ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಬಗ್ಗೆ ಸಂಪೂರ್ಣ ಮಾಹಿತಿ

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳು ಈ ಯೋಜನೆಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯ ಪ್ರಾಥಮಿಕ ಉದ್ದೇಶ, ಕಡಿಮೆ ಆದಾಯದ ಕುಟುಂಬಗಳಿಗೆ ಆರೋಗ್ಯ ಸೇವೆಗಳನ್ನು ಪಡೆಯಲು ಹಣಕಾಸಿನ ಸಹಾಯವನ್ನು ಒದಗಿಸುವುದು.

ಈ ಯೋಜನೆಯ ಪ್ರಾಥಮಿಕ ಉದ್ದೇಶ, ಕಡಿಮೆ ಆದಾಯದ ಕುಟುಂಬಗಳಿಗೆ ಆರೋಗ್ಯ ಸೇವೆಗಳನ್ನು ಪಡೆಯಲು ಹಣಕಾಸಿನ ಸಹಾಯವನ್ನು ಒದಗಿಸುವುದು. ಆಂಧ್ರಪ್ರದೇಶವು 2014 ರಲ್ಲಿ ಎರಡು ರಾಜ್ಯಗಳಾಗಿ ವಿಭಜನೆಯಾಗುವ ಮೊದಲು ಅಂದಿನ ಮುಖ್ಯಮಂತ್ರಿ ಡಾ ವೈಎಸ್ಆರ್ ರೆಡ್ಡಿಯವರು ಇದನ್ನು 2007 ರಲ್ಲಿ ಪ್ರಾರಂಭಿಸಿದರು.

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಮತ್ತು ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ!

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಎಂದರೇನು?

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಸಾಮಾನ್ಯ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಪಡೆಯಲು ಸಾಧ್ಯವಾಗದ ಜನರಿಗೆ ವೈದ್ಯಕೀಯ ಕವರೇಜನ್ನು ಖಚಿತಪಡಿಸುತ್ತದೆ.

ಇದು ಪ್ರತಿ ಕುಟುಂಬಕ್ಕೆ ವಾರ್ಷಿಕ ₹5 ಲಕ್ಷಗಳವರೆಗಿನ ಕವರೇಜ್‌ನೊಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಆರೋಗ್ಯ ಕಾರ್ಡ್ ಅನ್ನು ವಿತರಿಸುತ್ತದೆ. ಫಲಾನುಭವಿಗಳು ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಪಡೆಯಲು ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕಾರ್ಡ್ ಅನ್ನು ತೋರಿಸಬಹುದು. ಹಿರಿಯ ಐಎಎಸ್ ಅಧಿಕಾರಿಯನ್ನು ಸಿಇಒ ಆಗಿ ನೇಮಿಸಲಾಗುತ್ತದೆ ಮತ್ತು ಅವನು/ಅವಳು ಯೋಜನೆಯ ಒಟ್ಟಾರೆ ಅನುಷ್ಠಾನವನ್ನು ನಿಯಂತ್ರಿಸುತ್ತಾರೆ.

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ವೈಶಿಷ್ಟ್ಯಗಳೇನು?

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ನಿರ್ವಹಿಸುವ ಯೋಜನೆಯ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

  • ಕ್ಯಾಶ್‌ಲೆಸ್ ಹೆಲ್ತ್ ಕೇರ್  - ಈ ಇನ್ಶೂರೆನ್ಸ್ ಯೋಜನೆಯು ಫಲಾನುಭವಿ ಮತ್ತು ಅವರ ರಿಜಿಸ್ಟರ್ಡ್ ಕುಟುಂಬಕ್ಕೆ, ಸುಮಾರು ₹5 ಲಕ್ಷಗಳ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

  • ಒಳರೋಗಿ ಹೆಲ್ತ್ ಕೇರ್  - ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಇನ್ಶೂರೆನ್ಸ್ ಯೋಜನೆಯು, ಕಾರ್ಯಕ್ರಮದ ಅಡಿಯಲ್ಲಿ ಸೂಚಿಸಲಾದ ಕಾಯಿಲೆಗಳು ಹಾಗೂ ಚಿಕಿತ್ಸಾ ಪಟ್ಟಿಯಲ್ಲಿರುವ, ಒಳರೋಗಿಯ ಚಿಕಿತ್ಸೆಯನ್ನು ಕವರ್ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಆಸ್ಪತ್ರೆಯ ವೆಚ್ಚಗಳನ್ನು ಸಹ ಕವರ್ ಮಾಡುತ್ತದೆ.

  • ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಕವರ್  - ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಇನ್ಶೂರೆನ್ಸ್ ಯೋಜನೆಯಡಿಯಲ್ಲಿ, ಇಡೀ ಕುಟುಂಬವು ಕವರ್ ಆಗುತ್ತದೆ. ಯಾವುದೇ ಸದಸ್ಯರಿಗೆ ಪ್ರತ್ಯೇಕ ಕವರ್ ಖರೀದಿಸುವಅಗತ್ಯವಿಲ್ಲ.

  • ಹೊರರೋಗಿಗಳ ಹೆಲ್ತ್ ಕೇರ್  - ಒಳರೋಗಿಗಳ ಆರೈಕೆಯ ಜೊತೆಗೆ, ಈ ಕಾರ್ಯಕ್ರಮವು ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಶಿಬಿರಗಳಲ್ಲಿ ಹೊರರೋಗಿಗಳ ಆರೈಕೆಯನ್ನು ಸಹ ನೀಡುತ್ತದೆ.

  • ಫಾಲೋ-ಅಪ್ ಚಿಕಿತ್ಸೆಗಳು  - ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ಇನ್ಶೂರೆನ್ಸ್ ಯೋಜನೆಯ ಅತ್ಯುತ್ತಮ ವೈಶಿಷ್ಟ್ಯವೆಂದರೆ,ವ್ಅದು ಫಾಲೋ-ಅಪ್ ಚಿಕಿತ್ಸೆಗಳು ಮತ್ತು ಪ್ರಕ್ರಿಯೆಗಳನ್ನು ಸಹ ಕವರ್ ಮಾಡುತ್ತದೆ.

  • ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಯ ಕವರೇಜ್  - ಮೇಲಾಗಿ, ಈ ಯೋಜನೆಗೆ ರಿಜಿಸ್ಟರ್ ಮಾಡುವ ಮೊದಲು ಫಲಾನುಭವಿಯು ಈಗಾಗಲೇ ನಿರ್ದಿಷ್ಟ ಕಾಯಿಲೆಯಿಂದ ಬಳಲುತ್ತಿದ್ದರೆ, ಅವನು ಅದರ ಚಿಕಿತ್ಸೆಗಾಗಿ ಕವರೇಜ್ ಪಡೆಯಬಹುದು. ಕಮರ್ಷಿಯಲ್ ಆಗಿ ಲಭ್ಯವಿರುವ ಇತರ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಈ ವೈಶಿಷ್ಟ್ಯವು ವಿಶೇಷವಾಗಿದೆ.

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ಪ್ರಯೋಜನಗಳೇನು?

ನಿಸ್ಸಂದೇಹವಾಗಿ, ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಯೋಜನೆಯು ಆ ರಾಜ್ಯದ ನಾಗರಿಕರ ಹೃದಯವನ್ನು ಗೆದ್ದಿದೆ. ಅನೇಕ ಅಮೂಲ್ಯವಾದ ಪ್ರಯೋಜನಗಳು ಈ ಉಪಕ್ರಮವನ್ನು ಎದ್ದು ಕಾಣುವಂತೆ ಮಾಡುತ್ತವೆ. ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ಪ್ರಯೋಜನಗಳು ಈ ಕೆಳಗಿನಂತಿವೆ:

  • ಪ್ರತಿ ಕುಟುಂಬಕ್ಕೆ ವಾರ್ಷಿಕ ₹5 ಲಕ್ಷ
  • ಸರ್ಕಾರಿ ಆಸ್ಪತ್ರೆಗಳಿಂದ ಉಚಿತ ಆರೋಗ್ಯ ಸೇವೆ.
  • ಡಿಸ್ಚಾರ್ಜ್ ನಂತರದ 1ನೇ ದಿನದಿಂದ 10 ದಿನಗಳವರೆಗೆ ಕ್ಯಾಶ್‌ಲೆಸ್ ಚಿಕಿತ್ಸೆ.
  • ಚಿಕಿತ್ಸೆಗಳಿಗೆ ಒಳಗಾಗುವ ರೋಗಿಗಳಿಗೆ, ಡಿಸ್ಚಾರ್ಜ್ ನಂತರದ 30 ದಿನಗಳವರೆಗೆ ಕ್ಯಾಶ್‌ಲೆಸ್ ಚಿಕಿತ್ಸೆ.
  • ಈ ಯೋಜನೆಯು ರೋಗಿಯ ಸಾರಿಗೆ ಮತ್ತು ಆಹಾರದ ವೆಚ್ಚವನ್ನು ಕವರ್ ಮಾಡುತ್ತದೆ.

ಇವು ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ಕೆಲವು ಪ್ರಮುಖ ಪ್ರಯೋಜನಗಳಾಗಿವೆ.

ಡಾ ವೈಎಸ್‌ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ಯೋಜನೆಯ ಅಡಿಯಲ್ಲಿ ಯಾವ ಚಿಕಿತ್ಸೆಗಳನ್ನು ಕವರ್ ಮಾಡಲಾಗುತ್ತದೆ?

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ನಿರ್ದಿಷ್ಟವಾದ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ. ಒಟ್ಟಾರೆಯಾಗಿ, 30 ವಿಭಾಗಗಳ ಅಡಿಯಲ್ಲಿ 2434 ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳು ಈ ಯೋಜನೆಯಲ್ಲಿ ಲಭ್ಯವಿವೆ.

ಸಾಮಾನ್ಯ ಶಸ್ತ್ರಚಿಕಿತ್ಸೆಗಳು ಮತ್ತು ಕ್ರಿಟಿಕಲ್ ಚಿಕಿತ್ಸೆಗಳ ವಿವರವಾದ ಪಟ್ಟಿ ಇಲ್ಲಿದೆ. ಅಲ್ಲದೆ, ಈ ಕಾರ್ಯಕ್ರಮದ ಅಡಿಯಲ್ಲಿ, ಯೋಜನೆಯಲ್ಲಿ ಕವರ್ ಆಗದ ಹೊರಗಿಡುವಿಕೆಗಳ ಪಟ್ಟಿಯನ್ನು ನೋಡಿ.

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ಅಡಿಯಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆಗಳು

ಈ ಯೋಜನೆಯು ಕವರ್ ಮಾಡುವ ಸಾಮಾನ್ಯ ಶಸ್ತ್ರಚಿಕಿತ್ಸೆಗಳ ಪಟ್ಟಿ

  • ಆರ್ಥೋಪೆಡಿಕ್ ಶಸ್ತ್ರಚಿಕಿತ್ಸೆಗಳು ಮತ್ತು ಪ್ರಕ್ರಿಯೆಗಳು

  • ನೇತ್ರವಿಜ್ಞಾನ

  • ಇಎನ್‌ಟಿ ಶಸ್ತ್ರಚಿಕಿತ್ಸೆ

  • ಸ್ತ್ರೀರೋಗ ವಿಭಾಗ ಮತ್ತು ಪ್ರಸೂತಿ

  • ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ

  • ಮೆಡಿಕಲ್ ಆಂಕೊಲಾಜಿ

  • ಪ್ಲಾಸ್ಟಿಕ್ ಸರ್ಜರಿ

  • ಮೆಕೆಲ್‌ನ ಡೈವರ್ಟಿಕ್ಯುಲಮ್ ಅನ್ನು ತೆಗೆದುಹಾಕುವಿಕೆ

  • ಸೆಪ್ಟೋರಿನೋಪ್ಲ್ಯಾಸ್ಟಿ

  • ಬೋನ್ ಟ್ಯೂಮರ್ ಶಸ್ತ್ರಚಿಕಿತ್ಸೆ, ಆಂತರಿಕ ಸ್ಥಿರೀಕರಣದೊಂದಿಗೆ ಪುನರ್ನಿರ್ಮಾಣ

  • ದಿ ನೆಕ್ ಆಫ್ ಬ್ಲ್ಯಾಡರ್ ರಿಕನ್‌ಸ್ಟ್ರಕ್ಷನ್ ಫಾರ್ ಇನ್‌ಕಾಂಟಿನೆನ್ಸ್

  • ಮೈರಿಂಗೊಪ್ಲ್ಯಾಸ್ಟಿ

  • ಆರ್ಬಿಟ್‌ನ ವಿಸ್ತರಣೆ

  • ಡ್ರಗ್-ಎಲುಟಿಂಗ್ ಸ್ಟೆಂಟ್‌ನೊಂದಿಗೆ ಕೊರೋನರಿ ಬಲೂನ್ ಆಂಜಿಯೋಪ್ಲ್ಯಾಸ್ಟಿ

  • ಓಪನ್ ರಾಡಿಕಲ್ ಪ್ರಾಸ್ಟೇಕ್ಟಮಿ

  • ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸೆಗಳು

  • ಮಕ್ಕಳ ಶಸ್ತ್ರಚಿಕಿತ್ಸೆಗಳು

  • ಜೆನಿಟೂರ್ನರಿ ಶಸ್ತ್ರಚಿಕಿತ್ಸೆಗಳು

  • ನರಶಸ್ತ್ರಚಿಕಿತ್ಸೆ

  • ಸರ್ಜಿಕಲ್ ಆಂಕೊಲಾಜಿ

  • ರೇಡಿಯೇಶನ್ ಆಂಕೊಲಾಜಿ

  • ಸೂಪರ್‌ಫಿಶಿಯಲ್ ಪರೋಟಿಡೆಕ್ಟಮಿ (ಮಾರಣಾಂತಿಕವಲ್ಲದ)

  • ರೆಕ್ಟೊಪೆಕ್ಸಿ ಓಪನ್ ವಿತ್ ಮೆಶ್ ಫಾರ್ ರೆಕ್ಟಲ್ ಪ್ರೊಲಾಪ್ಸ್

  • ಗ್ಲುಕೋಮಾ ಶಸ್ತ್ರಚಿಕಿತ್ಸೆ

  • ಎಂಫಿಸೆಮಾ ಥೋರಾಸಿಸ್‌ನ ಶಸ್ತ್ರಚಿಕಿತ್ಸೆ

  • ಎಕ್ಸಿಶನ್ ಆಫ್ ಯುರಿಟರೊಸಿಲೆ ವಿತ್ ಯುರಿಟರಿಕ್ ಇಂಪ್ಲಾಂಟೆಶನ್

  • ಮೂಳೆ ಪುನರ್ನಿರ್ಮಾಣ / ಒಳ-ಕೀಲಿನ ಮುರಿತಗಳು

  • ರೆಕ್ಟೊವಾಜಿನಲ್ ಫಿಸ್ಟುಲಾ ಮ್ಯಾನೇಜ್ಮೆಂಟ್ ವಿದೌಟ್ ಕೊಲೊಸ್ಟೊಮಿ

  • ಮಕ್ಕಳ ರೋಗಿಯಲ್ಲಿ ಸೊಂಟದ ಅಂಡವಾಯು ದುರಸ್ತಿ

  • ಲ್ಯಾಪರೊಸ್ಕೋಪಿಕ್ ಸರ್ಜಿಕಲ್ ಟ್ರೀಟ್‌ಮೆಂಟ್ ಫಾರ್ ಡ್ಯುವೋಡೆನಲ್ ಪರ್ಫೋರೇಶನ್

 

ಡಾ ವೈಎಸ್ಆರ್ಆ ರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಅಡಿಯಲ್ಲಿ ಕ್ರಿಟಿಕಲ್ ಕೇರ್ ಟ್ರೀಟ್‌ಮೆಂಟ್

ಯೋಜನೆಯು ಕವರ್ ಮಾಡುವ ಕ್ರಿಟಿಕಲ್ ಕೇರ್ ಷರತ್ತುಗಳ ಪಟ್ಟಿ

  • ಸಾಮಾನ್ಯ ಔಷಧ

  • ಪೀಡಿಯಾಟ್ರಿಕ್ಸ್

  • ನೆಫ್ರಾಲಜಿ

  • ಪಲ್ಮನೊಲಜಿ

  • ರುಮಾಟಾಲಜಿ

  • ಗ್ಯಾಸ್ಟ್ರೋಎಂಟರಾಲಜಿ

  • ಕೃತಕ ಕಾಲುಗಳು

  • ಸಾಂಕ್ರಾಮಿಕ ಕಾಯಿಲೆ

  • ಕಾರ್ಡಿಯಾಲಜಿ

  • ನ್ಯೂರೊಲಜಿ

  • ಡರ್ಮಟಾಲಜಿ

  • ಎಂಡೋಕ್ರೈನಾಲಜಿ

  • ಸೈಕಿಯಾಟ್ರಿ

  • ಪಾಲಿಟ್ರಾಮಾ

ಸ್ಕೀಮ್‌ನ ಹೊರಗಿಡುವಿಕೆಗಳು

ಯೋಜನೆಯು ಕವರ್ ಮಾಡದ ಚಿಕಿತ್ಸೆಗಳ ಪಟ್ಟಿ

  • ಕಾಮಾಲೆ

  • ಸಾಂಕ್ರಾಮಿಕ ರೋಗಗಳು

  • ಎಚ್ಐವಿ/ಏಡ್ಸ್

  • ಹೃದಯ ವೈಫಲ್ಯಕ್ಕೆ ಅಸಿಸ್ಟೆಡ್ ಡಿವೈಸ್‌ಗಳು

  • ಕುಷ್ಠರೋಗ

  • ಬೋನ್ ಮ್ಯಾರೋಗೆ ಸಂಬಂಧಿಸಿದ ಚಿಕಿತ್ಸೆಗಳು

  • ಗ್ಯಾಸ್ಟ್ರೋಎಂಟರೈಟಿಸ್

  • ಕ್ಷಯರೋಗ

  • ಕಾರ್ಡಿಯಾಕ್ ಟ್ರಾನ್ಸಪ್ಲಾಂಟೇಶನ್

  • ಲಿವರ್ ಟ್ರಾನ್ಸಪ್ಲಾಂಟೇಶನ್

  • ಫೈಲೇರಿಯಾ

  • ನ್ಯುರೋಸರ್ಜರಿಯಲ್ಲಿ ಗಾಮಾ-ನೈಫ್ ಪ್ರಕ್ರಿಯೆಗಳು

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ಯೋಜನೆಗೆ ಏನೇನು ಅರ್ಹತೆಗಳಿರಬೇಕು?

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ಯೋಜನೆಯ ಅರ್ಹತೆಗಳು ಈ ಕೆಳಗಿನಂತಿವೆ:

  • ಆಂಧ್ರ ಪ್ರದೇಶದ ನಿವಾಸಿಯಾಗಿರಬೇಕು.

  • ಇದಲ್ಲದೆ, ಅರ್ಜಿದಾರರ ಕುಟುಂಬದ ಒಂದು ವರ್ಷದ ಆದಾಯವು ₹5 ಲಕ್ಷಕ್ಕಿಂತ ಕಡಿಮೆಯಿರಬೇಕು.

  • ಅರ್ಜಿದಾರರು ಬಿಳಿ ಪಡಿತರ ಚೀಟಿಯನ್ನು ಹೊಂದಿರಬೇಕು. ಪ್ರತಿಯೊಬ್ಬ ಬಿಳಿ ಪಡಿತರ ಚೀಟಿದಾರರು ಸ್ವಯಂ ಈ ಯೋಜನೆಯಲ್ಲಿ ಕವರ್ ಆಗುತ್ತಾರೆ

  • ಹೆಚ್ಚುವರಿಯಾಗಿ, ಈ ಯೋಜನೆಯು ಅನ್ನಪೂರ್ಣ ಮತ್ತು ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳನ್ನು ಒಳಗೊಂಡಂತೆ, ಬಿಪಿಎಲ್ ಪಡಿತರ ಚೀಟಿಯಲ್ಲಿ ತಮ್ಮ ಹೆಸರು ಮತ್ತು ಭಾವಚಿತ್ರಗಳನ್ನು ಹೊಂದಿರುವ ವ್ಯಕ್ತಿಗಳನ್ನು ಕವರ್ ಮಾಡುತ್ತದೆ.

  • ಅರ್ಜಿದಾರರು 35 ಎಕರೆಗಿಂತ ಹೆಚ್ಚಿನ ಆರ್ದ್ರ ಮತ್ತು ಒಣ ಭೂಮಿಯನ್ನು ಹೊಂದಿರಬಾರದು.

  • ಅರ್ಜಿದಾರರು 3000 ಚದರ ಅಡಿಗಿಂತ ಕಡಿಮೆ ಜಾಗವನ್ನು ಹೊಂದಿರಬೇಕು.

  • ಯಾವುದೇ ಅರ್ಜಿದಾರರು ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದುವಂತಿಲ್ಲ.

  • ಖಾಸಗಿ ವಲಯದ ಉದ್ಯೋಗಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದು.

ಈ ನಿಯಮಗಳು ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಯೋಜನೆಯ ಅರ್ಹತೆಯನ್ನು ವಿವರಿಸುತ್ತದೆ.

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ಗೆ ಅಗತ್ಯವಿರುವ ಡಾಕ್ಯುಮೆಂಟುಗಳು ಯಾವುವು?

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ಗೆ ಅಗತ್ಯವಾದ ಡಾಕ್ಯುಮೆಂಟುಗಳು ಈ ಕೆಳಗಿನಂತಿವೆ:

  • ಆಧಾರ್ ಕಾರ್ಡ್

  • ವಿಳಾಸದ ಪುರಾವೆ

  • ಆದಾಯ ತೆರಿಗೆ ರಿಟರ್ನ್ಸ್ ಅಥವಾ ಆದಾಯ ಪ್ರಮಾಣಪತ್ರಗಳು

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ಗೆ ರಿಜಿಸ್ಟರ್ ಮಾಡುವುದು ಹೇಗೆ?

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ಗೆ ರಿಜಿಸ್ಟರ್ ಮಾಡಲು ಎರಡು ಮಾರ್ಗಗಳಿವೆ. ನಾವು ಈ ಕೆಳಗೆ ಆಫ್‌ಲೈನ್ ಮತ್ತು ಆನ್‌ಲೈನ್ ವಿಧಾನಗಳನ್ನು ಚರ್ಚಿಸಿದ್ದೇವೆ.

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ಗೆ ರಿಜಿಸ್ಟರ್ ಮಾಡಲು ಆಫ್‌ಲೈನ್ ವಿಧಾನ

ಆಫ್‌ಲೈನ್ ವಿಧಾನದ ಮೂಲಕ ಈ ಯೋಜನೆಗೆ ರಿಜಿಸ್ಟರ್ ಮಾಡಲು, ನೀವು ಈ ಹಂತಗಳನ್ನು ಅನುಸರಿಸಬೇಕು:

ಹಂತ 1: ವೈಎಸ್ಆರ್ ನವಸಕಂ ವೆಬ್‌ಸೈಟ್ https://navasakam2.apcfss.in/ ಗೆ ಭೇಟಿ ನೀಡಿ.

ಹಂತ 2: ಮೇಲಿನ ಟ್ಯಾಬ್‌ನಲ್ಲಿರುವ 'ಡೌನ್‌ಲೋಡ್' ಬಟನ್ ಅನ್ನು ಆಯ್ಕೆಮಾಡಿ. 

ಹಂತ 3: ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕಾರ್ಡ್ ಪರ್ಫಾರ್ಮಾ' ಮೇಲೆ ಕ್ಲಿಕ್ ಮಾಡಿ. 

ಹಂತ 4: ಯೋಜನೆಗಾಗಿ ಅಪ್ಲಿಕೇಶನ್ ಫಾರ್ಮ್ ತೆರೆಯುತ್ತದೆ. ಈ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ. 

ಹಂತ 5: ನಂತರ, ಈ ಫಾರ್ಮ್‌ನ ಪ್ರಿಂಟ್‌ಔಟ್ ತೆಗೆದುಕೊಳ್ಳಿ. 

ಹಂತ 6: ಎಲ್ಲಾ ಪೋಷಕ ಡಾಕ್ಯುಮೆಂಟುಗಳನ್ನು ಸಂಗ್ರಹಿಸಿ, ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಂಬಂಧಪಟ್ಟ ಇಲಾಖೆಗೆ ಸಬ್ಮಿಟ್ ಮಾಡಿ.

ಹಂತ 7: ಈ ಡಾಕ್ಯುಮೆಂಟ್‌ಗಳ ಪರಿಶೀಲನೆಗಾಗಿ ಕಾಯಿರಿ, ನಂತರ ವೈಎಸ್ಆರ್ ಹೆಲ್ತ್ ಕಾರ್ಡ್ ಅನ್ನು ನೀಡಲಾಗುತ್ತದೆ.

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ಗೆ ರಿಜಿಸ್ಟರ್ ಮಾಡಲು ಆನ್‌ಲೈನ್ ವಿಧಾನ

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಅಪ್ಲಿಕೇಶನ್ ಅನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಹಂತಗಳನ್ನು ಕೆಳಗೆ ನೀಡಲಾಗಿದೆ:

ಹಂತ 1: ರಿಜಿಸ್ಟರ್ ಮಾಡಲು, ನೀವು ಎರಡು ವೆಬ್‌ಸೈಟ್‌ಗಳಲ್ಲಿ ಯಾವುದಾದರೂ ಒಂದು ವೆಬ್‌ಸೈಟ್‌ಗೆ ಭೇಟಿ ನೀಡಬಹುದು: YSR ನವಸಕಮ್‌ನ ಅಧಿಕೃತ ವೆಬ್‌ಸೈಟ್ ಅಥವಾ ಗ್ರಾಮ ವಾರ್ಡ್ ಸಚಿವಾಲಯಂ ಪೋರ್ಟಲ್.

ಹಂತ 2: ನಂತರ, ಲಾಗಿನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಿಮ್ಮನ್ನು ಲಾಗಿನ್ ಪುಟಕ್ಕೆ ರಿಡೈರೆಕ್ಟ್ ಮಾಡಲಾಗುತ್ತದೆ.

ಹಂತ 3: ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಮತ್ತು 'ಆರೋಗ್ಯಶ್ರೀ ಹೆಲ್ತ್ ಕಾರ್ಡ್' ಅಪ್ಲಿಕೇಶನ್ ಫಾರ್ಮ್ ಅನ್ನು ಆಯ್ಕೆಮಾಡಿ.

ಹಂತ 4: ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.

ಹಂತ 5: ನಂತರ, ಅಗತ್ಯವಿರುವ ಪ್ರತಿ ಪೋಷಕ ಡಾಕ್ಯುಮೆಂಟುಗಳನ್ನು ಅಪ್‌ಲೋಡ್ ಮಾಡಿ.

ಹಂತ 6: ಕೊನೆಯದಾಗಿ, ಅಪ್ಲಿಕೇಶನ್ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಬ್ಮಿಟ್ ಮಾಡಿ ಮತ್ತು ರೆಫರೆನ್ಸ್‌ಗಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಕೊನೆಯದಾಗಿ ಒಂದು ಮಾತು, ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್, ಆಂಧ್ರಪ್ರದೇಶದ ಜನರಿಗೆ ಒಂದು ವರದಾನವಾಗಿದೆ. ಸಮಾಜದ ಬಡತನ ರೇಖೆಗಿಂತ ಕೆಳಗಿರುವವರು ಈ ಯೋಜನೆಯಿಂದ ಲಾಭ ಪಡೆಯುತ್ತಾರೆ. ಇದಲ್ಲದೆ, ಈ ಯೋಜನೆಯು 2000 ಕ್ಕೂ ಹೆಚ್ಚು ವೈದ್ಯಕೀಯ ಪ್ರಕ್ರಿಯೆಗಳನ್ನು ಕವರ್ ಮಾಡುತ್ತದೆ.

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಪ್ರಮುಖ ಹೈಲೈಟ್ ಏನೆಂದರೆ, ಯೋಜನೆಗೆ ರಿಜಿಸ್ಟರ್ ಮಾಡುವ ಮುನ್ನ, ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಇದು ಕವರ್ ಮಾಡುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್‌ನ ಯೋಜನೆಗೆ ರಿಜಿಸ್ಟರ್ ಮಾಡಲು ಬೇರೆ ಯಾವುದಾದರೂ ಮಾರ್ಗಗಳಿವೆಯೇ?

ಹೌದು, ಈ ಕೆಳಗಿನ ಯಾವುದೇ ಸ್ಥಳಗಳಿಗೆ ಹೋಗಿ ಮತ್ತು ವೈಯಕ್ತಿಕವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ, ಜನರು ಈ ಯೋಜನೆಗೆ ರಿಜಿಸ್ಟರ್ ಮಾಡಬಹುದು:

  • ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ ಮಿತ್ರ ಕೌಂಟರ್

  • ರೆಫರಲ್‌ಗಳ ಮೂಲಕ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನೇರ ರಿಜಿಸ್ಟ್ರೇಷನ್

  • ಪ್ರಾಥಮಿಕ ಆರೋಗ್ಯ ಅಥವಾ ನೆಟ್‌ವರ್ಕ್ ಆಸ್ಪತ್ರೆಗಳು ಆಯೋಜಿಸುವ ಆರೋಗ್ಯ ಶಿಬಿರಗಳಲ್ಲಿ

  • ರೆಫರಲ್ ಪಡೆಯಲು 'ಪ್ರಮಾಣೀಕೃತ ವೈದ್ಯಕೀಯ ಅನುಸರಣಾ ಅಧಿಕಾರಿಯನ್ನು' ಭೇಟಿ ಮಾಡುವುದು

ಆದ್ದರಿಂದ, ನೀವು ಈ ಯಾವುದೇ ಸ್ಥಳಗಳಿಗೆ ಭೇಟಿ ನೀಡಬಹುದು ಮತ್ತು ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ನೀಡಿದ ಹೆಲ್ತ್ ಕಾರ್ಡ್‌ನ ವೈಶಿಷ್ಟ್ಯಗಳು ಯಾವುವು?

ಹೆಲ್ತ್ ಕಾರ್ಡ್‌ನೊಂದಿಗೆ, ನೀವು ಚಿಕಿತ್ಸಾ ವೆಚ್ಚಗಳಿಗಾಗಿ ₹1.5 ಲಕ್ಷಗಳವರೆಗಿನ ಮರುಪಾವತಿಯನ್ನು ಪಡೆಯಬಹುದು. ನಿಮ್ಮ ಚಿಕಿತ್ಸಾ ವೆಚ್ಚವು ₹1.5 ಲಕ್ಷಗಳನ್ನು ಮೀರಿದರೆ, ಆಗ ನೀವು ಹೆಚ್ಚುವರಿ ಕ್ಲಿಯರೆನ್ಸ್ ಎಂದು ₹ 50,000ಗಳನ್ನು ಪಡೆಯುತ್ತೀರಿ. ಯಾವುದೇ ಗಂಭೀರ ಕಾಯಿಲೆಗಳಿಗೆ, ನೀವು ₹ 2 ಲಕ್ಷ ಮೌಲ್ಯದ ಕವರೇಜ್ ಅನ್ನು ಪಡೆಯುತ್ತೀರಿ.

ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ನೀವು ಅಧಿಕೃತ ವೆಬ್‌ಸೈಟ್, https://www.ysraarogyasri.ap.gov.in/ ನಿಂದ ಹೆಲ್ತ್ ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಹೋಮ್ ಪೇಜಿನಲ್ಲಿ, ಇಹೆಚ್ಎಸ್ ವಿಭಾಗಕ್ಕೆ ಹೋಗಿ ಮತ್ತು "ಡೌನ್‌ಲೋಡ್ ಹೆಲ್ತ್ ಕಾರ್ಡ್" ಬಟನ್ ಅನ್ನು ಆಯ್ಕೆ ಮಾಡಿ. ನಿಮ್ಮ ಲಾಗಿನ್ ವಿವರಗಳನ್ನು ಎಂಟರ್ ಮಾಡಿ ಮತ್ತು "ಗೋ" ಅನ್ನು ಆಯ್ಕೆಮಾಡಿ. ಕಾರ್ಡ್ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಆರೋಗ್ಯಶ್ರೀ ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ?

ಆರೋಗ್ಯಶ್ರೀ ಆ್ಯಪ್ ಅನ್ನು ಡೌನ್‌ಲೋಡ್ ಮಾಡಲು, ಆಂಡ್ರಾಯ್ಡ್ ಫೋನ್‌ಗಳಲ್ಲಿ ಪ್ಲೇ ಸ್ಟೋರ್ ಗೆ ಭೇಟಿ ನೀಡಿ. ಆರೋಗ್ಯಶ್ರೀ ಆ್ಯಪ್, ಐಫೋನ್‌ನಲ್ಲಿ ಲಭ್ಯವಿಲ್ಲ. ಪ್ಲೇ ಸ್ಟೋರ್ ನಲ್ಲಿ, ನೀವು ಆರೋಗ್ಯಶ್ರೀ ಟ್ರಸ್ಟ್ ಅನ್ನು ಸರ್ಚ್ ಮಾಡಬಹುದು ಮತ್ತು "ಇನ್ಸ್ಟಾಲ್" ಬಟನ್ ಮೇಲೆ ಕ್ಲಿಕ್ ಮಾಡಬಹುದು.