ಭಾರತದಲ್ಲಿ ಫ್ರೀಲ್ಯಾನ್ಸರ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಫೈಲಿಂಗ್ (ಐಟಿಆರ್).
ಸ್ವತಂತ್ರೋದ್ಯೋಗಿಗಳು ಅಥವಾ ಫ್ರೀಲ್ಯಾನ್ಸರ್‌ಗಳು ಎಂದು ಯಾರು ಕರೆಯಲ್ಪಡುತ್ತಾರೆ?
ಭಾರತೀಯ ಇನ್ಕಮ್ ಟ್ಯಾಕ್ಸ್ ನಿಯಮಗಳ ಪ್ರಕಾರ, ಸ್ವತಂತ್ರ ಉದ್ಯೋಗ ಅಥವಾ 'ಫ್ರೀಲ್ಯಾನ್ಸಿಂಗ್‌ನಿಂದ ಬರುವ ಆದಾಯ' ಎಂಬುದು ನಿಮ್ಮ ಬೌದ್ಧಿಕ ಅಥವಾ ದೈಹಿಕ ಸಾಮರ್ಥ್ಯಗಳನ್ನು ಬಳಸಿಕೊಂಡು ಒಂದು ವೃತ್ತಿಯಿಂದ ಗಳಿಸುವ ಆದಾಯವಾಗಿದೆ ಮತ್ತು ಇದನ್ನು "ಬಿಸಿನೆಸ್ ಮತ್ತು ವೃತ್ತಿಯಿಂದ ಗಳಿಕೆಗಳು ಮತ್ತು ಲಾಭಗಳು" ಅಡಿಯಲ್ಲಿ ಇರಿಸಬಹುದಾಗಿದೆ.
ಹೀಗಾಗಿ, ಫ್ರೀಲ್ಯಾನ್ಸರ್‌ಗಳು ಉದ್ಯೋಗಿಗಳಾಗಿರದೆ ಅಥವಾ ನೇರ ಪೇರೋಲ್ ಅಡಿಯಲ್ಲಿ ಬರದೆ ತಮ್ಮ ದೈಹಿಕ ಅಥವಾ ಬೌದ್ಧಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿರ್ದಿಷ್ಟ ಆದಾಯವನ್ನು ಗಳಿಸುವ ವ್ಯಕ್ತಿಗಳಾಗಿದ್ದಾರೆ. ಹೀಗಾಗಿ, ತಮ್ಮ ಆದಾಯದ ಆಧಾರದ ಮೇಲೆ ಟ್ಯಾಕ್ಸ್ ಅನ್ನು ಪಾವತಿಸಬೇಕು. ಇದಲ್ಲದೆ, ಅವರು ನಿರ್ದಿಷ್ಟ ಮೌಲ್ಯಮಾಪನ ವರ್ಷದಲ್ಲಿ ಐಟಿಆರ್ ಅನ್ನು ಫೈಲ್ ಮಾಡಬೇಕಾಗುತ್ತದೆ.
ನೀವು ಹೊಸ ಫ್ರೀಲ್ಯಾನ್ಸರ್ ಆಗಿದ್ದು ಐಟಿಆರ್ ಫೈಲಿಂಗ್ ಬಗ್ಗೆ ಯೋಚಿಸುತ್ತಿದ್ದೀರಾ? ಹಾಗಾದರೆ ಫ್ರೀಲ್ಯಾನ್ಸರ್‌ಗಳಿಗೆ ಐಟಿಆರ್ ಹೇಗೆ ಫೈಲ್ ಮಾಡುವುದು ಮತ್ತು ಇತರೆ ಸಂಬಂಧಿತ ಪ್ರಮುಖ ಮಾಹಿತಿಯ ಕುರಿತು ತಿಳಿಯೋಣ.
ಫ್ರೀಲ್ಯಾನ್ಸರ್‌ಗಳಿಗೆ ಐಟಿಆರ್ ಫೈಲ್ ಮಾಡುವುದು ಹೇಗೆ?
ಭಾರತದಲ್ಲಿ ಫ್ರೀಲ್ಯಾನ್ಸರ್‌ಗಳಿಗೆ ಐಟಿಆರ್ ಫೈಲಿಂಗ್ ಪ್ರಕ್ರಿಯೆಯು ಸ್ಯಾಲರೀಡ್ ವ್ಯಕ್ತಿಗಳಿಂದ ಭಿನ್ನವಾಗಿರುತ್ತದೆ. ಕಾನೂನು, ವೈದ್ಯಕೀಯ, ವಾಸ್ತುಶಿಲ್ಪ, ಅಕೌಂಟಿಂಗ್, ಎಂಜಿನಿಯರಿಂಗ್, ತಾಂತ್ರಿಕ ಸಲಹಾ ಸಂಸ್ಥೆ, ಚಲನಚಿತ್ರ, ಇಂಟೀರಿಯರ್ ಡೆಕೊರೇಶನ್ ಮತ್ತು ಅಂತಹುದೇ ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಫ್ರೀಲ್ಯಾನ್ಸರ್‌ಗಳು ಐಟಿಆರ್ ಅನ್ನು ಸಲ್ಲಿಸಬಹುದು.
ಸಿಎ, ವೈದ್ಯರು, ವಕೀಲರು ಮುಂತಾದ ನಿರ್ದಿಷ್ಟಪಡಿಸದ ಪ್ರದೇಶಗಳಿಗೆ ಸೇರಿದ ಫ್ರೀಲ್ಯಾನ್ಸರ್‌ಗಳು ಸಹ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಬಹುದು.
ಈಗ ಉದ್ಭವಿಸುವ ಪ್ರಶ್ನೆಯೆಂದರೆ, ಫ್ರೀಲ್ಯಾನ್ಸರ್‌ಗಳಿಗೆ ಐಟಿಆರ್ ಅನ್ನು ಫೈಲ್ ಮಾಡುವುದು ಹೇಗೆ? ಇದಕ್ಕಾಗಿ ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ:
- ಹಂತ 1 - ನಿರ್ದಿಷ್ಟ ಹಣಕಾಸಿನ ವರ್ಷದ 1ನೇ ಏಪ್ರಿಲ್‌ನಿಂದ 31ನೇ ಮಾರ್ಚ್‌ವರೆಗಿನ ಒಟ್ಟು ಆದಾಯವನ್ನು ಕ್ಯಾಲ್ಕುಲೇಟ್ ಮಾಡಿ. ಲೋನ್ ಗಳಂತಹ ಯಾವುದೇ ಡೆಟ್ ಬಾಧ್ಯತೆಗಳನ್ನು ಬಿಟ್ಟುಬಿಡಿ ಏಕೆಂದರೆ ಅದನ್ನು ಆದಾಯವೆಂದು ಪರಿಗಣಿಸಲಾಗುವುದಿಲ್ಲ.
- ಹಂತ 2 - ಟ್ಯಾಕ್ಸ್ ಡಿಡಕ್ಷನ್ ಅನ್ನು ಕ್ಲೈಮ್ ಮಾಡಲು ಸ್ವಾತಂತ್ರ ಅಥವಾ ಫ್ರೀಲ್ಯಾನ್ಸ್ ಬಿಸಿನೆಸ್ ನಲ್ಲಿ ಉಂಟಾದ ವೆಚ್ಚಗಳನ್ನು ಕ್ಯಾಲ್ಕ್ಯುಲೇಟ್ ಮಾಡಿ.
- ಹಂತ 3 - ಕೆಳಗಿನವುಗಳಲ್ಲಿ ಸೂಕ್ತವಾದ ಫಾರ್ಮ್ ಅನ್ನು ಆಯ್ಕೆಮಾಡಿ ಮತ್ತು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ-
- ಐಟಿಆರ್-3 ಬಿಸಿನೆಸ್ ಲಾಭಗಳಿಂದ ಪ್ರಯೋಜನಗಳನ್ನು ಪಡೆಯುವ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಅಂತಹ ವ್ಯಕ್ತಿಗಳು ಹೌಸ್ ಪ್ರಾಪರ್ಟಿ, ಕ್ಯಾಪಿಟಲ್ ಲಾಭಗಳು, ಸ್ಯಾಲರಿ/ಪೆನ್ಷನ್ ಇತ್ಯಾದಿಗಳಿಂದ ಬರುವ ಆದಾಯವನ್ನು ಒಳಗೊಂಡಂತೆ ಅಂತಹ ಬಿಸಿನೆಸ್ ಅಥವಾ ವೃತ್ತಿಯನ್ನು ರಿಟರ್ನ್ಸ್ ಜೊತೆ ಮುಂದುವರಿಸಬಹುದು.
- ಇನ್ಕಮ್ ಟ್ಯಾಕ್ಸ್ ಕಾನೂನು ಸೆಕ್ಷನ್ 44AD, 44ADA ಮತ್ತು 44AE ಪ್ರಕಾರ ಊಹೆಯ ಆದಾಯ ಸ್ಕೀಮ್ ಗಳನ್ನು ಆಯ್ಕೆಮಾಡುವ ಜನರಿಗೆ ಐಟಿಆರ್-4 ಅನ್ವಯಿಸುತ್ತದೆ. ಫ್ರೀಲ್ಯಾನ್ಸರ್‌ಗಳು ಸೆಕ್ಷನ್ 44ADA ಅಡಿಯಲ್ಲಿ ಬರುವ ವೃತ್ತಿಗೆ ಸೇರಿದವರಾಗಿದ್ದರೆ, ಸೆಕ್ಷನ್ 44AD ನಲ್ಲಿ ನಿರ್ದಿಷ್ಟಪಡಿಸಿದಂತೆ ಬಿಸಿನೆಸ್ ಆದಾಯವನ್ನು ಹೊಂದಿದ್ದರೆ ಮತ್ತು ವೃತ್ತಿಯಿಂದ ಒಟ್ಟು ಗಳಿಕೆಯು ₹50 ಲಕ್ಷಗಳನ್ನು ಮೀರದಿದ್ದರೆ,ಐಟಿಆರ್-4 ಫಾರ್ಮ್ ಅನ್ವಯವಾಗುತ್ತದೆ.
ವ್ಯಕ್ತಿಗಳು ಇನ್ಕಮ್ ಟ್ಯಾಕ್ಸ್ ಇಲಾಖೆಯ ಅಧಿಕೃತ ಪೋರ್ಟಲ್‌ನಿಂದ ಫಾರ್ಮ್‌ಗಳನ್ನು ಡೌನ್‌ಲೋಡ್ ಮಾಡಬಹುದು, ಅವುಗಳನ್ನು ಆಫ್‌ಲೈನ್‌ನಲ್ಲಿ ಭರ್ತಿ ಮಾಡಬಹುದು ಮತ್ತು ಈ ಐಟಿ ಪೋರ್ಟಲ್‌ನಲ್ಲಿ ಅದರ XML ಫೈಲ್ ಅನ್ನು ಅಪ್‌ಲೋಡ್ ಮಾಡಬಹುದು. ಪರ್ಯಾಯವಾಗಿ, ವ್ಯಕ್ತಿಗಳು ಅವುಗಳನ್ನು ಪೋರ್ಟಲ್‌ನಲ್ಲಿ ಭರ್ತಿ ಮಾಡಬಹುದು ಮತ್ತು ಡಿಜಿಟಲ್ ವೆರಿಫಿಕೇಶನ್ ನಂತರ ಫಾರ್ಮ್‌ಗಳನ್ನು ಸಲ್ಲಿಸಬಹುದು.
- ಹಂತ 4 - ಟ್ಯಾಕ್ಸೇಬಲ್ ಆದಾಯ, ಡಿಡಕ್ಷನ್ ಗಳು, ವೆಚ್ಚಗಳು, ಪಾವತಿಸಿದ ಮುಂಗಡ ಟ್ಯಾಕ್ಸ್ ನಂತಹ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
ವೃತ್ತಿಯಿಂದ ಒಟ್ಟು ರಶೀದಿಯು ರೂ 50,00,000 ಮೀರಿದರೆ, ವ್ಯಕ್ತಿಗಳು ಸೆಕ್ಷನ್ 44AB ಪ್ರಕಾರ ಚಾರ್ಟರ್ಡ್ ಅಕೌಂಟೆಂಟ್ ಮೂಲಕ ಒಂದು ಅಕೌಂಟ್ ಅನ್ನು ಪಡೆಯಬೇಕಾಗುತ್ತದೆ, ಆಡಿಟ್ ಸಂದರ್ಭದಲ್ಲಿ ಮೌಲ್ಯಮಾಪಕರು ಅಕ್ಟೋಬರ್ 31 ರ ಮೊದಲು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಮತ್ತು ತೆರಿಗೆದಾರರ ಒಟ್ಟು ರಶೀದಿಯು 50,00,000 ಕ್ಕಿಂತ ಹೆಚ್ಚಿಲ್ಲದಿದ್ದರೆ, ಅವರು 44ADA ನಿಬಂಧನೆಯನ್ನು ಆರಿಸಿಕೊಳ್ಳಬಹುದು ಮತ್ತು ಜುಲೈ 31 ರ ಮೊದಲು ರಿಟರ್ನ್ ಅನ್ನು ಫೈಲ್ ಮಾಡಬಹುದು.
ಹಣಕಾಸಿನ ವರ್ಷ 2022-23 (ಮೌಲ್ಯಮಾಪನ ವರ್ಷ 2023-24) ಕ್ಕಾಗಿ ಐಟಿಆರ್ ಅನ್ನು ಫೈಲ್ ಮಾಡಲು ಅಂತಿಮ ದಿನಾಂಕಗಳು ಯಾವುವು?
ಹಣಕಾಸು ವರ್ಷ 2022-23 ಮತ್ತು ಮೌಲ್ಯಮಾಪನ ವರ್ಷ 2023-24 ಕ್ಕಾಗಿ ಇನ್ಕಮ್ ಟ್ಯಾಕ್ಸ್ ಫೈಲ್ ಮಾಡಲು ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ. ಐಟಿಆರ್ ಅನ್ನು ಫೈಲ್ ಮಾಡುವುದರಲ್ಲಿ ವಿಫಲವಾದರೆ ಅಥವಾ ಗಡುವನ್ನು ತಪ್ಪಿಸಿದರೆ ಪೆನಲ್ಟಿ ಮತ್ತು ಕೆಲವೊಮ್ಮೆ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುತ್ತದೆ.
ಟ್ಯಾಕ್ಸ್ ಪೇಯರ್ ಕೆಟಗರಿ | ಟ್ಯಾಕ್ಸ್ ಫೈಲಿಂಗ್ ಗಾಗಿ ಅಂತಿಮ ದಿನಾಂಕ - ಹಣಕಾಸಿನ ವರ್ಷ 2022-23 |
---|---|
ವೈಯಕ್ತಿಕ/ಹಿಂದೂ ಅವಿಭಜಿತ ಕುಟುಂಬ/ಎಒಪಿ/ಬಿಒಐ (ಆಡಿಟಿಂಗ್ ಅಗತ್ಯವಿಲ್ಲ | ಜುಲೈ 31 2023 |
ಆಡಿಟಿಂಗ್ ಅಗತ್ಯವಿರುವ ಬಿಸಿನೆಸ್ ಗಳು | ಅಕ್ಟೋಬರ್ 31 2023 |
ಟ್ರಾನ್ಸಫರ್ ಪ್ರೈಸಿಂಗ್ ರಿಪೋರ್ಟ್ ಅಗತ್ಯವಿರುವ ಬಿಸಿನೆಸ್ ಗಳು | ನವೆಂಬರ್ 30 2023 |
ರಿವೈಸ್ಡ್ ಐಟಿಆರ್ | ಡಿಸೆಂಬರ್ 31 2023 |
ತಡವಾದ/ಲೇಟ್ ಐಟಿಆರ್ | ಡಿಸೆಂಬರ್ 31 2023 |
ಏಪ್ರಿಲ್ 20, 2023 ರಂತೆ ಈ ದಿನಾಂಕಗಳಿಗೆ ಯಾವುದೇ ವಿಸ್ತರಣೆ ಇಲ್ಲ.
ಫ್ರೀಲ್ಯಾನ್ಸರ್‌ಗಳು ಮುಂಗಡ ಟ್ಯಾಕ್ಸ್ ಅನ್ನು ಯಾವಾಗ ಮತ್ತು ಹೇಗೆ ಪಾವತಿಸಬಹುದು?
ಒಬ್ಬ ಫ್ರೀಲ್ಯಾನ್ಸರ್‌ನ ಒಟ್ಟು ಟ್ಯಾಕ್ಸ್ ಲಯಬಿಲಿಟಿ ₹10,000 ಕ್ಕಿಂತ ಹೆಚ್ಚಿದ್ದರೆ, ಅವರು ಸರಳ ಹಂತಗಳನ್ನು ಅನುಸರಿಸುವ ಮೂಲಕ ಹಣಕಾಸು ವರ್ಷದ ಪ್ರತಿ ತ್ರೈಮಾಸಿಕದಲ್ಲಿ ಮುಂಗಡ ಟ್ಯಾಕ್ಸ್ ಪಾವತಿಸಲು ಜವಾಬ್ದಾರರಾಗಿರುತ್ತಾರೆ:
ಹಂತ 1 : ಇನ್ಕಮ್ ಟ್ಯಾಕ್ಸ್ ಇಲಾಖೆಯ ಟ್ಯಾಕ್ಸ್ ಇನ್ಫರ್ಮೇಶನ್ ನೆಟ್‌ವರ್ಕ್‌ಗೆ ಭೇಟಿ ನೀಡಿ ಮತ್ತು ಚಲನ್ 280 ರ ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ.
ಹಂತ 2(Step 2): "0021" ಕಂಪನಿಗಳನ್ನು ಹೊರತುಪಡಿಸಿ ಇನ್ಕಮ್ ಟ್ಯಾಕ್ಸ್, ಮೌಲ್ಯಮಾಪನ ವರ್ಷ, ಟ್ಯಾಕ್ಸ್ ಪಾವತಿಯ ಪ್ರಕಾರ, ವಿಳಾಸ, ಪ್ಯಾನ್ ಮತ್ತು ಸಂಪರ್ಕ ವಿವರಗಳು, ಪಾವತಿ ಮೋಡ್ ಆಯ್ಕೆ ಮಾಡಿ. ಪಾವತಿಯೊಂದಿಗೆ ಮುಂದುವರಿಯಿರಿ ಮತ್ತು ಟ್ಯಾಕ್ಸ್ ರಶೀದಿಯನ್ನು ಸಂಗ್ರಹಿಸಿ. ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು ಈ ರಶೀದಿ ಒಂದು ಪ್ರಮುಖ ಡಾಕ್ಯುಮೆಂಟ್ ಆಗಿದೆ.
ಭಾರತದಲ್ಲಿ ಫ್ರೀಲ್ಯಾನ್ಸರ್‌ಗಳಿಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು ಸಹಾಯ ಮಾಡಲು ವಿವಿಧ ಫಾರ್ಮ್ ಗಳಿವೆ ಎಂಬುದನ್ನು ಗಮನಿಸಿ.
ಇನ್ಕಮ್ ಟ್ಯಾಕ್ಸ್ ಇಲಾಖೆಯು ಸೂಚಿಸಿದಂತೆ ಹಣಾಸಿನ ವರ್ಷ 2023-24 ಕ್ಕೆ ಮುಂಗಡ ಟ್ಯಾಕ್ಸ್ ಪಾವತಿಸಲು ಅಂತಿಮ ದಿನಾಂಕಗಳು ಇಲ್ಲಿವೆ. ಈ ದಿನಾಂಕಗಳಂದು ಅಥವಾ ಮೊದಲು ನಿಮ್ಮ ಮುಂಗಡ ಟ್ಯಾಕ್ಸ್ ಅನ್ನು ಪಾವತಿಸಲು ನೀವು ವಿಫಲವಾದರೆ, ನೀವು ಸೆಕ್ಷನ್ 234B ಮತ್ತು ಸೆಕ್ಷನ್ 234C ಅಡಿಯಲ್ಲಿ ಹೆಚ್ಚುವರಿ ಇಂಟರೆಸ್ಟ್ ಅನ್ನು ಪೆನಲ್ಟಿ ಆಗಿ ಪಾವತಿಸಬೇಕಾಗುತ್ತದೆ.
ಅಂತಿಮ ದಿನಾಂಕ ಅಥವಾ ಮುಂಗಡ ಟ್ಯಾಕ್ಸ್ ಫೈಲಿಂಗ್ ಹಣಕಾಸಿನ ವರ್ಷ 2023-24 | ಅನುಸರಣೆಯ ಸ್ವರೂಪ |
ಪಾವತಿಸಲಾದ ಟ್ಯಾಕ್ಸ್ |
ಜೂನ್ 15 2023 |
ಮೊದಲ ಕಂತು |
ಟ್ಯಾಕ್ಸ್ ಲಯಬಿಲಿಟಿಯ 15% |
ಸೆಪ್ಟೆಂಬರ್ 15 2023 |
ಎರಡನೇ ಕಂತು |
ಟ್ಯಾಕ್ಸ್ ಲಯಬಿಲಿಟಿಯ 45% |
ಡಿಸೆಂಬರ್ 15 2023 |
ಮೂರನೇ ಕಂತು |
ಟ್ಯಾಕ್ಸ್ ಲಯಬಿಲಿಟಿಯ 75% |
ಮಾರ್ಚ್ 15 2024 |
ನಾಲ್ಕನೇ ಕಂತು |
ಟ್ಯಾಕ್ಸ್ ಲಯಬಿಲಿಟಿಯ 100% |
ಮಾರ್ಚ್ 15 2024 |
ಊಹೆಯ ಸ್ಕೀಮ್ |
ಟ್ಯಾಕ್ಸ್ ಲಯಬಿಲಿಟಿಯ 100% |
ಭಾರತೀಯ ಫ್ರೀಲ್ಯಾನ್ಸರ್‌ಗಳ ಮೇಲೆ ಎಷ್ಟು ಟ್ಯಾಕ್ಸ್ ಅನ್ನು ಅನ್ವಯಿಸಲಾಗುತ್ತದೆ?
ಸೆಕ್ಷನ್ |
ವಿಧಿಸಲಾದ ಟ್ಯಾಕ್ಸ್ |
ವಿವರಗಳು |
ಸೆಕ್ಷನ್ 194J |
10% ಟಿಡಿಎಸ್ |
ಒಬ್ಬ ಫ್ರೀಲ್ಯಾನ್ಸರ್‌ನ ಪ್ರತಿಯೊಂದು ಪ್ರೊಫೆಷನಲ್ ಸರ್ವೀಸ್ ಟಿಡಿಎಸ್ ಗೆ ಒಳಪಟ್ಟಿರುತ್ತದೆ. |
ಸೆಕ್ಷನ್ 44ADA |
ಆದಾಯವು ಒಟ್ಟಾರೆ ಒಟ್ಟು ರಶೀದಿಯ ಕನಿಷ್ಠ 50% ಅನ್ನು ಡಿಕ್ಲೇರ್ ಮಾಡಬೇಕು. ಮತ್ತು ಅದರ ಪ್ರಕಾರ ಟ್ಯಾಕ್ಸ್ ಪಾವತಿಯಾಗಬೇಕು. |
ಒಟ್ಟು ರಶೀದಿಗಳು ₹50 ಲಕ್ಷಕ್ಕಿಂತ ಕಡಿಮೆ ಇದ್ದಾಗ ವಿಧಿಸಲಾಗುತ್ತದೆ. ನಂತರ ಇನ್ಕಮ್ ಟ್ಯಾಕ್ಸ್ ಅನ್ನು ಊಹೆಯ ಆಧಾರದ ಮೇಲೆ ಕ್ಯಾಲ್ಕ್ಯುಲೇಟ್ ಮಾಡಲಾಗುತ್ತದೆ. |
ಸೆಕ್ಷನ್ 44AB |
ಒಟ್ಟು ರಶೀದಿಗಳು ಮತ್ತು ಬಿಸಿನೆಸ್ ವೆಚ್ಚಗಳ ನಡುವಿನ ವ್ಯತ್ಯಾಸಕ್ಕೆ ಟ್ಯಾಕ್ಸ್ ಅನ್ನು ವಿಧಿಸಲಾಗುತ್ತದೆ. |
ಫ್ರೀಲ್ಯಾನ್ಸರ್‌ನ ಒಟ್ಟು ರಶೀದಿಗಳು ₹50 ಲಕ್ಷಗಳನ್ನು ಮೀರಿದಾಗ ಅಥವಾ ನಿವ್ವಳ ಲಾಭವು ಒಟ್ಟು ರಶೀದಿಗಳ ಅರ್ಧಕ್ಕಿಂತ ಕಡಿಮೆಯಿದ್ದರೆ ವಿಧಿಸಲಾಗುತ್ತದೆ. ಈ ಸಂದರ್ಭದಲ್ಲಿ, ಅವರು ಖಾತೆಗಳ ಪುಸ್ತಕವನ್ನು ಇಟ್ಟುಕೊಳ್ಳಬಹುದು. |
ಹಿಂದೆ, ಫ್ರೀಲ್ಯಾನ್ಸರ್‌ಗಳು ವ್ಯಾಟ್ ಮತ್ತು ಸರ್ವೀಸ್ ಟ್ಯಾಕ್ಸ್ ಅನ್ನು ಪಾವತಿಸಲು ಬಾಧ್ಯರಾಗಿದ್ದರು. ಆದಾಗ್ಯೂ, ಬದಲಾದ ಟ್ಯಾಕ್ಸ್ ಪಾಲಿಸಿಯು ಈಗ 18% ಜಿಎಸ್‌ಟಿ ಅನ್ನು ಅನ್ವಯಿಸುತ್ತದೆ. ಇನ್ನು ಮುಂದೆ, ಫ್ರೀಲ್ಯಾನ್ಸರ್‌ಗಳು ಸೇವಾ ಪ್ರದೇಶಗಳ ಆಧಾರದ ಮೇಲೆ ಸಿಜಿಎಸ್‌ಟಿ, ಎಸ್ ಜಿಎಸ್‌ಟಿ ಮತ್ತು ಐಜಿಎಸ್‌ಟಿ ಪಾವತಿಸಲು ಬಾಧ್ಯರಾಗಿರುತ್ತಾರೆ.
ಭಾರತದಲ್ಲಿ ಫ್ರೀಲ್ಯಾನ್ಸರ್‌ಗಳಿಗೆ ಇನ್ಕಮ್ ಟ್ಯಾಕ್ಸ್ (60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು)
ನಿಗದಿತ ಹಣಕಾಸು ವರ್ಷಕ್ಕೆ ಆಯ್ಕೆ ಮಾಡಿದ ಇನ್ಕಮ್ ಟ್ಯಾಕ್ಸ್ ರೆಜಿಮ್ ಅವಲಂಬಿಸಿ, ಫ್ರೀಲ್ಯಾನ್ಸರ್‌ಗಳ ಆದಾಯವು ಈ ಕೆಳಗಿನ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳಿಗೆ ಒಳಪಟ್ಟಿರುತ್ತದೆ.
ಹಣಕಾಸಿನ ವರ್ಷ 2023-24 (ಮೌಲ್ಯಮಾಪನ ವರ್ಷ 2024-25) ಕ್ಕಾಗಿ ಹೊಸ ಇನ್ಕಮ್ ಟ್ಯಾಕ್ಸ್ ರೆಜಿಮ್
ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು |
ಟ್ಯಾಕ್ಸೇಷನ್ ದರ |
₹3,00,000 ವರೆಗೆ |
ನಿಲ್ |
₹3,00,001 ಮತ್ತು ₹6,00,000 ನಡುವೆ |
₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5% |
₹6,00,001 ಮತ್ತು ₹9,00,000 ನಡುವೆ |
₹6,00,000 ಮೀರಿದರೆ ₹15,000 + ನಿಮ್ಮ ಒಟ್ಟು ಆದಾಯದ 10% |
₹9,00,001 ಮತ್ತು ₹12,00,000 ನಡುವೆ |
₹₹9,00,000 ಮೀರಿದರೆ ₹45,000 + ನಿಮ್ಮ ಒಟ್ಟು ಆದಾಯದ 15% |
₹12,00,001 ಮತ್ತು ₹15,00,000 ನಡುವೆ |
₹12,00,000 ಮೀರಿದರೆ ₹90,000 + ನಿಮ್ಮ ಒಟ್ಟು ಆದಾಯದ 20% |
₹15,00,000ಕ್ಕಿಂತ ಹೆಚ್ಚು |
₹15,00,000 ಮೀರಿದರೆ ₹1,50,000 + ನಿಮ್ಮ ಒಟ್ಟು ಆದಾಯದ 30% |
ಹಣಕಾಸು ವರ್ಷ 2022-23 (ಮೌಲ್ಯಮಾಪನ ವರ್ಷ 2023-24) ಕ್ಕಾಗಿ ಹೊಸ ಇನ್ಕಮ್ ಟ್ಯಾಕ್ಸ್ ರೆಜಿಮ್
ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು |
ಟ್ಯಾಕ್ಸೇಷನ್ ದರ |
₹2,50,000 ವರೆಗೆ |
ನಿಲ್ |
₹2,50,000 ಮತ್ತು ₹5,00,000 ನಡುವೆ |
₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5% |
₹5,00,000 ಮತ್ತು ₹7,00,000 ನಡುವೆ |
₹5,00,000 ಮೀರಿದರೆ ₹12,500 + ನಿಮ್ಮ ಒಟ್ಟು ಆದಾಯದ 10% |
₹7,50,000 ಮತ್ತು ₹10,00,000 ನಡುವೆ |
₹7,50,000 ಮೀರಿದರೆ ₹37,500 + ನಿಮ್ಮ ಒಟ್ಟು ಆದಾಯದ 15% |
₹10,00,000 ಮತ್ತು ₹12,50,000 ನಡುವೆ |
₹10,00,000 ಮೀರಿದರೆ ₹75,000 + ನಿಮ್ಮ ಒಟ್ಟು ಆದಾಯದ 20% |
₹12,50,000 ಮತ್ತು ₹15,00,000 ನಡುವೆ |
₹12,50,000 ಮೀರಿದರೆ ₹1,25,000 + ನಿಮ್ಮ ಒಟ್ಟು ಆದಾಯದ 25% |
₹15,00,000 ಕ್ಕಿಂತ ಹೆಚ್ಚು |
₹15,00,000 ಮೀರಿದರೆ ₹1,87,500 + ನಿಮ್ಮ ಒಟ್ಟು ಆದಾಯದ 30% |
ಹಣಕಾಸಿನ ವರ್ಷ 2022-23 ಮತ್ತು ಹಣಾಸಿನ ವರ್ಷ 2023-24 ರ ಹಳೆಯ ಇನ್ಕಮ್ ಟ್ಯಾಕ್ಸ್ ರೆಜಿಮ್
ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು |
ಟ್ಯಾಕ್ಸೇಷನ್ ದರ |
₹2,50,000 ವರೆಗೆ |
ನಿಲ್ |
₹2,50,001 ಮತ್ತು ₹5,00,000 ನಡುವೆ |
₹2,50,000 ಮೀರಿದರೆ ನಿಮ್ಮ ಒಟ್ಟು ಆದಾಯದ 5% |
₹5,00,001 ಮತ್ತು ₹10,00,000 ನಡುವೆ |
₹5,00,000 ಮೀರಿದರೆ ₹12,500 + ನಿಮ್ಮ ಒಟ್ಟು ಆದಾಯದ 20% |
₹10,00,000ಕ್ಕಿಂತ ಹೆಚ್ಚು |
₹10,00,000 ಮೀರಿದರೆ ₹1,12,500 + ನಿಮ್ಮ ಒಟ್ಟು ಆದಾಯದ 30% |
ಫ್ರೀಲ್ಯಾನ್ಸರ್‌ಗಳಿಗೆ ಲಭ್ಯವಿರುವ ಟ್ಯಾಕ್ಸ್ ಡಿಡಕ್ಷನ್ ಗಳು ಯಾವುವು?
ಸ್ವತಂತ್ರ ಅಥವಾ ಫ್ರೀಲ್ಯಾನ್ಸಿಂಗ್ ಆದಾಯದ ಮೇಲೆ ಟ್ಯಾಕ್ಸ್ ಡಿಡಕ್ಷನ್ ಗಳನ್ನು ಕ್ಲೈಮ್ ಮಾಡಲು ಷರತ್ತುಗಳು
ಇತರ ಟ್ಯಾಕ್ಸ್ ಪೇಯರ್ ಗಳಂತೆಯೇ, ಫ್ರೀಲ್ಯಾನ್ಸರ್‌ಗಳು ಸಹ ಅವರು ಕೆಲವು ಷರತ್ತುಗಳನ್ನು ಪೂರೈಸಿದರೆ ಮಾತ್ರ ಡಿಡಕ್ಷನ್ ರೂಪದಲ್ಲಿ ಫ್ರೀಲ್ಯಾನ್ಸಿಂಗ್ ಆದಾಯದ ಮೇಲೆ ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಬಹುದು:
- ಟ್ಯಾಕ್ಸ್ ಡಿಡಕ್ಷನ್ ಗಳು ನೇರವಾಗಿ ಫ್ರೀಲ್ಯಾನ್ಸಿಂಗ್ ಗೆ ಸಂಬಂಧಿಸಿದ ವೆಚ್ಚಗಳಿಗೆ ಮಾತ್ರ ಅನ್ವಯವಾಗುತ್ತವೆ.
- ಇದು ಸಂಪೂರ್ಣವಾಗಿ ನಿಮ್ಮ ಫ್ರೀಲ್ಯಾನ್ಸಿಂಗ್ ಕೆಲಸದ ಉದ್ದೇಶಕ್ಕಾಗಿ ಮಾತ್ರ ಬಳಸಲ್ಪಡುತ್ತದೆ.
- ಈ ವೆಚ್ಚಗಳನ್ನು ಹಣಕಾಸಿನ ವರ್ಷದಲ್ಲಿ ಖರ್ಚು ಮಾಡಲಾಗುತ್ತದೆ.
- ಸ್ವತಂತ್ರ ವೆಚ್ಚಗಳು ಕ್ಯಾಪಿಟಲ್ ವೆಚ್ಚವಾಗಿರಬಾರದು ಅಥವಾ ಫ್ರೀಲ್ಯಾನ್ಸರ್‌ಗಳ ಪರ್ಸನಲ್ ಬಳಕೆಗಾಗಿ ಬಳಸಬಾರದು.
- ಇದು ಯಾವುದೇ ಕಾನೂನು ಬಾಹಿರ ಉದ್ದೇಶಕ್ಕಾಗಿ ಆಗಿರಬಾರದು.
ಆದಾಯದ ವಿರುದ್ಧದ ಡಿಡಕ್ಷನ್ ಕ್ಲೈಮ್‌ಗೆ ಅರ್ಹವಾದ ಫ್ರೀಲ್ಯಾನ್ಸಿಂಗ್ ವೆಚ್ಚಗಳು
- ಬಾಡಿಗೆಯ ಪ್ರಾಪರ್ಟಿ
- ರಿಪೇರಿಯ ವೆಚ್ಚ
- ಡಿಪ್ರಿಸಿಯೇಶನ್
- ಕಚೇರಿ ವೆಚ್ಚಗಳು
- ಪ್ರಯಾಣದ ವೆಚ್ಚಗಳು
- ಆಹಾರ, ಮನರಂಜನೆ ಅಥವಾ ಆತಿಥ್ಯದ ಮೇಲಿನ ವೆಚ್ಚಗಳು
- ನಿಮ್ಮ ಬಿಸಿನೆಸ್ ಪ್ರಾಪರ್ಟಿಗಾಗಿ ಸ್ಥಳೀಯ ಟ್ಯಾಕ್ಸ್ ಗಳು ಮತ್ತು ಇನ್ಶೂರೆನ್ಸ್
- ಡೊಮೇನ್ ರಿಜಿಸ್ಟ್ರೇಷನ್ ಮತ್ತು ಪರೀಕ್ಷಾ ಉದ್ದೇಶಗಳಿಗಾಗಿ ಖರೀದಿಸಿದ ಆ್ಯಪ್ ಗಳು ಸೇರಿದಂತೆ ಇತರೆ ವೆಚ್ಚಗಳು
ಫ್ರೀಲ್ಯಾನ್ಸರ್‌ಗಳಿಗೆ ಟ್ಯಾಕ್ಸ್ ಡಿಡಕ್ಷನ್ ಗಳು
ಫ್ರೀಲ್ಯಾನ್ಸರ್‌ಗಳು ತಮ್ಮ ಟ್ಯಾಕ್ಸ್ ಲಯಬಿಲಿಟಿ ಕಡಿಮೆ ಮಾಡಲು ಟ್ಯಾಕ್ಸ್ ಡಿಡಕ್ಷನ್ ಗಳನ್ನು ಪಡೆಯಲು ಅನುಮತಿಸುವ ಕೆಳಗಿನ ಸೆಕ್ಷನ್ ಗಳು ಈ ಕೆಳಗಿನಂತಿವೆ:
ಸೆಕ್ಷನ್ |
ಟ್ಯಾಕ್ಸ್ ಡಿಡಕ್ಷನ್/ವಿನಾಯಿತಿ |
ಸೆಕ್ಷನ್ 80C |
ಫ್ರೀಲ್ಯಾನ್ಸರ್‌ಗಳು ಲೈಫ್ ಇನ್ಶೂರೆನ್ಸ್ ಪಾಲಿಸಿಗಳು, ಪ್ರಾವಿಡೆಂಟ್ ಫಂಡ್, ಇಎಲ್ಎಸ್ಎಸ್ ಮತ್ತು ಯುಲಿಪ್ ಇನ್ಶೂರೆನ್ಸ್ ಗಳಂತಹ ಟ್ಯಾಕ್ಸ್ ಉಳಿಸುವ ಸ್ಕೀಮ್ ಗಳಲ್ಲಿ ತಮ್ಮ ಹೂಡಿಕೆ ವಿರುದ್ಧ ಗರಿಷ್ಠ ₹1.5 ಲಕ್ಷಗಳ ಟ್ಯಾಕ್ಸ್ ಡಿಡಕ್ಷನ್ ಅನ್ನು ಪಡೆಯಬಹುದು. |
ಸೆಕ್ಷನ್ 80 CCC |
ಪೆನ್ಷನ್ ಪ್ಲಾನ್ ಗಳಲ್ಲಿ ಮಾಡಿದ ಹೂಡಿಕೆಗಾಗಿ ₹1.5 ಲಕ್ಷದವರೆಗೆ ವಿನಾಯಿತಿ. |
ಸೆಕ್ಷನ್ 80 CCD |
ಸರ್ಕಾರಿ ಸ್ಕೀಮ್ ಗಳಲ್ಲಿ ಮಾಡಿದ ಹೂಡಿಕೆಗಳ ಮೇಲಿನ ಟ್ಯಾಕ್ಸ್ ಡಿಡಕ್ಷನ್. |
ಸೆಕ್ಷನ್ 80 CCF |
ಇದು ಸರ್ಕಾರಿ-ನಿರ್ದಿಷ್ಟಪಡಿಸಿದ ಮೂಲಸೌಕರ್ಯ ಬಾಂಡ್‌ಗಳ ಮೇಲಿನ ಹೂಡಿಕೆಯ ವಿರುದ್ಧ ಟ್ಯಾಕ್ಸ್ ಪ್ರಯೋಜನಗಳನ್ನು ನೀಡುತ್ತದೆ, ಗರಿಷ್ಠ ವಿನಾಯಿತಿ ₹20,000 ವರೆಗೆ. |
ಸೆಕ್ಷನ್ 80 D |
ಸ್ವಯಂ, ಸಂಗಾತಿ ಅಥವಾ ಮಗುವಿಗೆ ಖರೀದಿಸಿದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಾಗಿ ಪ್ರೀಮಿಯಂಗಳನ್ನು ಪಾವತಿಸುವುದರ ವಿರುದ್ಧ ಟ್ಯಾಕ್ಸ್ ಡಿಡಕ್ಷನ್ ಲಭ್ಯವಿದೆ. |
ಸೆಕ್ಷನ್ 80 DD |
ಅರ್ಹ ಫ್ರೀಲ್ಯಾನ್ಸರ್‌ಗಳು ಒಬ್ಬ ತೆರಿಗೆದಾರರ ಅವಲಂಬಿತ ಅಂಗವಿಕಲರ ಚಿಕಿತ್ಸಾ ವೆಚ್ಚಗಳ ವಿರುದ್ಧ ಗರಿಷ್ಠ ₹75,000 ಟ್ಯಾಕ್ಸ್ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು, ಇದು ₹1.25 ಲಕ್ಷಗಳವರೆಗೆ ಹೋಗಬಹುದು. |
ಸೆಕ್ಷನ್ 80 DDB |
ಕೆಲವು ನಿರ್ದಿಷ್ಟ ರೋಗಗಳ ಚಿಕಿತ್ಸೆಗೆ ಟ್ಯಾಕ್ಸ್ ಡಿಡಕ್ಷನ್ ಲಭ್ಯವಿದೆ. |
ಸೆಕ್ಷನ್ 80 E |
ಫ್ರೀಲ್ಯಾನ್ಸರ್‌ಗಳು ಶಿಕ್ಷಣ ಲೋನ್ ಗಾಗಿ ಪಾವತಿಸುವ ಇಂಟರೆಸ್ಟ್ ಮೇಲೆ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಬಹುದು. |
ಸೆಕ್ಷನ್ 80 EE |
ವಸತಿ ಉದ್ದೇಶಗಳಿಗಾಗಿ ಪ್ರಾಪರ್ಟಿ ಖರೀದಿಸಲು ಲೋನ್ ಗಳ ಮೇಲಿನ ಟ್ಯಾಕ್ಸ್ ಗಳನ್ನು ಪಾವತಿಸುವುದರಿಂದ ವ್ಯಕ್ತಿಗಳಿಗೆ ವಿನಾಯಿತಿ ನೀಡಲಾಗುತ್ತದೆ. |
ಸೆಕ್ಷನ್ 80 G |
ಭಾಗಶಃ ಅಥವಾ ಪೂರ್ಣವಾಗಿ ದತ್ತಿ ಕೊಡುಗೆಗಳ ವಿರುದ್ಧ ಟ್ಯಾಕ್ಸ್ ಡಿಡಕ್ಷನ್ ಲಭ್ಯವಿದೆ. |
ಫ್ರೀಲ್ಯಾನ್ಸರ್‌ಗಳಿಗೆ ಇರುವ ಜಿಎಸ್‌ಟಿ ನಿಯಮಗಳು ಯಾವುವು?
ಫ್ರೀಲ್ಯಾನ್ಸರ್‌ಗಳಿಗೆ ಅನ್ವಯವಾಗುವ ಜಿಎಸ್‌ಟಿ ಈ ಕೆಳಗಿನಂತಿರುತ್ತದೆ:
- ಫ್ರೀಲ್ಯಾನ್ಸ್ ಕೆಲಸದಿಂದ ನಿಮ್ಮ ಒಟ್ಟು ಆದಾಯವು ವಾರ್ಷಿಕ ₹20 ಲಕ್ಷಕ್ಕಿಂತ ಕಡಿಮೆಯಿದ್ದರೆ, ನೀವು ಯಾವುದೇ ಜಿಎಸ್‌ಟಿ ಅನ್ನು ಪಾವತಿಸಬೇಕಾಗಿಲ್ಲ.
- ಸರಕುಗಳನ್ನು ಮಾರಾಟ ಮಾಡುವ ಫ್ರೀಲ್ಯಾನ್ಸರ್‌ಗಳಿಗೆ ಜಿಎಸ್‌ಟಿ ದರವು ಮಾರಾಟವಾದ ವಸ್ತುಗಳ ಪ್ರಕಾರವನ್ನು ಅವಲಂಬಿಸಿರುತ್ತದೆ.
- ಸರ್ವೀಸ್ ಒದಗಿಸುವ ಮೂಲಕ ನೀವು ಫ್ರೀಲ್ಯಾನ್ಸಿಂಗ್ ಆದಾಯವನ್ನು ಗಳಿಸಿದರೆ, ನಿಮ್ಮ ಗ್ರಾಹಕರಿಗೆ ನೀವು ಜಿಎಸ್‌ಟಿ @ 18% ಅನ್ನು ವಿಧಿಸಬೇಕು.
- ರಫ್ತುಗಳಂತಹ ಶೂನ್ಯ ದರದ ಸರಬರಾಜುಗಳ ಮೇಲೆ ನೀವು ಯಾವುದೇ ಜಿಎಸ್‌ಟಿ ಪಾವತಿಸಬೇಕಾಗಿಲ್ಲ.
- ಫ್ರೀಲ್ಯಾನ್ಸರ್‌ಗಳು ನಿಗದಿತ ಲಿಮಿಟ್ ಗಿಂತ ಕಡಿಮೆ ಟರ್ನ್‌ಓವರ್ ಹೊಂದಿರುವ ಸರಕುಗಳನ್ನು ಮಾರಾಟ ಮಾಡುತ್ತಿದ್ದರೆ ಅಥವಾ ಸರ್ವೀಸ್ ಗಳನ್ನು ಒದಗಿಸುತ್ತಿದ್ದರೆ ಕಾಂಪೋಸಿಶನ್ ಸ್ಕೀಮ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
- ಒಮ್ಮೆ ನಿಮ್ಮ ಜಿಎಸ್‌ಟಿ ಐಡೆಂಟಿಫಿಕೇಶನ್ ನಂಬರ್ ರಚನೆಯಾದ ನಂತರ, ನಿಮಗೆ ರಿಟರ್ನ್ ಫೈಲ್ ಮಾಡುವುದು ಕಡ್ಡಾಯವಾಗಿದೆ.
- ನಿಮ್ಮ ಎಲ್ಲಾ ಇನ್‌ವಾಯ್ಸ್‌ಗಳು ಜಿಎಸ್‌ಟಿ-ಅನುಸರಣೀಯ ಆಗಿರಬೇಕು.
ಭಾರತದಲ್ಲಿ ಫ್ರೀಲ್ಯಾನ್ಸರ್‌ಗಳಿಗೆ ಐಟಿಆರ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ನಾನು ಫ್ರೀಲ್ಯಾನ್ಸ್ ಆದಾಯವನ್ನು ಡಿಕ್ಲೇರ್ ಮಾಡಬೇಕೇ?
ಹೌದು, ಆದಾಯವು ಟ್ಯಾಕ್ಸೇಬಲ್ ಆದಾಯವನ್ನು ಮೀರಿದಾಗ ಆದಾಯವನ್ನು ಡಿಕ್ಲೇರ್ ಮಾಡಲಾಗುತ್ತದೆ ಮತ್ತು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ.
ಡಿಡಕ್ಷನ್ ಆದ ಟಿಡಿಎಸ್ ಗೆ ಸಂಬಂಧಿಸಿದ ಮಾಹಿತಿಯನ್ನು ಫ್ರೀಲ್ಯಾನ್ಸರ್‌ಗಳು ಎಲ್ಲಿ ಪಡೆಯಬಹುದು?
ಫ್ರೀಲ್ಯಾನ್ಸರ್‌ಗಳು ಟಿಡಿಎಸ್ ಡಿಡಕ್ಷನ್ ಗೆ ಸಂಬಂಧಿಸಿದ ಡೇಟಾವನ್ನು ಫಾರ್ಮ್ 26AS ನಲ್ಲಿ ಕಾಣಬಹುದು.
ಫ್ರೀಲ್ಯಾನ್ಸರ್‌ಗಳಿಗೆ ಯಾವ ಐಟಿಆರ್ ಫಾರ್ಮ್ ಅನ್ವಯವಾಗುತ್ತದೆ?
ಐಟಿಆರ್-4 ಫಾರ್ಮ್ ಊಹೆಯ ಟ್ಯಾಕ್ಸೇಶನ್ ಸ್ಕೀಮ್ ಅನ್ನು ಆಯ್ಕೆಮಾಡುವ ಫ್ರೀಲ್ಯಾನ್ಸರ್‌ಗಳಿಗೆ ಅನ್ವಯಿಸುತ್ತದೆ. ಆದರೆ ಹೌಸ್ ಪ್ರಾಪರ್ಟಿ, ಕ್ಯಾಪಿಟಲ್ ಲಾಭಗಳು, ಸ್ಯಾಲರಿ/ಪೆನ್ಷನ್ ಇತ್ಯಾದಿಗಳಿಂದ ಬಂದ ಆದಾಯವನ್ನು ಒಳಗೊಂಡಂತೆ ಬಿಸಿನೆಸ್ ಅಥವಾ ವೃತ್ತಿಯಿಂದ ಆದಾಯವನ್ನು ಹೊಂದಿರುವ ಫ್ರೀಲ್ಯಾನ್ಸರ್‌ಗಳು ಐಟಿಆರ್-3 ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.