ವಿಮೆಯಲ್ಲಿನ ಪರಿಣಾಮದ ಹಾನಿ ಎಂದರೇನು?
ಇನ್ಸೂರನ್ಸ್ ಬಗ್ಗೆ ಹಲವರು ಹೆಚ್ಫು ತಿಳಿದುಕೊಂಡಿರದ ಕಾರಣ, ಇದು ಯಾವಾಗಲೂ ಅವರಿಗೆ ಗೊಂದಲ ಉಂಟುಮಾಡಿ, ಕ್ಲೇಮ್ ಮಾಡುವ ಸಮಯದಲ್ಲಿ ಸಂಕಷ್ಟಕ್ಕೆ ಗುರಿ ಮಾಡುತ್ತದೆ. ಆದ್ದರಿಂದ ಇಲ್ಲಿ ನಾವು ಮತ್ತೆ ಮೂಲಭೂತ ಅಂಶಗಳನ್ನು ನೆನಪು ಮಾಡುತ್ತಾ, ಅದರ ಪರಿಹಾರದ ಕಡೆ ಗಮನಹರಿಸುವಂತೆ ಮಾಡಿದ್ದೇವೆ. ಪರಿಣಾಮದ ಹಾನಿ ಅಥವಾ ಪರಿಣಾಮದಿಂದಾಗುವ ನಷ್ಟ ಎಂದರೇನು?
ವ್ಯಾಖ್ಯಾನದ ಪ್ರಕಾರ ಪರಿಣಾಮದ ಹಾನಿ ಎಂದರೆ, ಒಂದು ಅನಿರೀಕ್ಷಿತ ಘಟನೆಯು ಇತರ ಘಟನೆಗಳ ಸರಣಿಗೆ ಕಾರಣವಾದಾಗ, ಮೊದಲ ಅನಿರೀಕ್ಷಿತ ಘಟನೆಯ ಫಲಿತಾಂಶ ಅಥವಾ ಫಲಿತಾಂಶವಲ್ಲದ ಹಾನಿಯನ್ನು ಉಂಟುಮಾಡುತ್ತದೆ. ಗೊಂದಲವಾಗುತ್ತಿದೆಯೇ?
ಕೆಲವು ಉದಾಹರಣೆಗಳೊಂದಿಗೆ ಅದನ್ನು ಸ್ಪಷ್ಟವಾಗಿ ತಿಳಿದುಕೊಳ್ಳೋಣ:
ಮೊಬೈಲ್ ವಿಷಯದಲ್ಲಿ ಉಂಟಾಗುವ ಹಾನಿಗಳು
ಗ್ರಾಹಕರೊಬ್ಬರು ಒಂದು ದಿನ ನಮಗೆ ಕರೆ ಮಾಡಿ, ಅವರ ಹೊಸ ಫೋನ್ ಕಳೆದುಹೋಗಿದೆ ಎಂದರು. ಆದರೆ ಫೋನ್‌ಗಿಂತ ಹೆಚ್ಚಾಗಿ, ತನ್ನ ಹನಿಮೂನ್‌ನ ಫೋಟೋಗಳು ಕಳೆದುಹೋಗಿವೆ ಎಂಬ ದುಃಖವೇ ಅವನಿಗೆ ಹೆಚ್ಚಾಗಿತ್ತು.😞 ಓಹ್! ಮೊಬೈಲ್ ಇನ್ಸೂರೆನ್ಸ್ ಖಂಡಿತವಾಗಿಯೂ ಫೋನ್ ಕಳುವನ್ನು ಒಳಗೊಳ್ಳುತ್ತದೆ. ಆದರೆ ಅದರ ಪರಿಣಾಮವಾಗಿ ಅಂದರೆ ಮೊಬೈಲ್ ಡೇಟಾ, ಪ್ರಮುಖ ಸಂಪರ್ಕಗಳು ಅಥವಾ ಮೆಮೊರಿ ಕಾರ್ಡ್‌ನಲ್ಲಿರುವ ಯಾವುದೇ ಪ್ರಮುಖ ದಾಖಲೆಗಳಿಗೆ ಇದು ಒಳಗೊಳ್ಳುವುದಿಲ್ಲ. ಆದ್ದರಿಂದ, ನಿಮ್ಮ ಎಲ್ಲಾ ಡೇಟಾ ಮತ್ತು ಸಂಪರ್ಕಗಳನ್ನು ನೀವು ನಿಯಮಿತವಾಗಿ ಬ್ಯಾಕಪ್ ಮಾಡುತ್ತೀದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿರಬೇಕು.
ಫೋನ್ ಕಳೆದುಹೋಗುವ ಸಾಧ್ಯತೆ ಇರುವುದರಿಂದ, ಫೋನ್ನಲ್ಲಿ ಪಾಸ್‌ವರ್ಡ್‌ಗಳನ್ನು ಎಲ್ಲಿಯೂ ಸ್ಟೋರ್ ಮಾಡಿ ಇಡಬಾರದು ಎಂದು ಹಾಗೂ ಇದು ಸೈಬರ್ ವಂಚನೆಗೂ ಒಳಗಾಗಬಹುದು ಎಂಬುದು ನಮಗೆ ತಿಳಿದಿದೆ. ಆದರೆ ಇನ್ನೂ ಅನೇಕ ಜನರು ಅವುಗಳನ್ನು ಸುಲಭವಾಗಿ ದೊರಕುವಂತೆ ಎಲ್ಲೋ ಒಂದುಕಡೆ ಸ್ಕೋರ್ ಮಾಡಿ ಇಟ್ಟಿರುತ್ತಾರೆ. ಆದರೆ ತಿಳಿದುಕೊಳ್ಳಿ ಕಳ್ಳರು ತುಂಬಾ ಬುದ್ಧಿವಂತರಿರುತ್ತಾರೆ. ಅವರಿಗೆ ನಾವು ಎಲ್ಲಿ ಸ್ಟೋರ್ ಮಾಡಿ ಇಟ್ಟಿರುತ್ತೇವೆ ಎಂಬ ಕಲ್ಪನೆ ಇರುತ್ತದೆ.
ಆದ್ದರಿಂದ ದುರದೃಷ್ಟವಶಾತ್, ನಿಮ್ಮ ಫೋನ್ ಕಳೆದುಹೋದರೆ (ಮತ್ತೆ ಟಚ್‌ವುಡ್) ಮತ್ತು ನಿಮ್ಮ ಖಾತೆಗಳು ರಾಜಿಗೊಂಡರೆ ವಿಮೆ ನಷ್ಟವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ನೀವು ಇಂದೇ ನಿಮ್ಮ ಫೋನ್‌ನಿಂದ ಈ ವಿವರಗಳನ್ನು ಅಳಿಸಿಹಾಕಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಕಾರಿನ ವಿಷದಲ್ಲಿ ಉಂಟಾಗುವ ಹಾನಿಗಳು
ನೀವು ಮುಂಬೈನಲ್ಲಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಹವಾಮಾನವು ಉತ್ತಮ ಮತ್ತು ಪ್ರಕಾಶಮಾನವಾಗಿರುತ್ತದೆ. ನೀವು ಕಾರಿನಲ್ಲಿ ಸುರಕ್ಷಿತವಾಗಿ ಮನೆ ತಲುಪುತ್ತೀರಿ ಎಂಬ ನಂಬಿಕೆಯೊಂದಿಗೆ ನೀವು ಬೇಗನೆ ಕಚೇರಿಯಿಂದ ಹೊರಡುತ್ತೀರಿ. ಇದ್ದಕ್ಕಿದ್ದಂತೆ, ನಿಮ್ಮ ಕಾರಿನ ಟೈರ್ ಫ್ಲಾಟ್ ಆಗುತ್ತದೆ. ನೀವು ಸ್ಟೆಪ್ನಿಯನ್ನು ಹೊಂದಿರುವುದರಿಂದ ಇದು ನಿಮಿಷಗಳ ಕೆಲಸ ಎಂದು ನೀವು ಭಾವಿಸಬಹುದು. ಆದರೆ ಅದೃಷ್ಟವಶಾತ್ ಅಂದು ಜೋರಾಗಿ ಮಳೆ ಬೀಳುತ್ತಿರುವ ಕಾರಣ ವಾತಾವರಣ ಉತ್ತಮ ಸ್ಥಿತಿಯಲ್ಲಿ ಇರುವುದಿಲ್ಲ. (ಮುಂಬೈನಲ್ಲಿ, ನೀವು ಹೇಗೆ ಎಂದು ಹೇಳಲು ಸಾಧ್ಯವಿಲ್ಲ) ಆಗ ಕಾರಿನ ಎಂಜಿನ್ ನೀರಿನಿಂದ ತುಂಬಿ ಹಾನಿಗೊಳಗಾಗುತ್ತದೆ. ಈಗ ಇದು ಪರಿಣಾಮದ ಹಾನಿಯಾಗುತ್ತದೆ.
ಅಪಘಾತ ಸಂಭವಿಸುವವರೆಗೆ ಮತ್ತು ಸಂಭವಿಸದ ಹೊರತು ಈ ತೊಂದರೆಗಳು ಕಾಂಪ್ರಿಹೆನ್ಸಿವ್ ಕಾರ್ ಇನ್ಸುರೆನ್ಸ್ ಗೆ ಒಳಗೊಳ್ಳುವುದಿಲ್ಲ ಹಾಗೂ ಇದಕ್ಕಾಗಿ ಎಂಜಿನ್ ಪ್ರೊಟೆಕ್ಷನ್ ಕವರ್ ನ ಅಗತ್ಯವಿದೆ ಎಂಬ ಗೊಂದಲಗಳು/ ಕಲ್ಪನೆಗಳು ಹಲವರಲ್ಲಿದೆ.
ನಿಮ್ಮ ಕಾರು ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿ ಚಲಿಸುವುದನ್ನು ನಿಲ್ಲಿಸುತ್ತದೆ. ಈಗ, ಅದನ್ನು ಹತ್ತಿರದ ಗ್ಯಾರೇಜ್‌ಗೆ ಟೋ ಮಾಡುವ ಅಗತ್ಯವಿರುತ್ತದೆ. ಆದರೆ ಅಲ್ಲಿ ಟೋ ಮಾಡುವ ವ್ಯಕ್ತಿಗಳು ಮೃದು ಸ್ವಭಾವದವರಲ್ಲದ ಕಾರಣ ಟೋ ಮಾಡುವಾಗ ನಿಮ್ಮ ಕಾರಿನ ಬಾನೆಟ್ ಗೀರುಗಳಿಗೆ ಡ್ಯಾಮೇಜ್ ಆಗುವ ಸಾಧ್ಯತೆಗಳಿರುತ್ತದೆ.
ಎಳೆಯುವಿಕೆಯಿಂದ ಉಂಟಾಗುವ ಹಾನಿಗಳು ಪರಿಣಾಮದ ಹಾನಿಯಡಿಯಲ್ಲಿ ಬರುತ್ತವೆ ಹೊರತು ನಿಮ್ಮ ಕಾರು ಇನ್ಸೂರೆನ್ಸ್ ಪಾಲಿಸಿಯ ಅಡಿಯಲ್ಲಿ ಬರುವುದಿಲ್ಲ. ಆದ್ದರಿಂದ, ಹುಕ್ ನಿಮ್ಮ ಕಾರಿನ ಕೆಳಗೆ ಹೋದಾಗ ಹೆಚ್ಚು ಜಾಗರೂಕರಾಗಿರಿ ಎಂಬುದೇ ನಮ್ಮ ಸಲಹೆ.
ಪ್ರಯಾಣದ ಸಮಯದಲ್ಲಾಗುವ ಪರಿಣಾಮದ ಹಾನಿಗಳು
ನೀವು ಅಧಿಕೃತ ಪ್ರವಾಸಕ್ಕೆ ಹೊರಟಿರುತ್ತೀರಾ. ಆದರೆ ದುರದೃಷ್ಟವಶಾತ್, ನಿಮ್ಮ ವಿಮಾನವು ಕೈತಪ್ಪಿ ಹೋಗುತ್ತದೆ. ತಪ್ಪಿಹೋದ ವಿಮಾನಕ್ಕಾಗಿ ನೀವು ಟ್ರಾವೆಲ್ ಇನ್ಸೂರೆನ್ಸ್ಗೆ ಒಳಗಾಗುತ್ತೀರಿ. ಆದರೆ ತಪ್ಪಿದ ಫ್ಲೈಟ್‌ನಿಂದಾಗಿ ನೀವು ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳುವುದು ತಪ್ಪಿಹೋಗಿ, ಅದು ನಿಮ್ಮ ವ್ಯಾಪಾರಕ್ಕೆ ನಷ್ಟವನ್ನು ಉಂಟುಮಾಡಿದ್ದರೆ ಅದು ಪರಿಣಾಮದ ಹಾನಿಯಾಗುತ್ತದೆ. ನಾವು ಇಲ್ಲಿ ಹೇಳುವುದೇನೆಂದರೆ, ಕನೆಕ್ಟಿಂಗ್ ಫ್ಲೈಟ್‌ಗಳ ನಡುವೆ ಸಾಕಷ್ಟು ಸಮಯದ ಅಂತರವಿದ್ದರೆ ಅಂತಹ ಪರಿಸ್ಥಿತಿಯಿಂದ ಪಾರಾಗಬಹುದು.
ಆಸ್ತಿಯ ವಿಷಯದಲ್ಲುಂಟಾಗುವ ಪರಿಣಾಮದ ಹಾನಿ
ನೀವು ಅಂಗಡಿ ಇಟ್ಟಿದ್ದೀರಿ ಹಾಗೂ ಅಂಗಡಿಯ ಸಾಮಾನುಗಳಿಗೆ ಇನ್ಸೂರೆನ್ಸ್ ಅನ್ನು ಹೊಂದಿದ್ದೀರಿ. ದುರದೃಷ್ಟವಶಾತ್, ನಿಮ್ಮ ಅಂಗಡಿ ಅಗ್ನಿ ದುರಂತಕ್ಕೆ ಒಳಗಾಗುತ್ತದೆ. (ಅದು ಎಂದಿಗೂ ಸಂಭವಿಸುವುದಿಲ್ಲ ಎಂಬ ಭಾವನೆಯಲ್ಲಿ ನಾವೀರುತ್ತೇವೆ). ಒಂದು ವೇಳೆ ಅದು ಸಂಭವಿಸಿದರೆ, ನಿಮ್ಮ ಅಂಗಡಿ ಮತ್ತು ಅಲ್ಲಿನ ಸಾಮಾನುಗಳ ನಷ್ಟಕ್ಕೆ ನೀವು ರಕ್ಷಣೆ ಪಡೆಯಬಹುದು. ಆದರೆ ನಿಮ್ಮ ಅಂಗಡಿಗಾದ ಹಾನಿಯಿಂದ ನಿಮ್ಮ ವ್ಯಾಪಾರವು ಎದುರಿಸಬಹುದಾದ ನಷ್ಟಕ್ಕೆ ನೀವು ರಕ್ಷಣೆ ಪಡೆಯಲಾಗುವುದಿಲ್ಲ. ನೀವು ಏನು ಮಾಡಬಹುದು ಎಂದರೆ ನಿಮ್ಮ ಪುಸ್ತಕಗಳನ್ನು ಕ್ಲೌಡ್ ಡ್ರೈವ್‌ನಲ್ಲಿ ಅಪ್ಡೇಡ್ ಮಾಡುವುದರಿಂದ ನೀವು ಬೇಗನೆ ಕ್ರಿಯೆಗೆ ಹಿಂತಿರುಗಬಹುದು.
ಈ ಲೇಖನವು ಕೆಲವು ಅನಿರೀಕ್ಷಿತ ಸಂದರ್ಭಗಳನ್ನು ತಿಳಿಸುವ ಹಾಗೂ ನಾವು ನಿಮಗೆ ಕಾನೂನಿನ ಮೂಲಕ ಸಹಾಯ ಮಾಡಲು ಸಾಧ್ಯವಾಗದೇ ಇರುವ ಕಾರಣ ನಿಮಗೆ ತೃಪ್ತಿದಾಯಕವಾಗಿರದೇ ಇರಬಹುದು. ಆದರೆ ಈ ಹಾನಿಗಳನ್ನು ಕಡಿಮೆಗೊಳಿಸಲು ಮತ್ತು ತಪ್ಪಿಸಲು ಏನು ಮಾಡಬಹುದು ಎಂಬುದನ್ನು ನಾವು ಇಲ್ಲಿ ವಿವರಿಸಿದ್ದೇವೆ. ನಿಮಗಾಗಿ ವಿಷಗಳು ಪಾರದರ್ಶಕವಾಗಿರುವಂತೆ ಮಾಡುವುದು ನಮ್ಮ ಕೆಲಸ.
ನನಗೆ ಐದು ವರ್ಷವೆಂದು ಭಾವಿಸಿ ವಿವರಿಸಿ
ಪರಿಣಾಮದ ಹಾನಿ ಎಂದರೇನು?
ಒಬ್ಬ ಹುಡುಗ ಮತ್ತು ಅವನ ತಂಗಿ ಇಸ್ಪೀಟೆಲೆಗಳಿಂದ ಕೋಟೆಯನ್ನು ಮಾಡಲು ಯೋಜಿಸಿದ್ದಾರೆ. ಅವರು ಸುಂದರವಾದ 2 ಅಂತಸ್ತಿನ ಕಾರ್ಡ್‌ಗಳನ್ನು ನಿರ್ಮಿಸಿ, ಅವರ ಸೃಷ್ಟಿಗೆ ಅವರೇ ಆಶ್ಚರ್ಯಚಕಿತರಾಗುತ್ತಾರೆ. ಆದರೆ ದುರದೃಷ್ಟವಶಾತ್, ಅವರ ನಾಯಿ ಚಾರ್ಲಿ, ಕೆಳಗಿನಿಂದ ಒಂದು ಕಾರ್ಡ್ ಅನ್ನು ಬಡಿಯುವುದರಿಂದ ಇಡೀ ಕೋಟೆಯು ಉರುಳಿ ಹೋಗುತ್ತದೆ.
ಆಕಸ್ಮಿಕವಾಗಿ ಒಂದು ಕಾರ್ಡ್ ಅನ್ನು ಉರುಳಿಸಿದ ಪರಿಣಾಮವಾಗಿ, ಇತರ ಕಾರ್ಡ್‌ಗಳು ಸಹ ಬೀಳುತ್ತವೆ. ಇದು ವಿಮೆಯಲ್ಲಿನ ಪರಿಣಾಮದ ಹಾನಿಯಂತೆಯೇ ಇರುತ್ತದೆ.