ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್: ಲಾಂಗ್ ಟರ್ಮ್ ಮತ್ತು ಶಾರ್ಟ್ ಟರ್ಮ್ ಗೇನ್ಸ್‌ಗಳು

ರಿಪೋರ್ಟ್ ಮಾಡಲಾದ ಇನ್ಕಮ್‌ನ ಕೆಟಗರಿಯನ್ನು ಆಧರಿಸಿ ಭಾರತದಲ್ಲಿ ಟ್ಯಾಕ್ಸೇಶನ್ ಬದಲಾಗುತ್ತದೆ. ಈ ನಿಟ್ಟಿನಲ್ಲಿ, ಟ್ಯಾಕ್ಸ್ ಪೇಯರ್‌ಗಳು ಸಾಮಾನ್ಯವಾಗಿ ಕ್ಯಾಪಿಟಲ್ ಗೇನ್ಸ್‌ಗಳ ಬಗ್ಗೆ ಗೊಂದಲವನ್ನು ಎದುರಿಸುತ್ತಾರೆ. ನಿಮಗೂ ಅದೇ ವಿಷಯಕ್ಕೆ ಗೊಂದಲವಿದ್ದರೆ, ನೀವು ಸರಿಯಾದ ಪೇಜಿಗೆ ಬಂದಿದ್ದೀರಿ!

ಕ್ಯಾಪಿಟಲ್ ಗೇನ್ಸ್‌ಗಳು ಏನನ್ನು ಪ್ರತಿನಿಧಿಸುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಮತ್ತು ಇದು ನಿಮ್ಮ ‘ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಎಂದರೇನು? ಎಂಬ ಪ್ರಶ್ನೆಗೆ ಉತ್ತರ ನೀಡುತ್ತದೆ

ಕ್ಯಾಪಿಟಲ್ ಗೇನ್ಸ್‌ ಬಗ್ಗೆ ವಿವರಣೆ: ಶುಲ್ಕ ವಿಧಿಸುವಿಕೆ

ಕೆಳಗಿನ ಕಂಡೀಷನ್‌ಗಳನ್ನು ಪೂರೈಸಿದಾಗ ಕ್ಯಾಪಿಟಲ್ ಗೇನ್ಸ್‌ಗಳು ಉದ್ಭವಿಸುತ್ತವೆ:

  • ಕ್ಯಾಪಿಟಲ್ ಅಸೆಟ್ ಇರಬೇಕು

  • ಅದನ್ನು ಹಿಂದಿನ ವರ್ಷದಲ್ಲಿ ಟ್ರಾನ್ಸ್‌ಫರ್ ಮಾಡಿರಬೇಕು

  • ಟ್ರಾನ್ಸ್‌ಫರ್ ಮಾಡಿದ ಪರಿಣಾಮವಾಗಿ ಪ್ರಾಫಿಟ್ ಅಥವಾ ಗೇನ್ಸ್ ಇರಬೇಕು

ಆದ್ದರಿಂದ ಕ್ಯಾಪಿಟಲ್ ಗೇನ್ಸ್‌ಗಳು ನೀವು ಕ್ಯಾಪಿಟಲ್ ಅಸೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಗಳಿಸುವ ಇನ್ಕಮ್ ಅನ್ನು ಸೂಚಿಸುತ್ತದೆ. ಈಗ ಕ್ಯಾಪಿಟಲ್ ಅಸೆಟ್‌ಗಳು ಯಾವುವು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 2(14) ರ ಪ್ರಕಾರ, 1961 ಕ್ಯಾಪಿಟಲ್ ಅಸೆಟ್‌ ಇವುಗಳನ್ನು ಒಳಗೊಂಡಿದೆ: 

  • ಮೌಲ್ಯಮಾಪಕರು ಬಿಸಿನೆಸ್ ಅಥವಾ ಪ್ರೊಫೆಷನ್‌ನೊಂದಿಗೆ ಸಂಪರ್ಕ ಹೊಂದಿದ್ದರೂ ಸಹ, ಅವರು ಹೊಂದಿರುವ ಯಾವುದೇ ಪ್ರಾಪರ್ಟಿ

  • ಸೆಬಿ ಆ್ಯಕ್ಟ್, 1992 ರ ಅಡಿಯಲ್ಲಿ ರೆಗ್ಯುಲೇಶನ್‌ಗಳ ಪ್ರಕಾರ ವಿದೇಶಿ ಸಾಂಸ್ಥಿಕ ಇನ್ವೆಸ್ಟರ್‌ಗಳು (FII) ಇನ್ವೆಸ್ಟ್‌ಮೆಂಟ್ ರೂಪದಲ್ಲಿ ಹೊಂದಿರುವ ಯಾವುದೇ ಸೆಕ್ಯೂರಿಟಿಗಳು

ಸರಳವಾಗಿ ಹೇಳುವುದಾದರೆ, ಕ್ಯಾಪಿಟಲ್ ಅಸೆಟ್‌ಗಳು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು -

  • ಆಭರಣಗಳು

  • ಲೀಸ್ ಹಕ್ಕುಗಳು

  • ಟ್ರೇಡ್‌ಮಾರ್ಕ್‌ಗಳು ಮತ್ತು ಪೇಟೆಂಟ್‌ಗಳು

  • ಬಿಲ್ಡಿಂಗ್

  • ಭೂಮಿ

  • ಮಷೀನರಿ

  • ಹೌಸ್ ಪ್ರಾಪರ್ಟಿ

  • ಯಾವುದೇ ಭಾರತೀಯ ಕಂಪನಿಯಲ್ಲಿನ ಹಕ್ಕುಗಳು

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್, 1961 ರ ಪ್ರಕಾರ ಕ್ಯಾಪಿಟಲ್ ಅಸೆಟ್‌ಗಳು ಯಾವುವು ಎಂದು ನಿಮಗೀಗ ತಿಳಿದಿದೆ, ಹೊರಗಿಡುವಿಕೆಗಳನ್ನು ನಿರ್ಧರಿಸಲು ಇದು ಒಂದು ಅಂಶವಾಗಿದೆ. ಕ್ಯಾಪಿಟಲ್ ಗೇನ್ಸ್‌ನ ಅಡಿಯಲ್ಲಿ ಬರದ ಕ್ಯಾಪಿಟಲ್ ಅಸೆಟ್‌ಗಳು ಇಲ್ಲಿವೆ -

  • ಭಾರತದಲ್ಲಿ ಇರುವ ಕೃಷಿ ಭೂಮಿ, ಪ್ರಾವಿಷನ್‌ಗಳ ಪ್ರಕಾರ ಭಾರತದಲ್ಲಿ ಗ್ರಾಮೀಣ ಭಾಗದಲ್ಲಿರುವ ಭೂಮಿ 

  • ವೈಯಕ್ತಿಕ ಬಳಕೆಗಾಗಿ ಹೊಂದಿರುವ ಫರ್ನೀಚರ್‌ಗಳು ಮತ್ತು ಬಟ್ಟೆಗಳು

  • ಪ್ರೊಫೆಷನಲ್ ಅಥವಾ ಬಿಸಿನೆಸ್-ಸಂಬಂಧಿತ ಬಳಕೆಗಾಗಿ ಇರುವ ಕನ್ಸ್ಯೂಮೇಬಲ್ ವಸ್ತುಗಳು ಅಥವಾ ಸ್ಟಾಕ್‌ಗಳು

  • ವಿಶೇಷ ಬೇರರ್ ಬಾಂಡ್‌ಗಳು ಮತ್ತು ನಿರ್ದಿಷ್ಟಪಡಿಸಿದ ಗೋಲ್ಡ್ ಬಾಂಡ್‌ಗಳು

  • ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, 2015 ರ ಅಡಿಯಲ್ಲಿ ನೀಡಲಾದ ಡೆಪಾಸಿಟ್ ಸರ್ಟಿಫಿಕೇಟ್‌ಗಳು

ಇನ್ಕಮ್ ಟ್ಯಾಕ್ಸ್‌ನಲ್ಲಿ ಕ್ಯಾಪಿಟಲ್ ಗೇನ್ಸ್ ಎಂದರೇನು ಎಂಬುದರ ಬಗ್ಗೆ ನಿಮಗೀಗ ಸ್ಪಷ್ಟವಾದ ಕಲ್ಪನೆ ಬಂದಿದೆ. ಈಗ ನೀವು ಅಂತಹ ಗೇನ್ಸ್‌ಗಳ ಮೇಲಿನ ಟ್ಯಾಕ್ಸ್‌ಗಳ ಜಟಿಲತೆಗಳನ್ನು ನೀವು ಅರ್ಥಮಾಡಿಕೊಳ್ಳಲು ಪ್ರಾರಂಭಿಸಬೇಕು.

[ಮೂಲ]

ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಎಂದರೆ ಏನು?

ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅಥವಾ ಸಿಜಿಟಿ ಎನ್ನುವುದು ಕ್ಯಾಪಿಟಲ್ ಅಸೆಟ್‌ನ ಟ್ರಾನ್ಸ್‌ಫರ್‌ನ ನಂತರ ಜನರೇಟ್ ಆಗುವ ಲಾಭದ ಮೇಲೆ ನಿರ್ದಿಷ್ಟವಾಗಿ ವಿಧಿಸಲಾಗುವ ಟ್ಯಾಕ್ಸ್ ಆಗಿದೆ. ಇದು ನಿಜವಾಗಲು, ನಿರ್ದಿಷ್ಟ ಕ್ಯಾಪಿಟಲ್ ಅಸೆಟ್‌ಗಳನ್ನು ನೀವು ಖರೀದಿಸಲು ಪಾವತಿಸಿದ ಮೊತ್ತಕ್ಕಿಂತಲೂ ಹೆಚ್ಚಿನ ಬೆಲೆಗೆ ಟ್ರಾನ್ಸ್‌ಫರ್‌ ಮಾಡಬೇಕಾಗುತ್ತದೆ.

ಆದ್ದರಿಂದ, ಪಿತ್ರಾರ್ಜಿತ ಆಸ್ತಿ ಅಥವಾ ಕ್ಯಾಪಿಟಲ್ ಅಸೆಟ್‌ಗಳು ಈ ಟ್ಯಾಕ್ಸ್‌ಗೆ ಅರ್ಹತೆ ಪಡೆಯುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಯಾವುದೇ ಟ್ರಾನ್ಸಾಕ್ಷನ್ ನಡೆಯುವುದಿಲ್ಲ. ಆದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ಕೈಗಳಿಗೆ ಬದಲಾಗುತ್ತವೆ. ಆದರೆ ವಾರಸುದಾರನು ಅಸೆಟ್ ಅನ್ನು ಟ್ರಾನ್ಸ್‌ಫರ್‌ ಮಾಡಿದಾಗ, ಅದು ಕ್ಯಾಪಿಟಲ್ ಗೇನ್ಸ್‌ಗೊಳಪಡುತ್ತದೆ.

ಕ್ಯಾಪಿಟಲ್ ಗೇನ್ಸ್‌ನ ವಿಧಗಳು

ಕ್ಯಾಪಿಟಲ್ ಗೇನ್ಸ್‌ ಅನ್ನು ಪ್ರಾಥಮಿಕವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ -

  • ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ (Long-term Capital Gains) 

  • ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ (Short-term Capital Gains) 

ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ ಮತ್ತು ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ ಅನ್ನು ಮೌಲ್ಯಮಾಪನ ಮಾಡುವ ಮೊದಲು, ಮುಖ್ಯವಾಗಿ ಕ್ಯಾಪಿಟಲ್ ಅಸೆಟ್‌ಗಳನ್ನು ಟ್ರಾನ್ಸ್‌ಫರ್‌ ಮಾಡಲು ನಿರ್ಧರಿಸುವ ಮೊದಲು ಹೊಂದಿರುವ ಸಮಯದ ಪ್ರಮಾಣದಲ್ಲಿ ವ್ಯತ್ಯಾಸವಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.

ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಎಂದರೇನು?

ಹೆಚ್ಚಿನ ಉದಾಹರಣೆಗಳಲ್ಲಿ, 36 ತಿಂಗಳಿಗಿಂತ ಹೆಚ್ಚು ಒಡೆತನದ ಯಾವುದೇ ಕ್ಯಾಪಿಟಲ್ ಅಸೆಟ್‌ಗಳ ಟ್ರಾನ್ಸ್‌ಫರ್‌ ಮೇಲಿನ ಲಾಭವನ್ನು ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ ಎಂದು ಕರೆಯಲಾಗುತ್ತದೆ. ಈ ಗಳಿಕೆಯ ಮೇಲಿನ ಟ್ಯಾಕ್ಸ್‌ಗಳನ್ನು ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ.

ಆದಾಗ್ಯೂ, ಕೆಲವು ಅಸೆಟ್‌ಗಳು 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಹಿಡಿದಿಟ್ಟುಕೊಂಡಿದ್ದರೂ, ಸಹ ಅವುಗಳನ್ನು ಲಾಂಗ್-ಟರ್ಮ್ ಎಂದು ಪರಿಗಣಿಸಲಾಗುತ್ತದೆ. ಇವುಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

  • ಕೋಟೆಡ್ ಅಥವಾ ಅನ್‌ಕೋಟೆಡ್ ಯುನಿಟ್ ಟ್ರಸ್ಟ್ ಆಫ್ ಇಂಡಿಯಾದ ಬಾಂಡ್‌ಗಳು.

  • ಮಾನ್ಯತೆ ಪಡೆದ 'ಇಂಡಿಯನ್ ಸ್ಟಾಕ್ ಎಕ್ಸ್‌ಚೇಂಜ್' ನಲ್ಲಿ ಪಟ್ಟಿ ಮಾಡಲಾದ ಡಿಬೆಂಚರ್‌ಗಳು, ಬಾಂಡ್‌ಗಳು ಮತ್ತು ಗವರ್ನಮೆಂಟ್ ಸೆಕ್ಯೂರಿಟಿಗಳಂತಹ ಸೆಕ್ಯೂರಿಟಿಗಳು.

  • ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳು.

  • ಝೀರೋ-ಕೂಪನ್ ಬಾಂಡ್‌ಗಳು.

  • ಮಾನ್ಯತೆ ಪಡೆದ 'ಇಂಡಿಯನ್ ಸ್ಟಾಕ್ ಎಕ್ಸ್‌ಚೇಂಜ್' ನಲ್ಲಿ ಪಟ್ಟಿ ಮಾಡಲಾದ ಕಂಪನಿಯ ಇಕ್ವಿಟಿಗಳು ಅಥವಾ ಆದ್ಯತೆಯ ಷೇರುಗಳು.

24 ತಿಂಗಳಿಗಿಂತ ಹೆಚ್ಚು ಕಾಲ ಹೊಂದಿರುವ ಭೂಮಿ ಮತ್ತು ಬಿಲ್ಡಿಂಗ್ ಸೇರಿದಂತೆ ಅನ್‌ಲಿಸ್ಟೆಡ್ ಷೇರುಗಳು ಮತ್ತು ಸ್ಥಿರ ಪ್ರಾಪರ್ಟಿಯನ್ನು ಲಾಂಗ್-ಟರ್ಮ್ ಕ್ಯಾಪಿಟಲ್ ಅಸೆಟ್‌ಗಳೆಂದು ಪರಿಗಣಿಸಲಾಗುತ್ತದೆ.

ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ಗಳ ಕ್ಯಾಲ್ಕುಲೇಶನ್ ಮಾಡಲು, ನಿಮಗೆ ಕೆಲವು ಸರಳ ಹಂತಗಳನ್ನು ಅನುಸರಿಸುವ ಅಗತ್ಯವಿರುತ್ತದೆ:

  • ಹಂತ 1: ಕ್ಯಾಪಿಟಲ್ ಅಸೆಟ್‌ಗಳ ಮಾರಾಟದ ನಂತರ ಸ್ವೀಕರಿಸಿದ ಒಟ್ಟು ಮೊತ್ತದಿಂದ ಪ್ರಾರಂಭಿಸಿ.

  • ಹಂತ 2: ಟ್ರಾನ್ಸ್‌ಫರ್‌ನ ವೆಚ್ಚವನ್ನು ಡಿಡಕ್ಟ್ ಮಾಡಿ + ಸ್ವಾಧೀನತೆಯ ಸೂಚ್ಯಂಕ ವೆಚ್ಚ + ಸುಧಾರಣೆಯ ಸೂಚ್ಯಂಕ ವೆಚ್ಚ.

ಈಗ, ಸರಿಯಾದ ಕ್ಯಾಲ್ಕುಲೇಶನ್ ಅನ್ನು ಖಚಿತಪಡಿಸಿಕೊಳ್ಳಲು, ಈ ಪ್ರತಿಯೊಂದು ಟರ್ಮ್‌ಗಳು ಏನನ್ನು ಪ್ರತಿನಿಧಿಸುತ್ತವೆ ಎಂಬುದನ್ನು ನೀವು ತಿಳಿದಿರಬೇಕು. ಮುಂದೆ ಓದಿ -

  • ಟ್ರಾನ್ಸ್‌ಫರ್‌ನ ವೆಚ್ಚ = ಜಾಹೀರಾತು, ಡೀಲ್‌ಗಳು ಮತ್ತು ಕಾನೂನು ವೆಚ್ಚಗಳು ಹಾಗೂ ಸಂಪೂರ್ಣವಾಗಿ ಮತ್ತು ವಿಶೇಷವಾಗಿ ಟ್ರಾನ್ಸ್‌ಫರ್‌ಗೆ ತಗಲುವ ವೆಚ್ಚಗಳು

  • ಸ್ವಾಧೀನದ ಸೂಚ್ಯಂಕದ ವೆಚ್ಚ = ಟ್ರಾನ್ಸ್‌ಫರ್‌ನ ವರ್ಷಕ್ಕೆ ಹಣದುಬ್ಬರದ ಸೂಚ್ಯಂಕ ವೆಚ್ಚ (ಸಿಐಐ) X ಸ್ವಾಧೀನತೆಯ ವೆಚ್ಚ/ (ಸಿಐಐ) ಸ್ವಾಧೀನಪಡಿಸಿದ ವರ್ಷಕ್ಕೆ ಅಥವಾ ಹಣಕಾಸು ವರ್ಷ 2001-02 ಕ್ಕೆ, ಇವುಗಳಲ್ಲಿ ಯಾವುದು ನಂತರದಲ್ಲಿ ಬರುವುದೋ ಅದು

  • ಸುಧಾರಣೆಯ ಸೂಚ್ಯಂಕದ ವೆಚ್ಚ = ಸುಧಾರಣಾ ವೆಚ್ಚಗಳು X ಟ್ರಾನ್ಸ್‌ಫರ್‌ನ ವರ್ಷಕ್ಕೆ (ಸಿಐಐ) / ಅಸೆಟ್ ಸುಧಾರಣೆಯ ವರ್ಷಕ್ಕೆ (ಸಿಐಐ)

[ಮೂಲ]

ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಎಂದರೇನು?

36 ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ಕ್ಯಾಪಿಟಲ್ ಅಸೆಟ್‌ಗಳಿಂದ ಗಳಿಸಿದ ಲಾಭವನ್ನು ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಈ ಪ್ರತ್ಯೇಕತೆಗೆ ಕೆಲವು ವಿನಾಯಿತಿಗಳಿವೆ. ಉದಾಹರಣೆಗೆ, ಭೂಮಿ, ಬಿಲ್ಡಿಂಗ್ ಅಥವಾ ಹೌಸ್ ಪ್ರಾಪರ್ಟಿಯ ಸಂದರ್ಭದಲ್ಲಿ, ಈ ಅವಧಿಯನ್ನು ಕೇವಲ 24 ತಿಂಗಳಿಗಷ್ಟೇ ಕಡಿಮೆ ಮಾಡಲಾಗಿದೆ. ಹೀಗಾಗಿ, ನೀವು ಅಂತಹ ಅಸೆಟ್‌ಗಳನ್ನು 24 ತಿಂಗಳುಗಳಿಗಿಂತ ಹೆಚ್ಚು ಕಾಲ ಹೊಂದಿ, ನಂತರದಲ್ಲಿ ಆ ಅಸೆಟ್‌ಗಳನ್ನು ಮಾರಾಟ ಮಾಡಿದರೆ, ಅದನ್ನು ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಎಂದು ವರ್ಗೀಕರಿಸಲಾಗುತ್ತದೆ.

ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ನ ಕ್ಯಾಲ್ಕುಲೇಶನ್ ಫಾರ್ಮುಲಾ, ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ನಂತೆಯೇ ಇರುತ್ತದೆ. ಅದು ಹೀಗಿದೆ - 

ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ = ಪರಿಗಣನೆಯ ಪೂರ್ಣ ಮೌಲ್ಯ - (ಸುಧಾರಣೆಯ ವೆಚ್ಚ + ಸ್ವಾಧೀನತೆಯ ವೆಚ್ಚ + ಟ್ರಾನ್ಸ್‌ಫರ್‌ನ ವೆಚ್ಚ)

ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ದರಗಳು ಯಾವುವು?

ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ ಟ್ಯಾಕ್ಸ್ ದರ ಎಷ್ಟಿದೆ? ಇದನ್ನು ನಾವೀಗ ವಿವರವಾಗಿ ಕಲಿಯೋಣ

ಅಸೆಟ್‌ ಕಂಡೀಶನ್ ಟ್ಯಾಕ್ಸ್ ದರ
ಇಕ್ವಿಟಿ ಷೇರುಗಳು, ಇಕ್ವಿಟಿ ಆಧಾರಿತ ಫಂಡ್‌ಗಳ ಯುನಿಟ್‌ಗಳು, ಬಿಸಿನೆಸ್ ಟ್ರಸ್ಟ್‌ನ ಯುನಿಟ್‌ಗಳು 1 ಲಕ್ಷಕ್ಕಿಂತ ಹೆಚ್ಚಿನ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಸೂಚ್ಯಂಕವಿಲ್ಲದೆ 10%
ಇತರೆ 20%
ಲಿಸ್ಟೆಡ್ ಸೆಕ್ಯೂರಿಟಿಗಳು, ಯುನಿಟ್‌ಗಳು ಅಥವಾ ಝೀರೋ-ಕೂಪನ್ ಬಾಂಡ್‌ಗಳು ಎರಡಕ್ಕಿಂತ ಕಡಿಮೆ ಸೂಚ್ಯಂಕದೊಂದಿಗೆ 20% ಅಥವಾ ಸೂಚ್ಯಂಕವಿಲ್ಲದೆ 10%
ಇತರ ಅಸೆಟ್‌ಗಳು - 20%

ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ದರ ಎಷ್ಟಿದೆ?

ಅಸೆಟ್‌ ಕಂಡೀಶನ್ ಟ್ಯಾಕ್ಸ್ ದರ
ಇಕ್ವಿಟಿ ಷೇರುಗಳು, ಇಕ್ವಿಟಿ ಆಧಾರಿತ ಫಂಡ್‌ಗಳ ಯುನಿಟ್‌ಗಳು, ಬಿಸಿನೆಸ್ ಟ್ರಸ್ಟ್‌ನ ಯುನಿಟ್‌ಗಳು ಸೆಕ್ಯೂರಿಟಿಗಳ ಸಂದರ್ಭದಲ್ಲಿ, ಟ್ರಾನ್ಸಾಕ್ಷನ್ ಅನ್ವಯಿಸುತ್ತದೆ 15%
ಸೆಕ್ಯೂರಿಟಿಗಳ ಸಂದರ್ಭದಲ್ಲಿ, ಟ್ರಾನ್ಸಾಕ್ಷನ್ ಅನ್ವಯಿಸುವುದಿಲ್ಲ ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ನು ವ್ಯಕ್ತಿಯ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗೆ ಆ್ಯಡ್ ಮಾಡಲಾಗುತ್ತದೆ. ವ್ಯಕ್ತಿಯ ಇನ್ಕಮ್ ಸ್ಲ್ಯಾಬ್ ಫೈನಲ್ ಟ್ಯಾಕ್ಸ್ ಅನ್ನು ನಿರ್ಧರಿಸುತ್ತದೆ.
ಇತರ ಅಸೆಟ್‌ಗಳು - ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ನು ವ್ಯಕ್ತಿಯ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗೆ ಆ್ಯಡ್ ಮಾಡಲಾಗುತ್ತದೆ. ವ್ಯಕ್ತಿಯ ಇನ್ಕಮ್ ಸ್ಲ್ಯಾಬ್ ಫೈನಲ್ ಟ್ಯಾಕ್ಸ್ ಅನ್ನು ನಿರ್ಧರಿಸುತ್ತದೆ.

ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ನು ವ್ಯಕ್ತಿಯ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗೆ ಆ್ಯಡ್ ಮಾಡಲಾಗುತ್ತದೆ.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು 5 ವರ್ಷಗಳ ಹಿಂದೆ ಖರೀದಿಸಿದ ಮನೆಯನ್ನು ಮಾರಾಟ ಮಾಡಿದ್ದೇನೆ. ಅಂತಹ ಟ್ರಾನ್ಸಾಕ್ಷನ್‌ಗೆ ಯಾವ ರೀತಿಯ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ವಯಿಸುತ್ತದೆ?

ನೀವು 24 ತಿಂಗಳುಗಳಿಗಿಂತ ಹೆಚ್ಚು ಕಾಲ ಆಸ್ತಿಯನ್ನು ಹೊಂದಿರುವ ಕಾರಣ ಅಂತಹ ಟ್ರಾನ್ಸಾಕ್ಷನ್‌ಗಳನ್ನು ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಅನ್ವಯವಾಗುವ ಟ್ಯಾಕ್ಸ್‌ಗಳನ್ನು ಅದಕ್ಕೆ ಅನುಗುಣವಾಗಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ.

ಭಾರತದಲ್ಲಿ ಪ್ರಾಪರ್ಟಿಯನ್ನು ಮಾರಾಟ ಮಾಡುವ ಎನ್‌ಆರ್‌ಐಗಳಿಗೆ ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಮೇಲಿನ ಟ್ಯಾಕ್ಸ್ ದರ ಎಷ್ಟಿರುತ್ತದೆ?

20% ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ (2 ವರ್ಷಗಳಿಗಿಂತ ಹೆಚ್ಚು ಕಾಲ ಹೊಂದಿರುವ ಪ್ರಾಪರ್ಟಿ) ಅಥವಾ ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್ಸ್‌ಗಾಗಿ ಸಾಮಾನ್ಯ ಸ್ಲ್ಯಾಬ್ ದರಗಳಲ್ಲಿ, ಟ್ಯಾಕ್ಸ್ (2 ವರ್ಷಗಳಿಗಿಂತ ಕಡಿಮೆ ಇರುವ ಪ್ರಾಪರ್ಟಿ) ಅನ್ವಯಿಸುತ್ತದೆ. ಆದಾಗ್ಯೂ, ಈ ಟ್ಯಾಕ್ಸ್ ಅನ್ನು ಅಂತಹ ಟ್ರಾನ್ಸ್‌ಫರ್‌ ಮಾಡಿದ ಲಾಭದ ಮೇಲೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ ಮತ್ತು ಸ್ವೀಕರಿಸಿದ ಸಂಪೂರ್ಣ ಮೊತ್ತದ ಮೇಲೆ ಅಲ್ಲ.