ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಭಾರತದಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫಾರ್ಮ್‌ಗಳ ವಿವಿಧ ವಿಧಗಳು

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ಗಳು ಟ್ಯಾಕ್ಸ್‌ಪೇಯರ್‌ಗಳು ತಾವು ಗಳಿಸಿದ ಇನ್‌ಕಮ್‌ ಮತ್ತು ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಗೆ ಅಪ್ಲಿಕೇಬಲ್ ಆಗುವ ಟ್ಯಾಕ್ಸ್ ಬಗ್ಗೆ ಮಾಹಿತಿಯನ್ನು ಫೈಲ್ ಮಾಡುವ ಫಾರ್ಮ್‌ಗಳಾಗಿವೆ. ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ ಸಹಾಯದಿಂದ, ಟ್ಯಾಕ್ಸ್‌ಪೇಯರ್‌ಗಳು ತಮ್ಮ ಟ್ಯಾಕ್ಸ್ ಲಯಬಿಲಿಟಿಯನ್ನು ಸುಲಭವಾಗಿ ಕ್ಯಾಲ್ಕುಲೇಟ್ ಮಾಡಬಹುದು, ಅಧಿಕ ಟ್ಯಾಕ್ಸ್ ಪೇಮೆಂಟ್ ಸಂದರ್ಭದಲ್ಲಿ ರಿಫಂಡ್‌ಗಳಿಗೆ ಅಪ್ಲೈ ಮಾಡಬಹುದು ಮತ್ತು ಟ್ಯಾಕ್ಸ್‌ ಪೇಮೆಂಟ್‌ಗಳನ್ನು ನಿಗದಿಪಡಿಸಬಹುದು.

ಟ್ಯಾಕ್ಸ್‌ಪೇಯರ್‌ಗಳ ಕೆಟಗರಿ ಮತ್ತು ಇನ್‌ಕಮ್‌ ವಿಧವನ್ನು ಅವಲಂಬಿಸಿ ವಿವಿಧ ರೀತಿಯ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫಾರ್ಮ್‌ಗಳಿವೆ. ಅಂತಹ ಫಾರ್ಮ್‌ಗಳೆಂದರೆ: ಐಟಿಆರ್ 1, ಐಟಿಆರ್ 2, ಐಟಿಆರ್ 3, ಐಟಿಆರ್ 4, ಐಟಿಆರ್ 5, ಐಟಿಆರ್ 6 ಮತ್ತು ಐಟಿಆರ್ 7. ಆದಾಗ್ಯೂ, ಫೈಲ್ ಮಾಡಲು ಟ್ಯಾಕ್ಸ್ ರಿಟರ್ನ್ ಫಾರ್ಮ್ ಅನ್ನು ಆಯ್ಕೆ ಮಾಡುವ ಮೊದಲು ಜಾಗರೂಕರಾಗಿರಬೇಕು. ಆದ್ದರಿಂದ, ತಪ್ಪುಗಳ ಸಾಧ್ಯತೆಗಳನ್ನು ಕಡಿಮೆ ಮಾಡಲು, ನಾವು ವಿವಿಧ ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್‌ಗಳು ಮತ್ತು ನಿರ್ದಿಷ್ಟ ಫಾರ್ಮ್‌ಗೆ ಯಾರು ಅರ್ಹರು ಎಂಬುದನ್ನು ವಿವರಿಸುವ ಈ ತುಣುಕನ್ನು ಪ್ರಸ್ತುತಪಡಿಸುತ್ತಿದ್ದೇವೆ.

ಆರಂಭಿಸೋಣ!

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫಾರ್ಮ್‌ಗಳ ವಿಧಗಳು

ವ್ಯಕ್ತಿಗಳಿಗೆ ಇರುವ ಐಟಿಆರ್ ಫಾರ್ಮ್ ಅಥವಾ ಸ್ಯಾಲರೀಡ್ ವ್ಯಕ್ತಿಗೆ ಇರುವ ಐಟಿಆರ್ ಫಾರ್ಮ್, ಕಂಪನಿಗಳಿಗಿಂತ ಭಿನ್ನವಾಗಿದೆ ಎಂಬುದನ್ನು ಗಮನಿಸುವುದು ಅತ್ಯಗತ್ಯ. ಟ್ಯಾಕ್ಸ್‌ ರಿಟರ್ನ್ಸ್‌ಗೆ ಫೈಲ್ ಮಾಡಲು ಒಬ್ಬ ವ್ಯಕ್ತಿ ಮತ್ತು ಕಂಪನಿಗೆ ಅರ್ಹವಾದ ಕೆಲವು ಫಾರ್ಮ್‌ಗಳನ್ನು ಕೆಳಗೆ ನೀಡಲಾಗಿದೆ.

ವ್ಯಕ್ತಿಗಳು, ಸ್ಯಾಲರೀಡ್ ವ್ಯಕ್ತಿಗಳು ಮತ್ತು ಹೆಚ್‌ಯುಎಫ್‌ಗಳಿಗೆ ಐಟಿಆರ್ ಫಾರ್ಮ್‌ಗಳು

ಭಾರತೀಯ ನಿವಾಸಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳು (ಹೆಚ್‌ಯುಎಫ್‌) ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ಗೆ ಐಟಿಆರ್‌ ಫಾರ್ಮ್ 1 ಮತ್ತು 2 ಅನ್ನು ಫೈಲ್ ಮಾಡಬಹುದು. ಈ ಫಾರ್ಮ್‌ಗಳನ್ನು ಆಯ್ಕೆ ಮಾಡಲು ವ್ಯಕ್ತಿಗಳು ಮನೆ ಪ್ರಾಪರ್ಟಿ ಮತ್ತು ಇತರ ಇನ್‌ಕಮ್‌ ಮೂಲಗಳ ಮೂಲಕ ಸ್ಯಾಲರಿ ಪಡೆಯಬೇಕು. ಒಬ್ಬ ವ್ಯಕ್ತಿಯು ತನ್ನ ಇನ್‌ಕಮ್‌ ಈ ಕೆಳಗಿನ ಕೋಷ್ಟಕದಲ್ಲಿ ನಮೂದಿಸಲಾದ ಲಿಮಿಟ್‌ಗಿಂತ ಹೆಚ್ಚಿದ್ದರೆ ಐಟಿಆರ್‌ಗಾಗಿ ಫೈಲ್ ಮಾಡಬೇಕು.

ವಿವರಗಳು ಇನ್‌ಕಮ್‌
ವ್ಯಕ್ತಿಗಳು < 60 ವರ್ಷಗಳು ರೂ.2 ಲಕ್ಷಗಳು
ವ್ಯಕ್ತಿಗಳು < 60 ವರ್ಷಗಳು ಆದರೆ < 80 ವರ್ಷಗಳು ರೂ.3 ಲಕ್ಷಗಳು
ವ್ಯಕ್ತಿಗಳು > 80 ವರ್ಷಗಳು ರೂ.5 ಲಕ್ಷಗಳು

[ಮೂಲ]

ಕಂಪನಿಗಳು, ಟ್ರಸ್ಟ್‌ಗಳು, ಪಾಲುದಾರಿಕೆ ಸಂಸ್ಥೆಗಳಿಗೆ ಐಟಿಆರ್ ಫಾರ್ಮ್‌ಗಳು

ಲಿಮಿಟೆಡ್ ಲಯಬಿಲಿಟಿ ಫಾರ್ಟನರ್‌ಶಿಪ್‌ಗಳು (ಎಲ್‌ಎಲ್‌ಪಿಗಳು), ಟ್ರಸ್ಟ್‌ಗಳು ಮತ್ತು ಕಂಪನಿಗಳು ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ಗಳನ್ನು ಫೈಲ್ ಮಾಡುವಾಗ ಐಟಿಆರ್ ಫಾರ್ಮ್‌-5, 6 ಮತ್ತು 7ಗಳನ್ನು ಫೈಲ್ ಮಾಡಬೇಕು. ಬಿಸಿನೆಸ್ ಇನ್‌ಕಮ್‌, ಮನೆ ಪ್ರಾಪರ್ಟಿ ಮತ್ತು ಇತರ ಇನ್‌ಕಮ್‌ ಮೂಲಗಳನ್ನು ಹೊಂದಿರುವ ಕಂಪನಿಗಳು ಮತ್ತು ಸಂಸ್ಥೆಗಳು ಈ ಫಾರ್ಮ್‌ಗಳನ್ನು ಆಯ್ಕೆ ಮಾಡಲು ಅರ್ಹವಾಗಿವೆ. ಆದಾಗ್ಯೂ, ಕ್ಯಾಪಿಟಲ್ ಗೇನ್ಸ್(ಬಂಡವಾಳ ಲಾಭ)ನಿಂದ ಬರುವ ಇನ್‌ಕಮ್‌ ಈ ಕೆಟಗರಿಗಳ ಅಡಿಯಲ್ಲಿ ಬರುವುದಿಲ್ಲ.

ಈಗ, ನಾವು ಪ್ರತಿ ಐಟಿಆರ್ ಫಾರ್ಮ್‌ನ ವಿವರಗಳತ್ತ ಹೋಗೋಣ!

ಐಟಿಆರ್-1 ಫಾರ್ಮ್

ಈ ಫಾರ್ಮ್ ಅನ್ನು ಸಹಜ್ ಫಾರ್ಮ್ ಎಂದೂ ಕರೆಯುತ್ತಾರೆ. ವೈಯಕ್ತಿಕ ಟ್ಯಾಕ್ಸ್‌ಪೇಯರ್‌ಗಳು ಐಟಿಆರ್ 1 ಫೈಲಿಂಗ್‌ಗೆ ಹೋಗಬೇಕು. ಐಟಿಆರ್ ರಿಟರ್ನ್ಸ್‌ಗಾಗಿ ಈ ಫಾರ್ಮ್ ಅನ್ನು ಆಯ್ಕೆ ಮಾಡಲು ಯಾವುದೇ ಇತರ ಟ್ಯಾಕ್ಸ್‌ಪೇಯರ್‌ಗಳು ಅರ್ಹರಾಗಿರುವುದಿಲ್ಲ.

ಈ ಫಾರ್ಮ್‌ಗೆ ಯಾರು ಅಪ್ಲೈ ಮಾಡಬೇಕು?

ಕೆಳಗಿನ ವ್ಯಕ್ತಿಗಳು ಈ ಫಾರ್ಮ್‌ಗೆ ಅಪ್ಲೈ ಮಾಡಬಹುದು:

  • ಸ್ಯಾಲರಿ ಅಥವಾ ಪೆನ್ಷನ್‌ನಿಂದ ಇನ್‌ಕಮ್‌ ಅನ್ನು ಪಡೆಯುವ ವ್ಯಕ್ತಿ.
  • ಏಕ ವಸತಿ ಪ್ರಾಪರ್ಟಿಯ ಮೇಲೆ ಮಾತ್ರ ಅವಲಂಬಿತವಾಗಿರುವ ಇನ್‌ಕಮ್‌ ಹೊಂದಿರುವ ವ್ಯಕ್ತಿ.
  • ಕ್ಯಾಪಿಟಲ್ ಗೇನ್ಸ್ ಮತ್ತು ಇತರ ಬಿಸಿನೆಸ್‌ನಿಂದ ಯಾವುದೇ ಇನ್‌ಕಮ್‌ ಹೊಂದಿಲ್ಲದ ವ್ಯಕ್ತಿ.
  • ಯಾವುದೇ ವಿದೇಶಿ ಅಸೆಟ್ ಮಾಲೀಕರಲ್ಲದ ಅಥವಾ ಯಾವುದೇ ವಿದೇಶಿ ಇನ್‌ಕಮ್‌ ಮೂಲವನ್ನು ಹೊಂದಿರದ ವ್ಯಕ್ತಿ.
  • ರೂ.5000ವರೆಗಿನ ಕೃಷಿ ಇನ್‌ಕಮ್‌ ಹೊಂದಿರುವ ವ್ಯಕ್ತಿ.
  • ಇತರ ಇನ್‌ವೆಸ್ಟ್‌ಮೆಂಟ್‌ಗಳು, ಫಿಕ್ಸ್‌ಡ್‌ ಡೆಪಾಸಿಟ್‌ಗಳು ಇತ್ಯಾದಿಗಳಂತಹ ಹೆಚ್ಚುವರಿ ಇನ್‌ಕಮ್‌ ಮೂಲಗಳನ್ನು ಹೊಂದಿರುವ ವ್ಯಕ್ತಿ.
  • ಲಾಟರಿಗಳು, ಕುದುರೆ ರೇಸಿಂಗ್ ಮತ್ತು ಇತರ ಆಕಸ್ಮಿಕ ಧನಲಾಭಗಳನ್ನು ಗೆಲ್ಲುವುದರಿಂದ ಸಿಗುವ ಯಾವುದೇ ಇನ್‌ಕಮ್‌ ಅನ್ನು ಹೊಂದಿರದ ಯಾವುದೇ ವ್ಯಕ್ತಿ.
  • ತಮ್ಮ ಸಂಗಾತಿಯ ಅಥವಾ ಅಪ್ರಾಪ್ತ ವಯಸ್ಸಿನ ಮಕ್ಕಳ ಇನ್‌ಕಮ್‌ ಅನ್ನು ಅವರ ಜೊತೆ ಸೇರಿಸಲು ಬಯಸುವ ವ್ಯಕ್ತಿಗಳು.
  • ಕರೆಂಟ್ ಖಾತೆಯಲ್ಲಿ ರೂ.1 ಕೋಟಿಗಿಂತ ಹೆಚ್ಚು ಡೆಪಾಸಿಟ್ ಇಟ್ಟ ವ್ಯಕ್ತಿ.
  • ಕಳೆದ ವರ್ಷ ವಿದ್ಯುತ್ ಬಿಲ್‌ನಲ್ಲಿ ರೂ.1 ಲಕ್ಷಕ್ಕಿಂತ ಹೆಚ್ಚು ಪಾವತಿಸಿದ ಯಾರೇ ವ್ಯಕ್ತಿ.

[ಮೂಲ]

ಈ ಫಾರ್ಮ್‌ಗೆ ಯಾರು ಅಪ್ಲೈ ಮಾಡಲು ಸಾಧ್ಯವಿಲ್ಲ?

ಕೆಳಗಿನ ವರ್ಗಕ್ಕೆ ಸೇರಿದ ಯಾವುದೇ ಅಸೆಸ್ಸೀ ಟ್ಯಾಕ್ಸ್ ರಿಟರ್ನ್ಸ್‌ಗಾಗಿ ಐಟಿಆರ್ 1 ಅನ್ನು ಫೈಲ್ ಮಾಡಲು ಅರ್ಹರಾಗಿರುವುದಿಲ್ಲ.

  • ರೂ.50 ಲಕ್ಷ ಇನ್‌ಕಮ್‌ ಮೀರಿರುವವರು.
  • ರೂ.5000ಕ್ಕಿಂತ ಹೆಚ್ಚಿನ ಕೃಷಿ ಇನ್‌ಕಮ್‌ ಹೊಂದಿರುವ ವ್ಯಕ್ತಿಗಳು.
  • ಕ್ಯಾಪಿಟಲ್ ಗೇನ್ಸ್ ಮತ್ತು ಬಿಸಿನೆಸ್‌ಗಳಿಂದ ಇನ್‌ಕಮ್‌ ಹೊಂದಿರುವ ಅಪ್ಲಿಕೆಂಟ್‌ಗಳು.
  • ಅನೇಕ ಮನೆ ಪ್ರಾಪರ್ಟಿಗಳಿಂದ ಇನ್‌ಕಮ್‌ ಅನ್ನು ಹೊಂದಿರುವ ವ್ಯಕ್ತಿ.
  • ಒಬ್ಬ ವ್ಯಕ್ತಿಯು ಕಂಪನಿಯಲ್ಲಿ ಡೈರೆಕ್ಟರ್ ಆಗಿದ್ದರೆ, ಅವರು ಐಟಿಆರ್ 1ಗೆ ಅಪ್ಲೈ ಮಾಡಲು ಸಾಧ್ಯವಿಲ್ಲ.
  • ಆರ್ಥಿಕ ವರ್ಷದ ಯಾವುದೇ ಸಮಯದಲ್ಲಿ ಪಟ್ಟಿಮಾಡದ ಈಕ್ವಿಟಿ ಶೇರುಗಳಲ್ಲಿ ಇನ್‌ವೆಸ್ಟ್‌ ಮಾಡುವವರು ಈ ಫಾರ್ಮ್ ಅನ್ನು ಆಯ್ಕೆ ಮಾಡಲು ಅರ್ಹರಾಗಿರುವುದಿಲ್ಲ.
  • ನಿವಾಸಿಯಾಗಿರುವ ವಿದೇಶಿ ಪ್ರಾಪರ್ಟಿಗಳ ಮಾಲೀಕರು ಮತ್ತು ವಿದೇಶಿ ಮೂಲಗಳಿಂದ ಇನ್‌ಕಮ್‌ ಅನ್ನು ಹೊಂದಿರುವವರು.
  • ಅನಿವಾಸಿಗಳು ಮತ್ತು ಆರ್‌ಎನ್‌ಓಆರ್‌ (ರೆಸಿಡೆಂಟ್ಸ್‌ ನಾಟ್‌ ಆರ್ಡಿನರೀಲಿ ರೆಸಿಡೆಂಟ್ಸ್‌) ವ್ಯಕ್ತಿಗಳು.
  • ಇನ್ನೊಬ್ಬ ವ್ಯಕ್ತಿಯ ಇನ್‌ಕಮ್‌ ಅನ್ನು ನಿರ್ಣಯಿಸಬಹುದಾದ ವ್ಯಕ್ತಿಯು ಈ ಫಾರ್ಮ್ ಅನ್ನು ಬಳಸಿಕೊಂಡು ಐಟಿ ರಿಟರ್ನ್ಸ್ ಅನ್ನು ಫೈಲ್ ಮಾಡಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ, ಟ್ಯಾಕ್ಸ್ ಡಿಡಕ್ಷನ್ ಇನ್ನಿತರ ವ್ಯಕ್ತಿಯ ವಿಚಾರಕ್ಕೆ ಸಂಬಂಧಿಸಿ ನಡೆಯುತ್ತದೆ.

ಐಟಿಆರ್-2 ಫಾರ್ಮ್

ಅಸೆಟ್‌ಗಳು ಅಥವಾ ಪ್ರಾಪರ್ಟಿಗಳನ್ನು ಮಾರಾಟ ಮಾಡುವುದರಿಂದ ಬಂದಿರುವ ಇನ್‌ಕಮ್‌ ಅನ್ನು ಹೊಂದಿರುವ ವ್ಯಕ್ತಿಗಳಿಗೆ ಐಟಿಆರ್ 2 ಇನ್‌ಕಮ್‌ ಟ್ಯಾಕ್ಸ್ ಅರ್ಹವಾಗಿದೆ. ಭಾರತದ ಹೊರಗಿನ ಇನ್‌ಕಮ್‌ ಹೊಂದಿರುವ ವ್ಯಕ್ತಿಗಳು ಸಹ ಈ ಫಾರ್ಮ್ ಅನ್ನು ಬಳಸಬಹುದು. ಇದಲ್ಲದೆ, ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಸಲು ಹೆಚ್‌ಯುಎಫ್‌ಗಳು ಐಟಿಆರ್‌ 2 ಫಾರ್ಮ್‌ಗೆ ಅಪ್ಲೈ ಮಾಡಬಹುದು.

ಐಟಿಆರ್ 2 ಫಾರ್ಮ್ ಅನ್ನು ಬಳಸಿಕೊಂಡು ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು ಅರ್ಹತೆಯ ಮಾನದಂಡಗಳು

ಕೆಳಗಿನ ವರ್ಗಗಳಿಗೆ ಸೇರಿದ ವ್ಯಕ್ತಿಗಳು ಐಟಿಆರ್ 2 ಫಾರ್ಮ್‌ಗಳಿಗೆ ಅಪ್ಲೈ ಮಾಡಬಹುದು:

  • ಸ್ಯಾಲರಿ ಅಥವಾ ಪೆನ್ಷನ್ ಮೂಲಕ ಇನ್‌ಕಮ್‌ ಅನ್ನು ಗಳಿಸುವ ವ್ಯಕ್ತಿಗಳು.
  • ಒಟ್ಟು ಇನ್‌ಕಮ್‌ ರೂ.50 ಲಕ್ಷಕ್ಕಿಂತ ಹೆಚ್ಚು ಇರುವವರು
  • ಅವರು ಸ್ಯಾಲರಿ, ಪೆನ್ಷನ್, ಮನೆ ಪ್ರಾಪರ್ಟಿಗಳು ಮತ್ತು ಕುದುರೆ ರೇಸ್ ಮತ್ತು ಲಾಟರಿಯಂತಹ ಇತರ ಸಂಪನ್ಮೂಲಗಳಿಂದ ಗಳಿಸಿದರೆ
  • ಅವರು ಪಟ್ಟಿ ಮಾಡದ ಈಕ್ವಿಟಿ ಶೇರುಗಳು ಅಥವಾ ಇಎಸ್‌ಓಪಿಗಳನ್ನು ಹೊಂದಿದ್ದರೆ
  • ಅವರು ಕಂಪನಿಯ ಡೈರೆಕ್ಟರ್ ಆಗಿದ್ದರೆ
  • ಇನ್‌ಕಮ್‌ನ ಮೂಲವು ಕ್ಯಾಪಿಟಲ್ ಗೇನ್ಸ್ ಮೇಲೆ ಅಂದರೆ, ಅಸೆಟ್ ಅಥವಾ ಪ್ರಾಪರ್ಟಿ ಮಾರಾಟದ ಗಳಿಕೆ ಮೇಲೆ ಅವಲಂಬಿತವಾಗಿರುವವರು.
  • ಒಬ್ಬ ವ್ಯಕ್ತಿಯ ಇನ್‌ಕಮ್‌ ಒಂದಕ್ಕಿಂತ ಹೆಚ್ಚು ಮನೆ ಪ್ರಾಪರ್ಟಿಯಿಂದ ಬರುತ್ತಿದ್ದರೆ.
  • ವಿದೇಶಿ ಅಸೆಟ್‌ಗಳ ಮಾಲೀಕರು ಮತ್ತು ಭಾರತದಿಂದ ಹೊರಗಿನ ಇನ್‌ಕಮ್‌ ಮೂಲ ಹೊಂದಿರುವವರು.
  • ರೂ.5000ಗಿಂತ ಹೆಚ್ಚಿನ ಕೃಷಿ ಇನ್‌ಕಮ್‌ ಹೊಂದಿರುವ ವ್ಯಕ್ತಿ.
  • ಲಾಟರಿ ಇತ್ಯಾದಿಗಳನ್ನು ಗೆಲ್ಲುವ ಮೂಲಕ ಇನ್‌ಕಮ್‌ ಹೊಂದಿರುವ ಜನರು.
  • ಒಬ್ಬ ವ್ಯಕ್ತಿಯು ಕಂಪನಿಯಲ್ಲಿ ಡೈರೆಕ್ಟರ್ ಆಗಿದ್ದರೆ.
  • ಅನಿವಾಸಿಗಳು ಮತ್ತು ಆರ್‌ಎನ್‌ಓಆರ್‌.

ಈ ಫಾರ್ಮ್‌ಗೆ ಅಪ್ಲೈ ಮಾಡಲು ಅರ್ಹತೆ ಹೊಂದಿಲ್ಲದ ವರ್ಗಗಳು

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ಗಾಗಿ ಎಲ್ಲಾ ಟ್ಯಾಕ್ಸ್‌ಪೇಯರ್‌ಗಳು ಈ ಫಾರ್ಮ್ ಅನ್ನು ಪಡೆಯಬಾರದು. ನಿಮ್ಮ ಉತ್ತಮ ತಿಳುವಳಿಕೆಗಾಗಿ ನಾವು ಅಂತಹ ಜನರನ್ನು ಈ ಕೆಳಗಿನ ಸೆಕ್ಷನ್‌ನಲ್ಲಿ ವರ್ಗೀಕರಿಸಿದ್ದೇವೆ.

  • ಬಿಸಿನೆಸ್ ಉದ್ಯಮ ಅಥವಾ ಇತರ ವೃತ್ತಿಯಿಂದ ಯಾವುದೇ ಲಾಭಗಳು ಅಥವಾ ಗಳಿಕೆಗಳನ್ನು ಒಳಗೊಂಡಿರುವ ಒಟ್ಟು ಇನ್‌ಕಮ್‌ ಅನ್ನು ಹೊಂದಿರುವ ವ್ಯಕ್ತಿಗಳು ಈ ಫಾರ್ಮ್ ಅನ್ನು ಆಯ್ಕೆ ಮಾಡಲಾಗುವುದಿಲ್ಲ.
  • ಒಟ್ಟು ಇನ್‌ಕಮ್‌ ರೂ.50 ಲಕ್ಷಕ್ಕಿಂತ ಕಡಿಮೆ ಇರುವವರು.

[ಮೂಲ]

ಐಟಿಆರ್-3 ಫಾರ್ಮ್

ಸಂಸ್ಥೆಯ ಅಡಿಯಲ್ಲಿ ಯಾವುದೇ ಬಿಸಿನೆಸ್ ನಡೆಸದೆ ಸಂಸ್ಥೆಯಲ್ಲಿ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿರುವ ವೈಯಕ್ತಿಕ ಟ್ಯಾಕ್ಸ್‌ಪೇಯರ್‌ಗಳು ಅಥವಾ ಹೆಚ್‌ಯುಎಫ್‌ಗಳು ಐಟಿಆರ್‌ 3ಗೆ ಅಪ್ಲೈ ಮಾಡಲು ಅರ್ಹರಾಗಿರುತ್ತಾರೆ. ಐಟಿಆರ್ 3ರ ಅರ್ಥವನ್ನು ಹುಡುಕುತ್ತಿರುವ ಟ್ಯಾಕ್ಸ್‌ಪೇಯರ್‌ಗಳು ಮೊದಲೇ ಹೇಳಲಾದ ಫಾರ್ಮ್‌ನ ಅರ್ಹತಾ ಮಾನದಂಡಗಳನ್ನು ತಿಳಿದಿರಬೇಕು.

ಈ ಫಾರ್ಮ್‌ಗೆ ಯಾರು ಅರ್ಹರು?

ಈ ಕೆಳಗಿನ ಇನ್‌ಕಮ್‌ ಮೂಲಗಳನ್ನು ಹೊಂದಿರುವ ಅಪ್ಲಿಕೆಂಟ್‌ಗಳು ಐಟಿಆರ್‌ 3 ಅನ್ನು ಫೈಲ್ ಮಾಡಲು ಅರ್ಹರಾಗಿರುತ್ತಾರೆ.

  • ಪಟ್ಟಿ ಮಾಡದ ಈಕ್ವಿಟಿ ಶೇರುಗಳ ಮೇಲಿನ ಇನ್‌ವೆಸ್ಟ್‌ಮೆಂಟ್‌ಗಳಿಂದ ಬಂದ ಇನ್‌ಕಮ್‌.
  • ಬಿಸಿನೆಸ್‌ ಅಥವಾ ವೃತ್ತಿಯನ್ನು ಮುಂದುವರಿಸುತ್ತಿರುವ ವ್ಯಕ್ತಿಗಳು ಅರ್ಹರಾಗಿರುತ್ತಾರೆ.
  • ಕಂಪನಿ ಡೈರೆಕ್ಟರ್.
  • ಮನೆ ಪ್ರಾಪರ್ಟಿ, ಪೆನ್ಷನ್, ಸ್ಯಾಲರಿ ಅಥವಾ ಇತರ ಮೂಲಗಳಿಂದ ಬರುವ ಇನ್‌ಕಮ್‌.
  • ಸಂಸ್ಥೆಯಲ್ಲಿ ಪಾಲುದಾರರಾಗುವ ಮೂಲಕ ಇನ್‌ಕಮ್‌ ಗಳಿಸುವ ವ್ಯಕ್ತಿ.

ಈ ಫಾರ್ಮ್‌ಗೆ ಯಾರು ಅಪ್ಲೈ ಮಾಡಲು ಸಾಧ್ಯವಿಲ್ಲ?

ಐಟಿಆರ್ 1 ಮತ್ತು ಐಟಿಆರ್ 2 ಗೆ ಅರ್ಹರಾಗಿರುವ ನಿರ್ದಿಷ್ಟ ವರ್ಗಕ್ಕೆ ಸೇರಿದ ಟ್ಯಾಕ್ಸ್‌ಪೇಯರ್‌ಗಳು. ಅದೇ ರೀತಿ, ಕೆಲವು ಟ್ಯಾಕ್ಸ್‌ಪೇಯರ್‌ಗಳು ಐಟಿ ರಿಟರ್ನ್ಸ್‌ಗಾಗಿ ಈ ಫಾರ್ಮ್ ಅನ್ನು ಫೈಲ್ ಮಾಡಬಾರದು. ಈ ಫಾರ್ಮ್‌ಗೆ ಅರ್ಹರಲ್ಲದ ಕೆಲವು ವ್ಯಕ್ತಿಗಳನ್ನು ಈ ಕೆಳಗೆ ಸೂಚಿಸಲಾಗಿದೆ.

  • ರೂ.2 ಕೋಟಿಗಿಂತ ಕಡಿಮೆ ಬಿಸಿನೆಸ್ ಟರ್ನ್ಓವರ್‌ ಹೊಂದಿರುವ ಮತ್ತು ಪ್ರಿಸಂಪ್ಟಿವ್ ಇನ್‌ಕಮ್‌ ಅನ್ನು (ಐಟಿಆರ್‌4) ಆಯ್ಕೆಮಾಡಿದ ಯಾವುದೇ ವ್ಯಕ್ತಿ
  • ಸಂಸ್ಥೆಯು ನಡೆಸುವ ಬಿಸಿನೆಸ್‌ನಿಂದ ಇನ್‌ಕಮ್‌ ಅನ್ನು ಗಳಿಸದವರು ಐಟಿಆರ್‌ 3ಗೆ ಅಪ್ಲೈ ಮಾಡಲು ಸಾಧ್ಯವಿಲ್ಲ.
  • ಬಿಸಿನೆಸ್‌ನ ಟ್ಯಾಕ್ಸೇಬಲ್‌ ಇನ್‌ಕಮ್‌ ಸ್ಯಾಲರಿ, ಬೋನಸ್, ಕಮಿಷನ್, ಸಂಭಾವನೆ ಮತ್ತು ಇಂಟರೆಸ್ಟ್‌ ರೂಪದಲ್ಲಿ ಬಂದರೆ ಟ್ಯಾಕ್ಸ್‌ಪೇಯರ್‌ಗಳು ಐಟಿಆರ್ 3 ಅನ್ನು ಫೈಲ್ ಮಾಡಬಹುದು. ಇದನ್ನು ಹೊರತುಪಡಿಸಿ, ಬಿಸಿನೆಸ್‌ನಿಂದ ಬರುವ ಯಾವುದೇ ಇತರ ಇನ್‌ಕಮ್‌ ಮೂಲವು ಅರ್ಹವಾಗಿರುವುದಿಲ್ಲ.

ಐಟಿಆರ್-4ಎಸ್ ಫಾರ್ಮ್

ಸುಗಮ್ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಐಟಿಆರ್ 4 ಎಂದರೆ ಬಿಸಿನೆಸ್ ಅನ್ನು ನಡೆಸುವ ಮತ್ತು ಅದರಿಂದ ಅಥವಾ ಇತರ ವೃತ್ತಿಗಳಿಂದ ಇನ್‌ಕಮ್‌ ಅನ್ನು ಗಳಿಸುವ ವ್ಯಕ್ತಿಗಳು ಈ ಫಾರ್ಮ್ ಅನ್ನು ಬಳಸಿಕೊಂಡು ಐಟಿ ರಿಟರ್ನ್ಸ್‌ಗಾಗಿ ಫೈಲ್ ಮಾಡಬಹುದು. ಈ ಇನ್‌ಕಮ್‌ನೊಂದಿಗೆ, ಅವರು ಯಾವುದೇ ಅನಿರೀಕ್ಷಿತವಾಗಿ ಗಳಿಸಿದ ದೊಡ್ಡ ಮೊತ್ತದ(ವಿಂಡ್ ಫಾಲ್) ಗಳಿಕೆಗಳನ್ನು ಕ್ಲಬ್ ಮಾಡಬಹುದು ಮತ್ತು ಈ ಫಾರ್ಮ್‌ಗೆ ಅಪ್ಲೈ ಮಾಡಬಹುದು. ಹೆಚ್ಚುವರಿಯಾಗಿ, ವೈದ್ಯರು, ಅಂಗಡಿಯವರು, ವಿನ್ಯಾಸಕರು, ಚಿಲ್ಲರೆ ವ್ಯಾಪಾರಿಗಳು, ಏಜೆಂಟ್‌ಗಳು, ಕಾಂಟ್ರಾಕ್ಟರ್‌ಗಳು ಮುಂತಾದ ವೃತ್ತಿಪರರಾದ ಟ್ಯಾಕ್ಸ್‌ಪೇಯರ್‌ಗಳು ಈ ಫಾರ್ಮ್ ಅನ್ನು ಬಳಸಿಕೊಂಡು ತಮ್ಮ ಐಟಿಆರ್ ಅನ್ನು ಫೈಲ್ ಮಾಡಬಹುದು.

ಈ ಫಾರ್ಮ್‌ಗೆ ಅರ್ಹರಾಗಿರುವ ಟ್ಯಾಕ್ಸ್‌ಪೇಯರ್‌ಗಳ ವರ್ಗ

ಅರ್ಹತೆಗೆ ಒಗ್ಗಿಕೊಂಡಿರುವವರಿಗೆ ಐಟಿಆರ್ 4ನ ಅರ್ಥವು ಸರಳವಾಗಿದೆ. ಇಲ್ಲಿ ಕೆಲವು ಅರ್ಹತಾ ಮಾನದಂಡಗಳಿವೆ.

  • ಬಿಸಿನೆಸ್‌ಗಳಿಂದ ಇನ್‌ಕಮ್‌ ಅನ್ನು ಗಳಿಸುವ ವ್ಯಕ್ತಿಗಳು.
  • ಒಂದೇ ಮನೆ ಪ್ರಾಪರ್ಟಿಯನ್ನು ಹೊಂದಿರುವ ಮತ್ತು ಅದರ ಮೂಲಕ ಇನ್‌ಕಮ್‌ ಅನ್ನು ಗಳಿಸುವವನು.
  • ಕ್ಯಾಪಿಟಲ್ ಗೇನ್ಸ್ ಅಥವಾ ಅಸೆಟ್‌ಗಳ ಮಾರಾಟದ ಮೂಲಕ ಇನ್‌ಕಮ್‌ ಅನ್ನು ಪಡೆಯದ ಟ್ಯಾಕ್ಸ್‌ಪೇಯರ್‌ಗಳು.
  • ಒಬ್ಬ ವ್ಯಕ್ತಿಯ ಕೃಷಿ ಇನ್‌ಕಮ್‌ ರೂ.5000ಗಿಂತ ಕಡಿಮೆ ಇದ್ದರೆ, ಅವರು ಐಟಿಆರ್‌ 4 ಅನ್ನು ಫೈಲ್ ಮಾಡಬಹುದು.
  • ಭಾರತದ ಹೊರಗೆ ಅಸೆಟ್‌ಗಳು ಅಥವಾ ಪ್ರಾಪರ್ಟಿಗಳನ್ನು ಹೊಂದಿರದ ವ್ಯಕ್ತಿಗಳು.
  • ಭಾರತದೊಳಗೆ ಇನ್‌ಕಮ್‌ ಮೂಲ ಹೊಂದಿರುವ ಅಪ್ಲಿಕೆಂಟ್‌.
  • ಇನ್‌ಕಮ್‌ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 44AD, ಸೆಕ್ಷನ್ 44ADA ಮತ್ತು ಸೆಕ್ಷನ್ 44AE ಅಡಿಯಲ್ಲಿ ಪ್ರಿಸಂಪ್ಚಿವ್‌ ಸ್ಕೀಮ್ ಅನ್ನು ಅವಲಂಬಿಸಿ ಇನ್‌ಕಮ್‌ ಗಳಿಸುವ ಬಿಸಿನೆಸ್‌ಗಳಿಗೂ ಈ ಫಾರ್ಮ್ ಅಪ್ಲಿಕೇಬಲ್ ಆಗುತ್ತದೆ.
  • ಹೆಚ್‌ಯುಎಫ್‌ಗಳು, ವ್ಯಕ್ತಿಗಳು ಅಥವಾ ಪಾಲುದಾರಿಕೆ ಸಂಸ್ಥೆಗಳು ಐಟಿಆರ್‌-4ಎಸ್‌ ಫಾರ್ಮ್‌ಗಳಿಗೆ ಅರ್ಹವಾಗಿವೆ
  • ಒಬ್ಬ ವ್ಯಕ್ತಿಯ ಸ್ಯಾಲರಿ ಅಥವಾ ಪೆನ್ಷನ್‌ನಿಂದ ವಾರ್ಷಿಕ ಇನ್‌ಕಮ್‌ ರೂ.50 ಲಕ್ಷದವರೆಗೆ ಇದ್ದರೆ

ಈ ಫಾರ್ಮ್ ಅನ್ನು ಬಳಸಲಾಗದ ಟ್ಯಾಕ್ಸ್‌ಪೇಯರ್‌ಗಳು

ಕೆಲವು ವ್ಯಕ್ತಿಗಳು ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು ಐಟಿಆರ್-4ಎಸ್ ಫಾರ್ಮ್‌ನ ಅಪ್ಲಿಕೇಷನ್‌ಗೆ ಅರ್ಹತೆ ಹೊಂದಿರುವುದಿಲ್ಲ. ಅಂತಹ ವರ್ಗಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.

  • ವಿದೇಶಿ ಅಸೆಟ್‌ನ ಮಾಲೀಕರು.
  • ಕಂಪನಿ ಡೈರೆಕ್ಟರ್‌ಗಳು.
  • ವಿದೇಶಿ ಇನ್‌ಕಮ್‌ ಮೂಲ ಹೊಂದಿರುವ ವ್ಯಕ್ತಿ.
  • ಟ್ಯಾಕ್ಸ್‌ಪೇಯರ್‌ಗಳ ಒಟ್ಟು ಇನ್‌ಕಮ್‌ ರೂ.50 ಲಕ್ಷ ಮೀರಿದವರು.
  • ಅಪ್ಲಿಕೆಂಟ್‌ಗಳು ಯಾವುದೇ ಇನ್‌ಕಮ್‌ ಅಡಿಯಲ್ಲಿ ನಷ್ಟವನ್ನು ಕ್ಯಾರಿ ಫಾರ್ವರ್ಡ್ ಮಾಡಿದರೆ, ಅವರು ಈ ಫಾರ್ಮ್ ಅನ್ನು ಬಳಸಲಾಗುವುದಿಲ್ಲ.
  • ಪಟ್ಟಿಮಾಡದ ಈಕ್ವಿಟಿ ಶೇರುಗಳ ಇನ್‌ವೆಸ್ಟರ್‌ಗಳು.
  • ಅನಿವಾಸಿ ಮತ್ತು ಸಾಮಾನ್ಯ ನಿವಾಸಿಯಲ್ಲದ ನಿವಾಸಿ.
  • ಒಂದಕ್ಕಿಂತ ಹೆಚ್ಚು ವಸತಿ ಪ್ರಾಪರ್ಟಿಯಿಂದ ಇನ್‌ಕಮ್‌ ಅನ್ನು ಗಳಿಸುವ ವ್ಯಕ್ತಿಗಳು.
  • ಭಾರತದ ಹೊರಗಿನ ಯಾವುದೇ ಖಾತೆಯಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿರುವುದು.
  • ಒಬ್ಬ ಟ್ಯಾಕ್ಸ್‌ಪೇಯರ್‌ ಇನ್ನೊಬ್ಬ ವ್ಯಕ್ತಿಯ ಇನ್‌ಕಮ್‌ಗೆ ಸಂಬಂಧಿಸಿದಂತೆ ಅಸೆಸ್ಸೀ ಆಗಿದ್ದರೆ, ಅಲ್ಲಿ ಟ್ಯಾಕ್ಸ್ ಡಿಡಕ್ಷನ್ ಇನ್ನೊಬ್ಬ ವ್ಯಕ್ತಿಯ ಕೈಯಲ್ಲಿ ನಡೆಯುತ್ತದೆ.
  • ಲಿಮಿಟೆಡ್ ಲಯಬಿಲಿಟಿ ಪಾರ್ಟ್‌ನರ್‌ಶಿಪ್‌ಗಳು (ಎಲ್‌ಎಲ್‌ಪಿಗಳು) ಈ ಫಾರ್ಮ್ ಅನ್ನು ಪಡೆಯಲು ಸಾಧ್ಯವಿಲ್ಲ.
  • ನಿಮ್ಮ ವಾರ್ಷಿಕ ಟರ್ನ್‌ಓವರ್‌ ರೂ.2 ಕೋಟಿಗಳಿಗಿಂತ ಹೆಚ್ಚಿದ್ದರೆ, ನೀವು ಫಾರ್ಮ್ 3ರ ಅಡಿಯಲ್ಲಿ ನಿಮ್ಮ ರಿಟರ್ನ್ಸ್ ಅನ್ನು ಫೈಲ್ ಮಾಡಬೇಕು.

[ಮೂಲ]

ಐಟಿಆರ್-5 ಫಾರ್ಮ್

ಬಿಸಿನೆಸ್ ಟ್ರಸ್ಟ್‌ಗಳು, ಸಂಸ್ಥೆಗಳು ಇತ್ಯಾದಿಗಳು ಐಟಿಆರ್ ಫೈಲ್ ಮಾಡಲು ಈ ಫಾರ್ಮ್ ಅನ್ನು ಆರಿಸಿಕೊಳ್ಳಬೇಕು. ಐಟಿಆರ್ 5 ಎಂದರೆ ಪಾಲುದಾರಿಕೆ ಸಂಸ್ಥೆಗಳು ಅಥವಾ ಎಲ್‌ಎಲ್‌ಪಿಗಳಿಗೆ ಅರ್ಹವಾಗಿರುವ ಫಾರ್ಮ್‌ಗಳು. ಐಟಿಆರ್ 5ರ ಅರ್ಥವನ್ನು ವಿವರವಾಗಿ ಅರ್ಥಮಾಡಿಕೊಳ್ಳಲು, ಈ ಫಾರ್ಮ್‌ಗಳ ಅಡಿಯಲ್ಲಿ ಅರ್ಹರಾಗಿರುವ ಟ್ಯಾಕ್ಸ್‌ಪೇಯರ್‌ಗಳು ಮತ್ತು ಅಲ್ಲದವರ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕು.

ಐಟಿಆರ್ 5 ಅನ್ನು ಫೈಲ್ ಮಾಡಬಹುದಾದ ಅರ್ಹ ಟ್ಯಾಕ್ಸ್‌ಪೇಯರ್‌ಗಳು

ಈ ಕೆಳಗಿನ ಸಂಸ್ಥೆಗಳು ಈ ಫಾರ್ಮ್ ಅನ್ನು ಬಳಸಿಕೊಂಡು ಐಟಿ ರಿಟರ್ನ್ಸ್ ಫೈಲ್ ಮಾಡಬಹುದು.

  • ಎಲ್‌ಎಲ್‌ಪಿಗಳು (ಲಿಮಿಟೆಡ್ ಲಯಬಿಲಿಟಿ ಪಾರ್ಟ್‌ನರ್‌ಶಿಪ್‌ಗಳು).
  • ಸಹಕಾರ ಸಂಘಗಳು.
  • ಸ್ಥಳೀಯ ಅಧಿಕಾರಿಗಳು.
  • ಬಿಓಐಗಳು (ಬಾಡಿ ಆಫ್ ಇಂಡಿವಿಜುವಲ್ಸ್).
  • ಕೃತಕ ನ್ಯಾಯಾಂಗ ವ್ಯಕ್ತಿಗಳು.
  • ಸಂಸ್ಥೆಗಳು.
  • ಎಓಪಿಗಳು (ಅಸೋಸಿಯೇಷನ್ ಆಫ್ ಪರ್ಸನ್ಸ್).
  • ಮರಣ ಹೊಂದಿದವರ ಮತ್ತು ದಿವಾಳಿಯಾದವರ ಎಸ್ಟೇಟ್.
  • ಇನ್‌ವೆಸ್ಟ್‌ಮೆಂಟ್‌ ಫಂಡ್‌ಗಳು.
  • ಬಿಸಿನೆಸ್ ಟ್ರಸ್ಟ್‌ಗಳು

ಈ ಫಾರ್ಮ್ ಅನ್ನು ಆಯ್ಕೆ ಮಾಡಲು ಸಾಧ್ಯವಾಗದ ಸಂಘಗಳು

ಐಟಿಆರ್ 5 ಅನ್ನು ಫೈಲ್ ಮಾಡಲು ಅರ್ಹರಲ್ಲದ ವ್ಯಕ್ತಿಗಳ ಪಟ್ಟಿ ಇಲ್ಲಿದೆ.

  • ಐಟಿಆರ್ 1ಗೆ ಯಾವುದೇ ವ್ಯಕ್ತಿಗಳ ಫೈಲಿಂಗ್.
  • ಹಿಂದೂ ಅವಿಭಕ್ತ ಕುಟುಂಬಗಳು (ಹೆಚ್‌ಯುಎಫ್‌ಗಳು).
  • ಯಾವುದೇ ಕಂಪನಿ.
  • ಐಟಿಆರ್ 7ಗೆ ಫೈಲ್ ಮಾಡುವವರು ಈ ಫಾರ್ಮ್‌ಗೆ ಫೈಲ್ ಮಾಡಲು ಸಾಧ್ಯವಿಲ್ಲ.
  • ಕ್ಯಾಪಿಟಲ್ ಗೇನ್ಸ್‌ನಿಂದ ಇನ್‌ಕಮ್‌ ಹೊಂದಿರುವ ಅಪ್ಲಿಕೆಂಟ್‌ಗಳು.

[ಮೂಲ]

ಐಟಿಆರ್-6 ಫಾರ್ಮ್

ಐಟಿಆರ್ 6 ಎಂದರೆ ಕಂಪನಿಗಳು ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು ಅರ್ಹವಾಗಿರುವ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫಾರ್ಮ್. ಕಂಪನಿಗಳು ಈ ಫಾರ್ಮ್ ಮೂಲಕ ವಿದ್ಯುನ್ಮಾನವಾಗಿ ಮಾತ್ರ ಇನ್‌ಕಮ್‌ ಟ್ಯಾಕ್ಸ್‌ ಅನ್ನು ಫೈಲ್ ಮಾಡಬಹುದು.

ಐಟಿಆರ್ 6 ಅನ್ನು ಯಾರು ಫೈಲ್ ಮಾಡಬಹುದು?

ಈ ಫಾರ್ಮ್‌ಗೆ ಅರ್ಹವಾದ ಸಂಘಗಳು ಮತ್ತು ಇನ್‌ಕಮ್‌ ಮೂಲಗಳನ್ನು ಕೆಳಗೆ ನೀಡಲಾಗಿದೆ.

  • ಸೆಕ್ಷನ್ 11ರ ಅಡಿಯಲ್ಲಿ ವಿನಾಯಿತಿ ಕ್ಲೈಮ್ ಮಾಡುವ ಕಂಪನಿಗಳನ್ನು ಹೊರತುಪಡಿಸಿ ಎಲ್ಲಾ ಕಂಪನಿಗಳು.
  • ವಸತಿ ಪ್ರಾಪರ್ಟಿಯಿಂದ ಗಳಿಸಿದ ಇನ್‌ಕಮ್‌.
  • ಬಿಸಿನೆಸ್ ಇನ್‌ಕಮ್‌.
  • ಬಹು ಮೂಲಗಳಿಂದ ಇನ್‌ಕಮ್‌.

ಯಾರು ಐಟಿಆರ್ 6 ಅನ್ನು ಫೈಲ್ ಮಾಡಲು ಸಾಧ್ಯವಿಲ್ಲ?

ಮುಂದಿನ ಸೆಕ್ಷನ್‌ನಲ್ಲಿ, ಐಟಿಆರ್ 6 ಫಾರ್ಮ್ ಅನ್ನು ಬಳಸಿಕೊಂಡು ಐಟಿ ರಿಟರ್ನ್ಸ್ ಫೈಲ್ ಮಾಡಲು ಅರ್ಹವಲ್ಲದ ಕೆಲವು ಸಂಸ್ಥೆಗಳು ಮತ್ತು ಇನ್‌ಕಮ್‌ ಮೂಲಗಳನ್ನು ನಾವು ಪಟ್ಟಿ ಮಾಡಿದ್ದೇವೆ.

  • ಸೆಕ್ಷನ್ 11ರ ಅಡಿಯಲ್ಲಿ ಸಂಸ್ಥೆಗಳು ಟ್ಯಾಕ್ಸ್ ವಿನಾಯಿತಿಗಳನ್ನು ಪಡೆಯಬಹುದು ಏಕೆಂದರೆ ಈ ಸಂಸ್ಥೆಗಳಿಂದ ಬರುವ ಇನ್‌ಕಮ್‌ ಅನ್ನು ಧಾರ್ಮಿಕ ಅಥವಾ ಚಾರಿಟೇಬಲ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
  • ಕ್ಯಾಪಿಟಲ್‌ ಗೇನ್ಸ್‌ನಿಂದ ಬರುವ ಇನ್‌ಕಮ್‌.
  • ಯಾವುದೇ ವ್ಯಕ್ತಿ ಅಥವಾ ಹೆಚ್‌ಯುಎಫ್‌ಗಳು.

ಐಟಿಆರ್-7 ಫಾರ್ಮ್

ವ್ಯಕ್ತಿಗಳು ಅಥವಾ ಕಂಪನಿಗಳು ಸೆಕ್ಷನ್ 139(4A) ಅಥವಾ 139(4C) ಅಥವಾ 139(4D) ಅಥವಾ 139(4E) ಅಥವಾ 139(4F) ಅಡಿಯಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫೈಲ್ ಮಾಡಲು ಐಟಿಆರ್ 7 ಫಾರ್ಮ್ ಅನ್ನು ಬಳಸಬೇಕು.

ಐಟಿಆರ್ 7 ಅನ್ನು ಫೈಲ್ ಮಾಡಲು ಅರ್ಹರಾಗಿರುವ ಕಂಪನಿಗಳು ಅಥವಾ ವ್ಯಕ್ತಿಗಳು

ಮೇಲೆ ತಿಳಿಸಿದಂತೆ, ಈ ಸೆಕ್ಷನ್‌ಗಳ ಅಡಿಯಲ್ಲಿ ರಿಟರ್ನ್ಸ್ ಒದಗಿಸುವ ಕಂಪನಿಗಳು ಐಟಿಆರ್‌ 7 ಅನ್ನು ಫೈಲ್ ಮಾಡಬಹುದು. ಅರ್ಹತಾ ಮಾನದಂಡಗಳನ್ನು ಅರ್ಥಮಾಡಿಕೊಳ್ಳಲು ಪ್ರತಿ ಸೆಕ್ಷನ್‌ನ ವಿವರಣೆಯನ್ನು ಕೆಳಗೆ ನೀಡಲಾಗಿದೆ.

  • ಸೆಕ್ಷನ್ 139(4A)- ಚಾರಿಟೇಬಲ್ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಟ್ರಸ್ಟ್‌ಗಳು ಅಥವಾ ಇತರ ಒಟ್ಟು ಕಾನೂನು ಬಾಧ್ಯತೆಗಳ ಅಡಿಯಲ್ಲಿ ಹೊಂದಿರುವ ಪ್ರಾಪರ್ಟಿಗಳಿಂದ ತಮ್ಮ ಇನ್‌ಕಮ್‌ ಅನ್ನು ಪಡೆಯುವ ವ್ಯಕ್ತಿಗಳು ಅಥವಾ ಈ ಫಾರ್ಮ್ ಅನ್ನು ಬಳಸಿಕೊಂಡು ಈ ಸೆಕ್ಷನ್ ಅಡಿಯಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡಬೇಕು.
  • ಸೆಕ್ಷನ್ 139(4B)- ರಾಜಕೀಯ ಪಕ್ಷಗಳು ಈ ಸೆಕ್ಷನ್ ಅಡಿಯಲ್ಲಿ ರಿಟರ್ನ್ಸ್ ಫೈಲ್ ಮಾಡುತ್ತವೆ, ಅವರ ಒಟ್ಟು ಗಳಿಸಿದ ಇನ್‌ಕಮ್‌ ನಾನ್‌-ಟ್ಯಾಕ್ಸೇಬಲ್‌ ಲಿಮಿಟ್‌ ಅನ್ನು ಮೀರಿರುತ್ತದೆ.
  • ಸೆಕ್ಷನ್ 139(4C)- ಈ ಕೆಳಗಿನ ಸಂಸ್ಥೆಗಳು ಐಟಿಆರ್ 7 ಫಾರ್ಮ್ ಅನ್ನು ಬಳಸಿಕೊಂಡು ಈ ಸೆಕ್ಷನ್ ಅಡಿಯಲ್ಲಿ ರಿಟರ್ನ್‌ಗಳನ್ನು ಫೈಲ್ ಮಾಡಬೇಕು:
    • ನ್ಯೂಸ್ ಏಜೆನ್ಸಿ
    • ಸೆಕ್ಷನ್ 10(23A) ಅಡಿಯಲ್ಲಿ ಸಂಸ್ಥೆಗಳು
    • ವೈಜ್ಞಾನಿಕ ಸಂಶೋಧನಾ ಅಸೋಸಿಯೇಷನ್‌
    • ಸೆಕ್ಷನ್ 10(23B) ಅಡಿಯಲ್ಲಿ ಅಸೋಸಿಯೇಷನ್‌ಗಳು ಅಥವಾ ಇನ್‌ಸ್ಟಿಟ್ಯೂಷನ್‌ಗಳು
    • ಯಾವುದೇ ಮೆಡಿಕಲ್ ಇನ್‌ಸ್ಟಿಟ್ಯೂಷನ್‌ಗಳು, ವಿಶ್ವವಿದ್ಯಾಲಯಗಳು, ಎಜುಕೇಷನಲ್ ಇನ್‌ಸ್ಟಿಟ್ಯೂಷನ್‌ಗಳು, ಫಂಡ್‌ಗಳು, ಇತ್ಯಾದಿ.
  • ಸೆಕ್ಷನ್ 139(4D)- ಈ ಸೆಕ್ಷನ್ ಅಡಿಯಲ್ಲಿ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಇತರ ಇನ್‌ಸ್ಟಿಟ್ಯೂಷನ್‌ಗಳು ರಿಟರ್ನ್ಸ್ ಫೈಲ್ ಮಾಡಬೇಕು. ಆದಾಗ್ಯೂ, ಅವರು ಸೆಕ್ಷನ್ 139(4D)ನ ಇತರ ಪ್ರಾವಿಶನ್ ಗಳ ಅಡಿಯಲ್ಲಿ ಇನ್‌ಕಮ್‌ ಮತ್ತು ನಷ್ಟಗಳ ರಿಟರ್ನ್‌ ಅನ್ನು ಪ್ರಸ್ತುತಪಡಿಸುವ ಅಗತ್ಯವಿಲ್ಲ.
  • ಸೆಕ್ಷನ್ 139(4E)- ಈ ಸೆಕ್ಷನ್‌ನ ಅಡಿಯಲ್ಲಿ, ಬಿಸಿನೆಸ್ ಟ್ರಸ್ಟ್‌ಗಳು ಇನ್‌ಕಮ್‌ ಅಥವಾ ನಷ್ಟದ ರಿಟರ್ನ್‌ಗಳನ್ನು ಒದಗಿಸದೆ ರಿಟರ್ನ್‌ಗಳನ್ನು ಫೈಲ್ ಮಾಡುತ್ತವೆ.
  • ಸೆಕ್ಷನ್ 139(4F)- ಸೆಕ್ಷನ್ 115UB ಪ್ರಕಾರ ಇನ್‌ವೆಸ್ಟ್‌ಮೆಂಟ್‌ ಫಂಡ್‌ಗಳು ಈ ಸೆಕ್ಷನ್ ಅಡಿಯಲ್ಲಿ ರಿಟರ್ನ್ಸ್ ಫೈಲ್ ಮಾಡುತ್ತವೆ. ರಿಟರ್ನ್ಸ್ ಫೈಲ್ ಮಾಡುವಾಗ, ಈ ಸೆಕ್ಷನ್‌ನ ಯಾವುದೇ ಪ್ರಾವಿಶನ್ ಯ ಅಡಿಯಲ್ಲಿ ಇನ್‌ಕಮ್‌ ಅಥವಾ ನಷ್ಟಗಳ ರಿಟರ್ನ್ಸ್ ಅನ್ನು ಪ್ರಸ್ತುತಪಡಿಸುವ ಅಗತ್ಯವಿಲ್ಲ.

[ಮೂಲ]

ಐಟಿಆರ್‌ 7 ಅನ್ನು ಫೈಲ್‌ ಮಾಡಲು ಅರ್ಹರಲ್ಲದ ಟ್ಯಾಕ್ಸ್‌ಪೇಯರ್‌ಗಳು

ಐಟಿಆರ್ 1ರಿಂದ 7ರವರೆಗೆ, ಒಬ್ಬರು ಅವನು ಅಥವಾ ಅವಳು ಅರ್ಹರಾಗಿರುವ ಐಟಿಆರ್ ಫಾರ್ಮ್‌ಗೆ ಹೋಗಬೇಕು. ಅದೇ ರೀತಿಯಲ್ಲಿ, ಐಟಿಆರ್ 7 ಅನ್ನು ಆಯ್ಕೆ ಮಾಡಲು ಸಾಧ್ಯವಾಗದ ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಇವೆ. ಅವುಗಳಲ್ಲಿ ಕೆಲವನ್ನು ಕೆಳಗೆ ಉಲ್ಲೇಖಿಸಲಾಗಿದೆ:

  • ಕ್ಯಾಪಿಟಲ್ ಗೇನ್ಸ್‌ನಿಂದ ಗಳಿಕೆ ಮಾಡುವ ವ್ಯಕ್ತಿಗಳು.
  • ಐಟಿಆರ್ 1ರ ಅಡಿಯಲ್ಲಿ ಯಾವುದೇ ಸ್ಯಾಲರೀಡ್ ವ್ಯಕ್ತಿ ಅಥವಾ ಹೆಚ್‌ಯುಎಫ್‌.
  • ಐಟಿಆರ್‌ 5ಗೆ ಅರ್ಹರಾಗಿರುವವರು ಐಟಿಆರ್ 7 ಅನ್ನು ಬಳಸಿಕೊಂಡು ಐಟಿ ರಿಟರ್ನ್‌ಗಳನ್ನು ಫೈಲ್ ಮಾಡಲು ಅರ್ಹರಾಗಿರುವುದಿಲ್ಲ.

ಇದಲ್ಲದೆ, ಹಣಕಾಸು ಸಚಿವಾಲಯದ ಪ್ರಕಾರ, ಆರ್ಥಿಕ ವರ್ಷ 2022-23ಗೆ ಐಟಿಆರ್‌ ಅನ್ನು ಫೈಲ್ ಮಾಡುವ ಕೊನೆಯ ದಿನಾಂಕ 31 ಜುಲೈ 2023 ಆಗಿದೆ. ಆದ್ದರಿಂದ, ಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಸಲು ಎದುರು ನೋಡುತ್ತಿರುವ ಟ್ಯಾಕ್ಸ್‌ಪೇಯರ್‌ಗಳು ಐಟಿಆರ್ 1ರಿಂದ 7ರವರೆಗಿನ ಫಾರ್ಮ್‌ಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿರಬೇಕು. ಇದು ಅವರಿಗೆ ಸೂಕ್ತವಾದ ಫಾರ್ಮ್ ಅನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮತ್ತೆ ಫೈಲಿಂಗ್ ಪ್ರೊಸೆಸ್ ಮಾಡುವ ತೊಂದರೆಯನ್ನು ತಪ್ಪಿಸುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ಲೋನ್‌ಗಾಗಿ ಅಪ್ಲೈ ಮಾಡಲು ಬಯಸಿದರೆ ನಾನು ಐಟಿಆರ್ ಅನ್ನು ಫೈಲ್ ಮಾಡಬೇಕೇ?

ಹೌದು, ನೀವು ಲೋನ್‌ಗಾಗಿ ಅಪ್ಲೈ ಮಾಡಿದ್ದರೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫೈಲ್ ಮಾಡುವುದು ಕಡ್ಡಾಯವಾಗಿದೆ.

ವ್ಯಕ್ತಿಗಳಿಗೆ ಎಷ್ಟು ಐಟಿಆರ್ ಫಾರ್ಮ್‌ಗಳು ಲಭ್ಯವಿದೆ?

ವ್ಯಕ್ತಿಗಳಿಗೆ ಐದು ಐಟಿಆರ್ ಫಾರ್ಮ್‌ಗಳಿವೆ, ಅವುಗಳೆಂದರೆ, ಐಟಿಆರ್ 1, ಐಟಿಆರ್ 2, ಐಟಿಆರ್ 3, ಐಟಿಆರ್-4ಎಸ್‌ ಮತ್ತು ಐಟಿಆರ್ 5.

ಯಾವ ಐಟಿಆರ್ ಫಾರ್ಮ್ ವ್ಯಕ್ತಿಗಳು ಮತ್ತು ಸಂಸ್ಥೆಗಳು ಎರಡಕ್ಕೂ ಅಪ್ಲಿಕೇಬಲ್ ಆಗುತ್ತದೆ?

ಅರ್ಹತಾ ಮಾನದಂಡಗಳ ಪ್ರಕಾರ, ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫೈಲ್ ಮಾಡಲು ವ್ಯಕ್ತಿಗಳು, ಹೆಚ್‌ಯುಎಫ್‌ಗಳು ಮತ್ತು ಸಂಸ್ಥೆಗಳು ಐಟಿಆರ್ 1, ಐಟಿಆರ್ 2 ಮತ್ತು ಐಟಿಆರ್-4ಎಸ್ ಅನ್ನು ಬಳಸಬಹುದು.