ಕ್ರಿಫ್ ಹೈಮಾರ್ಕ್ ಸ್ಕೋರ್: ವ್ಯಾಪ್ತಿ, ಮಹತ್ವ ಹಾಗೂ ಸುಧಾರಿಸುವುದು ಹೇಗೆ?
ಭಾರತದ ನಾಲ್ಕು ಅಧಿಕೃತ ಕ್ರೆಡಿಟ್ ಬ್ಯೂರೋಗಳಲ್ಲಿ ಒಂದಾಗಿದೆ ಕ್ರಿಫ್ ಹೈಮಾರ್ಕ್. ಇದನ್ನು 2007 ರಲ್ಲಿ ಹೈಮಾರ್ಕ್ ಆಗಿ ಸ್ಥಾಪಿಸಲಾಯಿತು, ಮತ್ತು 2014 ರಲ್ಲಿ ಕ್ರಿಫ್ ಈ ಕಂಪನಿಯ ಬಹುತೇಕ ಪಾಲನ್ನು ಸ್ವಾಧೀನಗೊಳಿಸಿ, ಇದರ ಹೆಸರನ್ನು ಕ್ರಿಫ್ ಹೈಮಾರ್ಕ್ ಎಂದು ಬದಲಾಯಿಸಿತು.
ಒಬ್ಬ ವ್ಯಕ್ತಿ ಅಥವಾ ಒಂದು ಕಂಪನಿಯ ಕ್ರೆಡಿಟ್ ಅರ್ಹತೆಯ ಮೌಲ್ಯಮಾಪನ ಮಾಡಲು, ಈ ಕಂಪನಿಯು ವೈಯಕ್ತಿಕ ಹಾಗೂ ವ್ಯವಹಾರ ಕ್ರೆಡಿಟ್ ಸ್ಕೋರ್ ಎರಡರನ್ನೂ ನೀಡುತ್ತದೆ.
ಕ್ರಿಫ್ ಕ್ರೆಡಿಟ್ ಸ್ಕೋರ್ ಎಂದರೇನು?
ಇತರ ಕ್ರೆಡಿಟ್ ಬ್ಯೂರೋಗಳಂತೆ, ಕ್ರಿಫ್ ಹೈಮಾರ್ಕ್ ವ್ಯಕ್ತಿಗಳಿಗೆ ಕ್ರೆಡಿಟ್ ಸ್ಕೋರ್ ಗಳ ಒಂದು ವ್ಯಾಪ್ತಿಯನ್ನು ನೀಡುತ್ತದೆ, ಹಾಗೂ ಇವುಗಳನ್ನು 300-900 (900 ಗರಿಷ್ಠ ಸಾಧ್ಯ ಸ್ಕೋರ್ ಆಗಿದೆ) ಮಧ್ಯದ ಮೂರು ಡಿಜಿಟ್ ನ ಸಂಖ್ಯೆಯ ಮೂಲಕ ವ್ಯಕ್ತಪಡಿಸಲಾಗುತ್ತದೆ.
ಈ ಸ್ಕೋರ್ ಒಬ್ಬ ವ್ಯಕ್ತಿಯ ಬಿಲ್ ಗಳ ಮರುಪಾವತಿಯ ಇತಿಹಾಸ, ಕ್ರೆಡಿಟ್ ಬಳಕೆ, ಸಾಲಗಳು ಮುಂತಾದವುಗಳನ್ನು ಆಧರಿಸಿದೆ. ಇದು ಅವರ "ಕ್ರೆಡಿಟ್ ಅರ್ಹತೆ"ಯನ್ನು ಅಥವಾ ಅವರು ಒಂದು ಸಾಲವನ್ನು ಸರಿಯಾದ ಸಮಯದಲ್ಲಿ ಪಾವತಿಸುವ ಸಾಧ್ಯತೆಯನ್ನು ಸೂಚಿಸುತ್ತದೆ.
ಒಬ್ಬ ವ್ಯಕ್ತಿಯು ಒಂದು ಒಳ್ಳೆಯ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿದ್ದರೆ, ನೀವು ಜವಾಬ್ದಾರಿಯುತ ಕ್ರೆಡಿಟ್ ವರ್ತನೆಯನ್ನು ಪ್ರದರ್ಶಿಸುತ್ತೀರಿ ಎಂದು ಬ್ಯಾಂಕ್ ಗಳಿಗೆ ಹಾಗೂ ಇತರ ಸಾಲದಾತ ಸಂಸ್ಥೆಗಳಿಗೆ ತಿಳಿಯುವುದರಿಂದ ಅವರು ನಿಮ್ಮ ಸಾಲದ ಅಥವಾ ಕ್ರೆಡಿಟ್ ಕಾರ್ಡ್ ನ ಅಪ್ಲಿಕೇಶನ್ ಅನ್ನು ಅನುಮೋದಿಸುವ ಸಾಧ್ಯತೆ ಹೆಚ್ಚುತ್ತದೆ.
ಒಳ್ಳೆಯ ಹಾಗೂ ಕಳಪೆ ಕ್ರಿಫ್ ಕ್ರೆಡಿಟ್ ಸ್ಕೋರ್ ಗಳು ಎಂದರೇನು?
ಕ್ರಿಫ್ ಸ್ಕೋರ್ | ವ್ಯಾಪ್ತಿ | ಅರ್ಥ |
NA/NH | ಸ್ಕೋರ್ ಇಲ್ಲ | ನೀವು ಕ್ರೆಡಿಟ್ ಹಿಸ್ಟರಿಯನ್ನು ಹೊಂದಿಲ್ಲ. |
300-549 | ಕಳಪೆ | ಒಂದು ಕಳಪೆ ಕ್ರೆಡಿಟ್ ಹಿಸ್ಟರಿ ಮತ್ತು ತಪ್ಪಿದ ಪಾವತಿಗಳ ದಾಖಲೆಯಿಂದಾಗಿ, ನೀವು ಕ್ರೆಡಿಟ್ ಪಾವತಿಗಳ ಡೀಫಾಲ್ಟಿಂಗ್ ಅಥವಾ ಬೇಪಾವತಿಯ ಹೆಚ್ಚಿನ ಅಪಾಯದಲ್ಲಿರಬಹುದು, ಹಾಗೂ ಸಾಲದಾತರು ನಿಮ್ಮ ಸಾಲ ಅಥವಾ ಕ್ರೆಡಿಟ್ ಅನ್ನು ತಿರಸ್ಕರಿಸಬಹುದು. |
550-649 | ಮಧ್ಯಮ | ಹಿಂದೆ ಆಗಿರುವ ಕೆಲವು ವಿಳಂಬದಿಂದಾಗಿ ಮತ್ತು ಬೇಪಾವತಿಗಳಿಂದಾಗಿ ನಿಮ್ಮ ಸ್ಕೋರ್ ಕಡಿಮೆಯಾಗಿರಬಹುದು, ಆದರೂ ನಿಮ್ಮನ್ನು ಸಾಲದಾತರು ಅಪಾಯವೆಂದು ಪರಿಗಣಿಸುತ್ತಾರೆ, ಹಾಗೂ ಕೆಲವರು ನಿಮ್ಮ ಸಾಲಗಳನ್ನು ತಿರಸ್ಕರಿಸಬಹುದು. |
650-749 | ಉತ್ತಮ | ನೀವು ಈ ಹಿಂದೆ ಒಳ್ಳೆಯ ಮರುಪಾವತಿ ವರ್ತನೆಯನ್ನು ಪ್ರದರ್ಶಿಸಿದ್ದೀರಿ, 700ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ, ಕಾರಣ, ನಿಮ್ಮ ಬೇಪಾವತಿಯ ಅಪಾಯ ಕಡಿಮೆ ಎಂದು ಪರಿಗಣಿಸಲಾಗುತ್ತದೆ. |
750-900 | ಅತ್ಯುತ್ತಮ | ನೀವು ಯಾವತ್ತೂ ಪಾವತಿಗಳನ್ನು ತಪ್ಪಿಸದೆ ಈ ಹಿಂದೆ ಅತ್ಯುತ್ತಮ ಕ್ರೆಡಿಟ್ ಮರುಪಾವತಿ ವರ್ತನೆಯನ್ನು ಪ್ರದರ್ಶಿಸಿದ್ದೀರಿ, ನಿಮ್ಮನ್ನು ವಿಶ್ವಾಸಾಹ್ರ ಎಂದು ಪರಿಗಣಿಸಲಾಗುತ್ತದೆ, ಇದರಿಂದ ಸಾಲದಾತರು ನಿಮಗೆ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ನೀಡಲು ಮುಂದಾಗುತ್ತಾರೆ. |
ಒಂದು ಒಳ್ಳೆಯ ಕ್ರಿಫ್ ಹೈಮಾರ್ಕ್ ಕ್ರೆಡಿಟ್ ಸ್ಕೋರ್ ನ ಪ್ರಯೋಜನಗಳೇನು?
ಒಂದು ಒಳ್ಳೆಯ ಕ್ರಿಫ್ ಹೈಮಾರ್ಕ್ ಕ್ರೆಡಿಟ್ ಸ್ಕೋರ್(700 ಮತ್ತು 900 ಮಧ್ಯದ) ಅನ್ನು ಹೊಂದಿರುವುದು ಬಹಳ ಪ್ರಯೋಜನಕಾರಿಯಾಗಿದೆ. ಬ್ಯಾಂಕ್ ಹಾಗೂ ಇತರ ಸಾಲದಾತ ಸಂಸ್ಥೆಗಳು ಒಬ್ಬ ವ್ಯಕ್ತಿಯ "ಕ್ರೆಡಿಟ್ ಅರ್ಹತೆ" ಯನ್ನು ನಿರ್ಧರಿಸಲು ಈ ಸ್ಕೋರ್ ಗಳನ್ನು ಬಳಸುವುದರಿಂದ, ಅವರು ಸಾಲದ ಅರ್ಜಿಯನ್ನು ಅನುಮೋದಿಸಬೇಕೇ ಬೇಡವೇ ಎಂದು ನಿರ್ಧರಿಸಲು ಇದು ಸಹಾಯ ಮಾಡುತ್ತದೆ. ಇನ್ನೂ ಕೆಲವು ಪ್ರಯೋಜನಗಳು ಈ ರೀತಿ ಇವೆ:
ನೀವು ನಿಮ್ಮ ಕ್ರೆಡಿಟ್ ಮಿತಿಯ ಹೆಚ್ಚಳಕ್ಕೆ ಅರ್ಹರಾಗಬಹುದು.
ನೀವು ನಿಮ್ಮ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಗಳ ಮೇಲೆ ಕಡಿಮೆ ಬಡ್ಡಿ ದರವನ್ನು ಪಡೆಯಬಹುದು.
ನಿಮಗೆ ಹೋಮ್ ಲೋನ್, ಕಾರ್ ಲೋನ್ ಗಳ ಅನುಮೊದನೆಯು ಹೆಚ್ಚು ಸರಳವಾಗಿ ಸಿಗಬಹುದು.
- ನೀವು ಹೆಚ್ಚಿನ ಅಧಿಕಾರದೊಂದಿಗೆ ನಿಮ್ಮ ಸಾಲಗಳ ನಿಯಮಗಳ ಬಗ್ಗೆ ಮಾತುಕತೆಯನ್ನು ನಡೆಸಬಹುದು.
ಕ್ರಿಫ್ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ?
ಒಬ್ಬ ವ್ಯಕ್ತಿಯ ಕ್ರಿಫ್ ಹೈಮಾರ್ಕ್ ಸ್ಕೋರ್ ಅನ್ನು ಕೆಲವು ಪ್ರಮುಖ ಅಂಶಗಳನ್ನು ಬಳಸಿ ಲೆಕ್ಕಾಚಾರ ಮಾಡಲಾಗುತ್ತದೆ, ಹಾಗೂ ಪ್ರತಿಯೊಂದು ಅಂಶವೂ ನಿಮ್ಮ ಕ್ರೆಡಿಟ್ ಸ್ಕೋರ್ ನ ಮೇಲೆ ಭಿನ್ನವಾದ ಪರಿಣಾಮಗಳನ್ನು ಬೀರುತ್ತವೆ. ಈ ಅಂಶಗಳು ಈ ರೀತಿ ಇವೆ:
ಅಂಶಗಳು | ಈ ಅಂಶಗಳ ಮೇಲೆ ಏನೆಲ್ಲಾ ಪರಿಣಾಮಗಳನ್ನು ಬೀರುತ್ತವೆ |
---|---|
ಪಾವತಿ ಇತಿಹಾಸ | ಇದು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್, ಸಾಲ ಮತ್ತು ಇಎಂಐ ಗಳ ಸರಿಯಾದ ಸಮಯದ ಪಾವತಿಯನ್ನು ಉಲ್ಲೇಖಿಸುತ್ತದೆ. ವಿಳಂಬವಾದ ಅಥವಾ ಡೀಫಾಲ್ಟರ್ ಪಾವತಿಗಳು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತವೆ. |
ಕ್ರೆಡಿಟ್ ಹಿಸ್ಟರಿಯ ಅವಧಿ | ನಿಮ್ಮ ಕ್ರೆಡಿಟ್ ಹಿಸ್ಟರಿಯ ವಯಸ್ಸು ಅಂದರೆ ನೀವು ಎಷ್ಟು ಸಮಯದಿಂದ ಕ್ರೆಡಿಟ್ ಅಕೌಂಟ್ ಅನ್ನು ಹೊಂದಿದ್ದೀರಿ. ನಿಮ್ಮ ಹಳೆಯ ಅಕೌಂಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ನೋಡಿ ನೀವು ನಿಮ್ಮ ಬಿಲ್ ಗಳನ್ನು ಸರಿಯಾದ ಸಮಯದಲ್ಲಿ ಪಾವತಿಸುತ್ತಾ ಬಂದಿದ್ದೀರಿ ಎಂದು ಸಾಲದಾತರಿಗೆ ಖಚಿತವಾಗುತ್ತದೆ. |
ಸಾಲದ ಬಳಕೆ | ಇದು ನೀವು ಬಳಸುವ ನಿಮ್ಮ ಕ್ರೆಡಿಟ್ ಮಿತಿಯ ಮೊತ್ತವನ್ನು ಸೂಚಿಸುತ್ತದೆ. ಮಾದರಿಯಾಗಿ, ನೀವು ನಿಮ್ಮ ಕ್ರೆಡಿಟ್ ಮಿತಿಯ 30% ಕ್ಕಿಂತ ಹೆಚ್ಚಿನ ಮೊತ್ತವನ್ನು ಬಳಸಬಾರದು, ಇದು ಮೀರಿದರೆ, ನಿಮ್ಮ ಸ್ಕೋರ್ ಕಡಿಮೆಯಾಗುವುದು. |
ಕ್ರೆಡಿಟ್ ಮಿಕ್ಸ್ | ಎರಡು ಪ್ರಮುಖ ಪ್ರಕಾರದ ಕ್ರೆಡಿಟ್ ಗಳಿವೆ: ಅಸುರಕ್ಷಿತ ಸಾಲಗಳು(ಉದಾಹರಣೆಗೆ ಕ್ರೆಡಿಟ್ ಕಾರ್ಡ್ ಗಳು ಮತ್ತು ವೈಯಕ್ತಿಕ ಸಾಲಗಳು) ಮತ್ತು ಸುರಕ್ಷಿತ ಸಾಲಗಳು (ಉದಾಹರಣೆಗೆ ವಾಹನ ಸಾಲಗಳು ಅಥವಾ ಹೋಮ್ ಲೋನ್ ಗಳು). ನೀವು ಈ ಎರಡರ ಮಿಶ್ರಣವನ್ನು ಹೊಂದಿರಬೇಕು ಎಂದು ನಾವು ಶಿಫಾರಸ್ಸು ಮಾಡುತ್ತೇವೆ. |
ಹೊಸ ಕ್ರೆಡಿಟ್ ವಿಚಾರಣೆಗಳು | ನೀವು ಎಷ್ಟು ಬಾರಿ ಕ್ರೆಡಿಟ್ ಗಾಗಿ ಅರ್ಜಿ ಸಲ್ಲಿಸಿರುವಿರಿ, ಉದಾಹರಣೆಗೆ ಕ್ರೆಡಿಟ್ ಕಾರ್ಡ್, ಸಾಲಗಳು ಇತ್ಯಾದಿ. ವಿಚಾರಣೆಯ ಸಂಖ್ಯೆಗಳು ಹೆಚ್ಚಿದ್ದರೆ ನಿಮ್ಮ ಸ್ಕೋರ್ ಕಡಿಮೆಯಾಗುವುದು. |
ನಿಮ್ಮ ಕ್ರಿಫ್ ಕ್ರೆಡಿಟ್ ಸ್ಕೋರ್ ಅನ್ನು ಆನ್ಲೈನ್ ಆಗಿ ಹೇಗೆ ಪರಿಶೀಲಿಸುವುದು?
ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಕಾರ, ಎಲ್ಲಾ ಕ್ರೆಡಿಟ್ ಮಾಹಿತಿ ಕಂಪೆನಿಗಳು ಬಳಕೆದಾರರಿಗೆ ಆನ್‌ಲೈನ್ ಆಗಿ ಕ್ರೆಡಿಟ್ ಸ್ಕೋರ್ ಪರಿಶೀಲಿಸುವ ಅನುಮತಿಯನ್ನು ನೀಡಬೇಕು ಹಾಗೂ ಪ್ರತೀ ವರ್ಷ ಒಂದು ಉಚಿತ ಕ್ರೆಡಿಟ್ ರಿಪೋರ್ಟ್ ನೀಡಬೇಕು. ನೀವು ಈ ಹಂತಗಳನ್ನು ಅನುಸರಿಸಿ ಸುಲಭವಾಗಿ ನಿಮ್ಮ ಕ್ರಿಫ್ ಕ್ರೆಡಿಟ್ ಸ್ಕೋರ್ ಅನ್ನು ಆನ್ಲೈನ್ ಆಗಿ ಪರಿಶೀಲಿಸಬಹುದಾಗಿದೆ:
ಹಂತ 1: ಕ್ರಿಫ್ ಪೋರ್ಟಲ್ ತೆರೆಯಿರಿ ಇಲ್ಲಿ
ಹಂತ 2: "ನಿಮ್ಮ ಸ್ಕೋರ್ ಅನ್ನು ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಮುಂದುವರಿಯಲು ನಿಮ್ಮಲ್ಲಿ ನಿಮ್ಮ ಈ-ಮೇಲ್ ಐಡಿ ಅನ್ನು ಕೇಳಲಾಗುತ್ತದೆ.
ಹಂತ 4: ನಿಮ್ಮ ಈ-ಮೇಲ್ ಐಡಿ ಅನ್ನು ನಮೂದಿಸಿದ ನಂತರ, ನಿಮ್ಮನ್ನು ಒಂದು ಪುಟಕ್ಕೆ ನಿರ್ದೆಶಿಸಲಾಗುವುದು ಹಾಗೂ ಇಲ್ಲಿ ನೀವು ನಿಮ್ಮ ವಿವರಗಳನ್ನು ಭರ್ತಿ ಮಾಡಬೇಕಾಗುವುದು. ಇವುಗಳಲ್ಲಿ ಸೇರಿವೆ: ನಿಮ್ಮ ಪೂರ್ಣ ಹೆಸರು, ಜನನ ದಿನಾಂಕ, ಮೊಬೈಲ್ ಸಂಖ್ಯೆ, ವಿಳಾಸ, ಮತ್ತು ಆಧಾರ್ ಅಥವಾ ಪಾನ್ ಸಂಖ್ಯೆ.
ಹಂತ 5: ನೀವು ಈ ಮಾಹಿತಿಯನ್ನು ಪರಿಶೀಲಿಸಿ ಸಲ್ಲಿಸಿದ ನಂತರ, ನಿಮ್ಮ ದಾಖಲೆಯನ್ನು ಆಧರಿಸಿ, ನಿಮಗೆ ಒಂದು ಭದ್ರತಾ ಕ್ರೆಡಿಟ್ ಪ್ರಶ್ನೆಯನ್ನು ಕೇಳಲಾಗುವುದು.
ಹಂತ 6: ನೀವು ಭದ್ರತಾ ಕ್ರೆಡಿಟ್ ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಿದರೆ, ನಿಮಗೆ ನಿಮ್ಮ ಕ್ರಿಫ್ ಕ್ರೆಡಿಟ್ ರಿಪೋರ್ಟ್ ಡೌನ್ಲೋಡ್ ಗೆ ಲಭ್ಯವಾಗುತ್ತದೆ.
ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಕ್ರೆಡಿಟ್ ರಿಪೋರ್ಟ್ ನಿಂದ ಲೆಕ್ಕಾಚಾರ ಮಾಡಲಾದ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವು ಪರಿಶೀಲಿಸಬಹುದಾಗಿದೆ. ಇದನ್ನು ನೀವು ಬೇಕಾದಷ್ಟು ಬಾರಿ ಮಾಡಬಹುದು.
ಆದರೆ, ಮೇಲೆ ಹೇಳಿರುವ ಹಾಗೆ, ನೀವು ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ಉಚಿತವಾಗಿ ವರ್ಷದಲ್ಲಿ ಕೇವಲ ಒಂದು ಬಾರಿ ಪರಿಶೀಲಿಸಬಹುದಾಗಿದೆ. ನೀವು ಹಲವು ಬಾರಿ ಇದನ್ನು ಪರಿಶೀಲಿಸಲು ಬಯಸಿದರೆ, ನೀವು ₹399 (ಜಿಎಸ್ಟಿ ಸೇರಿ) ಅನ್ನು ಪಾವತಿಸಿ ಕ್ರಿಫ್ ಹೈಮಾರ್ಕ್ ನಿಂದ ಇದನ್ನು ಮಾಡಬಹುದಾಗಿದೆ.
ನೀವು ನಿಮ್ಮ ಕ್ರಿಫ್ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಸುಧಾರಿಸಬಹುದು?
ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರುವುದು ಮಹತ್ವಪೂರ್ಣವಾಗಿದೆ, ಏಕೆಂದರೆ ಇದು ಬ್ಯಾಂಕ್ ಹಾಗೂ ಸಾಲದಾತರಿಗೆ ನಿಮ್ಮ ಪರವಾಗಿ ನಿರ್ಧರಿಸಲು ಸಹಾಯ ಮಾಡುತ್ತದೆ, ಇಲ್ಲಿ ನೀಡಲಾದ ಕೆಲ ವಿಧಾನಗಳನ್ನು ಬಳಸಿ ನೀವು ನಿಮ್ಮ ಕ್ರಿಫ್ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಬಹುದು:
ನಿಮ್ಮ ಕ್ರೆಡಿಟ್, ಬಿಲ್ ಹಾಗೂ ಸಾಲಗಳ ಮರುಪಾವತಿಯನ್ನು ತ್ವರಿತ ಮತ್ತು ಸಮಯೋಚಿತವಾಗಿ ಮಾಡಿ.
ನಿಮ್ಮ ಸಾಲದ ಬಳಕೆಯ ಅನುಪಾತವು 30%ಕ್ಕಿಂತ ಕೆಳಗಡೆ ಇರುವಂತೆ ನೋಡಿಕೊಳ್ಳಿ. ಉದಾಹರಣೆಗೆ, ನಿಮ್ಮ ಕ್ರೆಡಿಟ್ ಮಿತಿ ₹10,000 ಆಗಿದ್ದರೆ, ₹3,000 ಕ್ಕಿಂತ ಹೆಚ್ಚು ಬಳಸದಂತೆ ನೋಡಿಕೊಳ್ಳಿ.
ನಿಮ್ಮ ಹಾರ್ಡ್ ಕ್ರೆಡಿಟ್ ವಿಚಾರಣೆಗಳನ್ನು, ಅಂದರೆ ಕ್ರೆಡಿಟ್ ಕಾರ್ಡ್, ಸಾಲ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವುದನ್ನು, ಕಡಿಮೆ ಮಾಡಿ.
ಅತ್ಯಗತ್ಯವಾಗಿರದಿದ್ದರೆ, ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್ ಹಾಗೂ ಅಕೌಂಟ್ ಗಳನ್ನು ರದ್ದುಗೊಳಿಸಬೇಡಿ. ಕಾರಣ, ನೀವು ಸರಿಯಾದ ಸಮಯದಲ್ಲಿ ನಿಮ್ಮ ಬಿಲ್ ಗಳನ್ನು ಪಾವತಿಸುತ್ತಿರುವಿರಿ ಎಂದು ನಿಮ್ಮ ಹಳೆಯ ಕಾರ್ಡ್ ಗಳಿಂದ ನಿಮ್ಮ ಸಾಲದಾತರಿಗೆ ಖಚಿತವಾಗುತ್ತದೆ.
ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ ಹಾಗೂ ತಪ್ಪುಗಳು ಕಂಡುಬಂದಲ್ಲಿ ಅವುಗಳನ್ನು ತಿದ್ದಿರಿ.
ನಿಮ್ಮ ಸುಧಾರಣೆಗಳನ್ನು ಅರಿಯಲು ನಿಮ್ಮ ಕ್ರಿಫ್ ಹೈಮಾರ್ಕ್ ಕ್ರೆಡಿಟ್ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ.
ವ್ಯವಹಾರಗಳಿಗಾಗಿ ಇರುವ ಕ್ರಿಫ್ ಕ್ರೆಡಿಟ್ ಸ್ಕೋರ್ ಎಂದರೇನು?
ಕ್ರಿಫ್ ಹೈಮಾರ್ಕ್ ಕಂಪನಿಗಳಿಗೆ ಹೆಚ್ಚುವರಿ ಸೇವೆಗಳನ್ನೂ ಒದಗಿಸುತ್ತದೆ, ಉದಾಹರಣೆಗೆ ವ್ಯವಹಾರದ ಕ್ರೆಡಿಟ್ ಸ್ಕೋರ್ ಅನ್ನು ಒದಗಿಸುವುದು. ವ್ಯವಹಾರ ಕ್ರೆಡಿಟ್ ಸ್ಕೋರ್ ಒಂದು ಕಂಪೆನಿಯ ಕ್ರೆಡಿಟ್ ಅರ್ಹತೆಯ ಮೌಲ್ಯಮಾಪಕವಾಗಿದೆ. ಇದನ್ನು ವೈಯಕ್ತಿಕ ಕ್ರೆಡಿಟ್ ಸ್ಕೋರ್ ರೀತಿಯಲ್ಲೇ ಲೆಕ್ಕಾಚಾರ ಮಾಡಲಾಗುತ್ತದೆ, ಇವುಗಳ ಪರಿಗಣನೆಯೊಂದಿಗೆ:
ವ್ಯವಹಾರ ಇತಿಹಾಸ
ಪಾವತಿ ಇತಿಹಾಸ
ಸಾಲ ಇತಿಹಾಸ
ಹಿಂದಿನ ಹುಡುಕಾಟಗಳು, ಇತ್ಯಾದಿ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಕ್ರಿಫ್ ಹೈಮಾರ್ಕ್ ಮತ್ತು ಸಿಬಿಲ್ ಮಧ್ಯೆ ಇರುವ ವ್ಯತ್ಯಾಸಗಳೇನು?
ಕ್ರಿಫ್ ಹೈಮಾರ್ಕ್ ಮತ್ತು ಸಿಬಿಲ್ ಎರಡೂ ಕ್ರೆಡಿಟ್ ಬ್ಯೂರೋಗಳಾಗಿವೆ. ಇವುಗಳು ಭಾರತದ ನಾಲ್ಕು ಕ್ರೆಡಿಟ್ ಮಾಹಿತಿ ಕಂಪೆನಿಗಳಲ್ಲಿ ಎರಡಾಗಿವೆ. ಎರಡು ಕಂಪೆನಿಗಳೂ ವೈಯಕ್ತಿಕ ಬಳಕೆದಾರರಿಗೆ ಹಾಗೂ ಕಂಪೆನಿಗಳಿಗೆ ಕ್ರೆಡಿಟ್ ಸ್ಕೋರ್ ಗಳನ್ನು ಹಾಗೂ ಕ್ರೆಡಿಟ್ ರಿಪೋರ್ಟ್ ಗಳನ್ನು ಒದಗಿಸುತ್ತವೆ.
ಆದರೆ, ಇವುಗಳ ಮಧ್ಯೆ ಇರುವ ಒಂದು ಸಣ್ಣ ವ್ಯತ್ಯಾಸವೆಂದರೆ ಇವೆರಡೂ ಪ್ರತೀ ವರ್ಷ ಒಂದು ಉಚಿತ ಕ್ರೆಡಿಟ್ ರಿಪೋರ್ಟ್ ಒದಗಿಸುತ್ತವೆಯಾದರೂ, ನಂತರದ ಸಿಬಿಲ್ ವರದಿಗಳ ಬೆಲೆ ₹550 ಆಗಿರುತ್ತದೆ, ಆದರೆ ಹೆಚ್ಚುವರಿ ಕ್ರಿಫ್ ಹೈಮಾರ್ಕ್ ಕ್ರೆಡಿಟ್ ರಿಪೋರ್ಟ್ ನ ಬೆಲೆ ₹399 ಆಗಿರುತ್ತದೆ.
ವ್ಯಕ್ತಿಗಳಿಗೆ ಕ್ರಿಫ್ ಹೈಮಾರ್ಕ್ ಯಾವ ಸೇವೆಗಳನ್ನು ಒದಗಿಸುತ್ತದೆ?
ವೈಯಕ್ತಿಕ ಕ್ರೆಡಿಟ್ ಸ್ಕೋರ್ ಗಳನ್ನು ಒದಗಿಸುವುದನ್ನು ಹೊರತುಪಡಿಸಿ, ಕ್ರಿಫ್ ಹೈಮಾರ್ಕ್ ವೈಯಕ್ತಿಕ ಬಳಕೆದಾರರಿಗೆ ಹಲವು ಸೇವೆಗಳನ್ನು ಒದಗಿಸುತ್ತದೆ, ಉದಾಹರಣೆಗೆ:
- ಕ್ರಿಫ್ ಹೈಮಾರ್ಕ್ ಕ್ರೆಡಿಟ್ ಮಾಹಿತಿ ವರದಿಗಳು – ಈ ವರದಿಗಳು ಒಬ್ಬ ವ್ಯಕ್ತಿಯ ಕ್ರೆಡಿಟ್ ಹಿಸ್ಟರಿ, ಮರುಪಾವತಿ ವರ್ತನೆ, ಇತ್ಯಾದಿಗಳನ್ನೂ ಒಳಗೊಂಡಿರುತ್ತದೆ.
- ಕಿರುಬಂಡವಾಳ ಕ್ರೆಡಿಟ್ ರಿಪೋರ್ಟ್ ಗಳು - ಈ ವರದಿಗಳು, ಒಬ್ಬ ವ್ಯಕ್ತಿಯಿಂದ ಪಡೆಯಲಾದ, ಬ್ಯಾಂಕ್, ಎನ್ಬಿಎಫ್ಸಿ ಮತ್ತು ಕಿರುಬಂಡವಾಳ ಸಂಸ್ಥೆ ಇತ್ಯಾದಿಗಳ ಗುಂಪು ಸಾಲಗಳ ದಾಖಲೆಯನ್ನು ಒಳಗೊಂಡಿರುತ್ತವೆ.
ಕ್ರಿಫ್ ಹೈಮಾರ್ಕ್ ವ್ಯವಹಾರಗಳಿಗೆ ಯಾವ ಸೇವೆಗಳನ್ನು ಒದಗಿಸುತ್ತದೆ.
ಕ್ರಿಫ್ ಹೈಮಾರ್ಕ್ ವ್ಯವಹಾರಗಳಿಗೆ ಹಲವು ಸೇವೆಗಳನ್ನು ಒದಗಿಸುತ್ತದೆ
- ವ್ಯವಹಾರ ಕ್ರೆಡಿಟ್ ಸ್ಕೋರ್ ಗಳು
- ಗುರುತುವಿಕೆ ಹಾಗೂ ವಂಚನೆ-ವಿರೋಧಿ ಸೇವೆಗಳು
- ಮುನ್ಸೂಚಕ ವಿಶ್ಲೇಷಣೆ ಮತ್ತು ಸ್ಕೋರ್ಕಾರ್ಡ್ ಗಳು
- ಸಾಲದ ಮೂಲ
ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವು ಎಷ್ಟು ಬಾರಿ ಪರಿಶೀಲಿಸಬೇಕು?
ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅನ್ನು ಅವರ ಕ್ರೆಡಿಟ್ ರಿಪೋರ್ಟ್ ಅನ್ನು ಬಳಸಿ ಲೆಕ್ಕಾಚಾರ ಮಾಡಲಾಗುತ್ತದೆ. ಕ್ರಿಫ್ ಹೈಮಾರ್ಕ್ ನಂತಹ ಕ್ರೆಡಿಟ್ ಬ್ಯೂರೋಗಳು ಕಡ್ಡಾಯವಾಗಿ ಪ್ರತೀ ವರ್ಷ ಕೇವಲ ಒಂದು ಕ್ರೆಡಿಟ್ ರಿಪೋರ್ಟ್ ಅನ್ನು ಒದಗಿಸುತ್ತವೆಯಾದರೂ, ಕ್ರೆಡಿಟ್ ಸ್ಕೋರ್ ಅನ್ನು ವರ್ಷದಲ್ಲಿ ಹಲವು ಬಾರಿ ಪರಿಶೀಲಿಸಬಹುದಾಗಿದೆ.
ನೀವು ಕನಿಷ್ಠ ಎಂದರೆ ವರ್ಷದಲ್ಲಿ ಒಂದು ಬಾರಿ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಬೇಕಾಗುತ್ತದೆಯಾದರೂ, ಕ್ರೆಡಿಟ್ ಸ್ಕೋರ್ ಅನ್ನು ಮೂರು ತಿಂಗಳಿಗೊಮ್ಮೆ ಪರಿಶೀಲಿಸುವುದು ಉತ್ತಮ ಕ್ರಮವಾಗಿದೆ . ಅದಾಗ್ಯೂ, ನಿಮ್ಮ ಕ್ರೆಡಿಟ್ ಚಟುವಟಿಕೆ ಹೆಚ್ಚಿದ್ದರೆ ನೀವು ಇನ್ನೂ ಹಲವಾರು ಬಾರಿ ಇದನ್ನು ಪರಿಶೀಲಿಸಬಹುದು.
ನೀವಾಗಿಯೇ ಎಷ್ಟು ಬಾರಿ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿದರೂ ಅದರಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ ಎಂದು ಗಮನಿಸಿ.
ನೀವು ಈ ಹಿಂದೆ ಯಾವತ್ತೂ ಕ್ರೆಡಿಟ್ ಕಾರ್ಡ್ ಅಥವಾ ಸಾಲವನ್ನು ಪಡೆಯದೇ ಇದ್ದರೆ ನಿಮ್ಮ ಬಳಿ ಕ್ರೆಡಿಟ್ ಸ್ಕೋರ್ ಇರುವುದೇ?
ನೀವು ಈ ಹಿಂದೆ ಯಾವತ್ತೂ ಕ್ರೆಡಿಟ್ ಕಾರ್ಡ್ ಅಥವಾ ಸಾಲವನ್ನು ಪಡೆಯದೇ ಇದ್ದರೆ, ನಿಮ್ಮ ಯಾವುದೇ ಮಾಹಿತಿಯು ಕ್ರೆಡಿಟ್ ಬ್ಯೂರೋದಲ್ಲಿ ಇರುವುದಿಲ್ಲ. ಆದ್ದರಿಂದ, ನೀವು ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವಾಗ, ಅದನ್ನು NH ಅಥವಾ ನೋ ಹಿಸ್ಟರಿ(ಇತಿಹಾಸವಿಲ್ಲ) ಎಂದು ಬರೆಯಲಾಗುತ್ತದೆ.