ಹೋಮ್ ಲೋನ್ ಗೆ ಅಗತ್ಯವಿರುವ ಕ್ರೆಡಿಟ್ ಸ್ಕೋರ್ ಎಷ್ಟು?
ಹೋಮ್ ಲೋನ್ ಒಂದು ರೀತಿಯ ಭದ್ರ ಸಾಲವಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಮನೆ ಕಟ್ಟುವ ಅಥವಾ ಖರೀದಿಸುವ ಉದ್ದೇಶದಿಂದ ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆಯಿಂದ ಹಣವನ್ನು ಸಾಲವಾಗಿ ಪಡೆಯುತ್ತಾರೆ. ಇದೊಂದು ಭದ್ರ ಸಾಲವಾಗಿರುವುದರಿಂದ, ಇಂತಹ ಸಾಲದ ಬಡ್ಡಿ ಸಮೇತ ಮರುಪಾವತಿಯಾಗುವವರೆಗೆ, ಇದರ ಬದಲಾಗಿ ಸಾಲದಾತರಿಗೆ ಒಂದು ರೀತಿಯ ಮೆಲಾಧಾರ ಬೇಕಾಗುತ್ತದೆ(ಉದಾಹರಣೆಗೆ ಆಸ್ತಿಯ ಅಡಮಾನ, ಅಥವಾ ಹಕ್ಕುಪತ್ರದ ಹಿಡಿದಿಟ್ಟುಕೊಳ್ಳುವಿಕೆ).
ಇಂತಹ ಸಾಲಗಳನ್ನು ಅನುಮೋದಿಸುವಾಗ, ಬ್ಯಾಂಕ್ ಗಳು ಸಾಮಾನ್ಯವಾಗಿ ವ್ಯಕ್ತಿಯ ಕ್ರೆಡಿಟ್ ಅರ್ಹತೆ, ಅಥವಾ ಅವರು ಪಡೆದಿರುವ ಹಣವನ್ನು ಸಮಯದಲ್ಲಿ ಮರುಪಾವತಿಸುವ ಅವರ ಸಾಮಥ್ಯವನ್ನು ಅಳೆಯಲು, ಅವರ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತವೆ.
ಹೋಮ್ ಲೋನ್ ಗಳಿಗೆ ಕ್ರೆಡಿಟ್ ಸ್ಕೋರ್ ಹೇಗೆ ಮಹತ್ವಪೂರ್ಣವಾಗಿರುತ್ತದೆ?
ಜನಪ್ರಿಯವಾಗಿ ಸಿಬಿಲ್ ಸ್ಕೋರ್ ಎಂದು ಕರೆಯಲ್ಪಡುವ ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್, 300 ಮತ್ತು 900 ಮಧ್ಯೆಯ ಮೂರು ಅಂಕಿಯ ಸಂಖ್ಯೆಯಾಗಿದೆ ಹಾಗೂ ಇದನ್ನು ಆ ವ್ಯಕ್ತಿಯ ಕ್ರೆಡಿಟ್ ಹಿಸ್ಟರಿ ಅನ್ನು ಬಳಸಿ ನಾಲ್ಕು ಪರವಾನಗಿ ಪಡೆದಿರುವ ಕ್ರೆಡಿಟ್ ಬ್ಯುರೋಗಳಿಂದ (ಟ್ರಾನ್ಸ್ಯೂನಿಯನ್ ಸಿಬಿಲ್, ಎಕ್ಸ್‌ಪೀರಿಯನ್, ಕ್ರಿಫ್ ಹೈಮಾರ್ಕ್, ಮತ್ತು ಈಕ್ವಿಫ್ಯಾಕ್ಸ್) ಲೆಕ್ಕಾಚಾರ ಮಾಡಲಾಗುತ್ತದೆ.
ಈ ಸ್ಕೋರ್ ಅನ್ನು ಬಳಸಿ ಬ್ಯಾಂಕ್ ಗಳು ಒಂದು ಹೋಮ್ ಲೋನ್ ಅರ್ಜಿಯ ಪ್ರಕ್ರಿಯೆ ಮಾಡಬೇಕೇ ಬೇಡವೇ ಎಂದು ನಿರ್ಧರಿಸುತ್ತವೆ. ಕ್ರೆಡಿಟ್ ಬ್ಯೂರೋಗಳು ನಿಮ್ಮ ಕ್ರೆಡಿಟ್ ಹಿಸ್ಟರಿ ಮಾಹಿತಿಯನ್ನು ಸಂಗ್ರಹಿಸುತ್ತವೆ - ನಿಮ್ಮ ಪಾವತಿ ಇತಿಹಾಸ, ಅಸ್ತಿತ್ವದಲ್ಲಿರುವ ಸಾಲ, ಸಾಲದ ಬಳಕೆಗಳನ್ನೂ ಸೇರಿ. ನೀವು ಹೋಮ್ ಲೋನ್ ಗಾಗಿ ಅರ್ಜಿ ಸಲ್ಲಿಸುವಾಗ, ಬ್ಯಾಂಕ್ ಗಳು ಈ ಮಾಹಿತಿಯನ್ನು ಪಡೆಯುತ್ತವೆ (ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಗಳ ಮೂಲಕ).
ಹೋಮ್ ಲೋನ್ ಗಾಗಿ ಒಂದು ಒಳ್ಳೆಯ ಕ್ರೆಡಿಟ್ ಸ್ಕೋರ್ ಎಂದರೇನು?
ಹೋಮ್ ಲೋನ್ ಗಳಿಗಾಗಿ ಒಂದು ಸಾರ್ವತ್ರಿಕ ಕನಿಷ್ಠ ಸ್ಕೋರ್ ಇಲ್ಲವಾದರೂ, ಅಪ್ಲಿಕೇಶನ್ ಗಳನ್ನು ಸ್ವೀಕರಿಸುವುದೋ ಅಥವಾ ತಿರಸ್ಕರಿಸುವುದೋ ಎಂದು ನಿರ್ಧರಿಸಲು ಪ್ರತೀ ಬ್ಯಾಂಕ್ ಒಂದು ಕಟ್- ಆಫ್ ಪಾಯಿಂಟ್ ಅನ್ನು ಹೊಂದಿದೆ. ಸಾಮಾನ್ಯವಾಗಿ, 750 ಹಾಗೂ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಅನ್ನು ಹೋಮ್ ಲೋನ್ ಗಾಗಿ ಉತ್ತಮ ಎಂದು ಪರಿಗಣಿಸಲಾಗುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ನಿಮ್ಮ ಸಾಲದ ಅನುಮೋದನೆಯ ಮೇಲೆ ಈ ರೀತಿ ಪರಿಣಾಮವನ್ನು ಬೀರಬಹುದಾಗಿದೆ:
ಕ್ರೆಡಿಟ್ ಸ್ಕೋರ್ | ನಿಮ್ಮ ಸಾಲದ ಮೇಲೆ ಇದರ ಪರಿಣಾಮ |
---|---|
750 – 900 | ಒಳ್ಳೆಯ ಸ್ಕೋರ್ ಎಂದರೆ ನಿಮ್ಮ ಹೋಮ್ ಲೋನ್ ಅನುಮೋದಿತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ, ಅನುಮೋದನೆಯ ಪ್ರಕ್ರಿಯೆ ಶಿಘ್ರವಾಗಿರುತ್ತದೆ, ನೀವು ಉತ್ತಮ ಬಡ್ಡಿ ದರದ ಮಾತುಕತೆ ನಡೆಸುವ ಸ್ಥಿತಿಯಲ್ಲಿ ಇರುತ್ತೀರಿ. |
600 – 749 | ಸಾಧಾರಣ ಸ್ಕೋರ್ ನಿಂದ ಕೂಡಾ ಹೋಮ್ ಲೋನ್ ಅನುಮೋದನೆಯನ್ನು ಪಡೆಯಬಹುದಾಗಿದೆ. ಆದರೆ, ಸಾಲದಾತರು ಇತರ ಅಂಶಗಳಾದ ಮಾಸಿಕ ಆದಾಯ, ಅಸ್ತಿತ್ವದಲ್ಲಿರುವ ಸಾಲಗಳು, ಉದ್ಯೋಗ ಭದ್ರತೆ ಮುಂತಾದವುಗಳನ್ನು ಪರಿಗಣಿಸುತ್ತಾರೆ, ಅನುಮೋದನೆ ಪ್ರಕ್ರಿಯೆಯು ವಿಳಂಬವಾಗುವುದು ಹಾಗೂ ನಿಮಗೆ ಉತ್ತಮ ಬಡ್ಡಿ ದರ ಸಿಗದೇ ಇರಬಹುದು. |
300 – 599 | ಕಡಿಮೆ ಸ್ಕೋರ್ ಮತ್ತು ಕಳಪೆ ಕ್ರೆಡಿಟ್ ಹಿಸ್ಟರಿ ನಿಮ್ಮ ಸಾಲ ಪಡೆಯುವ ಸಾಧ್ಯತೆಗಳನ್ನು ಕಡಿಮೆಯಾಗಿಸುತ್ತದೆ, ಆದರೆ ನಿಮಗೆ ಹೋಮ್ ಲೋನ್ ನೀಡಲು ಮುಂದಾಗುವ ಕೆಲವು ಸಾಲದಾತರು ನಿಮಗೆ ಕಡಿಮೆ ಸಾಲದ ಮೊತ್ತ, ಹೆಚ್ಚಿನ ಬಡ್ಡಿ ದರವನ್ನ ನೀಡಬಹುದು, ಅಥವಾ ಮೆಲಾಧಾರವನ್ನು ಕೇಳಬಹುದು, ನೀವು ತಿರಸ್ಕೃತರಾದರೆ, ಸಾಲಕ್ಕೆ ಅರ್ಹರಾಗಲು ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವ ಅಗತ್ಯವಿದೆ. |
ಕಡಿಮೆ ಕ್ರೆಡಿಟ್ ಸ್ಕೋರ್ ನೊಂದಿಗೆ ಹೋಮ್ ಲೋನ್ ಅನ್ನು ಪಡೆಯುವುದು ಹೇಗೆ?
ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿದ್ದರೂ ಸಹ ಹೋಮ್ ಲೋನ್ ಅನ್ನು ಪಡೆಯಬಹುದಾಗಿದೆ. ಅಥವಾ ನೀವು ಕ್ರೆಡಿಟ್ ಹಿಸ್ಟರಿ ಹೊಂದದಿದ್ದರೂ (ಇಲ್ಲಿ ನಿಮ್ಮ ಸ್ಕೋರ್ ಅನ್ನು ಅನ್ವಯಿಸುವುದಿಲ್ಲ(NH/NA) ಎಂದು ಹಾಕಲಾಗುತ್ತದೆ ಏಕೆಂದರೆ ನೀವು ಈ ಹಿಂದೆ ಸಾಲ/ಕ್ರೆಡಿಟ್ ಕಾರ್ಡ್ ಅನ್ನು ಪಡೆದಿರುವುದಿಲ್ಲ) ಕೂಡಾ.
ಸಾಮಾನ್ಯವಾಗಿ, ನೀವು ಹೋಮ್ ಲೋನ್ ಗಾಗಿ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಪ್ರಯತ್ನಿಸಬೇಕು. ಆದರೆ, ಇದು ಸಾಧ್ಯವಾಗದೆ ಇದ್ದರೆ, ನೀವು ಇವುಗಳಲ್ಲಿ ಒಂದನ್ನು ಮಾಡಿ ನೋಡಬಹುದಾಗಿದೆ:
ಮತ್ತೊಬ್ಬ ಸಾಲದಾತರನ್ನು ಹುಡುಕಿ: ನಿಮಗೆ ಹೆಚ್ಚಿನ ಬಡ್ಡಿ ದರದಲ್ಲಿ ಹೋಮ್ ಲೋನ್ ಅನ್ನು ನೀಡಬಲ್ಲ ಮತ್ತೊಬ್ಬ ಸಾಲದಾತರನ್ನು ಹುಡುಕಿ.
ಒಬ್ಬ ಸಹ-ಅರ್ಜಿದಾರ/ಗ್ಯಾರೆಂಟರ್ ಅನ್ನು ಕರೆತನ್ನಿ: ಒಂದು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಒಬ್ಬ ಸಹ-ಅರ್ಜಿದಾರ/ಗ್ಯಾರೆಂಟರ್ ನೊಂದಿಗೆ ಸಾಲಕ್ಕೆ ಅರ್ಜಿ ಸಲ್ಲಿಸಿ, ಉದಾಹರಣೆಗೆ ಒಬ್ಬ ನಿಕಟ ಕುಟುಂಬ ಸದಸ್ಯ. ಇದರಿಂದ ನಿಮ್ಮ ಅರ್ಹತೆ ಹೆಚ್ಚಾಗಬಹುದು.
ಮೆಲಾಧಾರವನ್ನು ನೀಡಿ: ಕೆಲ ಸಾಲದಾತರು ನಿಮಗೆ ಒಂದು ಮೆಲಾಧಾರದ ಬದಲಾಗಿ ಸಾಲವನ್ನು ನೀಡಬಹುದು ಉದಾಹರಣೆಗೆ ಚಿನ್ನ, ಷೇರುಗಳು, ಆಸ್ತಿಗಳು, ಸ್ಥಿರ ಡೆಪಾಸಿಟ್ ಗಳು ಇತ್ಯಾದಿ.
ಒಂದು ಸ್ಥಿರ ಆದಾಯ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಇರುವುದನ್ನು ಸಾಬೀತುಪಡಿಸಿ: ಒಂದು ಸ್ಥಿರ ಆದಾಯ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಇರುವುದರಿಂದ ನೀವು ಮಾಸಿಕ ಸಾಲದ ಕಂತುಗಳ ಪಾವತಿಯನ್ನು ಹೊರಲು ಸಮರ್ಥರೆಂದು ಸಾಲದಾತರಿಗೆ ಖಚಿತವಾಗುತ್ತದೆ.
ಕಡಿಮೆ ಸಾಲದ ಮೊತ್ತವನ್ನು ಆಯ್ಕೆ ಮಾಡಿ: ನೀವು ಒಂದು ಕಡಿಮೆ ಹೋಮ್ ಲೋನ್ ಮೊತ್ತ ಹಾಗೂ ಹೆಚ್ಚಿನ ಡೌನ್ ಪೇಮೆಂಟ್ ಅನ್ನು ಆಯ್ಕೆ ಮಾಡಬಹುದು, ಇದರಿಂದ ಸಾಲದಾತರಿಗೆ ಅಪಾಯ ಕಡಿಮೆಯಾಗುತ್ತದೆ.
ಅದಾಗ್ಯೂ, ಸಾಲದ ಅನುಮೋದನೆಯು ಸಾಮಾನ್ಯವಾಗಿ ಇತರ ಹಲವು ಅಂಶಗಳ ಮೇಲೂ ಆಧರಿತವಾಗಿದೆ, ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಈ ವಿಧಾನಗಳು ಅನುಮೋದನೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ನೆನಪಿಡಿ.
ನಿಮ್ಮ ಸಾಲದ ಅಪ್ಲಿಕೇಶನ್ ತಿರಸ್ಕಾರವಾಗಿದ್ದರೆ, ಪುನಃ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಪ್ರಯತ್ನಿಸಿ. ನೀವು ತಕ್ಷಣವೇ ಮತ್ತೊಬ್ಬ ಸಾಲದಾತರಲ್ಲಿ ಸಾಲಗಳಿಗೆ ಅರ್ಜಿ ಸಲ್ಲಿಸಿದರೆ ನಿಮ್ಮ ಸ್ಕೋರ್ ಇನ್ನೂ ಕಡಿಮೆಯಾಗುವುದು.
ಹೋಮ್ ಲೋನ್ ಗಳಿಗೆ ಬೇಕಾಗುವ ಅರ್ಹತೆಗಳನ್ನು ಸುಧಾರಿಸಬಹುದೇ?
ಒಂದು ಒಳ್ಳೆಯ ಸ್ಕೋರ್ ಪಡೆದಿರುವುದು ಬಹಳ ಪ್ರಯೋಜನಕಾರಿಯಾಗಿ ಪರಿಣಮಿಸಬಹುದು, ಹಾಗೂ ಬ್ಯಾಂಕ್ ಗಳು ನಿಮಗೆ ಸಾಲ ನೀಡುವುದನ್ನು ಖಚಿತಪಡಿಸಲು ಸಹಾಯಕಾರಿಯಾಗುವುದು. ಆದ್ದರಿಂದ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವ ಕೆಲ ವಿಧಾನಗಳು ಈ ರೀತಿ ಇವೆ:
ನಿಮ್ಮ ಕ್ರೆಡಿಟ್ ಸ್ಕೋರ್ ನ ಲೆಕ್ಕ ಇಟ್ಟುಕೊಳ್ಳಿ ಹಾಗೂ ಅದು ಉತ್ತಮವಾಗಿರುವಂತೆ ನೋಡಿಕೊಳ್ಳಿ.
ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ಆಗಾಗ್ಗೆ ಪರಿಶೀಲಿಸಿ, ಅದರಲ್ಲಿ ಯಾವುದೇ ನಿಮ್ಮ ತಪ್ಪುಗಳು ಕಂಡುಬಂದರೆ ಅವುಗಳನ್ನು ಸರಿಮಾಡಿ.
ನೀವು ಯಾವುದೇ ಬಾಕಿ ಅಥವಾ ಬೇಪಾವತಿಗಳನ್ನು ಹೊಂದಿದ್ದರೆ, ಆದಷ್ಟು ಬೇಗ ಅದನ್ನು ಇತ್ಯರ್ಥಗೊಳಿಸಿ.
ನಿಮ್ಮ ಕ್ರೆಡಿಟ್ ಬಿಲ್ ಹಾಗೂ ಇಎಂಐ ಗಳನ್ನು ಸರಿಯಾದ ಸಮಯದಲ್ಲಿ ಪಾವತಿಸಿ. ನೀವು ಮರೆತುಬಿಡುವಿರಿ ಎಂದು ನಿಮಗನಿಸಿದರೆ, ರಿಮೈಂಡರ್ ಗಳನ್ನು ಸೆಟ್ ಮಾಡಿ ಅಥವಾ ಆಟೋ-ಡೆಬಿಟ್ ಆಯ್ಕೆ ಮಾಡಿ.
ಸಾಲದ ಗ್ಯಾರೆಂಟರ್ ಆಗಬೇಡಿ. ಸಾಲ ಪಡೆದವರು ಪಾವತಿ ಮಾಡದೆ ಇದ್ದರೆ, ಅದರ ಪರಿಣಾಮ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಆಗುವುದು, ಹಾಗೂ ನೀವು ಅವರ ಪರವಾಗಿ ಸಾಲ ತೀರಿಸಬೇಕಾಗಿ ಬರಬಹುದು.
ನಿಮ್ಮ ಕ್ರೆಡಿಟ್ ಮಿತಿಯ 30% ಕ್ಕಿಂತ ಕಡಿಮೆ ಬಳಸದಂತೆ ನೋಡಿಕೊಳ್ಳಿ, ಇದರಿಂದ ನೀವು ಕ್ರೆಡಿಟ್ ಮೇಲೆ ಅವಲಂಬಿತರಾಗಿರುವಿರಿ ಎಂದು ಅನಿಸುವುದಿಲ್ಲ.
ಅಲ್ಪಾವಧಿಯಲ್ಲಿ ಹಲವು ಹೊಸ ಕ್ರೆಡಿಟ್ ಕಾರ್ಡ್, ಸಾಲ, ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಬೇಡಿ. ಇದರಲ್ಲಿ ಕ್ರೆಡಿಟ್ ಕಾರ್ಡ್, ಸಾಲ, ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವುದು ಸೇರಿದೆ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ನ ಅರ್ಥವೇನು?
ಕ್ರೆಡಿಟ್ ಸ್ಕೋರ್ ವ್ಯಾಪ್ತಿಗಳು ಈ ರೀತಿ ಇವೆ:
- 300-579 - ಕಳಪೆ
- 580-669 – ಸಾಧಾರಣ
- 670-739 – ಒಳ್ಳೆಯ
- 740-799 – ಉತ್ತಮ
- 800-900 – ಅತ್ಯುತ್ತಮ
ನಿಮ್ಮ ಸ್ಕೋರ್ 700-750 ಕ್ಕಿಂತ ಹೆಚ್ಚಿದ್ದರೆ, ಅದನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಆದರೆ, 650 ಕ್ಕಿಂತ ಕಡಿಮೆ ಕ್ರೆಡಿಟ್ ಸ್ಕೋರ್ ಅನ್ನು ಸಾಧಾರಣ ಅಥವಾ ಕಳಪೆ ಎಂದು ಪರಿಗಣಿಸಲಾಗುತ್ತದೆ. ವಿಭಿನ್ನ ಕ್ರೆಡಿಟ್ ಬ್ಯೂರೋಗಳು ಸ್ವಲ್ಪ ಭಿನ್ನವಾದ ಸ್ಕೋರಿಂಗ್ ಮಾದರಿಗಳನ್ನು ಬಳಸುವುದರಿಂದ, ಯಾವ ಕ್ರೆಡಿಟ್ ಬ್ಯೂರೋ ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ತಯಾರಿಸಿದೆ ಎಂಬುವುದನ್ನು ಆಧರಿಸಿ ನಿಮ್ಮ ಸ್ಕೋರ್ ಸ್ವಲ್ಪ ಬದಲಾಗಬಹುದು.
ಹೋಮ್ ಲೋನ್ ಗೆ ಅಗತ್ಯವಿರುವ ಕನಿಷ್ಠ ಸಿಬಿಲ್ ಸ್ಕೋರ್ ಎಷ್ಟು?
ಹೋಮ್ ಲೋನ್ ಗಳಿಗೆ ಯಾವುದೇ ನಿಜವಾದ ಕನಿಷ್ಠ ಸಿಬಿಲ್ ಸ್ಕೋರ್ ಇರುವುದಿಲ್ಲ ಏಕೆಂದರೆ ಅಪ್ಲಿಕೇಶನ್ ಅನ್ನು ಸ್ವೀಕರಿಸುವುದೋ ಬೇಡವೋ ಎಂದು ನಿರ್ಧರಿಸಲು ಪ್ರತೀ ಬ್ಯಾಂಕ್ ಹಾಗೂ ಸಾಲದಾರ ಅವರದ್ದೇ ಆದ ಕಟ್-ಆಫ್ ಪಾಯಿಂಟ್ ಅನ್ನು ಹೊಂದಿರುತ್ತಾರೆ. ಆದರೆ, ಸಾಮಾನ್ಯವಾಗಿ, 750 ಹಾಗೂ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಅನ್ನು ಹೋಮ್ ಲೋನ್ ಅನುಮೋದನೆಗಾಗಿ ಉತ್ತಮ ಎಂದು ಪರಿಗಣಿಸಲಾಗುತ್ತದೆ.
ನಿಮ್ಮ ಸಿಬಿಲ್ ಸ್ಕೋರ್ ಹೋಮ್ ಲೋನ್ ಅನುಮೋದನೆಗಳ ಮೇಲೆ ಪರಿಣಾಮ ಬೀರುತ್ತದೆಯೇ?
ಹೌದು, ನಿಮ್ಮ ಸಿಬಿಲ್ ಸ್ಕೋರ್ ಹೋಮ್ ಲೋನ್ ಅನುಮೋದನೆಗಳ ಮೇಲೆ ಪರಿಣಾಮವನ್ನು ಬೀರಬಹುದು. ಒಂದು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದರಿಂದ ನೀವು ಸಾಲದಾತರಿಗೆ ಅಪಾಯವಾಗಿರುವುದಿಲ್ಲ ಹಾಗೂ ನಿಮ್ಮ ಹೋಮ್ ಲೋನ್ ಗಳು ಅನುಮೋದಿತವಾಗುತ್ತವೆ. ಆದರೆ, ಒಂದು ಕಳಪೆ ಸ್ಕೋರ್ ಸಾಲದಾತರಿಗೆ ಹೆಚ್ಚು ಅಪಾಯಕಾರಿಯಾಗುವುದರಿಂದ, ನೀವು ತಿರಸ್ಕೃತರಾಗಬಹುದು ಅಥವಾ ನೀವು ಹೆಚ್ಚಿನ ಬಡ್ಡಿ ದರವನ್ನು ಪಾವತಿಸಬೇಕಾಗಿಬರಬಹುದು.
ಹೋಮ್ ಲೋನ್ ಗೆ ಅರ್ಜಿ ಸಲ್ಲಿಸುವ ಮೊದಲು ನೀವು ಏನು ಮಾಡಬೇಕು?
ಹೋಮ್ ಲೋನ್ ಗೆ ಅರ್ಜಿ ಸಲ್ಲಿಸುವ ಮೊದಲು ನೀವು ಇಲ್ಲಿ ನೀಡಲಾದ ಕೆಲ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು:
- ನಿಮ್ಮ ಸಿಬಿಲ್ ಸ್ಕೋರ್ ಮತ್ತು ನಿಮ್ಮ ಸಿಬಿಲ್ ರಿಪೋರ್ಟ್ ಅನ್ನು ಪರಿಶೀಲಿಸಬೇಕು. ನಿಮ್ಮ ರಿಪೋರ್ಟ್ ಬಳ್ಳಿ ನಿಮಗೆ ಯಾವುದೇ ತಪ್ಪುಗಳು ಕಂಡುಬಂದಲ್ಲಿ, ಆದಷ್ಟು ಬೇಗ ಅದನ್ನು ತಿದ್ದಿರಿ.
- ಯಾವುದೇ ಬಾಕಿ ಪಾವತಿಗಳಿದ್ದರೆ ಅದನ್ನು ಪಾವತಿಸಿರಿ, ಕಾರಣ, ಹೆಚ್ಚಿನ ಸಾಲದ ಬಳಕೆಯಿಂದ ನಿಮ್ಮ ಸ್ಕೋರ್ ಕಡಿಮೆಯಾಗಬಹುದು.
- ನಿಮ್ಮ ಇತ್ತೀಚಿನ ಸಾಲದ ಅಪ್ಲಿಕೇಶನ್ ಅಸ್ವೀಕಾರವಾಗಿದ್ದರೆ, ತಕ್ಷಣವೇ ಹೊಸ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಡಿ.
- ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿದ್ದರೆ, ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಅದನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಿ.
- ನಿಮಗೆ ಹೆಚ್ಚು ಲಾಭದಾಯಕವಾಗುವ ಕೊಡುಗೆಗಳನ್ನು ನೀಡುವಂತಹ ಸಾಲದಾತರನ್ನು ಹುಡುಕಿ ಅವರ ಪಟ್ಟಿ ಮಾಡಿ.