ಕಾರ್ ಲೋನ್ ಗೆ ಎಷ್ಟು ಸಿಬಿಲ್ ಸ್ಕೋರ್ ನ ಅಗತ್ಯವಿದೆ?
ಕಾರ್ ಲೋನ್ ಗಳು, ಹಣವನ್ನು ಸಾಲ ಪಡೆದು ಅದನ್ನು ಕೈಗೆಟಕುವ ದರದ ಕಂತುಗಳ ಮೂಲಕ ಮರುಪಾವತಿಸುವುದರಿಂದ, ಕಾರು ಮಾಲಿಕರಾಗುವ ಜನರ ಕನಸನ್ನು ನನಸಾಗಿಸುತ್ತದೆ. ಭಾರತದಲ್ಲಿ, ನಿಮ್ಮ ಕಾರ್ ಲೋನ್ ಅರ್ಹತೆಯನ್ನು ಅಳೆಯಲು ಕೆಲ ಅಂಶಗಳಿವೆ, ಉದಾಹರಣೆಗೆ 21 ವರ್ಷಗಳ ಕನಿಷ್ಠ ವಯಸ್ಸು, ಇಷ್ಟು ಮಾಸಿಕ ವೇತನ, ಹಾಗೂ ಒಂದು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವುದು.
ಕ್ರೆಡಿಟ್ ಸ್ಕೋರ್ (ಅತ್ಯಂತ ಜನಪ್ರಿಯ ಕ್ರೆಡಿಟ್ ಬ್ಯೂರೋದಿಂದಾಗಿ ಸಿಬಿಲ್ ಸ್ಕೋರ್ ಎಂದು ಕರೆಯಲ್ಪಡುತ್ತದೆ), 300 ಮತ್ತು 900 ರ ಮಧ್ಯೆ ಇರುವ ಮೂರು ಅಂಕಿಯ ಸಂಖ್ಯೆಯಾಗಿದೆ. ಇದರ ಲೆಕ್ಕಾಚಾರವನ್ನು ನಾಲ್ಕು ಪರವಾನಗಿ ಪಡೆದ ಕ್ರೆಡಿಟ್ ಬ್ಯೂರೋಗಳಿಂದ, ಒಬ್ಬ ವ್ಯಕ್ತಿಯ ಕ್ರೆಡಿಟ್ ಹಿಸ್ಟರಿ, ಹಾಗೂ ಅವರು ಹಿಂದೆ ಮಾಡಿರುವ ಸಾಲಗಳ ಹಾಗೂ ಕ್ರೆಡಿಟ್ ಕಾರ್ಡ್ ಗಳ ಬಳಕೆಯ ಆಧಾರದ ಮೇಲೆ ಮಾಡಲಾಗುತ್ತದೆ. ಇದು ಅವರ"ಕ್ರೆಡಿಟ್ ಅರ್ಹತೆ"ಯ, ಅಥವಾ ಅವರ ಮರುಪಾವತಿಯ ಹಾಗೂ ಸಾಲ ಪಡೆಯುವ ಸಾಮರ್ಥ್ಯದ ಅಳತೆಯಾಗಿದೆ.
ಕಾರ್ ಲೋನ್ ಗಳಿಗಾಗಿ ಕ್ರೆಡಿಟ್ ಸ್ಕೋರ್ ನ ಮಹತ್ವ ಎಷ್ಟಿದೆ?
ಒಂದು ಉತ್ತಮ ಕ್ರೆಡಿಟ್ ಸ್ಕೋರ್ (750 ಅಥವಾ ಅದಕ್ಕಿಂತ ಹೆಚ್ಚು) ಅನ್ನು ಹೊಂದಿರುವುದು, ಕಾರ್ ಲೋನ್ ಗಾಗಿ ಬಹಳ ಮಹತ್ವದ ಅಂಶವಾಗಿ ಪರಿಣಮಿಸಬಹುದು. ಏಕೆಂದರೆ ನಿಮ್ಮ ಸ್ಕೋರ್ ಎಷ್ಟು ಹೆಚ್ಚಿರುತ್ತದೆಯೋ, ನಿಮ್ಮ ಕಾರ್ ಲೋನ್ ಅನುಮೋದಿತವಾಗುವ ಸಾಧ್ಯತೆಯೂ ಅಷ್ಟೇ ಹೆಚ್ಚಿರುತ್ತದೆ, ಕಾರಣ, ನೀವು ಈ ಹಿಂದೆ ಒಬ್ಬ ಹೊಣೆಗಾರ ಸಾಲಗಾರರಾಗಿದ್ದ ಬಗ್ಗೆ ಸಾಲದಾತರಿಗೆ ತಿಳಿಯುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ ಇನ್ನೂ ಹಲವು ಅಂಶಗಳನ್ನು ನಿರ್ಧರಿಸುವುದರಿಂದ ಕೂಡಾ ಮಹತ್ವಪೂರ್ಣವಾಗಿದೆ, ಆ ಅಂಶಗಳು ಈ ರೀತಿ ಇವೆ:
ಅನುಮೋದನೆ ಅಥವಾ ಅಸ್ವೀಕೃತಿಯನ್ನು ನಿರ್ಧರಿಸುತ್ತದೆ: ಸಿಬಿಲ್ ಸ್ಕೋರ್ ಹಾಗೂ ಇತರ ಕ್ರೆಡಿಟ್ ಸ್ಕೋರ್ ಗಳು ನಿಮ್ಮ ಕ್ರೆಡಿಟ್ ಅರ್ಹತೆಯ ಮೌಲ್ಯಮಾಪಕರಾಗಿದ್ದು, ಇದು ಸಾಲದಾತರಿಗೆ ನಿಮ್ಮ ಹಿಂದಿನ ಮರುಪಾವತಿ ವರ್ತನೆಯ ಆಧಾರದ ಮೇಲೆ, ನಿಮ್ಮ ಸಾಲದ ಮನವಿಯನ್ನು ಅನುಮೋದಿಸುವುದೋ ಬೇಡವೋ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ.
ಬಡ್ಡಿ ದರವನ್ನು ನಿರ್ಧರಿಸುತ್ತದೆ: ಒಂದು ಉತ್ತಮ ಕ್ರೆಡಿಟ್ ಸ್ಕೋರ್ ಹೆಚ್ಚಿನ ಹಣಕಾಸಿನ ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಸಾಲದಾತರು ನಿಮ್ಮಿಂದ ಕಡಿಮೆ ಬಡ್ಡಿ ದರವನ್ನು ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ, ಮತ್ತು ನೀವು ಬಡ್ಡಿ ದರದ ಬಗ್ಗೆ ಅವರೊಂದಿಗೆ ಮಾತುಕತೆಯನ್ನೂ ನಡೆಸಲು ಸಾಧ್ಯವಾಗುತ್ತದೆ. ಆದರೆ, ಒಂದು ಕಡಿಮೆ ಸ್ಕೋರ್ ಸಾಲದಾತರಿಗೆ ಅಪಾಯದ ಸಂಕೇತವಾಗಿ ಪರಿಣಮಿಸಿ ಅವರು ನಿಮ್ಮ ಬಡ್ಡಿ ದರವನ್ನು ಹೆಚ್ಚಿಸಬಹುದು.
ಸಾಲದ ಮೊತ್ತವನ್ನು ನಿರ್ಧರಿಸುತ್ತದೆ: ನಿಮ್ಮ ಕ್ರೆಡಿಟ್ ಅರ್ಹತೆ ಮತ್ತು ಉತ್ತಮ ಮರುಪಾವತಿ ಇತಿಹಾಸದ ಪುರಾವೆಯು ನಿಮಗೆ ಹೆಚ್ಚಿನ ಮೊತ್ತದ ಕಾರ್ ಲೋನ್ ಅನ್ನು ಪಡೆಯುವಂತೆ ಮಾಡಬಹುದು, ಆದರೆ ಒಂದು ಕಳಪೆ ಸಿಬಿಲ್ ನೀವು ಬಯಸಿದ ಸಾಲದ ಮೊತ್ತವನ್ನು ನಿಮಗೆ ನೀಡದೇ ಇರಬಹುದು.
ಒಂದು ಉತ್ತಮ ಕ್ರೆಡಿಟ್ ಸ್ಕೋರ್ ನಿಮಗೆ ಶೂನ್ಯ ಡೌನ್ ಪೇಮೆಂಟ್, ಕಡಿಮೆ ಪ್ರಕ್ರಿಯೆ ಶುಲ್ಕದಂತಹ ಹಲವು ವಿಶೇಷ ಕೊಡುಗೆಗಳಿಗೆ ಹೆಚ್ಚಿನ ಪ್ರವೇಶವನ್ನು ದೊರಕಿಸುತ್ತದೆ. ಅದೇ ರೀತಿ ಒಂದು ಕಡಿಮೆ ಕ್ರೆಡಿಟ್ ಸ್ಕೋರ್ ನಿಮ್ಮ ಕಾರ್ ಲೋನ್ ಮನವಿಯ ಅಸ್ವೀಕೃತಿಗೆ, ಅಥವಾ ಹೆಚ್ಚಿನ ಬಡ್ಡಿ ದರ ಅಥವಾ ಡೌನ್ ಪೇಮೆಂಟ್ ಇರುವ ಕೊಡುಗೆಗಳಿಗೆ ಕಾರಣವಾಗಬಹುದು.
ಕಾರ್ ಲೋನ್ ಗೆ ಒಂದು ಒಳ್ಳೆಯ ಕ್ರೆಡಿಟ್ ಸ್ಕೋರ್ ಎಂದರೇನು?
ನಾಲ್ಕು ಕ್ರೆಡಿಟ್ ಬ್ಯೂರೋಗಳು (ಟ್ರಾನ್ಸ್ಯೂನಿಯನ್ ಸಿಬಿಲ್, ಎಕ್ಸ್‌ಪೀರಿಯನ್, ಕ್ರಿಫ್ ಹೈಮಾರ್ಕ್, ಮತ್ತು ಈಕ್ವಿಫ್ಯಾಕ್ಸ್) ಸ್ವಲ್ಪ ಭಿನ್ನವಾದ ಸ್ಕೋರಿಂಗ್ ಮಾದರಿಗಳನ್ನು ಬಳಸುತ್ತವೆಯಾದರೂ, 700-750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಸಾಮಾನ್ಯವಾಗಿ ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ನಿಮ್ಮ ಸಾಲದ ಅನುಮೋದನೆಯ ಮೇಲೆ ಹೀಗೆ ಪರಿಣಾಮವನ್ನು ಬೀರುತ್ತದೆ:
ಕ್ರೆಡಿಟ್ ಸ್ಕೋರ್ | ನಿಮ್ಮ ಸಾಲದ ಮೇಲೆ ಇದರ ಪರಿಣಾಮ |
---|---|
750 – 900 | ನಿಮ್ಮ ಕಾರ್ ಲೋನ್ ಅನುಮೋದಿತವಾಗುವ ಸಾಧ್ಯತೆ ಉತ್ತಮವಾಗಿರುತ್ತದೆ. ಜೊತೆಗೆ, ಕಾರ್ ಲೋನ್ ಅನುಮೋದನೆಯ ಪ್ರಕ್ರಿಯೆಯು ಶೀಘ್ರವಾಗಿರುತ್ತದೆ, ಹಾಗೂ ನೀವು ಉತ್ತಮ ಬಡ್ಡಿ ದರ ಮತ್ತು ಸಾಲದ ಮೊತ್ತದ ಮಾತುಕತೆಯನ್ನು ನಡೆಸಲೂ ಸಾಧ್ಯವಾಗುತ್ತದೆ. |
600 – 749 | ನಿಮ್ಮ ಸ್ಕೋರ್ ಸಾಧಾರಣ ಅಥವಾ ಮಧ್ಯದಲ್ಲಿದ್ದರೆ, ನಿಮ್ಮ ಕಾರ್ ಲೋನ್ ಅನುಮೋದನೆಯ ಸಾಧ್ಯತೆ ಇರುತ್ತದೆ, ಆದರೆ ಸಾಲದಾತರು ನಿಮ್ಮ ಆದಾಯ, ಅಸ್ತಿತ್ವದಲ್ಲಿರುವ ಸಾಲಗಳ ಸಂಖ್ಯೆ, ನೌಕರಿಯ ಭದ್ರತೆ ಮುಂತಾದ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹೀಗಾಗಿ, ಅನುಮೋದನೆಯ ಪ್ರಕ್ರಿಯೆಯು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಹಾಗೂ ನಿಮಗೆ ಉತ್ತಮ ಬಡ್ಡಿ ದರ ದೊರೆಯಲಾರದು. |
300 – 599 | 600 ಕ್ಕಿಂತ ಕಡಿಮೆ ಸ್ಕೋರ್ ಇದ್ದಲ್ಲಿ ನಿಮ್ಮ ಕಾರ್ ಲೋನ್ ಅನುಮೋದಿತವಾಗುವ ಸಾಧ್ಯತೆಯು ಗಣನೀಯವಾಗಿ ಇಳಿಯಬಹುದು, ಅಸ್ವೀಕಾರವೂ ಆಗಬಹುದು. ಅದಾಗ್ಯೂ, ನಿಮಗೆ ಕಾರ್ ಲೋನ್ ನೀಡಲು ಮುಂದಾಗುವ ಸಾಲದಾತರು, ಹೆಚ್ಚಿನ ಬಡ್ಡಿ ದರವಿರುವ ಕಡಿಮೆ ಮೊತ್ತದ ಸಾಲವನ್ನು ನೀಡಬಹುದು, ಅಥವಾ ಆಸ್ತಿ, ಸ್ಥಿರ ಡೆಪಾಸಿಟ್ ಗಳಂತಹ ಮೆಲಾಧಾರವನ್ನು ಕೇಳಬಹುದು. |
ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರು ಕಾರ್ ಲೋನ್ ಪಡೆಯಬಹುದೇ?
ಮೇಲೆ ಕಂಡಿರುವಂತೆ, ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಕೂಡಾ ಅಥವಾ ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದೆಯೂ(ಅಂದರೆ, ಹಿಂದಿನ ಯಾವುದೇ ಸಾಲ/ಕ್ರೆಡಿಟ್ ಕಾರ್ಡ್ ಗಳಿಲ್ಲದೆ, ನಿಮ್ಮ ಸ್ಕೋರ್ ಅನ್ನು ಕ್ರೆಡಿಟ್ ರಿಪೋರ್ಟ್ ನಲ್ಲಿ ಅನ್ವಯಿಸುವುದಿಲ್ಲ( NH/NA) ಎಂದು ಸೂಚಿಸಲಾಗುತ್ತದೆ) ಕಾರ್ ಲೋನ್ ಅನ್ನು ಪಡೆಯಬಹುದಾಗಿದೆ. ಕಾರ್ ಲೋನ್ ಗಾಗಿ ನಿಮ್ಮ ಅರ್ಹತೆಯನ್ನು ಹೆಚ್ಚಿಸಲು, ನೀವು ಇವುಗಳಲ್ಲಿ ಒಂದನ್ನು ಮಾಡಿ ನೋಡಬಹುದಾಗಿದೆ:
ಸಹ-ಅರ್ಜಿದಾರ/ಗ್ಯಾರಂಟರ್ : ನಿಮ್ಮೊಂದಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಒಬ್ಬ ಸಹ-ಅರ್ಜಿದಾರ ಅಥವಾ ಗ್ಯಾರಂಟರ್ ಅನ್ನು ಹುಡುಕಿರಿ. ಉದಾಹರಣೆಗೆ, ಒಂದು ಒಳ್ಳೆಯ ಕ್ರೆಡಿಟ್ ಸ್ಕೋರ್ ಇರುವ ಒಬ್ಬ ನಿಕಟ ಕುಟುಂಬ ಸದಸ್ಯ. ಇದರಿಂದ ನಿಮ್ಮ ಅರ್ಹತೆ ಹೆಚ್ಚಾಗಬಹುದು.
ಆದಾಯ ಮತ್ತು ಬ್ಯಾಂಕ್ ಬ್ಯಾಲೆನ್ಸ್: ನೀವು ಒಂದು ಮಾಸಿಕ ಸಾಲದ ಕಂತುಗಳನ್ನು ಹೊರಲು ಸಮರ್ಥರಾಗಿದ್ದೀರಿ ಎಂದು ಸಾಬೀತುಪಡಿಸುವ ಒಂದು ಸ್ಥಿರ ಆದಾಯ ಮತ್ತು ಒಂದು ಉತ್ತಮ ಬ್ಯಾಂಕ್ ಬ್ಯಾಲೆನ್ಸ್ ನಿಮ್ಮ ಬಳಿ ಇದ್ದರೆ, ಇದು ಸಹಾಯಕವಾಗಿ ಪರಿಣಮಿಸುತ್ತದೆ.
ಮೆಲಾಧಾರ: ಕೆಲವು ಸಾಲದಾತರು ನಿಮಗೆ ಕೆಲ ಮೆಲಾಧಾರಗಳ ಬದಲಿಗೆ ಕಾರ್ ಲೋನ್ ಒದಗಿಸಲು ಮುಂದಾಗಬಹುದು, ಉದಾಹರಣೆಗೆ ಚಿನ್ನ, ಷೇರುಗಳು, ಆಸ್ತಿಗಳು, ಸ್ಥಿರ ಡೆಪಾಸಿಟ್ ಗಳು, ಇತ್ಯಾದಿ.
ಕಡಿಮೆಗೊಂಡ ಸಾಲದ ಮೊತ್ತ: ಒಂದು ಕಡಿಮೆ ಕ್ರೆಡಿಟ್ ಸ್ಕೋರ್ ಸಾಲದಾತರಿಗೆ ಡಿಫಾಲ್ಟ್ ಅಪಾಯದ ಸಂಕೇತವಾಗಿರುತ್ತದೆ, ಆದರೆ ನೀವು ಹೆಚ್ಚಿನ ಡೌನ್ ಪೇಮೆಂಟ್ ಹೊಂದಿರುವ ಕಡಿಮೆ ಕಾರ್ ಲೋನ್ ಮೊತ್ತದ ಮನವಿಯನ್ನು ಮಾಡಿದರೆ, ಇದು ಸಾಲದಾತರಿಗೆ ಕಡಿಮೆ ಅಪಾಯವಾಗಿ ಕಂಡುಬರುತ್ತದೆ.
ವಿಭಿನ್ನ ಸಾಲದಾತರು: ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಹೆಚ್ಚಿನ ಬಡ್ಡಿ ದರದೊಂದಿಗೆ ಸಾಲ ನೀಡುವಂತಹ ಸಾಲದಾತರನ್ನು ಹುಡುಕಿ.
ಅದಾಗ್ಯೂ, ಕಾರ್ ಲೋನ್ ಗಾಗಿ ನೀವು ಸಲ್ಲಿಸಿರುವ ಅರ್ಜಿ ಅಸ್ವೀಕೃತವಾದರೆ, ನೀವು ಮತ್ತೊಮ್ಮೆ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಿ ಎಂಬ ಸಲಹೆಯನ್ನು ನಾವು ನಿಮಗೆ ನೀಡುತ್ತೇವೆ, ಕಾರಣ, ನೀವು ತಕ್ಷಣವೇ ಇತರ ಸಾಲದಾತರೊಡನೆ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಇನ್ನೂ ಕಡಿಮೆಯಾಗುವುದು.
ಸೂಚನೆ: ಸಾಲದ ಆನುಮೋದನೆಯು ಇತರ ಹಲವು ಅಂಶಗಳನ್ನು ಆಧರಿಸಿದೆ, ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ಈ ವಿಧಾನಗಳು ಅನುಮೋದನೆಯನ್ನು ಖಚಿತಪಡಿಸಲು ಪರಿಣಾಮಕಾರಿಯಾಗದೇ ಇರಬಹುದು.
ಕಾರ್ ಲೋನ್ ಗಾಗಿ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವುದು ಹೇಗೆ?
ನಿಮ್ಮ ಕಡಿಮೆ ಕ್ರೆಡಿಟ್ ಸ್ಕೋರ್ ನಿಂದಾಗಿ ಬ್ಯಾಂಕ್ ಗಳು ನಿಮಗೆ ಸಾಲ ನೀಡಲು ಹಿಂಜರಿಯಬಹುದಾದರಿಂದ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಇಲ್ಲಿ ಹಲವು ವಿಧಾನಗಳನ್ನು ನೀಡಲಾಗಿದೆ:
ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟು ಎಂದು ನಿಮಗೆ ತಿಳಿದಿರಲಿ.
ನಿಮ್ಮ ಕ್ರೆಡಿಟ್ ರಿಪೋರ್ಟ್ ಓದಿ, ತಪ್ಪುಗಳಿದ್ದರೆ ಹುಡುಕಿ, ಅವುಗಳನ್ನು ತಿದ್ದಿರಿ.
ಆದಷ್ಟು ಬೇಗ ನಿಮ್ಮ ಎಲ್ಲಾ ಬಾಕಿಯಿರುವ ಅಥವಾ ಡಿಫಾಲ್ಟ್ ಆಗಿರುವ ಪಾವತಿಗಳನ್ನು ಇತ್ಯರ್ಥ ಮಾಡಿ.
ನಿಮ್ಮ ಕ್ರೆಡಿಟ್ ಬಿಲ್ ಹಾಗೂ ಇಎಂಐಗಳನ್ನು ಸಮಯದಲ್ಲಿ ಪಾವತಿಸಿ.
ನೀವು ನಿಮ್ಮ ಕ್ರೆಡಿಟ್ ಮಿತಿಯ 30% ಗಿಂತ ಕಡಿಮೆ ಬಳಸದಂತೆ ನೋಡಿಕೊಳ್ಳಿ.
ಅಲ್ಪಾವಧಿಯಲ್ಲಿ ಯಾವುದೇ ಹೊಸ ಕ್ರೆಡಿಟ್ ಮನವಿಗಳಿಗೆ ಅರ್ಜಿಯನ್ನು ಸಲ್ಲಿಸಬೇಡಿ.
ನೆನಪಿಡಿ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಯಾವುದೇ "ತ್ವರಿತ ಪರಿಹಾರ" ಇರುವುದಿಲ್ಲ ಏಕೆಂದರೆ ಇದನ್ನು ಸರಿಪಡಿಸಲು ಸಮಯ ಹಾಗೂ ಶ್ರಮವನ್ನು ವಹಿಸಬೇಕಾಗುತ್ತದೆ. ಆದರೆ, ನೀವು ಕೆಲವೇ ತಿಂಗಳುಗಳಲ್ಲಿ ಸುಧಾರಣೆಗಳನ್ನು ಕಾಣಲು ಸಾಧ್ಯವಿದೆ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಕ್ರೆಡಿಟ್ ಸ್ಕೋರ್ ವ್ಯಾಪ್ತಿಗಳು ಯಾವುವು?
ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ ವ್ಯಾಪ್ತಿಗಳು ಈ ರೀತಿ ಇರುತ್ತವೆ:
- 300-579 – ಕಳಪೆ
- 580-669 – ಸಾಧಾರಣ
- 670-739 – ಒಳ್ಳೆಯ
- 740-799 – ಉತ್ತಮ
- 800-900 – ಅತ್ಯುತ್ತಮ
ಸಾಮಾನ್ಯವಾಗಿ, 700-750 ಕ್ಕಿಂತ ಮೇಲಿರುವ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ, ಮತ್ತು 650 ಕ್ಕಿಂತ ಕಡಿಮೆ ಇರುವ ಸ್ಕೋರ್ ಅನ್ನು ಸಾಧಾರಣ ಅಥವಾ ಕಳಪೆ ಎಂದು ಪರಿಗಣಿಸಲಾಗುತ್ತದೆ. ವಿಭಿನ್ನ ಕ್ರೆಡಿಟ್ ಬ್ಯೂರೋಗಳು ಭಿನ್ನವಾದ ಸ್ಕೊರಿಂಗ್ ಮಾದರಿಗಳನ್ನು ಬಳಸುವುದರಿಂದ, ಯಾವ ಕ್ರೆಡಿಟ್ ಬ್ಯೂರೋ ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ತಯಾರಿಸುತ್ತದೆ ಎಂಬುವುದನ್ನು ಆಧರಿಸಿ ನಿಮ್ಮ ಸ್ಕೋರ್ ಸ್ವಲ್ಪ ಭಿನ್ನವಾಗಿರಬಹುದು.
ಕಾರ್ ಲೋನ್ ಗಳಿಗೆ ಸಿಬಿಲ್ ಸ್ಕೋರ್ ಏಕೆ ಅಗತ್ಯವಾಗಿದೆ?
ಸಾಲದಾತರು ನಿಮ್ಮ ಸಿಬಿಲ್ ಸ್ಕೋರ್ ಅನ್ನು, ನಿಮ್ಮ ಕ್ರೆಡಿಟ್ ಅರ್ಹತೆ ಅಥವಾ ಸಾಲವನ್ನು ಮರುಪಾವತಿಸುವ ನಿಮ್ಮ ಸಾಮರ್ಥ್ಯವನ್ನು ಅಳೆಯುವ, ಒಂದು ಸಾಧನವಾಗಿ ಬಳಸುತ್ತಾರೆ. ಆದ್ದರಿಂದ, ಇದು ಹೊಸ ಹಾಗೂ ಬಳಕೆಯಾದ ಕಾರ್ ಲೋನ್ ಎರಡಕ್ಕೂ ಮುಖ್ಯವಾಗುತ್ತದೆ.
ನಿಮ್ಮ ಸಿಬಿಲ್ ಸ್ಕೋರ್ ಕಾರ್ ಲೋನ್ ಗಳ ಬಡ್ಡಿ ದರದ ಮೇಲೆ ಪರಿಣಾಮ ಬೀರುವುದೇ?
ಹೌದು, ನಿಮ್ಮ ಸಿಬಿಲ್ ಸ್ಕೋರ್ ನಿಮ್ಮ ಕಾರ್ ಲೋನ್ ಗಾಗಿ ನಿಮಗೆ ನೀಡಲಾಗುವ ಬಡ್ಡಿ ದರದ ಮೇಲೆ ಪರಿಣಾಮವನ್ನು ಬೀರುತ್ತದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿದ್ದರೆ, ನೀವು ಸಾಲದಾತರಿಗೆ ಅಪಾಯವಾಗಿರುವುದಿಲ್ಲ ಹಾಗೂ ನಿಮಗೆ ಕಾರ್ ಲೋನ್ ಗಳ ಮೇಲೆ ಕಡಿಮೆ ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ, ಒಂದು ಕಡಿಮೆ ಸ್ಕೋರ್ ಸಾಲದಾತರಿಗೆ ಹೆಚ್ಚು ಅಪಾಯಕಾರಿಯಾಗಿರುವುದರಿಂದ ನೀವು ಹೆಚ್ಚಿನ ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ.
ಕಾರ್ ಲೋನ್ ಗೆ ಬೇಕಾಗುವ ಕನಿಷ್ಠ ಸಿಬಿಲ್ ಸ್ಕೋರ್ ಅರ್ಹತೆ ಏನು?
ಕಾರ್ ಲೋನ್ ನ ಅರ್ಹತೆಯು ಸಾಲದಾತರಿಂದ ಸಾಲದಾತರಿಗೆ ಬದಲಾಗುತ್ತದೆ, ಆದರೆ ಸಾಮಾನ್ಯವಾಗಿ, ಇದು ಈ ರೀತಿ ಇದೆ:
- ವಯಸ್ಸು: ಸ್ವ-ಉದ್ಯೋಗಿ ಅರ್ಜಿದಾರರಿಗೆ 21ರಿಂದ 65 ವರ್ಷಗಳು
- ಆದಾಯ: ಸುಮಾರು ₹3 ಲಕ್ಷ ಪ್ರತಿ ವರ್ಷ
- ಉದ್ಯೋಗ: ವೆತನದಾರ ಅಥವಾ ಸ್ವ-ಉದ್ಯೋಗಿ