2025 ರಲ್ಲಿ ಎನ್‌ಎಸ್ಇ (NSE) ನಲ್ಲಿನ ರಜಾದಿನಗಳು ಯಾವುವು?
ಎನ್‌ಎಸ್ಇ, ಅಥವಾ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್, ಜಾಗತಿಕವಾಗಿ 10 ನೇ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್ ಆಗಿದ್ದು, ಆಗಸ್ಟ್ 2021 ರಂತೆ ಒಟ್ಟು $3.4 ಟ್ರಿಲಿಯನ್ ಗಿಂತಲೂ ಹೆಚ್ಚಿನ ಮಾರ್ಕೆಟ್ ಕ್ಯಾಪಿಟಲೈಸೇಶನ್ ಅನ್ನು ಹೊಂದಿದೆ. ಈ ಪ್ರಮುಖ ಸ್ಟಾಕ್ ಎಕ್ಸ್‌ಚೇಂಜ್ ವಾರದ ದಿನಗಳಲ್ಲಿ 9:15 ರಿಂದ 3:30 ರವರೆಗೆ ಕಾರ್ಯನಿರ್ವಹಿಸುತ್ತದೆ, ಜೊತೆಗೆ ಪ್ರೀ-ಓಪನ್ ಟ್ರೇಡಿಂಗ್ ಸೆಷನ್ 9:00 ರಿಂದ 9:08 ರವರೆಗೆ ಇರುತ್ತದೆ.
ವೀಕೆಂಡ್‌ನ ಹೊರತಾಗಿ, ವ್ಯಾಪಾರದ ರಜಾದಿನಗಳಲ್ಲಿ ಎನ್‌ಎಸ್ಇ ನಲ್ಲಿ ವ್ಯಾಪಾರ ಕಾರ್ಯಾಚರಣೆಗಳು ಮುಚ್ಚಿರುತ್ತವೆ.
ಈ ಆರ್ಟಿಕಲ್ 2025 ರಲ್ಲಿ ಎನ್‌ಎಸ್ಇ ನಲ್ಲಿನ ರಜಾದಿನಗಳನ್ನು ಪಟ್ಟಿ ಮಾಡುತ್ತದೆ. ಇದರಿಂದ 2025 ರಲ್ಲಿ ಎನ್‌ಎಸ್ಇ ನಲ್ಲಿ ಪಟ್ಟಿ ಮಾಡಲಾದ ಶೇರ್‌ಗಳಲ್ಲಿ ಇನ್ವೆಸ್ಟ್ ಮಾಡಲು ಪ್ರಾರಂಭಿಸುವ ಮೊದಲು, ನೀವು ಇವುಗಳನ್ನು ಗಮನಿಸಬಹುದು.
2025 ರಲ್ಲಿ ಎನ್‌ಎಸ್ಇ (NSE) ನಲ್ಲಿನ ರಜಾದಿನಗಳ ಪಟ್ಟಿ
ಈ ಕೆಳಗಿನ ಟೇಬಲ್ 2025 ರಲ್ಲಿ ಎನ್‌ಎಸ್ಇ (NSE) ನಲ್ಲಿನ ರಜಾದಿನಗಳನ್ನು ಸಾರಾಂಶಗೊಳಿಸುತ್ತದೆ. ಪ್ರತಿಯೊಂದು ವಿಭಾಗಗಳು ಕೆಲವು ವಿನಾಯಿತಿಗಳೊಂದಿಗೆ ಒಂದೇ ರೀತಿಯ ರಜಾದಿನಗಳನ್ನು ಹಂಚಿಕೊಳ್ಳುತ್ತವೆ ಎಂಬುದನ್ನು ಗಮನಿಸಿ.
*ಮುಹೂರತ್ ಟ್ರೇಡಿಂಗ್ ಅನ್ನು ಶುಕ್ರವಾರ, ನವೆಂಬರ್ 1, 2025 ರ, ದೀಪಾವಳಿಯ ಲಕ್ಷ್ಮೀ ಪೂಜೆ*ಯಂದು ನಡೆಸಲಾಗುವುದು. ಮುಹೂರತ್ ಟ್ರೇಡಿಂಗ್‌ನ ಸಮಯವನ್ನು ಎಕ್ಸ್‌ಚೇಂಜ್ ನಿಂದ ನಂತರ ತಿಳಿಸಲಾಗುವುದು.
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಅಡಿಯಲ್ಲಿರುವ 3 ವಿಭಾಗಗಳು ಯಾವುವು?
ಎನ್‌ಎಸ್ಇ ಯ ಕೆಳಗಿನ ವಿಭಾಗಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದ್ದು, ಇದರ ಅಡಿಯಲ್ಲಿ ಹಲವಾರು ಇತರ ಉಪ-ವಿಭಾಗಗಳು ಪ್ರತಿ ಕೆಟಗರಿಯ ಅಡಿಯಲ್ಲಿ ಬರುತ್ತವೆ:
1. ಕ್ಯಾಪಿಟಲ್ ಮಾರ್ಕೆಟ್
- ಇಕ್ವಿಟಿ
- ಮ್ಯೂಚುಯಲ್ ಫಂಡ್‌ಗಳು
- ಭದ್ರತಾ ಸಾಲ ಮತ್ತು ಎರವಲು ಸ್ಕೀಮ್‌ಗಳು
2. ಉತ್ಪನ್ನ ಮಾರುಕಟ್ಟೆ
- ಇಕ್ವಿಟಿ
- ಕರೆನ್ಸಿ
- ಕಮಾಡಿಟಿ
- ಬಡ್ಡಿ ದರ
3. ಡೆಟ್ ಮಾರ್ಕೆಟ್
- ಕಾರ್ಪೊರೇಟ್ ಬಾಂಡ್‌ಗಳು
- ಹೊಸ ಡೆಟ್ ಸೆಗ್ಮೆಂಟ್
- ನೆಗೋಷಿಯೇಟೆಡ್ ಟ್ರೇಡ್ ರಿಪೋರ್ಟಿಂಗ್ ಪ್ಲಾಟ್‌ಫಾರ್ಮ್
ಎನ್‌ಎಸ್ಇ (NSE) ನಲ್ಲಿ ಯಾವ ಎರಡು ವಿಧದ ರಜಾದಿನಗಳು ಅನ್ವಯಿಸುತ್ತವೆ?
ಹೆಚ್ಚುವರಿಯಾಗಿ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಎರಡು ವಿಧದ ರಜಾದಿನಗಳಿವೆ -
- ಟ್ರೇಡಿಂಗ್ ಮಾರ್ಕೆಟ್ ಮುಚ್ಚಿರುವ ಸಮಯದಲ್ಲಿ ವ್ಯಾಪಾರದ ರಜಾದಿನಗಳಿರುತ್ತವೆ (ಟ್ರೇಡಿಂಗ್ ಹಾಲಿಡೇಸ್), ಮತ್ತು ಅದರ ಪರಿಣಾಮವಾಗಿ, ಯಾವುದೇ ವ್ಯಾಪಾರದ ಕಾರ್ಯಾಚರಣೆಯೂ ಇರುವುದಿಲ್ಲ.
- ವ್ಯಾಪಾರ ಕಾರ್ಯಾಚರಣೆಗಳು ನಡೆಯುವ ಸಮಯದಲ್ಲಿ ತೆರವುಗೊಳಿಸುವ ರಜಾದಿನಗಳಿರುತ್ತವೆ(ಕ್ಲಿಯರಿಂಗ್ ಹಾಲಿಡೇಸ್); ಮಾರ್ಕೆಟ್ ತೆರೆದಿರುತ್ತದೆ. ಆದಾಗ್ಯೂ, ಖರೀದಿ ಅಥವಾ ಸೆಲ್ಲಿಂಗ್ ಆರ್ಡರ್‌ಗಳು ಇತ್ಯರ್ಥವಾಗಿರುವುದಿಲ್ಲ. ಈ ಕ್ಲಿಯರಿಂಗ್ ರಜಾದಿನಗಳಲ್ಲಿ ಬ್ಯಾಂಕುಗಳು ಸಹ ರಜಾದಿನಗಳನ್ನು ಅನುಸರಿಸುತ್ತವೆ. ನೆಗೋಷಿಯೇಟೆಡ್ ಟ್ರೇಡ್ ರಿಪೋರ್ಟಿಂಗ್ ಪ್ಲಾಟ್‌ಫಾರ್ಮ್‌ಗೆ ಕ್ಲಿಯರಿಂಗ್ ರಜಾದಿನಗಳು ಅನ್ವಯಿಸುವುದಿಲ್ಲ.
ಹೀಗಾಗಿ, ನೀವು 2025 ರಲ್ಲಿ ಇನ್ವೆಸ್ಟ್‌ಮೆಂಟ್‌ನೊಂದಿಗೆ ಮುಂದುವರಿಯುವ ಮೊದಲು, ನೀವು 2025 ರ ಎನ್‌ಎಸ್ಇ ನಲ್ಲಿನ ರಜಾದಿನಗಳನ್ನು ಚೆಕ್ ಮಾಡುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮಾರ್ಕೆಟ್‌ನ ಓಪನಿಂಗ್ ಅಥವಾ ಕ್ಲೋಸಿಂಗ್ ಅಪ್ಡೇಟ್‌ಗಳಿಗಾಗಿ ಆಫೀಷಿಯಲ್ ವೆಬ್‌ಸೈಟ್‌ನ ಮೇಲೆ ಕಣ್ಣಿಡಿ.
ಪದೇ ಪದೇ ಕೇಳಲಾದ ಪ್ರಶ್ನೆಗಳು
2025 ರ ಎನ್‌ಎಸ್ಇ (NSE) ನ ರಜಾದಿನದ ಕ್ಯಾಲೆಂಡರ್‌ನಲ್ಲಿ ಎಷ್ಟು ರಜಾದಿನಗಳಿವೆ?
2025 ರ ಎನ್‌ಎಸ್ಇ ನ ರಜಾದಿನದ ಕ್ಯಾಲೆಂಡರ್ ಪ್ರಕಾರ 19 ರಜಾದಿನಗಳಿವೆ.
ಸೆಟಲ್‌ಮೆಂಟ್ ರಜಾದಿನಗಳು ಕ್ಲಿಯರಿಂಗ್ ರಜಾದಿನಗಳನ್ನು ಹೋಲುತ್ತವೆಯೇ?
ಹೌದು. ಸೆಟಲ್‌ಮೆಂಟ್ ರಜಾದಿನಗಳು ಕ್ಲಿಯರಿಂಗ್ ಟ್ರೇಡಿಂಗ್ ರಜಾದಿನಗಳನ್ನು ಹೋಲುತ್ತವೆ.