ಐಟಿಆರ್ (ITR) ನ ಇ-ವೆರಿಫಿಕೇಶನ್ಅನ್ನು ಮಾಡುವುದು ಹೇಗೆ?
ನಿಮ್ಮ ರಿಟರ್ನ್ಸ್ ಅನ್ನು ಫೈಲ್ ಮಾಡಿದ ನಂತರ ವೆರಿಫಿಕೇಶನ್ ಅತ್ಯಗತ್ಯ. ಈ ಪೋಸ್ಟ್‌ನಲ್ಲಿ, ಐಟಿಆರ್‌ನ ಇ-ವೆರಿಫಿಕೇಶನ್ಅನ್ನು ಹೇಗೆ ಮಾಡಬೇಕೆಂದು ನಾವು ನೋಡಲಿದ್ದೇವೆ.
ಆದರೆ ಅದಕ್ಕೂ ಮೊದಲು, ಐಟಿಆರ್ ಇ-ವೆರಿಫಿಕೇಶನ್ ಎಂದರೇನು ಎಂಬುದನ್ನು ನಾವು ತಿಳಿದುಕೊಳ್ಳಬೇಕು-
ಸಿಪಿಸಿ ಗೆ ನಿಮ್ಮ ಐಟಿಆರ್‌ನ ಸ್ವೀಕೃತಿಯನ್ನು ಡೌನ್‌ಲೋಡ್ ಮಾಡುವ, ಸಹಿ ಮಾಡುವ ಮತ್ತು ಪೋಸ್ಟ್ ಮಾಡುವ ಹಳೆಯ-ಶೈಲಿಯ ವಿಧಾನವನ್ನು ಅನುಸರಿಸುವ ಬದಲು, ಈಗ ನೀವದನ್ನು ಆನ್‌ಲೈನ್‌ನಲ್ಲಿ ವೆರಿಫೈ ಮಾಡಬಹುದು. ಇದು ನಿಮ್ಮ ಕೆಲಸವನ್ನು ಹೆಚ್ಚು ತೊಂದರೆ-ಮುಕ್ತವನ್ನಾಗಿ ಮಾಡುವುದಲ್ಲದೆ, ಅನುಸರಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಐಟಿಆರ್ (ITR) ಇ-ವೆರಿಫಿಕೇಶನ್‌ಗಾಗಿ ಹಂತಗಳು
ನಿಮ್ಮ ಐಟಿಆರ್‌ನ ವೆರಿಫಿಕೇಶನ್ ಅನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಮಾಡಲು ನೀವು ಆಯ್ಕೆ ಮಾಡಿಕೊಳ್ಳಬಹುದು. ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಇ-ವೆರಿಫಿಕೇಶನ್ ಮಾಡುವುದು ಹೇಗೆ ಎಂದು ನೋಡೋಣ-
ಆನ್‌ಲೈನ್
ಲಾಗ್ ಇನ್ ಮಾಡಲು ನಿಮ್ಮ ದಾಖಲೆಗಳನ್ನು ಬಳಸಿ
ನಿಮ್ಮ ಇ-ಫೈಲ್ ಮಾಡಿದ ಟ್ಯಾಕ್ಸ್ ರಿಟರ್ನ್‌ಗಳನ್ನು ನೋಡಲು 'ರಿಟರ್ನ್ಸ್/ಫಾರ್ಮ್‌ಗಳನ್ನು ವೀಕ್ಷಿಸಿ' ಆಯ್ಕೆಯನ್ನು ಆಯ್ಕೆಮಾಡಿ.
ವೆರಿಫಿಕೇಶನ್‌ಗಾಗಿ ಬಾಕಿಯಿರುವ ನಿಮ್ಮ ರಿಟರ್ನ್‌ಗಳನ್ನು ವೀಕ್ಷಿಸಲು 'ಇಲ್ಲಿ ಕ್ಲಿಕ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಇ-ವೆರಿಫೈ ಆಯ್ಕೆಯನ್ನು ಆಯ್ಕೆಮಾಡಿ.
ಕ್ಲಿಕ್ ಮಾಡಿದ ನಂತರ, ನೀವು ಇವಿಸಿ ಅನ್ನು ಜನರೇಟ್ ಮಾಡಬಹುದಾದ ವಿಧಾನಗಳ ಪಟ್ಟಿಯನ್ನು ನೀವು ನೋಡುತ್ತೀರಿ. (ನಾವು ಅದನ್ನು ಈ ಕೆಳಗೆ ವಿವರವಾಗಿ ಚರ್ಚಿಸಿದ್ದೇವೆ.)
ನೀವು ಆಯ್ಕೆ ಮಾಡಿದ ವಿಧಾನದ ಮೂಲಕ ಇವಿಸಿ ಅನ್ನು ಯಶಸ್ವಿಯಾಗಿ ಜನರೇಟ್ ಮಾಡಿದ ನಂತರ, ಅದನ್ನು ಎಂಟರ್ ಮಾಡಿ ಮತ್ತು ಸಬ್ಮಿಟ್ ಮಾಡಿ.
ಟ್ರಾನ್ಸಾಕ್ಷನ್ ಐಡಿ ಮತ್ತು ಇವಿಸಿ ಕೋಡ್ ಜೊತೆಗೆ ಕನ್ಫರ್ಮೇಶನ್‌ಗಾಗಿ ಅಲರ್ಟ್ ಪಾಪ್-ಅಪ್ ಅನ್ನು ಡಿಸ್‌ಪ್ಲೇ ಮಾಡಲಾಗುತ್ತದೆ. ನಿಮ್ಮ ರೆಕಾರ್ಡ್‌ಗಳಿಗಾಗಿ ಅಟ್ಯಾಚ್‌ಮೆಂಟ್ ಅನ್ನು ಡೌನ್‌ಲೋಡ್ ಮಾಡಲು ಗ್ರೀನ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಅಷ್ಟೇ. ನಿಮ್ಮ ಐಟಿಆರ್ ಅನ್ನು ನೀವು ಯಶಸ್ವಿಯಾಗಿ ಇ-ವೆರಿಫಿಕೇಶನ್ ಅನ್ನು ಮಾಡಿರುವಿರಿ.
ಆನ್‌ಲೈನ್‌ನಲ್ಲಿ ಐಟಿಆರ್ ವೆರಿಫಿಕೇಶನ್ ಮಾಡುವುದು ಹೀಗೆ. ಈಗ, ನೀವು ಐಟಿಆರ್ ಇ-ವೆರಿಫಿಕೇಶನ್ ಅನ್ನು ಆಫ್‌ಲೈನ್‌ನಲ್ಲಿ ಹೇಗೆ ಮಾಡಬೇಕೆಂಬುದನ್ನು ತಿಳಿಯಬೇಕು.
ಆಫ್‌ಲೈನ್
ಸ್ವೀಕೃತಿಯನ್ನು ಡೌನ್‌ಲೋಡ್ ಮಾಡುವ ಮತ್ತು ಪ್ರಿಂಟ್ ಮಾಡಿ ನಂತರ ಅದನ್ನು ಬೆಂಗಳೂರಿನ ಸಿಪಿಸಿಗೆ ಪೋಸ್ಟ್ ಮಾಡುವ ಹಳೆಯ ವಿಧಾನ ನಮಗೆಲ್ಲರಿಗೂ ತಿಳಿದಿದೆ.
ಸ್ವೀಕೃತಿಯನ್ನು ನೀಡಿದ 30 ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಮಾಡಬೇಕಾಗಿದೆ.
ಆದಾಗ್ಯೂ, ನಿಮ್ಮ ಬ್ಯಾಂಕ್‌ನ ಎಟಿಎಮ್ ಮೂಲಕ ನಿಮ್ಮ ಐಟಿಆರ್ ಅನ್ನು ಆಫ್‌ಲೈನ್‌ನಲ್ಲಿ ವೆರಿಫಿಕೇಶನ್ ಮಾಡಬಹುದು. ನೀವದನ್ನು ಹೇಗೆ ಮಾಡಬಹುದು ಎಂಬುದಕ್ಕೆ ಉತ್ತರ ಇಲ್ಲಿದೆ-
ನಿಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಅನ್ನು ಮಷಿನ್‌ನ ಸ್ಲಾಟ್‌ನಲ್ಲಿ ಇನ್ಸರ್ಟ್ ಮಾಡಿ.
ಮುಂದುವರೆಯಲು ಇ-ಫೈಲಿಂಗ್ ಆಯ್ಕೆಗಾಗಿ ಪಿನ್ ಅನ್ನು ಆಯ್ಕೆಮಾಡಿ.
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ನೀವು ಇವಿಸಿ ಅನ್ನು ಸ್ವೀಕರಿಸುತ್ತೀರಿ.
ಒಮ್ಮೆ ನೀವು ನಿಮ್ಮ ಇವಿಸಿ ಅನ್ನು ಸ್ವೀಕರಿಸಿದ ನಂತರ, ನೀವು ನಿಮ್ಮ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಬಹುದು ಮತ್ತು ನಿಮ್ಮ ಐಟಿಆರ್ ಅನ್ನು ವೆರಿಫೈ ಮಾಡಬಹುದು. ಹಾಗೆ ಮಾಡಲು, ಬ್ಯಾಂಕ್ ಎಟಿಎಮ್ ಮೂಲಕ ಈಗಾಗಲೇ ಜನರೇಟ್ ಮಾಡಲಾದ ಇವಿಸಿ ಆಯ್ಕೆಯನ್ನು ಆಯ್ಕೆಮಾಡಿ.
ನೆಟ್ ಬ್ಯಾಂಕಿಂಗ್ ಮೂಲಕ ಇ-ವೆರಿಫಿಕೇಶನ್ ಮಾಡುವುದು ಹೇಗೆ
ನಿಮ್ಮ ಬ್ಯಾಂಕ್ ಅಟ್‌ಗೆ ಸೈನ್ ಇನ್ ಮಾಡಿ ಮತ್ತು ಹೋಮ್ ಪೇಜಿನಲ್ಲಿ ಇನ್ಕಮ್ ಟ್ಯಾಕ್ಸ್ ಫೈಲಿಂಗ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
'ಇ-ವೆರಿಫೈ' ಆಯ್ಕೆಯನ್ನು ಆಯ್ಕೆಮಾಡಿ; ನಿಮ್ಮನ್ನು ಐಟಿ 'ಇ-ವೆರಿಫೈ' ಆಯ್ಕೆಯನ್ನು ಆಯ್ಕೆಮಾಡಿ.
ನೆಟ್ ಬ್ಯಾಂಕಿಂಗ್ ಮೂಲಕ ಇವಿಸಿ ಮಾಡುವುದು ಹೇಗೆ ಎಂಬ ಪ್ರಕ್ರಿಯೆಯ ಮುಂದಿನ ಹಂತವೆಂದರೆ ಮೈ ಅಕೌಂಟ್ ಆಯ್ಕೆಯನ್ನು ಆರಿಸಿ ಮತ್ತು ಇ-ಫೈಲಿಂಗ್ ಪೇಜಿನಲ್ಲಿ ಇವಿಸಿ ಅನ್ನು ಜನರೇಟ್ ಮಾಡುವುದು.
ನಿಮ್ಮ ರಿಜಿಸ್ಟರ್ಡ್ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್‌ನಲ್ಲಿ ನೀವು ಇವಿಸಿ ಅನ್ನು ಸ್ವೀಕರಿಸುತ್ತೀರಿ.
ಈ ಇವಿಸಿ ಅನ್ನು ಬಳಸಿಕೊಂಡು ನಿಮ್ಮ ರಿಟರ್ನ್ಸ್ ಅನ್ನು ವೆರಿಫೈ ಮಾಡಿ.
ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್‌ನ ಇ-ವೆರಿಫಿಕೇಶನ್ ಅನ್ನು ಹೇಗೆ ಮಾಡುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ, ಆದರೆ ಇದು ಸರಳ ವಿಧಾನಗಳಲ್ಲಿ ಒಂದಾಗಿದೆ. ಇ-ವೆರಿಫಿಕೇಶನ್ ಅನ್ನು ಹೇಗೆ ಮಾಡಬೇಕೆಂದು ಈಗ ನಿಮಗೆ ತಿಳಿದಿದೆ
ನೆಟ್ ಬ್ಯಾಂಕಿಂಗ್ ಮೂಲಕ ಐಟಿಆರ್ ನ ವೆರಿಫಿಕೇಶನ್ ಮಾಡುವುದು ತಿಳಿಯಿತು. ಎಟಿಎಮ್ ಬಳಸಿಕೊಂಡು ಮಾಡುವ ವೆರಿಫಿಕೇಶನ್ ಬಗ್ಗೆ ತಿಳಿಯಿರಿ.
ಬ್ಯಾಂಕ್ ಎಟಿಎಂ
ನಿಮ್ಮ ಎಟಿಎಂ ಕಾರ್ಡ್ ಅನ್ನು ಮೆಷಿನ್ ಸ್ಲಾಟ್‌ನಲ್ಲಿ ಇನ್ಸರ್ಟ್ ಮಾಡಿ ಮತ್ತು 'ಇ-ಫೈಲಿಂಗ್‌ಗಾಗಿ ಪಿ ಜನರೇಟ್ ಮಾಡಿ' ಅನ್ನು ಆಯ್ಕೆಮಾಡಿ.
ಇವಿಸಿ ಅನ್ನು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ಕಳುಹಿಸಲಾಗುತ್ತದೆ.
ಲಾಗ್ ಇನ್ ಮಾಡಿ ಮತ್ತು 'ಬ್ಯಾಂಕ್ ಎಟಿಎಂ ಬಳಸಿ ಇ-ವೆರಿಫಿಕೇಶನ್' ಆಯ್ಕೆಯನ್ನು ಆಯ್ಕೆಮಾಡಿ.
ನಿಮ್ಮ ಐಟಿಆರ್ ಅನ್ನು ವೆರಿಫೈ ಮಾಡಲು ಸ್ವೀಕರಿಸಿದ ಇವಿಸಿ ಅನ್ನು ನಮೂದಿಸಿ.
ಬ್ಯಾಂಕ್ ಅಕೌಂಟ್ ನಂಬರ್
ಐಟಿಆರ್ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ಕ್ವಿಕ್ ಲಿಂಕ್‌ಗಳ ಟ್ಯಾಬ್ ಅನ್ನು ಆಯ್ಕೆಮಾಡಿ. ಡ್ರಾಪ್-ಡೌನ್‌ನಲ್ಲಿ ಕಾಣುವ 'ಇ-ವೆರಿಫಿಕೇಶನ್' ರಿಟರ್ನ್' ಅನ್ನು ಆಯ್ಕೆಮಾಡಿ.
ಮೌಲ್ಯಮಾಪನ ವರ್ಷ, ಪ್ಯಾನ್, ಸ್ವೀಕೃತಿ ನಂಬರ್ ಮುಂತಾದ ವಿವರಗಳನ್ನು ನಮೂದಿಸಿ ಮತ್ತು 'ಇ-ವೆರಿಫಿಕೇಶನ್' ಅನ್ನು ಕ್ಲಿಕ್ ಮಾಡಿ.
'ಬ್ಯಾಂಕ್ ಅಕೌಂಟ್ ನಂಬರ್‌ನ ಮೂಲಕ ಇವಿಸಿ ಅನ್ನು ಜನರೇಟ್ ಮಾಡಿ' ಆಯ್ಕೆಯನ್ನು ಆಯ್ಕೆಮಾಡಿ.
ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ನೀವು ಪ್ರೀ-ವ್ಯಾಲಿಡೇಟ್ ಮಾಡಬೇಕಾದ ಹೊಸ ಸ್ಕ್ರೀನ್‌ಗೆ ನಿಮ್ಮನ್ನು ಡೈರೆಕ್ಟ್ ಮಾಡಲಾಗುತ್ತದೆ.
ನಿಮ್ಮ ಬ್ಯಾಂಕಿನ ಹೆಸರನ್ನು ಆಯ್ಕೆಮಾಡಿ, ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನೊಂದಿಗೆ ಐ.ಎಫ್.ಎಸ್.ಸಿ ಕೋಡ್ ಅನ್ನು ನಮೂದಿಸಿ. ಪ್ರೀ ವ್ಯಾಲಿಡೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನೀವು ಪ್ರೀ-ವ್ಯಾಲಿಡೇಟ್ ಅನ್ನು ಪೂರ್ಣಗೊಳಿಸಿದ ನಂತರ, ಮುಂದಿನ ಸ್ಕ್ರೀನ್‌ನಲ್ಲಿ ಕಾಣುವ 'ಹೌದು' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ನೀವು ಇವಿಸಿ ಅನ್ನು ಸ್ವೀಕರಿಸುತ್ತೀರಿ.
ನಿಮ್ಮ ವೆರಿಫಿಕೇಶನ್' ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ಸ್ವೀಕರಿಸಿದ ಇವಿಸಿ ಅನ್ನು ನಮೂದಿಸಿ
ಡಿಮ್ಯಾಟ್ ಅಕೌಂಟ್
ಐಟಿ ಇ-ಫೈಲಿಂಗ್ ಅಕೌಂಟ್‌ಗೆ ಲಾಗ್ ಇನ್ ಮಾಡಿ.
'ಪ್ರೊಫೈಲ್ ಸೆಟ್ಟಿಂಗ್' ಬಟನ್ ಅನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಡಿಮ್ಯಾಟ್ ಅಕೌಂಟ್ ಅನ್ನು'ಪ್ರಿ-ವ್ಯಾಲಿಡೇಟ್ ಮಾಡಿ' ಆಯ್ಕೆಯನ್ನು ಆಯ್ಕೆ ಮಾಡಲು ಮುಂದುವರಿಯಿರಿ.
ಡಿಪಿ ಐಡಿ, ಕ್ಲೈಂಟ್ ಐಡಿ, ಡಿಪಾಸಿಟರಿ ವಿಧ (ಎನ್‌ಎಸ್‌ಡಿಎಲ್/ಸಿಡಿಎಸ್‌ಎಲ್), ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯಂತಹ ವಿವರಗಳನ್ನು ಭರ್ತಿ ಮಾಡಿ.
'ಪ್ರೀ-ವ್ಯಾಲಿಡೇಟ್' ಬಟನ್ ಮೇಲೆ ಕ್ಲಿಕ್ ಮಾಡಿ.
'ಹೌದು' ಆಯ್ಕೆಯನ್ನು ಆಯ್ಕೆಮಾಡಿ ಮತ್ತು ನಿಮ್ಮ ರಿಜಿಸ್ಟರ್ಡ್ ಫೋನ್ ನಂಬರ್ ಇವಿಸಿ ಅನ್ನು ಸ್ವೀಕರಿಸುತ್ತದೆ.
ನಿಮ್ಮ ಇನ್ಕಮ್ ಅನ್ನು ವೆರಿಫೈ ಮಾಡಲು ಸ್ವೀಕರಿಸಿದ ಇವಿಸಿ ಅನ್ನು ಬಳಸಿ.
ಆಧಾರ್ ಕಾರ್ಡ್
ಆಧಾರ್ ನಂಬರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಿ.
ಐಟಿಆರ್ ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು 'ಆಧಾರ್ ಒಟಿಪಿ ಅನ್ನು ಬಳಸಿಕೊಂಡು ಇ-ವೆರಿಫೈ ಮಾಡಿ' ಆಯ್ಕೆಯನ್ನು ಆಯ್ಕೆಮಾಡಿ.
ಆಧಾರ್ ನಂಬರ್‌ಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್‌ನಲ್ಲಿ ನೀವು ಒಟಿಪಿ ಅನ್ನು ಸ್ವೀಕರಿಸುತ್ತೀರಿ.
ಇ-ವೆರಿಫಿಕೇಶನ್‌ಗಾಗಿ ಸ್ವೀಕರಿಸಿದ ಒಟಿಪಿ ಅನ್ನು ನಮೂದಿಸಿ. ಒಟಿಪಿ ವ್ಯಾಲಿಡಿಟಿ 10 ನಿಮಿಷಗಳಾಗಿರುವುದರಿಂದ, ಈ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಬೇಕು.
ನಿಮ್ಮ ಇ-ವೆರಿಫಿಕೇಶನ್ ಪೂರ್ಣಗೊಂಡಿದೆ; ನಿಮ್ಮ ರೆಕಾರ್ಡುಗಳಿಗಾಗಿ ನೀವು ಅಟ್ಯಾಚ್‌ಮೆಂಟ್ ಅನ್ನು ಡೌನ್‌ಲೋಡ್ ಮಾಡಬಹುದು.
ನಿಮ್ಮ ಐಟಿಆರ್ (ITR) ಅನ್ನು ಏಕೆ ವೆರಿಫೈ ಮಾಡಬೇಕು?
ಇನ್ಕಮ್ ಟ್ಯಾಕ್ಸ್ ಇ-ವೆರಿಫಿಕೇಶನ್ ಅನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿತ ನಂತರ, ನೀವದನ್ನು ಏಕೆ ಫೈಲ್ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹ ಅಷ್ಟೇ ಬಹಳ ಮುಖ್ಯ. ನಿಮ್ಮ ಐಟಿಆರ್ ಅನ್ನು ವೆರಿಫೈ ಮಾಡುವುದು, ಅದನ್ನು ಭರ್ತಿ ಮಾಡುವಷ್ಟೇ ಅವಶ್ಯಕವಾಗಿದೆ. ಸರಿಯಾದ ವೆರಿಫಿಕೇಶನ್ ಇಲ್ಲದೆ, ನಿಮ್ಮ ಐಟಿಆರ್ ಗುರುತಿಸಲ್ಪಡುವುದಿಲ್ಲ. ಇದರರ್ಥ ನೀವು ಸಮಯಕ್ಕೆ ಸರಿಯಾಗಿ ಫೈಲ್ ಮಾಡಿದ್ದರೂ ಸಹ, ನಿಮ್ಮ ಐಟಿಆರ್ ಅನ್ನು ನೀವು ಮತ್ತೆ ಫೈಲ್ ಮಾಡಬೇಕಾಗುತ್ತದೆ.
ಇ-ವೆರಿಫಿಕೇಶನ್ ವಿಧಾನಗಳೊಂದಿಗೆ, ಈಗ ನೀವು ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಬೇಕಾಗಿಲ್ಲ, ಸಹಿ ಮಾಡಬೇಕಾಗಿಲ್ಲ ಮತ್ತು ಸಿಪಿಸಿ ಅನ್ನು ಬೆಂಗಳೂರಿಗೆ ಪೋಸ್ಟ್ ಮಾಡಬೇಕಾಗಿಲ್ಲ, ಇದು ನಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ತೊಂದರೆ-ಮುಕ್ತವಾಗಿ ಮತ್ತು ಸುಲಭವಾಗಿ ಕೆಲಸ ಮಾಡುತ್ತದೆ.
ಇ-ವೆರಿಫಿಕೇಶನ್ ಹಲವಾರು ವಿಧಾನಗಳೊಂದಿಗೆ, ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ನಮ್ಮ ಟ್ಯಾಕ್ಸ್‌ಗಳನ್ನು ಪಾವತಿಸಲು ಮತ್ತು ಅವುಗಳನ್ನು ಸುಲಭವಾಗಿ ವೆರಿಫೈ ಮಾಡಲು ನಮಗೆ ಸುಲಭಗೊಳಿಸಿದೆ. ಆದಾಗ್ಯೂ, ಈಗ ನಾವು ನಮ್ಮ ರಾಷ್ಟ್ರೀಯ ಅಭಿವೃದ್ಧಿಯನ್ನು ಕಾಪಾಡಿಕೊಳ್ಳಲು ಸರಿಯಾದ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು.
ಪದೇ ಪದೇ ಕೇಳಲಾದ ಪ್ರಶ್ನೆಗಳು
ನನ್ನ ಐಟಿಆರ್ (ITR) ಅನ್ನು ವೆರಿಫೈ ಮಾಡಲಾಗಿದೆಯೇ ಎಂಬುದನ್ನು ನಾನು ಹೇಗೆ ವೆರಿಫೈ ಮಾಡಲಿ?
ನೀವು ಇ-ವೆರಿಫೈ ಮಾಡಿದ್ದರೆ ನಿಮ್ಮ ಪ್ಯಾನ್, ಸ್ವೀಕೃತಿ ನಂಬರ್ ಮತ್ತು ಡಿಸ್‌ಪ್ಲೇ ಮಾಡಲಾದ ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ಆಫೀಷಿಯಲ್ ವೆಬ್‌ಸೈಟ್‌ನಿಂದ ನಿಮ್ಮ ವೆರಿಫಿಕೇಶನ್ ಸ್ಟೇಟಸ್ ಅನ್ನು ನೀವು ವೆರಿಫೈ ಮಾಡಬಹುದು. ನೀವು ಐಟಿಆರ್-V ಅನ್ನು ಪೋಸ್ಟ್ ಮೂಲಕ ಕಳುಹಿಸಿದ್ದರೆ, ನಿಮ್ಮ ರಿಜಿಸ್ಟರ್ಡ್ ಇಮೇಲ್‌ನಲ್ಲಿ ನೀವು ಸ್ವೀಕೃತಿಯನ್ನು ಸ್ವೀಕರಿಸುತ್ತೀರಿ.
ನನ್ನ ಐಟಿಆರ್ (ITR) ಅನ್ನು 30 ದಿನಗಳಲ್ಲಿ ವೆರಿಫೈ ಮಾಡಲು ವಿಫಲನಾದರೆ ಏನಾಗುತ್ತದೆ?
ನಿಮ್ಮ ಐಟಿಆರ್ ಅನ್ನು ನೀವು ವೆರಿಫೈ ಮಾಡದಿದ್ದರೆ, ಅದು ಇನ್‌ವ್ಯಾಲಿಡ್ ಆಗುತ್ತದೆ. ಇದರರ್ಥ ಐಟಿ ಡಿಪಾರ್ಟ್‌ಮೆಂಟ್‌ನ ದೃಷ್ಟಿಯಲ್ಲಿ, ನೀವು ನಿರ್ದಿಷ್ಟ ಮೌಲ್ಯಮಾಪನ ವರ್ಷಕ್ಕಾಗಿ ಫೈಲ್ ಮಾಡಿರುವುದಿಲ್ಲ ಹಾಗಾಗಿ ಪೆನಲ್ಟಿಯನ್ನು ಭರಿಸಬೇಕಾಗುತ್ತದೆ.
ಐಟಿಆರ್( ITR)-V ರಿಜೆಕ್ಟ್ ಆದರೆ ಏನು ಮಾಡಬೇಕು?
ರಿಜೆಕ್ಟ್ ಮಾಡಲು ಏನು ಕಾರಣ ಎಂಬುದನ್ನು ಮೊದಲು ಕಂಡುಹಿಡಿಯಿರಿ; ನಂತರ, ನೀವು ರಿವೈಸ್ಡ್ ರಿಟರ್ನ್ ಅನ್ನು ಫೈಲ್ ಮಾಡಬಹುದು ಮತ್ತು ನಿಮ್ಮ ಮೂಲ ಟ್ಯಾಕ್ಸ್‌ಗಳನ್ನು ಫೈಲ್ ಮಾಡಿದ 30 ದಿನಗಳಲ್ಲಿ ಅದನ್ನು ವೆರಿಫೈ ಮಾಡಬಹುದು.