ಜನಶ್ರೀ ಬಿಮಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ
ಜನಶ್ರೀ ಬಿಮಾ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಲೈಫ್ ಇನ್ಶೂರೆನ್ಸ್ ಯೋಜನೆಯಾಗಿದೆ. ಈ ಲೇಖನವು ಜನಶ್ರೀ ಬಿಮಾ ಯೋಜನೆಯ ಕವರೇಜ್ ಮತ್ತು ಶಿಕ್ಷಾ ಸಹಯೋಗ್ ಯೋಜನೆಯ ಮೂಲಕ ನೀಡಲಾಗುವ ವಿವಿಧ ವಿಶೇಷ ಸೌಲಭ್ಯಗಳ ಕುರಿತು ಮಾತನಾಡುತ್ತದೆ.
ನೀವು ಈ ಯೋಜನೆಯನ್ನು ಪಡೆದುಕೊಳ್ಳಲು ಯೋಚಿಸುತ್ತಿದ್ದರೆ ಅಥವಾ ಬೇರೆಯವರಿಗೆ ವಿವರಗಳನ್ನು ನೀಡಲು ಬಯಸಿದರೆ, ನಿಮ್ಮ ಸಂದೇಹಗಳನ್ನು ನಿವಾರಿಸಲು ಈ ಲೇಖನವು ಸೂಕ್ತ ಸ್ಥಳವಾಗಿದೆ! ನಾವು ಈ ಸಂಪೂರ್ಣ ಯೋಜನೆಯನ್ನು ವಿವರವಾಗಿ ಮತ್ತು ಸಮಗ್ರವಾಗಿ ನೋಡಿ ತಿಳಿದುಕೊಂಡಿದ್ದೇವೆ.
ಜನಶ್ರೀ ಬಿಮಾ ಯೋಜನೆ ಎಂದರೇನು?
ಭಾರತ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮವು 2000 ರಲ್ಲಿ ಜನಶ್ರೀ ಬಿಮಾ ಯೋಜನೆಯನ್ನು ಪ್ರಾರಂಭಿಸಿತು. ಅವರು ಗ್ರಾಮೀಣ ಮತ್ತು ನಗರದ ಜನರಿಗೆ ಲೈಫ್ ಇನ್ಶೂರೆನ್ಸ್ ಅನ್ನು ಒದಗಿಸಲು ಈ ಯೋಜನೆಯನ್ನು ರಚಿಸಿದ್ದಾರೆ. ಬಹು ಮುಖ್ಯವಾಗಿ, ಈ ಕಾರ್ಯಕ್ರಮವು ಬಡತನ ರೇಖೆಗಿಂತ ಕೆಳಗಿರುವ ಅಥವಾ ಸ್ವಲ್ಪಮಟ್ಟಿಗೆ ಮೇಲಿರುವ ವ್ಯಕ್ತಿಗಳನ್ನು ಗುರಿಯಾಗಿಸುತ್ತದೆ.
ಪ್ರಸ್ತುತವಾಗಿ, ಈ ಯೋಜನೆಯು ನಲವತ್ತೈದು ವಿವಿಧ ಔದ್ಯೋಗಿಕ ಗುಂಪುಗಳನ್ನು ಕವರ್ ಮಾಡುತ್ತದೆ. ಇದು ಈಗ ಎರಡು ಹಿಂದಿನ ಪ್ರಚಲಿತ ವ್ಯವಸ್ಥೆಗಳನ್ನು ಒಳಗೊಂಡಿದೆ - ಸಾಮಾಜಿಕ ಭದ್ರತಾ ಗ್ರೂಪ್ ಇನ್ಶೂರೆನ್ಸ್ ಯೋಜನೆ ಮತ್ತು ಗ್ರಾಮೀಣ ಗ್ರೂಪ್ ಲೈಫ್ ಇನ್ಶೂರೆನ್ಸ್ ಯೋಜನೆ.
ಜನಶ್ರೀ ಬಿಮಾ ಯೋಜನೆ ಏನು ಎಂಬುದರ ಕುರಿತು ನಿಮ್ಮ ತಿಳುವಳಿಕೆಯನ್ನು ಇದು ಸ್ಪಷ್ಟಪಡಿಸಿದೆ ಎಂದು ನಾವು ಭಾವಿಸುತ್ತೇವೆ!
ಜನಶ್ರೀ ಬಿಮಾ ಯೋಜನೆಯ ವೈಶಿಷ್ಟ್ಯಗಳೇನು?
ಜನಶ್ರೀ ಬಿಮಾ ಯೋಜನೆಯ ಕೆಲವು ಪ್ರಮುಖ ವೈಶಿಷ್ಟ್ಣಗಳು ಈ ಕೆಳಗಿನಂತಿವೆ:
- ಇದು ಎಲ್ಐಸಿ ಸಹಯೋಗದಲ್ಲಿ ಪ್ರಾರಂಭವಾದ ಒಂದು ಸರ್ಕಾರಿ ಇನ್ಶೂರೆನ್ಸ್ ಯೋಜನೆ ಯಾಗಿದೆ.
- ಈ ಕಾರ್ಯಕ್ರಮವು ಬಡತನ ರೇಖೆಗಿಂತ ಸ್ವಲ್ಪಮಟ್ಟಕ್ಕೆ ಮೇಲಿರುವ ಅಥವಾ ಅದಕ್ಕಿಂತ ಕೆಳಗಿರುವ ಜನರನ್ನು ಗುರಿಯಾಗಿರಿಸಿಕೊಳ್ಳುತ್ತದೆ.
- ಪ್ರತಿ ವ್ಯಕ್ತಿಗೆ ಪ್ರೀಮಿಯಂ ರೂ. 200 ಆಗಿರುತ್ತದೆ.
- ಒಬ್ಬ ಅರ್ಜಿದಾರ ಅಥವಾ ರಾಜ್ಯ ಸರ್ಕಾರ ಅಥವಾ ನೋಡಲ್ ಏಜೆನ್ಸಿಯು ಪ್ರೀಮಿಯಂನ ಸುಮಾರು 50% ಅನ್ನು ಪಾವತಿಸುತ್ತದೆ.
- ಸಾಮಾಜಿಕ ಭದ್ರತಾ ನಿಧಿಯು ಉಳಿದ 50% ಅನ್ನು ಪಾವತಿಸುತ್ತದೆ.
- ಸ್ವ-ಸಹಾಯ ಗುಂಪುಗಳು, ಎನ್‌ಜಿಒಗಳು, ಪಂಚಾಯತ್‌ಗಳು ಅಥವಾ ಇತರ ಸಾಂಸ್ಥಿಕ ಏಜೆನ್ಸಿಗಳನ್ನು ನೋಡಲ್ ಏಜೆನ್ಸಿಗಳೆಂದು ಪರಿಗಣಿಸಬಹುದು.
- ಜನಶ್ರೀ ಬಿಮಾ ಯೋಜನೆಯು ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಒಂದು ಅನನ್ಯ ಸೇವೆಯನ್ನು ಒದಗಿಸುತ್ತದೆ. ಒಂದು ವರ್ಷಕ್ಕೆ ರೂ.30,000 ವನ್ನು ನೀಡಿ, ಈ ಯೋಜನೆಯು ಅವರ ಮಕ್ಕಳ ಶಿಕ್ಷಣದಲ್ಲಿ ಅವರಿಗೆ ಸಹಾಯ ಮಾಡುತ್ತದೆ.
- ಜೆಬಿವೈ ಯಲ್ಲಿ ಭಾಗವಹಿಸುವ ಪೋಷಕರ ಮಕ್ಕಳಿಗಾಗಿ ಸಹ ಇದರಲ್ಲಿ ಒಂದು ಅವಕಾಶವಿದೆ. 11 ಅಥವಾ 12 ನೇ ತರಗತಿಗಳಲ್ಲಿ ಓದುತ್ತಿರುವ ಪ್ರತಿ ಮನೆಯ ಇಬ್ಬರು ಮಕ್ಕಳು ಪ್ರತಿ ಆರು ತಿಂಗಳಿಗೊಮ್ಮೆ 600 ರೂ ಗಳ ಸ್ಕಾಲರ್‌ಶಿಪ್ ಅನ್ನು ಕ್ಲೈಮ್ ಮಾಡಬಹುದಾಗಿದೆ.
ಜನಶ್ರೀ ಬಿಮಾ ಯೋಜನೆಯ ಪ್ರಯೋಜನಗಳೇನು?
ಯಾವುದೇ ಯೋಜನೆಯನ್ನು ಆಯ್ಕೆಮಾಡುವ ಮೊದಲು, ಜನರು ಯಾವಾಗಲೂ ಅದನ್ನು ಸೇರುವಾಗ ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಜನಶ್ರೀ ಬಿಮಾ ಯೋಜನೆಯ ಕೆಲವು ಪ್ರಯೋಜನಗಳು ಇಲ್ಲಿವೆ.
- ಸಹಜ ಸಾವಿನ ಸಂದರ್ಭದಲ್ಲಿ ಒಬ್ಬ ಫಲಾನುಭವಿಗೆ ರೂ.30,000 ದೊರೆಯುತ್ತದೆ.
- ಅಪಘಾತದಿಂದಾದ ಮರಣ ಅಥವಾ ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ, ನೀಡಲಾಗುವ ಪರಿಹಾರವು ರೂ. 75,000 ಆಗಿದೆ.
- ಅಪಘಾತದಿಂದಾದ ಭಾಗಶಃ ಅಂಗವೈಕಲ್ಯಕ್ಕೆ, ಸಿಗುವ ಮೊತ್ತವು ರೂ. 37,500 ಆಗಿದೆ.
ಜನಶ್ರೀ ಬಿಮಾ ಯೋಜನೆಯು ಒದಗಿಸುವ ಕೆಲವು ವಿಶೇಷ ಯೋಜನೆಗಳು ಯಾವುವು?
ಈ ಜೆಬಿವೈ ಕಾರ್ಯಾಕ್ರಮವು ಇನ್ಶೂರೆನ್ಸ್ ಕವರೇಜ್ ಹೊರತಾಗಿ ಕೆಲವು ವಿಶೇಷ ರಿಯಾಯಿತಿಗಳನ್ನು ಸಹ ನೀಡುತ್ತದೆ. ಅವು ಈ ಕೆಳಗಿನಂತಿವೆ:
ಮಹಿಳಾ ಎಸ್ ಎಚ್ ಜಿ (ಸ್ವ-ಸಹಾಯ ಗುಂಪುಗಳು) ಬಗ್ಗೆ ಅಗತ್ಯ ವಿವರಗಳು
ಈ ಯೋಜನೆಯು ಇದರಲ್ಲಿ ಭಾಗವಹಿಸುವ ಮಹಿಳೆಯರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ಟರ್ಮ್ ಇನ್ಶೂರೆನ್ಸ್ ಯೋಜನೆಯು ರೂ. 30,000 ದ ಕವರೇಜ್ ಅನ್ನು ನೀಡುತ್ತದೆ. ಈ ಮೊತ್ತವನ್ನು ಒಂದು ವರ್ಷಕ್ಕಾಗಿ ನೀಡಲಾಗುತ್ತದೆ. ಫಲಾನುಭವಿಗಳು ರೂ.200 ಅನ್ನು ವಾರ್ಷಿಕ ಪ್ರೀಮಿಯಂ ಆಗಿ ಪಾವತಿಸಬೇಕಾಗುತ್ತದೆ. ಮಹಿಳಾ ಸದಸ್ಯೆ ರೂ.100 ಅನ್ನು ಪಾವತಿಸುತ್ತಾರೆ ಮತ್ತು ಎಲ್ಐಸಿ ಉಳಿದ ರೂ.100 ಅನ್ನು ಪಾವತಿಸುತ್ತದೆ.
ಶಿಕ್ಷಾ ಸಹಯೋಗ್ ಯೋಜನೆಯ ಕುರಿತು ಅಗತ್ಯ ವಿವರಗಳು
ಈ ಯೋಜನೆಯು ಕೆಲವು ಮಕ್ಕಳನ್ನು ಮಾತ್ರ ಕವರ್ ಮಾಡುತ್ತದೆ. ಅವರ ಪೋಷಕರು ಜೆಬಿವೈ ಯ ಸದಸ್ಯರಾಗಿರಬೇಕು. 11 ಮತ್ತು 12 ನೇ ತರಗತಿಯಲ್ಲಿರುವವರಿಗೆ ಪ್ರತಿ ಆರು ತಿಂಗಳಿಗೊಮ್ಮೆ ರೂ.600 ರ ಸ್ಕಾಲರ್‌ಶಿಪ್ ಅನ್ನು ಪಾವತಿಸಲಾಗುತ್ತದೆ. ಈ ಸ್ಕಾಲರ್‌ಶಿಪ್ ಅನ್ನು ಪ್ರತಿ ಮನೆಯ ಎರಡು ಮಕ್ಕಳಿಗೆ ಮಾತ್ರ ನೀಡಲಾಗುತ್ತದೆ.
ಜನಶ್ರೀ ಬಿಮಾ ಯೋಜನೆಯಲ್ಲಿ ಕವರ್ ಆಗಿರುವ ವಿವಿಧ ಗುಂಪುಗಳು ಯಾವುವು?
ಜೆಬಿವೈ ಗ್ರೂಪ್ ಸುಮಾರು ನಲವತ್ತೈದು ವಿವಿಧ ವರ್ಗಗಳ ಕಾರ್ಮಿಕರನ್ನು ಕವರ್ ಮಾಡುತ್ತದೆ. ಅವುಗಳನ್ನು ಕೆಳಗೆ ನೀಡಲಾದ ಕೋಷ್ಟಕದಲ್ಲಿ ತೋರಿಸಲಾಗಿದೆ.
ಕಾರ್ಮಿಕರ 45 ವರ್ಗಗಳ ಪಟ್ಟಿ:
- ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು
- ಬೀಡಿ ಕಾರ್ಮಿಕರು
- ಕೃಷಿಕರು
- ಇಟ್ಟಿಗೆ ಗೂಡು ಕೆಲಸಗಾರರು
- ತೋಟದ ಕಾರ್ಮಿಕರು
- ಮೀನುಗಾರರು
- ಕಾಗದದ ಉತ್ಪನ್ನಗಳ ತಯಾರಕರು
- ವಿದ್ಯುತ್ ಕೈಮಗ್ಗ ನೇಕಾರರು
- ದೈಹಿಕ ಅಂಗವಿಕಲರಾಗಿರುವ ಸ್ವಯಂ ಉದ್ಯೋಗಿ ವ್ಯಕ್ತಿಗಳು
- ಬಡಗಿಗಳು
- ಸೇವಾ(SEWA) ದಲ್ಲಿ ಲಗತ್ತಿಸಲಾದ ಪಾಪಡ್ ಕೆಲಸಗಾರರು
- ಮಣ್ಣಿನ ಆಟಿಕೆ ತಯಾರಕರು
- ತೆಂಗಿನಕಾಯಿ ಸಂಸ್ಕಾರಕರು
- ಪ್ರಿಂಟಿಂಗ್ ಪ್ರೆಸ್ ಕಾರ್ಮಿಕರು
- ಗ್ರಾಮೀಣ ಬಡವರು
- ನಗರ ಬಡವರಿಗಾಗಿ ಯೋಜನೆ
- ರಬ್ಬರ್ ಮತ್ತು ಕಲ್ಲಿದ್ದಲು ಉತ್ಪಾದಿಸುವ ಕಂಪನಿಗಳಲ್ಲಿ ಕೆಲಸ ಮಾಡುವವರು
- ಮೇಣದಬತ್ತಿಯಂತಹ ರಾಸಾಯನಿಕ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಲ್ಲಿನ ಕೆಲಸಗಾರರು
- ಪ್ರಾಥಮಿಕ ಹಾಲು ಉತ್ಪಾದಕರು
- ನಿರ್ಮಾಣ ಕಾರ್ಮಿಕರು
- ಪಟಾಕಿ ಕಾರ್ಮಿಕರು
- ಸ್ವಚ್ಚತಾ ಕರಮಚಾರಿಗಳು
- ಚಮ್ಮಾರರು
- ಉಪ್ಪು ಉತ್ಪಾದಿಸುವ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು
- ಖಂಡಸಾರಿ/ಸಕ್ಕರೆಯಂತಹ ಆಹಾರ ಪದಾರ್ಥಗಳನ್ನು ತಯಾರಿಸುವ ಕಂಪನಿಗಳಲ್ಲಿನ ಕೆಲಸಗಾರರು
- ರಿಕ್ಷಾ ಚಾಲಕರು/ಆಟೋ ಚಾಲಕರು
- ಕೈಮಗ್ಗ ನೇಕಾರರು
- ಗುಡ್ಡಗಾಡು ಪ್ರದೇಶದ ಮಹಿಳೆಯರು
- ಕೈಮಗ್ಗ ಮತ್ತು ಖಾದಿ ನೇಕಾರರು
- ತಾಳೆ ರಸ ತೆಗೆಯುವವರು
- ಜವಳಿ
- ತೆಂಡು ಎಲೆ ಸಂಗ್ರಾಹಕರು
- ಅರಣ್ಯ ಕಾರ್ಮಿಕರು
- ಕರಕುಶಲ ಕಾರ್ಮಿಕರು
- ಹಮಾಲರು
- ರೇಷ್ಮೆ ಕೃಷಿ
- ಕುರಿ ಸಾಕಣೆದಾರರು
- ಸಾರಿಗೆ ಚಾಲಕರ ಸಂಘದ ಸದಸ್ಯರು
- ಕೊತ್ವಾಲರು
- ಚರ್ಮದ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು
- ಮಹಿಳಾ ಟೈಲರ್ ಗಳು
- ಚರ್ಮದ ಟ್ಯಾನರಿ ಕಾರ್ಮಿಕರು
- ಸಾರಿಗೆ ಕರಮಚಾರಿಗಳು
- ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು
- ಎಸ್ ಎಚ್ ಜಿ ಗೆ ಸೇರಿರುವ ಮಹಿಳೆಯರು
ಜನಶ್ರೀ ಬಿಮಾ ಯೋಜನೆಗೆ ಅರ್ಹತೆಯ ಮಾನದಂಡಗಳು ಯಾವುವು?
ಜೆಬಿವೈ ಗಾಗಿ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ.
- ವ್ಯಕ್ತಿಯ ವಯಸ್ಸು 18 ರಿಂದ 59 ವರ್ಷಗಳ ನಡುವೆ ಇರಬೇಕು.
- ಒಬ್ಬ ವ್ಯಕ್ತಿಯು ಬಡತನ ರೇಖೆಗಿಂತ ಕೆಳಗೆ ಅಥವಾ ಸ್ವಲ್ಪಮಟ್ಟಿಗೆ ಮೇಲಿರಬೇಕು.
- ಸದಸ್ಯತ್ವದ ಗಾತ್ರವು ಕನಿಷ್ಠ 25 ಆಗಿರಬೇಕು.
- ಯಾವುದೇ ನೋಡಲ್ ಏಜೆನ್ಸಿ ಅಥವಾ ವೃತ್ತಿಪರ ಗುಂಪಿನ ಸದಸ್ಯರಿಗೆ ಆದ್ಯತೆ ಇರುತ್ತದೆ.
ಜನಶ್ರೀ ಬಿಮಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಜನಶ್ರೀ ಬಿಮಾ ಯೋಜನೆ ಆನ್‌ಲೈನ್ ಅರ್ಜಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಲು ಮತ್ತು ಮುದ್ರಿಸಲು ನೀವು ಈ ಲಿಂಕ್ ಅನ್ನು ಬಳಸಬಹುದು - https://www.pdffiller.com/29825639-fillable-janshri-bima-yojanamp-form. ಅಲ್ಲದೆ, ಒಬ್ಬ ವ್ಯಕ್ತಿಯು ನೋಡಲ್ ಏಜೆನ್ಸಿ ಅಥವಾ ಅವನು/ಅವಳು ಭಾಗವಾಗಿರುವ ಸ್ವ-ಸಹಾಯ ಗುಂಪಿನ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನೊಂದು ಮಾರ್ಗವೆಂದರೆ ಯಾವುದೇ ಎಲ್‌ಐಸಿ ಕಚೇರಿ ಮೂಲಕ ಅರ್ಜಿ ಸಲ್ಲಿಸುವುದು.
ಜನಶ್ರೀ ಬಿಮಾ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಇನ್ಶೂರೆನ್ಸ್ ಪಾಲಿಸಿಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಹ ಆರ್ಥಿಕ ನೆರವನ್ನು ನೀಡುವ ಮೂಲಕ ಪ್ರಯೋಜನಕಾರಿಯಾಗಿದೆ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಜನಶ್ರೀ ಬಿಮಾ ಯೋಜನೆ ಒಂದು ಲೈಫ್ ಇನ್ಶೂರೆನ್ಸ್ ಯೋಜನೆಯೇ?
ಇಲ್ಲ, ಇದು ಅಪಘಾತದ ಕಾರಣ ಶಾಶ್ವತ ಅಥವಾ ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ ಸಹ ಹಣಕಾಸಿನ ನೆರವು ನೀಡುತ್ತದೆ. ಆದ್ದರಿಂದ, ಈ ಯೋಜನೆಯು ವ್ಯಕ್ತಿಯ ಮರಣವನ್ನು ಮಾತ್ರ ಕವರ್ ಮಾಡುವುದಿಲ್ಲ.
ಜನಶ್ರೀ ಬಿಮಾ ಯೋಜನೆಗೆ ಜಿಎಸ್‌ಟಿಯಿಂದ ವಿನಾಯಿತಿ ಇದೆಯೇ?
ಹೌದು, ಭಾಗವಹಿಸುವಿಕೆಯನ್ನು ಸುಧಾರಿಸುವ ಸರ್ಕಾರದ ಗುರಿಯ ಭಾಗವಾಗಿ ಈ ಯೋಜನೆಯು ಜಿಎಸ್‌ಟಿ ಯಿಂದ ವಿನಾಯಿತಿ ಪಡೆದಿದೆ.
ಜನಶ್ರೀ ಬಿಮಾ ಯೋಜನೆಯಡಿ ಕವರೇಜ್ ಅವಧಿ ಎಷ್ಟಾಗಿರುತ್ತದೆ?
ಜೆಬಿವೈ ಯೋಜನೆಯ ಅವಧಿಯು 1 ವರ್ಷವಾಗಿರುತ್ತದೆ.