ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

2024 ರ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿ

ಭಾರತೀಯ ರಿಸರ್ವ್ ಬ್ಯಾಂಕ್, ವಾರ್ಷಿಕ ರಜಾದಿನಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತದೆ. ಅದು ಬ್ಯಾಂಕುಗಳು ಮುಚ್ಚಲ್ಪಡುವ ದಿನಗಳನ್ನು ತಿಳಿಸುತ್ತದೆ. ಹೀಗಾಗಿ, ಜನರು ಅದರ ಬಗ್ಗೆ ತಿಳಿದಿರಬೇಕು. ಇದರಿಂದ ಅವರು ತಮ್ಮ ದಿನಗಳನ್ನು ಆ ರಜಾದಿನಗಳಿಗೆ ಅನುಗುಣವಾಗಿ ಪ್ಲ್ಯಾನ್‌ ಮಾಡಬಹುದು.

ಈ ಮಾಹಿತಿ ತುಣುಕು ನಿಮಗೆ 2024 ರಲ್ಲಿನ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ವಿವರಿಸುತ್ತದೆ. ಆದ್ದರಿಂದ, ಅದರ ಬಗ್ಗೆ ತಿಳಿದುಕೊಳ್ಳಲು ಬಯಸುವವರು ಕೆಳಗೆ ಸ್ಕ್ರೋಲ್ ಮಾಡಬಹುದು!

2024 ರ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿ

ದಿನ ಮತ್ತು ದಿನಾಂಕ ಬ್ಯಾಂಕ್ ರಜಾದಿನಗಳು ರಾಜ್ಯಗಳು
1 ಜನವರಿ, ಸೋಮವಾರ ಹೊಸ ವರ್ಷದ ದಿನ ದೇಶದಾದ್ಯಂತ
11 ಜನವರಿ, ಗುರುವಾರ ಮಿಷನರಿ ದಿನ ಮಿಜೋರಾಂ
12 ಜನವರಿ, ಶುಕ್ರವಾರ ಸ್ವಾಮಿ ವಿವೇಕಾನಂದ ಜಯಂತಿ ಪಶ್ಚಿಮ ಬಂಗಾಳ
13 ಜನವರಿ, ಶನಿವಾರ 2 ನೇ ಶನಿವಾರ ದೇಶದಾದ್ಯಂತ
13 ಜನವರಿ, ಶನಿವಾರ ಲೋಹ್ರಿ ಪಂಜಾಬ್ ಮತ್ತು ಇತರ ರಾಜ್ಯಗಳು
14 ಜನವರಿ, ಭಾನುವಾರ ಸಂಕ್ರಾಂತಿ ಹಲವಾರು ರಾಜ್ಯಗಳು
15 ಜನವರಿ, ಸೋಮವಾರ ಪೊಂಗಲ್ ತಮಿಳುನಾಡು, ಆಂಧ್ರಪ್ರದೇಶ
15 ಜನವರಿ, ಸೋಮವಾರ ತಿರುವಳ್ಳುವರ್ ದಿನ ತಮಿಳುನಾಡು
16 ಜನವರಿ, ಮಂಗಳವಾರ ತುಸು ಪೂಜೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ
17 ಜನವರಿ, ಬುಧವಾರ ಗುರು ಗೋವಿಂದ್ ಸಿಂಗ್ ಜಯಂತಿ ಹಲವಾರು ರಾಜ್ಯಗಳು
23 ಜನವರಿ, ಮಂಗಳವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಬಹಳಷ್ಟು ರಾಜ್ಯಗಳು
25 ಜನವರಿ, ಗುರುವಾರ ರಾಜ್ಯ ದಿನ ಹಿಮಾಚಲ ಪ್ರದೇಶ
26 ಜನವರಿ, ಶುಕ್ರವಾರ ಗಣರಾಜ್ಯೋತ್ಸವ ಭಾರತದಾದ್ಯಂತ
27 ಜನವರಿ, ಶನಿವಾರ 4 ನೇ ಶನಿವಾರ ದೇಶದಾದ್ಯಂತ
31 ಜನವರಿ, ಬುಧವಾರ ಮೆ-ದಾಮ್-ಮಿ-ಫಿ ಅಸ್ಸಾಂ
10 ಫೆಬ್ರವರಿ, ಶನಿವಾರ 2 ನೇ ಶನಿವಾರ ಎಲ್ಲಾ ರಾಜ್ಯಗಳು
15 ಫೆಬ್ರವರಿ, ಗುರುವಾರ ಲುಯಿ-ನಗೈ-ನಿ ಮಣಿಪುರ
19 ಫೆಬ್ರವರಿ, ಸೋಮವಾರ ಶಿವಾಜಿ ಜಯಂತಿ ಮಹಾರಾಷ್ಟ್ರ
24 ಫೆಬ್ರವರಿ, ಶನಿವಾರ 4 ನೇ ಶನಿವಾರ ಎಲ್ಲಾ ರಾಜ್ಯಗಳು
8 ಮಾರ್ಚ್, ಶುಕ್ರವಾರ ಮಹಾಶಿವರಾತ್ರಿ/ ಶಿವರಾತ್ರಿ ಉತ್ತರಾಖಂಡ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಗುಜರಾತ್, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಬಿಹಾರ
12 ಮಾರ್ಚ್, ಮಂಗಳವಾರ ರಂಜಾನ್ ಆರಂಭ ಅನೇಕ ರಾಜ್ಯಗಳಿಗೆ ಅನ್ವಯಿಸುತ್ತದೆ
20 ಮಾರ್ಚ್, ಬುಧವಾರ ಮಾರ್ಚ್ ವಿಷುವತ್ ಸಂಕ್ರಾಂತಿ ಕೆಲವು ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತದೆ
25 ಮಾರ್ಚ್, ಸೋಮವಾರ ಹೋಳಿ ಅನೇಕ ರಾಜ್ಯಗಳಿಗೆ ಅನ್ವಯಿಸುತ್ತದೆ
25 ಮಾರ್ಚ್, ಸೋಮವಾರ ಡೋಲ್ಯಾತ್ರಾ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಒಡಿಶಾ
28 ಮಾರ್ಚ್, ಗುರುವಾರ ಮಾಂಡಿ ಥರ್ಸ್‌ಡೇ ಕೇರಳ
29 ಮಾರ್ಚ್, ಶುಕ್ರವಾರ ಗುಡ್ ಫ್ರೈಡೇ ಬಹಳಷ್ಟು ರಾಜ್ಯಗಳಿಗೆ ಅನ್ವಯಿಸುತ್ತದೆ
9 ಏಪ್ರಿಲ್, ಮಂಗಳವಾರ ಯುಗಾದಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಗೋವಾ
10 ಏಪ್ರಿಲ್, ಬುಧವಾರ ಈದ್ ಅಲ್-ಫಿತರ್ ಅನೇಕ ರಾಜ್ಯಗಳು
13 ಏಪ್ರಿಲ್, ಶನಿವಾರ 2 ನೇ ಶನಿವಾರ ದೇಶದಾದ್ಯಂತ ಅನ್ವಯಿಸುತ್ತದೆ
14 ಏಪ್ರಿಲ್, ಭಾನುವಾರ ಡಾ ಅಂಬೇಡ್ಕರ್ ಜಯಂತಿ ದೇಶದಾದ್ಯಂತ ಅನ್ವಯಿಸುತ್ತದೆ
14 ಏಪ್ರಿಲ್, ಭಾನುವಾರ ವಿಷು ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳು
17 ಏಪ್ರಿಲ್, ಬುಧವಾರ ರಾಮನವಮಿ ಅನೇಕ ರಾಜ್ಯಗಳಲ್ಲಿ ಅನ್ವಯಿಸುತ್ತದೆ
21 ಏಪ್ರಿಲ್, ಭಾನುವಾರ ಮಹಾವೀರ ಜಯಂತಿ ಕೆಲವು ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತದೆ
27 ಏಪ್ರಿಲ್, ಶನಿವಾರ 4 ನೇ ಶನಿವಾರ ದೇಶದಾದ್ಯಂತ ಅನ್ವಯಿಸುತ್ತದೆ
1 ಮೇ, ಬುಧವಾರ ಮೇ ಡೇ/ಮಹಾರಾಷ್ಟ್ರ ದಿನ ಮೇ ಡೇ - ದೇಶದಾದ್ಯಂತ/ ಮಹಾರಾಷ್ಟ್ರ ದಿನ - ಮಹಾರಾಷ್ಟ್ರ
8 ಮೇ, ಬುಧವಾರ ಗುರು ರವೀಂದ್ರನಾಥ ಠಾಕೂರರ ಜನ್ಮದಿನ ಪಶ್ಚಿಮ ಬಂಗಾಳ
11 ಮೇ, ಶನಿವಾರ 2 ನೇ ಶನಿವಾರ ರಾಷ್ಟ್ರೀಯ
25 ಮೇ, ಶನಿವಾರ 4 ನೇ ಶನಿವಾರ ರಾಷ್ಟ್ರೀಯ
8 ಜೂನ್, ಶನಿವಾರ 2 ನೇ ಶನಿವಾರ ಎಲ್ಲಾ ರಾಜ್ಯಗಳು
9 ಜೂನ್, ಭಾನುವಾರ ಮಹಾರಾಣಾ ಪ್ರತಾಪ್ ಜಯಂತಿ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ
10 ಜೂನ್, ಸೋಮವಾರ ಶ್ರೀ ಗುರು ಅರ್ಜುನ್ ದೇವ್ ಜಿ ರವರ ಹುತಾತ್ಮ ದಿನ ಪಂಜಾಬ್
15 ಜೂನ್, ಶನಿವಾರ ವೈಎಮ್ಎ ದಿನ (ಯಂಗ್ ಮಿಜೋ ಅಸೋಸಿಯೇಶನ್ ಡೇ) ಮಿಜೋರಾಂ
16 ಜೂನ್, ಭಾನುವಾರ ಈದ್ ಅಲ್-ಅಧಾ ಎಲ್ಲಾ ರಾಜ್ಯಗಳು
22 ಜೂನ್, ಶನಿವಾರ 2 ನೇ ಶನಿವಾರ ಎಲ್ಲಾ ರಾಜ್ಯಗಳು
6 ಜುಲೈ, ಶನಿವಾರ ಎಮ್.ಹೆಚ್.ಐ.ಪಿ ದಿನ ಮಿಜೋರಾಂ
13 ಜುಲೈ, ಶನಿವಾರ 2 ನೇ ಶನಿವಾರ ಎಲ್ಲಾ ರಾಜ್ಯಗಳು
17 ಜುಲೈ, ಬುಧವಾರ ಮೊಹರಂ ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಗೋವಾ, ಹರಿಯಾಣ, ಕೇರಳ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಪಾಂಡಿಚೇರಿ, ಪಂಜಾಬ್, ಸಿಕ್ಕಿಂ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ, ರಾಷ್ಟ್ರೀಯ
27 ಜುಲೈ, ಶನಿವಾರ 4 ನೇ ಶನಿವಾರ ಎಲ್ಲಾ ರಾಜ್ಯಗಳು
31 ಜುಲೈ, ಬುಧವಾರ ಶಹೀದ್ ಉದಮ್ ಸಿಂಗ್ ಹುತಾತ್ಮ ದಿನ ಹರಿಯಾಣ ಮತ್ತು ಪಂಜಾಬ್
10 ಆಗಸ್ಟ್, ಶನಿವಾರ 2 ನೇ ಶನಿವಾರ ಕೆಲವು ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತದೆ
15 ಆಗಸ್ಟ್, ಗುರುವಾರ ಸ್ವಾತಂತ್ರ್ಯ ದಿನ, ಪಾರ್ಸಿ ಹೊಸ ವರ್ಷ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ
19 ಆಗಸ್ಟ್, ಸೋಮವಾರ ರಕ್ಷಾ ಬಂಧನ ಕೆಲವು ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತದೆ
24 ಆಗಸ್ಟ್, ಶನಿವಾರ 4 ನೇ ಶನಿವಾರ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ
26 ಆಗಸ್ಟ್, ಸೋಮವಾರ ಕೃಷ್ಣ ಜನ್ಮಾಷ್ಟಮಿ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ
7 ಸೆಪ್ಟೆಂಬರ್, ಶನಿವಾರ ಗಣೇಶ ಚತುರ್ಥಿ ಭಾರತದಾದ್ಯಂತ
8 ಸೆಪ್ಟೆಂಬರ್, ಭಾನುವಾರ ನುವಾಖಾಯ್ ಒಡಿಶಾ
13 ಸೆಪ್ಟೆಂಬರ್, ಶುಕ್ರವಾರ ರಾಮದೇವ್ ಜಯಂತಿ, ತೇಜ ದಶಮಿ ರಾಜಸ್ಥಾನ
14 ಸೆಪ್ಟೆಂಬರ್, ಶನಿವಾರ ಓಣಂ ಕೇರಳ
14 ಸೆಪ್ಟೆಂಬರ್, ಶನಿವಾರ 2 ನೇ ಶನಿವಾರ ಭಾರತದಾದ್ಯಂತ
15 ಸೆಪ್ಟೆಂಬರ್, ಭಾನುವಾರ ತಿರುವೋಣಂ ಕೇರಳ
16 ಸೆಪ್ಟೆಂಬರ್, ಸೋಮವಾರ ಈದ್ ಮತ್ತು ಮಿಲಾದ್ ಭಾರತದಾದ್ಯಂತ
17 ಸೆಪ್ಟೆಂಬರ್, ಮಂಗಳವಾರ ಇಂದ್ರ ಜಾತ್ರಾ ಸಿಕ್ಕಿಂ
18 ಸೆಪ್ಟೆಂಬರ್, ಬುಧವಾರ ಶ್ರೀ ನಾರಾಯಣ ಗುರು ಜಯಂತಿ ಕೇರಳ
21 ಸೆಪ್ಟೆಂಬರ್, ಶನಿವಾರ ಶ್ರೀ ನಾರಾಯಣ ಗುರು ಸಮಾಧಿ ಕೇರಳ
23 ಸೆಪ್ಟೆಂಬರ್, ಸೋಮವಾರ ವೀರರ ಹುತಾತ್ಮ ದಿನ ಹರಿಯಾಣ
28 ಸೆಪ್ಟೆಂಬರ್, ಶನಿವಾರ 4 ನೇ ಶನಿವಾರ ಭಾರತದಾದ್ಯಂತ
2 ಅಕ್ಟೋಬರ್, ಬುಧವಾರ ಮಹಾತ್ಮ ಗಾಂಧಿಯವರ ಜನ್ಮದಿನ ಭಾರತದಾದ್ಯಂತ ಅನೇಕ ರಾಜ್ಯಗಳು
10 ಅಕ್ಟೋಬರ್, ಗುರುವಾರ ಮಹಾ ಸಪ್ತಮಿ ದೇಶದಾದ್ಯಂತ
11 ಅಕ್ಟೋಬರ್, ಶುಕ್ರವಾರ ಮಹಾ ಅಷ್ಟಮಿ ಭಾರತದಾದ್ಯಂತ ಅನೇಕ ರಾಜ್ಯಗಳು
12 ಅಕ್ಟೋಬರ್, ಶನಿವಾರ ಮಹಾನವಮಿ ಭಾರತದಾದ್ಯಂತ ಹೆಚ್ಚಿನ ರಾಜ್ಯಗಳು
12 ಅಕ್ಟೋಬರ್, ಶನಿವಾರ ವಿಜಯದಶಮಿ ಭಾರತದಾದ್ಯಂತ ಹೆಚ್ಚಿನ ರಾಜ್ಯಗಳು
12 ಅಕ್ಟೋಬರ್, ಶನಿವಾರ 2 ನೇ ಶನಿವಾರ ದೇಶದಾದ್ಯಂತ
26 ಅಕ್ಟೋಬರ್, ಶನಿವಾರ 4 ನೇ ಶನಿವಾರ ದೇಶದಾದ್ಯಂತ
31 ಅಕ್ಟೋಬರ್, ಗುರುವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಗುಜರಾತ್
1 ನವೆಂಬರ್, ಶುಕ್ರವಾರ ಕುಟ್, ಪುದುಚೇರಿ ವಿಮೋಚನಾ ದಿನ, ಹರಿಯಾಣ ದಿನ, ಕರ್ನಾಟಕ ರಾಜ್ಯೋತ್ಸವ, ಕೇರಳ ಪಿರವಿ ಕುಟ್: ಮಣಿಪುರ, ಪುದುಚೇರಿ ವಿಮೋಚನಾ ದಿನ: ಪುದುಚೇರಿ, ಹರಿಯಾಣ ದಿನ: ಹರಿಯಾಣ, ಕರ್ನಾಟಕ ರಾಜ್ಯೋತ್ಸವ: ಕರ್ನಾಟಕ ಮತ್ತು ಕೇರಳ ಪಿರವಿ: ಕೇರಳ
2 ನವೆಂಬರ್, ಶನಿವಾರ ವಿಕ್ರಮ್ ಸಂವತ್ಸರ ಹೊಸ ವರ್ಷ ಗುಜರಾತ್
2 ನವೆಂಬರ್, ಶನಿವಾರ ನಿಂಗೋಲ್ ಚಕೌಬಾ ಮಣಿಪುರ
7 ನವೆಂಬರ್, ಗುರುವಾರ ಛಟ್ ಪೂಜಾ ಬಿಹಾರ
9 ನವೆಂಬರ್, ಶನಿವಾರ 2 ನೇ ಶನಿವಾರ ದೇಶದಾದ್ಯಂತ
15 ನವೆಂಬರ್, ಶುಕ್ರವಾರ ಗುರುನಾನಕ್ ಜಯಂತಿ ಗುರುನಾನಕ್ ರವರ ಜನ್ಮದಿನ - ಪಂಜಾಬ್, ಚಂಡೀಗಢ
18 ನವೆಂಬರ್, ಸೋಮವಾರ ಕನಕದಾಸರ ಜಯಂತಿ ಕರ್ನಾಟಕ
23 ನವೆಂಬರ್, ಶನಿವಾರ 4 ನೇ ಶನಿವಾರ ದೇಶದಾದ್ಯಂತ
1 ಡಿಸೆಂಬರ್, ಭಾನುವಾರ ಸ್ವದೇಶಿ ದಿನ ಅರುಣಾಚಲ ಪ್ರದೇಶ
3 ಡಿಸೆಂಬರ್, ಮಂಗಳವಾರ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕಮ್ಯುನಿಯನ್ ಗೋವಾ
5 ಡಿಸೆಂಬರ್, ಗುರುವಾರ ಶೇಖ್ ಮೊಹಮ್ಮದ್ ಅಬ್ದುಲ್ಲಾ ಜನ್ಮದಿನ ಜಮ್ಮು ಕಾಶ್ಮೀರ
6 ಡಿಸೆಂಬರ್, ಶುಕ್ರವಾರ ಗುರು ತೇಜ್ ಬಹದ್ದೂರ್ ಹುತಾತ್ಮ ದಿನ ಪಂಜಾಬ್
12 ಡಿಸೆಂಬರ್, ಗುರುವಾರ ಪಾ-ತೋಗನ್ ನೆಂಗ್ಮಿಂಜ ಸಂಗ್ಮಾ ಮೇಘಾಲಯ
18 ಡಿಸೆಂಬರ್, ಬುಧವಾರ ಗುರು ಘಾಸಿದಾಸ ಜಯಂತಿ ಛತ್ತೀಸ್‌ಗಢ
19 ಡಿಸೆಂಬರ್, ಗುರುವಾರ ವಿಮೋಚನಾ ದಿನ ದಮನ್ ಮತ್ತು ದಿಯು ಹಾಗೂ ಗೋವಾ
24 ಡಿಸೆಂಬರ್, ಮಂಗಳವಾರ ಕ್ರಿಸ್ಮಸ್ ರಜಾದಿನಗಳು ಮೇಘಾಲಯ ಮತ್ತು ಮಿಜೋರಾಂ
25 ಡಿಸೆಂಬರ್, ಬುಧವಾರ ಕ್ರಿಸ್ಮಸ್ ರಾಷ್ಟ್ರೀಯ ರಜಾದಿನ
26 ಡಿಸೆಂಬರ್, ಗುರುವಾರ ಕ್ರಿಸ್ಮಸ್ ರಜಾದಿನಗಳು ಮೇಘಾಲಯ ಮತ್ತು ತೆಲಂಗಾಣ
26 ಡಿಸೆಂಬರ್, ಗುರುವಾರ ಹುತಾತ್ಮ ಉಧಮ್ ಸಿಂಗ್ ಜಯಂತಿ ಹರಿಯಾಣ
30 ಡಿಸೆಂಬರ್, ಸೋಮವಾರ ತಮು ಲೋಸರ್ ಸಿಕ್ಕಿಂ
30 ಡಿಸೆಂಬರ್, ಸೋಮವಾರ ಯು ಕಿಯಾಂಗ್ ನಾಂಗ್ಬಾ ಮೇಘಾಲಯ
31 ಡಿಸೆಂಬರ್, ಮಂಗಳವಾರ ಹೊಸ ವರ್ಷದ ಮುನ್ನಾದಿನ ಮಣಿಪುರ ಮತ್ತು ಮಿಜೋರಾಂ

ಹೀಗಾಗಿ, ಇದು 2024 ರ ಬ್ಯಾಂಕ್ ರಜಾದಿನಗಳ ಕುರಿತಾಗಿದೆ. ಇದರ ಬಗ್ಗೆ ತಿಳಿದುಕೊಳ್ಳುವುದರಿಂದ ಜನರಿಗೆ ರಜಾದಿನಗಳನ್ನು ಶೆಡ್ಯೂಲ್ ಮಾಡಲು ಮತ್ತು ಸಾಮಾನ್ಯ ದಿನಗಳಲ್ಲಿ ಮಾಡಲು ಸಾಧ್ಯವಾಗದ ಮುಖ್ಯ ಕೆಲಸಗಳನ್ನು ಮಾಡಿಕೊಳ್ಳಲು ಅಥವಾ ಅವರ ದಿನವಹಿ ಕೆಲಸದ ದಿನಚರಿಯಿಂದ ಸುಸ್ತಾದ ತಮ್ಮ ಮನಸ್ಸನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

2024 ರ ಏಪ್ರಿಲ್ ತಿಂಗಳಿನಲ್ಲಿ ಎಷ್ಟು ಬ್ಯಾಂಕ್ ರಜಾದಿನಗಳು ಲಭ್ಯವಿವೆ?

2024 ರ ಏಪ್ರಿಲ್ ತಿಂಗಳಿನಲ್ಲಿ ದೇಶದಾದ್ಯಂತ ಸುಮಾರು 8 ಬ್ಯಾಂಕ್ ರಜಾದಿನಗಳು ಇವೆ. ಕೆಲವು ರಾಷ್ಟ್ರೀಯ ರಜಾದಿನಗಳು ದೇಶದಾದ್ಯಂತ ಅನ್ವಯಿಸುತ್ತವೆ, ಇನ್ನೂ ಕೆಲವು ರಜಾದಿನಗಳು ಕೆಲವು ರಾಜ್ಯಗಳಿಗೆ ಮಾತ್ರ ನಿರ್ದಿಷ್ಟವಾಗಿವೆ.

ರಾಜ್ಯ ರಜಾದಿನಗಳು ಎಲ್ಲಾ ಬ್ಯಾಂಕುಗಳಿಗೆ ವ್ಯಾಲಿಡ್ ಆಗಿವೆಯೇ?

ಇಲ್ಲ, ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ರಜಾದಿನಗಳನ್ನು ಬ್ಯಾಂಕ್ ರಜಾದಿನಗಳು ಎಂದು ಪರಿಗಣಿಸಲಾಗುವುದಿಲ್ಲ. ಇವುಗಳಿಗೆ ಕೆಲವು ವಿನಾಯಿತಿಗಳಿವೆ.