ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ

ರಿಟೈರ್‌ಮೆಂಟ್‌ ನಂತರ ನಿಮಗೆ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಏಕೆ ಬೇಕು?

ರಿಟೈರ್‌ಮೆಂಟ್‌ ವ್ಯಕ್ತಿಯ ವೃತ್ತಿ ಜೀವನದ ಮುಕ್ತಾಯವನ್ನು ಸೂಚಿಸುತ್ತದೆ. ಇದು ಅವರ ಜೀವನಶೈಲಿ, ಇನ್ಕಮ್ ಮತ್ತು ವೆಚ್ಚಗಳ ವಿಚಾರದಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತದೆ. ಜೀವನದ ಈ ಹಂತದಲ್ಲಿ ಗಮನ ಹರಿಸಬೇಕಾದ ಒಂದು ಅಂಶವೆಂದರೆ ಹೆಲ್ತ್ ಕೇರ್.

ವಯಸ್ಸಾದಂತೆ, ಮೆಡಿಕಲ್ ಎಮರ್ಜೆನ್ಸಿಗಳು ಮತ್ತು ವೆಚ್ಚಗಳು ಹೆಚ್ಚು ಗಮನಾರ್ಹವಾದ ಕಾಳಜಿಯಾಗುತ್ತವೆ. ಆದ್ದರಿಂದ, ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಭದ್ರತೆ ಮತ್ತು ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ. ಆರ್ಥಿಕ ಹೊರೆಯ ಬಗ್ಗೆ ಚಿಂತಿಸಲು ಬಿಡದೆ ವ್ಯಕ್ತಿಯು ಗುಣಮಟ್ಟದ ಹೆಲ್ತ್ ಕೇರ್ ಲಭ್ಯತೆ ಹೊಂದಿದ್ದಾನೆ ಎಂಬುದನ್ನು ಖಚಿತಪಡಿಸುತ್ತದೆ.

ರಿಟೈರ್‌ಮೆಂಟ್‌ ನಂತರ ಮೆಡಿಕಲ್ ಇನ್ಶೂರೆನ್ಸ್ ಪ್ರಾಮುಖ್ಯತೆ

ರಿಟೈರ್‌ಮೆಂಟ್‌ ನಂತರ ವಿಶೇಷವಾಗಿ ಆ ವಯಸ್ಸಿನಲ್ಲಿ ಮಾಸಿಕ ವೆಚ್ಚಗಳು ಮತ್ತು ಜೀವನಶೈಲಿಯ ಅಗತ್ಯತೆಗಳ ಹೊರತಾಗಿ, ಹೆಲ್ತ್ ಇನ್ಶೂರೆನ್ಸ್ ಆರ್ಥಿಕ ಭದ್ರತೆ ಮತ್ತು ಮನಸ್ಸಿನ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಅವಶ್ಯಕವಾಗಿದೆ.

ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಮಹತ್ವವನ್ನು ಎತ್ತಿ ತೋರಿಸುವ ಕೆಲವು ಕಾರಣಗಳು ಇಲ್ಲಿವೆ:

1. ವಯಸ್ಸಾದ ವರ್ಷಗಳಲ್ಲಿ ಹೆಚ್ಚು ಅಗತ್ಯವಿರುವ ಮೆಡಿಕಲ್ ಕೇರ್

ಭಾರತ ಮತ್ತು ರಾಜ್ಯಗಳ 2011-2036ರ ಜನಸಂಖ್ಯೆಯ ಯೋಜನೆಗಳ ಕುರಿತಾದ ತಾಂತ್ರಿಕ ಗುಂಪಿನ ವರದಿಯ ಪ್ರಕಾರ, 2021ರಲ್ಲಿ ಭಾರತದಲ್ಲಿ ಸುಮಾರು 138 ಮಿಲಿಯನ್ ವೃದ್ಧರಿದ್ದರು ಮತ್ತು 2031ರಲ್ಲಿ ಸುಮಾರು 56 ಮಿಲಿಯನ್ ನಷ್ಟು ವೃದ್ಧರು ಹೆಚ್ಚಾಗುವ ನಿರೀಕ್ಷೆಯಿದೆ.

[1]

ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಗೆ ಧನ್ಯವಾದ ಸಲ್ಲಿಸಬೇಕು, ಯಾಕೆಂದರೆ ಅದರಿಂದಾಗಿ ನಾವು ನಮ್ಮ ಜೀವಿತಾವಧಿಯನ್ನು ಯಶಸ್ವಿಯಾಗಿ ಹೆಚ್ಚಿಸಿಕೊಂಡಿದ್ದೇವೆ. ಅಂದರೆ ರಿಟೈರ್‌ಮೆಂಟ್‌ ನಂತರದ ಸುವರ್ಣ ವರ್ಷಗಳ ದೀರ್ಘಾವಧಿಯನ್ನು ನಾವು ಹೊಂದಿದ್ದೇವೆ. ವಯಸ್ಸಾದಂತೆ, ದೇಹವು ದುರ್ಬಲಗೊಳ್ಳುತ್ತದೆ ಮತ್ತು ವ್ಯಕ್ತಿಯು ಅನಾರೋಗ್ಯ ಮತ್ತು ಗಾಯಗಳಿಗೆ ಹೆಚ್ಚು ಒಳಗಾಗುತ್ತಾನೆ, ಅವರಿಗೆ ಹೆಚ್ಚಿನ ಮೆಡಿಕಲ್ ಕೇರ್ ಅಗತ್ಯವಿರುತ್ತದೆ. ಆಗ ಹೆಲ್ತ್ ಇನ್ಶೂರೆನ್ಸ್ ಅತ್ಯಗತ್ಯವಾಗುತ್ತದೆ.

2. ಅನಿರೀಕ್ಷಿತ ಮೆಡಿಕಲ್ ಎಮರ್ಜೆನ್ಸಿಗಳಿಗೆ ಹಣಕಾಸಿನ ನೆರವು

ಎನ್‌ಜಿಓ ಹೆಲ್ಪ್‌ ಏಜ್ ಇಂಡಿಯಾ ನಡೆಸಿದ ರಾಷ್ಟ್ರೀಯ ಸಮೀಕ್ಷೆಯು 47%ರಷ್ಟು ವೃದ್ಧರು ಇನ್ಕಮ್ ಗಾಗಿ ತಮ್ಮ ಕುಟುಂಬದ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿದ್ದಾರೆ ಮತ್ತು 34% ಪೆನ್ಷನ್ ಮತ್ತು ನಗದು ವರ್ಗಾವಣೆಯನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದೆ.

ಹೆಚ್ಚಿನ ಸೀನಿಯರ್ ಸಿಟಿಜನ್ ಗಳು ಪೆನ್ಷನ್ ಗಳಂತಹ ಸ್ಥಿರ ಮಾಸಿಕ ಇನ್ಕಮ್ ಅನ್ನು ಅವಲಂಬಿಸಿರುವುದರಿಂದ, ಮೆಡಿಕಲ್ ಎಮರ್ಜೆನ್ಸಿಗಳ ವೆಚ್ಚವು ಅವರಿಗೆ ಕೈಗೆಟುಕುವಂತಿಲ್ಲ. ಹೆಲ್ತ್ ಇನ್ಶೂರೆನ್ಸ್ ಈ ಮೆಡಿಕಲ್ ವೆಚ್ಚಗಳಿಗೆ ಆರ್ಥಿಕ ನೆರವು ಒದಗಿಸುತ್ತದೆ.

3. ಸುಧಾರಿತ ಮತ್ತು ಪ್ರಿವೆಂಟಿವ್ ಹೆಲ್ತ್ ಕೇರ್ ನ ಉತ್ತಮ ಲಭ್ಯತೆ

ಸೀನಿಯರ್ ಸಿಟಿಜನ್ ಹೆಲ್ತ್ ಇನ್ಶೂರೆನ್ಸ್ ನಿಮಗೆ ಸುಧಾರಿತ ಹೆಲ್ತ್ ಕೇರ್ ಸೇವೆಯನ್ನು ಪಡೆಯಲು ಅಗತ್ಯವಿರುವ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಅಷ್ಟೇ ಅಲ್ಲ, ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು ವಾರ್ಷಿಕ ಹೆಲ್ತ್ ಚೆಕ್ ಅಪ್ ಮತ್ತು ಇತರ ಪ್ರಿವೆಂಟಿವ್ ಕೇರ್ ಅನ್ನು ಒದಗಿಸುತ್ತವೆ. ಇದು ಪ್ರಿವೆಂಟಿವ್ ಹೆಲ್ತ್ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.

ಹೀಗಾಗಿ, ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದುವುದು ಅತ್ಯಂತ ಮಹತ್ವದ್ದಾಗಿದೆ.

ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಲು 4 ಕಾರಣಗಳು

ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಅತ್ಯಗತ್ಯ. ಏಕೆಂದರೆ ಇದು ಹಣಕಾಸಿನ ನಿರ್ಬಂಧಗಳ ಬಗ್ಗೆ ಚಿಂತಿಸದೆ ಗುಣಮಟ್ಟದ ಹೆಲ್ತ್ ಕೇರ್ ಲಭ್ಯತೆಯನ್ನು ಖಚಿತಪಡಿಸುತ್ತದೆ. ರಿಟೈರ್‌ಮೆಂಟ್‌ ನಂತರ ನೀವು ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ಪರಿಗಣಿಸಬೇಕಾದ ಪ್ರಮುಖ 4 ಕಾರಣಗಳು ಇಲ್ಲಿವೆ:

1. ಹೆಚ್ಚುತ್ತಿರುವ ಹೆಲ್ತ್ ಕೇರ್ ವೆಚ್ಚಗಳು

ಪ್ರತಿ ವರ್ಷ ಆರೋಗ್ಯ ವೆಚ್ಚಗಳು ಹೆಚ್ಚುತ್ತಿವೆ ಮತ್ತು ಈ ವೆಚ್ಚಗಳನ್ನು ಸರಿದೂಗಿಸುವ ಇನ್ಶೂರೆನ್ಸ್ ಅನ್ನು ಹೊಂದಿರುವುದು ಅತ್ಯಗತ್ಯ. ಹೆಲ್ತ್ ಇನ್ಶೂರೆನ್ಸ್, ವೈದ್ಯರ ಭೇಟಿಗಳು, ಔಷಧಿಗಳು ಮತ್ತು ಆಸ್ಪತ್ರೆಯ ವಾಸ್ತವ್ಯದ ಮೇಲಿನ ನಿಮ್ಮ ಹಣವನ್ನು ಉಳಿಸುತ್ತದೆ.

ರಿಟೈರ್‌ಮೆಂಟ್‌ ಹಂತದಲ್ಲಿ, ನೀವು ಸೀಮಿತ ಇನ್ಕಮ್ ಮೂಲವನ್ನು ಹೊಂದಿರುವುದರಿಂದ ಮತ್ತು ಆ ಹಂತದಲ್ಲಿ ಪ್ರತಿಕೂಲ ಆರೋಗ್ಯ ಪರಿಸ್ಥಿತಿಗಳ ಹೆಚ್ಚಿನ ಸಂಭವನೀಯತೆಯನ್ನು ಹೊಂದಿರುವುದರಿಂದ ಮೆಡಿಕಲ್ ವೆಚ್ಚವನ್ನು ಸರಿದೂಗಿಸಲು ಹಣಕಾಸಿನ ರಕ್ಷಣೆ ಹೊಂದಲು ಇದು ಹೆಚ್ಚು ಮುಖ್ಯವಾಗಿದೆ.

ಒಂದು ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ನಿವೃತ್ತರಿಗೆ ಮೆಡಿಕಲ್ ಕೇರ್ ಗಾಗಿ ತಮ್ಮ ಪಾಕೆಟ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ಅವರ ಉಳಿತಾಯವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗುತ್ತದೆ.

2. ಉತ್ತಮ ಹೆಲ್ತ್ ಕೇರ್ ಲಭ್ಯತೆ

ಹೆಲ್ತ್ ಇನ್ಶೊರೆನ್ಸ್ ನೊಂದಿಗೆ, ನೀವು ಹೆಲ್ತ್ ಕೇರ್ ಪೂರೈಕೆದಾರರು ಮತ್ತು ತಜ್ಞರ ವಿಶಾಲ ನೆಟ್‌ವರ್ಕ್‌ಗೆ ಪ್ರವೇಶಾವಕಾಶವನ್ನು ಹೊಂದಿರಬಹುದು. ನಿಮ್ಮ ಆರೋಗ್ಯ ಸ್ಥಿತಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆ ಮತ್ತು ಚಿಕಿತ್ಸೆಯನ್ನು ನೀವು ಪಡೆಯುವುದನ್ನು ಇದು ಖಚಿತಪಡಿಸುತ್ತದೆ.

ಅಲ್ಲದೆ, ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು ಸಾಮಾನ್ಯವಾಗಿ ಪ್ರಿವೆಂಟಿವ್ ಕೇರ್ ಸೇವೆಗಳು ಮತ್ತು ಉಚಿತ ಆರೋಗ್ಯ ತಪಾಸಣೆಗಳ ಲಭ್ಯತೆಯನ್ನು ಒದಗಿಸುತ್ತವೆ. ಆರೋಗ್ಯ ಸಮಸ್ಯೆಗಳನ್ನು ಮೊದಲೇ ಗುರುತಿಸುವ ಮೂಲಕ ಮತ್ತು ಅವುಗಳನ್ನು ತ್ವರಿತವಾಗಿ ಪರಿಹರಿಸುವ ಮೂಲಕ, ನಿವೃತ್ತರು ಹೆಚ್ಚು ದುಬಾರಿ ಮೆಡಿಕಲ್ ಚಿಕಿತ್ಸೆಗಳ ಅಗತ್ಯವನ್ನು ಕಡಿಮೆ ಮಾಡಬಹುದು.

3. ಅನಿರೀಕ್ಷಿತ ಮೆಡಿಕಲ್ ಎಮರ್ಜೆನ್ಸಿಗಳನ್ನು ನಿಭಾಯಿಸಿ

ಹೆಲ್ತ್ ಇನ್ಶೂರೆನ್ಸ್ ಕವರೇಜ್ ನೊಂದಿಗೆ ಮತ್ತು ಹೆಲ್ತ್‌ಕೇರ್ ಪಾಲಿಸಿಯಲ್ಲಿ ಯೋಜಿತ ರೀತಿಯಲ್ಲಿ ಪೂರ್ವನಿರ್ಧರಿತ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ, ನಿವೃತ್ತರು ಆ ಯೋಜಿತವಲ್ಲದ ಮೆಡಿಕಲ್ ಸಂದರ್ಭಗಳನ್ನು ಉತ್ತಮವಾಗಿ ನಿರ್ವಹಿಸಬಹುದು, ವಿಶೇಷವಾಗಿ ದೀರ್ಘಕಾಲದ ಕಾಯಿಲೆಗಳು ಅಥವಾ ಗಾಯಗಳು ಹೊರತಾಗಿ. ಇಲ್ಲದಿದ್ದರೆ ಅವರ ಜೀವಿತಾವಧಿಯ ಉಳಿತಾಯ ಖಾಲಿಯಾಗಬಹುದು.

4. ಮಾನಸಿಕ ಶಾಂತಿ

ಸಾಮಾನ್ಯವಾಗಿ ಫಿಕ್ಸ್‌ಡ್‌ ಇನ್ಕಮ್ ಹೊಂದಿರುವ ನಿವೃತ್ತರಿಗೆ, ಹೆಲ್ತ್ ಇನ್ಶೂರೆನ್ಸ್ ಮಾನಸಿಕ ಶಾಂತಿಗೆ ಪ್ರಮುಖವಾಗಿದೆ. ನಿಮ್ಮ ಆರ್ಥಿಕತೆ ಭದ್ರತೆ ಹೆಚ್ಚಿಸುವ ಹೆಲ್ತ್ ಇನ್ಶೂರೆನ್ಸ್ ನೊಂದಿಗೆ, ಅಗತ್ಯವಿದ್ದಲ್ಲಿ ಅಗತ್ಯ ಮೆಡಿಕಲ್ ಕೇರ್ ಅನ್ನು ನೀಡುವ ವಿಶ್ವಾಸವಿದೆ. ಇದು ಕೈಗೆಟುಕುವ, ತಡೆಗಟ್ಟುವ ಆರೈಕೆಗೆ ಪ್ರವೇಶವನ್ನು ಒದಗಿಸುತ್ತದೆ, ಇದರೊಂದಿಗೆ ನಿಮ್ಮ ದೇಹದ ಆರೋಗ್ಯದ ಬಗ್ಗೆ ನೀವು ತಿಳಿದಿರಬಹುದು.

ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಗಮನಿಸಬೇಕಾದ ವಿಷಯಗಳು

ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ಕೆಲವು ಸಲಹೆಗಳು ಇಲ್ಲಿವೆ:

1. ನಿಮ್ಮ ಹೆಲ್ತ್ ಕೇರ್ ಅಗತ್ಯತೆಗಳನ್ನು ಪರಿಗಣಿಸಿ

ಪ್ರಸ್ತುತ ಮತ್ತು ಭವಿಷ್ಯದಲ್ಲಿ ನಿಮ್ಮ ಹೆಲ್ತ್ ಕೇರ್ ಅಗತ್ಯತೆಗಳ ಬಗ್ಗೆ ಯೋಚಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಯಾವ ರೀತಿಯ ಇನ್ಶೂರೆನ್ಸ್ ಪ್ಲಾನ್ ನಿಮಗೆ ಉತ್ತಮವಾಗಿದೆ ಎಂಬುದನ್ನು ನಿರ್ಧರಿಸಲು ಅದರಿಂದ ನಿಮಗೆ ಸಹಾಯ ಆಗುತ್ತದೆ.

ಉದಾಹರಣೆಗೆ, ನಿಯಮಿತ ಆರೈಕೆಯ ಅಗತ್ಯವಿರುವ ದೀರ್ಘಕಾಲದ ಸಮಸ್ಯೆಗಳನ್ನು ನೀವು ಹೊಂದಿದ್ದರೆ, ನಿಮ್ಮ ವೆಚ್ಚಗಳಿಗೆ ಸಹಾಯ ಮಾಡಲು ನೀವು ಕಡಿಮೆ ಕೋ-ಪೇಗಳ ಪ್ಲಾನ್ ಅನ್ನು ಹೊಂದಬಹುದು. ದೀರ್ಘಕಾಲೀನ ಆರೈಕೆಯ ಅಗತ್ಯವಿರುವ ನಿಯಮಿತ ಮತ್ತು ದೀರ್ಘಕಾಲದ ಸಮಸ್ಯೆಗಳನ್ನು ಒಳಗೊಂಡಿರುವ ಪ್ಲಾನ್ ಗಳಿಗಾಗಿ ನೋಡಿ.

2. ಪೂರ್ವ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು ಕವರ್ ಆಗುತ್ತದೆಯೇ ಎಂದು ಚೆಕ್ ಮಾಡಿ

ನಾವು ವಯಸ್ಸಾದಂತೆ, ಮೊದಲೇ ಅಸ್ತಿತ್ವದಲ್ಲಿರುವ ಮೆಡಿಕಲ್ ಪರಿಸ್ಥಿತಿಗಳು ಉಲ್ಬಣಗೊಳ್ಳುವ ಅಪಾಯವು ಹೆಚ್ಚಾಗುತ್ತದೆ. ಈ ಹಿರಿಯ ವಯಸ್ಸಿನಲ್ಲಿ ನಿಮ್ಮ ಪ್ರೀ-ಎಕ್ಸಿಸ್ಟಿಂಗ್ ಕಂಡಿಷನ್ಸ್ (ಪೂರ್ವ ಅಸ್ತಿತ್ವದಲ್ಲಿರುವ ಸಮಸ್ಯೆಹಳು) ಇನ್ಶೂರೆನ್ಸ್ ನಿಂದ ಕವರ್ ಮಾಡಲು ವರ್ಷಗಳವರೆಗೆ ಕಾಯುವುದು ಒಳ್ಳೆಯ ಆಯ್ಕೆ ಅಲ್ಲ. ಆದ್ದರಿಂದ, ಈ ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ಕವರ್ ಮಾಡುವ ಮತ್ತು ಕವರೇಜ್‌ಗಾಗಿ ಯಾವುದೇ ವೇಟಿಂಗ್ ಪೀರಿಯಡ್ ಗಳನ್ನು ಹೊಂದಿರದ ಪ್ಲಾನ್ ಅನ್ನು ನೋಡಿ.

3. ಡೊಮಿಸಿಲಿಯರಿ ಕೇರ್ ಆಯ್ಕೆಗಾಗಿ ಚೆಕ್ ಮಾಡಿ

ಹೋಮ್ ಕೇರ್ ಎಂದೂ ಕರೆಯಲ್ಪಡುವ ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ತರಬೇತಿ ಪಡೆದ ಆರೈಕೆದಾರರು ಅಥವಾ ಹೆಲ್ತ್ ಕೇರ್ ವೃತ್ತಿಪರರು ತಮ್ಮ ಸ್ವಂತ ಮನೆಗಳಲ್ಲಿ ವ್ಯಕ್ತಿಗಳಿಗೆ ಒದಗಿಸುವ ಆರೈಕೆಯ ಒಂದು ರೂಪವಾಗಿದೆ.

ಸೀನಿಯರ್ ಸಿಟಿಜನ್ ಆಗಿ, ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ನಿಮಗೆ ವೈಯಕ್ತಿಕ ಆರೈಕೆ ಮತ್ತು ಗಮನ ಅಗತ್ಯವಾಗಬಹುದು. ಆದ್ದರಿಂದ, ಇದು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೋಡಬೇಕಾದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

4. ಎಲ್ಲಾ ರೀತಿಗಳಲ್ಲಿ ನಿಮ್ಮ ವೆಚ್ಚವನ್ನು ಮೌಲ್ಯಮಾಪನ ಮಾಡಿ

ವಿಭಿನ್ನ ಇನ್ಶೂರರ್ ರಿಂದ ವಿವಿಧ ರೀತಿಯ ಪಾಲಿಸಿಗಳನ್ನು ಸಂಶೋಧಿಸಿ ಮತ್ತು ಹೋಲಿಕೆ ಮಾಡಿ. ಪ್ರೀಮಿಯಂ ಮಾತ್ರವಲ್ಲದೆ, ಪ್ಲಾನ್ ನ ಒಟ್ಟು ವೆಚ್ಚದ ಉತ್ತಮ ತಿಳುವಳಿಕೆ ಪಡೆಯಲು ಡಿಡಕ್ಟಿಬಲ್ಸ್, ಕೋ-ಪೋ, ಕೋ ಇನ್ಸೂರೆನ್ಸ್ ಮತ್ತು ಪಾವತಿಸಬೇಕಾದ ಗರಿಷ್ಠ ಮೊತ್ತಗಳನ್ನು ಪರಿಗಣಿಸಿ.

ಪ್ರತಿಯೊಂದು ಆಯ್ಕೆಯು ಏನನ್ನು ಕವರ್ ಮಾಡುತ್ತದೆ ಮತ್ತು ನೀವು ಯಾವುದಕ್ಕೆ ಅರ್ಹರಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳುವುದು ವಿವೇಕಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

5. ವ್ಯಾಪಕ ಸಂಖ್ಯೆಯ ನೆಟ್‌ವರ್ಕ್ ಹಾಸ್ಪಿಟಲ್ಸ್ ಹೊಂದಿರುವ ಇನ್ಶೂರರ್ ರನ್ನು ಆಯ್ಕೆಮಾಡಿ

ನೀವು ಆದ್ಯತೆಯ ಹೆಲ್ತ್ ಕೇರ್ ಪೂರೈಕೆದಾರರು ಅಥವಾ ತಜ್ಞರನ್ನು ಹೊಂದಿದ್ದರೆ, ಅವರು ನಿಮ್ಮ ಹೆಲ್ತ್ ಪ್ಲಾನ್ ನಲ್ಲಿನ ನೆಟ್‌ವರ್ಕ್ ಹಾಸ್ಪಿಟಲ್ಸ್ ಪಟ್ಟಿಯಲ್ಲಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಯಾವಾಗಲೂ ಒಳ್ಳೆಯದು. ನೆಟ್‌ವರ್ಕ್ ಹಾಸ್ಪಿಟಲ್ ಹೊರಗಿನ ಆರೈಕೆ ಹೆಚ್ಚು ದುಬಾರಿಯಾಗಬಹುದು ಮತ್ತು ಕವರ್ ಮಾಡದೆಯೇ ಇರಬಹುದು.

ಅಲ್ಲದೆ, ಅನೇಕ ಕ್ಯಾಶ್ ಲೆಸ್ ಹಾಸ್ಪಿಟಲ್ ಗಳನ್ನು ಹೊಂದಿರುವ ಇನ್ಶೂರರ್ ರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ. ಮೆಡಿಕಲ್ ಎಮರ್ಜೆನ್ಸಿ ಸಂದರ್ಭದಲ್ಲಿ, ನಗದು ವ್ಯವಸ್ಥೆ ಮಾಡುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ತೊಂದರೆ-ಮುಕ್ತ ಅನುಭವವನ್ನು ಖಚಿತಪಡಿಸಿಕೊಳ್ಳಲು ಕ್ಯಾಶ್ ಲೆಸ್ ಹಾಸ್ಪಿಟಲೈಸೇಷನ್ ಸೌಲಭ್ಯಗಳನ್ನು ಒದಗಿಸುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆಯ್ಕೆಮಾಡಿ.

6. ತೊಂದರೆ ಮುಕ್ತ ಕ್ಲೈಮ್ ಪ್ರೊಸೆಸ್

ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ನಲ್ಲಿ ತೊಂದರೆ-ಮುಕ್ತ ಅನುಭವದ ಪ್ರಾಮುಖ್ಯತೆಯನ್ನು ನಿರ್ಲಕ್ಷ್ಯ ಮಾಡಲಾಗುವುದಿಲ್ಲ, ವಿಶೇಷವಾಗಿ ತಂತ್ರಜ್ಞಾನ-ಅರಿವಿಲ್ಲದ ಸೀನಿಯರ್ ಸಿಟಿಜನ್ ಗಳಿಗೆ ಅದರ ಅವಶ್ಯಕತೆ ಇದೆ. ಯಾಕೆಂದರೆ ಅವರು ಆನ್‌ಲೈನ್‌ನಲ್ಲಿ ಕ್ಲೈಮ್‌ಗಳನ್ನು ಫೈಲ್ ಮಾಡುವಾಗ ತೊಂದರೆಗಳನ್ನು ಎದುರಿಸಬಹುದು.

ಉತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಸರಳ ಮತ್ತು ನೇರವಾದ ಕ್ಲೈಮ್ ಪ್ರೊಸೆಸ್ ಅನ್ನು ಹೊಂದಿರಬೇಕು, ಅದು ಕ್ಲೈಮ್ ಅನ್ನು ಹೇಗೆ ಫೈಲ್ ಮಾಡಬೇಕು ಎಂಬುದರ ಕುರಿತು ಸ್ಪಷ್ಟ ಸೂಚನೆಗಳನ್ನು ನೀಡುವ ಮೂಲಕ ಅರ್ಥಮಾಡಿಕೊಳ್ಳಲು ಮತ್ತು ಪ್ರೊಸೆಸ್ ಮಾಡಲು ಸುಲಭವಾಗಿರಬೇಕು. ಕ್ಲೈಮ್‌ಗಳನ್ನು ಫೈಲ್ ಮಾಡುವಲ್ಲಿ ಸೀನಿಯರ್ ಸಿಟಜನ್ ಗಳಿಗೆ ಸಹಾಯ ಮಾಡಲು ಮತ್ತು ಅವರಿಗೆ ತೊಂದರೆ-ಮುಕ್ತ ಅನುಭವವನ್ನು ಒದಗಿಸಲು ಮೀಸಲಾದ ತಂಡವು ಹೆಚ್ಚುವರಿ ಪ್ರಯೋಜನ ಒದಗಿಸುತ್ತದೆ.

7. ಪೂರಕ ಇನ್ಶೂರೆನ್ಸ್ ಅನ್ನು ಪರಿಗಣಿಸಿ

ನಿಮ್ಮ ಅಗತ್ಯಗಳನ್ನು ಅವಲಂಬಿಸಿ, ನೀವು ದಂತ, ದೃಷ್ಟಿ, ಅಥವಾ ಲಾಂಗ್-ಟರ್ಮ್ ಕೇರ್ ಇನ್ಶೂರೆನ್ಸ್ ನಂತಹ ಪೂರಕ ಇನ್ಶೂರೆನ್ಸ್ ಅನ್ನು ಪರಿಗಣಿಸಲು ಬಯಸಬಹುದು. ಈ ಪ್ಲಾನ್ ಗಳು ಕವರೇಜ್‌ನಲ್ಲಿನ ಅಂತರವನ್ನು ತುಂಬಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಪ್ರಾಥಮಿಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಲ್ಲಿ ಸೇರಿಸದಿರುವ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತದೆ.

ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ನಿಮ್ಮ ಹೆಲ್ತ್ ಕೇರ್ ಅಗತ್ಯತೆಗಳು ಮತ್ತು ಬಜೆಟ್ ಅನ್ನು ಎಚ್ಚರಿಕೆಯಿಂದ ಪರಿಗಣಿಸುವ ಅಗತ್ಯವಿದೆ ಎಂಬುದನ್ನು ನೆನಪಿಡಿ. ಸರಿಯಾದ ಪ್ರಶ್ನೆಗಳನ್ನು ಕೇಳುವ ಮತ್ತು ಸಂಶೋಧಿಸುವ ಮೂಲಕ, ನೀವು ನಿಭಾಯಿಸಬಹುದಾದ ಬೆಲೆಯಲ್ಲಿ ನಿಮಗೆ ಅಗತ್ಯವಿರುವ ಕವರೇಜ್ ಅನ್ನು ಒದಗಿಸುವ ಪ್ಲಾನ್ ಅನ್ನು ನೀವು ಪಡೆಯಬಹುದು.

ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು

ನಾನು ರಿಟೈರ್‌ಮೆಂಟ್‌ ನಂತರ ನನ್ನ ಎಂಪ್ಲಾಯರ್-ಪ್ರಾಯೋಜಿಸಿದ ಹೆಲ್ತ್ ಇನ್ಶೂರೆನ್ಸ್ ಅನ್ನು ಇಟ್ಟುಕೊಳ್ಳಬಹುದೇ?

ಇದು ಎಂಪ್ಲಾಯರ್ ಗಳ ಪಾಲಿಸಿಯನ್ನು ಅವಲಂಬಿಸಿರುತ್ತದೆ. ಕೆಲವು ಎಂಪ್ಲಾಯರ್ ಗಳು ನಿವೃತ್ತರಿಗೆ ತಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ಹೆಚ್ಚಿನ ಪ್ರೀಮಿಯಂಗಳು ಅಥವಾ ಕಡಿಮೆ ಪ್ರಯೋಜನಗಳೊಂದಿಗೆ ಇರಿಸಿಕೊಳ್ಳಲು ಅವಕಾಶ ನೀಡಬಹುದು. ಲಭ್ಯವಿರುವ ಆಯ್ಕೆಗಳನ್ನು ನಿರ್ಧರಿಸಲು ನಿಮ್ಮ ಎಂಪ್ಲಾಯರ್ ರೊಂದಿಗೆ ಚೆಕ್ ಮಾಡುವುದು ಅತ್ಯಗತ್ಯ.

ಭಾರತದಲ್ಲಿ ಸೀನಿಯರ್ ಸಿಟಿಜನ್ ಗಳಿಗೆ ಲಭ್ಯವಿರುವ ವಿವಿಧ ರೀತಿಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು ಯಾವುವು?

ಭಾರತದಲ್ಲಿ ಸೀನಿಯರ್ ಸಿಟಿಜನ್ ಗಳಿಗೆ ಹಲವಾರು ರೀತಿಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು ಲಭ್ಯವಿದೆ, ಅವುಗಳೆಂದರೆ:

  1. ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು
  2. ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು
  3. ಸೀನಿಯರ್ ಸಿಟಿಜನ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು
  4. ಕ್ರಿಟಿಕಲ್ ಇಲ್‌ನೆಸ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು
  5. ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು

ರಿಟೈರ್‌ಮೆಂಟ್‌ ನಂತರವೂ ನಾನು ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದೇ?

ಹೌದು, ನೀವು ಭಾರತದಲ್ಲಿ ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು. ಆದಾಗ್ಯೂ, ಇನ್ಶೂರೆನ್ಸ್ ವೆಚ್ಚವು ನೀವು ಉದ್ಯೋಗದಲ್ಲಿರುವಾಗ ಪಾವತಿಸಿದ್ದಕ್ಕಿಂತ ಹೆಚ್ಚಿರಬಹುದು.

ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಿದರೆ ಯಾವುದೇ ಟ್ಯಾಕ್ಸ್ ಪ್ರಯೋಜನಗಳಿವೆಯೇ?

ಹೌದು, ಭಾರತದಲ್ಲಿ ರಿಟೈರ್‌ಮೆಂಟ್‌ ನಂತರ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಿದರೆ ಟ್ಯಾಕ್ಸ್ ಪ್ರಯೋಜನಗಳಿವೆ. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳು ಇನ್ಕಮ್ ಟ್ಯಾಕ್ಸ್ ಆಕ್ಟ್ ಸೆಕ್ಷನ್ 80D ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಗೆ ಅರ್ಹವಾಗಿವೆ. ಅಲ್ಲದೆ, ಸೀನಿಯರ್ ಸಿಟಿಜನ್ ಗಳಿಗೆ ಈ ಡಿಡಕ್ಷನ್ ಲಿಮಿಟ್ ₹50000/-

ನಾನು ಉತ್ತಮ ಆಯ್ಕೆಯನ್ನು ಕಂಡುಕೊಂಡರೆ, ರಿಟೈರ್‌ಮೆಂಟ್‌ ನಂತರ ನಾನು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳನ್ನು ಬದಲಾಯಿಸಬಹುದೇ?

ಹೌದು, ಪೋರ್ಟೆಬಿಲಿಟಿಯೊಂದಿಗೆ, ನೀವು ಉತ್ತಮ ಆಯ್ಕೆಯನ್ನು ಕಂಡುಕೊಂಡರೆ ರಿಟೈರ್‌ಮೆಂಟ್‌ ನಂತರ ನೀವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳನ್ನು ಬದಲಾಯಿಸಬಹುದು. ಆದಾಗ್ಯೂ, ನೀವು ಯಾವಾಗ ಬದಲಾವಣೆಗಳನ್ನು ಮಾಡಬಹುದು ಎಂಬುದಕ್ಕೆ ನಿರ್ಬಂಧಗಳು ಇರಬಹುದು, ಆದ್ದರಿಂದ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಅಥವಾ ಏಜೆಂಟ್ ಅನ್ನು ಪರಿಶೀಲಿಸುವುದು ಅತ್ಯಗತ್ಯ.