ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಕ್ರೆಡಿಟ್ ಸ್ಕೋರ್‌ಗಳ ವಿವಿಧ ಶ್ರೇಣಿಗಳು ಯಾವುವು?

ಕ್ರೆಡಿಟ್ ಸ್ಕೋರ್ ಎನ್ನುವುದು ಬ್ಯಾಂಕ್‌ಗಳು ಮತ್ತು ಇತರ ಸಾಲ ನೀಡುವ ಸಂಸ್ಥೆಗಳು ವ್ಯಕ್ತಿಯ "ಕ್ರೆಡಿಟ್‌ ಅರ್ಹತೆ" ಅನ್ನು ಖಚಿತಪಡಿಸಿಕೊಳ್ಳಲು ಬಳಸುವ ಒಂದು ಸಂಖ್ಯೆಯಾಗಿದೆ. ಕ್ರೆಡಿಟ್ ಇನಫರ್ಮೇಷನ್ ಬ್ಯೂರೋಗಳು ಲೆಕ್ಕ ಹಾಕುವ ಈ ಸಂಖ್ಯೆಯು ಸಾಮಾನ್ಯವಾಗಿ 300-900 ರ ನಡುವೆ ಇರುತ್ತದೆ. ಇದು ಸಾಲಗಳ ರೀತಿಯಲ್ಲಿ ಅಂದರೆ, ಎರವಲು ಪಡೆದ ಸಾಲವನ್ನು ಮರುಪಾವತಿಸಲು ವ್ಯಕ್ತಿಯು ಸಮರ್ಥನಾಗಿದ್ದಾನೆಯೇ ಎಂಬುದನ್ನು ಚಿತ್ರಿಸುತ್ತದೆ.

ಭಾರತದಲ್ಲಿ, ಕ್ರೆಡಿಟ್ ಸ್ಕೋರ್‌ಗಳನ್ನು ಸಿದ್ಧಪಡಿಸುವ ನಾಲ್ಕು ಪರವಾನಗಿ ಪಡೆದ ಕ್ರೆಡಿಟ್ ಬ್ಯೂರೋಗಳಿವೆ - ಟ್ರಾನ್ಸ್‌ಯೂನಿಯನ್ ಸಿಬಿಲ್, ಎಕ್ಸ್ಪೀರಿಯನ್, ಕ್ರಿಫ್ ಹೈ ಮಾರ್ಕ್ ಮತ್ತು ಈಕ್ವಿಫ್ಯಾಕ್ಸ್.

ಕ್ರೆಡಿಟ್ ಸ್ಕೋರ್ ಶ್ರೇಣಿಗಳು ಯಾವುವು?

ವಿಭಿನ್ನ ಕ್ರೆಡಿಟ್ ಬ್ಯೂರೋಗಳು ವಿಭಿನ್ನ ಸ್ಕೋರಿಂಗ್ ಮಾದರಿಗಳನ್ನು ಬಳಸಬಹುದು. ಆದರೆ, ಸಾಮಾನ್ಯವಾಗಿ, 700-750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ, ಆದರೆ 650 ಕ್ಕಿಂತ ಕಡಿಮೆ ಇರುವುದನ್ನು ಸಾಧಾರಣ ಅಥವಾ ಕಳಪೆ ಎಂದು ಪರಿಗಣಿಸಲಾಗುತ್ತದೆ.

ಸಾಮಾನ್ಯ ಕ್ರೆಡಿಟ್ ಸ್ಕೋರ್ ಶ್ರೇಣಿಗಳು ಈ ಕೆಳಗಿನಂತಿವೆ:

ಕ್ರೆಡಿಟ್ ಸ್ಕೋರ್ ಶ್ರೇಣಿ ಅರ್ಥ
NA/NH "ಅನ್ವಯಿಸುವುದಿಲ್ಲ"ಅಥವಾ "ಯಾವುದೇ ಇತಿಹಾಸವಿಲ್ಲದ್ದು" ನೀವು ಕ್ರೆಡಿಟ್ ಕಾರ್ಡ್ ಅನ್ನು ಬಳಸಿಲ್ಲ ಮತ್ತು/ಅಥವಾ ಎಂದಿಗೂ ಸಾಲವನ್ನು ತೆಗೆದುಕೊಂಡಿರುವುದಿಲ್ಲ. ಹೀಗಾಗಿ, ನೀವು ಕ್ರೆಡಿಟ್ ಇತಿಹಾಸವನ್ನು ಹೊಂದಿರುವುದಿಲ್ಲ.
300-549 ಕಳಪೆ ನೀವು ಹಲವು ಬಾರಿ ಕ್ರೆಡಿಟ್ ಕಾರ್ಡ್ ಬಿಲ್‌ಗಳಲ್ಲಿ ಅಥವಾ ಇಎಂಐಗಳಲ್ಲಿ ಪಾವತಿಸುವುದನ್ನು ತಪ್ಪಿಸಿರಬಹುದು ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿರಬಹುದು ಅಥವಾ ಇದರ ಬಗ್ಗೆ ಹೆಚ್ಚು ವಿಚಾರಣೆ ನಡೆಸಿರಬಹುದು. ಇಂತಹ ಸಂದರ್ಭಗಳಲ್ಲಿ ಸಾಲಗಳ ಮೇಲಿನ ಬೇಪಾವತಿ ಸಾಲದಾತರಿಂದ ಹೆಚ್ಚು ಅಪಾಯವೆಂದು ಪರಿಗಣಿಸಲಾಗುತ್ತದೆ ಮತ್ತು ಸಾಲದಾತರು ನಿಮ್ಮ ಸಾಲಗಳನ್ನು ಅಥವಾ ಕ್ರೆಡಿಡ್ ಅಪ್ಲಿಕೇಷನ್ ಗಳನ್ನು ಅನುಮೋದಿಸದೇ ಇರಬಹುದು.
550-649 ಸಾಧಾರಣ ನೀವು ಕ್ರೆಡಿಟ್ ಕಾರ್ಡ್ ಬಿಲ್‌ಗಳಲ್ಲಿ ಅಥವಾ ಇಎಂಐಗಳಲ್ಲಿ ಕೆಲವು ಅನಿಯಮಿತ ಅಥವಾ ತಡವಾದ ಪಾವತಿಗಳನ್ನು ಹೊಂದಿರಬಹುದು ಅಥವಾ ಕ್ರೆಡಿಟ್ ಕಾರ್ಡ್ ಬಗ್ಗೆ ಹೆಚ್ಚು ವಿಚಾರಣೆ ನಡೆಸಿರಬಹುದು. ಈ ಸಮಯದಲ್ಲಿ ಸಾಲದಾತರು ನಿಮಗೆ ಸಾಲ ನೀಡುವುದು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಿ ನಿಮ್ಮ ಸಾಲದ ಅರ್ಜಿಯನ್ನು ಅನುಮೋದಿಸದೇ ಇರಬಹುದು; ಒಂದು ವೇಳೆ ಅರ್ಜಿಯನ್ನು ಅನುಮೋದಿಸಿದರೂ ಅಧಿಕ ಬಡ್ಡಿ ದರವನ್ನು ನೀಡುತ್ತಾರೆ ಇಲ್ಲವೇ ಡೌನ್ ಪೇಮಂಟ್ ಮಾಡಲು ಸೂಚಿಸುತ್ತಾರೆ.
650-749 ಉತ್ತಮ ನೀವು ಉತ್ತಮ ಮರುಪಾವತಿ ನಡವಳಿಕೆಯ ಇತಿಹಾಸವನ್ನು ಹೊಂದಿದ್ದರೆ ಡಿಪಾಲ್ಟಿಂಗ್ ಆಗಿ ಕಡಿಮೆ ಅಪಾಯವೆಂದು ಪರಿಗಣಿಸಿ ಬಹುತೇಕ ಸಾಲದಾತರು ನಿಮ್ಮ ಕ್ರೆಡಿಟ್ ಅನ್ನು ಅನುಮೋದಿಸಬಹುದು. ಆದರೆ ನಿಮಗೆ ಉತ್ತಮ ದರ ಸಿಗದೇ ಇರಬಹುದು.
750-799 ಅತ್ಯುತ್ತಮ ನೀವು ನಿಯಮಿತ ಕ್ರೆಡಿಟ್ ಗಳನ್ನು ಪಾವತಿಸಿದ್ದಲ್ಲಿ, ಸುದೀರ್ಘ ಕ್ರೆಡಿಟ್ ಇತಿಹಾಸವನ್ನು ಹಾಗೂ ಜವಾಬ್ದಾರಿಯುತ ಮರುಪಾವತಿ ನಡವಳಿಕೆಯನ್ನು ಹೊಂದಿದ್ದರೆ ನಿಮ್ಮನ್ನು ಸಾಲದಾತರು ಕಡಿಮೆ ಅಪಾಯದಡಿಯಲ್ಲಿ ಪರಿಗಣಿಸಿ ಕ್ರೆಡಿಟ್‌ಗೆ ಅನುಮೋದಿಸುತ್ತಾರೆ ಮತ್ತು ಸಾಲಗಳ ಮೇಲೆ ಉತ್ತಮ ವ್ಯವಹಾರಗಳನ್ನು ಪಡೆದುಕೊಳ್ಳುತ್ತಾರೆ.
800-900 ಅತ್ಯುನ್ನತ ನೀವು ಅತ್ಯುತ್ತಮ ಹಣಕಾಸು ನಿರ್ವಹಣೆ, ನಿಯಮಿತ ಕ್ರೆಡಿಟ್ ಪಾವತಿಗಳು, ಕಡಿಮೆ ಕ್ರೆಡಿಟ್ ಬಳಕೆ ಮತ್ತು ಅನುಕರಣೀಯ ಕ್ರೆಡಿಟ್ ಇತಿಹಾಸವನ್ನು ಹೊಂದಿದ್ದರೆ, ನಿಮ್ಮನ್ನು ಸಾಲದಾತರು ಬಹಳ ಕಡಿಮೆ ಅಪಾಯದಡಿಯಲ್ಲಿದೆ ಪರಿಗಣಿಸುತ್ತಾರೆ. ಅಲ್ಲದೆ ಬ್ಯಾಂಕ್‌ಗಳು ಮತ್ತು ಸಾಲ ನೀಡುವ ಸಂಸ್ಥೆಗಳು ನಿಮಗೆ ಉತ್ತಮ ದರಗಳು ಮತ್ತು ಸಾಲಗಳ ಮೇಲೆ ಅನುಕೂಲಕರ ನಿಯಮಗಳನ್ನು, ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತದೆ.

ಯಾವುದನ್ನು ಉತ್ತಮ ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ?

700-750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಸಾಮಾನ್ಯವಾಗಿ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಸಂಭವನೀಯ ಸ್ಕೋರ್ 900 ಆಗಿರುವುದರಿಂದ, ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಶ್ರೇಣಿಯು ಸುಮಾರು 750-900 ಆಗಿದೆ.

ಪ್ರತಿ ಸಾಲ ನೀಡುವ ಸಂಸ್ಥೆಯು ತನ್ನದೇ ಆದ ರಿಸ್ಕ್ ಗ್ರೇಡಿಂಗ್ ವಿಧಾನವನ್ನು ಹೊಂದಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಉಹಾರಹರಣೆಗೆ, ಒಂದು ಬ್ಯಾಂಕ್ 700 ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಿದರೂ, ಮತ್ತೊಂದು ಬ್ಯಾಂಕ್ 750 ಕ್ಕಿಂತ ಹೆಚ್ಚಿನ ಸ್ಕೋರ್ ಗೆ ಆದ್ಯತೆ ನೀಡಬಹುದು. ಹೀಗಾಗಿ, ಬಹುತೇಕ ಸಂದರ್ಭಗಳಲ್ಲಿ 750-800 ಕ್ಕಿಂತ ಹೆಚ್ಚಿನ ಸ್ಕೋರ್ಗಳನ್ನು ಸಾಮಾನ್ಯವಾಗಿ, ಉತ್ತಮವೆಂದು ಪರಿಗಣಿಸಬೇಕಾಗುತ್ತದೆ.

ಕೆಟ್ಟ ಕ್ರೆಡಿಟ್ ಸ್ಕೋರ್ ಎಂದರೇನು?

650 ಕ್ಕಿಂತ ಕೆಳಗಿನ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮ ಅಥವಾ ಕಳಪೆ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಈ ಕಡಿಮೆ ಶ್ರೇಣಿಯೊಳಗೆ ಬರುವವರನ್ನು "ಸಬ್‌ಪ್ರೈಮ್" ಕ್ರೆಡಿಟ್ ಸ್ಕೋರ್‌ಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ ಮತ್ತು ಸಾಲದಾತರು ಇವರನ್ನು "ಸಾಲವನ್ನು ಮರುಪಾವತಿಸಲು ಕಷ್ಟಪಡುವ ಜನರು" ಎಂದು ವರ್ಗೀಕರಿಸುತ್ತಾರೆ.

ಕಳಪೆ ಸ್ಕೋರ್‌ಗಳು ಸಾಲಗಳನ್ನು ಪಡೆಯುವ ತೊಂದರೆಗೆ ಗುರಿಮಾಡಬಹುದು, ಕ್ರೆಡಿಟ್ ಅರ್ಜಿಗಳ ನಿರಾಕರಣೆಗೆ ಕಾರಣವಾಗಬಹುದು ಮತ್ತು ನೀವು ಅನುಮೋದನೆ ಪಡೆದರೂ ಸಹ ನೀವು ಹೆಚ್ಚಿನ ಬಡ್ಡಿದರಗಳನ್ನು ಎದುರಿಸುವಂತೆ ಮಾಡಬಹುದು.

ಒಳ್ಳೆಯ ಸುದ್ದಿ ಎಂದರೆ ಕಳಪೆ ಕ್ರೆಡಿಟ್ ಸ್ಕೋರ್ ಅನ್ನು ನಿಗದಿಪಡಿಸಲಾಗಿಲ್ಲ. ನಿಮ್ಮ ಸ್ಕೋರ್ ಕಡಿಮೆ ಇರುವ ಕಾರಣವನ್ನು ನೀವು ಅರಿತರೆ, ಕಾಲಾನಂತರದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ನೀವು ಪ್ರಯತ್ನಿಸಬಹುದು. ಅಂದರೆ, ನಿಮ್ಮ ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸುವುದು, ನಿಮ್ಮ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು, ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದು ಮತ್ತು ಯಾವುದೇ ಹೊಸ ಕ್ರೆಡಿಟ್ ವಿನಂತಿಗಳನ್ನು ಸೀಮಿತಕ್ಕೆ ಒಳಪಡಿಸುವುದು.

ಉತ್ತಮ ಕ್ರೆಡಿಟ್ ಸ್ಕೋರ್ ಹೊಂದುವುದು ಏಕೆ ಮುಖ್ಯ?

ಬ್ಯಾಂಕ್‌ಗಳು ಮತ್ತು ಇತರ ಸಾಲ ನೀಡುವ ಸಂಸ್ಥೆಗಳು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಬಳಸಿಕೊಂಡು ಸಾಲ ಮತ್ತು ಇತರ ಕ್ರೆಡಿಟ್‌ಗಾಗಿ ನಿಮ್ಮ ವಿನಂತಿಗಳನ್ನು ಅನುಮೋದಿಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸುತ್ತವೆ. ಹೀಗಾಗಿ, ನೀವು ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನೀವು ಹಿಂದೆ ಜವಾಬ್ದಾರಿಯುತ ಕ್ರೆಡಿಟ್ ನಡವಳಿಕೆಯನ್ನು ಹೊಂದಿದ್ದೀರಿ ಎಂದು ತೋರಿಸುತ್ತದೆ ಮತ್ತು ಇದು ಕ್ರೆಡಿಟ್ ವಿನಂತಿಗಳನ್ನು ಅನುಮೋದಿಸುವಲ್ಲಿ ಸಂಭಾವ್ಯ ಸಾಲದಾತರಿಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ.

ಇದರಿಂದ ನೀವು ಕಡಿಮೆ ಬಡ್ಡಿ ದರಗಳು, ಉತ್ತಮ ಮರುಪಾವತಿ ನಿಯಮಗಳು ಮತ್ತು ತ್ವರಿತ ಲೋನ್ ಅನುಮೋದನೆ ಪ್ರಕ್ರಿಯೆಯಂತಹ ಇತರ ಪ್ರಯೋಜನಗಳನ್ನು ಸಹ ಪಡೆದುಕೊಳ್ಳಬಹುದು.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನೀವು ಯಾವುದೇ ಕ್ರೆಡಿಟ್ ಸ್ಕೋರ್ ಅನ್ನು ಹೊಂದದೆ ಇರಬಹುದೇ?

ನೀವು ಎಂದಿಗೂ ಕ್ರೆಡಿಟ್ ಕಾರ್ಡ್ ಅನ್ನು ಬಳಸದಿದ್ದರೆ ಅಥವಾ ನೀವು ಎಂದಿಗೂ ಸಾಲವನ್ನು ತೆಗೆದುಕೊಳ್ಳದಿದ್ದರೆ, ನೀವು ಕ್ರೆಡಿಟ್ ಇತಿಹಾಸವನ್ನು ಹೊಂದಿರುವುದಿಲ್ಲ. ಏಕೆಂದರೆ ಹೆಚ್ಚಿನ ಕ್ರೆಡಿಟ್ ಸ್ಕೋರಿಂಗ್ ಮಾದರಿಗಳು ನಿಮ್ಮ ಸ್ಕೋರ್ ಅನ್ನು ನಿರ್ಧರಿಸಲು ಕ್ರೆಡಿಟ್ ಕಾರ್ಡ್‌ಗಳು ಮತ್ತು ಸಾಲಗಳ ಮಾಹಿತಿಯನ್ನು ಬಳಸುತ್ತವೆ. ಹೀಗಾಗಿ, ಈ ಮಾಹಿತಿ ಇಲ್ಲದಿದ್ದರೆ, ಅವರು ಸ್ಕೋರ್ ಅನ್ನು ನೀಡುವುದಿಲ್ಲ.

ಕ್ರೆಡಿಟ್ ಸ್ಕೋರ್ ಏಕೆ 0 ರಿಂದ ಪ್ರಾರಂಭವಾಗುವುದಿಲ್ಲ?

ಬಳಕೆದಾರರು ಗೊಂದಲಕ್ಕೀಡಾಗಬಾರದೆಂದು, ಯುಎಸ್ ನಲ್ಲಿ ಕ್ರೆಡಿಟ್ ಸ್ಕೋರಿಂಗ್ ವ್ಯವಸ್ಥೆಯನ್ನು ಮೊದಲು ರಚಿಸಿದಾಗ, ಅವರು 100-300 ಶ್ರೇಣಿಯನ್ನು ಇತರ ಸ್ಕೋರಿಂಗ್ ಮಾಡೆಲ್‌ಗಳಿಗೆ ಬಳಸಬಹುದೆಂದು ಅವರು ಕಡಿಮೆ ಸಂಭವನೀಯ ಸ್ಕೋರ್ ಅನ್ನು 300 ಕ್ಕೆ ಹೊಂದಿಸಿದರು. ಹೆಚ್ಚುವರಿಯಾಗಿ, ಅವರು ವಿಶೇಷ ಕೋಡ್‌ಗಳಿಗಾಗಿ 0–99 ಶ್ರೇಣಿಯನ್ನು ಹೊಂದಿಸಿದಾದರೂ, ಅವುಗಳನ್ನು ಬಳಸಲಾಗಲಿಲ್ಲ.

ಆದಾಗ್ಯೂ, ಕೆಲವು ಜನರು ಕ್ರೆಡಿಟ್ ಸ್ಕೋರ್ 0, Nil, ಅಥವಾ NA ಹೊಂದಿರುತ್ತಾರೆ. ಇದರರ್ಥ ಸಾಲಗಾರನ ಕ್ರೆಡಿಟ್ ಇತಿಹಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು.

300 ಕ್ರೆಡಿಟ್ ಸ್ಕೋರ್‌ನೊಂದಿಗೆ ಪ್ರಾರಂಭಿಸಬಹುದಾ?

ನೀವು ನಿಮ್ಮ ಕ್ರೆಡಿಟ್ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದರೂ ಅಥವಾ ನಿಮ್ಮ ಮೊದಲ ಕ್ರೆಡಿಟ್ ಕಾರ್ಡ್ ಅನ್ನು ಪಡೆದುಕೊಂಡಿದ್ದರೂ ಸಹ, ನೀವು ಹೆಚ್ಚಿನ ಸಾಲ ಮತ್ತು ಕಳಪೆ ಕ್ರೆಡಿಟ್ ಅಭ್ಯಾಸಗಳೊಂದಿಗೆ ಪ್ರಾರಂಭಿಸದ ಹೊರತು ನಿಮ್ಮ ಕ್ರೆಡಿಟ್ ಸ್ಕೋರ್ 300 ಕ್ಕಿಂತ ಕಡಿಮೆಯಿರುವುದು ಅಸಂಭವನೀಯ. ಆದಾಗ್ಯೂ, ನಿಮ್ಮ ಕ್ರೆಡಿಟ್ ಇತಿಹಾಸವನ್ನು ನೀವು ಇನ್ನೂ ನಿರ್ಮಿಸಬೇಕಾಗಿರುವುದರಿಂದ, ಅದು ಇನ್ನೂ ಕಡಿಮೆ ಇರುತ್ತದೆ.

ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವ ಅಂಶಗಳು ಹೆಚ್ಚು ಪರಿಣಾಮ ಬೀರುತ್ತವೆ?

ಕ್ರೆಡಿಟ್ ಸ್ಕೋರ್‌ಗಳನ್ನು ಹಲವಾರು ಅಂಶಗಳನ್ನು ಬಳಸುವ ಅಲ್ಗಾರಿದಮ್‌ನಿಂದ ಲೆಕ್ಕಹಾಕಲಾಗುತ್ತದೆ. ಅವುಗಳಲ್ಲಿ ಪ್ರತಿಯೊಂದೂ ನಿಮ್ಮ ಕ್ರೆಡಿಟ್ ಸ್ಕೋರ್‌ನಲ್ಲಿ ಈ ಕೆಳಗಿನಂತೆ ವಿಭಿನ್ನ ಪ್ರಮಾಣವನ್ನು ಹೊಂದಿದೆ:

  • ಪಾವತಿ ಇತಿಹಾಸ (35%) - ನಿಮ್ಮ ಕ್ರೆಡಿಟ್ ಬಿಲ್‌ಗಳನ್ನು ಸಮಯಕ್ಕೆ ಪಾವತಿಸುವುದರಿಂದ ನಿಮ್ಮ ಸ್ಕೋರ್ ಸುಧಾರಣೆಗೊಳ್ಳುತ್ತದೆ. ಆದರೆ ವಿಳಂಬ, ತಪ್ಪಿದ ಅಥವಾ ಡೀಫಾಲ್ಟ್ ಪಾವತಿಗಳಿಂದ ಸ್ಕೋರ್ ಗಳು ಕಡಿಮೆಗೊಳುತ್ತವೆ.
  • ಕ್ರೆಡಿಟ್ ಬಳಕೆ (30%) - ನಿಮ್ಮ ಕ್ರೆಡಿಟ್ ಮಿತಿಯನ್ನು ನೀವು ಎಷ್ಟು ಬಳಸುತ್ತೀರಿ; ಅದು 30% ಕ್ಕಿಂತ ಹೆಚ್ಚಿದ್ದರೆ ಅದು ನಿಮ್ಮ ಸ್ಕೋರ್ ಅನ್ನು ಕಡಿಮೆ ಮಾಡಬಹುದು. 
  • ಕ್ರೆಡಿಟ್ ಹಿಸ್ಟರಿಯ ಅವಧಿ(15%) - ಹಳೆಯ ಖಾತೆಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳು ಸ್ಥಿರವಾಗಿ ಜವಾಬ್ದಾರಿಯುತ ಕ್ರೆಡಿಟ್ ನಡವಳಿಕೆಯನ್ನು ಪ್ರದರ್ಶಿಸುತ್ತವೆ.
  • ಹೊಸ ಕ್ರೆಡಿಟ್ ವಿಚಾರಣೆಗಳು (10%) - ಕ್ರೆಡಿಟ್‌ಗಾಗಿ ಹಲವಾರು ವಿನಂತಿಗಳು, ವಿಶೇಷವಾಗಿ ಕಡಿಮೆ ಅವಧಿಯಲ್ಲಿ, ನಿಮ್ಮ ಸ್ಕೋರ್ ಅನ್ನು ಕಡಿಮೆ ಮಾಡಬಹುದು.
  • ಕ್ರೆಡಿಟ್ ಮಿಕ್ಸ್ (10%) - ಅಸುರಕ್ಷಿತ ಸಾಲಗಳು ಮತ್ತು ಸುರಕ್ಷಿತ ಸಾಲಗಳೆರಡರ ಮಿಶ್ರಣವನ್ನು ಹೊಂದಲು ಶಿಫಾರಸು ಮಾಡಲಾಗಿದೆ.

ಪ್ರಪಂಚದಾದ್ಯಂತ ಕ್ರೆಡಿಟ್ ಸ್ಕೋರ್‌ಗಳು ಒಂದೇ ಆಗಿವೆಯೇ?

ಪ್ರಪಂಚದಾದ್ಯಂತದ ಅನೇಕ ದೇಶಗಳು ಇದೇ ರೀತಿಯ ಕ್ರೆಡಿಟ್ ಸ್ಕೋರಿಂಗ್ ವ್ಯವಸ್ಥೆಯನ್ನು ಬಳಸಬಹುದು. ಆದಾಗ್ಯೂ, ಕೆಲವು ಕ್ರೆಡಿಟ್ ಬ್ಯೂರೋಗಳು (ಇಕ್ವಿಫ್ಯಾಕ್ಸ್ ಅಥವಾ ಎಕ್ಸ್ಪೀರಿಯನ್ ನಂತಹವುಗಳು) ಅನೇಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತವೆ, ಅಂತರರಾಷ್ಟ್ರೀಯ ಕಾನೂನುಗಳು ಸಾಗರೋತ್ತರ ಸಾಲದಾತರೊಂದಿಗೆ ಕ್ರೆಡಿಟ್ ಇತಿಹಾಸಗಳನ್ನು ಹಂಚಿಕೊಳ್ಳುವುದನ್ನು ತಡೆಯುತ್ತದೆ. ಕಳ್ಳತನ ಮತ್ತು ಗುರುತಿನ ಬಗೆಗಿನ ವಂಚನೆಯನ್ನು ತಡೆಗಟ್ಟಲು ಇದನ್ನು ಮಾಡಲಾಗುತ್ತದೆ.

ಆದರೆ ನೀವು ವಿದೇಶಕ್ಕೆ ತೆರಳಲು ಮತ್ತು ಸ್ಥಳೀಯ ಬ್ಯಾಂಕ್‌ನಲ್ಲಿ ಕ್ರೆಡಿಟ್ ಕಾರ್ಡ್ ತೆರೆಯಲು ಅಥವಾ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಯೋಜಿಸಿದರೆ, ವಿದೇಶಿ ಬ್ಯಾಂಕುಗಳು ಮತ್ತು ಸಾಲ ನೀಡುವ ಸಂಸ್ಥೆಗಳು ನಿಮ್ಮ ಕ್ರೆಡಿಟ್ ಹಿಸ್ಟರಿ ಮತ್ತು ನಿಮ್ಮ ತಾಯ್ನಾಡಿನಲ್ಲಿ ಯಾವುದೇ ಬಾಕಿ ಇರುವ ಸಾಲಗಳ ಬಗ್ಗೆ ವಿಚಾರಿಸಬಹುದು.

ವಿವಿಧ ಕ್ರೆಡಿಟ್ ಬ್ಯೂರೋಗಳಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಏಕೆ ವಿಭಿನ್ನವಾಗಿರುತ್ತದೆ?

ನಾಲ್ಕು ಆರ್‌ಬಿಐ-ಪರವಾನಗಿ ಪಡೆದ ಕ್ರೆಡಿಟ್ ಬ್ಯೂರೋಗಳು (ಟ್ರಾನ್ಸ್ಯೂನಿಯನ್ ಸಿಬಿಲ್, ಎಕ್ಸ್‌ಪೀರಿಯನ್, ಕ್ರಿಫ್ ಹೈ ಮಾರ್ಕ್ ಮತ್ತು ಇಕ್ವಿಫ್ಯಾಕ್ಸ್) ಕ್ರೆಡಿಟ್ ಸ್ಕೋರ್‌ಗಳನ್ನು ಲೆಕ್ಕಾಚಾರ ಮಾಡುವಾಗ ಸ್ವಲ್ಪ ವಿಭಿನ್ನ ಸ್ಕೋರಿಂಗ್ ಮಾಡೆಲ್‌ಗಳನ್ನು ಬಳಸುತ್ತವೆ. ಹೀಗಾಗಿ, ಯಾವ ಕ್ರೆಡಿಟ್ ಬ್ಯೂರೋ ನಿಮ್ಮ ಕ್ರೆಡಿಟ್ ವರದಿಯನ್ನು ಒದಗಿಸುತ್ತದೆ ಎಂಬುದರ ಆಧಾರದ ಮೇಲೆ ನಿಮ್ಮ ಸ್ಕೋರ್‌ಗಳು ಬದಲಾಗಬಹುದು.