ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ರಿಫಂಡ್ ಅನ್ನು ಹೇಗೆ ಪಡೆಯುವುದು (ಟಿಡಿಎಸ್ ರಿಫಂಡ್)

ಇನ್ಕಮ್ ಟ್ಯಾಕ್ಸ್ ರಿಫಂಡ್‌ ಎನ್ನುವುದು, ಪಾವತಿಸಿದ ಟ್ಯಾಕ್ಸ್‌ ನಿಜವಾದ ಲಯಬಿಲಿಟಿಯನ್ನು (ಇಂಟರೆಸ್ಟ್ ಅನ್ನು ಒಳಗೊಂಡಂತೆ) ಮೀರಿದಾಗ, ಟ್ಯಾಕ್ಸ್ ಪೇಯರ್‌ನಿಗೆ ನೀಡಿದ/ಹಿಂತಿರುಗಿಸಲಾದ ಫಂಡ್ ಅನ್ನು ಸೂಚಿಸುತ್ತದೆ. ಪಾವತಿಸಿದ ಮೊತ್ತವು ಟಿಡಿಎಸ್ (ಮೂಲದಲ್ಲಿ ಟ್ಯಾಕ್ಸ್ ಡಿಡಕ್ಟ್ ಆಗುವುದು), ಅಡ್ವಾನ್ಸ್ ಟ್ಯಾಕ್ಸ್, ಸೆಲ್ಫ್-ಅಸೆಸ್‌ಮೆಂಟ್ ಟ್ಯಾಕ್ಸ್, ವಿದೇಶಿ ಟ್ಯಾಕ್ಸ್ ಇತ್ಯಾದಿಗಳ ರೂಪದಲ್ಲಿರಬಹುದು. 

ಇನ್ಕಮ್ ಟ್ಯಾಕ್ಸ್ ಮತ್ತು ಡೈರೆಕ್ಟ್ ಟ್ಯಾಕ್ಸ್ ಕಾನೂನುಗಳ ಪ್ರಕಾರ, ಒಬ್ಬ ವ್ಯಕ್ತಿಯು ನಿಜವಾಗಿಯು ವಿಧಿಸಬಹುದಾದ ಮೊತ್ತಕ್ಕಿಂತ ಹೆಚ್ಚಿನ ಟ್ಯಾಕ್ಸ್ ಅನ್ನು ಪಾವತಿಸಿದಾಗ 'ರಿಫಂಡ್' ಉಂಟಾಗುತ್ತದೆ. 

ಐಟಿಆರ್ ಅನ್ನು ಫೈಲ್ ಮಾಡುವ ಸಮಯದಲ್ಲಿ ಎಲ್ಲಾ ಡಿಡಕ್ಷನ್‌ಗಳು ಮತ್ತು ವಿನಾಯಿತಿಗಳನ್ನು ಪರಿಗಣಿಸಿ ಟ್ಯಾಕ್ಸ್ ಅನ್ನು ಕ್ಯಾಲ್ಕುಲೇಟ್ ಮಾಡಲಾಗುತ್ತದೆ. ಕ್ಯಾಲ್ಕುಲೇಶನ್ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕೆಳಗಿನ ಫಾರ್ಮುಲಾ ನಿಮಗೆ ಸಹಾಯ ಮಾಡುತ್ತದೆ.

ಇನ್ಕಮ್ ಟ್ಯಾಕ್ಸ್ ರಿಫಂಡ್‌ = ವರ್ಷದಲ್ಲಿ ಪಾವತಿಸಿದ ಒಟ್ಟು ಟ್ಯಾಕ್ಸ್ ಮೊತ್ತ (ಅಡ್ವಾನ್ಸ್ ಟ್ಯಾಕ್ಸ್ + ಟಿಸಿಎಸ್ + ಟಿಡಿಎಸ್ + ಸೆಲ್ಫ್-ಅಸೆಸ್‌ಮೆಂಟ್ ಟ್ಯಾಕ್ಸ್) - ವರ್ಷಕ್ಕೆ ಪಾವತಿಸಬಹುದಾದ ಟ್ಯಾಕ್ಸ್

ಇನ್ಕಮ್ ಟ್ಯಾಕ್ಸ್ ರಿಫಂಡ್‌ ಎಂದರೆ ಏನೆಂದು ನಮಗೀಗ ತಿಳಿದಿದೆ. ಈಗ ಇನ್ಕಮ್ ಟ್ಯಾಕ್ಸ್ ರಿಫಂಡ್‌ ಅನ್ನು ಹೇಗೆ ಪಡೆಯುವುದು, ಅದರ ಅರ್ಹತೆ, ಡ್ಯೂ ಡೇಟ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯ ಬಗ್ಗೆ ಮುಂದಿನ ಸೆಕ್ಷನ್‌ಗಳಲ್ಲಿ ನೋಡೋಣ.

ಇನ್ಕಮ್ ಟ್ಯಾಕ್ಸ್ ರಿಫಂಡ್‌ಗೆ ಯಾರು ಅರ್ಹರು?

ಐಟಿಆರ್ (ITR) ರಿಫಂಡ್ ಅನ್ನು ಹೇಗೆ ಪಡೆಯುವುದು ಎನ್ನುವುದಷ್ಟೇ ತಿಳಿದರೆ ಸಾಕಾಗುವುದಿಲ್ಲ. ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗೆ ನಿಮ್ಮನ್ನು ಅರ್ಹರನ್ನಾಗಿ ಮಾಡುವ ಸಂದರ್ಭಗಳ ಪಟ್ಟಿಯು ಈ ಕೆಳಗಿನಂತಿದೆ. 

  • ಮುಂಗಡವಾಗಿ ಪಾವತಿಸಿದ ಟ್ಯಾಕ್ಸ್ (ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ) ರೆಗ್ಯುಲರ್ ಮೌಲ್ಯಮಾಪನದ ಪ್ರಕಾರ, ಟ್ಯಾಕ್ಸ್ ಲಯಬಿಲಿಟಿಗಿಂತ ಹೆಚ್ಚಿದ್ದರೆ.

  • ರೆಗ್ಯುಲರ್ ಟ್ಯಾಕ್ಸ್‌ನ ಪ್ರಕಾರ ಡಿವಿಡೆಂಡ್‌ಗಳು, ಸೆಕ್ಯೂರಿಟಿಗಳು ಅಥವಾ ಡಿಬೆಂಚರ್‌ಗಳ ಮೇಲಿನ ಇಂಟರೆಸ್ಟ್‌ನಿಂದ ನಿಮಗೆ ಬಂದ ಟಿಡಿಎಸ್ (TDS), ಪಾವತಿಸಬೇಕಾದ ಟ್ಯಾಕ್ಸ್‌ಗಿಂತ ಹೆಚ್ಚಿದ್ದರೆ. ಟಿಡಿಎಸ್ ರಿಫಂಡ್ ಅನ್ನು ಹೇಗೆ ಪಡೆಯುವುದು ಎಂಬುದನ್ನು ಸಹ ನೀವು ತಿಳಿದಿರಬೇಕು.

  • ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸಂಭವಿಸಿದ ದೋಷದಿಂದಾಗಿ, ರೆಗ್ಯುಲರ್ ಮೌಲ್ಯಮಾಪನದ ಮೇಲೆ ವಿಧಿಸಿದ ಟ್ಯಾಕ್ಸ್ ಕಡಿಮೆಯಾದರೆ ಮತ್ತು ಅಂತಿಮವಾಗಿ ಆ ದೋಷವು ಪರಿಹಾರವಾದರೆ.

  • ನೀವು ವಿದೇಶಿ ಅಸೆಟ್‌ಗಳನ್ನು ಹೊಂದಿದ್ದರೆ (ವಿದೇಶಿ ಬ್ಯಾಂಕ್ ಅಕೌಂಟ್‌ಗಳು, ಹಣಕಾಸು ಪ್ರಾಪರ್ಟಿಗಳು, ಸೈನಿಂಗ್ ಅಥಾರಿಟಿ, ಹಣಕಾಸು ಅಸೆಟ್‌ಗಳು, ಇತ್ಯಾದಿ), ಅದನ್ನು ಐಟಿಆರ್ ನಲ್ಲಿ ರಿಪೋರ್ಟ್ ಮಾಡಿರಬೇಕು.

  • ಟ್ಯಾಕ್ಸ್ ಪ್ರಯೋಜನಗಳು ಮತ್ತು ಡಿಡಕ್ಷನ್‌ಗಳನ್ನು ಜನರೇಟ್ ಮಾಡುವ ಮತ್ತು ಇನ್ನೂ ತಿಳಿಸಬೇಕಾದ ಇನ್ವೆಸ್ಟ್‌ಮೆಂಟ್‌ಗಳನ್ನು ನೀವು ಹೊಂದಿದ್ದರೆ.

ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಅರ್ಹತೆಯು ಅನ್ವಯವಾಗುವ ಮತ್ತೊಂದು ಸಂದರ್ಭವನ್ನು ಒಳಗೊಂಡಿದೆ. ಅದೇನೆಂದರೆ ನೀವು ಪಾವತಿಸಿದ ಟ್ಯಾಕ್ಸ್‌ಗಳು ಮತ್ತು ನಿನಗೆ ಮಂಜೂರಾದ ಡಿಡಕ್ಷನ್‌ಗಳನ್ನು ಮೌಲ್ಯಮಾಪನ ಮಾಡಿದ ನಂತರ, ಪಾವತಿಸಬೇಕಾದ ಟ್ಯಾಕ್ಸ್ ಋಣಾತ್ಮಕವಾಗಿದೆ ಎಂದು ನೀವು ಕಂಡುಕೊಂಡಾಗ ರಿಫಂಡ್‌ಗೆ ನೀವು ಅರ್ಹರಾಗುತ್ತೀರಿ.

ನೀವು ಯಾವಾಗ ಇನ್ಕಮ್ ಟ್ಯಾಕ್ಸ್ ರಿಫಂಡ್‌ ಅನ್ನು ಕ್ಲೈಮ್ ಮಾಡಬಹುದು?

ನಿಮ್ಮ ನಿಜವಾದ ಟ್ಯಾಕ್ಸ್ ಲಯಬಿಲಿಟಿಗಿಂತ ಹೆಚ್ಚುವರಿ ಟ್ಯಾಕ್ಸ್ ಅನ್ನು ನೀವು ಪಾವತಿಸಿದ್ದರೆ, ಆ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ನೀವದನ್ನು ಕ್ಲೈಮ್ ಮಾಡಬಹುದು. ಹಣಕಾಸು ವರ್ಷ 2020-21 ರಲ್ಲಿ ಗಳಿಸಿದ ಇನ್ಕಮ್‌ನ ಮೌಲ್ಯಮಾಪನ ವರ್ಷ 2021-22 ಆಗಿದೆ. ಮೌಲ್ಯಮಾಪನ ವರ್ಷ (ಎವೈ) ಹಣಕಾಸು ವರ್ಷವನ್ನು (ಎಫ್?ವೈ) ಅನ್ನು ಅನುಸರಿಸುತ್ತದೆ.

ಇನ್ಕಮ್ ಟ್ಯಾಕ್ಸ್ ರಿಫಂಡ್‌ ಅನ್ನು ಹೇಗೆ ಕ್ಲೈಮ್ ಮಾಡುವುದು?

ಸರಿಯಾದ ವಿಧಾನವನ್ನು ಅನುಸರಿಸಿ ನೀವು ಇನ್ಕಮ್ ಟ್ಯಾಕ್ಸ್ ರಿಫಂಡ್‌ಗಾಗಿ ಫೈಲ್ ಮಾಡಿದ್ದರೆ, ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ನಿಮ್ಮ ಅರ್ಹತೆಗೆ ಅನುಗುಣವಾಗಿ ರಿಫಂಡ್ ಪ್ರಕ್ರಿಯೆಯನ್ನು ಸ್ವಯಂಚಾಲಿತವಾಗಿ ಪ್ರಾರಂಭಿಸುತ್ತದೆ. ಆದಾಗ್ಯೂ, ನೀವು ಮೊದಲ ಬಾರಿಗೆ ಫೈಲ್ ಮಾಡುತ್ತಿರುವ ಅಭ್ಯರ್ಥಿಯಾಗಿದ್ದರೆ, ಈ ಕೆಳಗಿನ ಪ್ರಕ್ರಿಯೆಯು ನಿಮಗೆ ಉತ್ತಮವಾಗಿ ಸಹಾಯ ಮಾಡುತ್ತದೆ. ಆನ್‌ಲೈನ್‌ನಲ್ಲಿ ಟಿಡಿಎಸ್ ರಿಫಂಡ್ ಅನ್ನು ಹೇಗೆ ಪಡೆಯುವುದು ಎಂಬ ಪ್ರಶ್ನೆಗೆ ಇದೇ ಪ್ರಕ್ರಿಯೆಯು ಉತ್ತರವಾಗಿದೆ. 

  • ಐಟಿ ಡಿಪಾರ್ಟ್‌ಮೆಂಟ್‌ನ ಆಫೀಷಿಯಲ್ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ.

  • ಪ್ಯಾನ್ ಕಾರ್ಡ್‌ನೊಂದಿಗೆ ರಿಜಿಸ್ಟ್ರೇಷನ್ ಮಾಡಿ, ಅದನ್ನು ನಂತರದಲ್ಲಿ ನೀವು ನಿಮ್ಮ ಯೂಸರ್ ಐಡಿ ಆಗಿ ಬಳಸಬಹುದು.

  • ‘ಡೌನ್‌ಲೋಡ್’ ಟ್ಯಾಬ್‌ಗೆ ಹಾಗೂ ಮತ್ತು ಅಲ್ಲಿಂದ ಐಟಿಆರ್ ಫಾರ್ಮ್‌ನೊಂದಿಗೆ ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ.

  • ಡೌನ್‌ಲೋಡ್ ಮಾಡಿದ ಎಕ್ಸೆಲ್ ಶೀಟ್ ಓಪನ್ ಮಾಡಿ ಮತ್ತು ಫಾರ್ಮ್ 16 ರಲ್ಲಿ ಅಗತ್ಯವಿರುವ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಿ.

  • ನಿಮ್ಮ ಟ್ಯಾಕ್ಸ್ ಲಯಬಿಲಿಟಿಗಿಂತ ಹೆಚ್ಚಿನ ಟ್ಯಾಕ್ಸ್ ಅನ್ನು ನೀವು ಪಾವತಿಸಿದ್ದರೆ, ಹೆಚ್ಚುವರಿ ಮೊತ್ತವನ್ನು ಸ್ವಯಂಚಾಲಿತವಾಗಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ ಮತ್ತದನ್ನು ಐಟಿಆರ್ ಫಾರ್ಮ್‌ನ 'ರಿಫಂಡ್' ಕಾಲಮ್ ಅಡಿಯಲ್ಲಿ ತೋರಿಸಲಾಗುತ್ತದೆ.

  • ಎಲ್ಲಾ ವಿವರಗಳನ್ನು ವೆರಿಫೈ ಮಾಡಿ ಮತ್ತು ಅವುಗಳನ್ನು ದೃಢೀಕರಿಸಿ. ಅದಾದ ನಂತರ, ಎಕ್ಸ್ಎಮ್ಎಲ್ ಫೈಲ್ ರಚನೆಯಾಗುತ್ತದೆ ಮತ್ತು ನಿಮ್ಮ ಡಿವೈಸ್‌ನಲ್ಲಿ ಸೇವ್ ಆಗುತ್ತದೆ. ನೀವು ಈ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿದ್ದೀರಾ ಎಂಬುದರ ಮೇಲೆ ಇನ್ಕಮ್ ಟ್ಯಾಕ್ಸ್ ರಿಫಂಡ್ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಿರ್ಧಾರವಾಗುತ್ತದೆ.

  • 'ಸಬ್ ಮಿಟ್ ರಿಫಂಡ್' ಅನ್ನು ಆಯ್ಕೆಮಾಡಿ ಮತ್ತು ಆನ್‌ಲೈನ್ ಟ್ಯಾಕ್ಸ್ ಪೋರ್ಟಲ್‌ನಲ್ಲಿ ಎಕ್ಸ್ಎಮ್ಎಲ್ ಫೈಲ್ ಅನ್ನು ಅಪ್‌ಲೋಡ್ ಮಾಡಿ. 

ಐಟಿಆರ್ ಅನ್ನು ಯಶಸ್ವಿಯಾಗಿ ಸಬ್ಮಿಟ್ ಮಾಡಿದ ನಂತರ, ನೀವು ಐಟಿಆರ್ ಅನ್ನು ಇ-ವೆರಿಫೈ ಮಾಡಬೇಕಾಗುತ್ತದೆ. ನೀವು ರಿಫಂಡ್ ಅನ್ನು ಪಡೆಯುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಇನ್ಕಮ್ ಅನ್ನು ಇ-ವೆರಿಫೈ ಮಾಡಿ; ಇಲ್ಲದಿದ್ದರೆ, ಪ್ರಕ್ರಿಯೆಯು ಅಪೂರ್ಣವಾಗಿ ಉಳಿದು ಬಿಡುತ್ತದೆ.

ಐಟಿಆರ್ ಫಾರ್ಮ್‌ನಲ್ಲಿ ಡಿಸ್‌ಪ್ಲೇ ಮಾಡಲಾದ ರಿಫಂಡ್ ಮೊತ್ತವು ಕೇವಲ ನೀವು ನೀಡಿದ ಡೇಟಾವನ್ನು ಮಾತ್ರ ಆಧರಿಸಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಐಟಿ ಡಿಪಾರ್ಟ್‌ಮೆಂಟ್‌ ನೀವು ಸಬ್ಮಿಟ್ ಮಾಡಿದ ಡಾಕ್ಯುಮೆಂಟುಗಳ ವೆರಿಫಿಕೇಶನ್ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ ನಡೆಸುತ್ತದೆ ನಂತರದಲ್ಲಿ ರಿಫಂಡ್‌ನ ಮೊತ್ತವನ್ನು ಕ್ಯಾಲ್ಕುಲೇಟ್ ಮಾಡುತ್ತದೆ. ಇಲ್ಲಿ, ನಿಜವಾದ ರಿಫಂಡ್‌ನ ಮೊತ್ತವು ಐಟಿಆರ್ ಫಾರ್ಮ್‌ನಲ್ಲಿ ತೋರಿಸಿರುವ ಮೊತ್ತಕ್ಕಿಂತ ಭಿನ್ನವಾಗಿರಬಹುದು. 

[ಮೂಲ]

ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಪಾವತಿಯನ್ನು ಹೇಗೆ ಮಾಡಲಾಗುತ್ತದೆ?

ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಪಾವತಿ ವಿಧಾನವನ್ನು ಕೆಳಗೆ ನೀಡಲಾಗಿದೆ, ಅದರಲ್ಲಿ ಯಾವುದೇ ಒಂದು ವಿಧಾನದ ಮೂಲಕ ನೀವು ನಿಮ್ಮ ಶೇರ್ ಪಡೆಯುತ್ತೀರಿ.

  • ಟ್ಯಾಕ್ಸ್ ಪೇಯರ್‌ಗಳ ಅಕೌಂಟ್‌ಗೆ ರಿಫಂಡ್‌ ಮೊತ್ತದ ನೇರ ಟ್ರಾನ್ಸ್‌ಫರ್

  • ಚೆಕ್ ಮೂಲಕ ರಿಫಂಡ್.

ಈಗ ಇಡೀ ಪ್ರಕ್ರಿಯೆಯು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಚರ್ಚಿಸೋಣ

  • ಟ್ಯಾಕ್ಸ್ ಪೇಯರ್‌ಗಳ ಅಕೌಂಟ್‌ಗೆ ರಿಫಂಡ್‌ ಮೊತ್ತದ ನೇರ ಟ್ರಾನ್ಸ್‌ಫರ್ : ಇದು ಟ್ಯಾಕ್ಸ್ ಪೇಯರ್‌ಗಳು ಪಾವತಿಸಿದ ಹೆಚ್ಚುವರಿ ಟ್ಯಾಕ್ಸ್ ಅನ್ನು ರಿಫಂಡ್ ಮಾಡುವ ಸಾಮಾನ್ಯ ವಿಧಾನವಾಗಿದೆ. ಇಲ್ಲಿ, ಟ್ರಾನ್ಸಾಕ್ಷನ್‌ಗಳನ್ನು ಎನ್ಇಸಿಎಸ್/ಆರ್‌ಟಿಜಿಎಸ್ ಮೂಲಕ ಮಾಡಲಾಗುತ್ತದೆ

ಅಭ್ಯರ್ಥಿಗಳ ಬ್ಯಾಂಕ್ ಅಕೌಂಟ್‌ಗೆ ಸಂಬಂಧಿಸಿದ ಐಟಿಆರ್ ಫಾರ್ಮ್‌ನಲ್ಲಿ ನೀಡಿದ ಡೇಟಾ ಸರಿಯಾಗಿದೆಯೇ ಎಂದು ಟ್ಯಾಕ್ಸ್ ಪೇಯರ್‌ಗಳು ಖಚಿತಪಡಿಸಿಕೊಳ್ಳಬೇಕು. ವಿವರಗಳನ್ನು ಸರಿಯಾಗಿ ನೀಡಿದ್ದರೆ, ವ್ಯಕ್ತಿಯು ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ರಿಫಂಡ್ ಅನ್ನು ನಿರೀಕ್ಷಿಸಬಹುದು. 

  • ಚೆಕ್ ಮೂಲಕ ರಿಫಂಡ್ (Refund via cheque) : ಇನ್ಕಮ್ ಟ್ಯಾಕ್ಸ್ ರಿಫಂಡ್ ಅನ್ನು ಪಾವತಿಸುವ ಇನ್ನೊಂದು ವಿಧಾನವೆಂದರೆ ಚೆಕ್ ಮೂಲಕ ಮಾಡುವುದು. ನೀಡಲಾದ ಬ್ಯಾಂಕ್ ಅಮೌಂಟ್ ವಿವರಗಳು ಅಪೂರ್ಣವಾಗಿದ್ದರೆ ಅಥವಾ ತಪ್ಪಾಗಿದ್ದರೆ, ಐಟಿ ಡಿಪಾರ್ಟ್‌ಮೆಂಟ್‌ ಸಾಮಾನ್ಯವಾಗಿ ಈ ವಿಧಾನವನ್ನು ಅನುಸರಿಸುತ್ತದೆ.

ಇಲ್ಲಿ, ಅಥಾರಿಟಿಯು ನೀಡಿದ ಬ್ಯಾಂಕ್ ಅಕೌಂಟ್ ನಂಬರ್‌ಗೆ ಐಟಿಆರ್ ಫಾರ್ಮ್‌ನಲ್ಲಿ ಚೆಕ್ ನೀಡುತ್ತಾರೆ. ಸ್ಪೀಡ್ ಪೋಸ್ಟ್ ಅನ್ನು ಸಂಪರ್ಕಿಸುವ ಮೂಲಕ ವ್ಯಕ್ತಿಗಳು ಚೆಕ್‌ನ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಬಹುದು. ಅದಕ್ಕಾಗಿ, ನೀವು ಐಟಿ ಡಿಪಾರ್ಟ್‌ಮೆಂಟ್‌ ನೀಡಿದ ರೆಫರೆನ್ಸ್ ನಂಬರ್ ಅನ್ನು ಕೈಗೆ ಸಿಗುವಂತೆ ಇಟ್ಟುಕೊಂಡಿರಬೇಕು. 

[ಮೂಲ]

ಇನ್ಕಮ್ ಟ್ಯಾಕ್ಸ್ ರಿಫಂಡ್‌ ಅನ್ನು ಕ್ಲೈಮ್ ಮಾಡಲು ಡ್ಯೂ ಡೇಟ್ ಯಾವುದು?

ಇನ್ಕಮ್ ಟ್ಯಾಕ್ಸ್ ಕ್ಯಾಲೆಂಡರ್ ವಿಭಿನ್ನ ಪ್ರಕ್ರಿಯೆಯನ್ನು ಅನುಸರಿಸುತ್ತದೆ ಅಲ್ಲಿ ಪ್ರತಿ ಡೇಟ್ ಸಹ ಮುಖ್ಯವಾಗಿದೆ. ಆದ್ದರಿಂದ, ಟ್ಯಾಕ್ಸ್ ಪೇಯರ್‌ಗಳು ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ಫೈಲ್ ಮಾಡುವ ಡೇಟ್‌ಗಳ ಬಗ್ಗೆ ಜಾಗರೂಕರಾಗಿರಬೇಕು. ಟ್ಯಾಕ್ಸ್ ಪೇಯರ್‌ಗಳ ಕೆಟಗರಿಯೊಂದಿಗೆ ಡ್ಯೂ ಡೇಟ್‌ಗಳು ಬದಲಾಗುವುದರಿಂದ, ಐಟಿಆರ್ ನ ಡ್ಯೂ ಡೇಟ್ ಅನ್ನು ಗುರುತಿಸಲು ವ್ಯಕ್ತಿಗಳಿಗೆ ಈ ಕೆಳಗಿನ ಟೇಬಲ್ ಸಹಾಯ ಮಾಡುತ್ತದೆ.

ಟ್ಯಾಕ್ಸ್ ಪೇಯರ್‌ಗಳ ಕೆಟಗರಿ ಐಟಿಆರ್ (ITR) ಅನ್ನು ಫೈಲ್ ಮಾಡಲು ಡ್ಯೂ ಡೇಟ್ (ಹಣಕಾಸು ವರ್ಷ 2020-21 ಕ್ಕಾಗಿ)
ವೈಯಕ್ತಿಕ/ಹೆಚ್.ಯು.ಎಫ್/ಎ.ಒ.ಪಿ/ಬಿ.ಒ.ಐ 31ನೇ ಜುಲೈ 2021
ಬಿಸಿನೆಸ್‌ಗಳು (ಡಿಮಾಂಡಿಂಗ್ ಆಡಿಟ್) 31ನೇ ಅಕ್ಟೋಬರ್ 2021
ಬಿಸಿನೆಸ್‌ಗಳು (ಡಿಮಾಂಡಿಂಗ್ ಟಿಪಿ ರಿಪೋರ್ಟ್) 30ನೇ ನವೆಂಬರ್ 2021

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ ಪ್ರಕಾರ, ಒಬ್ಬ ವ್ಯಕ್ತಿಯು ಜುಲೈ 31 ರೊಳಗೆ ಆಯಾ ಹಣಕಾಸು ವರ್ಷದಲ್ಲಿ ಅವನ/ಅವಳ ರಿಟರ್ನ್ ಅನ್ನು ಕ್ಲೈಮ್ ಮಾಡಬೇಕಾಗುತ್ತದೆ. ಡೆಡ್‌ಲೈನ್ ಅನ್ನು ವಿಸ್ತರಿಸದ ಹೊರತು ಡೇಟ್ ಹಾಗೆಯೇ ಉಳಿದುಬಿಡುತ್ತದೆ. 

[ಮೂಲ]

ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಸ್ಟೇಟಸ್ ಅನ್ನು ನಾನು ಹೇಗೆ ಚೆಕ್ ಮಾಡಬೇಕು?

ಜನರು ಎರಡು ಪೋರ್ಟಲ್‌ಗಳ ಮೂಲಕ ಇನ್ಕಮ್ ಟ್ಯಾಕ್ಸ್ ರಿಫಂಡ್‌ ಅನ್ನು ಚೆಕ್ ಮಾಡಬಹುದು. ಅವುಗಳೆಂದರೆ-

  • ಇ-ಫೈಲಿಂಗ್ ವೆಬ್‌ಸೈಟ್

  • ಟಿ.ಐ.ಎನ್ (TIN)/ ಎನ್.ಎಸ್.ಡಿ.ಎಲ್ (NSDL) ವೆಬ್‌ಸೈಟ್

ನಾವು ಪ್ರತಿ ಟ್ರ್ಯಾಕಿಂಗ್ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ ಚರ್ಚಿಸೋಣ.

ಇ-ಫೈಲಿಂಗ್ ವೆಬ್‌ಸೈಟ್ ಮೂಲಕ ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಸ್ಟೇಟಸ್ ಅನ್ನು ಚೆಕ್ ಮಾಡುವುದು

ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಸ್ಟೇಟಸ್ ಅನ್ನು ನೀವು ಸುಲಭವಾಗಿ ಚೆಕ್ ಮಾಡಬಹುದು.

  • ಹಂತ 1 - ಇ-ಫೈಲಿಂಗ್‌ಗಾಗಿ ಆಫೀಷಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು 'ಐಟಿಆರ್ ಸ್ಟೇಟಸ್' ಬಟನ್ ಮೇಲೆ ಕ್ಲಿಕ್ ಮಾಡಿ

  • ಹಂತ 2 - ಸಂಬಂಧಿತ ಬಾಕ್ಸ್‌ನಲ್ಲಿ ಪ್ಯಾನ್, ಸ್ವೀಕೃತಿ ನಂಬರ್, ಕ್ಯಾಪ್ಚಾ ಕೋಡ್‌ನಂತಹ ವಿವರಗಳನ್ನು ನಮೂದಿಸಿ.

  • ಹಂತ 3 - 'ಸಬ್ಮಿಟ್' ಬಟನ್ ಮೇಲೆ ಕ್ಲಿಕ್ ಮಾಡಿ.

  • ಹಂತ 4 - ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ವಿವರಗಳನ್ನು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ. 

[ಮೂಲ]

ಟಿ.ಐ.ಎನ್ (TIN) / ಎನ್.ಎಸ್.ಡಿ.ಎಲ್ (NSDL) ವೆಬ್‌ಸೈಟ್ ಮೂಲಕ ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಸ್ಟೇಟಸ್ ಅನ್ನು ಚೆಕ್ ಮಾಡುವುದು

ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಎನ್ನುವುದು ಭಾರತದ ಐಟಿ ಡಿಪಾರ್ಟ್‌ಮೆಂಟ್‌ನ ಪರವಾಗಿ ಟ್ಯಾಕ್ಸ್ ಇನ್ಫರ್ಮೇಷನ್ ನೆಟ್‌ವರ್ಕ್‌ನ (ಟಿಐಎನ್) ಆಡಳಿತ ಮಂಡಳಿಯಾಗಿದೆ. ಟಿಐಎನ್ ರಾಷ್ಟ್ರವ್ಯಾಪಿ ಟ್ಯಾಕ್ಸ್-ಸಂಬಂಧಿತ ಮಾಹಿತಿಯ ಡೇಟಾಬೇಸ್ ಆಗಿ ಕೆಲಸ ಮಾಡುತ್ತದೆ.

ಟಿ.ಐ.ಎನ್ / ಎನ್.ಎಸ್.ಡಿ.ಎಲ್ ವೆಬ್‌ಸೈಟ್ ಮೂಲಕ ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಸ್ಟೇಟಸ್ ಅನ್ನು ಚೆಕ್ ಮಾಡುವ ಹಂತಗಳನ್ನು ಈ ಕೆಳಗಿನಂತೆ ಚರ್ಚಿಸಲಾಗಿದೆ.

  • ಹಂತ 1 - ಟಿ.ಐ.ಎನ್ (TIN) ನ ಆಫೀಷಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ.

  • ಹಂತ 2 - 'ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಸ್ಟೇಟಸ್' ಮೇಲೆ ಕ್ಲಿಕ್ ಮಾಡಿ.

  • ಹಂತ 3 - ಪ್ಯಾನ್ ಅನ್ನು ನೀಡಿ, ಡ್ರಾಪ್-ಡೌನ್ ಮೆನುವಿನಿಂದ ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ.

  • ಹಂತ 4 - ಕ್ಯಾಪ್ಚಾ ಕೋಡ್ ಅನ್ನು ವೆರಿಫೈ ಮಾಡಿ.

  • ಹಂತ 5 - 'ಸಬ್ಮಿಟ್' ಬಟನ್ ಮೇಲೆ ಕ್ಲಿಕ್ ಮಾಡಿ.

ಈಗ ನೀವು ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಸ್ಟೇಟಸ್ ಅನ್ನು ನೋಡಬಹುದು.

ಅಥಾರಿಟಿಯು ಈಗಾಗಲೇ ರಿಫಂಡ್ ಅನ್ನು ಪ್ರಕ್ರಿಯೆಗೊಳಿಸಿದ್ದರೆ, ನೀವು ರೆಫರೆನ್ಸ್ ನಂಬರ್, ಪಾವತಿಯ ವಿಧಾನ, ರಿಫಂಡ್‌ನ ಡೇಟ್ ಮತ್ತು ಸ್ಟೇಟಸ್ ಅನ್ನು ತಿಳಿಸುವ ಮೆಸೇಜನ್ನು ಸ್ವೀಕರಿಸುತ್ತೀರಿ.

ವಿವಿಧ ಸಂದರ್ಭಗಳು ಮತ್ತು ಪ್ರಕರಣಗಳನ್ನು ಅವಲಂಬಿಸಿ, ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ಸ್ಟೇಟಸ್, ವಿಭಿನ್ನ ಫಲಿತಾಂಶಗಳನ್ನು ತೋರಿಸುತ್ತದೆ. ನಾವು ಎಲ್ಲಾ ವಿಭಿನ್ನ ಸ್ಟೇಟಸ್‌ಗಳನ್ನು ಅವುಗಳ ಅರ್ಥಗಳೊಂದಿಗೆ ಪಟ್ಟಿ ಮಾಡಿದ್ದೇವೆ. ಇದರಿಂದ ಹೊಸ ಟ್ಯಾಕ್ಸ್ ಪೇಯರ್‌ಗಳು ಸಹ ಸುಲಭವಾಗಿ ಅವುಗಳನ್ನು ಅರ್ಥೈಸಿಕೊಳ್ಳಬಹುದು. 

[ಮೂಲ]

ಇನ್ಕಮ್ ಟ್ಯಾಕ್ಸ್ ರಿಫಂಡ್‌ನ ವಿವಿಧ ರೀತಿಯ ಸ್ಟೇಟಸ್‌ಗಳು ಯಾವುವು?

ಟ್ಯಾಕ್ಸ್ ಪೇಯರ್‌ಗಳು ನೋಡಬಹುದಾದ ವಿಭಿನ್ನ ಸ್ಟೇಟಸ್‌ಗಳ ಪಟ್ಟಿ ಇಲ್ಲಿದೆ.

ಬ್ರ್ಯಾಂಡ್ ಹೆಸರು ಬೆಲೆ
ವಿವಿಧ ರೀತಿಯ ಸ್ಟೇಟಸ್‌ಗಳು ಅರ್ಥ
ನಿರ್ಧರಿಸಲಾಗಿಲ್ಲ ಇದು ರಿಫಂಡ್ ಅನ್ನು ಇನ್ನೂ ಪ್ರಕ್ರಿಯೆಗೊಳಿಸಲಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ, ನೀವು ನಿಮ್ಮ ಪ್ರಸ್ತುತ ಇನ್ಕಮ್ ಟ್ಯಾಕ್ಸ್ ಸ್ಟೇಟಸ್ ಚೆಕ್ ಮಾಡಬೇಕಾಗುತ್ತದೆ.
ರಿಫಂಡ್ ವಿಫಲವಾಗಿದೆ ತಪ್ಪಾದ ಬ್ಯಾಂಕ್ ವಿವರಗಳ ಕಾರಣ ರಿಫಂಡ್ ಅನ್ನು ಟ್ಯಾಕ್ಸ್ ಪೇಯರ್‌ಗಳ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ.
ರಿಫಂಡ್ ಅನ್ನು ಪಾವತಿಸಲಾಗಿದೆ ಆಯಾ ಟ್ಯಾಕ್ಸ್ ಪೇಯರ್‌ಗಳು ರಿಫಂಡ್‌ಗೆ ಅರ್ಹರಾಗಿದ್ದಾರೆ ಮತ್ತು ರಿಫಂಡ್ ಮೊತ್ತವನ್ನು ಟ್ಯಾಕ್ಸ್ ಪೇಯರ್‌ಗಳು ನೀಡಿದ ಬ್ಯಾಂಕ್ ಅಕೌಂಟ್ ನಂಬರ್‌ಗೆ ಟ್ರಾನ್ಸ್‌ಫರ್ ಮಾಡಲಾಗಿದೆ ಅಥವಾ ಚೆಕ್ ಮೂಲಕ ಟ್ರಾನ್ಸ್‌ಫರ್ ಮಾಡಲಾಗಿದೆ ಎಂಬುದನ್ನು ಸೂಚಿಸುತ್ತದೆ.
ರಿಫಂಡ್ ರಿಟರ್ನ್ ಆಗಿದೆ ಇದು ಇನ್ಕಮ್ ಟ್ಯಾಕ್ಸ್ ರಿಫಂಡ್ ರಿಟರ್ನ್ ಆಗಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ, ರಿಫಂಡ್ ಅನ್ನು ಕ್ಯಾನ್ಸಲ್ ಮಾಡುವಂತೆ ಹಾಗೂ ಪ್ರಕ್ರಿಯೆಯನ್ನು ಪುನಃ-ಪ್ರಾರಂಭಿಸಲು ವ್ಯಕ್ತಿಯು ಐಟಿ ಡಿಪಾರ್ಟ್‌ಮೆಂಟ್‌ಗೆ ರಿಕ್ವೆಸ್ಟ್ ಮಾಡಿಕೊಳ್ಳಬೇಕಾಗುತ್ತದೆ.
ಚೆಕ್ ಅನ್ನು ನಗದೀಕರಿಸಲಾಗಿದೆ (ಕ್ಯಾಶ್ ಮಾಡಿಕೊಳ್ಳಲಾಗಿದೆ) ಒಬ್ಬ ವ್ಯಕ್ತಿಯ ಹೆಸರನ್ನು ಉದ್ದೇಶಿಸಿ ನೀಡಿದ ಚೆಕ್ ಅನ್ನು ಸ್ವೀಕರಿಸಲಾಗಿದೆ ಮತ್ತದನ್ನು ನಗದೀಕರಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ.
ರಿಫಂಡ್‌ನ ಅವಧಿ ಮುಗಿದಿದೆ. ವ್ಯಕ್ತಿಯ ಹೆಸರಿಗೆ ನೀಡಲಾದ ಚೆಕ್ ಅನ್ನು ಇಶ್ಯೂ ಮಾಡಿದ ದಿನಾಂಕದಿಂದ 30 ದಿನಗಳಲ್ಲಿ ನಗದು ಮಾಡಲಾಗಿಲ್ಲ ಎಂಬುದನ್ನು ಸೂಚಿಸುತ್ತದೆ (ಮೇಲಿನ ಬಲ ಮೂಲೆಯಲ್ಲಿ ತಿಳಿಸಲಾಗಿರುತ್ತದೆ). ಅಂತಹ ಸಂದರ್ಭಗಳಲ್ಲಿ, ವ್ಯಕ್ತಿಗಳು ತಮ್ಮ ಹೆಸರಿನ ವಿರುದ್ಧ ನೀಡಲಾದ ಮತ್ತೊಂದು ಚೆಕ್ ಅನ್ನು ಪಡೆಯಬೇಕು.
ಕಳೆದ ವರ್ಷದ ಬಾಕಿ ಉಳಿದಿರುವ ಡಿಮ್ಯಾಂಡ್ ಗೆ ಅನುಗುಣವಾಗಿ ರಿಫಂಡ್ ಅನ್ನು ಅಡ್ಜಸ್ಟ್ ಮಾಡಲಾಗಿದೆ ಇದು ಹಿಂದಿನ ಮೌಲ್ಯಮಾಪನ ವರ್ಷದಿಂದ ಬಾಕಿ ಉಳಿದಿರುವ ಇನ್ಕಮ್ ಟ್ಯಾಕ್ಸ್ ಮೊತ್ತವನ್ನು ಪ್ರಸ್ತುತ ಮೌಲ್ಯಮಾಪನ ವರ್ಷದ ಹೊಸ ನಿರೀಕ್ಷಿತ ಇನ್ಕಮ್ ಟ್ಯಾಕ್ಸ್ ರಿಫಂಡ್‌ಗೆ ಅಡ್ಜಸ್ಟ್ ಮಾಡಲಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಆದಾಗ್ಯೂ, ಅಥಾರಿಟಿಯು ಅದನ್ನು ಅಡ್ಜಸ್ಟ್ ಮಾಡುವ ಮೊದಲು ಟ್ಯಾಕ್ಸ್ ಪೇಯರ್‌ಗಳಿಗೆ ತಿಳಿಸುತ್ತದೆ.

ಐಟಿಆರ್ (ITR) ರಿಫಂಡ್‌ಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಇನ್ಕಮ್ ಟ್ಯಾಕ್ಸ್ ರಿಫಂಡ್ ಅನ್ನು ಸಾಮಾನ್ಯವಾಗಿ ಐಟಿಆರ್ ಪ್ರಕ್ರಿಯೆಯ ನಂತರ 24-45 ದಿನಗಳೊಳಗಾಗಿ ನೀಡಲಾಗುತ್ತದೆ. ಆದಾಗ್ಯೂ, ನಿಮ್ಮ ರಿಫಂಡ್ ಅಂತಹ ಸಮಯವನ್ನು ಮೀರಿ ಡಿಲೇಯಾದರೆ, ಜನರು ಐಟಿ ಡಿಪಾರ್ಟ್‌ಮೆಂಟ್‌ನೊಂದಿಗೆ ಅದರ ಬಗ್ಗೆ ವಿಚಾರಿಸಬೇಕು. ಇನ್ಕಮ್ ಟ್ಯಾಕ್ಸ್ ರಿಫಂಡ್‌ಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇದು ಸರಳವಾದ ಮಾರ್ಗವಾಗಿದೆ.

ಅದು ಸ್ಯಾಲರೀಡ್ ವ್ಯಕ್ತಿಯಾಗಿರಲಿ ಅಥವಾ ಸೆಲ್ಫ್ ಎಂಪ್ಲಾಯ್ಡ್ ಆಗಿರಲಿ, ಪ್ರತಿಯೊಬ್ಬ ವ್ಯಕ್ತಿಯು ಇನ್ಕಮ್ ಟ್ಯಾಕ್ಸ್ ರಿಫಂಡ್ ಎಂಬ ಪದವನ್ನು ಕೇಳಿರಲೇಬೇಕು. ಜನರು ಪ್ರತಿ ವರ್ಷ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್‌ಗಾಗಿ ಫೈಲ್ ಮಾಡುತ್ತಾರೆ, ಆದರೂ ಐಟಿಆರ್‌ನ ಸಂಪೂರ್ಣ ಕ್ಲೈಮ್ ಪ್ರಕ್ರಿಯೆಯು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ.

ಆದರೆ ಈ ವಿಸ್ತೃತ ಮಾಹಿತಿಯೊಂದಿಗೆ ಐಟಿಆರ್ ಕ್ಲೈಮ್ ಪ್ರಕ್ರಿಯೆ, ಅರ್ಹತೆ, ಡ್ಯೂ ಡೇಟ್, ಇನ್ಕಮ್ ಟ್ಯಾಕ್ಸ್ ರಿಫಂಡ್‌ಗಾಗಿ ಫೈಲ್ ಮಾಡುವುದು ಮುಂತಾದ ಕೆಲಸಗಳು ನಿಮಗೆ ಇನ್ನು ಮುಂದೆ ಸವಾಲಾಗಿರುವುದಿಲ್ಲ. ಇನ್ಕಮ್ ಟ್ಯಾಕ್ಸ್ ರಿಫಂಡ್‌ಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನಿಮಗೀಗ ತಿಳಿದಿದೆ, ನಿಮ್ಮ ಅಪ್ಲಿಕೇಶನ್ ಫೈಲ್ ಮಾಡಲು ಪ್ರಾರಂಭಿಸಿ.

ಮೇಲೆ ತಿಳಿಸಲಾದ ಸೆಕ್ಷನ್‌ಗಳನ್ನು ಓದಿ ಮತ್ತು ಪುನಃ-ಓದಿ ಹಾಗೂ ಡೆಡ್‌ಲೈನ್‌ಗೂ ಮೊದಲು, ಕಷ್ಟಪಟ್ಟು ಗಳಿಸಿದ ನಿಮ್ಮ ಹಣವನ್ನು (ಐಟಿಆರ್) ಕ್ಲೈಮ್ ಮಾಡಿ!

ಪದೇ ಪದೇ ಕೇಳಲಾದ ಪ್ರಶ್ನೆಗಳು

ತಡವಾದ ಕ್ಲೈಮ್‌ಗಳ ರಿಫಂಡ್ ಮೇಲಿನ ಇಂಟರೆಸ್ಟ್ ಅನ್ನು ನಾನು ಪಡೆಯಬಹುದೇ?

ಇಲ್ಲ, ತಡವಾದ ಕ್ಲೈಮ್‌ಗಳ ರಿಫಂಡ್‌ನಲ್ಲಿ ನೀವು ಇಂಟರೆಸ್ಟ್ ಅನ್ನು ಪಡೆಯಲು ಸಾಧ್ಯವಿಲ್ಲ.

ಆರು ಸತತ ಮೌಲ್ಯಮಾಪನ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಇನ್ಕಮ್ ಟ್ಯಾಕ್ಸ್ ರಿಫಂಡ್ ಅನ್ನು ಪರಿಗಣಿಸುತ್ತಾರೆಯೇ?

ಆರು ಸತತ ಮೌಲ್ಯಮಾಪನ ವರ್ಷಗಳನ್ನು ಪೂರ್ಣಗೊಳಿಸಿದ ನಂತರದ ಇನ್ಕಮ್ ಟ್ಯಾಕ್ಸ್ ರಿಫಂಡ್ ಅನ್ನು ಪರಿಗಣಿಸಲಾಗುವುದಿಲ್ಲ.

ಒಂದೇ ಮೌಲ್ಯಮಾಪನ ವರ್ಷಕ್ಕೆ ರಿಫಂಡ್ ಮೊತ್ತವು ಯಾವುದಾದರೂ ಹೆಚ್ಚಿನ ಲಿಮಿಟ್ ಅನ್ನು ಹೊಂದಿದೆಯೇ?

ಹೌದು, ಒಂದೇ ಮೌಲ್ಯಮಾಪನ ವರ್ಷಕ್ಕೆ ರಿಫಂಡ್ ಮೊತ್ತವು ಗರಿಷ್ಠ ಲಿಮಿಟ್ ಅನ್ನು ಹೊಂದಿದೆ. ಅದು ₹50 ಲಕ್ಷಗಳಿಗಿಂತ ಕಡಿಮೆಯಿರಬೇಕು. ₹50 ಲಕ್ಷಕ್ಕಿಂತ ಹೆಚ್ಚಿನ ರಿಫಂಡ್‌ನ ಅಪ್ಲಿಕೇಶನ್ ಅನ್ನು ಸಿಬಿಡಿಟಿ ಯು ಪರಿಗಣಿಸುತ್ತದೆ. 

[ಮೂಲ]