ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಆಯುಷ್ಮಾನ್ ಭಾರತ್ ಯೋಜನೆ ಪಿಎಂಜೆಎವೈ (PMJAY)

ಭಾರತದ ಸಂವಿಧಾನವು ಸ್ಥಳೀಯರಿಗೆ ಉಚಿತ ಹೆಲ್ತ್ ಕೇರ್ ಭರವಸೆ ನೀಡಿದ್ದರೂ, ಅವರಲ್ಲಿ ನಿಜಕ್ಕೂ ಎಷ್ಟು ಜನರಿಗೆ ಸರಿಯಾದ ಮೆಡಿಕಲ್ ಸೌಲಭ್ಯಗಳು ಲಭ್ಯವಿವೆ? ಹೆಚ್ಚುತ್ತಿರುವ ಜೀವನಶೈಲಿ ಸಂಬಂಧಿ ಕಾಯಿಲೆಗಳ ಮಧ್ಯೆ, ಜನರು ಹಣಕಾಸಿನ ಮುಗ್ಗಟ್ಟಿನಿಂದ ಸರಿಯಾದ ಚಿಕಿತ್ಸೆ ಪಡೆಯಲು ಸಾಮಾನ್ಯವಾಗಿ ಹೆಣಗಾಡುತ್ತಾರೆ.

ಆದಾಗ್ಯೂ, ಹಲವಾರು ಸರ್ಕಾರಿ ಉಪಕ್ರಮಗಳ ಪರಿಚಯದಿಂದಾಗಿ ಆರೋಗ್ಯದ ರೂಪುರೇಖೆ ಬದಲಾಗಿದೆ. ಉದಾಹರಣೆಗೆ, ಆಯುಷ್ಮಾನ್ ಭಾರತ್ ಯೋಜನೆ ಎಂದೂ ಕರೆಯಲ್ಪಡುವ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ನಂತಹ ಸರ್ಕಾರದ ಬೆಂಬಲಿತ ಆರೋಗ್ಯ ರಕ್ಷಣೆ ಯೋಜನೆಗಳು, ಮೆಡಿಕಲ್ ತುರ್ತು ಸಂದರ್ಭಗಳಲ್ಲಿ ಆರ್ಥಿಕವಾಗಿ ದುರ್ಬಲವಿರುವ ವರ್ಗಕ್ಕೆ ಸೇರಿದ ಜನರಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತವೆ. 

ಹಾಗಾದರೆ ತೃತೀಯ ಮತ್ತು ದ್ವಿತೀಯ ಆರೈಕೆ ಸೇವೆಗಳಿಂದ ವಂಚಿತರಾಗಿರುವ ಭಾರತದ ಜನಸಂಖ್ಯೆಯ 40% ರಷ್ಟು ಜನರಿಗೆ, ನಿಖರವಾಗಿ ಹೇಗೆ ಪ್ರಯೋಜನ ನೀಡುತ್ತದೆ? (1)

ಇನ್ನಷ್ಟು ತಿಳಿಯಲು ಮುಂದೆ ಓದಿ!

ಪಿಎಂಜೆಎವೈ (PMJAY) ಗೆ ಸಂಬಂಧಿಸಿದ ಲಕ್ಷಣಗಳು ಮತ್ತು ಪ್ರಯೋಜನಗಳು ಯಾವುವು?

ಆರ್ಥಿಕ ಕೊರತೆಯಿಂದಾಗಿ ಭಾರತದ ಒಟ್ಟು ಜನಸಂಖ್ಯೆಯ 50% ಕ್ಕಿಂತ ಹೆಚ್ಚು ಜನರು ಸರಿಯಾದ ಚಿಕಿತ್ಸೆಗಳಿಂದ ವಂಚಿತರಾಗಿದ್ದಾರೆ. ಪಿಎಂಜೆಎವೈ ಅವರಿಗೆ ಸರಿಯಾದ ಆರೋಗ್ಯ ಸೇವೆಗಳನ್ನು ನೀಡಲು ಮತ್ತು ಅತಿಯಾದ ಮೆಡಿಕಲ್ ವೆಚ್ಚಗಳನ್ನು ತಡೆಗಟ್ಟಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ಮೂಲಕ ಸಾಧ್ಯವಾದಷ್ಟು ಮಧ್ಯಮ ವರ್ಗದ ಜನರ ಬಡತನವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಅವರನ್ನು ಬೆಂಬಲಿಸುತ್ತದೆ.

ಆದ್ದರಿಂದ, ಈ ಸರ್ಕಾರಿ ಬೆಂಬಲಿತ ಹೆಲ್ತ್ ಇನ್ಶೂರೆನ್ಸ್ ಯೋಜನೆಯಿಂದ ನೀವು ನಿರೀಕ್ಷಿಸಬಹುದಾದ ಕೆಲವು ಪ್ರಯೋಜನಗಳು ಇಲ್ಲಿವೆ:

  • ಈ ಯೋಜನೆಯಡಿಯಲ್ಲಿ ಫಲಾನುಭವಿ ಕುಟುಂಬವು ವರ್ಷಕ್ಕೆ ₹5 ಲಕ್ಷಗಳ ಪ್ರಯೋಜನವನ್ನು ಪಡೆಯಬೇಕು. 
  • ಕೊಠಡಿ ಶುಲ್ಕಗಳು, ವೈದ್ಯರ ಶುಲ್ಕಗಳು, ಡಯಾಗ್ನೋಸ್ಟಿಕ್ ಸೇವೆಗಳು, ಚಿಕಿತ್ಸಾ ವೆಚ್ಚ, ಐಸಿಯು ಮತ್ತು ಆಪರೇಷನ್ ಥಿಯೇಟರ್ ವೆಚ್ಚಗಳು ಇತ್ಯಾದಿ ಸೇರಿದಂತೆ ಸುಮಾರು 1393 ಚಿಕಿತ್ಸೆಗಳಿಗೆ ಈ ಯೋಜನೆಯು ಕವರೇಜ್ ಅನ್ನು ನೀಡುತ್ತದೆ. 
  • ಫಲಾನುಭವಿಯು ಭಾರತದಲ್ಲಿನ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಮೆಡಿಕಲ್ ಸೌಲಭ್ಯಗಳನ್ನು ಪಡೆಯಬಹುದು.
  • ಈ ಯೋಜನೆಯಡಿಯಲ್ಲಿ, ನೀವು 3 ದಿನಗಳವರೆಗೆ ಹಾಸ್ಪಿಟಲೈಸೇಷನ್ ಪೂರ್ವದ ಪ್ರಯೋಜನ ಮತ್ತು 15 ದಿನಗಳವರೆಗೆ ಹಾಸ್ಪಿಟಲೈಸೇಷನ್ ನಂತರದ ಪ್ರಯೋಜನವನ್ನು ಪಡೆಯುತ್ತೀರಿ. ಆ ಸಮಯದಲ್ಲಿ, ರೋಗಿಯು ಔಷಧಿಗಳಿಗಾಗಿ ಮತ್ತು ಡಯಾಗ್ನೋಸ್ಟಿಕ್‌ಗಾಗಿ ಸಂಪೂರ್ಣ ಕವರೇಜ್ ಪಡೆಯುತ್ತಾನೆ. 

ಈ ಯೋಜನೆಯ ಅತ್ಯುತ್ತಮ ಪ್ರಯೋಜನವೆಂದರೆ ಅದು ಯಾರೊಬ್ಬರ ಲಿಂಗ, ವಯಸ್ಸು ಅಥವಾ ಕುಟುಂಬದ ಗಾತ್ರವನ್ನು ಆಧರಿಸಿ, ಈ ಪ್ರಯೋಜನಗಳನ್ನು ಪಡೆಯದಂತೆ ಯಾರನ್ನೂ ನಿರ್ಬಂಧಿಸುವುದಿಲ್ಲ. ಆದಾಗ್ಯೂ, ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಪ್ರಯೋಜನಗಳನ್ನು ಬಳಸಿಕೊಳ್ಳಲು ನಿಗದಿತ ಐಡಿಯನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಆಯುಷ್ಮಾನ್ ಭಾರತ್ ಯೋಜನೆಗೆ ಯಾರು ಅರ್ಹರು?

ಈ ಪ್ರಯೋಜನಗಳನ್ನು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಿರುವ ವರ್ಗಕ್ಕೆ ವಿಸ್ತರಿಸಲು ಸರ್ಕಾರವು ಗಮನಹರಿಸುತ್ತಿರುವುದರಿಂದ ಅರ್ಹತಾ ಮಾನದಂಡಗಳು ಸ್ವಲ್ಪ ಕಠಿಣವಾಗಿವೆ. ಆದ್ದರಿಂದ, ರಾಷ್ಟ್ರೀಯ ಹೆಲ್ತ್ ಪ್ರೊಟೆಕ್ಷನ್ ಪಾಲಿಸಿಯ ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ನೋಡುತ್ತೀರೆಂದು ಖಚಿತಪಡಿಸಿಕೊಳ್ಳಿ ಮತ್ತು ಅದರ ಪ್ರಯೋಜನಗಳನ್ನು ಪಡೆಯಲು ನೀವು ಅರ್ಹರಾಗಿದ್ದೀರಾ ಎಂಬುದನ್ನು ನೋಡಿ:

ಪಿಎಂಜೆಎವೈ (PMJAY) ಯೋಜನೆಯಡಿಯಲ್ಲಿ ಆರೋಗ್ಯ ರಕ್ಷಣೆಯನ್ನು ಪಡೆಯುವವರು ಈ ಕೆಳಗಿನವರಾಗಿರುತ್ತಾರೆ:

ನಗರ ಪ್ರದೇಶಗಳಲ್ಲಿ:

ಸರ್ಕಾರವು 11 ಔದ್ಯೋಗಿಕ ವಿಭಾಗಗಳೊಂದಿಗೆ ಬಂದಿದ್ದು, ಈ ವರ್ಗಗಳ ಭಾಗವಾಗಿರುವವರು ಮಾತ್ರ ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಹರಾಗಿರುತ್ತಾರೆ. 

  • ಎಲೆಕ್ಟ್ರಿಷಿಯನ್/ದುರಸ್ತಿ ಕೆಲಸಗಾರರು/ಮೆಕ್ಯಾನಿಕ್ 
  • ನಿರ್ಮಾಣ ಕಾರ್ಮಿಕರು/ ಭದ್ರತಾ ಸಿಬ್ಬಂದಿಗಳು/ ಪ್ಲಂಬರ್/ ಪೇಂಟರ್/ ಇತ್ಯಾದಿ.
  • ವಾಷರ್‌ಮ್ಯಾನ್/ಚೌಕಿದಾರ್
  • ಗುಜರಿ ಹೆಕ್ಕುವವರು
  • ಭಿಕ್ಷುಕರು 
  • ಮನೆ ಕೆಲಸಗಾರರು
  • ಚಾಲಕರು/ಸಾರಿಗೆ ಕೆಲಸಗಾರರು/ಕಂಡಕ್ಟರ್‌ಗಳು ಮತ್ತು ಇದಕ್ಕೆ ಸಂಬಂಧಿಸಿದ ಇತರ ಜನರು 
  • ಬೀದಿಗಳಲ್ಲಿ ಕೆಲಸ ಮಾಡುತ್ತಿರುವ ಚಮ್ಮಾರರು/ ಬೀದಿ ವ್ಯಾಪಾರಿಗಳು/ವ್ಯಾಪಾರಿಗಳು/ಇತರ ಸೇವಾ ಪೂರೈಕೆದಾರರು
  • ಮನೆಯಾಧಾರಿತ ಕೆಲಸಗಾರರು/ಟೈಲರ್/ಕುಶಲಕರ್ಮಿಗಳು
  • ಡೆಲಿವರಿ ಅಸಿಸ್ಟೆಂಟ್/ಶಾಪ್ ವರ್ಕರ್

ಗ್ರಾಮೀಣ ಪ್ರದೇಶಗಳಲ್ಲಿ:

  • ಎಸ್.ಸಿ/ಎಸ್.ಟಿ ಕುಟುಂಬಗಳು
  • ದೈಹಿಕವಾಗಿ ಅಶಕ್ತ ಸದಸ್ಯರನ್ನು ಹೊಂದಿರುವ ಕುಟುಂಬಗಳು (ಕನಿಷ್ಠ ಒಬ್ಬರು)
  • 16 ಮತ್ತು 59 ವರ್ಷ ವಯಸ್ಸಿನ ಪುರುಷ ಸದಸ್ಯರಿಲ್ಲದ ಮಹಿಳಾ ನೇತೃತ್ವದ ಕುಟುಂಬ
  • ಕಾನೂನುಬದ್ಧವಾಗಿ ಬಿಡುಗಡೆ ಮಾಡಲಾದ ಬಂಧಿತ ಕಾರ್ಮಿಕರು 
  • ಹಸ್ತಚಾಲಿತ ಸಾಂದರ್ಭಿಕ ದುಡಿಮೆಯ ಏಕೈಕ ಆದಾಯದ ಮೂಲವಾಗಿರುವ ಭೂರಹಿತ ಕುಟುಂಬಗಳು 
  • ಕಚ್ಛಾ ಛಾವಣಿ ಮತ್ತು ಗೋಡೆಗಳಿರುವ ಒಂದೇ ಕೋಣೆಯ ಮನೆಗಳಲ್ಲಿ ವಾಸಿಸುವ ಜನರು

ಆಯುಷ್ಮಾನ್ ಭಾರತ್ ಯೋಜನೆಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ?

ಆಯುಷ್ಮಾನ್ ಭಾರತ್ ಯೋಜನೆ ನೋಂದಣಿಗೆ ಯಾವುದೇ ಪ್ರತ್ಯೇಕ ಪ್ರಕ್ರಿಯೆ ಇಲ್ಲ ಏಕೆಂದರೆ ಈಗಾಗಲೇ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಭಾಗವಾಗಿರುವ ಎಲ್ಲಾ ಅಭ್ಯರ್ಥಿಗಳನ್ನು ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ (SECC) 2011 ಡೇಟಾದಿಂದ ಗುರುತಿಸಲಾಗಿದೆ. ಅರ್ಹತಾ ಮಾನದಂಡಗಳನ್ನು ಪರಿಶೀಲಿಸುವುದರ ಜೊತೆಗೆ, ಪಿಎಂಜೆಎವೈ ವೆಬ್‌ಸೈಟ್ ಬಳಸಿಕೊಂಡು ನೀವು ಯೋಜನೆಗೆ ಅರ್ಹರಾಗಿದ್ದೀರಾ ಎಂಬುದನ್ನು ನೀವೇ ನೇರವಾಗಿ ಪರಿಶೀಲಿಸಬಹುದು. ನೀವು ಮಾಡಬೇಕಿರುವುದು ಇಲ್ಲಿದೆ: 

ಹಂತ 1: ಪಿಎಂಜೆಎವೈ ನ ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು 'ನಾನು ಅರ್ಹನೇ' ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 2: ಇದು ಒನ್-ಟೈಮ್ ಪಾಸ್‌ವರ್ಡ್ ಅನ್ನು ರಚಿಸಲು ನಿಮ್ಮ ಸಂಪರ್ಕ ವಿವರಗಳನ್ನು ಕೇಳುತ್ತದೆ. 

ಹಂತ 3: ಈ ಎಲ್ಲಾ ವಿವರಗಳನ್ನು ಒದಗಿಸಿದ ನಂತರ, ನಿಮ್ಮ ರಾಜ್ಯವನ್ನು ಆಯ್ಕೆಮಾಡುವುದರೊಂದಿಗೆ ಮುಂದುವರಿಯಿರಿ. ಪಿಎಂಜೆಎವೈ ನ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಲು ಮತ್ತು ಆ ಮೆಡಿಕಲ್ ಪ್ರಯೋಜನಗಳನ್ನು ಪಡೆಯಬಹುದೇ ಎಂದು ಪರಿಶೀಲಿಸಲು, ಪಡಿತರ ಸಂಖ್ಯೆ/ಮೊಬೈಲ್ ಸಂಖ್ಯೆ/ಹೆಸರು/ಹೆಚ್.ಹೆಚ್.ಡಿ ಸಂಖ್ಯೆ, ಇತ್ಯಾದಿಗಳನ್ನು ಬಳಸಿ.

ಅರ್ಜಿ ಸಲ್ಲಿಸುವಾಗ ನೀವು ಸಲ್ಲಿಸಬೇಕಾದ ಎಲ್ಲ ಡಾಕ್ಯುಮೆಂಟುಗಳು ಯಾವುವು?

ನೀವು ಆನ್‌ಲೈನ್‌ನಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅದರ ಎಲ್ಲಾ ಪ್ರಮುಖ ಪ್ರಯೋಜನಗಳನ್ನು ಪಡೆಯಲು, ಈ ಡಾಕ್ಯುಮೆಂಟುಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ:

  • ಜಾತಿ ಪ್ರಮಾಣ ಪತ್ರ 
  • ವಯಸ್ಸು ಮತ್ತು ಗುರುತಿನ ಪುರಾವೆಯಾಗಿ ಪ್ಯಾನ್ ಮತ್ತು ಆಧಾರ್ ಕಾರ್ಡ್
  • ಆದಾಯ ಪ್ರಮಾಣಪತ್ರ (ಗರಿಷ್ಠ ವಾರ್ಷಿಕ ಆದಾಯ ₹ 5 ಲಕ್ಷಗಳವರೆಗೆ)
  • ಕುಟುಂಬದ ಪ್ರಸ್ತುತ ಸ್ಥಿತಿ (ಅವಿಭಕ್ತ/ವಿಭಕ್ತ) ಮತ್ತು ಅದಕ್ಕೆ ಸಂಬಂಧಿಸಿದ ಬೆಂಬಲಿತ ಡಾಕ್ಯುಮೆಂಟ್

ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಅನ್ನು ಪಡೆಯುವುದು ಹೇಗೆ?

ಪಿಎಂಜೆಎವೈ ಯೋಜನೆಯಡಿಯಲ್ಲಿ ಪೇಪರ್‌ಲೆಸ್, ಕ್ಯಾಶ್‌ಲೆಸ್ ಮತ್ತು ಪೋರ್ಟಬಲ್ ವಹಿವಾಟುಗಳ ಅನುಕೂಲಕ್ಕಾಗಿ, ಫಲಾನುಭವಿಗಳು ಆಯುಷ್ಮಾನ್ ಭಾರತ್ ಯೋಜನೆ ಗೋಲ್ಡನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ತ್ವರಿತ ಮತ್ತು ತೊಂದರೆ-ಮುಕ್ತ ಸೇವೆಯನ್ನು ಪಡೆಯಲು ನೀವು ಆಸ್ಪತ್ರೆಯಲ್ಲಿ ಕಾರ್ಡ್ ಅನ್ನು ತೋರಿಸಬಹುದು. 

ಕಾರ್ಡ್ ಅನ್ನು ಪಡೆಯುವ ಪ್ರಕ್ರಿಯೆ ಇಲ್ಲಿದೆ:

ಹಂತ 1: ಪಿಎಂಜೆಎವೈ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಲು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯನ್ನು ಬಳಸಿ.

ಹಂತ 2: ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ಒಟಿಪಿ ಅನ್ನು ಪಡೆಯಿರಿ ಮತ್ತು ಹೆಚ್.ಹೆಚ್.ಡಿ ಕೋಡ್ ಅನ್ನು ನೋಡಿ.

ಹಂತ 3: ಅದಾದ ನಂತರ, ನೀವು ಸಿ.ಎಸ್.ಸಿ ಅಥವಾ ಕಾಮನ್ ಸರ್ವೀಸ್ ಸೆಂಟರ್‌ಗೆ ಹೆಚ್.ಹೆಚ್.ಡಿ ಕೋಡ್ ಅನ್ನು ಒದಗಿಸಬೇಕು. ಅಲ್ಲಿ ಆಯುಷ್ಮಾನ್ ಮಿತ್ರ ಅಥವಾ ಸಿ.ಎಸ್.ಸಿ ಪ್ರತಿನಿಧಿಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡುತ್ತಾರೆ. 

ಇದಲ್ಲದೆ, ಕಾರ್ಡ್ ಪಡೆಯಲು ಮತ್ತು ಆಯುಷ್ಮಾನ್ ಕಾರ್ಡ್‌ನ ಎಲ್ಲಾ ಪ್ರಯೋಜನಗಳನ್ನು ಬಳಸಿಕೊಳ್ಳಲು ನೀವು ₹30 ಭರಿಸಬೇಕಾಗುತ್ತದೆ.

ಪಿಎಂಜೆಎವೈ (PMJAY) ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಹೇಗೆ ಪರಿಶೀಲಿಸುತ್ತೀರಿ?

ಪಿಎಂಜೆಎವೈ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಲು ನೀವು ವಿವಿಧ ವಿಧಾನಗಳನ್ನು ಬಳಸಬಹುದು. ಮೊದಲೇ ಹೇಳಿದಂತೆ, ನೀವು ಯೋಜನೆಗೆ ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು ಆನ್‌ಲೈನ್ ಪೋರ್ಟಲ್ ಅನ್ನು ಬಳಸಬಹುದು. ಆನ್‌ಲೈನ್ ಪ್ರಕ್ರಿಯೆಯ ಹೊರತಾಗಿ, ನೀವು ಪ್ರಯತ್ನಿಸಬಹುದಾದ ಇನ್ನೂ ಎರಡು ಅನುಕೂಲಕರ ವಿಧಾನಗಳಿವೆ:

  • ಕಾಮನ್ ಸರ್ವೀಸ್ ಸೆಂಟರ್‌ (ಸಿ.ಎಸ್.ಸಿ): ಆರೋಗ್ಯ ರಕ್ಷಣಾ ಯೋಜನೆಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸಲು ಹತ್ತಿರದ ಸಿ.ಎಸ್.ಸಿ ಅಥವಾ ಯಾವುದೇ ಎಂಪನೆಲ್ಡ್ ಆಸ್ಪತ್ರೆಯನ್ನು ಹುಡುಕಿ. 
  • ಹೆಲ್ಪ್‌ಡೆಸ್ಕ್ ಸಂಖ್ಯೆಗಳು: ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಲು ನೀವು ಹೆಲ್ಪ್‌ಡೆಸ್ಕ್ ಸಂಖ್ಯೆಗಳಾದ 1800-111-565 ಅಥವಾ 14555 ಅನ್ನು ಸಹ ಬಳಸಬಹುದು.

ಪಿಎಂಜೆಎವೈ (PMJAY) ಅಡಿಯಲ್ಲಿ ಯಾವ ಕಾಯಿಲೆಗಳು ಕವರ್ ಆಗುತ್ತವೆ?

ಆಯುಷ್ಮಾನ್ ಭಾರತ್ ಯೋಜನೆಯಡಿ ಕವರ್ ಆಗುವ ಕಾಯಿಲೆಗಳ ಪಟ್ಟಿ ಇಲ್ಲಿದೆ:

  • ಕೊರೋನರಿ ಆರ್ಟರಿ ಬೈಪಾಸ್ ಗ್ರಾಪ್ಟಿಂಗ್ 
  • ಸ್ಕಲ್ ಬೇಸ್ ಸರ್ಜರಿ 
  • ಅಂಟೇರಿಯಾರ್ ಸ್ಪೈನ್ ಫಿಕ್ಸೇಶನ್ 
  • ಡಬಲ್ ವಾಲ್ವ್ ರಿಪ್ಲೇಸ್‌ಮೆಂಟ್ 
  • ಪ್ರಾಸ್ಟೇಟ್ ಕ್ಯಾನ್ಸರ್
  • ಪಲ್ಮನರಿ ವಾಲ್ವ್ ರಿಪ್ಲೇಸ್‌ಮೆಂಟ್ 
  • ಲಾರಿಂಗೊಫಾರ್ಂಜೆಕ್ಟಮಿ ವಿದ್ ಗ್ಯಾಸ್ಟ್ರಿಕ್ ಪುಲ್-ಅಪ್ 
  • ಕ್ಯಾರೋಟಿಡ್ ಆಂಜಿಯೋಪ್ಲ್ಯಾಸ್ಟಿ ವಿದ್ ಸ್ಟೆಂಟ್ 
  • ಸುಟ್ಟಗಾಯಗಳ ನಂತರದ ವಿಕಾರಕ್ಕಾಗಿ ಟಿಶ್ಯೂ ಎಕ್ಸ್ಪಾಂಡರ್ 

ಈಗ, ಫಲಾನುಭವಿಗಳು ಈ ಯೋಜನೆಯಡಿಯಲ್ಲಿ ಕೋವಿಡ್-19 ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು.

ಈ ಯೋಜನೆಯು ಹೆಚ್ಚಿನ ಕ್ರಿಟಿಕಲ್ ಕಾಯಿಲೆಗಳಿಗೆ ಹಣಕಾಸಿನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಅವುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಹೊರಗಿಡುವಿಕೆಗಳು ಸಹ ಇವೆ. ಉದಾಹರಣೆಗೆ:

  • ಅಂಗಾಂಗ ಕಸಿ 
  • ಒಪಿಡಿ
  • ವೈಯಕ್ತಿಕ ಡಯಾಗ್ನೋಸಿಸ್ 
  • ಕಾಸ್ಮೆಟಿಕ್ ಸಂಬಂಧಿತ ಪ್ರಕ್ರಿಯೆಗಳು 
  • ವ್ಯಸನಮುಕ್ತ ಪುನರ್ವಸತಿ ಕಾರ್ಯಕ್ರಮ 
  • ಫರ್ಟಿಲಿಟಿ ಸಂಬಂಧಿತ ಪ್ರಕ್ರಿಯೆಗಳು

ಯಾವುದೇ ಪ್ರೀಮಿಯಂ ವೆಚ್ಚವಿಲ್ಲದೆ ಎಲ್ಲಾ ಅಗತ್ಯ ಸೌಲಭ್ಯಗಳು ಮತ್ತು ಹಣಕಾಸಿನ ರಕ್ಷಣೆಯೊಂದಿಗೆ, ಆಯುಷ್ಮಾನ್ ಭಾರತ್ ಯೋಜನೆಯು ನಾಗರಿಕರಿಗೆ ಮಾದರಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿದೆ.  ಈ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳಿಂದ ಹಿಡಿದು ಕ್ರಿಟಿಕಲ್ ಮೆಡಿಕಲ್ ಸಮಸ್ಯೆಗಳವರೆಗೆ, ಈಗ ನೀವು ಪಿಎಂಜೆಎವೈ ಯೋಜನೆಯಡಿಯಲ್ಲಿ ಎಲ್ಲವನ್ನೂ ನಿಭಾಯಿಸಬಹುದು.

ಪಿಎಂಜೆಎವೈ (PMJAY) ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಪಿಎಂಜೆಎವೈ ಯೋಜನೆಯು 80 ವರ್ಷ ವಯಸ್ಸಿನವರಿಗೆ ರಕ್ಷಣೆ ನೀಡುತ್ತದೆಯೇ?

ಹೌದು. ಈ ಯೋಜನೆಗೆ ಯಾವುದೇ ನಿರ್ದಿಷ್ಟ ವಯಸ್ಸಿನ ಮಾನದಂಡಗಳಿಲ್ಲದ ಕಾರಣ, 80 ವರ್ಷಕ್ಕಿಂತ ಮೇಲ್ಪಟ್ಟ ಜನರು, ಆಯುಷ್ಮಾನ್ ಯೋಜನೆ ನೋಂದಣಿ ಪ್ರಕ್ರಿಯೆಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಮೆಡಿಕಲ್ ತುರ್ತು ಸಂದರ್ಭಗಳಲ್ಲಿ ಪಿಎಂಜೆಎವೈ (PMJAY) ಫಲಾನುಭವಿಗಳು ಯಾರನ್ನು ಸಂಪರ್ಕಿಸಬೇಕು?

ಪಿಎಂಜೆಎವೈ ಪ್ರತಿನಿಧಿಗಳು ಅಥವಾ ಆಯುಷ್ಮಾನ್ ಮಿತ್ರ ಯಾವಾಗಲೂ ಎಂಪನೆಲ್ಡ್ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ ಮತ್ತು ಪಿಎಂಜೆಎವೈ ಯೋಜನೆಯಡಿ ಮೆಡಿಕಲ್ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳು ಅವರನ್ನು ಸಂಪರ್ಕಿಸಬಹುದು.

ಆಯುಷ್ಮಾನ್ ಭಾರತ್ ಯೋಜನೆ ಗರ್ಭಿಣಿಯರಿಗೆ ಲಭ್ಯವಿದೆಯೇ?

ಪಿಎಂಜೆಎವೈ ಅಥವಾ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ, ಗರ್ಭಿಣಿಯರು ₹5 ಲಕ್ಷದವರೆಗೆ ಆರ್ಥಿಕ ರಕ್ಷಣೆಯನ್ನು ಪಡೆಯಬಹುದು.

ನಾನು ಆಯುಷ್ಮಾನ್ ಯೋಜನೆ ಕಾರ್ಡ್ ಹೊಂದಿದ್ದರೆ ನಾನು ಮರಣ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆಯೇ?

ಇಲ್ಲ, ಪಿಎಂಜೆಎವೈ ಯೋಜನೆಯು, ಪಾಲಿಸಿದಾರರ ಫಲಾನುಭವಿಗಳಿಗೆ ಮರಣ ಪ್ರಯೋಜನಗಳನ್ನು ಒದಗಿಸುವುದಿಲ್ಲ.