ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡುವುದು ಹೇಗೆ
ಟ್ಯಾಕ್ಸ್ ಫೈಲಿಂಗ್ ವರ್ಷಕ್ಕೊಮ್ಮೆ ಮಾಡುವ ವಿಷಯ, ಆದರೂ ಅದೊಂದು ತೊಂದರೆ ಆಗಬಹುದು. ನಿಮ್ಮ ಕ್ಲೈಮ್ ಫೈಲ್ ಮಾಡಿದ ಸಾಕಷ್ಟು ಸಮಯದ ನಂತರವೂ ನಿಮ್ಮ ರಿಫಂಡ್ ಅನ್ನು ನೀವು ಸ್ವೀಕರಿಸದೇ ಇದ್ದರೆ ನಿಮ್ಮ ಆತಂಕ ಹೆಚ್ಚಬಹುದು. ಅಂಥಾ ಸಂದರ್ಭಗಳಲ್ಲಿ, ಉತ್ತಮ ಸ್ಪಷ್ಟತೆಗಾಗಿ ನಿಮ್ಮ ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅನ್ನು ಚೆಕ್ ಮಾಡಬಯಸಬಹುದು, ಅಲ್ಲವೇ?
ಆದಾಗ್ಯೂ, ನಿಮ್ಮ ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿಲ್ಲದಿದ್ದರೆ ಸ್ವಲ್ಪ ಕಷ್ಟವಾಗಬಹುದು. ಇದರ ಕಾರಣಕ್ಕೆ ನಿಮಗೆ ಸಹಾಯ ಮಾಡಲು, ನಾವು ಪ್ರೊಸೆಸ್‌ನ ವಿವರವಾದ ವಿವರಣೆಯನ್ನು ಒದಗಿಸಿದ್ದೇವೆ ಮತ್ತು ವಿವಿಧ ರಿಫಂಡ್ ಸ್ಟೇಟಸ್ ಅರ್ಥಗಳ ಗೈಡ್ ಅನ್ನು ಸಹ ಒದಗಿಸಿದ್ದೇವೆ. ಅವುಗಳನ್ನು ಚೆಕ್ ಮಾಡಿ!
ನೀವು ಆನ್‌ಲೈನ್‌ನಲ್ಲಿ ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ:ಹಂತ-ಹಂತವಾದ ಪ್ರೊಸೆಸ್
ಒಮ್ಮೆ ನೀವು ನಿಮ್ಮ ಕ್ಲೈಮ್ ಫೈಲ್ ಮಾಡಿದ ನಂತರ, ನೀವು ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅನ್ನು ಚೆಕ್ ಮಾಡುವುದು ಅವಶ್ಯ. ನಿಮ್ಮ ರಿಫಂಡ್ ಟ್ರಾನ್ಸ್‌ಫರ್ ಪ್ರಗತಿಯನ್ನು ತಿಳಿಯಲು ಇದು ಏಕೈಕ ಮಾರ್ಗವಾಗಿದೆ. ಈಗ, ಈ ಪ್ರೊಸೆಸ್‌ನೊಂದಿಗೆ ಮುಂದುವರಿಯಲು 2 ಮಾರ್ಗಗಳಿವೆ. ನೀವು ಎನ್‌ಎಸ್‌ಡಿಎಲ್ ಪೋರ್ಟಲ್ ಮತ್ತು ಇನ್‌ಕಮ್ ಟ್ಯಾಕ್ಸ್ ಇ-ಫೈಲಿಂಗ್ ವೆಬ್‌ಸೈಟ್ ಮೂಲಕ ರಿಫಂಡ್ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.
ಪ್ರತಿಯೊಂದು ಪ್ರೊಸೆಸ್‌ಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತುಹಂತ-ಹಂತವಾದ ಗೈಡ್ ಇಲ್ಲಿದೆ.
1. ಎನ್‌ಎಸ್‌ಡಿಎಲ್ ವೆಬ್‌ಸೈಟ್ ಮೂಲಕ
ಎನ್‌ಎಸ್‌ಡಿಎಲ್‌ನಲ್ಲಿ ನಿಮ್ಮ ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅನ್ನು ಚೆಕ್ ಮಾಡಲು ಇಲ್ಲಿ ನೀಡಿರುವ ಹಂತಗಳನ್ನು ಅನುಸರಿಸಿ.
ಹಂತ 1: ರಿಫಂಡ್ ಟ್ರ್ಯಾಕಿಂಗ್‌ಗಾಗಿ ಟಿಐನ್ ಎನ್‌ಎಸ್‌ಡಿಎಲ್ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ನಿಮ್ಮ ಪ್ಯಾನ್ ನಮೂದಿಸಲು ಕೆಳಗೆ ಸ್ಕ್ರೋಲ್ ಮಾಡಿ ಮತ್ತು ಅಸೆಸ್‌ಮೆಂಟ್ ವರ್ಷವನ್ನು ಆಯ್ಕೆ ಮಾಡಿ. ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು "ಪ್ರೊಸೀಡ್" ಮೇಲೆ ಕ್ಲಿಕ್ ಮಾಡಿ.
ಹಂತ 3: ಮುಂದೆ, ಎನ್‌ಎಸ್‌ಡಿಎಲ್‌ನಲ್ಲಿ ನಿಮ್ಮ ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅನ್ನು ಅವಲಂಬಿಸಿ ಸಂದೇಶವನ್ನು ಪ್ರದರ್ಶಿಸುವ ಪೇಜಿಗೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.
2. ಇನ್‌ಕಮ್ ಟ್ಯಾಕ್ಸ್ ಇ-ಫೈಲಿಂಗ್ ವೆಬ್‌ಸೈಟ್ ಮೂಲಕ
ಪರ್ಯಾಯವಾಗಿ, ಇನ್‌ಕಮ್ ಟ್ಯಾಕ್ಸ್ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ನಿಮ್ಮ ಐಟಿಆರ್ ಸ್ಟೇಟಸ್ ಅನ್ನು ಪರಿಶೀಲಿಸಲು ನೀವು ಈ ಕೆಳಗಿನ ಹಂತಗಳನ್ನು ಬಳಸಬಹುದು.
ಹಂತ 1: ಅಧಿಕೃತ ಇನ್‌ಕಮ್ ಟ್ಯಾಕ್ಸ್ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಿ.
ಹಂತ 2: ಮೇಲಿನ ಬಲ ಮೂಲೆಯಲ್ಲಿ, ನಿಮ್ಮ ಖಾತೆಗೆ ಸೈನ್ ಇನ್ ಮಾಡಲು "ಲಾಗಿನ್ ಹಿಯರ್" ಮೇಲೆ ಕ್ಲಿಕ್ ಮಾಡಿ.
ಹಂತ 3: ಮುಂದಿನ ಪೇಜಿನಲ್ಲಿ, ನಿಮ್ಮ ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ನೀಡಿರುವ ಭದ್ರತಾ ಕೋಡ್ ಅನ್ನು ನಮೂದಿಸಿ. "ಲಾಗಿನ್" ಮೇಲೆ ಕ್ಲಿಕ್ ಮಾಡಿ.
ಹಂತ 4: ಮುಂದೆ, "ವಿವ್ಯೂ ರಿಟರ್ನ್ಸ್/ಫಾರ್ಮ್ಸ್" ಆಯ್ಕೆಮಾಡಿ.
ಹಂತ 5: ನಿಮ್ಮ ಪ್ಯಾನ್ ಅನ್ನು ನಮೂದಿಸಿ, ಡ್ರಾಪ್-ಡೌನ್ ಮೆನುವಿನಿಂದ "ಸೆಲೆಕ್ಟ್ ಆ್ಯನ್ ಆಪ್ಷನ್" ಪಕ್ಕದಲ್ಲಿರುವ "ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್" ಮತ್ತು ಸರಿಯಾದ ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ. ಇದೀಗ, ನೀವು 2022-23ರ ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅನ್ನು ಪರಿಶೀಲಿಸುತ್ತಿದ್ದೀರಿ. "ಸಬ್‌ಮಿಟ್" ಒತ್ತಿರಿ.
ಹಂತ 6: ನಿಮ್ಮ ಐಟಿಆರ್ ಫೈಲಿಂಗ್‌ನ ಎಲ್ಲಾ ವಿವರಗಳನ್ನು ಪ್ರದರ್ಶಿಸುವ ಹೊಸ ವೆಬ್‌ಪೇಜಿಗೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ. ಇವುಗಳಲ್ಲಿ ಫಾರ್ಮ್ ವಿಧ, ಫೈಲಿಂಗ್ ವಿಧ, ಸ್ವೀಕೃತಿ ಸಂಖ್ಯೆ ಮತ್ತು ಐಟಿಆರ್ ಫೈಲಿಂಗ್‌ನಿಂದ ಐಟಿಆರ್ ಪ್ರೊಸೆಸ್ ಪೂರ್ಣಗೊಳ್ಳುವವರೆಗಿನ ಪ್ರತಿಯೊಂದು ಚಟುವಟಿಕೆಯ ದಿನಾಂಕಗಳು ಸೇರಿವೆ. ಇನ್‌ಕಮ್ ಟ್ಯಾಕ್ಸ್ ಪೋರ್ಟಲ್‌ನಲ್ಲಿ ರಿಫಂಡ್ ಸ್ಟೇಟಸ್, ಪೇಮೆಂಟ್ ಮೋಡ್ ಮತ್ತು ರಿಫಂಡ್ ವಿಫಲತೆಯ ಕಾರಣ ಯಾವುದಾದರೂ ಇದ್ದರೆ ನೀವು ನೋಡಲು ಸಾಧ್ಯವಾಗುತ್ತದೆ.
ಈಗ, ಅಲ್ಲಿ ವಿವಿಧ ಎನ್‌ಎಸ್‌ಡಿಎಲ್ ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಸಂದೇಶಗಳು ಇರಬಹುದು. ಪ್ರತಿ ಸ್ಟೇಟ್ ಮೆಂಟ್ ನಿಖರವಾದ ಅರ್ಥವನ್ನು ಅವರು ತಿಳಿದಿಲ್ಲದಿದ್ದರೆ ಬಹಳಷ್ಟು ವ್ಯಕ್ತಿಗಳು ತಮ್ಮ ರಿಫಂಡ್ ಪ್ರಗತಿಯನ್ನು ಅರ್ಥಮಾಡಿಕೊಳ್ಳುವಾಗ ಸಾಕಷ್ಟು ಗೊಂದಲಕ್ಕೆ ಒಳಗಾಗಬಹುದು.
ವಿವಿಧ ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್‌ಗಳ ಅರ್ಥವೇನು?
ನೀವು ಕಾಣಬಹುದಾದ ಪ್ರತಿಯೊಂದು ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಮತ್ತು ಅವುಗಳ ಅರ್ಥಗಳನ್ನು ಒಳಗೊಂಡಿರುವ ಪಟ್ಟಿ ಇಲ್ಲಿದೆ.
- ಡಿಮ್ಯಾಂಡ್ ಇಲ್ಲ, ರಿಫಂಡ್ ಇಲ್ಲ: ಇದರರ್ಥ ಐಟಿ ಇಲಾಖೆಯು ಸರಿಯಾದ ಪ್ರಮಾಣದ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡಿದೆ ಮತ್ತು ನಿಮಗೆ ಯಾವುದೇ ರಿಫಂಡ್ ಅನ್ನು ನೀಡಬೇಕಾಗಿಲ್ಲ.
- ರಿಫಂಡ್ ಪಾವತಿಸಲಾಗಿದೆ: ನಿಮ್ಮ ಐಟಿಆರ್ ಫೈಲಿಂಗ್ ಅನ್ನು ಪ್ರೊಸೆಸ್ ಮಾಡಲಾಗಿದೆ ಮತ್ತು ರಿಫಂಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಡೆಪಾಸಿಟ್ ಮಾಡಲಾಗಿದೆ.
- ರಿಫಂಡ್ ಸ್ಟೇಟಸ್ ಅನ್ನು ನಿರ್ಧರಿಸಲಾಗಿಲ್ಲ: ಇನ್‌ಕಮ್ ಟ್ಯಾಕ್ಸ್ ಇಲಾಖೆಯು ನಿಮ್ಮ ರಿಫಂಡ್ ವಿನಂತಿಯನ್ನು ಪ್ರೊಸೆಸ್ ಮಾಡಿಲ್ಲ.
- ರಿಫಂಡ್ ಪಾವತಿಸಲಾಗಿಲ್ಲ: ನಿಮ್ಮ ಐಟಿಆರ್ ಅನ್ನು ಪ್ರೊಸೆಸ್ ಮಾಡಲಾಗಿದೆ ಆದರೆ ನಿಮ್ಮ ರಿಫಂಡ್‌ಗೆ ಇನ್ನೂ ಕ್ರೆಡಿಟ್ ಆಗಿಲ್ಲ.
- ರಿಫಂಡ್ ಹಿಂತಿರುಗಿಸಲಾಗಿದೆ: ಇದರರ್ಥ ಐಟಿ ಇಲಾಖೆಯು ಪಾವತಿಯನ್ನು ಪ್ರಾರಂಭಿಸಿದೆ, ಆದರೆ ತಪ್ಪಾದ ಬ್ಯಾಂಕ್ ಅಕೌಂಟ್ ವಿವರಗಳು ಅಥವಾ ವಿಳಾಸದ ವಿವರಗಳನ್ನು ಒದಗಿಸಿದ ಕಾರಣ ಟ್ರಾನ್ಸ್‌ಫರ್ ವಿಫಲವಾಗಿದೆ.
- ರಿಫಂಡ್ ಅನ್ನು ಕಳುಹಿಸಲಾಗಿದೆ ಮತ್ತು ರಿಫಂಡ್ ಬ್ಯಾಂಕರ್ ನಿರ್ಧರಿಸಿದ್ದಾರೆ: ನಿಮ್ಮ ಐಟಿಆರ್ ಅನ್ನು ಪ್ರೊಸೆಸ್ ಮಾಡಲಾಗಿದೆ ಮತ್ತು ಅಮೌಂಟ್ ಟ್ರಾನ್ಸ್‌ಫರ್‌ಗಾಗಿ ರಿಫಂಡ್ ಬ್ಯಾಂಕರ್‌ಗೆ ಕಳುಹಿಸಲಾಗಿದೆ.
- ನೇರ ಕ್ರೆಡಿಟ್ ಮೂಲಕ ಪ್ರೊಸೆಸ್ ಮಾಡಲಾಗಿದೆ ಆದರೆ ವಿಫಲವಾಗಿದೆ: ರಿಫಂಡ್ ಅಮೌಂಟ್‌ನ ನೇರ ಕ್ರೆಡಿಟ್ ಅನ್ನು ಪ್ರಾರಂಭಿಸಲಾಗಿದೆ, ಆದರೆ ಕೆಳಗಿನ ಕಾರಣಗಳಲ್ಲಿ ಒಂದರಿಂದಾಗಿ ಟ್ರಾನ್ಸ್‌ಫರ್ ವಿಫಲವಾಗಿದೆ.
- ತಪ್ಪಾದ ಅಕೌಂಟ್ ವಿವರಗಳು.
- ಇದು ಪಿಪಿಎಫ್, ಎಫ್‌ಡಿ, ಅಥವಾ ಲೋನ್ ಅಕೌಂಟ್.
- ಅಕೌಂಟ್ ಹೋಲ್ಡರ್ ತೀರಿಕೊಂಡಿದ್ದಾರೆ.
- ಖಾತೆಯು ಕಾರ್ಯನಿರ್ವಹಿಸುತ್ತಿಲ್ಲ.
- ಇದು ಎನ್‌ಆರ್‌ಐ ಅಕೌಂಟ್.
- ಖಾತೆಯನ್ನು ಶಾಶ್ವತವಾಗಿ ಮುಚ್ಚಲಾಗಿದೆ.
- NEFT/NECS ಮೂಲಕ ರಿಫಂಡ್ ಅನ್ನು ಪ್ರೊಸೆಸ್ ಮಾಡಲಾಗಿದೆ ಆದರೆ ವಿಫಲವಾಗಿದೆ: ಈ ಸ್ಟೇಟಸ್ ಅದರ ಬಗ್ಗೆಯೇ ಹೇಳುತ್ತಿದೆ.
- ಡಿಮ್ಯಾಂಡ್ ಅನ್ನು ನಿರ್ಧರಿಸಲಾಗಿದೆ: ನಿಮ್ಮ ರಿಫಂಡ್ ಕ್ಲೈಮ್ ಅನ್ನು ನೀವು ಇನ್ನೂ ಪಾವತಿಸಬೇಕಿರುವ ಟ್ಯಾಕ್ಸ್‌ಗಳನ್ನು ಬಾಕಿ ಇಟ್ಟಿರುವ ಕಾರಣ ತಿರಸ್ಕರಿಸಲಾಗಿದೆ.
- ಹಿಂದಿನ ವರ್ಷದ ಬಾಕಿ ಉಳಿದಿರುವ ಡಿಮ್ಯಾಂಡ್ ಗೆ ಅನುಗುಣವಾಗಿ ಹೊಂದಿಸಲಾಗಿದೆ: ಐಟಿ ಇಲಾಖೆಯು ನಿಮ್ಮ ರಿಫಂಡ್ ಅನ್ನು ಹಿಂದಿನ ಮೌಲ್ಯಮಾಪನ ವರ್ಷದ ಬಾಕಿ ಡಿಮ್ಯಾಂಡ್ ಗೆ ವಿರುದ್ಧವಾಗಿ ಪ್ರಸ್ತುತ ಮೌಲ್ಯಮಾಪನ ವರ್ಷಕ್ಕೆ ಸರಿಹೊಂದಿಸಿದೆ.
- ಅವಧಿ ಮೀರಿದೆ: ನೀವು ಐಟಿ ಇಲಾಖೆಯಿಂದ ರಿಫಂಡ್ ಚೆಕ್ ಅನ್ನು ಸ್ವೀಕರಿಸಿದ್ದೀರಿ ಆದರೆ 90 ದಿನಗಳ ಒಳಗೆ ಅದನ್ನು ಬ್ಯಾಂಕ್‌ಗೆ ಸಲ್ಲಿಸಿಲ್ಲ.
ಪ್ರತಿಯೊಂದು ಸ್ಟೇಟಸ್‌ನ ಅರ್ಥವೇನೆಂದು ಈಗ ನಿಮಗೆ ತಿಳಿದಿದೆ, ಯಾವುದೇ ಸಮಸ್ಯಾತ್ಮಕ ಎನ್‌ಎಸ್‌ಡಿಎಲ್ ರಿಫಂಡ್ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿ ಹೇಗೆ ಪರಿಹರಿಸಬೇಕೆಂದು ನೀವು ತಿಳಿದಿರಬೇಕು.
ಪ್ರತಿ ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ವಿರುದ್ಧ ಯಾವ ಕ್ರಮಗಳು ಅಗತ್ಯವಿದೆ?
- ಡಿಮ್ಯಾಂಡ್ ಇಲ್ಲ, ರಿಫಂಡ್ ಇಲ್ಲ: ನಿಮ್ಮ ಟ್ಯಾಕ್ಸ್ ಕ್ಯಾಲ್ಕುಲೇಷನ್ ಅನ್ನು ಕ್ರಾಸ್-ಚೆಕ್ ಮಾಡಿ ಮತ್ತು ನೀವು ತಪ್ಪಿಸಿಕೊಂಡಿರಬಹುದಾದ ಯಾವುದೇ ಡಿಡಕ್ಷನ್‌ಗಳನ್ನು ನೋಡಿ. ನಿಮ್ಮ ಕಡೆಯಿಂದ ತಪ್ಪಾಗಿದ್ದರೆ, ಸರಿಪಡಿಸಿದ ರಿಟರ್ನ್ ಅನ್ನು ಫೈಲ್ ಮಾಡಿ.
- ರಿಫಂಡ್ ಪಾವತಿಸಲಾಗಿದೆ: ರಿಫಂಡ್ ಅನ್ನು ಡೆಪಾಸಿಟ್ ಮಾಡಲಾಗಿದೆ ಎಂಬುದನ್ನು ನಿಮ್ಮ ಬ್ಯಾಂಕ್‌ನೊಂದಿಗೆ ದೃಢೀಕರಿಸಿ.
- ರಿಫಂಡ್ ಸ್ಟೇಟಸ್ ಅನ್ನು ನಿರ್ಧರಿಸಲಾಗಿಲ್ಲ: ನಿಮ್ಮ ಐಟಿಆರ್ ಅನ್ನು ಸರಿಯಾಗಿ ಫೈಲ್ ಮಾಡಲಾಗಿದೆಯೇ ಎಂದು ಮರುಪರಿಶೀಲಿಸಿ. ಹೌದು ಎಂದಾದರೆ, ಕೆಲವು ದಿನಗಳ ನಂತರ ರಿಫಂಡ್ ಸ್ಟೇಟಸ್ ಅನ್ನು ಮತ್ತೊಮ್ಮೆ ಪರಿಶೀಲಿಸಿ.
- ರಿಫಂಡ್ ಪಾವತಿಸಲಾಗಿಲ್ಲ: ನೀವು ಸರಿಯಾದ ವಿಳಾಸ ಮತ್ತು ಬ್ಯಾಂಕ್ ಅಕೌಂಟ್ ವಿವರಗಳನ್ನು ನಮೂದಿಸಿದ್ದೀರಾ ಎಂದು ಪರಿಶೀಲಿಸಿ. ಇಲ್ಲದಿದ್ದರೆ, ಈ ವಿವರಗಳನ್ನು ಸರಿಪಡಿಸಿ ಮತ್ತು ರಿಫಂಡ್ ರೀ-ಇಶ್ಯೂ ವಿನಂತಿಯನ್ನು ಇರಿಸಿ.
- ರಿಫಂಡ್ ಹಿಂತಿರುಗಿಸಲಾಗಿದೆ: ಮತ್ತೊಮ್ಮೆ, ನೀವು ಒದಗಿಸಿದ ಬ್ಯಾಂಕ್ ಅಕೌಂಟ್ ಮತ್ತು ವಿಳಾಸ ವಿವರಗಳನ್ನು ಪರಿಶೀಲಿಸಿ. ಅಗತ್ಯವಿದ್ದರೆ ಸರಿಪಡಿಸಿ ಮತ್ತು ರಿಫಂಡ್ ರೀ-ಇಶ್ಯೂಗೆ ಅರ್ಜಿ ಸಲ್ಲಿಸಿ.
- ರಿಫಂಡ್ ಅನ್ನು ಕಳುಹಿಸಲಾಗಿದೆ ಮತ್ತು ರಿಫಂಡ್ ಬ್ಯಾಂಕರ್ ನಿರ್ಧರಿಸಿದ್ದಾರೆ: ನಿಮ್ಮ ರಿಫಂಡ್ ಅನ್ನು ಬಹುಶಃ ಕೆಲವೇ ಸಮಯದೊಳಗೆ ನಿಮ್ಮ ಅಕೌಂಟ್‌ಗೆ ಜಮಾ ಮಾಡಲಾಗುತ್ತದೆ. ನೀವು ಈಗ ಮಾಡಬೇಕಾಗಿರುವುದೇನೆಂದರೆ, ಕಾಯುವುದು.
- ನೇರ ಕ್ರೆಡಿಟ್ ಮೂಲಕ ಪ್ರೊಸೆಸ್ ಮಾಡಲಾಗಿದೆ ಆದರೆ ವಿಫಲವಾಗಿದೆ: ನೀವು ಒದಗಿಸಿದ ಖಾತೆಯ ವಿವರಗಳನ್ನು ಪರಿಶೀಲಿಸಿ, ಅವುಗಳನ್ನು ಸರಿಪಡಿಸಿ ಮತ್ತು ರಿಫಂಡ್ ರೀ-ಇಶ್ಯೂಗಾಗಿ ವಿನಂತಿಸಿ.
- NEFT/NECS ಮೂಲಕ ರಿಫಂಡ್ ಅನ್ನು ಪ್ರೊಸೆಸ್ ಮಾಡಲಾಗಿದೆ ಆದರೆ ವಿಫಲವಾಗಿದೆ: ನೀವು ಒದಗಿಸಿದ ಖಾತೆಯ ವಿವರಣೆ, ಅಕೌಂಟ್ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಅಥವಾ ಎಂಐಸಿಆರ್ ಕೋಡ್ ಅನ್ನು ಪರಿಶೀಲಿಸಿ.
- ಡಿಮ್ಯಾಂಡ್ ಅನ್ನು ನಿರ್ಧರಿಸಲಾಗಿದೆ: ನಿಮ್ಮ ಟ್ಯಾಕ್ಸ್ ಕ್ಯಾಲ್ಕುಲೇಷನ್ ಮತ್ತು ಇ-ಫೈಲಿಂಗ್ ದಾಖಲೆಯನ್ನು ಕ್ರಾಸ್-ಚೆಕ್ ಮಾಡಿ. ಟ್ಯಾಕ್ಸ್ ಅನ್ನು ಪಾವತಿಸಬೇಕಾದರೆ, ಒದಗಿಸಿದ ಗಡುವಿನೊಳಗೆ ಪೇಮೆಂಟ್ ಪೂರ್ಣಗೊಳಿಸಿ. ನಿಮ್ಮ ಕ್ಯಾಲ್ಕುಲೇಷನ್‌ನಲ್ಲಿ ಯಾವುದೇ ದೋಷವಿಲ್ಲದಿದ್ದರೆ, ಸರಿಪಡಿಸಲು ಅಪ್ಲೈ ಮಾಡಿ ಮತ್ತು ನಿಮ್ಮ ರಿಫಂಡ್ ಕ್ಲೈಮ್ ಅನ್ನು ಬೆಂಬಲಿಸಲು ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳು ಮತ್ತು ಡೇಟಾವನ್ನು ಒದಗಿಸಿ.
- ಹಿಂದಿನ ವರ್ಷದ ಬಾಕಿ ಉಳಿದಿರುವ ಡಿಮ್ಯಾಂಡ್ ಗೆ ಅನುಗುಣವಾಗಿ ಹೊಂದಿಸಲಾಗಿದೆ: ಈ ಕಾರ್ಯಾಚರಣೆಯನ್ನು ಕೈಗೊಳ್ಳಲು ಐಟಿ ಇಲಾಖೆಗೆ ಸೆಕ್ಷನ್ 245 ಅನುಮತಿ ನೀಡುವುದರಿಂದ ನಿಮ್ಮ ಕಡೆಯಿಂದ ಅಂತಹ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗುವುದಿಲ್ಲ.
- ಅವಧಿ ಮೀರಿದೆ: ಇನ್‌ಕಮ್ ಟ್ಯಾಕ್ಸ್ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ರಿಫಂಡ್ ರೀ-ಇಶ್ಯೂ ವಿನಂತಿಗೆ ಅಪ್ಲೈ ಮಾಡಿ.
ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅರ್ಥಗಳ ಕುರಿತು ನಮ್ಮ ಗೈಡ್ ನಿಮ್ಮ ಇಕ್ಕಟ್ಟುಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದೆ ಎಂದು ನಾವು ಭಾವಿಸುತ್ತೇವೆ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಒಂದು ವೇಳೆ ನನ್ನ ರಿಫಂಡ್ ಸ್ಟೇಟಸ್ "ಪಾವತಿಸಲಾಗಿದೆ" ಮತ್ತು ನಾನು ಇಸಿಎಸ್ ರಿಫಂಡ್ ಸಲಹೆಯನ್ನು ಸ್ವೀಕರಿಸಿದ್ದೇನೆ, ಆದರೆ ನನ್ನ ಅಕೌಂಟ್‌ಗೆ ಕ್ರೆಡಿಟ್ ಆಗಿರದಿದ್ದರೆ ನಾನು ಏನು ಮಾಡಬೇಕು?
ನಿಮ್ಮ ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ "ಪಾವತಿಸಲಾಗಿದೆ" ಎಂದು ತೋರಿಸಿದ್ದು, ಆದರೆ ಇಸಿಎಸ್ ರಿಫಂಡ್ ಸಲಹೆಯನ್ನು ಪಡೆದ ನಂತರವೂ ನೀವು ರಿಫಂಡ್ ಅನ್ನು ಸ್ವೀಕರಿಸದಿದ್ದರೆ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ. ನೀವು "ರಿಟರ್ನ್ ವಯಾ ಚೆಕ್" ಆಯ್ಕೆ ಮಾಡಿಕೊಂಡಿದ್ದರೆ, ಈ ಚೆಕ್ ಅನ್ನು ಟ್ರ್ಯಾಕ್ ಮಾಡಲು ಟ್ರ್ಯಾಕಿಂಗ್ ಸಂಖ್ಯೆಗಾಗಿ ಅಂಚೆ ಕಚೇರಿಯನ್ನು ಸಂಪರ್ಕಿಸಿ. ಅಲ್ಲದೆ, ನೀವು ಒದಗಿಸಿದ ಖಾತೆಯ ವಿವರಗಳನ್ನು ಮರುಪರಿಶೀಲಿಸಿ. ಹೆಚ್ಚಿನ ಸಹಾಯಕ್ಕಾಗಿ, itro@sbi.co.inಗೆ ಇಮೇಲ್ ಕಳುಹಿಸಿ.
ಸರಿಪಡಿಸಿದ ನಂತರವೂ ನನ್ನ ಐಟಿಆರ್ ಸ್ಟೇಟಸ್ "ಸರಿಪಡಿಸುವಿಕೆ ಮುಂದುವರೆದಿದೆ, ಡಿಮ್ಯಾಂಡ್ ನಿರ್ಧರಿಸಲ್ಪಟ್ಟಿದೆ" ಎಂದು ಬಂದರೆ ಏನು ಮಾಡಬಹುದು?
ಇದರರ್ಥ ಐಟಿ ಇಲಾಖೆಯು ಕ್ರಾಸ್-ಚೆಕ್ ಮಾಡಿದ ನಂತರ ನಿಮ್ಮ ಟ್ಯಾಕ್ಸ್ ಬಾಕಿಯಿದೆ ಎಂದು ಕಂಡುಹಿಡಿದಿದೆ. ನಿಮ್ಮ ಇ-ಫೈಲಿಂಗ್ ದಾಖಲೆಯನ್ನು ನೀವು ಮರುಪರಿಶೀಲಿಸಬೇಕು ಮತ್ತು ನಿಗದಿತ ಸಮಯದೊಳಗೆ ಅಗತ್ಯ ಬಾಕಿಗಳನ್ನು ಕಟ್ಟಿ ತೆರವುಗೊಳಿಸಬೇಕು.
ಇನ್‌ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್‌ಗೆ ಸಂಬಂಧಿಸಿದಂತೆ ನನ್ನ ಸಮಸ್ಯೆಗಳು ಪರಿಹಾರವಾಗದಿದ್ದರೆ ನಾನು ಯಾರನ್ನು ಸಂಪರ್ಕಿಸಬೇಕು?
ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡ ನಂತರವೂ ತಪ್ಪಾದ ಐಟಿಆರ್ ಸ್ಟೇಟಸ್‌ಗೆ ಸಂಬಂಧಿಸಿದಂತೆ ನೀವು ಸಮಸ್ಯೆಗಳನ್ನು ಎದುರಿಸಿದರೆ, ದಯವಿಟ್ಟು ಐಟಿ ಇಲಾಖೆಯನ್ನು ಅವರ ಸಹಾಯವಾಣಿ ಸಂಖ್ಯೆ ಅಥವಾ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಇಮೇಲ್ ಮೂಲಕ ಸಂಪರ್ಕಿಸಿ.