ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ.

ಹೆಲ್ತ್ ಇನ್ಶೂರೆನ್ಸ್ ನಲ್ಲಿ ಕೂಲಿಂಗ್-ಆಫ್ ಪೀರಿಯಡ್ ಎಂದರೇನು?

ಕೋವಿಡ್-19 ನಂತಹ ಕೆಲವು ಕಾಯಿಲೆಗಳಿಂದ ಚೇತರಿಸಿಕೊಂಡಿರುವ ರೋಗಿಗಳಿಗೆ, ಹೊಸ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಖರೀದಿಗೆ ಸಂಬಂಧಿಸಿದಂತೆ ನೀವು "ಕೂಲಿಂಗ್-ಆಫ್ ಪೀರಿಯಡ್" ಎಂಬ ಪದವನ್ನು ಕೇಳಬಹುದು.

ಈ ಕೂಲಿಂಗ್-ಆಫ್ ಪೀರಿಯಡ್ ಮೂಲಭೂತವಾಗಿ ಚೇತರಿಕೆಯ ನಂತರದ ಒಂದು ಪೀರಿಯಡ್ ನಾಗಿದ್ದು, ಈ ಸಮಯದಲ್ಲಿ ವ್ಯಕ್ತಿಯು ಇನ್ನೂ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ಸಾಧ್ಯವಿಲ್ಲ, ಇದು ವೇಟಿಂಗ್ ಪೀರಿಯಡ್ಗಿಂತ ಭಿನ್ನವಾಗಿರುತ್ತದೆ. ಈ ಪೀರಿಯಡ್ ಕೆಲವು ದಿನಗಳಿಂದ ಕೆಲವು ತಿಂಗಳುಗಳವರೆಗೆ ಇರುತ್ತದೆ ಮತ್ತು ಇದು ಮುಂದೂಡಿಕೆ ಪೀರಿಯಡ್ ನಂತಿರುತ್ತದೆ, ಇದರಲ್ಲಿ ಒಬ್ಬ ವ್ಯಕ್ತಿಯು ತನ್ನ ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಇನ್ಶೂರ್ ಆಗಲು ಯೋಗ್ಯನಾಗುತ್ತಾನೆ.

ಈ ರೀತಿಯ ಕೂಲ್-ಆಫ್ ಪೀರಿಯಡ್ ಭಾರತದ ಹೆಚ್ಚಿನ ಪ್ರಮುಖ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಿಗೆ ಅನ್ವಯಿಸುತ್ತದೆ.

ಹೆಲ್ತ್ ಇನ್ಶೂರೆನ್ಸ್ ನಲ್ಲಿ ಕೂಲಿಂಗ್-ಆಫ್ ಪೀರಿಯಡ್ ಏಕೆ ಮುಖ್ಯವಾಗಿದೆ?

ಪ್ರಸ್ತುತವಾಗಿ ಬಳಲುತ್ತಿರುವ ಅಥವಾ ಇತ್ತೀಚೆಗಷ್ಟೇ ಒಂದು ವೈದ್ಯಕೀಯ ಸ್ಥಿತಿಯಿಂದ ಚೇತರಿಸಿಕೊಂಡಿರುವ ಯಾವುದೇ ವ್ಯಕ್ತಿಯು ಹೆಲ್ತ್ ಇನ್ಶೂರೆನ್ಸ್ ಕವರ್ ಗಾಗಿ ಅರ್ಜಿ ಸಲ್ಲಿಸುವಾಗ, ಒಳಗೊಂಡಿರುವ ಅಪಾಯಗಳ ಪ್ರಕಾರ ಇನ್ಶೂರೆನ್ಸ್ ಅನ್ನು ಅಂಡರ್ರೈಟ್ ಮಾಡಲಾಗುತ್ತದೆ. ಹೀಗಾಗಿ, ವೈದ್ಯಕೀಯ ಸ್ಥಿತಿ ಸುಧಾರಿಸಿದ ನಂತರ ಮತ್ತು ವ್ಯಕ್ತಿಯು ಇನ್ಶೂರರ್ ಗೆ ಹೆಚ್ಚಿನ ಅಪಾಯವನ್ನು ಉಂಟುಮಾಡುವುದಿಲ್ಲ ಎಂದಾದ ಮೇಲೆ ಪಾಲಿಸಿಯನ್ನು ಅನುಮೋದಿಸಲಾಗುತ್ತದೆ.

 ಕೋವಿಡ್-19 ನಿಂದ ಚೇತರಿಸಿಕೊಂಡ ಜನರ ಪ್ರಕರಣಗಳಲ್ಲಿ, ಇದು ಅವರ ರೋಗಲಕ್ಷಣಗಳು ಸಂಪೂರ್ಣವಾಗಿ ಕಡಿಮೆಯಾಗಲು ಸಮಯವನ್ನು ನೀಡುತ್ತದೆ ಮತ್ತು ಮರುಕಳಿಸುವಿಕೆಯ ಸಾಧ್ಯತೆಗಳು ಕಡಿಮೆಯಾಗಿದೆ ಎಂದು ತೋರಿಸುತ್ತದೆ. ಹೆಚ್ಚುವರಿಯಾಗಿ, ಲಕ್ಷಣರಹಿತ ಕೋವಿಡ್-19 ಹೊಂದಿರುವವರು ಈಗ ಅವರು ವೈರಸ್ ಹೊಂದಿದ್ದಾರೆಂದು ತಿಳಿಯದೆ ಇರಬಹುದು ಆದರೆ ಭವಿಷ್ಯದಲ್ಲಿ ಕೊರೋನಾವೈರಸ್ ಇರುವುದು ಪತ್ತೆಯಾಗಬಹುದು.

ಕೋವಿಡ್-19 ನ ದೀರ್ಘಕಾಲೀನ ಪರಿಣಾಮಗಳು ಇನ್ನೂ ತಿಳಿದಿಲ್ಲವಾದ್ದರಿಂದ ಮತ್ತು ಶ್ವಾಸಕೋಶದ ಮತ್ತು ಹೃದಯರಕ್ತನಾಳದ ಸಮಸ್ಯೆಗಳ ಪ್ರಕರಣಗಳು ಪತ್ತೆಯಾಗಿರುವುದರಿಂದ, ಚೇತರಿಸಿಕೊಂಡ ರೋಗಿಗಳಿಗೆ ಹೊಸ ಪಾಲಿಸಿಗಳನ್ನು ಅಂಡರ್‌ರೈಟ್ ಮಾಡುವುದು ಹೆಚ್ಚು ಸಂಕೀರ್ಣವಾದ ಪ್ರಕ್ರಿಯೆಯಾಗಿದೆ.

ಕೂಲಿಂಗ್-ಆಫ್ ಪೀರಿಯಡ್ ಇಂತಹ ಯಾವುದೇ ತೊಡಕುಗಳಿಗೆ ಹೊರಹೊಮ್ಮಲು ಸಮಯವನ್ನು ಅನುಮತಿಸುತ್ತದೆ, ಏಕೆಂದರೆ ಅವುಗಳು ಪಾಲಿಸಿಯ ಮೇಲೆ ಪ್ರಭಾವ ಬೀರಬಹುದು.

ಇದರರ್ಥ ಪಾಲಿಸಿಹೋಲ್ಡರ್ಸ್ ಭವಿಷ್ಯದಲ್ಲಿ ತಮ್ಮ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವಲ್ಲಿ ಸಮಸ್ಯೆಗಳನ್ನು ಹೊಂದಿರುವುದಿಲ್ಲ.

ಹೆಲ್ತ್ ಇನ್ಶೂರೆನ್ಸ್ ನಲ್ಲಿ ಈ ಕೂಲಿಂಗ್-ಆಫ್ ಪೀರಿಯಡ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಕೂಲಿಂಗ್-ಆಫ್ ಪೀರಿಯಡ್ ಇನ್ಶೂರರ್ ಗೆ ಗ್ರಾಹಕರು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ಅವರ ಆರೋಗ್ಯವನ್ನು ನ್ಯಾಯಯುತವಾಗಿ ಮತ್ತು ನಿಖರವಾಗಿ ಮೌಲ್ಯಮಾಪನ ಮಾಡಲು ಸಮಯವನ್ನು ನೀಡುತ್ತದೆ.

ಈ ವೇಟಿಂಗ್ ಪೀರಿಯಡ್ ನಲ್ಲಿ, ನೆಗೆಟಿವ್ ರಿಪೋರ್ಟ್ ಅನ್ನು ಒದಗಿಸಲು ಮತ್ತು ದೈಹಿಕ ತಪಾಸಣೆಗೆ ಒಳಗಾಗಲು ನಿಮ್ಮಲ್ಲಿ ಕೇಳಲಾಗಬಹುದು. ಕೆಲವು ಇನ್ಶೂರರ್ ಗಳು ಕಳೆದ ಆರು ತಿಂಗಳಿಂದ ಒಂದು ವರ್ಷದವರೆಗಿನ ಯಾವುದೇ ಆರೋಗ್ಯ ಪರಿಸ್ಥಿತಿಗಳನ್ನು ಬಹಿರಂಗಪಡಿಸಲು ಮತ್ತು ವೈದ್ಯಕೀಯ ದಾಖಲೆಗಳನ್ನು ಒದಗಿಸುವಂತೆ ನಿಮ್ಮಲ್ಲಿ ಕೇಳಬಹುದು.

ಅಪಾಯದ ಮೌಲ್ಯಮಾಪನದ ದೃಷ್ಟಿಕೋನದಿಂದ ವ್ಯಕ್ತಿಯ ಆರೋಗ್ಯ ಸ್ಥಿತಿಯು ಉತ್ತಮವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಮುಖ್ಯವಾಗಿದೆ.

ತದನಂತರ, ಪ್ರಕರಣವನ್ನು ಅವಲಂಬಿಸಿ, ಇನ್ಶೂರೆನ್ಸ್ ಅಂಡರ್‌ರೈಟರ್‌ಗಳು ತಕ್ಷಣವೇ ಪಾಲಿಸಿಯನ್ನು ನೀಡಬೇಕೆ ಅಥವಾ ಕೂಲಿಂಗ್-ಆಫ್ ಪೀರಿಯಡ್ ಗೆ ಅದನ್ನು ಮುಂದೂಡಬೇಕೆ ಎಂಬುದರ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಆದಾಗ್ಯೂ, ಇದು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ಹೆಲ್ತ್ ಇನ್ಶೂರೆನ್ಸ್ ನಲ್ಲಿರುವ ಕನಿಷ್ಠ ಕೂಲಿಂಗ್-ಆಫ್ ಪೀರಿಯಡ್ ಎಷ್ಟು?

ಕೊರೋನಾವೈರಸ್‌ಗಾಗಿ ಹೆಲ್ತ್ ಇನ್ಶೂರೆನ್ಸ್ನ ಕೂಲಿಂಗ್-ಆಫ್ ಪೀರಿಯಡ್ ವಿವಿಧ ಕಂಪನಿಗಳಿಗೆ ವಿಭಿನ್ನ ವಾಗಿರುತ್ತದೆ. ಆದಾಗ್ಯೂ, ಸಾಮಾನ್ಯವಾಗಿ, ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿ ಹೊರಬಂದವರು ಮೆಡಿಕಲ್ ಇನ್ಶೂರೆನ್ಸ್ ಕವರ್ ಗಾಗಿ ಅರ್ಜಿ ಸಲ್ಲಿಸಲು ರೋಗನಿರ್ಣಯದ ದಿನಾಂಕದಿಂದ 15-90 ದಿನಗಳವರೆಗೆ ಕಾಯಬೇಕಾಗುತ್ತದೆ.

ವೈರಸ್‌ನಿಂದ ಅನಾರೋಗ್ಯಕ್ಕೆ ಒಳಗಾದ ಜನರು ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸುವ ಮೊದಲು ಪೂರ್ಣ ಚೇತರಿಕೆಗಾಗಿ ಕಾಯಬೇಕಾಗುತ್ತದೆ ಮತ್ತು ಕೆಲವೊಮ್ಮೆ ನೆಗೆಟಿವ್ ಪರೀಕ್ಷೆಯನ್ನು ಸಹ ಮಾಡಿಸಬೇಕಾಗುತ್ತದೆ.

ಈ ಹೆಲ್ತ್ ಇನ್ಶೂರೆನ್ಸ್ ಕೂಲಿಂಗ್-ಆಫ್ ಪೀರಿಯಡ್ ನ ಬಗ್ಗೆ ನೀವು ಏನು ಮಾಡಬಹುದು?

ತಾತ್ತ್ವಿಕವಾಗಿ, ಯಾವುದೇ ವಿಳಂಬವಿಲ್ಲದೆ ಪಾಲಿಸಿಯ ಪ್ರಯೋಜನಗಳನ್ನು ಪಡೆಯಲು, ನೀವು ಕೋವಿಡ್-19 ಸೋಂಕಿಗೆ ಒಳಗಾಗುವ ಮೊದಲೇ ನೀವು ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ಪಡೆದಿರಬೇಕು. ನಿಮ್ಮ ಪಾಲಿಸಿಯ ಅಡಿಯಲ್ಲಿ ಏನೆಲ್ಲಾ ಕವರ್ ಆಗಿದೆ ಎಂಬುದನ್ನು ಯಾವಾಗಲೂ ಪರಿಶೀಲಿಸಿ (ಉದಾಹರಣೆಗೆ ಕೋವಿಡ್-19 ಚಿಕಿತ್ಸೆ ಅಥವಾ ಆಸ್ಪತ್ರೆ ದಾಖಲಾತಿ, ಮತ್ತು ಕ್ಲೈಮ್ ಮೊತ್ತಗಳು), ಇದರಿಂದ ನೀವು ಎಲ್ಲಾ ಸಂದರ್ಭಗಳಿಗೆ ಸಿದ್ಧರಾಗಿರುವಿರಿ.

ಅಲ್ಲದೆ, ನಿಮ್ಮ ಕವರೇಜ್‌ನಲ್ಲಿ ಯಾವುದೇ ಪೆನಲ್ಟಿಗಳು ಮತ್ತು ಅಂತರವನ್ನು ತಪ್ಪಿಸಲು ಯಾವಾಗಲೂ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ಸರಿಯಾದ ಸಮಯದಲ್ಲಿ ನವೀಕರಿಸಿ.

ನೀವು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಲ್ಲಿ, ನಿಮ್ಮಿಂದ ಕೇಳಲಾದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಮರೆಯದಿರಿ, ಅಂದರೆ ಪೂರ್ವ ಆರೋಗ್ಯ ಪರಿಸ್ಥಿತಿಗಳು ಅಥವಾ ವೈದ್ಯಕೀಯ ದಾಖಲೆಗಳು ಇತ್ಯಾದಿ, ಇದರಿಂದ ನೀವು ನಂತರ ನಿಮ್ಮ ಕ್ಲೈಮ್ ತಿರಸ್ಕಾರವಾಗಳು ಕಾರಣವಾಗುವ ಯಾವುದೇ ಭಿನ್ನತೆಗಳನ್ನು ತಪ್ಪಿಸಬಹುದು.


ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಜಾಗತಿಕ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಅಗತ್ಯವಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದು ಬಹುದೊಡ್ಡ ಹಣಕಾಸಿನ ನಷ್ಟದಿಂದ ನಿಮ್ಮನ್ನು ಉಳಿಸಬಹುದು. ಕೋವಿಡ್-19 ನಂತಹ ಗಂಭೀರ ಕಾಯಿಲೆಗಳಿಂದ ಚೇತರಿಸಿಕೊಂಡವರು ಭವಿಷ್ಯದ ತೊಡಕುಗಳ ಸಾಧ್ಯತೆಯನ್ನು ಹೊಂದಿರಬಹುದಾದ ಕಾರಣ, ಅವರು ಹೊಸ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ಅವರ ಆರೋಗ್ಯವನ್ನು ನ್ಯಾಯಯುತವಾಗಿ ಮತ್ತು ನಿಖರವಾಗಿ ಮೌಲ್ಯಮಾಪನ ಮಾಡಲು ಕೂಲಿಂಗ್-ಆಫ್ ಪೀರಿಯಡ್ ಗೆ ಒಳಗಾಗಬೇಕಾಗಬಹುದು.

ಆದಾಗ್ಯೂ, ನೀವು ಉತ್ತಮ ಆರೋಗ್ಯದಲ್ಲಿದ್ದರೆ ಮತ್ತು ಇನ್ನೂ ವೈರಸ್ ಸೋಂಕಿಗೆ ಒಳಗಾಗದಿದ್ದರೆ, ಹೆಚ್ಚು ತ್ವರಿತವಾಗಿ ರಕ್ಷಣೆಯನ್ನು ಪಡೆಯಲು, ಸಾಧ್ಯವಾದಷ್ಟು ಬೇಗ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಅನ್ನು ಪಡೆಯಲು ಪ್ರಯತ್ನಿಸಿ. ಮತ್ತು ಅಂತಹ ಸಂದರ್ಭಗಳು ಉದ್ಭವಿಸಿದರೆ, ನಿಮ್ಮ ಚಿಕಿತ್ಸೆ ಮತ್ತು ಚೇತರಿಕೆಯ ಪೀರಿಯಡ್ ನಲ್ಲಿ ಉಂಟಾಗುವ ಯಾವುದೇ ವೆಚ್ಚಗಳಿಗೆ ನೀವು ಕವರ್ ಅನ್ನು ಪಡೆದಿರುತ್ತೀರಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಕೂಲಿಂಗ್-ಆಫ್ ಪೀರಿಯಡ್ ನ ಅರ್ಥವೇನು?

ಕೂಲಿಂಗ್-ಆಫ್ ಪೀರಿಯಡ್ ಕೋವಿಡ್-19 ನಂತಹ ಕೆಲವು ಕಾಯಿಲೆಗಳಿಂದ ಚೇತರಿಸಿಕೊಂಡ ನಂತರದ ಒಂದು ಪೀರಿಯಡ್ ಆಗಿದ್ದು ಈ ಸಮಯದಲ್ಲಿ ವ್ಯಕ್ತಿಯು ಆಗಲೇ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ಸಾಧ್ಯವಿಲ್ಲ. ಇದು ಮುಂದೂಡಿಕೆ ಪೀರಿಯಡ್ ನಂತಿರುತ್ತದೆ, ಇಲ್ಲಿ ಒಬ್ಬ ವ್ಯಕ್ತಿಗೆ ತನ್ನ ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯವನ್ನು ನೀಡಲಾಗುವುದು ಮತ್ತು ನಂತರ ಅವರು ಇನ್ಶೂರೆನ್ಸ್ ಮಾಡಿಸಿಕೊಳ್ಳಲು ಯೋಗ್ಯರಾಗುತ್ತಾರೆ. ಈ ಪೀರಿಯಡ್ ಕೆಲವು ದಿನಗಳಿಂದ ಕೆಲವು ತಿಂಗಳುಗಳವರೆಗೆ ಇರಬಹುದು.

ಇನ್ಶೂರೆನ್ಸ್ ಅನ್ನು ರಿನೀವ್ ಮಾಡುವಾಗ ಕೂಲಿಂಗ್-ಆಫ್ ಪೀರಿಯಡ್ ಇರುತ್ತದೆಯೇ?

ಇಲ್ಲ, ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವ್ ಮಾಡಿದಾಗ (ಅಂದರೆ ನಿಮ್ಮ ಪಾಲಿಸಿಯ ಮುಕ್ತಾಯ ಅಥವಾ ಇತರ ಕಾರಣಗಳಿಂದಾಗಿ ನಿಮ್ಮ ಇನ್ಶೂರೆನ್ಸ್ ಕವರೇಜ್ ನಲ್ಲಿ ಯಾವುದೇ ವಿರಾಮವಿಲ್ಲದಿದ್ದರೆ), ಕೂಲಿಂಗ್-ಆಫ್ ಪೀರಿಯಡ್ ಅನ್ವಯಿಸುವುದಿಲ್ಲ.

ಹೆಲ್ತ್ ಇನ್ಶೂರೆನ್ಸ್ ನಲ್ಲಿ ಕೂಲಿಂಗ್-ಆಫ್ ಪೀರಿಯಡ್ ಮತ್ತು ವೇಟಿಂಗ್ ಪೀರಿಯಡ್ ನಡುವಿನ ವ್ಯತ್ಯಾಸವೇನು?

ಕೂಲಿಂಗ್-ಆಫ್ ಪೀರಿಯಡ್ :

  • ಕೋವಿಡ್-19 ನಂತಹ ಅನಾರೋಗ್ಯದಿಂದ ನೀವು ಚೇತರಿಸಿಕೊಂಡ ನಂತರದ ಇದೊಂದು ಅಲ್ಪಾವಧಿಯಾಗಿದ್ದು, ಇದರ ಮಧ್ಯೆ ನೀವು ಕೊರೊನಾವೈರಸ್ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ಸಾಧ್ಯವಾಗದಿರಬಹುದು.

  • ಇದು ಎರಡು ವಾರಗಳಿಂದ ಮೂರು ತಿಂಗಳವರೆಗೆ ಇರಬಹುದು.

ವೇಟಿಂಗ್ ಪೀರಿಯಡ್ :

  • ನೀವು ಪಾಲಿಸಿಯನ್ನು ಖರೀದಿಸಿದ ನಂತರ ಇದು ನಡೆಯುತ್ತದೆ. ಇದು ಇನ್ಶೂರೆನ್ಸ್ ಪಾಲಿಸಿಯ ಕೆಲವು ಅಥವಾ ಎಲ್ಲಾ ಪ್ರಯೋಜನಗಳಿಗಾಗಿ ಕ್ಲೈಮ್ ಮಾಡುವ ಮೊದಲು ನೀವು ಕಾಯಬೇಕಾದ ಸಮಯವಾಗಿದೆ.

  • ಸಾಮಾನ್ಯವಾಗಿ, ಒಂದು ಆರಂಭಿಕ ವೇಟಿಂಗ್ ಪೀರಿಯಡ್ ಇರುತ್ತದೆ, ಇದರ ಜೊತೆಯಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ರೋಗಗಳು, ಮೆಟರ್ನಿಟಿ ಪ್ರಯೋಜನಗಳು ಮತ್ತು ಕೆಲವು ಇತರ ಕಾಯಿಲೆಗಳಿಗೆ ನಿರ್ದಿಷ್ಟ ವೇಟಿಂಗ್ ಪೀರಿಯಡ್ ಗಳು ಇರುತ್ತವೆ.

  • ವೇಟಿಂಗ್ ಪೀರಿಯಡ್ ಮತ್ತು ಅದರ ನಿಯಮಗಳು ಮತ್ತು ಷರತ್ತುಗಳು ಸ್ಥಿತಿ ಮತ್ತು ಇನ್ಶೂರೆನ್ಸ್ ಕಂಪೆನಿಯ ಆಧಾರದ ಮೇಲೆ ಬದಲಾಗುತ್ತವೆ.

ನಾನು ಇನ್ನೊಂದು ರೀತಿಯ ಕೂಲಿಂಗ್-ಆಫ್ ಪೀರಿಯಡ್ ಬಗ್ಗೆ ಕೇಳಿದ್ದೇನೆ, ಅದು ಏನು?

ಇನ್ಶೂರೆನ್ಸ್ ಕಂಪನಿಗಳು ಹೊಸ ಖರೀದಿದಾರರಿಗೆ 15-30 ದಿನಗಳ ಕೂಲಿಂಗ್-ಆಫ್ ಪೀರಿಯಡ್ (ಕೆಲವೊಮ್ಮೆ ಫ್ರೀ ಲುಕ್ ಪೀರಿಯಡ್ ಎಂದೂ ಕರೆಯಲಾಗುತ್ತದೆ) ನೀಡುತ್ತವೆ. ಇಂತಹ ಕೂಲಿಂಗ್-ಆಫ್ ಪೀರಿಯಡ್ ನ ಅಡಿಯಲ್ಲಿ, ತಮ್ಮ ಪಾಲಿಸಿಯ ಪ್ರಾರಂಭದ ದಿನಾಂಕದಿಂದ 15-30 ದಿನಗಳೊಳಗೆ ಕ್ಲೈಮ್ ಮಾಡದ ಸದಸ್ಯರು ತಮ್ಮ ಪಾಲಿಸಿಯನ್ನು ರದ್ದುಗೊಳಿಸಲು ಮತ್ತು ಪೂರ್ಣ ರಿಇಂಬರ್ಸ್ ಮೆಂಟ್ ಪಡೆಯಲು ಅರ್ಹರಾಗಿರುತ್ತಾರೆ.