ಶೀಘ್ರದಲ್ಲೇ ನಿವೃತ್ತರಾಗುವವರಿಗೆ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನ ಪರಿಚಯ!
ಜನರು ಯಾವಾಗಲೂ ಪ್ಲ್ಯಾನ್ ಮಾಡುವ ವಿಷಯಗಳಲ್ಲಿ ಒಂದು, ತಮ್ಮ ನಿವೃತ್ತಿ. ಅದು ನಿಮ್ಮ ಆರ್ಥಿಕ ಆರೋಗ್ಯವಾಗಿರಬಹುದು ಅಥವಾ ನಿಮ್ಮ ಯೋಗಕ್ಷೇಮವಾಗಿರಬಹುದು.
ನಿಮ್ಮ ಹಣಕಾಸಿನ ಯೋಜನೆಯ ಭಾಗವಾಗಿ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ನೀವು ಮೌಲ್ಯಮಾಪನ ಮಾಡಬೇಕು ಮತ್ತು ಲೆಕ್ಕಾಚಾರ ಮಾಡಬೇಕು; ಆರೋಗ್ಯ ಮತ್ತು ಆರ್ಥಿಕ ಎಂಬ ಎರಡೂ ದೃಷ್ಟಿಕೋನದಿಂದಲೂ ನೋಡಬೇಕು.
ಏಕೆಂದರೆ ನೀವು ಪ್ರಸ್ತುತ ನೀವು ಕೆಲಸ ಮಾಡುವ ಕಂಪನಿಯ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯಡಿಯಲ್ಲಿ ಕವರ್ ಆಗುತ್ತಿರಬಹುದು, ಆದರೆ ನೀವು ನಿವೃತ್ತರಾದ ನಂತರ, ನಿಮಗೆ ಹೆಚ್ಚು ಅಗತ್ಯವಿರುವ ವಯಸ್ಸಿನಲ್ಲಿ ಆ ಪಾಲಿಸಿಯ ಪ್ರಯೋಜನಗಳು ಸ್ಥಗಿತಗೊಳ್ಳುತ್ತವೆ.
ಆದ್ದರಿಂದ ನಿಮ್ಮ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಹೆಲ್ತ್ ಇನ್ಶೂರೆನ್ಸ್‌ನ ಆಯ್ಕೆ ಇಲ್ಲಿದೆ!
ನೀವಿನ್ನೂ ನಿಮ್ಮ ಕಂಪನಿಯ ಪಾಲಿಸಿಯಡಿಯಲ್ಲಿ ಇರುವಾಗಲೇ ಅಂದರೆ ನೀವು ಈಗಲೇ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ಆಯ್ಕೆ ಮಾಡಬಹುದು. ಮತ್ತು ಅಂತಿಮವಾಗಿ ನೀವು ನಿವೃತ್ತರಾದಾಗ, ನಮ್ಮ ಸಂಪೂರ್ಣ ಡಿಜಿಟ್ ಹೆಲ್ತ್ ಪ್ಲಸ್ ಯೋಜನೆಗೆ ಅಪ್‌ಗ್ರೇಡ್ ಮಾಡಬಹುದು.
ಈ ರೀತಿಯಾಗಿ, ನೀವು ಈಗಲೇ ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಪಾವತಿಸಬೇಕಿಲ್ಲ ಮತ್ತು ನೀವು ಸಮಯಕ್ಕೆ ಸರಿಯಾಗಿ ಎಲ್ಲಾ ವೇಟಿಂಗ್ ಪಿರಿಯಡ್‌ಗಳನ್ನು ಮುಗಿಸುತ್ತೀರಿ. ನೀವು ಡಿಜಿಟ್‌ನ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಪಡೆಯಬೇಕು ಎಂಬುದರ ಕುರಿತು ಇನ್ನಷ್ಟು ತಿಳಿಯಲು ಓದಿ.
ಉದಾಹರಣೆಯೊಂದಿಗೆ ಸೂಪರ್ ಟಾಪ್-ಅಪ್ ಅನ್ನು ಅರ್ಥಮಾಡಿಕೊಳ್ಳಿ
ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ (ಡಿಜಿಟ್ ಹೆಲ್ತ್ ಕೇರ್ ಪ್ಲಸ್) | ಇತರ ಟಾಪ್-ಅಪ್ ಯೋಜನೆಗಳು | |
ಆಯ್ಕೆ ಮಾಡಿದ ಡಿಡಕ್ಟಿಬಲ್ | 2 ಲಕ್ಷ | 2 ಲಕ್ಷ |
ಆಯ್ಕೆ ಮಾಡಿದ ಸಮ್ ಇನ್ಶೂರ್ಡ್ | 10 ಲಕ್ಷಗಳು | 10 ಲಕ್ಷಗಳು |
ವರ್ಷದ ಮೊದಲ ಕ್ಲೈಮ್ | 4 ಲಕ್ಷಗಳು | 4 ಲಕ್ಷಗಳು |
ನೀವು ಪಾವತಿಸುವುದು | 2 ಲಕ್ಷಗಳು | 2 ಲಕ್ಷಗಳು |
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುವುದು | 2 ಲಕ್ಷಗಳು | 2 ಲಕ್ಷಗಳು |
ವರ್ಷದ 2ನೇ ಕ್ಲೈಮ್ | 6 ಲಕ್ಷಗಳು | 6 ಲಕ್ಷಗಳು |
ನೀವು ಪಾವತಿಸುವುದು | ಏನನ್ನೂ ಪಾವತಿಸುವುದಿಲ್ಲ!😊 | 2 ಲಕ್ಷ (ಆಯ್ಕೆ ಮಾಡಿದ ಡಿಡಕ್ಟಿಬಲ್) |
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುವುದು | 6 ಲಕ್ಷಗಳು | 4 ಲಕ್ಷಗಳು |
ವರ್ಷದ 3ನೇ ಕ್ಲೈಮ್ | 1 ಲಕ್ಷ | 1 ಲಕ್ಷ |
ನೀವು ಪಾವತಿಸುವುದು | ಏನನ್ನೂ ಪಾವತಿಸುವುದಿಲ್ಲ! 😊 | 1 ಲಕ್ಷ |
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುವುದು | 1 ಲಕ್ಷ | ಏನನ್ನೂ ಪಾವತಿಸುವುದಿಲ್ಲ ☹ |
ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನ ಬಗ್ಗೆ ಯಾವ ಅಂಶಗಳು ಉತ್ತಮವಾಗಿವೆ?
ಡಿಜಿಟ್, ಸೂಪರ್ ಟಾಪ್-ಅಪ್ ಪಾಲಿಸಿಯನ್ನು ನೀಡುತ್ತದೆ : ಡಿಡಕ್ಟಿಬಲ್‌ಗಿಂತ ಹೆಚ್ಚಿರುವ ಕ್ಲೈಮ್ ಅನ್ನು ಮಾತ್ರ ಕವರ್ ಮಾಡುವ ಸಾಮಾನ್ಯ ಟಾಪ್-ಅಪ್ ಪಾಲಿಸಿಗಿಂತ ಭಿನ್ನವಾಗಿ, ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ ಪಾಲಿಸಿಯು ಒಂದು ಪಾಲಿಸಿ ವರ್ಷದಲ್ಲಿ ಸಂಚಿತ ಮೆಡಿಕಲ್ ವೆಚ್ಚಗಳು ಡಿಡಕ್ಟಿಬಲ್‌ಗಿಂತ ಹೆಚ್ಚಾದಾಗ, ನಿಮ್ಮ ಕ್ಲೈಮ್‌ಗಳನ್ನು ಕವರ್ ಮಾಡುತ್ತದೆ.
ಸಾಂಕ್ರಾಮಿಕ ರೋಗಗಳನ್ನು ಕವರ್ ಮಾಡುತ್ತದೆ : ಕೋವಿಡ್-19 ನಮ್ಮ ಜೀವನದಲ್ಲಿ ಸಾಕಷ್ಟು ಅನಿಶ್ಚಿತತೆಯನ್ನು ತಂದಿತು ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಇತರ ಕಾಯಿಲೆಗಳ ಹೊರತಾಗಿ, ಇದು ಸಾಂಕ್ರಾಮಿಕವಾಗಿದ್ದರೂ ಸಹ ಈ ಯೋಜನೆಯು ಕೋವಿಡ್-19 ಅನ್ನು ಸಹ ಕವರ್ ಮಾಡುತ್ತದೆ.
ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಒಮ್ಮೆ ಮಾತ್ರ ಪಾವತಿಸಿ : ಸೂಪರ್ ಟಾಪ್-ಅಪ್ ಇನ್ಶೂರೆನ್ಸ್‌ನೊಂದಿಗೆ, ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ನೀವು ಒಮ್ಮೆ ಮಾತ್ರ ಪಾವತಿಸಬೇಕಾಗುತ್ತದೆ ಮತ್ತು ನಂತರ, ವರ್ಷದಲ್ಲಿ ಅನೇಕ ಬಾರಿ ಕ್ಲೈಮ್ ಮಾಡಬಹುದು. ನಿಜವಾದ ಡಿಜಿಟ್ ವಿಶೇಷ!
ಹೆಲ್ತ್ ಕೇರ್ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಸೂಪರ್ ಟಾಪ್-ಅಪ್ ಪಾಲಿಸಿಯನ್ನು ಕಸ್ಟಮೈಸ್ ಮಾಡಿ : ನೀವು 1, 2, 3 ಮತ್ತು 5 ಲಕ್ಷಗಳ ಡಿಡಕ್ಟಿಬಲ್‌ಗಳಿಂದ ಆಯ್ಕೆ ಮಾಡಬಹುದು ಮತ್ತು ನಿಮ್ಮ ಸಮ್ ಇನ್ಶೂರ್ಡ್ ಆಗಿ ₹ 10 ಲಕ್ಷದಿಂದ 20 ಲಕ್ಷಗಳ ನಡುವೆ ಆಯ್ಕೆ ಮಾಡಬಹುದು.
ಕೊಠಡಿ ಬಾಡಿಗೆ ನಿರ್ಬಂಧವಿಲ್ಲ: ಪ್ರತಿಯೊಬ್ಬರೂ ವಿಭಿನ್ನ ಆದ್ಯತೆಗಳನ್ನು ಹೊಂದಿದ್ದಾರೆ ಮತ್ತು ನಾವದನ್ನು ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ, ನಾವು ಯಾವುದೇ ಕೊಠಡಿ ಬಾಡಿಗೆ ನಿರ್ಬಂಧಗಳನ್ನು ಹೊಂದಿಲ್ಲ! ನೀವು ಇಷ್ಟಪಡುವ ಯಾವುದೇ ಆಸ್ಪತ್ರೆಯ ಕೊಠಡಿಯನ್ನು ಆಯ್ಕೆ ಮಾಡಿಕೊಳ್ಳಿ.
ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ : ಕ್ಯಾಶ್ ಲೆಸ್ ಕ್ಲೈಮ್‌ಗಳಿಗಾಗಿ ಭಾರತದಲ್ಲಿನ ನಮ್ಮ 10500+ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒಂದನ್ನು ಆಯ್ಕೆಮಾಡಿ ಅಥವಾ ನೀವು ಮರುಪಾವತಿಯನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು.
ಸುಲಭವಾದ ಆನ್‌ಲೈನ್ ಪ್ರಕ್ರಿಯೆಗಳು : ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ನೀವು ಕ್ಲೈಮ್ ಮಾಡುವವರೆಗಿನ ಎಲ್ಲಾ ಪ್ರಕ್ರಿಯೆಗಳು ಕಾಗದರಹಿತ, ಸುಲಭ, ತ್ವರಿತ ಮತ್ತು ತೊಂದರೆ ಮುಕ್ತವಾಗಿರುತ್ತದೆ! ಕ್ಲೈಮ್‌ಗಳಿಗೂ ಸಹ ಯಾವುದೇ ಹಾರ್ಡ್ ಕಾಪಿಗಳಿಲ್ಲ!
ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಏನೆಲ್ಲಾ ಕವರ್ ಮಾಡುತ್ತದೆ?
ಪ್ರಯೋಜನಗಳು | |
ಸೂಪರ್ ಟಾಪ್-ಅಪ್ಇದು ಡಿಡಕ್ಟಿಬಲ್ ಮೊತ್ತವನ್ನು ಮೀರಿದ ನಂತರ ಒಂದು ಪಾಲಿಸಿ ವರ್ಷದೊಳಗೆ ಸಂಚಿತ ವೈದ್ಯಕೀಯ ವೆಚ್ಚಗಳಿಗೆ ಕ್ಲೈಮ್‌ಗಳನ್ನು ಪಾವತಿಸುತ್ತದೆ. ಮತ್ತು ರೆಗ್ಯುಲರ್ ಟಾಪ್-ಅಪ್ ಇನ್ಶೂರೆನ್ಸ್ ಪಾಲಿಸಿಯು ಮೂಲ ಮಿತಿಗಿಂತ ಹೆಚ್ಚಿನ ಒಂದೇ ಕ್ಲೈಮ್ ಅನ್ನು ಮಾತ್ರ ಕವರ್ ಮಾಡುತ್ತದೆ. |
ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಒಮ್ಮೆ ಮಾತ್ರ ಪಾವತಿಸಿ- ಡಿಜಿಟ್ ವಿಶೇಷ |
ಎಲ್ಲ ಹಾಸ್ಪಿಟಲೈಸೇಷನ್ಇದು ಅನಾರೋಗ್ಯ, ಅಪಘಾತ ಅಥವಾ ಕ್ರಿಟಿಕಲ್ ಇಲ್ ನೆಸ್ ಚಿಕಿತ್ಸಾ ವೆಚ್ಚಗಳನ್ನು ಕವರ್ ಮಾಡುತ್ತದೆ. ನಿಮ್ಮ ಡಿಡಕ್ಟಿಬಲ್ ಮಿತಿಯನ್ನು ದಾಟಿದ ನಂತರ, ಒಟ್ಟು ವೆಚ್ಚಗಳು ನಿಮ್ಮ ಸಮ್ ಇನ್ಶೂರ್ಡ್ ವರೆಗೆ ಇರುವವರೆಗೆ, ಅನೇಕ ಚಿಕಿತ್ಸೆಗಳನ್ನು ಕವರ್ ಮಾಡಲು ಇದನ್ನು ಬಳಸಬಹುದು. |
|
ಡೇಕೇರ್ ಪ್ರಕ್ರಿಯೆಗಳುಹೆಲ್ತ್ ಇನ್ಶೂರೆನ್ಸ್, 24 ಗಂಟೆಗಳನ್ನು ಮೀರುವ ಚಿಕಿತ್ಸೆಗಳಿಗೆ ಮಾತ್ರ ವೈದ್ಯಕೀಯ ವೆಚ್ಚವನ್ನು ಕವರ್ ಮಾಡುತ್ತದೆ. ಡೇ ಕೇರ್ ಪ್ರಕ್ರಿಯೆಗಳು ಎನ್ನುವುದು ಆಸ್ಪತ್ರೆಯಲ್ಲಿ ಕೈಗೊಳ್ಳಲಾದ ವೈದ್ಯಕೀಯ ಚಿಕಿತ್ಸೆಗಳನ್ನು ಸೂಚಿಸುತ್ತವೆ. ತಂತ್ರಜ್ಞಾನದ ಪ್ರಗತಿಯಿಂದಾಗಿ ಈ ಚಿಕಿತ್ಸೆಗಳಿಗೆ 24 ಗಂಟೆಗಳಿಗಿಂತ ಕಡಿಮೆ ಸಮಯ ಬೇಕಾಗುತ್ತದೆ. |
|
ಮೊದಲೇ ಅಸ್ತಿತ್ವದಲ್ಲಿರುವ/ನಿರ್ದಿಷ್ಟ ಅನಾರೋಗ್ಯದ ವೇಟಿಂಗ್ ಪೀರಿಯಡ್ನೀವು, ಮೊದಲೇ ಅಸ್ತಿತ್ವದಲ್ಲಿರುವ ಅಥವಾ ನಿರ್ದಿಷ್ಟವಾದ ಅನಾರೋಗ್ಯಕ್ಕೆ ಕ್ಲೈಮ್ ಮಾಡುವವರೆಗೆ ನೀವು ಕಾಯಬೇಕಾದ ಸಮಯ ಇದಾಗಿದೆ. |
4 ವರ್ಷಗಳು / 2 ವರ್ಷಗಳು |
ರೂಮ್ ರೆಂಟ್ ಕ್ಯಾಪಿಂಗ್ವಿವಿಧ ವರ್ಗದ ಕೊಠಡಿಗಳು ವಿಭಿನ್ನ ಬಾಡಿಗೆಗಳನ್ನು ಹೊಂದಿವೆ. ಹೋಟೆಲ್ ಕೊಠಡಿಗಳು ಹೇಗೆ ವಿಭಿನ್ನ ದರವನ್ನು ಹೊಂದಿರುತ್ತವೆಯೋ ಹಾಗೆ. ಡಿಜಿಟ್‌ನಲ್ಲಿ, ಕೊಠಡಿ ಬಾಡಿಗೆ ಮಿತಿಯು ನಿಮ್ಮ ಸಮ್ ಇನ್ಶೂರ್ಡ್ ಗಿಂತ ಕಡಿಮೆ ಇರುವವರೆಗೆ, ಯಾವುದೇ ರೂಮ್ ರೆಂಟ್ ಕ್ಯಾಪ್ ಅನ್ನು ಹೊಂದಿರದ ಪ್ರಯೋಜನವನ್ನು ಕೆಲವು ಪಾಲಿಸಿಗಳು ನೀಡುತ್ತವೆ. |
ನೋ ರೂಮ್ ರೆಂಟ್ ಕ್ಯಾಪಿಂಗ್ - ಡಿಜಿಟ್ ವಿಶೇಷ |
ಐಸಿಯು ಕೊಠಡಿ ಬಾಡಿಗೆಐಸಿಯು (ತೀವ್ರ ನಿಗಾ ಘಟಕಗಳು) ಗಂಭೀರ ರೋಗಿಗಳಿಗೆ ಮೀಸಲಾಗಿದೆ. ಐಸಿಯುಗಳಲ್ಲಿ ಆರೈಕೆಯ ಮಟ್ಟವು ಹೆಚ್ಚಾಗಿರುತ್ತದೆ, ಅದಕ್ಕಾಗಿಯೇ ಬಾಡಿಗೆಯೂ ಹೆಚ್ಚು. ಬಾಡಿಗೆಯು ನಿಮ್ಮ ಸಮ್ ಇನ್ಶೂರ್ಡ್ ಗಿಂತ ಕಡಿಮೆ ಇರುವವರೆಗೆ, ಡಿಜಿಟ್ ನಿಮಗೆ ಯಾವುದೇ ಮಿತಿಯನ್ನು ಹಾಕುವುದಿಲ್ಲ. |
ಮಿತಿ ಇಲ್ಲ |
ರಸ್ತೆ ಆಂಬ್ಯುಲೆನ್ಸ್ ಶುಲ್ಕಗಳುಆಂಬ್ಯುಲೆನ್ಸ್ ಸೇವೆಗಳು ಅತ್ಯಂತ ಅವಶ್ಯಕವಾದ ಮೆಡಿಕಲ್ ಸೇವೆಗಳಲ್ಲಿ ಒಂದಾಗಿದೆ ಏಕೆಂದರೆ ಅವು ಕೇವಲ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡುವುದಷ್ಟೆ ಅಲ್ಲದೆ ಅದರೊಂದಿಗೆ ಮೆಡಿಕಲ್ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಅದರ ವೆಚ್ಚವನ್ನು ಈ ಸೂಪರ್ ಟಾಪ್-ಅಪ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. |
|
ಕಾಂಪ್ಲಿಮೆಂಟರಿ ವಾರ್ಷಿಕ ಹೆಲ್ತ್ ಚೆಕಪ್ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನೀವು ತಿಳಿದಿರುವುದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ವಾರ್ಷಿಕ ಹೆಲ್ತ್ ಚೆಕಪ್‌ಗಳು ತುಂಬಾ ಮುಖ್ಯವಾಗಿವೆ. ಇದು ರಿನೀವಲ್ ಪ್ರಯೋಜನವಾಗಿದ್ದು, ನಿಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ಯಾವುದೇ ವಾರ್ಷಿಕ ಮೆಡಿಕಲ್ ಪರೀಕ್ಷೆಗಳು ಮತ್ತು ಹೆಲ್ತ್ ಚೆಕಪ್‌ಗಳಿಗೆ ನಿಮ್ಮ ಖರ್ಚುಗಳನ್ನು ರಿ ಇಂಬರ್ಸ್ ಮಾಡಲು ನಿಮಗೆ ಅನುಮತಿಸುತ್ತದೆ. |
|
ಹಾಸ್ಪಿಟಲೈಸೇಷನ್ ಪೂರ್ವ/ ನಂತರಡಯಾಗ್ನೋಸಿಸ್, ಪರೀಕ್ಷೆಗಳು ಮತ್ತು ಚೇತರಿಕೆಯಾಗುವಂತಹ ಚಿಕಿತ್ಸಾ ಪೂರ್ವ ಮತ್ತು ಚಿಕಿತ್ಸಾ ನಂತರದ ಎಲ್ಲಾ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ. |
|
ಚಿಕಿತ್ಸೆಯ ನಂತರದ ಒಟ್ಟು ಮೊತ್ತ - ಡಿಜಿಟ್ ವಿಶೇಷಚಿಕಿತ್ಸೆಯ ನಂತರ, ಡಿಸ್ಚಾರ್ಜ್ ಆಗುವ ಸಮಯದಲ್ಲಿ ನಿಮ್ಮ ಎಲ್ಲಾ ಮೆಡಿಕಲ್ ವೆಚ್ಚಗಳನ್ನು ಸರಿದೂಗಿಸಲು ನೀವು ಬಳಸಬಹುದಾದ ಪ್ರಯೋಜನ ಇದಾಗಿದೆ. ಯಾವುದೇ ಬಿಲ್‌ಗಳ ಅಗತ್ಯವಿಲ್ಲ. ರಿಇಂಬರ್ಸ್‌ಮೆಂಟ್ ಪ್ರಕ್ರಿಯೆಯ ಮೂಲಕ ನೀವು, ಈ ಪ್ರಯೋಜನವನ್ನು ಬಳಸಲು ಅಥವಾ ಪ್ರಮಾಣಿತ ಚಿಕಿತ್ಸಾ ನಂತರದ ಪ್ರಯೋಜನವನ್ನು ಬಳಸಲು ಆಯ್ಕೆ ಮಾಡಬಹುದು. |
|
ಸೈಕ್ರಿಯಾಟ್ರಿ ಇಲ್ ನೆಸ್ ಕವರ್ಆಘಾತದ ಕಾರಣ, ವ್ಯಕ್ತಿಯೊಬ್ಬರನ್ನು ಮನೋವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾದರೆ, ಅದು ಈ ಪ್ರಯೋಜನದ ಅಡಿಯಲ್ಲಿ ಕವರ್ ಆಗುತ್ತದೆ. ಆದಾಗ್ಯೂ, ಓ.ಪಿ.ಡಿ ಕನ್ಸಲ್ಟೇಶನ್‌ಗಳು ಪಾಲಿಸಿಯ ಅಡಿಯಲ್ಲಿ ಕವರ್ ಆಗುವುದಿಲ್ಲ. |
|
ಬ್ಯಾರಿಯಾಟ್ರಿಕ್ ಸರ್ಜಸ್ಥೂಲಕಾಯತೆ (BMI > 35) ಕಾರಣದಿಂದಾಗಿ ಅಂಗಾಂಗ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಈ ಕವರೇಜ್ ಇದೆ. ಆದಾಗ್ಯೂ, ಸ್ಥೂಲಕಾಯತೆಯು ತಿನ್ನುವ ಅಸ್ವಸ್ಥತೆಗಳು, ಹಾರ್ಮೋನುಗಳು ಅಥವಾ ಯಾವುದೇ ಇತರ ಚಿಕಿತ್ಸೆಗೊಳಪಡುವ ಪರಿಸ್ಥಿತಿಗಳಿಂದಾಗಿ ಬಂದಿದ್ದರೆ, ಈ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡಲಾಗುವುದಿಲ್ಲ. |
|
Get Quote |
ಏನೆಲ್ಲಾ ಕವರ್ ಮಾಡುವುದಿಲ್ಲ?
ಅಸ್ತಿತ್ವದಲ್ಲಿರುವ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಕ್ಲೈಮ್ ಮೊತ್ತವನ್ನು ನೀವು ಈಗಾಗಲೇ ಮುಗಿಸಿದ್ದರೆ ಆಗಷ್ಟೇ ನೀವು ನಿಮ್ಮ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಕ್ಲೈಮ್ ಮಾಡಬಹುದು. ಅಥವಾ ನೀವು ಈಗಾಗಲೇ ನಿಮ್ಮ ಜೇಬಿನಿಂದ ಡಿಡಕ್ಟಿಬಲ್ ಮೊತ್ತವನ್ನು ಖರ್ಚು ಮಾಡಿದ್ದರೆ, ಆಗ ಮಾತ್ರ ನಿಮ್ಮ ಟಾಪ್-ಅಪ್ ಇನ್ಶೂರೆನ್ಸ್‌ನಲ್ಲಿ ನೀವು ಕ್ಲೈಮ್ ಮಾಡಬಹುದು. ಆದಾಗ್ಯೂ ಖುಷಿಯ ವಿಷಯವೇನೆಂದರೆ, ನೀವು ಒಮ್ಮೆ ಮಾತ್ರ ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಪಾವತಿಸುತ್ತೀರಿ.
ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಯ ಸಂದರ್ಭದಲ್ಲಿ, ವೇಟಿಂಗ್ ಪೀರಿಯಡ್ ಮುಗಿಯದ ಹೊರತು, ಆ ಕಾಯಿಲೆ ಅಥವಾ ಅನಾರೋಗ್ಯದ ಬಗ್ಗೆ ಕ್ಲೈಮ್ ಮಾಡಲು ಸಾಧ್ಯವಿಲ್ಲ.
ನೀವು ಆಸ್ಪತ್ರೆಗೆ ದಾಖಲಾದ ಯಾವುದೇ ಸ್ಥಿತಿಯು, ವೈದ್ಯರ ಪ್ರಿಸ್ಕ್ರಿಪ್ಷನ್‌ಗೆ ಹೊಂದಿಕೆಯಾಗದೇ ಇದ್ದರೆ, ಅದನ್ನು ಪಾಲಿಸಿಯ ಕವರ್ ಮಾಡುವುದಿಲ್ಲ.
ಆಸ್ಪತ್ರೆಗೆ ದಾಖಲಾಗಲು ಕಾರಣವಾಗದ ಹೊರತು, ಪ್ರೀ-ನೇಟಲ್ ಮತ್ತು ಪೋಸ್ಟ್ ನೇಟಲ್ ಮೆಡಿಕಲ್ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.
ಕ್ಲೈಮ್ ಸಲ್ಲಿಸುವುದು ಹೇಗೆ?
ರಿಇಂಬರ್ಸ್‌ಮೆಂಟ್ ಕ್ಲೈಮ್‌ಗಳು - ಆಸ್ಪತ್ರೆಗೆ ದಾಖಲಾದ ಎರಡು ದಿನಗಳಲ್ಲಿ 1800-258-4242 ಸಂಖ್ಯೆಗೆ ಕರೆ ಮಾಡಿ ನಮಗೆ ವಿಷಯ ತಿಳಿಸಿ ಅಥವಾ healthclaims@godigit.com ಗೆ ಇಮೇಲ್ ಮಾಡಿ ನಮಗೆ ಮಾಹಿತಿ ನೀಡಿ. ನಾವು ನಿಮಗೊಂದು ಲಿಂಕ್ ಕಳುಹಿಸುತ್ತೇವೆ. ಆ ಲಿಂಕ್‌ನಲ್ಲಿ ನಿಮ್ಮ ಆಸ್ಪತ್ರೆಯ ಬಿಲ್‌ಗಳನ್ನು ಹಾಗೂ ಸಂಬಂಧಿತ ಎಲ್ಲ ಡಾಕ್ಯುಮೆಂಟುಗಳನ್ನು ರಿಇಂಬರ್ಸ್‌ಮೆಂಟ್ ಪ್ರಕ್ರಿಯೆಗಾಗಿ ನೀವು ಅಪ್‌ಲೋಡ್ ಮಾಡಬಹುದು.
ಕ್ಯಾಶ್ ಲೆಸ್ ಕ್ಲೈಮ್‌ಗಳು - ನೆಟ್‌ವರ್ಕ್ ಆಸ್ಪತ್ರೆಯನ್ನು ಆಯ್ಕೆಮಾಡಿ. ನೆಟ್‌ವರ್ಕ್ ಆಸ್ಪತ್ರೆಗಳ ಸಂಪೂರ್ಣ ಪಟ್ಟಿಯನ್ನು ನೀವಿಲ್ಲಿ ಕಾಣಬಹುದು. ಆಸ್ಪತ್ರೆಯ ಹೆಲ್ಪ್‌ಡೆಸ್ಕ್‌ಗೆ ಇ-ಹೆಲ್ತ್ ಕಾರ್ಡ್ ಅನ್ನು ತೋರಿಸಿ ಮತ್ತು ಕ್ಯಾಶ್ ಲೆಸ್ ರಿಕ್ವೆಸ್ಟ್ ಫಾರ್ಮ್ ಅನ್ನು ಕೇಳಿ. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಕ್ಲೈಮ್ ಅನ್ನು ಆಗಲೇ ಮತ್ತು ಅಲ್ಲಿಯೇ ಪ್ರಕ್ರಿಯೆಗೊಳಿಸಲಾಗುತ್ತದೆ.
ನೀವು ಕೊರೊನಾವೈರಸ್‌ಗಾಗಿ ಕ್ಲೈಮ್ ಮಾಡಿದ್ದರೆ, ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ - ಐಸಿಎಂಆರ್‌ನ ಅಧಿಕೃತ ಕೇಂದ್ರದಿಂದ ನೀವು ಪಾಸಿಟಿವ್ ಟೆಸ್ಟ್ ರಿಪೋರ್ಟ್ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.
ನಿವೃತ್ತರಾಗಲಿರುವವರಿಗೆ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಏಕೆ ಬೇಕು?
ಪದೇ ಪದೇ ಕೇಳಲಾದ ಪ್ರಶ್ನೆಗಳು
ನಿವೃತ್ತಿಯ ನಂತರ ನಾನು ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದಾದರೆ, ಮತ್ತೇಕೆ ನಾನು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯಬೇಕು?
ನೀವೂ ಅದನ್ನೂ ಸಹ ಮಾಡಬಹುದು. ಆದಾಗ್ಯೂ, ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ತಮ್ಮದೇ ಆದ ವೇಟಿಂಗ್ ಪೀರಿಯಡ್ ಗಳೊಂದಿಗೆ ಬರುತ್ತವೆ ಎಂಬುದನ್ನು ನೀವು ನೆನಪಲ್ಲಿಡಬೇಕು.
ನೀವು ನಿವೃತ್ತರಾಗುವ ಮೊದಲು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಿ. ಏಕೆಂದರೆ ಇದರ ಮುಖ್ಯ ಪ್ರಯೋಜನವೆಂದರೆ, ನೀವು ವೇಟಿಂಗ್ ಪೀರಿಯಡ್ಅನ್ನು ಬೇಗನೇ ಪೂರ್ಣಗೊಳಿಸುತ್ತೀರಿ. ಟಾಪ್-ಅಪ್ ಯೋಜನೆಗಳಿಗೆ, ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳು ತುಂಬಾ ಕಡಿಮೆಯಿರುತ್ತವೆ. ಆದ್ದರಿಂದ ನೀವು ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಮುಖ್ಯವಾಗಿ, ಡಿಜಿಟ್‌ನ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ, ನಿವೃತ್ತಿಯ ನಂತರ ನೀವು ಸ್ಟ್ಯಾಂಡರ್ಡ್ ಪಾಲಿಸಿಗಾಗಿ ಸ್ವಯಂಚಾಲಿತವಾಗಿ ಅಪ್‌ಗ್ರೇಡ್ ಮಾಡಬಹುದು.
ನಾನು ನಿವೃತ್ತಿಯ ನಂತರ ನನ್ನ ಕಂಪನಿ ನೀಡಿದ್ದ ಹೆಲ್ತ್ ಇನ್ಶೂರೆನ್ಸ್ ಅನ್ನು ಬಳಸಬಹುದೇ?
ಇಲ್ಲ, ನೀವು ಕಂಪನಿಯನ್ನು ಬಿಟ್ಟಮೇಲೆ ಕಾರ್ಪೊರೇಟ್‌ಗಳು ನೀಡುವ ಎಲ್ಲಾ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ.
ಸೂಪರ್ ಟಾಪ್-ಅಪ್ ಇನ್ಶೂರೆನ್ಸ್‌ನ ಪ್ರಯೋಜನಗಳು ಯಾವುವು?
ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನ ಪ್ರಮುಖ ಪ್ರಯೋಜನವೆಂದರೆ ಅದು ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್‌ಗಿಂತ ತುಲನಾತ್ಮಕವಾಗಿ ಅಗ್ಗವಾಗಿದೆ.
ಎರಡನೆಯದಾಗಿ, ಇದು ಹೆಚ್ಚಿನ ಸಮ್ ಇನ್ಶೂರ್ಡ್, ತೆರಿಗೆ ಉಳಿತಾಯ ಮತ್ತು ನಿಮ್ಮ ವಿಷಯದಲ್ಲಿ- ಪೂರ್ಣ ಪ್ರಮಾಣದ ಯೋಜನೆಗೆ ಅಪ್‌ಗ್ರೇಡ್ ಆಗಲು ಆಯ್ಕೆ ಇತ್ಯಾದಿ ಅನೇಕ ಪ್ರಯೋಜನಗಳೊಂದಿಗೆ ಬರುತ್ತದೆ!