ಹೆಲ್ತ್ ಇನ್ಶೂರೆನ್ಸ್ ನಲ್ಲಿ ಆಯುಷ್ ಪ್ರಯೋಜನದ ಪೂರ್ಣ ವಿವರಣೆ
ಹೆಲ್ತ್ ಇನ್ಶೂರೆನ್ಸ್ ನಲ್ಲಿ ಆಯುಷ್ ಪ್ರಯೋಜನ ಅಂದರೇನು?
ಆಯುಷ್ ಅನ್ನು ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಆರೋಗ್ಯ ವ್ಯವಸ್ಥೆ ಎಂದೂ ಸಹ ಕರೆಯಲಾಗುತ್ತದೆ. ಆಯುಷ್ ಚಿಕಿತ್ಸೆಗಳು ಮೂಲಭೂತವಾಗಿ ನೈಸರ್ಗಿಕ ಕಾಯಿಲೆಗಳ ಕಲ್ಪನೆಯನ್ನು ಆಧರಿಸಿರುವುದರಿಂದ ಆಯುಷ್ ಚಿಕಿತ್ಸೆಗಳು ನಿರ್ದಿಷ್ಟ ರೋಗಗಳನ್ನು ಗುಣಪಡಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಔಷಧ ಚಿಕಿತ್ಸೆಯನ್ನು ಒಳಗೊಂಡಿರುತ್ತದೆ.
ಆದಾಗ್ಯೂ, ಈ ಔಷಧಿಗಳು ಸಾಮಾನ್ಯವಾಗಿ ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿರುತ್ತವೆ, ಕಡಿಮೆ ಅಡ್ಡ - ಪರಿಣಾಮಗಳೊಂದಿಗೆ ದೇಹವು ಹೀರಿಕೊಳ್ಳಲು ಮತ್ತು ಸುಲಭವಾಗಿ ಪ್ರಯೋಜನವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.
IRDAI ನಿಯಮಗಳಲ್ಲಿ ಮಾರ್ಪಾಡು ಮಾಡಿದ ನಂತರ, ನಮ್ಮಂತಹ ಅನೇಕ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಈಗ ಆಯುಷ್ ಚಿಕಿತ್ಸೆಗಳಿಗೂ ಸಹ ರಕ್ಷಣೆ ನೀಡುತ್ತವೆ, ವಿಶೇಷವಾಗಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಇನ್ಶೂರೆನ್ಸ್ ಮಾಡಲಾದ ಕುಟುಂಬದ ಸದಸ್ಯರಿಗೆ.
ಡಿಸ್ಕ್ಲೈಮರ್: ಪ್ರಸ್ತುತ, ಡಿಜಿಟ್‌ನಲ್ಲಿ ನಾವು ನಮ್ಮ ಹೆಲ್ತ್ ಪ್ಲ್ಯಾನ್ ಜೊತೆ ಆಯುಷ್ ಪ್ರಯೋಜನವನ್ನು ನೀಡುತ್ತಿಲ್ಲ.
ಆಯುಷ್ ಚಿಕಿತ್ಸೆಯ ಪ್ರಾಮುಖ್ಯತೆ
ಇತ್ತೀಚಿನ ವರ್ಷಗಳಲ್ಲಿ, ಸಾಂಪ್ರದಾಯಿಕ ಔಷಧಿಗಳಿಂದ ಹೋಮಿಯೋಪತಿ, ಆಯುರ್ವೇದ, ನ್ಯಾಚುರೋಪತಿ ಮತ್ತು ಯೋಗ ಇತ್ಯಾದಿ ಪರ್ಯಾಯ ಚಿಕಿತ್ಸೆಗಳಿಗೆ ಜನರು ಮನಸ್ಸು ಮಾಡುತ್ತಿರುವುದು ಒಂದು ಮಾದರಿ ಬದಲಾವಣೆಯಾಗಿದೆ. ಈ ಪ್ರವೃತ್ತಿಯನ್ನು ಬೆಂಬಲಿಸಲು, ನಮ್ಮಂತಹ ಹೆಲ್ತ್ ಇನ್ಶೂರೆನ್ಸ್ ಗಾರರು ಅವರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ ಆಯುರ್ವೇದ ಚಿಕಿತ್ಸೆಗೆ ರಕ್ಷಣೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ.
ಆದ್ದರಿಂದ, ನೀವು ಪರ್ಯಾಯ ಚಿಕಿತ್ಸೆಗಳ ಶಕ್ತಿಯನ್ನು ನಂಬಿದರೆ, ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಇಲ್ಲಿದೆ. ಹೆಲ್ತ್ ಇನ್ಶೂರೆನ್ಸ್ ಯಲ್ಲಿ ಆಯುಷ್‌ನಂತಹ ಪರ್ಯಾಯ ಚಿಕಿತ್ಸೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.
ಇಂದು ಆರೋಗ್ಯ ಸೇವೆಗಳಲ್ಲಿ ಆಯುಷ್
ಆಯುಷ್ ಸಂಬಂಧಿತ ಚಿಕಿತ್ಸೆಗಳಿಗೆ ಹೆಚ್ಚಿನ ಬೆಳಕನ್ನು ತರುವ ಉದ್ದೇಶದಿಂದ, ಆಯುಷ್ ಚಿಕಿತ್ಸೆಯನ್ನು ಒದಗಿಸುವ ಆಸ್ಪತ್ರೆಗಳಿಗೆ ಗುಣಮಟ್ಟದ ಆರೋಗ್ಯ ರಕ್ಷಣೆಯ ಮಾನದಂಡಗಳನ್ನು ಜಾರಿಗೆ ತರಲು ಪ್ರಾರಂಭಿಸುವ ಸಲುವಾಗಿ ಭಾರತ ಸರ್ಕಾರವು 2014 ರಲ್ಲಿ ಆಯುಷ್ ಸಚಿವಾಲಯವನ್ನು ರಚಿಸಿತು ಮತ್ತು ಅದರ ಪರಿಣಾಮವಾಗಿ ಆಸ್ಪತ್ರೆಗಳ ರಾಷ್ಟ್ರೀಯ ಮಂಡಳಿ (NABH) ಅನ್ನು ತಂದಿತು.
ಇಂದು, ಭಾರತದಾದ್ಯಂತ 50 ಕ್ಕೂ ಹೆಚ್ಚು ಆಸ್ಪತ್ರೆಗಳು ವಿಶ್ವಾಸಾರ್ಹ ಮತ್ತು ಅಧಿಕೃತ ಆಯುಷ್ ಸಂಬಂಧಿತ ಚಿಕಿತ್ಸೆಗಳನ್ನು ಒದಗಿಸಲು ಮಾನ್ಯತೆ ಪಡೆದಿವೆ.
ಇನ್ನಷ್ಟು ಓದಿ:
- ಕೋವಿಡ್ - 19 ಇನ್ಶೂರೆನ್ಸ್ ಪಾಲಿಸಿ ರಕ್ಷಣೆಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿ
- ಓಪಿಡಿ (OPD) ರಕ್ಷಣೆಯ ಜೊತೆ ಔಷಧೀಯ ಇನ್ಶೂರೆನ್ಸ್
ಆಯುಷ್ ಚಿಕಿತ್ಸೆಯ ಪ್ರಯೋಜನಗಳು
ಇದು ಆರೋಗ್ಯ ರಕ್ಷಣೆಗೆ ಹೆಚ್ಚು ಸಮಗ್ರ ವಿಧಾನವನ್ನು ಹೊಂದಿದೆ, ವೈದ್ಯಕೀಯ ಸೇವೆಗಳಲ್ಲಿ ಇರುವಂತಹ ಅಂತರವನ್ನು ಪರಿಹರಿಸುತ್ತದೆ ಮತ್ತು ಒಬ್ಬರ ಸಂಪೂರ್ಣ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುವ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ
ಇದು ವಯಸ್ಸಾದ ಜನರಿಗೆ ಲಭ್ಯವಿರುವ ಅತ್ಯುತ್ತಮ ಪರ್ಯಾಯ ಚಿಕಿತ್ಸೆಗಳಲ್ಲಿ ಒಂದಾಗಿದೆ.
ತಂಬಾಕು ವ್ಯಸನ ಮತ್ತು ಮಾದಕ ವ್ಯಸನದಂತಹ ಜೀವನಶೈಲಿಯ ಸಮಸ್ಯೆಗಳನ್ನು ನಿರ್ದಿಷ್ಟ ಆಯುಷ್ ಚಿಕಿತ್ಸೆಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಬಹುದು, ಅಂತಹ ಒಂದು ಉದಾಹರಣೆಯೆಂದರೆ ಅದು ಯೋಗ.
ಭಾರತದಲ್ಲಿ ಜೀವನಶೈಲಿಯ ರೋಗಗಳು ಹೆಚ್ಚಾಗುತ್ತಿವೆ. ಆದಾಗ್ಯೂ, ಆಯುಷ್ ವ್ಯವಸ್ಥೆಯಲ್ಲಿ ಇರುವ ಪರ್ಯಾಯ ಚಿಕಿತ್ಸೆಗಳ ಬಳಕೆಯಿಂದ ಮಧುಮೇಹ ಮತ್ತು ಅಧಿಕ ರಕ್ತದ ಒತ್ತಡದಂತಹ ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದು.
ಒಟ್ಟಾರೆಯಾಗಿ, ಆಯುಷ್ ಚಿಕಿತ್ಸೆಗಳು ಕಡಿಮೆ ಅಡ್ಡ ಪರಿಣಾಮಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ ಮತ್ತು ಆಧುನಿಕ ಔಷಧಕ್ಕಿಂತ ಇದೊಂದು ಹೆಚ್ಚು ವೆಚ್ಚ ತಗ್ಗಿಸುವ ಚಿಕಿತ್ಸೆಯಾಗಿದೆ.
ಹೆಲ್ತ್ ಇನ್ಶೂರೆನ್ಸ್ ಯಲ್ಲಿ ಆಯುಷ್ ಪ್ರಯೋಜನದ ಬಗ್ಗೆ ಹೆಚ್ಚು ತಿಳಿಯಿರಿ
ಹೆಲ್ತ್ ಇನ್ಶೂರೆನ್ಸ್ ನಲ್ಲಿ ಆಯುಷ್ ಚಿಕಿತ್ಸೆಗಳನ್ನು ಯಾರು ಪಡೆಯಬಹುದು?
ಯಾರಾದರೂ ತಮ್ಮ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಆಯುಷ್ ಕವರ್ ಅನ್ನು ಆರಿಸಿಕೊಳ್ಳಬಹುದಾದರೂ, ನೀವು 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಅಥವಾ ನಿಮ್ಮ ಪ್ಲಾನ್ ಭಾಗವಾಗಿ ನಿಮ್ಮ ಪೋಷಕರಿಗೆ ಇನ್ಶೂರೆನ್ಸ್ ಮಾಡುತ್ತಿದ್ದರೆ ಅಥವಾ ಅವರಿಗೆ ಪ್ರತ್ಯೇಕ ಸೀನಿಯರ್ ಸಿಟಿಜನ್ ಹೆಲ್ತ್ ಇನ್ಶೂರೆನ್ಸ್ ಖರೀದಿಸಿದರೆ ಅದನ್ನು ಖಂಡಿತವಾಗಿ ಆಯ್ಕೆ ಮಾಡಲು ಹೆಚ್ಚು ಶಿಫಾರಸು ಮಾಡಲಾಗಿದೆ. ಅಲ್ಲದೆ, ವಯಸ್ಸಿನ ಮಾನದಂಡಗಳು ವಿಭಿನ್ನ ಇನ್ಶೂರರ್ ಗಳಲ್ಲಿ ಭಿನ್ನವಾಗಿರುತ್ತವೆ.
ಹೆಲ್ತ್ ಇನ್ಶೂರೆನ್ಸ್ ಯಲ್ಲಿ ಆಯುಷ್ ಪ್ರಯೋಜನದ ಪ್ರಕಾರ ಯಾವುದೆಲ್ಲಾ ರಕ್ಷಣೆ ಸಿಗುತ್ತದೆ?
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯಲ್ಲಿ ನೀವು ಆಯುಷ್ ರಕ್ಷಣೆಯನ್ನು ಆರಿಸಿಕೊಂಡಿದ್ದರೆ, ಆಯುರ್ವೇದ, ಯುನಾನಿ, ಸಿದ್ಧ ಅಥವಾ ಹೋಮಿಯೋಪತಿ ಅಡಿಯಲ್ಲಿ ನಿಮ್ಮ ಒಳರೋಗಿ ಚಿಕಿತ್ಸೆಗಾಗಿ ನಿಮ್ಮ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಡಿಜಿಟ್ ನೋಡಿಕೊಳ್ಳುತ್ತದೆ.
ಗಮನಿಸಿ: ನಿಮ್ಮ ಆರೋಗ್ಯ ನೀತಿಯ ಅಡಿಯಲ್ಲಿ ಪಾವತಿಸಿದ ಕ್ಲೈಮ್ ಅನ್ನು ಪಡೆಯಲು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಅಥವಾ ಆರೋಗ್ಯದ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಹೆಲ್ತ್ ಇನ್ಶೂರೆನ್ಸ್ ಯಲ್ಲಿ ಆಯುಷ್ ಪ್ರಯೋಜನದ ಪ್ರಕಾರ ಯಾವುದಕ್ಕೆ ರಕ್ಷಣೆ ಸಿಗುವುದಿಲ್ಲ?
- ಯಾವುದೇ ಆಸ್ಪತ್ರೆಯಲ್ಲಿ ನೀವು 24 ಗಂಟೆಗಳಿಗಿಂತ ಕಡಿಮೆ ಸಮಯ ಚಿಕಿತ್ಸೆ ತೆಗೆದುಕೊಂಡಿದ್ದರೆ,
- ಪರ್ಯಾಯ ಚಿಕಿತ್ಸೆಯ ಅಡಿಯಲ್ಲಿ ಆಸ್ಪತ್ರೆಗೆ ಸೇರುವ ಮುಂಚೆ ಮತ್ತು ಆಸ್ಪತ್ರೆಗೆ ಸೇರಿದ ನಂತರದ ವೆಚ್ಚಗಳು, ಡೇ ಕೇರ್ ಕಾರ್ಯವಿಧಾನ ಮತ್ತು ಹೊರರೋಗಿ ವೈದ್ಯಕೀಯ ವೆಚ್ಚಗಳು,
- ವೈದ್ಯಕೀಯವಾಗಿ ಅಗತ್ಯವಿಲ್ಲದ ಯಾವುದೇ ತಡೆಗಟ್ಟುವ ಮತ್ತು ಪುನರ್ಯೌವನಗೊಳಿಸುವಿಕೆ ಚಿಕಿತ್ಸೆಗಳು (ಆದ್ದರಿಂದ ಕೇರಳದ ಪರ್ಯಾಯ ಚಿಕಿತ್ಸಾ ರೆಸಾರ್ಟ್ ಅನ್ನು ಇದರಲ್ಲಿ ಸೇರಿಸಲಾಗಿಲ್ಲ 😉)
ಹೆಲ್ತ್ ಇನ್ಶೂರೆನ್ಸ್ ಯಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಳ್ಳಲು ಯಾವ ನಿಯಮಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು?
ಹೆಲ್ತ್ ಇನ್ಶೂರೆನ್ಸ್ ಯಲ್ಲಿ ಆಯುಷ್ ಚಿಕಿತ್ಸೆಯ ಅಡಿಯಲ್ಲಿ ಅರ್ಹತೆ ಪಡೆದ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದರೆ ಆಯುರ್ವೇದ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುವುದು. ಅರ್ಹ ಕೇಂದ್ರದ ಈ ವ್ಯಾಖ್ಯಾನವನ್ನು IRDAI ರಚಿಸಿದೆ.
ಈ ಷರತ್ತಿನ ಅಡಿಯಲ್ಲಿ ಅರ್ಹತೆ ಪಡೆಯುವ ರೀತಿಯ ಕೇಂದ್ರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
1. ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (CCIM) ಮತ್ತು ಸೆಂಟ್ರಲ್ ಕೌನ್ಸಿಲ್ ಆಫ್ ಹೋಮಿಯೋಪತಿ (CCH) ನಿಂದ ಮಾನ್ಯತೆ ಪಡೆದ ಆಯುಷ್ ಕಾಲೇಜುಗಳ ಬೋಧನಾ ಆಸ್ಪತ್ರೆಗಳು.
2. ಆಯುಷ್ ಆಸ್ಪತ್ರೆಗಳು ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಸೂಕ್ತ ಕಾಯ್ದೆಯಡಿಯಲ್ಲಿ ಸರ್ಕಾರಿ ಪ್ರಾಧಿಕಾರದೊಂದಿಗೆ ನೋಂದಣಿ ಹೊಂದಿದ್ದು, ಈ ಕೆಳಗಿನವುಗಳನ್ನು ಕನಿಷ್ಠ ಮಾನದಂಡವಾಗಿ ಅನುಸರಿಸುತ್ತವೆ:
- ಕನಿಷ್ಠ 15 ಒಳರೋಗಿ ಹಾಸಿಗೆಗಳನ್ನು ಹೊಂದಿರುತ್ತದೆ;
- ಕನಿಷ್ಠ 5 ಅರ್ಹ ಮತ್ತು ನೋಂದಾಯಿತ ಆಯುಷ್ ವೈದ್ಯರನ್ನು ಹೊಂದಿರುತ್ತದೆ;
- ತನ್ನ ಉದ್ಯೋಗದಡಿಯಲ್ಲಿ 24 ಗಂಟೆಗಳು ಅರ್ಹ ಅರೆವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುತ್ತದೆ;
- ಮೀಸಲಾದ ಆಯುಷ್ ಚಿಕಿತ್ಸಾ ವಿಭಾಗಗಳನ್ನು ಹೊಂದಿದೆ;
- ರೋಗಿಗಳ ದೈನಂದಿನ ದಾಖಲೆಗಳನ್ನು ನಿರ್ವಹಿಸುತ್ತದೆ ಮತ್ತು ವಿಮಾ ಕಂಪನಿಯ ಅಧಿಕೃತ ಸಿಬ್ಬಂದಿಗೆ ಇವುಗಳ ಪ್ರವೇಶ ನೀಡುತ್ತದೆ;
ಅಲ್ಲದೆ, ತಾನು ತೆಗೆದುಕೊಂಡ ಚಿಕಿತ್ಸೆಗಾಗಿ ಇನ್ಶೂರೆನ್ಸ್ ಕ್ಲೇಮ್ ಮಾಡಲು ರೋಗಿಯು ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಸೇರಿರಬೇಕು. ಕ್ಲೈಮ್ ಅನ್ನು ಪಡೆಯಲು ಕೆಲವು ವಿಮಾದಾರರಿಗೆ ಕೆಲವು ಸಕಾರಾತ್ಮಕ ಪರಿಹಾರ ಪರಿಣಾಮವನ್ನು ಪ್ರದರ್ಶಿಸುವ ಚಿಕಿತ್ಸೆಯು ಅವಶ್ಯಕವಾಗಿದೆ.
ಡಿಸ್ಕ್ಲೈಮರ್ : ಆಯುಷ್ ಕವರ್‌ನ ಸಂಪೂರ್ಣ ವಿವರಗಳಿಗಾಗಿ ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ಮತ್ತು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಯಾವಾಗಲೂ ಪರಿಶೀಲಿಸಿ.
ಆಯುಷ್ ಪ್ರಯೋಜನದ ಕುರಿತಾಗಿ ಪದೇ ಪದೇ ಕೇಳಲಾದ ಪ್ರಶ್ನೆಗಳು
ಹೋಮಿಯೋಪತಿ ಔಷಧವು ಹೆಲ್ತ್ ಇನ್ಶೂರೆನ್ಸ್ ಗೆ ಒಳಪಟ್ಟಿದೆಯೇ?
ಹೌದು, ಪರ್ಯಾಯ ಚಿಕಿತ್ಸಾ ಇನ್ಶೂರೆನ್ಸ್ ಅಡಿಯಲ್ಲಿ, ಹೋಮಿಯೋಪತಿ ಸಹ ಒಳಗೊಂಡಿದೆ. ಆದರೆ, ಇನ್ಶೂರೆನ್ಸ್ ಕಂಪನಿಗಳು ಹೋಮಿಯೋಪಥಿಕ್ ಔಷಧಿಗಳ ಸಣ್ಣ ಪುಟ್ಟ ವೆಚ್ಚಗಳನ್ನು ಭರಿಸುವುದಿಲ್ಲ ಏಕೆಂದರೆ ಅವರು ಸೂಚಿಸಿದ ಔಷಧಿಗಳಿಗೆ ಮಾತ್ರ ಪಾವತಿ ಮಾಡುತ್ತಾರೆ. ರೋಗಿಯು 24 ಗಂಟೆಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರೆ ಅದನ್ನು ಪಾವತಿ ಮಾಡಲಾಗುತ್ತದೆ.
ಪ್ರಕೃತಿ ಚಿಕಿತ್ಸೆಯು ಹೆಲ್ತ್ ಇನ್ಶೂರೆನ್ಸ್ ನಿಂದ ರಕ್ಷಿಸಲ್ಪಡುತ್ತದೆಯೇ?
ಹೌದು, ಆಸ್ಪತ್ರೆಯಲ್ಲಿ ಚಿಕಿತ್ಸೆಗಳನ್ನು ತೆಗೆದುಕೊಂಡರೆ, ಪ್ರಕೃತಿ ಚಿಕಿತ್ಸೆಯು ಕೂಡ ಹೆಲ್ತ್ ಇನ್ಶೂರೆನ್ಸ್ ನಿಂದ ಕೂಡಿರುತ್ತದೆ.