ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ.

ಧೂಮಪಾನವು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಹೆಲ್ತ್ ಇನ್ಶೂರರ್ ಧೂಮಪಾನಿಗಳು ಮತ್ತು ತಂಬಾಕು ಬಳಕೆದಾರರಿಗೆ ಕವರೇಜ್ ನೀಡಲು ನಿರಾಕರಿಸುತ್ತಾರೆ ಎಂಬ ಸಾಮಾನ್ಯ ತಪ್ಪು ಅಭಿಪ್ರಾಯವಿದೆ. ಆದರೆ, ಇದು ನಿಜವಲ್ಲ. ವಾಸ್ತವವಾಗಿ, ಅನೇಕ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಧೂಮಪಾನಿಗಳಿಗೂ ಕೆಲವು ಕವರೇಜ್ ನೀಡಲು ಸಿದ್ಧವಿವೆ. ಆದರೆ ಸಾಮಾನ್ಯವಾಗಿ ಹೆಚ್ಚಿನ ಪ್ರೀಮಿಯಂಗಳು ಮತ್ತು ಮತ್ತಷ್ಟು ನಿಯಮಗಳು ಮತ್ತು ಷರತ್ತುಗಳೊಂದಿಗೆ ನೀಡುತ್ತವೆ.

ಅದರ ಹಾನಿಕಾರಕ ಸ್ವಭಾವದಿಂದಾಗಿ, ಧೂಮಪಾನವು ಮೆಡಿಕಲ್ ಕವರೇಜ್ ಮತ್ತು ಇತರ ಆರೋಗ್ಯ ವೆಚ್ಚಗಳ ಮೇಲೆ ಪರಿಣಾಮ ಬೀರಬಹುದು. ಆದರೆ ಧೂಮಪಾನಿಗಳಲ್ಲದವರಿಗಿಂತ ಹೆಚ್ಚಾಗಿ ಧೂಮಪಾನಿಗಳು ಜೀವನಶೈಲಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅವರು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿಂದ ರಕ್ಷಣೆ ಪಡೆಯುವುದು ಹೆಚ್ಚು ಮುಖ್ಯವಾಗಿದೆ. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂನ ವೆಚ್ಚದ ಮೇಲೆ ಧೂಮಪಾನವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವೀಗ ನೋಡೋಣ.

ಧೂಮಪಾನಿಯು ಈಗಲೂ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದೇ?

ಮೇಲೆ ಹೇಳಿದಂತೆ, ಹೌದು ಪಡೆಯಬಹುದು. ಅನೇಕ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಧೂಮಪಾನಿಗಳಿಗೆ ಕವರೇಜ್ ನೀಡುತ್ತಾರೆ. ಐ.ಆರ್.ಡಿ.ಎ.ಐ ಸಹ ಧೂಮಪಾನಿಗಳಿಗೂ ಹೆಲ್ತ್ ಇನ್ಶೂರೆನ್ಸ್ ಪಡೆಯಲು ಅರ್ಜಿ ಸಲ್ಲಿಸುವ ಹಕ್ಕಿದೆ ಎಂದು ಆದೇಶಿಸಿದೆ. ಆದಾಗ್ಯೂ, ಪ್ರೀಮಿಯಂನ ನಿಯಮಗಳು - ಷರತ್ತುಗಳು ಮತ್ತು ವೆಚ್ಚಗಳು ಒಂದು ಇನ್ಶೂರೆನ್ಸ್ ಕಂಪನಿಯಿಂದ ಮತ್ತೊಂದು ಇನ್ಶೂರೆನ್ಸ್ ಕಂಪನಿಗೆ ಬದಲಾಗುತ್ತವೆ. 

ನಿಮ್ಮ ಇನ್ಶೂರರ್ ರಿಂದ ನೀವು ಧೂಮಪಾನಿಗಳೆಂದು ಗುರುತಿಸಲ್ಪಟ್ಟರೆ, ಪ್ರೀಮಿಯಂ ಅನ್ನು ನಿರ್ಧರಿಸುವ ಮೊದಲು ಅವರು ನಿಮ್ಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಕೆಲವು ಮೆಡಿಕಲ್ ಪರೀಕ್ಷೆಗಳನ್ನು ಮಾಡಿಸುವಂತೆ ನಿಮ್ಮನ್ನು ಕೇಳಬಹುದು. ವಿಶೇಷವಾಗಿ ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಅಥವಾ ನೀವು ಹೆಚ್ಚಿನ ಮೊತ್ತದ ಸಮ್ ಇನ್ಶೂರ್ಡ್ ಬಯಸಿದರೆ.

ಇನ್ಶೂರೆನ್ಸ್ ಉದ್ದೇಶಗಳಿಗಾಗಿ ಧೂಮಪಾನಿಗಳು ಎಂದರೆ ಯಾರು?

ವರದಿಯ ಪ್ರಕಾರ, ಭಾರತದಲ್ಲಿ 34.6% ರಷ್ಟು ವಯಸ್ಕರು ಧೂಮಪಾನಿಗಳಾಗಿದ್ದಾರೆ ಮತ್ತು ಹೆಚ್ಚಿನವರು ತಂಬಾಕನ್ನು ಇತರ ರೀತಿಯಲ್ಲಿ ಬಳಸುತ್ತಾರೆ. ಆದರೆ ಇನ್ಶೂರರ್ ಪ್ರಕಾರ, ಧೂಮಪಾನ ಅಥವಾ ತಂಬಾಕು ಬಳಕೆ ಎಂದರೇನು?

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಅರ್ಜಿ ಸಲ್ಲಿಸುವಾಗ, ಇನ್ಶೂರರ್ ಸಾಮಾನ್ಯವಾಗಿ ಎರಡು ಪ್ರಮುಖ ಪ್ರಶ್ನೆಗಳನ್ನು ಕೇಳುತ್ತಾರೆ.

  • ನೀವು ಧೂಮಪಾನ ಮಾಡುತ್ತೀರಾ?
  • ನೀವು ಕಳೆದ ಆರು ತಿಂಗಳಲ್ಲಿ ಧೂಮಪಾನ ಮಾಡಿದ್ದೀರಾ?

ಧೂಮಪಾನಿ ಎಂದರೆ ಸಿಗರೇಟ್, ಸಿಗಾರ್, ನಶ್ಯ, ಅಥವಾ ಜಗಿಯುವ ತಂಬಾಕು ಸೇರಿದಂತೆ ಯಾವುದೇ ರೂಪದಲ್ಲಿ ತಂಬಾಕನ್ನು ಸೇವಿಸುವ ವ್ಯಕ್ತಿ. ಮತ್ತು, ಯಾರಾದರೂ ವಾರಕ್ಕೆ ನಾಲ್ಕು ಬಾರಿ ಅಥವಾ ಅದಕ್ಕೂ ಹೆಚ್ಚು ಧೂಮಪಾನ ಮಾಡುತ್ತಿದ್ದರೆ ಮತ್ತು ಕನಿಷ್ಠ ಆರು ತಿಂಗಳವರೆಗೆ ಧೂಮಪಾನ ಮಾಡುತ್ತಿದ್ದರೆ, ಅವರನ್ನು ಧೂಮಪಾನಿಗಳೆಂದು ವರ್ಗೀಕರಿಸಲಾಗುತ್ತದೆ.

ಇನ್ಶೂರರ್ ದಿನನಿತ್ಯದ ತಂಬಾಕು ಸೇವನೆಯನ್ನು ಒಂದು ಸೂಚಕವಾಗಿ ನೋಡುವುದರಿಂದ, ದಿನಕ್ಕೆ 10 ಸಿಗರೇಟ್‌ಗಳಿಗಿಂತ ಹೆಚ್ಚು ಧೂಮಪಾನ ಮಾಡುವವರು ಸಾಮಾನ್ಯವಾಗಿ ತಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲೆ ಹೆಚ್ಚಿನ ಹೊರೆಯನ್ನು ಹೊರಬೇಕಾಗುತ್ತದೆ.

ನೀವು ನಿಮ್ಮ ಇನ್ಶೂರರ್ ಮುಂದೆ ಧೂಮಪಾನವನ್ನು ಬಹಿರಂಗಪಡಿಸುವುದು ಏಕೆ ಮುಖ್ಯವಾಗುತ್ತದೆ?

ಪ್ರಾಮಾಣಿಕವಾಗಿರುವುದು ಮತ್ತು ನಿಮ್ಮ ಧೂಮಪಾನದ ಅಭ್ಯಾಸವನ್ನು ನಿಮ್ಮ ಇನ್ಶೂರರ್ ಮುಂದೆ ಬಹಿರಂಗಪಡಿಸುವುದು ಬಹಳ ಮುಖ್ಯ. ಸತ್ಯಗಳನ್ನು ತಪ್ಪಾಗಿ ನಿರೂಪಿಸುವುದು ನಿಮ್ಮ ಕ್ಲೈಮ್‌ಗಳ ತಿರಸ್ಕಾರಕ್ಕೆ ಕಾರಣವಾಗಬಹುದು ಮತ್ತು ಇನ್ಶೂರೆನ್ಸ್ ವಂಚನೆ ಎಂದು ಪರಿಗಣಿಸಬಹುದು ಮತ್ತು ಕಾನೂನಾತ್ಮಕ ತೊಡಕುಗಳಿಗೆ ಕಾರಣವಾಗಬಹುದು.

ಅಲ್ಲದೆ, ನೀವು ಎಷ್ಟು ಬಾರಿ ಧೂಮಪಾನ ಮಾಡುತ್ತೀರಿ ಎಂಬುದರ ಬಗ್ಗೆ ಪ್ರಾಮಾಣಿಕವಾಗಿ ತಿಳಿಸಿರಿ. ದಿನಕ್ಕೆ 2 ಸಿಗರೇಟ್ ಸೇದುವುದಾಗಿ ತಿಳಿಸುವ ನೀವು ಅಸಲಿಗೆ ದಿನಕ್ಕೆ 6 ಸಿಗರೇಟ್ ಸೇದುವುದು ಸಮಸ್ಯೆಗಳನ್ನು ಉಂಟುಮಾಡಬಹುದು. ಕ್ಲೈಮ್‌ಗಳ ಸಮಯದಲ್ಲಿ ಮೆಡಿಕಲ್ ಪರೀಕ್ಷೆಗಳು, ರಕ್ತ ಮತ್ತು ಮೂತ್ರ ಪರೀಕ್ಷೆಗಳಲ್ಲಿ ನಿಕೋಟಿನ್ ಅನ್ನು ಪತ್ತೆಹಚ್ಚಬಹುದು ಮತ್ತು ತ್ವರಿತವಾಗಿ ಕ್ಲೈಮ್‌ಗಳ ತಿರಸ್ಕಾರಕ್ಕೆ ಕಾರಣವಾಗಬಹುದು.

ಹೀಗಾಗಿ, ನೀವು ಧೂಮಪಾನಿಗಳಾಗಿದ್ದರೆ ಅಥವಾ ನೀವು ಬಹಳ ಹಿಂದೆಯೇ ಧೂಮಪಾನವನ್ನು ತ್ಯಜಿಸಿದ್ದರೂ ಸಹ, ಅದನ್ನು ಬಹಿರಂಗಪಡಿಸಲು ಹಿಂಜರಿಯಬೇಡಿ. ನಿಮ್ಮ ಉಳಿತಾಯವನ್ನು ನುಂಗುವ ಆಸ್ಪತ್ರೆಯ ದೊಡ್ಡ ಬಿಲ್‌ಗಳಿಗೆ ಹೋಲಿಸಿದರೆ, ಹೆಚ್ಚಿನ ಪ್ರೀಮಿಯಂ ಯೋಗ್ಯವಾಗಿದೆ.

ಧೂಮಪಾನವು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಏಕೆ ಹೆಚ್ಚಿಸುತ್ತದೆ?

ಧೂಮಪಾನವು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂನ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಶ್ವಾಸಕೋಶದ ಸೋಂಕುಗಳು, ಕ್ಯಾನ್ಸರ್ ಮತ್ತು ಇತರ ಕ್ರಿಟಿಕಲ್ ಇಲ್ ನೆಸ್ ಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಧೂಮಪಾನಿಗಳಿಗೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ. ಏಕೆಂದರೆ ಈ ಆರೋಗ್ಯ ಸಮಸ್ಯೆಗಳು ಭವಿಷ್ಯದಲ್ಲಿ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಮಾಡುವ ಹೆಚ್ಚಿನ ಅವಕಾಶಕ್ಕೆ ಕಾರಣವಾಗಬಹುದು. ಹೀಗಾಗಿ, ಅವರಿಗೆ ಹೆಚ್ಚಿನ ಪ್ರೀಮಿಯಂ ಅನ್ನು ವಿಧಿಸಲಾಗುತ್ತದೆ.

ವಾಸ್ತವವಾಗಿ, ಧೂಮಪಾನಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳು ಧೂಮಪಾನಿಗಳಲ್ಲದವರ ಪ್ರೀಮಿಯಂಗಳಿಗಿಂತ ಸುಮಾರು ಎರಡು ಪಟ್ಟಿರುತ್ತದೆ. ಉದಾಹರಣೆಗೆ, 25 ವರ್ಷ ವಯಸ್ಸಿನ ಧೂಮಪಾನಿಗಳಲ್ಲದ ವ್ಯಕ್ತಿಯೊಬ್ಬರು ₹1 ಕೋಟಿಯ ಸಮ್ ಇನ್ಶೂರ್ಡ್ ಗೆ ₹5,577/ವರ್ಷಕ್ಕೆ ಪಾವತಿಸುತ್ತಾರೆ ಎಂದುಕೊಳ್ಳಿ, ನಂತರ ಅದೇ ವಯಸ್ಸಿನ ಧೂಮಪಾನಿ ವ್ಯಕ್ತಿಯೊಬ್ಬರು ಅದೇ ಇನ್ಶೂರೆನ್ಸ್ ಮೊತ್ತಕ್ಕೆ ಸುಮಾರು ₹9,270/ವರ್ಷಕ್ಕೆ ಪಾವತಿಸುತ್ತಾರೆ.

ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸ್ಥಿತಿಗಳೊಂದಿಗೆ ಇರುವ ಧೂಮಪಾನಿಗಳ ಗತಿಯೇನು?

ಧೂಮಪಾನ ಮಾಡುವ ವ್ಯಕ್ತಿಯು ಮೊದಲೇ ಅಸ್ತಿತ್ವದಲ್ಲಿರುವ ಸ್ಥಿತಿಯನ್ನು (ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ) ಹೊಂದಿದ್ದರೆ, ಅದು ಅವರ ಧೂಮಪಾನಕ್ಕೆ ಸಂಬಂಧಿಸಿದ್ದೋ ಅಥವಾ ಅಲ್ಲವೋ ಅಥವಾ, ಇನ್ನಾವುದಾದರೂ ಆರೋಗ್ಯ ಸಮಸ್ಯೆಗಳನ್ನು ಬಹಿರಂಗಪಡಿಸಲು ಇನ್ಶೂರೆನ್ಸ್ ಕಂಪನಿಗಳು ಹೆಚ್ಚಿನ ಮೆಡಿಕಲ್ ಪರೀಕ್ಷೆಗಳನ್ನು ಮಾಡಿಸಲು ಕೇಳಬಹುದು.

ನಂತರ ಅವರು ಈ ಆರೋಗ್ಯ ಪರಿಸ್ಥಿತಿಗಳ ತೀವ್ರತೆಯ ಆಧಾರದ ಮೇಲೆ ಪ್ರೀಮಿಯಂ ಅನ್ನು ನಿರ್ಧರಿಸುತ್ತಾರೆ. ಹೆಚ್ಚುವರಿಯಾಗಿ, ಈ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಕವರ್ ಮಾಡುವ ಮೊದಲು 1-4 ವರ್ಷಗಳ ವೇಟಿಂಗ್ ಪೀರಿಯಡ್ ಇರುತ್ತದೆ. ಧೂಮಪಾನಿಗಳಿಗೆ ಮತ್ತು ಧೂಮಪಾನಿಗಳಲ್ಲದವರಿಗೆ ಈ ವೇಟಿಂಗ್ ಪೀರಿಯಡ್ ಒಂದೇ ಆಗಿದ್ದರೂ, ಧೂಮಪಾನಿಗಳನ್ನು ಕೆಲವು ಷರತ್ತುಗಳಿಂದ ಹೊರಗಿಡಬಹುದು.

ಧೂಮಪಾನದಿಂದ ಆರೋಗ್ಯಕ್ಕೆ ಉಂಟಾಗುವ ಅಪಾಯಗಳೇನು?

ನಿಯಮಿತ ಅಥವಾ ಭಾರೀ ಧೂಮಪಾನವು ಹಲವಾರು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು, ಅವುಗಳೆಂದರೆ:

  • ಉಸಿರಾಟದ ತೊಂದರೆಗಳು ಮತ್ತು ಕಾಯಿಲೆಗಳು
  • ಕ್ರೋನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಓಪಿಡಿ) 
  • ಹೃದಯ ರೋಗಗಳು
  • ಕ್ಯಾನ್ಸರ್ (ವಿಶೇಷವಾಗಿ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್)
  • ಸ್ಟ್ರೋಕ್
  • ಎಂಫಿಸೆಮಾ
  • ಆಸ್ಟಿಯೊಪೊರೋಸಿಸ್
  • ಗರ್ಭಧಾರಣೆಗೆ ಸಂಬಂಧಿಸಿದ ತೊಡಕುಗಳು

ಹೀಗಾಗಿ, ಈ ಕಾಯಿಲೆಗಳ ಅಧಿಕ ಅಪಾಯವು ಧೂಮಪಾನಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ. ಇದರಿಂದ ಅವರು ಆರ್ಥಿಕ ರಕ್ಷಣೆಯನ್ನು ಪಡೆಯುತ್ತಾರೆ.

ತಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಕಡಿಮೆ ಮಾಡಲು ಧೂಮಪಾನಿಗಳು ಏನು ಮಾಡಬಹುದು?

ಧೂಮಪಾನಿಗಳು ತಮ್ಮ ಹೆಲ್ತ್ ಇನ್ಶೂರೆನ್ಸಿಗಾಗಿ ಅಧಿಕ ಮೊತ್ತದ ಪ್ರೀಮಿಯಂಗಳನ್ನು ಎದುರಿಸುತ್ತಾರೆ. ಇದನ್ನು ಬದಲಾಯಿಸಲು ಅವರು ಮಾಡಬಹುದಾದ ಕೆಲವು ಕೆಲಸಗಳು ಹೀಗಿವೆ.

  • ಧೂಮಪಾನವನ್ನು ತ್ಯಜಿಸಿ - ಪಾಲಿಸಿಯ ಅವಧಿಯಲ್ಲಿ ನೀವು ಕನಿಷ್ಟ 2 ವರ್ಷಗಳ ಕಾಲ ಧೂಮಪಾನವನ್ನು ತ್ಯಜಿಸಿದರೆ, ಹೆಲ್ತ್ ಇನ್ಶೂರೆನ್ಸ್ ಕಂಪನಿಯವರು ಅದನ್ನು ಪರಿಗಣಿಸಬಹುದು ಮತ್ತು ಅದಕ್ಕನುಗುಣವಾಗಿ ನಿಮ್ಮ ಪ್ರೀಮಿಯಂಗಳನ್ನು ಕಡಿಮೆ ಮಾಡಬಹುದು.
  • ಧೂಮಪಾನ ನಿಲ್ಲಿಸುವ ಕಾರ್ಯಕ್ರಮಕ್ಕೆ ಸೇರುವುದು - ನಿಮ್ಮಷ್ಟಕ್ಕೆ ನೀವೇ ಧೂಮಪಾನವನ್ನು ತ್ಯಜಿಸಲು ಸಾಧ್ಯವಾಗದಿದ್ದರೆ, ಅನೇಕ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ನಿಮಗೆ ಸಹಾಯ ಮಾಡುವಂತಹ ಧೂಮಪಾನ ನಿಲ್ಲಿಸುವ ಕಾರ್ಯಕ್ರಮಗಳನ್ನು ಅಥವಾ ಅವುಗಳೊಂದಿಗೆ ಟೈ-ಅಪ್‌ಗಳನ್ನು ಹೊಂದಿರುತ್ತವೆ. ಅವುಗಳಿಗೆ ನೀವು ಸೇರಬಹುದು. ಮತ್ತೊಮ್ಮೆ, ನಿಮ್ಮ ಪ್ರೀಮಿಯಂ ಬದಲಾವಣೆಗಳ ಮೊದಲು ನೀವು ಕನಿಷ್ಟ 2 ವರ್ಷಗಳನ್ನು ಧೂಮಪಾನ ಮಾಡದೆಯೇ ತೋರಿಸಬೇಕು.
  • ವಿವಿಧ ಇನ್ಶೂರೆನ್ಸ್ ಕಂಪನಿಗಳನ್ನು ನೋಡಿ - ಭಾರತದಲ್ಲಿ ಧೂಮಪಾನಿಗಳ ಸಂಖ್ಯೆ ಹೆಚ್ಚಿರುವುದರಿಂದ, ತುಲನಾತ್ಮಕವಾಗಿ ಕಡಿಮೆ ಪ್ರೀಮಿಯಂ ಮೊತ್ತದೊಂದಿಗೆ, ಅವರಿಗೆ ಪಾಲಿಸಿಗಳನ್ನು ನೀಡುವ ಕೆಲವು ಹೆಲ್ತ್ ಇನ್ಶೂರೆನ್ಸ್ ಕಂಪನಿಗಳಿವೆ. ನೀವು ರಿಸರ್ಚ್ ಮಾಡಬಹುದು ಮತ್ತು ಅಂತಹ ಕಂಪನಿಗಳನ್ನು ಹುಡುಕಬಹುದು.

ತೀರ್ಮಾನ

ಹೀಗಾಗಿ, ಧೂಮಪಾನಿಗಳು ಹೆಲ್ತ್ ಇನ್ಶೂರೆನ್ಸಿಗಾಗಿ ಹೆಚ್ಚಿನ ಮೊತ್ತವನ್ನು ಪಾವತಿಸಲು ಸಿದ್ಧರಾಗಿರಬೇಕು, ಏಕೆಂದರೆ ಅವರು ಹೆಚ್ಚಿನ ಆರೋಗ್ಯ ಅಪಾಯಗಳನ್ನು ಹೊಂದಿರುತ್ತಾರೆ. ಆದರೆ, ಧೂಮಪಾನಿಯಾಗಿರುವುದರಿಂದ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂನ ವೆಚ್ಚವು ಹೆಚ್ಚಾಗುತ್ತದೆ. ಆದರೆ ಇದು ಹೆಲ್ತ್ ಪಾಲಿಸಿಯನ್ನು ಆಯ್ಕೆ ಮಾಡದಂತೆ ನಿಮ್ಮನ್ನು ತಡೆಯಬಾರದು.

ಧೂಮಪಾನಿಗಳು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಇದು ಮೆಡಿಕಲ್ ತುರ್ತುಸ್ಥಿತಿಯ ಸಂದರ್ಭದಲ್ಲಿ ಅವರಿಗೆ ಇಂತಹ ಆರ್ಥಿಕ ರಕ್ಷಣೆಯನ್ನು ಅಗತ್ಯವಾಗಿ ಹೊಂದುವಂತೆ ಮಾಡುತ್ತವೆ.

ಡಿಸ್‌ಕ್ಲೈಮರ್: ಪ್ರಸ್ತಾಪದ ರೂಪದಲ್ಲಿ ಧೂಮಪಾನದ ಅಭ್ಯಾಸವನ್ನು ಬಹಿರಂಗಪಡಿಸಲು ಸಲಹೆ ನೀಡಲಾಗುತ್ತದೆ. ಇನ್ಶೂರೆನ್ಸ್ ಕಂಪನಿಯು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಹೊಂದಿದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನೀವು ಧೂಮಪಾನ ಮಾಡುತ್ತಿದ್ದರೆ ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದೇ?

ಹೌದು, ನೀವು ಧೂಮಪಾನಿಗಳಾಗಿದ್ದರೂ ಸಹ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಸಾಧ್ಯವಿದೆ. ಆದಾಗ್ಯೂ, ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ನೀವು ಹೆಚ್ಚಿನ ಮೊತ್ತದ ಪ್ರೀಮಿಯಂ ಪಾವತಿಸಬೇಕಾಗಬಹುದು ಎಂಬುದನ್ನು ನೆನಪಿನಲ್ಲಿಡಿ.

ನೀವು ಧೂಮಪಾನಿಗಳೆಂದು ಇನ್ಶೂರೆನ್ಸ್ ಕಂಪನಿಗೆ ಹೇಗೆ ತಿಳಿಯುತ್ತದೆ?

ಸಾಮಾನ್ಯವಾಗಿ, ನೀವು ಧೂಮಪಾನಿಗಳಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಪ್ರಾಮಾಣಿಕವಾಗಿ ವರದಿ ಮಾಡಲು, ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಮೇಲೆ ಭರವಸೆಯಿಡುತ್ತವೆ. ಇದನ್ನು ಅವರು ನಿಮ್ಮ ಹೆಲ್ತ್ ಇನ್ಶೂರೆನ್ಸ್ ನ ಅಪ್ಲಿಕೇಶನ್ ನಲ್ಲಿ  ಕೇಳುತ್ತಾರೆ. ಆದಾಗ್ಯೂ, ಕೆಲವು ಕಂಪನಿಗಳು ನಿಕೋಟಿನ್ ಬಳಕೆಯನ್ನು ಪತ್ತೆಹಚ್ಚುವ ಮೆಡಿಕಲ್ ಪರೀಕ್ಷೆಯ ಮೂಲಕ ಇದನ್ನು ಮತ್ತಷ್ಟು ಪರಿಶೀಲಿಸಬಹುದು.

ನೆನಪಿಡಿ, ನಿಮ್ಮ ಧೂಮಪಾನದ ಅಭ್ಯಾಸಗಳನ್ನು ತಪ್ಪಾಗಿ ಹೇಳುವುದರಿಂದ ಅದು ನಿಮ್ಮ ಕ್ಲೈಮ್‌ಗಳ ತಿರಸ್ಕಾರಕ್ಕೆ ಹಾಗೂ ಇತರೆ ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದು.

ನಿಮ್ಮ ಇನ್ಶೂರರ್ ಮುಂದೆ ನೀವು ಧೂಮಪಾನದ ಅಭ್ಯಾಸವನ್ನು ಬಹಿರಂಗಪಡಿಸದಿದ್ದರೆ ಏನಾಗುತ್ತದೆ?

ಧೂಮಪಾನದ ಅಭ್ಯಾಸಗಳು ನಿಮ್ಮ ಪ್ರೀಮಿಯಂಗಳನ್ನು ಹೆಚ್ಚಿಸಬಹುದು ಎಂದು ಗೊತ್ತಿರುವುದರಿಂದ ಜನರು ತಮ್ಮ ಇನ್ಶೂರರ್ ರಿಂದ ಈ ಮಾಹಿತಿಯನ್ನು ತಡೆಹಿಡಿಯಲು ಪ್ರಯತ್ನಿಸಬಹುದು. ಆದರೆ ಇದು ತುಂಬಾ ಕೆಟ್ಟ ಯೋಚನೆ. ಇದು ನಿಮ್ಮ ಕ್ಲೈಮ್‌ಗಳ ತಿರಸ್ಕಾರಕ್ಕೆ ಕಾರಣವಾಗಬಹುದು ಅಷ್ಟೇ ಅಲ್ಲ ಗಂಭೀರ ಪ್ರಕರಣಗಳಲ್ಲಿ, ಇದು ಕಾನೂನಾತ್ಮಕ ತೊಂದರೆಗಳಲ್ಲಿ ಅಂತ್ಯವಾಗಬಹುದು.

ಧೂಮಪಾನಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಏಕೆ ಹೆಚ್ಚು ದುಬಾರಿಯಾಗಿದೆ?

ಧೂಮಪಾನಿಗಳಲ್ಲದವರಿಗೆ ಹೋಲಿಸಿದಾಗ ಧೂಮಪಾನಿಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಪಡೆಯುವ ಅಪಾಯ ಹೊಂದಿದ್ದಾರೆ. ಉದಾಹರಣೆಗೆ ಉಸಿರಾಟದ ತೊಂದರೆಗಳು, ಹೃದಯ ಸಮಸ್ಯೆಗಳು, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಇನ್ನೂ ಹೆಚ್ಚಿನವು. ಈ ಕಾರಣದಿಂದಾಗಿ, ಇಂತಹ ಹೆಚ್ಚಿದ ಅಪಾಯಗಳನ್ನು ಕವರ್ ಮಾಡಲು ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಧೂಮಪಾನಿಗಳಲ್ಲದವರಿಗಿಂತ ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಧೂಮಪಾನಿಗಳಿಗೆ ವಿಧಿಸುತ್ತಾರೆ

ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಧೂಮಪಾನಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಯಾವಾಗ ತಿರಸ್ಕರಿಸಬಹುದು?

ಹೆಚ್ಚಿನ ಸಂದರ್ಭಗಳಲ್ಲಿ, ದಿನಕ್ಕೆ ಕೆಲವೇ ಸಿಗರೇಟುಗಳನ್ನು ಹೊಂದಿರುವ ಮತ್ತು ಸಾಮಾನ್ಯವಾಗಿ ಫಿಟ್ ಆಗಿರುವ ಧೂಮಪಾನಿಗಳು ನೀವಾಗಿದ್ದರೆ, ಆಗ ನೀವು ಸುಲಭವಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯಬಹುದು. ಆದರೆ, ದಿನಕ್ಕೆ 20-40 ಸಿಗರೇಟ್‌ಗಳಿಗಿಂತ ಹೆಚ್ಚು ಧೂಮಪಾನ ಮಾಡುವ ಭಾರೀ ಧೂಮಪಾನಿಗಳು, ಚೈನ್ ಸ್ಮೋಕರ್‌ಗಳು ಮತ್ತು ಧೂಮಪಾನ-ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಹೊಂದಿದವರ ಪ್ರಸ್ತಾಪವನ್ನು ತಿರಸ್ಕರಿಸಬಹುದು.