಈ ವಿಷಯದ ಬಗ್ಗೆ ಇನ್ನಷ್ಟು ತಿಳುವಳಿಕೆಯನ್ನು ನೀಡಲು, ಮತ್ತದನ್ನು ನಿಮಗೆ ಸರಳವಾಗಿಸಲು ನಮಗೆ ಅವಕಾಶ ಮಾಡಿಕೊಡಿ.
ಈಗ ಇದರ ಬಗ್ಗೆ ಮಾತಾಡೋಣ!
ಇನ್ಕಮ್ ಟ್ಯಾಕ್ಸ್ ರಿಟರ್ನ್ ಎಂದರೇನು?
ಭಾರತದಲ್ಲಿ ಟ್ಯಾಕ್ಸ್ ಪೇಯರ್‌ಗಳು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅಥವಾ ಐಟಿಆರ್ ಎಂಬ ಫಾರ್ಮ್ ಮೂಲಕ ತಮ್ಮ ಗಳಿಸಿದ ಇನ್ಕಮ್ ಮತ್ತು ಅನ್ವಯವಾಗುವ ಟ್ಯಾಕ್ಸ್‌ಗಳ ಬಗ್ಗೆ ಮಾಹಿತಿಯನ್ನು ಫೈಲ್ ಮಾಡುತ್ತಾರೆ. ಒಬ್ಬ ವ್ಯಕ್ತಿಯು ಈ ಫಾರ್ಮ್ ಅನ್ನು ಭಾರತದ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ಗೆ ಸಬ್ಮಿಟ್ ಮಾಡುತ್ತಾನೆ. ಐಟಿಆರ್ ಮೂಲಕ ಫೈಲ್ ಮಾಡಿದ ಮಾಹಿತಿಯು ನಿರ್ದಿಷ್ಟ ಹಣಕಾಸು ವರ್ಷಕ್ಕೆ ಸಂಬಂಧಿಸಿದ್ದಾಗಿರುತ್ತದೆ, ಅಂದರೆ ಏಪ್ರಿಲ್ 1 ರಿಂದ ಪ್ರಾರಂಭವಾಗಿ ಮುಂದಿನ ವರ್ಷದ ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ.
ಇದಲ್ಲದೆ, ಟ್ಯಾಕ್ಸ್ ಪೇಯರ್‌ಗಳು ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವುದು ಕಡ್ಡಾಯವಾಗಿದೆ. ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಸುಮ್ಮನೇ ಅರ್ಥಮಾಡಿಕೊಳ್ಳುವುದಷ್ಟೇ ಸಾಕಾಗುವುದಿಲ್ಲ. ಈ ಕೆಳಗಿನ ಯಾವುದೇ ಷರತ್ತುಗಳು ನಿಮಗೆ ಅನ್ವಯಿಸಿದರೆ, ನೀವು ಐಟಿಆರ್ ಅನ್ನು ಫೈಲ್ ಮಾಡಬೇಕು:
ಸೆಕ್ಷನ್ 80TTA, 80TTB, 80D, 80C, 80CCD ಅಡಿಯಲ್ಲಿ ವಿವಿಧ ಡಿಡಕ್ಷನ್‌ಗಳ ಮೊದಲು ನಿಮ್ಮ ಒಟ್ಟು ಇನ್ಕಮ್, ಮೂಲ ವಿನಾಯಿತಿ ಲಿಮಿಟ್ ಅನ್ನು ಮೀರಿದರೆ. ಈ ವಿನಾಯಿತಿ ಲಿಮಿಟ್ ಅನ್ನು ಕೆಳಗೆ ಹೈಲೈಟ್ ಮಾಡಲಾಗಿದೆ:
ವಿವರಗಳು | ಇನ್ಕಮ್‌ನ ಮೊತ್ತ |
---|---|
80 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ | ₹.5,00,000 |
60 ವರ್ಷದಿಂದ 80 ವರ್ಷ ವಯಸ್ಸಿನ ವ್ಯಕ್ತಿಗಳಿಗೆ | ₹.3,00,000 |
60 ವರ್ಷದೊಳಗಿನ ವ್ಯಕ್ತಿಗಳಿಗೆ | ₹.2,50,000 |
ನೀವು ಹಣಕಾಸು ವರ್ಷದಲ್ಲಿ ವಿದೇಶಿ ಪ್ರಾಪರ್ಟಿಯಲ್ಲಿ ಇನ್ವೆಸ್ಟ್ ಮಾಡಿದ್ದೀರಿ ಅಥವಾ ಗಳಿಸಿದ್ದೀರಿ.
ನಿರ್ದಿಷ್ಟ ಹಣಕಾಸು ವರ್ಷದಲ್ಲಿ ನೀವು ₹1 ಕೋಟಿಗಿಂತ ಹೆಚ್ಚು ಅಥವಾ ಮಲ್ಟಿಪಲ್ ಬ್ಯಾಂಕ್ ಅಕೌಂಟ್‌ಗಳಲ್ಲಿ ಡೆಪಾಸಿಟ್ ಮಾಡಿದ್ದರೆ.
ಒಬ್ಬ ವ್ಯಕ್ತಿಯ ವಿದೇಶಿ ಪ್ರಯಾಣಕ್ಕಾಗಿ ನೀವು ₹2,00,000 ಕ್ಕಿಂತ ಹೆಚ್ಚಿನ ಪಾವತಿಯನ್ನು ಮಾಡಿದ್ದರೆ. ಈ ವ್ಯಕ್ತಿಯು ನಿಮ್ಮ ಕುಟುಂಬದ ಸದಸ್ಯರಾಗಿರಬಹುದು ಅಥವಾ ಆಗಿಲ್ಲದಿರಬಹುದು.
ನೀವು ಒಂದು ವರ್ಷದಲ್ಲಿ ವಿದ್ಯುತ್ ಶುಲ್ಕವೆಂದು ₹1,00,000 ಗಿಂತ ಹೆಚ್ಚು ಪಾವತಿಸಿದ್ದರೆ.
ಭಾರತದಲ್ಲಿ ಟ್ಯಾಕ್ಸ್ ಪೇಯರ್‌ಗಳಿಗೆ ವಿವಿಧ ರೀತಿಯ ಐಟಿಆರ್ ಗಳಿವೆ. ಇದಲ್ಲದೆ, ಇನ್ಕಮ್ ಟ್ಯಾಕ್ಸ್ ರಿಟರ್ನ್ ಫಾರ್ಮ್‌ನ ಅನ್ವಯವು ಟ್ಯಾಕ್ಸ್ ಪೇಯರ್‌ಗಳ ಕೆಟಗರಿ, ಅವನ/ಅವಳ ಇನ್ಕಮ್‌ನ ಮೂಲಗಳು ಮತ್ತು ಇನ್ಕಮ್‌ನ ಮೊತ್ತವನ್ನು ಆಧರಿಸಿ ಬದಲಾಗುತ್ತದೆ.
ನೀವು ಯಾವ ಐಟಿಆರ್ (ITR) ಅನ್ನು ಫೈಲ್ ಮಾಡಬೇಕು?
ಭಾರತದ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ 7 ವಿಧದ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫಾರ್ಮ್‌ಗಳನ್ನು ಸೂಚಿಸುತ್ತದೆ. ಇದಲ್ಲದೆ, ಐಟಿಆರ್ ಫಾರ್ಮ್‌ನ ಅನ್ವಯವು ಟ್ಯಾಕ್ಸ್ ಪೇಯರ್‌ಗಳ ಪ್ರಕಾರ ಮತ್ತು ಅವನ/ಅವಳ ಇನ್ಕಮ್‌ನ ಮೊತ್ತ ಮತ್ತು ಇನ್ಕಮ್‌ನ ಸ್ವರೂಪವನ್ನು ಅವಲಂಬಿಸಿರುತ್ತದೆ. ವ್ಯಕ್ತಿಗಳು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡಬಹುದು.
ಭಾರತದಲ್ಲಿರುವ ಐಟಿಆರ್ ನ ವಿವಿಧ ವಿಧಗಳನ್ನು ಕೆಳಗೆ ವಿವರಿಸಲಾಗಿದೆ:
ಐಟಿಆರ್ (ITR)-1೦ ಅಥವಾ ಸಹಜ್
ಸಹಜ್ ಎಂದೂ ಕರೆಯಲ್ಪಡುವ ಐಟಿಆರ್ ಫಾರ್ಮ್ 1 ನೊಂದಿಗೆ, ಐಟಿಆರ್ ರಿಟರ್ನ್‌ನ ವಿಧಗಳನ್ನು ನಾವೀಗ ನೋಡುತ್ತಾ ಹೋಗೋಣ. ಈ ಕೆಳಗಿನ ಕೆಟಗರಿಗಳ ಅಡಿಯಲ್ಲಿ ಬರುವ ಭಾರತೀಯ ನಿವಾಸಿಗಳು ಇದನ್ನು ಫೈಲ್ ಮಾಡುತ್ತಾರೆ:
ನಿಯಮಿತ ಇನ್ಕಮ್ ಅನ್ನು ಸ್ಯಾಲರಿ ಅಥವಾ ಪೆನ್ಷನ್ ಮೂಲಕ ಜನರೇಟ್ ಮಾಡುವವರು.
ಒಂದೇ ವಸತಿ ಪ್ರಾಪರ್ಟಿಯಿಂದ ಇನ್ಕಮ್ ಬರುತ್ತಿದ್ದರೆ.
ಕೃಷಿ ಇನ್ಕಮ್‌ನಿಂದ ₹5,000 ವರೆಗೆ ಗಳಿಸುವ ವ್ಯಕ್ತಿಗಳು.
ಲಾಟರಿ ಅಥವಾ ಹಾರ್ಸ್ ರೇಸಿಂಗ್ ಇತ್ಯಾದಿಗಳನ್ನು ಗೆಲ್ಲುವ ಮೂಲಕ ಇನ್ಕಮ್ ಗಳಿಸುತ್ತಿದ್ದರೆ
ಟ್ಯಾಕ್ಸ್ ಪೇಯರ್‌ಗಳ ಒಟ್ಟು ಇನ್ಕಮ್ ₹50,00,000 ವರೆಗೆ ಇದ್ದರೆ.
ಐಟಿಆರ್ (ITR)-2
ಈ ಫಾರ್ಮ್ ಒಬ್ಬ ವ್ಯಕ್ತಿಗೆ ಮತ್ತು ಹಿಂದೂ ಅವಿಭಜಿತ ಕುಟುಂಬಕ್ಕೆ (ಹೆಚ್.ಯು.ಎಫ್) ಅನ್ವಯಿಸುತ್ತದೆ, ಹಣಕಾಸು ವರ್ಷದಲ್ಲಿ ಅವರ ಒಟ್ಟು ಇನ್ಕಮ್ ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
ಇನ್ಕಮ್ ₹50,00,000 ಮೀರುತ್ತಿದ್ದರೆ.
ಇನ್ಕಮ್‌ನ ಮೂಲ ಪೆನ್ಷನ್ ಅಥವಾ ಸ್ಯಾಲರಿ ಆಗಿದ್ದರೆ.
ಟ್ಯಾಕ್ಸ್ ಪೇಯರ್‌ಗಳ ಇನ್ಕಮ್, ವಸತಿ ಪ್ರಾಪರ್ಟಿಯಿಂದ ಬರುತ್ತಿದ್ದರೆ.
ಲಾಟರಿ ಅಥವಾ ಹಾರ್ಸ್ ರೇಸ್ ಗೆಲ್ಲುವ ಮೂಲಕ ಇನ್ಕಮ್ ಅನ್ನು ಗಳಿಸುತ್ತಿದ್ದರೆ.
ಒಬ್ಬ ವೈಯಕ್ತಿಕ ಟ್ಯಾಕ್ಸ್ ಪೇಯರ್, ಕಂಪನಿಯೊಂದರ ಡೈರೆಕ್ಟರ್ ಆಗಿದ್ದರೆ.
ಕೃಷಿಯಿಂದ ಒಬ್ಬ ವ್ಯಕ್ತಿಯ ಇನ್ಕಮ್ ₹5,000 ಕ್ಕಿಂತ ಹೆಚ್ಚಿದ್ದರೆ.
ಕ್ಯಾಪಿಟಲ್ ಗೇನ್ಸ್‌ನಿಂದ ಇನ್ಕಮ್ ಅನ್ನು ಗಳಿಸುತ್ತಿದ್ದರೆ.
ವಿದೇಶಿ ಪ್ರಾಪರ್ಟಿಗಳಿಂದ ಇನ್ಕಮ್ ಬರುತ್ತಿದ್ದರೆ
ಐಟಿಆರ್ (ITR)-3
ಐಟಿಆರ್-3 ಪ್ರೊಫೆಷನ್‌ನಿಂದ ಅಥವಾ ಪ್ರೊಪ್ರೈಟರ್‌ಶಿಪ್ ಬಿಸಿನೆಸ್‌ನಿಂದ, ಇನ್ಕಮ್ ಅನ್ನು ಪಡೆಯುವ ಮತ್ತು ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್‌ಗಾಗಿ ಫೈಲ್ ಮಾಡಲು ಬಯಸುವ ವೈಯಕ್ತಿಕ ಟ್ಯಾಕ್ಸ್ ಪೇಯರ್‌ಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಗಾಗಿ (ಹೆಚ್.ಯು.ಎಫ್) ಇದೆ. ಕೆಳಗಿನ ವ್ಯಕ್ತಿಗಳು ಈ ಫಾರ್ಮ್ ಅನ್ನು ಆಯ್ಕೆ ಮಾಡಬಹುದು:
ಬಿಸಿನೆಸ್ ಸಂಸ್ಥೆಯಲ್ಲಿ ಪಾರ್ಟ್ನರ್ ಆಗಿರುವ ಟ್ಯಾಕ್ಸ್ ಪೇಯರ್.
ಟ್ಯಾಕ್ಸ್ ಪೇಯರ್‌ನ ಬಿಸಿನೆಸ್ ಟರ್ನ್ಓವರ್ ₹2 ಕೋಟಿಗೂ ಹೆಚ್ಚಿದ್ದರೆ.
ಕಂಪನಿಯ ಡೈರೆಕ್ಟರ್ ಆಗಿರುವ ಒಬ್ಬ ವ್ಯಕ್ತಿ.
ಸ್ಯಾಲರಿ, ಪೆನ್ಷನ್, ವಸತಿ ಪ್ರಾಪರ್ಟಿ ಅಥವಾ ಯಾವುದೇ ಇತರ ಮೂಲದಿಂದ ಬರುವ ಇನ್ಕಮ್ ಅನ್ನು ಗಳಿಸುವ ಟ್ಯಾಕ್ಸ್ ಪೇಯರ್.
ಐಟಿಆರ್ (ITR) -4 ಅಥವಾ ಸುಗಮ್
ಐಟಿಆರ್-4 ಅಥವಾ ಸುಗಮ್ ಎನ್ನುವುದು ಭಾರತೀಯ ನಿವಾಸಿಗಳು ಮತ್ತು ಪ್ರೊಫೆಷನ್‌ನಿಂದ ಅಥವಾ ಬಿಸಿನೆಸ್‌ನಿಂದ ತಮ್ಮ ಇನ್ಕಮ್ ಅನ್ನು ಗಳಿಸುವ ಹೆಚ್.ಯು.ಎಫ್ ಗಳು, ವ್ಯಕ್ತಿಗಳು ಮತ್ತು ಪಾರ್ಟ್ನರ್‌ಶಿಪ್ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಆದಾಗ್ಯೂ, ಲಿಮಿಟೆಡ್ ಲಯಬಿಲಿಟಿ ಪಾರ್ಟ್ನರ್‌ಶಿಪ್‌ಗಳು ಅಥವಾ ಎಲ್.ಎಲ್.ಪಿ ಗಳು ಐಟಿಆರ್-4 ಅನ್ನು ಫೈಲ್ ಮಾಡಲು ಸಾಧ್ಯವಿಲ್ಲ.
ಇದು ಈ ಕೆಳಗಿನವುಗಳಿಗೆ ಅನ್ವಯಿಸುತ್ತದೆ:
ಪೆನ್ಷನ್ ಅಥವಾ ಸ್ಯಾಲರಿಯಿಂದ ₹50,00,000 ವರೆಗಿನ ಇನ್ಕಮ್ ಅನ್ನು ಹೊಂದಿರುವ ಟ್ಯಾಕ್ಸ್ ಪೇಯರ್‌ಗಳು.
ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ 1961 ರ ಸೆಕ್ಷನ್ 44AE, ಸೆಕ್ಷನ್ 44ADA, ಮತ್ತು ಸೆಕ್ಷನ್ 44AD ಪ್ರಕಾರ, ಪ್ರಿಸಂಪ್ಟಿವ್ ಇನ್ಕಮ್ ಸ್ಕೀಮ್‌ಗಳನ್ನು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿಗಳು.
ಇನ್ಕಮ್ ಎನ್ನುವುದು ಹೌಸ್ ಪ್ರಾಪರ್ಟಿಯಿಂದ ಜನರೇಟ್ ಆಗಿದ್ದು ಮತ್ತು ₹50,00,000 ಮೀರಬಾರದು.
₹50,00,000 ವರೆಗೆ ಇತರ ಮೂಲಗಳಿಂದ ಬರುವ ಇನ್ಕಮ್. ಆದಾಗ್ಯೂ, ಇದು ಹಾರ್ಸ್ ರೇಸ್ ಅಥವಾ ವಿನ್ನಿಂಗ್ ಲಾಟರಿಗಳಿಂದ ಗಳಿಸಿದ ಇನ್ಕಮ್ ಅನ್ನು ಹೊರತುಪಡಿಸುತ್ತದೆ.
₹50,00,000 ವರೆಗಿನ ಒಟ್ಟು ರಿಸಿಪ್ಟ್‌ಗಳನ್ನು ಹೊಂದಿರುವ ಫ್ರೀಲ್ಯಾನ್ಸರ್‌ಗಳು.
ಐಟಿಆರ್ (ITR)-5
ಈ ಫಾರ್ಮ್ ಅನ್ನು ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್‌ಗಾಗಿ ವ್ಯಾಪಕ ಶ್ರೇಣಿಯ ಸಂಸ್ಥೆಗಳಿಂದ ಫೈಲ್ ಮಾಡಲಾಗಿರುತ್ತದೆ, ಅವುಗಳು ಈ ಕೆಳಗಿನಂತಿವೆ:
ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 2(31)(vii) ಪ್ರಕಾರ ಕೃತಕ ನ್ಯಾಯಾಂಗ ವ್ಯಕ್ತಿ (ಎಜೆಪಿ)
ಬಿಸಿನೆಸ್ ಟ್ರಸ್ಟ್‌ಗಳು
ಇನ್ವೆಸ್ಟ್‌ಮೆಂಟ್ ಫಂಡ್‌ಗಳು
ವ್ಯಕ್ತಿಗಳ ಸಂಸ್ಥೆ (BOIs)
ಲಿಮಿಟೆಡ್ ಲಯಬಿಲಿಟಿ ಪಾರ್ಟ್ನರ್‌ಶಿಪ್‌ಗಳು (ಎಲ್.ಎಲ್.ಪಿ ಗಳು)
ವ್ಯಕ್ತಿಗಳ ಸಂಘ (AOPs)
ಮೃತರ ಪ್ರಾಪರ್ಟಿ
ಸಾಲದ ಪ್ರಾಪರ್ಟಿ
ಸಹಕಾರ ಸಂಘ
ಲೋಕಲ್ ಅಥಾರಿಟಿ
ಐಟಿಆರ್ (ITR)-6
ಐಟಿಆರ್ ಫಾರ್ಮ್ 6 ಎನ್ನುವುದು ಸೆಕ್ಷನ್ 11 ರ ಅಡಿಯಲ್ಲಿ ಕ್ಲೈಮ್ ಮಾಡಲು ಸಾಧ್ಯವಾಗದ ಕಂಪನಿಗಳಿಗೆ ಇದೆ. ಇದು ಧಾರ್ಮಿಕ ಅಥವಾ ಚಾರಿಟೇಬಲ್ ಉದ್ದೇಶಗಳಿಗಾಗಿ ಹೊಂದಿರುವ ಪ್ರಾಪರ್ಟಿಯಿಂದ ಬರುವ ಇನ್ಕಮ್ ಅನ್ನು ಸೂಚಿಸುತ್ತದೆ. ಇದಲ್ಲದೆ, ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ವಿದ್ಯುನ್ಮಾನವಾಗಿ ಮಾತ್ರ ಫೈಲ್ ಮಾಡಲು ಕಂಪನಿಗೆ ITR-6 ಸೂಚಿಸುತ್ತದೆ.
ಐಟಿಆರ್ (ITR)-7
ಕಂಪನಿಗಳು ಅಥವಾ ವ್ಯಕ್ತಿಗಳು ಈ ಕೆಳಗಿನ ಸೆಕ್ಷನ್‌ಗಳ ಅಡಿಯಲ್ಲಿ ರಿಟರ್ನ್‌ಗಳನ್ನು ನೀಡಿದರೆ, ಆಗ ಅವರು ITR-7 ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ:
ಸೆಕ್ಷನ್ 139(4F)
ಸೆಕ್ಷನ್ 139(4E)
ಸೆಕ್ಷನ್ 139(4D)
ಸೆಕ್ಷನ್ 139(4C)
ಸೆಕ್ಷನ್ 139(4B)
ಸೆಕ್ಷನ್ 139(4A)
ಇದಲ್ಲದೆ, ಈ ಸೆಕ್ಷನ್‌ಗಳ ಅಡಿಯಲ್ಲಿ ಫೈಲ್ ಮಾಡಲಾದ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗಳ ವಿವರಗಳನ್ನು ಕೆಳಗೆ ವಿವರಿಸಲಾಗಿದೆ:
ಸೆಕ್ಷನ್ 139(4F): ಇದು ಸೆಕ್ಷನ್ 115UB ಅಡಿಯಲ್ಲಿ ಇರುವ ಇನ್ವೆಸ್ಟ್‌ಮೆಂಟ್ ಫಂಡ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಈ ಸೆಕ್ಷನ್‌ನ ಯಾವುದೇ ಪ್ರಾವಿಷನ್‌ಗಳ ಅಡಿಯಲ್ಲಿ ಇನ್ಕಮ್ ಅಥವಾ ನಷ್ಟಗಳ ರಿಟರ್ನ್ ಅನ್ನು ನೀಡುವ ಅಗತ್ಯವಿಲ್ಲ.
ಸೆಕ್ಷನ್ 139(4E): ಇನ್ಕಮ್ ಅಥವಾ ನಷ್ಟಗಳ ರಿಟರ್ನ್ ಅನ್ನು ಒದಗಿಸುವ ಅಗತ್ಯವಿಲ್ಲದ ಬಿಸಿನೆಸ್ ಟ್ರಸ್ಟ್‌ಗಳು ಸೆಕ್ಷನ್ 139(4E) ಅಡಿಯಲ್ಲಿ, ರಿಟರ್ನ್ಸ್ ಫೈಲ್ ಮಾಡಬಹುದು.
ಸೆಕ್ಷನ್ 139(4D): ಕಾಲೇಜುಗಳು, ಯೂನಿವರ್ಸಿಟಿಗಳು ಅಥವಾ ಇತರ ಸಂಸ್ಥೆಗಳು ಇನ್ಕಮ್ ಅಥವಾ ನಷ್ಟದ ರಿಟರ್ನ್ ಅನ್ನು ಈ ಸೆಕ್ಷನ್‌ನ ಅಡಿಯಲ್ಲಿ ನೀಡಬೇಕು.
ಸೆಕ್ಷನ್ 139(4C): ಕೆಳಗಿನ ಎಂಟಿಟಿಗಳು ಸೆಕ್ಷನ್ 139(4C) ಅಡಿಯಲ್ಲಿ ರಿಟರ್ನ್ಸ್ ಫೈಲ್ ಮಾಡಬೇಕು:
ನ್ಯೂಸ್ ಏಜೆನ್ಸಿಗಳು
ವೈಜ್ಞಾನಿಕ ಸಂಶೋಧನಾ ಅಸೋಸಿಯೇಷನ್
ಸೆಕ್ಷನ್ 10(23A) ಪ್ರಕಾರ ಇನ್ಸ್ಟಿಟ್ಯೂಷನ್ ಅಥವಾ ಅಸೋಸಿಯೇಶನ್
ಸೆಕ್ಷನ್ 10(23B) ನಲ್ಲಿ ಸೂಚಿಸಲಾದ ಇನ್ಸ್ಟಿಟ್ಯೂಷನ್
ಆಸ್ಪತ್ರೆಗಳು ಅಥವಾ ಇತರ ವೈದ್ಯಕೀಯ ಸಂಸ್ಥೆಗಳು
ಯೂನಿವರ್ಸಿಟಿಗಳು ಅಥವಾ ಇತರ ಶಿಕ್ಷಣ ಸಂಸ್ಥೆಗಳು
ಸೆಕ್ಷನ್ 139(4B): ರಾಜಕೀಯ ಪಕ್ಷದ ಒಟ್ಟು ಇನ್ಕಮ್, ಇನ್ಕಮ್ ಟ್ಯಾಕ್ಸ್‌ಗೆ ವಿಧಿಸಲಾಗದ ಗರಿಷ್ಠ ಮೊತ್ತವನ್ನು ಮೀರಿದರೆ ಈ ಸೆಕ್ಷನ್‌ನ ಅಡಿಯಲ್ಲಿ ರಿಟರ್ನ್ಸ್ ಫೈಲ್ ಮಾಡಬಹುದು.
- ಸೆಕ್ಷನ್ 139(4A): ಈ ಸೆಕ್ಷನ್‌ನ ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗಳನ್ನು ಟ್ರಸ್ಟ್‌ಗೆ ಸೇರಿದ ಪ್ರಾಪರ್ಟಿಯಿಂದ ಇನ್ಕಮ್ ಅನ್ನು ಪಡೆಯುವ ಎಲ್ಲಾ ವ್ಯಕ್ತಿಗಳು ಫೈಲ್ ಮಾಡಬೇಕಾಗುತ್ತದೆ. ಅಥವಾ ಇತರ ಕಾನೂನು ಬಾಧ್ಯತೆಗಳಿಂದ ಫೈಲ್ ಮಾಡಬೇಕಾಗುತ್ತದೆ. ಇದರಲ್ಲಿ ಈ ಇನ್ಕಮ್ ಅನ್ನು ಸಂಪೂರ್ಣವಾಗಿ ಚಾರಿಟೇಬಲ್ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಅಥವಾ ಭಾಗಶಃ ಅಂತಹ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಮತ್ತು ಇವು ಭಾರತದಲ್ಲಿನ ವಿವಿಧ ರೀತಿಯ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗಳಾಗಿವೆ. ಈಗ, ನಮ್ಮ ದೇಶದಲ್ಲಿ ಟ್ಯಾಕ್ಸ್‌ಗೆ ಒಳಪಡುವ ವಿವಿಧ ರೀತಿಯ ಇನ್ಕಮ್‌ಗಳನ್ನು ನಾವೀಗ ನೋಡೋಣ.
ಇನ್ಕಮ್‌ನ ವಿಧಗಳು ಯಾವುವು?
ಒಬ್ಬ ವ್ಯಕ್ತಿಯು ಅನೇಕ ಇನ್ಕಮ್‌ನ ಮೂಲಗಳನ್ನು ಹೊಂದಬಹುದು. ಆದ್ದರಿಂದ, ಟ್ಯಾಕ್ಸ್‌ನ ತೊಂದರೆ-ಮುಕ್ತ ಕ್ಯಾಲ್ಕುಲೇಷನ್‌ಗಾಗಿ, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ 1961 ರ ಸೆಕ್ಷನ್ 14, ಈ ಮೂಲಗಳನ್ನು ಈ ಕೆಳಗಿನ ಇನ್ಕಮ್‌ನ ವಿಭಾಗದಡಿಯಲ್ಲಿ ವರ್ಗೀಕರಿಸುತ್ತದೆ:
ಸ್ಯಾಲರಿಯಿಂದ ಬರುವ ಇನ್ಕಮ್
ಎಂಪ್ಲಾಯೀಯಾಗಿ ಅವನು/ಅವಳು ನೀಡಿದ ಸರ್ವೀಸ್‌ಗಳ ವಿರುದ್ಧ ವ್ಯಕ್ತಿಯು ಪಡೆಯುವ ಯಾವುದೇ ರೀತಿಯ ಸಂಭಾವನೆಯನ್ನು ಈ ವಿಭಾಗ ಒಳಗೊಂಡಿದೆ. ಆದಾಗ್ಯೂ, ಈ ಸ್ಯಾಲರಿಯ ಪೇಯರ್-ಪೇಯೀ ಗಳು ಎಂಪ್ಲಾಯರ್-ಎಂಪ್ಲಾಯೀ ಸಂಬಂಧವನ್ನು ಹೊಂದಿದ್ದರೆ ಮಾತ್ರ ಈ ಮೊತ್ತವು ಇನ್ಕಮ್ ಆಗಿ ಅರ್ಹತೆ ಪಡೆಯುತ್ತದೆ.
ಆದ್ದರಿಂದ, ನೀವು ಸ್ಯಾಲರಿ ಪಡೆಯುವ ವ್ಯಕ್ತಿಯಾಗಿದ್ದರೆ, ನಿಮ್ಮ ಇನ್ಕಮ್ ಈ ವಿಭಾಗದಡಿಯಲ್ಲಿ ಬರುತ್ತದೆ. ಹೆಚ್ಚುವರಿಯಾಗಿ, ಸ್ಯಾಲರಿಯು ಮೂಲ ವೇತನ, ಪೆನ್ಷನ್, ಗ್ರಾಚ್ಯುಟಿ, ಪೆನ್ಷನ್, ಅಡ್ವಾನ್ಸ್ ಸ್ಯಾಲರಿ, ಕಮಿಷನ್, ವಾರ್ಷಿಕ ಬೋನಸ್ ಮತ್ತು ಪರ್ಕ್ವಿಸೈಟ್‌ಗಳಂತಹ ವಿವಿಧ ರೀತಿಯ ಇನ್ಕಮ್‌ಗಳನ್ನೂ ಒಳಗೊಂಡಿರುತ್ತದೆ. ಒಬ್ಬ ವ್ಯಕ್ತಿಯ ಒಟ್ಟು ಇನ್ಕಮ್ ಅನ್ನು ಕ್ಯಾಲ್ಕುಲೇಟ್ ಮಾಡಿದ ನಂತರ, ಅವನ/ಅವಳ ಒಟ್ಟು ಸ್ಯಾಲರಿಯನ್ನು ಈ ವಿಭಾಗದಡಿಯಲ್ಲಿ ಟ್ಯಾಕ್ಸ್‌ಗೆ ವಿಧಿಸಲಾಗುತ್ತದೆ.
ಕ್ಯಾಪಿಟಲ್ ಗೇನ್ಸ್‌ನಿಂದ ಬರುವ ಇನ್ಕಮ್
ಕ್ಯಾಪಿಟಲ್ ಗೇನ್ಸ್‌ಗಳು ಮೊದಲು ಇನ್ವೆಸ್ಟ್ ಆಗಿ ಇರಿಸಲಾದ ಕ್ಯಾಪಿಟಲ್ ಅಸೆಟ್ ನ ಮಾರಾಟ ಅಥವಾ ಟ್ರಾನ್ಸ್‌ಫರ್‌ನ ಮೇಲೆ ಒಬ್ಬ ವ್ಯಕ್ತಿಯು ಗಳಿಸಿದ ಲಾಭವನ್ನು ಸೂಚಿಸುತ್ತವೆ. ಇಲ್ಲಿ, ಕ್ಯಾಪಿಟಲ್ ಅಸೆಟ್ ಬಾಂಡ್‌ಗಳು, ಸ್ಟಾಕ್‌ಗಳು, ಮ್ಯೂಚುಯಲ್ ಫಂಡ್‌ಗಳು, ಗೋಲ್ಡ್, ರಿಯಲ್ ಎಸ್ಟೇಟ್, ಇತ್ಯಾದಿ ಆಗಿರಬಹುದು. ಆದ್ದರಿಂದ, ನೀವು ಕ್ಯಾಪಿಟಲ್ ಅಸೆಟ್ ಅನ್ನು ಮಾರಾಟ ಮಾಡುವ ಮೂಲಕ ಲಾಭ ಗಳಿಸಿದಾಗ, ಈ ಲಾಭವನ್ನು ನಿಮ್ಮ ಇನ್ಕಮ್ ಎಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಈ ವಿಭಾಗದಡಿಯಲ್ಲಿ ಟ್ಯಾಕ್ಸ್ ವಿಧಿಸಲಾಗುತ್ತದೆ.
ಈ ವಿಷಯದ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ಪಡೆಯಲು, ಪ್ರಾಪರ್ಟಿಯಿಂದ ಬಾಡಿಗೆ ಇನ್ಕಮ್ ಎಂಬುದು ಹೌಸ್ ಪ್ರಾಪರ್ಟಿಯಿಂದ ಇನ್ಕಮ್ ವಿಭಾಗದಡಿಯಲ್ಲಿ ಟ್ಯಾಕ್ಸ್‌ಗೆ ಒಳಪಡುತ್ತದೆ ಎಂಬುದನ್ನು ನಾವು ಹೈಲೈಟ್ ಮಾಡಬೇಕು ಆದರೆ ನೀವು ಈ ಪ್ರಾಪರ್ಟಿಯನ್ನು ಮಾರಾಟ ಮಾಡಿ ಲಾಭ ಗಳಿಸಿದರೆ, ಅದಕ್ಕೆ 'ಕ್ಯಾಪಿಟಲ್ ಗೇನ್ಸ್' ಅಡಿಯಲ್ಲಿ ಟ್ಯಾಕ್ಸ್ ವಿಧಿಸಲಾಗುತ್ತದೆ.
ಹೌಸ್ ಪ್ರಾಪರ್ಟಿಯಿಂದ ಬಂದ ಇನ್ಕಮ್
ಇನ್ಕಮ್ ಟ್ಯಾಕ್ಸ್ ಆ್ಯಕ್ಟ್, 1961 ರ ಸೆಕ್ಷನ್ 22 ಮತ್ತು 27 ಒಬ್ಬ ವ್ಯಕ್ತಿಯ ಪ್ರಾಪರ್ಟಿಯಿಂದ ಅಥವಾ ಅವನ/ಅವಳ ಒಡೆತನದ ಭೂಮಿಯಿಂದ ಬರುವ ಇನ್ಕಮ್ ಮೇಲೆ ಟ್ಯಾಕ್ಸ್‌ಗಳನ್ನು ಕ್ಯಾಲ್ಕುಲೇಟ್ ಮಾಡಲು ಅರ್ಪಿಸಲಾಗಿದೆ. ಆದ್ದರಿಂದ, ಪ್ರಾಪರ್ಟಿಗಳಿಂದ ಗಳಿಸಿದ ಬಾಡಿಗೆ ಇನ್ಕಮ್ ಅನ್ನು ಈ ವಿಭಾಗ ಒಳಗೊಂಡಿರುತ್ತದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತೆರಿಗೆಯನ್ನು ಪ್ರಾಪರ್ಟಿ ಅಥವಾ ಭೂಮಿಯಿಂದ ಪಡೆಯಲಾಗಿದೆ ಮತ್ತು ಅದನ್ನು ಕಮರ್ಷಿಯಲ್ ಬಳಕೆಗೆ ಬಿಡದ ಹೊರತು ಅವುಗಳು ಗಳಿಸಿದ ಬಾಡಿಗೆಯಿಂದಲ್ಲ. ಆದ್ದರಿಂದ, ನೀವು ಬಿಸಿನೆಸ್‌ಗಾಗಿ ಪ್ರಾಪರ್ಟಿಯನ್ನು ಬಾಡಿಗೆಗೆ ನೀಡಿದರೆ, ಅದರಿಂದ ಪಡೆದ ಇನ್ಕಮ್, ಈ ವಿಭಾಗದಡಿಯಲ್ಲಿ ಟ್ಯಾಕ್ಸ್‌ಗೊಳಪಡುತ್ತದೆ.
ಪ್ರೊಫೆಷನ್ ಅಥವಾ ಬಿಸಿನೆಸ್‌ನ ಗೇನ್ಸ್ ಮತ್ತು ಲಾಭಗಳಿಂದ ಇನ್ಕಮ್
ಕಾಮರ್ಸ್, ಟ್ರೇಡ್, ಉತ್ಪಾದನೆ, ಅಥವಾ ಪ್ರೊಫೆಷನ್‌ನಿಂದ ಗಳಿಸಿದ ಇನ್ಕಮ್‌ನ ಯಾವುದೇ ರೂಪವು, ಈ ವಿಭಾಗದಡಿಯಲ್ಲಿ ಟ್ಯಾಕ್ಸ್‌ಗೊಳಪಡುತ್ತದೆ. ಇದು ಲಾಭವನ್ನು ಕ್ಯಾಲ್ಕುಲೇಟ್ ಮಾಡಲು ಇನ್ಕಮ್‌ನಿಂದ ಖರ್ಚುಗಳನ್ನು ಡಿಡಕ್ಟ್ ಮಾಡುತ್ತದೆ, ಅದರ ಮೇಲೆ ಇನ್ಕಮ್ ಟ್ಯಾಕ್ಸ್ ಅನ್ವಯಿಸುತ್ತದೆ. ಹೆಚ್ಚುವರಿಯಾಗಿ, ಈ ವಿಭಾಗ, ಬಿಸಿನೆಸ್ ಆರ್ಗನೈಸೇಶನ್‌ನಲ್ಲಿ ಪಾರ್ಟ್ನರ್‌ಶಿಪ್‌ನಿಂದ ಗಳಿಸಿದ ಯಾವುದೇ ರೀತಿಯ ಲಾಭ, ಬೋನಸ್ ಅಥವಾ ಸ್ಯಾಲರಿಯನ್ನು ಒಳಗೊಂಡಿರುತ್ತದೆ.
ಇದಲ್ಲದೆ, ಬಿಸಿನೆಸ್ ಅಥವಾ ಪ್ರೊಫೆಷನ್‌ನ ಲಾಭಗಳು ಮತ್ತು ಗೇನ್ಸ್‌ಗಳಿಂದ ಬರುವ ಇನ್ಕಮ್‌ನ ಮೇಲಿನ ಟ್ಯಾಕ್ಸೇಶನ್ ಈ ಕೆಳಗಿನ ಕ್ರೈಟೀರಿಯಗಳನ್ನು ನೀಡುತ್ತದೆ:
ಟ್ಯಾಕ್ಸ್ ಪೇಯರ್ ತನ್ನ ಬಿಸಿನೆಸ್ ಅಥವಾ ಪ್ರೊಫೆಷನ್‌ನ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿರಬೇಕು.
ಹಿಂದಿನ ವರ್ಷದ ಬಹುಪಾಲು ಭಾಗಕ್ಕೆ ಬಿಸಿನೆಸ್ ಅಥವಾ ಪ್ರೊಫೆಷನ್ ಕಾರ್ಯನಿರ್ವಹಿಸುತ್ತಿರಬೇಕು.
ಟ್ಯಾಕ್ಸ್ ಪೇಯರ್ ಯಾವುದೇ ಇತರ ಬಿಸಿನೆಸ್ ಅಥವಾ ಪ್ರೊಫೆಷನ್ ಅನ್ನು ನಿರ್ವಹಿಸುವ ಸಂದರ್ಭದಲ್ಲಿ, ಆ ವ್ಯಕ್ತಿಗೆ ಟ್ಯಾಕ್ಸ್ ಸಹ ಅನ್ವಯಿಸುತ್ತದೆ.
ಇತರ ಮೂಲಗಳಿಂದ ಬಂದ ಇನ್ಕಮ್
ಟ್ಯಾಕ್ಸ್‌ಗೊಳಪಡುವ ಇನ್ಕಮ್‌ನ ಕೊನೆಯ ವಿಭಾಗ ಆಗಿ, ಮೇಲಿನ ವಿಭಾಗಗಳಲ್ಲಿ ಕೆಟಗರಿಯೆಂದು ವಿಂಗಡಿಸದ, ಇನ್ಕಮ್ ಪ್ರಕಾರಗಳನ್ನು ಈ ವಿಭಾಗ ಒಳಗೊಂಡಿದೆ. ಉದಾಹರಣೆಗೆ, ಲಾಟರಿ ಅವಾರ್ಡ್‌ಗಳು, ಬ್ಯಾಂಕ್ ಡೆಪಾಸಿಟ್‌ಗಳು, ಡಿವಿಡೆಂಡ್‌ಗಳು, ಸರ್ಕಾರಿ ಬಾಂಡ್‌ಗಳಿಂದ ಇಂಟರೆಸ್ಟ್ ಇತ್ಯಾದಿಗಳಿಂದ ಬರುವ ಇನ್ಕಮ್ ಈ ವಿಭಾಗದಡಿಯಲ್ಲಿ ಬರುತ್ತದೆ ಮತ್ತು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ 1961 ರ ಸೆಕ್ಷನ್ 56(2) ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ಅನ್ನು ವಿಧಿಸಲಾಗುತ್ತದೆ.
ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಕುರಿತ ಈ ಕಾಂಪ್ರೆಹೆನ್ಸಿವ್ ಗೈಡ್ ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಈಗ ನೀವು ಪ್ರಕ್ರಿಯೆಯ ಬಗ್ಗೆ ಚೆನ್ನಾಗಿ ತಿಳಿದಿರುವಿರಿ, ನೀವು ಯಾವುದೇ ತೊಂದರೆಯಿಲ್ಲದೆ ಆರಾಮಾಗಿ ರಿಟರ್ನ್‌ಗಳನ್ನು ಫೈಲ್ ಮಾಡಬಹುದು.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ಯಾರು ಫೈಲ್ ಮಾಡಬೇಕು?
ಹಣಕಾಸು ವರ್ಷದಲ್ಲಿ ವ್ಯಕ್ತಿಯ ಒಟ್ಟು ಇನ್ಕಮ್, ಮೂಲಭೂತ ವಿನಾಯಿತಿ ಲಿಮಿಟ್ ಅನ್ನು ಮೀರಿದರೆ, ಅಂತಹ ಎಲ್ಲಾ ನಿವಾಸಿಗಳಿಗೆ ಇದು ಕಡ್ಡಾಯವಾಗಿದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಮೂಲ ವಿನಾಯಿತಿ ಲಿಮಿಟ್ ₹2,50,000 ಆಗಿದೆ. ಅದೇ 60-80 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ₹3,00,000 ಮತ್ತು 80 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದವರಿಗೆ ₹5,00,000.
ಐಟಿಆರ್ (ITR) ಫೈಲ್ ಮಾಡುವುದು ಕಡ್ಡಾಯವೇ?
ಒಟ್ಟು ಇನ್ಕಮ್ ₹2,50,000 ಗಳನ್ನು ಮೀರಿದ ವ್ಯಕ್ತಿಗಳಿಗೆ ಐಟಿಆರ್ ಫೈಲ್ ಮಾಡುವುದು ಕಡ್ಡಾಯವಾಗಿದೆ.
ಐಟಿಆರ್ (ITR)-1 ಅನ್ನು ಯಾರು ಬಳಸಬಹುದು?
ITR-1 ಈ ಇನ್ಕಮ್‌ನ ಯಾವುದೇ ಅಥವಾ ಈ ಮುಂದಿನ ಎಲ್ಲಾ ಇನ್ಕಮ್‌ನ ಅಡಿಯಲ್ಲಿ ರೆವಿನ್ಯೂ ಗಳಿಸುವ ಟ್ಯಾಕ್ಸ್ ಪೇಯರ್‌ಗಳಿಗೆ ಅನ್ವಯಿಸುತ್ತದೆ: ಹೌಸ್ ಪ್ರಾಪರ್ಟಿಯಿಂದ ಬರುವ ಇನ್ಕಮ್,' ಸ್ಯಾಲರಿಗಳು,' ಮತ್ತು 'ಇತರ ಮೂಲಗಳಿಂದ ಬರುವ ಇನ್ಕಮ್.