ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಆನ್‌ಲೈನ್‌ನಲ್ಲಿ ಐಟಿಆರ್ ಸ್ವೀಕೃತಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ನಿಮ್ಮ ವಾರ್ಷಿಕ ಇನ್‌ಕಮ್‌ ರೂ.2,50,000ಕ್ಕಿಂತ ಹೆಚ್ಚಿದ್ದರೆ, ಐಟಿಆರ್ ಫೈಲ್‌ ಮಾಡುವುದು ಕಡ್ಡಾಯವಾಗಿದೆ. ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ಅನ್ನು ನೀವು ಪಾವತಿಸುವಾಗ, ನೀವು ಸ್ವೀಕೃತಿಯನ್ನು ಪಡೆಯುತ್ತೀರಿ. ನೀವು ಈ ಸ್ವೀಕೃತಿಯನ್ನು ಪ್ರಿಂಟ್ ಮಾಡಬೇಕು ಮತ್ತು ಅದಕ್ಕೆ ಸಹಿ ಹಾಕಬೇಕು.

ಐಟಿಆರ್-ವಿ ಫಾರ್ಮ್ ಅನ್ನು ಸ್ವೀಕರಿಸಿದ 30 ದಿನಗಳ ಒಳಗೆ ನೀವು ಈ ಸಹಿ ಮಾಡಿದ ಡಾಕ್ಯುಮೆಂಟ್ ಅನ್ನು ಬೆಂಗಳೂರಿನ ಸೆಂಟ್ರಲ್ ಹಬ್‌ಗೆ ಪೋಸ್ಟ್ ಮಾಡಬೇಕು. ಪರ್ಯಾಯವಾಗಿ, ನೀವು ಫೈಲ್ ಮಾಡಿದ ದಿನಾಂಕದಿಂದ 30 ದಿನಗಳಲ್ಲಿ ನಿಮ್ಮ ITR ಅನ್ನು ಇ-ವೆರಿಫೈ ಮಾಡಬಹುದು.

ಈ ಪೋಸ್ಟ್‌ನಲ್ಲಿ, ಈ ಐಟಿಆರ್ ವಿ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ನಾವು ಕಲಿಯಲಿದ್ದೇವೆ.

[ಮೂಲ]

ಐಟಿಆರ್ ಸ್ವೀಕೃತಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ

ಐಟಿಆರ್‌-ವಿ- ಡೌನ್‌ಲೋಡ್ ಮಾಡಲು ಈ ಹಂತಗಳನ್ನು ಅನುಸರಿಸಿ

ಹಂತ 1: https://incometaxindiaefiling.gov.inಗೆ ಭೇಟಿ ನೀಡಿ

ಹಂತ 2: ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ, 'ಲಾಗಿನ್ ಹಿಯರ್' ಆಯ್ಕೆಯನ್ನು ಕ್ಲಿಕ್ ಮಾಡಿ. ಆದಾಗ್ಯೂ, ನೀವು ಖಾತೆಯನ್ನು ಹೊಂದಿಲ್ಲದಿದ್ದರೆ, ರಿಜಿಸ್ಟರ್‌ ಯುವರ್‌ಸೆಲ್ಫ್‌ ಮೇಲೆ ಕ್ಲಿಕ್ ಮಾಡಿ ಮತ್ತು ಹೊಸ ಖಾತೆಯನ್ನು ರಚಿಸಿ. ಐಟಿಆರ್-ವಿ ಅನ್ನು ಡೌನ್‌ಲೋಡ್ ಮಾಡುವ ಸಂದರ್ಭ ಬಂದಾಗ ಇದು ಒಂದು ಪ್ರಮುಖ ಹಂತವಾಗಿದೆ.

ಹಂತ 3: ಲಾಗಿನ್ ಪುಟದಲ್ಲಿ ನಿಮ್ಮ ಕ್ರೆಡೆನ್ಷಿಯಲ್‌ಗಳನ್ನು ನಮೂದಿಸಿ.

ಹಂತ 4: ನಿಮ್ಮನ್ನು ಹೊಸ ಪುಟಕ್ಕೆ ನಿರ್ದೇಶಿಸಲಾಗುತ್ತದೆ, ಮೇಲಿನ ಮೆನುವಿನಲ್ಲಿ ಮೈ ಅಕೌಂಟ್ ಸೆಕ್ಷನ್ ಅನ್ನು ನೋಡಿ, ಡ್ರಾಪ್-ಡೌನ್‌ನಿಂದ 'ಇ-ಫೈಲ್ಡ್ ರಿಟರ್ನ್ಸ್/ಫಾರ್ಮ್ಸ್' ಆಯ್ಕೆಯನ್ನು ಆರಿಸಿಕೊಳ್ಳಿ.

ಹಂತ 5: ಡ್ರಾಪ್-ಡೌನ್ ಮೆನುವಿನಿಂದ 'ಇನ್‌ಕಮ್‌ ಟ್ಯಾಕ್ಸ್ ರಿಟರ್ನ್' ಮೇಲೆ ಕ್ಲಿಕ್ ಮಾಡಿ ಮತ್ತು ನಂತರ 'ವ್ಯೂ ಫೈಲ್‌ಡ್‌ ರಿಟರ್ನ್ಸ್' ಮೇಲೆ ಕ್ಲಿಕ್ ಮಾಡಿ ಮತ್ತು ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಇದು ನೀವು ಆನ್‌ಲೈನ್‌ನಲ್ಲಿ ಐಟಿಆರ್‌ ವಿ ಅನ್ನು ಡೌನ್‌ಲೋಡ್ ಮಾಡುವ ಸರಳ ಮಾರ್ಗವಾಗಿದೆ.

ನಿಮ್ಮ ಸ್ವೀಕೃತಿಯನ್ನು ಪೂರ್ಣಗೊಳಿಸಲು ನೀವು ಈ ಐಟಿಆರ್-ವಿ ಅನ್ನು ಪ್ರಿಂಟ್ ಮಾಡಬೇಕು ಮತ್ತು ಸಿಪಿಸಿ ಬೆಂಗಳೂರಿಗೆ ಪೋಸ್ಟ್ ಮಾಡಬೇಕು. ಪರ್ಯಾಯವಾಗಿ, ನೀವು ಐಟಿಆರ್ ಅನ್ನು ಇ-ವೆರಿಫೈ ಮಾಡಬಹುದು.

ಪ್ರೊಸೆಸ್ ಅನ್ನು ಆನ್‌ಲೈನ್‌ನಲ್ಲಿ ಮಾಡುವುದರಿಂದ, ನೀವು ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಆರಾಮಾಗಿ ಕುಳಿತು ಅದನ್ನು ಸುಲಭವಾಗಿ ಮಾಡಬಹುದು. ಆದರೆ ನೀವು ಹತ್ತಿರದ ಸೈಬರ್ ಕೆಫೆಯಲ್ಲಿ ಈ ಪ್ರೊಸೆಸ್ ಅನ್ನು ಮಾಡಬಹುದು, ಅಥವಾ ನೀವು ನಿಮ್ಮ ಹತ್ತಿರದ ಐಟಿಓಗೆ ಭೇಟಿ ನೀಡಬಹುದು ಮತ್ತು ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ಹೇಗೆ ಡೌನ್‌ಲೋಡ್ ಮಾಡುವುದು ಎಂಬುದರ ಕುರಿತು ನೀವು ಇನ್ನೂ ಗೊಂದಲದಲ್ಲಿದ್ದರೆ ನಿಮ್ಮ ಐಟಿಆರ್-ವಿ ಅನ್ನು ಡೌನ್‌ಲೋಡ್ ಮಾಡಲು ಅಧಿಕಾರಿಯ ಸಹಾಯವನ್ನು ತೆಗೆದುಕೊಳ್ಳಬಹುದು.

[ಮೂಲ]

[ಮೂಲ]

ರಿಟರ್ನ್ಸ್ ಅನ್ನು ವೆರಿಫೈ ಮಾಡಲು ಇತರ ಮಾರ್ಗಗಳು

ಐಟಿಆರ್‌ನ ಸ್ವೀಕೃತಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ನಿಮಗೆ ಅರ್ಥವಾಗದಿದ್ದರೆ, ಇನ್‌ಕಮ್‌ ಟ್ಯಾಕ್ಸ್ ಇಲಾಖೆಯು ನಿಮ್ಮ ಇನ್‌ಕಮ್‌ ಅನ್ನು ವೆರಿಫೈ ಮಾಡಲು ಹಲವಾರು ಇತರ ಮಾರ್ಗಗಳೊಂದಿಗೆ ಬಂದಿದೆ-

  • ಆಧಾರ್ ಕಾರ್ಡ್ ಸಂಖ್ಯೆ ಮತ್ತು ಓಟಿಪಿ ಮೂಲಕ ವೆರಿಫಿಕೇಷನ್
  • ನೆಟ್ ಬ್ಯಾಂಕಿಂಗ್ ಮೂಲಕ ಇವಿಸಿ ರಚನೆ
  • ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಇವಿಸಿ ರಚಿಸುವುದು
  • ಡಿಮ್ಯಾಟ್ ಖಾತೆಯ ಮೂಲಕ ಇವಿಸಿ ರಚಿಸುವುದು
  • ಎಟಿಎಂ ಕಾರ್ಡ್ ಮೂಲಕ ಇವಿಸಿ ರಚಿಸುವುದು

[ಮೂಲ]

ಐಟಿಆರ್-ವಿ ಫಾರ್ಮ್ ಡೌನ್‌ಲೋಡ್‌ ಮಾಡಲು ಅಗತ್ಯವಿರುವ ವಿವರಗಳು

ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ, ನಿಮಗೆ ನಿಮ್ಮ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಅಗತ್ಯವಿರುತ್ತದೆ. ನೀವು ಅಸ್ತಿತ್ವದಲ್ಲಿರುವುದನ್ನು ಹೊಂದಿಲ್ಲದಿದ್ದರೆ, ಆಗ ನೀವು ಖಾತೆಯನ್ನು ರಚಿಸಬೇಕಾಗುತ್ತದೆ.

ಪಾಸ್‌ವರ್ಡ್‌ ಅಗತ್ಯವಿರುವಂತೆ ನಿಮ್ಮ ಪ್ಯಾನ್ ಕೂಡ ನಿಮಗೆ ಅಗತ್ಯವಿರುತ್ತದೆ.

ಈ ಕೈಬೆರಳೆಣಿಕೆಯ ವಿವರಗಳೊಂದಿಗೆ, ನಿಮ್ಮ ಐಟಿಆರ್-ವಿ ಅನ್ನು ಡೌನ್‌ಲೋಡ್ ಮಾಡಲು ನಿಮಗೆ ಸಾಧ್ಯ. ಇವುಗಳಿಲ್ಲದೆ, ಆನ್‌ಲೈನ್‌ನಲ್ಲಿ ಐಟಿಆರ್ ಸ್ವೀಕೃತಿಯನ್ನು ಡೌನ್‌ಲೋಡ್ ಮಾಡುವುದು ಅಸಾಧ್ಯ.

ಐಟಿಆರ್-ವಿ ಫಾರ್ಮ್‌ನಲ್ಲಿನ ವಿವರಗಳು

  • ಪ್ಯಾನ್
  • ಹೆಸರು
  • ವಿಳಾಸ
  • ಸ್ಟೇಟಸ್
  • ಫಾರ್ಮ್ ನಂ.
  • ಸೆಕ್ಷನ್ ಅಡಿಯಲ್ಲಿ ಫೈಲ್ ಆಗಿರುವುದು
  • ಇ-ಫೈಲಿಂಗ್ ಸ್ವೀಕೃತಿ ಸಂಖ್ಯೆ
  • ಟ್ಯಾಕ್ಸೇಬಲ್ ಇನ್‌ಕಮ್‌ ವಿವರಗಳು
  • ಡಿವಿಡೆಂಡ್ ವಿತರಣೆ ಟ್ಯಾಕ್ಸ್ ವಿವರ
  • ಅಕ್ರೆಡಿಟೆಡ್ ಇನ್‌ಕಮ್‌ ಟ್ಯಾಕ್ಸ್‌ ವಿವರಗಳು
  • ಮತ್ತು ನೀವು ಸಹಿ ಮಾಡಬೇಕಾದ ಡಿಕ್ಲರೇಷನ್.

ಸಿಪಿಸಿಗೆ ಸ್ವೀಕೃತಿಯನ್ನು ಪೋಸ್ಟ್ ಮಾಡುವ ಮೂಲಕ ನಿಮ್ಮ ಕೆಲಸವು ಕೊನೆಗೊಳ್ಳುವುದಿಲ್ಲ; ಐಟಿಆರ್ ಪ್ರೊಸೆಸ್ ಆಗಿದೆ ಎಂಬ ಸ್ಟೇಟಸ್‌ಗೆ ಬದಲಾಗುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಖಾತೆಯನ್ನು ನೀವು ಚೆಕ್ ಮಾಡುತ್ತಿರಬೇಕು.

ಐಟಿಆರ್ ಸ್ವೀಕೃತಿಯನ್ನು ಪಡೆಯಲು ಮೇಲೆ ತಿಳಿಸಲಾದ ಈ ತೊಂದರೆ-ಮುಕ್ತ ಪ್ರೊಸೆಸ್ ಅನ್ನು ಅನುಸರಿಸಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಐಟಿಆರ್‌-ವಿ ಅನ್ನು ಸಿಪಿಸಿಗೆ ಪೋಸ್ಟ್ ಮಾಡುವುದು ಕಡ್ಡಾಯವೇ?

ಎರಡು ಆಯ್ಕೆಗಳಿವೆ:

ಆಯ್ಕೆ ಎ: ನಿಮ್ಮ ರಿಟರ್ನ್ಸ್ ಪ್ರೊಸೆಸಿಂಗ್ ಆರಂಭ ಮಾಡಲು ನಿಮ್ಮ ಐಟಿಆರ್‌-ವಿ ಅನ್ನು ಐಟಿ ಇಲಾಖೆಯ ಸಿಪಿಸಿಗೆ ಕಳುಹಿಸಿ. ನಿಮಗೆ ಒದಗಿಸಿದ 30 ದಿನಗಳೊಳಗೆ ಅವರು ನಿಮ್ಮ ಐಟಿಆರ್‌-ವಿ ಅನ್ನು ಸ್ವೀಕರಿಸದಿದ್ದರೆ ನಿಮ್ಮ ರಿಟರ್ನ್ ಅನ್ನು ಇನ್‌ವ್ಯಾಲಿಡ್‌ ಎಂದು ಪರಿಗಣಿಸಲಾಗುತ್ತದೆ.

ಆಯ್ಕೆ ಬಿ: ಐಟಿಆರ್ ಫೈಲ್ ಮಾಡಿದ 30 ದಿನಗಳ ಒಳಗೆ ನಿಮ್ಮ ಐಟಿಆರ್ ಅನ್ನು ಇ-ವೆರಿಫೈ ಮಾಡಿ.

ಇನ್‌ವ್ಯಾಲಿಡ್‌ ರಿಟರ್ನ್ ಎಂದರೇನು?

ಇನ್‌ವ್ಯಾಲಿಡ್‌ ರಿಟರ್ನ್ ಎಂದರೆ ನಿಮ್ಮ ರಿಟರ್ನ್ ಅನ್ನು ಪರಿಗಣಿಸಲಾಗಿಲ್ಲ ಎಂದರ್ಥ, ಆದ್ದರಿಂದ ನೀವು ಸಮಯಕ್ಕೆ ಸರಿಯಾಗಿ ರಿಟರ್ನ್‌ಗಳನ್ನು ಫೈಲ್ ಮಾಡಿದ್ದರೂ ಸಹ ನೀವು ಮತ್ತೆ ಫೈಲ್ ಮಾಡಬೇಕಾಗುತ್ತದೆ.