ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿಯನ್ನು ಆನ್‌ಲೈನ್‌ನಲ್ಲಿ ಪಡೆಯುವುದು ಹೇಗೆ: ಹಂತ-ಹಂತವಾದ ಗೈಡ್

ಹಣಕಾಸಿನ ಪ್ರಕ್ರಿಯೆಗಳ ಬಗ್ಗೆ ನಿಮಗೆ ಸ್ವಲ್ಪ ಅನುಭವವಿದ್ದರೆ, ಐಟಿಆರ್ ಕಾಪಿಗಳು ಎಷ್ಟು ಅನಿವಾರ್ಯವೆಂದು ನಿಮಗೆ ತಿಳಿದಿರಬೇಕು. ಆದಾಗ್ಯೂ, ನೀವು ಐಟಿಆರ್ ಫೈಲಿಂಗ್ ಜಗತ್ತಿಗೆ ಹೊಸಬರಾಗಿದ್ದರೆ ಮತ್ತು ಆನ್‌ಲೈನ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿನ್ನು ಏಕೆ ಅಥವಾ ಹೇಗೆ ಪಡೆಯುವುದು ಎಂದು ತಿಳಿದಿಲ್ಲದಿದ್ದರೆ, ನಿಮಗೆ ಸಹಾಯ ಮಾಡುವುದಕ್ಕೆ ಆ ಕುರಿತು ಇಲ್ಲಿ ಸಂಕ್ಷಿಪ್ತ ಅವಲೋಕನವಿದೆ.

ಇ-ಫೈಲಿಂಗ್ ನಂತರ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿಗಳನ್ನು ಸಂಗ್ರಹಿಸುವ ವಿಧಾನ, ಪ್ರಾಮುಖ್ಯತೆ ಮತ್ತು ವ್ಯಾಖ್ಯಾನದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಓದಿ.

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿ ಎಂದರೇನು?

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿ ಅಥವಾ ಐಟಿಆರ್-ವಿ ನೀವು ನಿಮ್ಮ ರಿಟರ್ನ್‌ಗಳನ್ನು ಫೈಲ್ ಮಾಡಿದ್ದೀರಿ ಎಂದು ಒಪ್ಪಿಕೊಳ್ಳುವ ರಸೀದಿಯಂತೆ. ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯು ಡಿಜಿಟಲ್ ಸಹಿ ಇಲ್ಲದೆಯೇ ಪ್ರತಿ ಇ-ಫೈಲ್ ಮಾಡಿದ ರಿಟರ್ನ್‌ಗೆ ಒಂದನ್ನು ರಚನೆ ಮಾಡುತ್ತದೆ. ನಂತರ ನೀವು ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದು, ಮುದ್ರಿಸಬಹುದು ಮತ್ತು ಸಹಿ ಮಾಡಬಹುದು ಮತ್ತು ಅದನ್ನು 30 ದಿನಗಳ ಒಳಗೆ ಸೆಂಟ್ರಲೈಸ್‌ಡ್‌ ಪ್ರೊಸೆಸಿಂಗ್‌ ಸೆಂಟರ್‌, ಬೆಂಗಳೂರು, ಇಲ್ಲಿಗೆ ಕಳುಹಿಸಬಹುದು. ಇದು ನಿಮ್ಮ ಇ-ಫೈಲಿಂಗ್‌ನ ದೃಢೀಕರಣವನ್ನು ಖಚಿತಪಡಿಸುತ್ತದೆ ಮತ್ತು ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಪ್ರೊಸೆಸ್ ಅನ್ನು ಪ್ರಾರಂಭಿಸುತ್ತದೆ.

[ಮೂಲ]

ಐಟಿಆರ್ ಪ್ರೊಸೆಸಿಂಗ್ ಪೂರ್ಣಗೊಂಡ ನಂತರವೂ ಈ ಡಾಕ್ಯುಮೆಂಟ್‌ನ ಕಾಪಿಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಇದು ಹಲವು ಪ್ರಕ್ರಿಯೆಗಳಿಗೆ ಅಗತ್ಯವಾಗಿರುತ್ತದೆ.

ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿಗಳನ್ನು ಹೊಂದಿರುವುದು ಏಕೆ ಮುಖ್ಯ?

ಐಟಿಆರ್-ವಿ ಅಥವಾ ಐಟಿಆರ್ ಸ್ವೀಕೃತಿ ಕಾಪಿ ಒಂದು ಮಹತ್ವದ ಹಣಕಾಸು ಡಾಕ್ಯುಮೆಂಟ್ ಆಗಿದೆ ಮತ್ತು ಹಲವಾರು ಪ್ರೊಸೆಸ್‌ಗಳಲ್ಲಿ ಇನ್‌ಕಮ್‌ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಕೆಲವದರ ಪಟ್ಟಿ ಇಲ್ಲಿದೆ.

  • ಲೋನ್‌ ಅಪ್ಲಿಕೇಷನ್‌ಗಳು: ಬಹುತೇಕ ಲೋನ್‌ ನೀಡುವ ಸಂಸ್ಥೆಗಳು ಲೋನ್‌ಗಳನ್ನು ಮಂಜೂರು ಮಾಡುವ ಮೊದಲು ಹಣಕಾಸಿನ ಡಾಕ್ಯುಮೆಂಟ್‌ಗಳ ಪುರಾವೆಯಾಗಿ ಕನಿಷ್ಠ 2-3 ವರ್ಷಗಳ ಐಟಿಆರ್‌ ಕಾಪಿಗಳನ್ನು ಬಯಸುತ್ತವೆ.
  • ಹೆಚ್ಚಿನ ಮೌಲ್ಯದ ಇನ್ಶೂರೆನ್ಸ್ ಪಾಲಿಸಿ: ಐಟಿಆರ್‌ ಕಾಪಿಗಳು ಇನ್ಶೂರೆನ್ಸ್ ಕಂಪನಿಗಳಿಗೆ ನಿಜವಾದ ಇನ್‌ಕಮ್‌ ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ. ಹೆಚ್ಚಿನ ಪ್ರೀಮಿಯಂಗಳನ್ನು ಪಾವತಿಸುವ ಪಾಲಿಸಿಹೋಲ್ಡರ್‌ಗಳ ಸಾಮರ್ಥ್ಯವನ್ನು ದೃಢೀಕರಿಸಲು, ವಿಶೇಷವಾಗಿ ಹೆಚ್ಚಿನ ಕವರೇಜ್ ಪ್ಲಾನ್‌ಗಳನ್ನು ಮಾರಾಟ ಮಾಡುವಾಗ ಅವರು ಈ ಡಾಕ್ಯುಮೆಂಟ್‌ಗಳನ್ನು ಕೇಳುತ್ತಾರೆ.
  • ವೀಸಾ ಅಪ್ಲಿಕೇಷನ್‌: ಐಟಿ ರಿಟರ್ನ್‌ಗಳ ಕಾಪಿಗಳು ವೀಸಾ ಅಪ್ಲಿಕೇಷನ್‌ಗಳ ಸಮಯದಲ್ಲಿ ಸ್ವೀಕರಿಸಲಾಗುವ ಏಕೈಕ ಇನ್‌ಕಮ್‌ ಪುರಾವೆಯಾಗಿದೆ. ನೀವು ಭಾರತಕ್ಕೆ ಮರಳಲು ಸಾಕಷ್ಟು ಹಣಕಾಸಿನ ಇಂಟರೆಸ್ಟ್ ಅನ್ನು ಹೊಂದಿದ್ದರೆ ವಿದೇಶಿ ಎಂಬೆಸ್ಸಿಗಳಿಗೆ ಇದು ಮೂಲಭೂತವಾದ ಒಂದು ಮಾರ್ಗವಾಗಿದೆ.
  • ಹಿಂದಿನ ಬಾಕಿಗಳನ್ನು ಇತ್ಯರ್ಥಪಡಿಸುವುದು: ಇನ್‌ಕಮ್‌ ಪುರಾವೆಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಐಟಿಆರ್‌ ಕಾಪಿಗಳ ಮತ್ತೊಂದು ಪ್ರಾಮುಖ್ಯತೆ ಇಲ್ಲಿದೆ. 5 ವರ್ಷಗಳ ಹಳೆಯ ರಿಟರ್ನ್ ಫೈಲಿಂಗ್‌ನಿಂದ ನೀವು ಟ್ಯಾಕ್ಸ್ ಬಾಕಿ ಇರಿಸಿಕೊಂಡಿರುವಿರಿ ಎಂದು ಐಟಿ ಇಲಾಖೆ ನಿಮಗೆ ನೋಟಿಸ್ ಕಳುಹಿಸಲು ನಿರ್ಧರಿಸುವಂತಹ ಅಪರೂಪದ ಪರಿಸ್ಥಿತಿಯನ್ನು ನೀವು ಎದುರಿಸಬೇಕಾಗಬಹುದು. ಅಂಥಾ ಸಂದರ್ಭದಲ್ಲಿ, ನಿಮ್ಮ ಹಿಂದಿನ ಐಟಿಆರ್ ಸ್ವೀಕೃತಿ ಡಾಕ್ಯುಮೆಂಟ್‌ಗಳ ಕಾಪಿಗಳನ್ನು ಕಳುಹಿಸುವ ಮೂಲಕ ನೀವು ಉತ್ತರಿಸಬೇಕಾಗುತ್ತದೆ.

ಇನ್‌ಕಮ್‌ ಪುರಾವೆಯಾಗಿ ಸ್ಯಾಲರಿ ಸ್ಲಿಪ್‌ಗಳನ್ನು ಹೊಂದಿರದ ಸ್ವತಂತ್ರ ವೃತ್ತಿಪರರು, ಬಿಸಿನೆಸ್‌ಗಳು ಮತ್ತು ಫ್ರೀಲಾನ್ಸರ್‌ಗಳಿಗೆ ಐಟಿ ರಿಟರ್ನ್ ಕಾಪಿಗಳು ಹೆಚ್ಚು ಮುಖ್ಯವಾಗುತ್ತವೆ. ಆದಾಗ್ಯೂ, ನೀವು ಸ್ಯಾಲರೀಡ್ ಆಗಿದ್ದರೂ ಅಥವಾ ನಾನ್‌-ಸ್ಯಾಲರೀಡ್‌ ಆಗಿದ್ದರೂ, ನಿಮಗೆ ಈಗಾಗಲೇ ತಿಳಿದಿಲ್ಲದಿದ್ದರೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿಗಳನ್ನು ಹೇಗೆ ಪಡೆಯುವುದು ಎಂದು ತಿಳಿದುಕೊಳ್ಳುವುದು ಕಡ್ಡಾಯವಾಗಿದೆ.

ಆನ್‌ಲೈನ್‌ನಲ್ಲಿ ಐಟಿಆರ್‌ ಕಾಪಿ ಪಡೆಯುವುದು ಹೇಗೆ?

ಆನ್‌ಲೈನ್‌ನಲ್ಲಿ ಐಟಿಆರ್‌ ಕಾಪಿಯನ್ನು ಹೇಗೆ ಪಡೆಯುವುದು ಎಂಬುದರ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ಹಂತ 1: ಅಧಿಕೃತ ಇನ್‌ಕಮ್‌ ಟ್ಯಾಕ್ಸ್‌ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು "ಲಾಗಿನ್ ಹಿಯರ್‌" ಮೇಲೆ ಕ್ಲಿಕ್ ಮಾಡಿ.

ಹಂತ 2: ನಿಮ್ಮ ಖಾತೆಗೆ ಸೈನ್ ಇನ್ ಮಾಡಲು ನಿಮ್ಮ ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಸೆಕ್ಯುರಿಟಿ ಕೋಡ್ ಅನ್ನು ನಮೂದಿಸಿ.

ಹಂತ 3: ಮುಂದಿನ ಪುಟದಲ್ಲಿ, "ಇ-ಫೈಲ್" ಕ್ಲಿಕ್ ಮಾಡಿ. > ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್> ವ್ಯೂ ಫಿಲ್ಲ್‌ಡ್‌ ರಿಟರ್ನ್

ಹಂತ 4: ನಿಮ್ಮನ್ನು ಇನ್ನೊಂದು ಪೇಜಿಗೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನಿಮಗೆ ಇಲ್ಲಿಯವರೆಗೆ ತುಂಬಿದ ಐಟಿಆರ್ ಅನ್ನು ಅಲ್ಲಿ ತೋರಿಸಲಾಗುತ್ತದೆ.

ಹಂತ 5: ಈ ಪೇಜ್ ಸ್ವೀಕೃತಿ ಸಂಖ್ಯೆ ಸೇರಿದಂತೆ ನಿಮ್ಮ ಇ-ಫೈಲ್ ಮಾಡಿದ ರಿಟರ್ನ್‌ಗಳ ಎಲ್ಲಾ ವಿವರಗಳನ್ನು ಪ್ರದರ್ಶಿಸುತ್ತದೆ. ಡೌನ್‌ಲೋಡ್ ಮಾಡಬಹುದಾದ ಐಟಿಆರ್-ವಿ ಅನ್ನು ವೀಕ್ಷಿಸಲು "ಡೌನ್‌ಲೋಡ್ ರಿಸೀಟ್" ಮೇಲೆ ಕ್ಲಿಕ್ ಮಾಡಿ.

ನಿಮ್ಮ ಐಟಿಆರ್-ವಿ ಅಥವಾ ಇ-ಫೈಲಿಂಗ್ ಸ್ವೀಕೃತಿಯನ್ನು ನಿಮ್ಮ ಡಿವೈಸ್‌ನಲ್ಲಿ ಡೌನ್‌ಲೋಡ್ ಮಾಡಲಾಗುತ್ತದೆ.

[ಮೂಲ 1]

[ಮೂಲ 2]

ಐಟಿಆರ್‌ ಕಾಪಿಗಳನ್ನು ಆಫ್‌ಲೈನ್‌ನಲ್ಲಿ ಪಡೆಯಲು ಯಾವುದೇ ಪ್ರೊಸೆಸ್ ಇದೆಯೇ?

ಆನ್‌ಲೈನ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿಯನ್ನು ಹೇಗೆ ಪಡೆಯುವುದು ಎಂಬುದನ್ನು ಅನುಸರಿಸಲು ನಿಮಗೆ ಸಾಧ್ಯವಾಗದಿದ್ದರೆ ಮತ್ತು ಆಫ್‌ಲೈನ್ ಪರ್ಯಾಯಗಳ ಬಗ್ಗೆ ಹುಡುಕುತ್ತಿದ್ದರೆ, ಇಲ್ಲಿ ಸ್ವಲ್ಪ ಮಾಹಿತಿ ಇದೆ. ನಿಮ್ಮ ರಿಟರ್ನ್ಸ್ ಅನ್ನು ನೀವು ಇ-ಫೈಲ್ ಮಾಡಿದ ನಂತರ, ಐಟಿ ಇಲಾಖೆಯು ಐಟಿಆರ್-ವಿ ಅನ್ನು ನೇರವಾಗಿ ನಿಮ್ಮ ಪ್ಯಾನ್ ಎದುರಾಗಿ ರಿಜಿಸ್ಟರ್ ಮಾಡಲಾದ ಇಮೇಲ್ ಐಡಿಗೆ ಕಳುಹಿಸುತ್ತದೆ. ನಿಮ್ಮ ಮೇಲ್‌ಬಾಕ್ಸ್ ಅನ್ನು ನೀವು ಚೆಕ್ ಮಾಡಬಹುದು ಮತ್ತು ಒಂದು ವೇಳೆ ಸ್ವೀಕರಿಸಿದ್ದರೆ, ಇಮೇಲ್‌ನಿಂದ ನಿಮ್ಮ ಐಟಿಆರ್-ವಿ ಅನ್ನು ಡೌನ್‌ಲೋಡ್ ಮಾಡಬಹುದು.

ನಂತರ ನೀವು ಈ ಫಾರ್ಮ್ ಅನ್ನು ಮುದ್ರಿಸಬೇಕು, ಸಹಿ ಮಾಡಬೇಕು ಮತ್ತು 30 ದಿನಗಳ ಒಳಗೆ ಸಾಮಾನ್ಯ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಐಟಿ ಇಲಾಖೆಯ ಸಿಪಿಸಿ, ಬೆಂಗಳೂರುಗೆ ಕಳುಹಿಸಬೇಕು.

[ಮೂಲ]

ಹಿಂದಿನ ವರ್ಷಗಳ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿಗಳನ್ನು ಪಡೆಯುವುದು ಹೇಗೆ?

ನೀವು ಈ ಹಿಂದೆ ಸಲ್ಲಿಸಿದ ಐಟಿ ರಿಟರ್ನ್ಸ್‌ಗಳ ಕಾಪಿಗಳನ್ನು ನೀವು ಇಟ್ಟುಕೊಳ್ಳದೇ ಇದ್ದರೆ ಮತ್ತು "ನಿಮ್ಮ ಹಳೆಯ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿಯನ್ನು ಆನ್‌ಲೈನ್‌ನಲ್ಲಿ ಹೇಗೆ ಪಡೆಯಬಹುದು" ಎಂದು ಹುಡುಕುತ್ತಿದ್ದರೆ ನಿಮ್ಮ ಪರಿಹಾರ ಇಲ್ಲಿದೆ. ಐಟಿಆರ್ ಕಾಪಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಹಿಂದೆ ಚರ್ಚಿಸಿದ ಪ್ರೊಸೆಸ್‌ನ 1-4 ಹಂತಗಳನ್ನು ಅನುಸರಿಸಿ. ನಂತರ, ಇಲ್ಲಿ ನೀಡಿರುವ ಹಂತಗಳನ್ನು ಅನುಸರಿಸಿ.

ಹಂತ 1: ಇಲ್ಲಿಯವರೆಗೆ ನೀವು ಸಲ್ಲಿಸಿದ ಎಲ್ಲಾ ರಿಟರ್ನ್‌ಗಳ ಪಟ್ಟಿಯನ್ನು ಪೇಜ್ ಪ್ರದರ್ಶಿಸುತ್ತದೆ. ನೀವು ಐಟಿಆರ್ ನಕಲನ್ನು ಡೌನ್‌ಲೋಡ್ ಮಾಡಲು ಬಯಸುತ್ತಿದ್ದರೆ ಅದಕ್ಕಾಗಿ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದ ಸ್ವೀಕೃತಿ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಹಂತ 2: ನೀವು ಆಯ್ಕೆ ಮಾಡಿದ ಮೌಲ್ಯಮಾಪನ ವರ್ಷಕ್ಕಾಗಿ "ಡೌನ್‌ಲೋಡ್ ರಿಸೀಟ್" ಮೇಲೆ ಕ್ಲಿಕ್ ಮಾಡಿ.

ಐಟಿಆರ್ ಕಾಪಿಯನ್ನು ನಿಮ್ಮ ಡಿವೈಸ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಅಂತೆಯೇ, ಇತರ ಮೌಲ್ಯಮಾಪನ ವರ್ಷಗಳಿಗೆ ಆನ್‌ಲೈನ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿಯನ್ನು ಪಡೆಯುವುದಕ್ಕಾಗಿ ಈ ಪ್ರೊಸೆಸ್ ಅನ್ನು ನೀವು ಪುನರಾವರ್ತಿಸಬಹುದು.

ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿ ನಿಮಗೆ ಸಿಗದಿದ್ದರೆ ಏನು

ನಿಮ್ಮ ಐಟಿಆರ್ ಸ್ವೀಕೃತಿ ಕಾಪಿಯನ್ನು ಹೊಂದಿರುವ ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯಇಮೇಲ್ ಅನ್ನು ನೀವು ನಿರೀಕ್ಷಿಸುತ್ತಿದ್ದರೆ ಮತ್ತು ಅದನ್ನು ಸ್ವೀಕರಿಸದಿದ್ದರೆ, ಚಿಂತಿಸಬೇಡಿ! ಆನ್‌ಲೈನ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿಯನ್ನು ಹೇಗೆ ಪಡೆಯುವುದು ಎಂಬ ಪ್ರೊಸೆಸ್ ಕೈಗೊದಗಿ ಬರುವುದು ಹೀಗೆ.

ಹೌದು, ನೀವು ಇಮೇಲ್ ಸ್ವೀಕೃತಿಯನ್ನು ಸ್ವೀಕರಿಸದಿದ್ದರೆ, ನಾವು ಈ ಹಿಂದೆ ಚರ್ಚಿಸಿದ ಹಂತಗಳನ್ನು ಅನುಸರಿಸಿ ಇ-ಫೈಲಿಂಗ್ ಪೋರ್ಟಲ್‌ನಿಂದ ನಿಮ್ಮ ಐಟಿಆರ್ ಕಾಪಿಯನ್ನು ಡೌನ್‌ಲೋಡ್ ಮಾಡಿ. ಒಮ್ಮೆ ನೀವು ಈ ಡಾಕ್ಯುಮೆಂಟ್‌ ಅನ್ನು ಪಡೆಯುವುದು ಸಾಧ್ಯವಾದರೆ, ನಿಮ್ಮ ಹಿಂದಿನ ರಿಟರ್ನ್ ಕಾಪಿಗಳೊಂದಿಗೆ ಅದನ್ನು ಆರ್ಗನೈಸ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಡೌನ್‌ಲೋಡ್ ಮಾಡಿದ ಐಟಿಆರ್ ಸ್ವೀಕೃತಿ ಕಾಪಿಯನ್ನು ನಾನು ತೆರೆಯುವುದು ಹೇಗೆ?

ನಿಮ್ಮ ಐಟಿಆರ್-ವಿ ತೆರೆಯಲು ಪಾಸ್‌ವರ್ಡ್ ನಿಮ್ಮ ಪ್ಯಾನ್‌ನ ಸಣ್ಣಕ್ಷರದ ಕಾಂಬಿನೇಷನ್ ಆಗಿದೆ, ನಂತರ ನಿಮ್ಮ ಜನ್ಮ ದಿನಾಂಕ ಅಥವಾ DDMMYYYY ಫಾರ್ಮ್ಯಾಟ್‌ನಲ್ಲಿ ಸಂಸ್ಥೆಯ ಸಂಯೋಜನೆಯ ದಿನಾಂಕ ಹಾಕಬೇಕು. ನಿಮ್ಮ ಪ್ಯಾನ್ CFGGK1606L ಆಗಿದ್ದರೆ, ಮತ್ತು ಡಿಓಬಿ/ಡಿಓಐ ಮಾರ್ಚ್ 5, 1982 ಆಗಿದ್ದರೆ, ನಿಮ್ಮ ಪಾಸ್‌ವರ್ಡ್ “cfggk1606l05031982” ಆಗಿರುತ್ತದೆ.

ಐಟಿ ಇಲಾಖೆಯು ಐಟಿಆರ್ ಸ್ವೀಕೃತಿ ಕಾಪಿಗಳನ್ನು ಕಳುಹಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ನಿಮ್ಮ ರಿಜಿಸ್ಟರ್‌ಡ್‌ ಇಮೇಲ್ ಐಡಿಗೆ ಐಟಿಆರ್‌-ವಿ ಕಳುಹಿಸಲು ಐಟಿ ಇಲಾಖೆಯು 2-3 ಕೆಲಸದ ದಿನಗಳನ್ನು ತೆಗೆದುಕೊಳ್ಳಬಹುದು.

ನನ್ನ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ನ ಕಾಪಿಗಳು ನನ್ನ ಬಳಿ ಇಲ್ಲದಿದ್ದರೆ ಏನಾಗುತ್ತದೆ?

ಐಟಿಆರ್ ಕಾಪಿಗಳು ನೀವು ಮೌಲ್ಯಮಾಪನ ವರ್ಷಕ್ಕೆ ನಿಮ್ಮ ರಿಟರ್ನ್‌ಗಳನ್ನು ಫೈಲ್ ಮಾಡಿದ್ದೀರಿ ಎಂಬುದಕ್ಕೆ ಪುರಾವೆಗಳಾಗಿವೆ. ಈ ಡಾಕ್ಯುಮೆಂಟ್ ಇಲ್ಲದಿರುವುದು ನಿಮ್ಮ ಫೈಲ್ ಮಾಡಿದ ರಿಟರ್ನ್‌ಗಳ ಯಾವುದೇ ಡಾಕ್ಯುಮೆಂಟ್ ಹೊಂದಿಲ್ಲದಿರುವುದನ್ನು ಸೂಚಿಸುತ್ತದೆ ಮತ್ತು ಐಟಿಆರ್‌ ಕಾಪಿಗಳು ಕಡ್ಡಾಯ ಡಾಕ್ಯುಮೆಂಟ್‌ಗಳಾಗಿರುವ ಹಲವಾರು ಸೇವೆಗಳನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.