ಪ್ಯಾನ್ ಕಾರ್ಡ್ ಬಳಸಿ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಿ
ನಿಮ್ಮ ಕ್ರೆಡಿಟ್ ಅರ್ಹತೆ ಅಥವಾ ಮರುಪಾವತಿಯ ಸಾಮರ್ಥ್ಯವನ್ನು ನಿರ್ಧರಿಸುವಲ್ಲಿ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಮಹತ್ವದ ಪಾತ್ರ ವಹಿಸುತ್ತದೆ. ಇದರರ್ಥ ಒಂದು ಉತ್ತಮ ಕ್ರೆಡಿಟ್ ಸ್ಕೋರ್ ನಿಮ್ಮ ಲೋನ್ ಅಪ್ಲಿಕೇಶನ್ ಅನುಮೋದಿತವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಯಾವುದೇ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನೀವು ಒಮ್ಮೆ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಬೇಕು. ಸಾಮಾನ್ಯವಾಗಿ ಇದು 300 ರಿಂದ 900 ರ ವ್ಯಾಪ್ತಿಯಲ್ಲಿರುತ್ತದೆ. ನೀವು ಸಿಬಿಲ್ ವೆಬ್ಸೈಟ್ ನಲ್ಲಿ ಪ್ಯಾನ್ ಕಾರ್ಡ್ ಬಳಸಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಬಹುದಾಗಿದೆ
ಪ್ಯಾನ್ ಕಾರ್ಡ್ ಬಳಸಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸುವುದು ಹೇಗೆ?
ನೀವು ವರ್ಷದಲ್ಲಿ ಒಂದು ಬಾರಿ ನಿಮ್ಮ ಸಿಬಿಲ್ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಬಹುದು. ಅದಾಗ್ಯೂ, ನೀವು ಸಿಬಿಲ್ ವೆಬ್ಸೈಟ್ ನ ಚಂದಾದಾರರಾದಲ್ಲಿ ನೀವು ಇದನ್ನು ವರ್ಷಪೂರ್ತಿ ಹಲವು ಬಾರಿ ಪರಿಶೀಲಿಸಬಹುದಾಗಿದೆ.
ಪ್ಯಾನ್ ಬಳಸಿ ಸಿಬಿಲ್ ಸ್ಕೋರ್ ಅನ್ನು ಆನ್‌ಲೈನ್ ಆಗಿ ಪರಿಶೀಲಿಸಲು ಹೆಜ್ಜೆಗಳು ಈ ರೀತಿ ಇವೆ:
ಹಂತ 1: ಸಿಬಿಲ್ ಪೋರ್ಟಲ್ ಗೆ ಭೇಟಿ ನೀಡಿ "ನಿಮ್ಮ ಸಿಬಿಲ್ ಸ್ಕೋರ್ ಪಡೆಯಿರಿ", ಮೇಲೆ ಕ್ಲಿಕ್ ಮಾಡಿ.
ಹಂತ 2: "ಲಾಗಿನ್" ಮಾಡಲು ಒಂದು ಚಂದಾದಾರಿಕೆ ಅಥವಾ ಸಬ್ಸ್ಕ್ರಿಪ್ಶನ್ ಅನ್ನು ಆಯ್ಕೆ ಮಾಡಿ ಹಾಗೂ ಅಗತ್ಯ ವಿವರಗಳನ್ನು ನಮೂದಿಸಿ.
ಹಂತ 3: 'ಆದಾಯ ತೆರಿಗೆ ಐಡಿ' ಅನ್ನು ನಿಮ್ಮ ಐಡಿ ಯ ಪ್ರಕಾರವಾಗಿ ಆಯ್ಕೆ ಮಾಡಿ ಮತ್ತು ಪ್ಯಾನ್ ಕಾರ್ಡ್ ಬಳಸಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಲು ನಿಮ್ಮ ಪರ್ಮನೆಂಟ್ ಅಕೌಂಟ್ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಗುರುತನ್ನು ಧೃಡಪಡಿಸಿ ಹಾಗೂ ಎಲ್ಲಾ ಪ್ರಶ್ನೆಗಳಿಗೆ ಗಮನವಿಟ್ಟು ಉತ್ತರ ನೀಡಿ.
ಹಂತ 4: ಅಕೌಂಟ್ ರಚಿಸಲು ಪಾವತಿಯತ್ತ ಮುಂದುವರಿಯಿರಿ ಹಾಗೂ ಒಂದು-ಬಾರಿಯ ಬಳಕೆಯಾಗಿದ್ದರೆ ಸಬ್ಸ್ಕ್ರಿಪ್ಶನ್ ಅನ್ನು ತಪ್ಪಿಸಿ. ಆದರೆ, ನಿಮಗೆ ಆಗಾಗ್ಗೆ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಬೇಕಾದ್ದಲ್ಲಿ, ಸಬ್ಸ್ಕ್ರಿಪ್ಶನ್ ಅನ್ನು ಪೂರ್ಣಗೊಳಿಸಿ.
ಹಂತ 5: ದೃಢೀಕರಣಕ್ಕಾಗಿ ನಿಮ್ಮ ಮೇಲ್ ನಲ್ಲಿ ಒಂದು ಒಟಿಪಿ ಅನ್ನು ಕಳಿಸಲಾಗುತ್ತದೆ. ಯಶಸ್ವೀ ದೃಢೀಕರಣದ ನಂತರ ನಿಮ್ಮ ಸ್ಕ್ರೀನ್ ಮೇಲೆ ಬರುವ ಫಾರ್ಮ್ ಅನ್ನು ಭಾರ್ತಿ ಮಾಡಿ.
ಹಂತ 6: ಫಾರ್ಮ್ ಅನ್ನು ಸಲ್ಲಿಸಿ ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಿ.
ಸಿಬಿಲ್ ಸ್ಕೋರ್ ಪರಿಶೀಲಿಸಲು ಪ್ಯಾನ್ ಕಾರ್ಡ್ ಏಕೆ ಅಗತ್ಯವಾಗಿದೆ?
ಸಿಬಿಲ್ ಸ್ಕೋರ್ ಚೆಕ್ ಮಾಡುವಲ್ಲಿ ಪ್ಯಾನ್ ನ ಮಹತ್ವ ಈ ರೀತಿ ಇದೆ:
ಪ್ಯಾನ್ ಒಂದು ಅನನ್ಯ ಆಲ್ಫಾನ್ಯುಮರಿಕ್ ಕೋಡ್ ಆಗಿದ್ದು ಇದು ಒಬ್ಬ ಭಾರತೀಯ ನಾಗರಿಕನಿಗೆ ಗುರುತಿನ ಪುರಾವೆಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ, ಪ್ಯಾನ್ ಬಳಸಿ ಸಿಬಿಲ್ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡುವುದರಿಂದ ನಿಮ್ಮ ಒಟ್ಟಾರೆ ಭದ್ರತೆ ಹೆಚ್ಚಾಗುತ್ತದೆ.
ಪ್ಯಾನ್ ನಿಮ್ಮ ಹಣಕಾಸಿನ ಖಾತೆಗಳಿಗೆ ಮತ್ತು ತೆರಿಗೆ ಪಾವತಿಗಳಿಗೆ ಲಿಂಕ್ ಆಗಿರುವುದರಿಂದ ಸುಲಭವಾಗಿ ಸಿಬಿಲ್ ಗೆ ನಿಮ್ಮ ಸ್ಕೋರ್ ಅನ್ನು ಲೆಕ್ಕ ಹಾಕಲು ಸಹಾಯ ಮಾಡುತ್ತದೆ.
ಪ್ಯಾನ್ ಅನನ್ಯವಾಗಿರುವುದರಿಂದ, ಹಲವು ಪ್ಯಾನ್ ಕಾರ್ಡ್ ಗಳನ್ನು ಹೊಂದಿರುವುದು ಭಾರತದಲ್ಲಿ ಒಂದು ಕಾನೂನಾತ್ಮಕ ಅಪರಾಧವಾಗಿದೆ.
ಹಾಗೂ, ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ, ಪ್ಯಾನ್ ಕಾರ್ಡ್ ಬಳಸಿ ಸಿಬಿಲ್ ಸ್ಕೋರ್ ಪರಿಶೀಲಿಸುವುದರಿಂದ, ಹಲವು ಬ್ಯಾಂಕ್ ಗಳಿಂದ ಸಾಲವನ್ನು ಪಡೆದಿರುವ ವ್ಯಕ್ತಿಗಳನ್ನು ಗುರುತಿಸಲು ಸಹಾಯ ದೊರೆಯುತ್ತದೆ.
ಪ್ಯಾನ್ ಕಾರ್ಡ್ ಬಳಸಿ ಕ್ರೆಡಿಟ್ ಸ್ಕೋರ್ ಪರಿಶೀಲಿಸುವಾಗ ಪರಿಗಣಿಸಬೇಕಾದ ವಿಷಯಗಳು
ಪ್ಯಾನ್ ಕಾರ್ಡ್ ಬಳಸಿ ಸಿಬಿಲ್ ಸ್ಕೋರ್ ಪರಿಶೀಲಿಸುವಾಗ ನಾವು ಗಮದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಈ ರೀತಿ ಇವೆ:
ನಿಮ್ಮ ಸಿಬಿಲ್ ವರದಿ ಪಡೆಯಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.
ನೀವು ಪ್ಯಾನ್ ಕಾರ್ಡ್ ಬಳಸಿ ಸಿಬಿಲ್ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವ ಆಯ್ಕೆಯನ್ನು ಮಾಡಿದರೆ ನೀವಿದನ್ನು ಉಚಿತವಾಗಿ ಮಾಡಬಹುದಾಗಿದೆ.
ನಿಮ್ಮ ಪ್ಯಾನ್ ಕಾರ್ಡ್ ಬಳಸಿ ವರ್ಷದಲ್ಲಿ ಹಲವು ಬಾರಿ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಲು ನಿಮಗೆ ಸಬ್ಸ್ಕ್ರಿಪ್ಶನ್ ನ ಅಗತ್ಯವಿರುವುದು.
ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡು ಮತ್ತೊಂದು ಪ್ರತಿಗಾಗಿ ಅರ್ಜಿ ಸಲ್ಲಿಸಿದರೆ ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ.
ಒಂದು ಪ್ಯಾನ್ ಕಾರ್ಡ್ ನಿಮ್ಮ ಗುರುತಿನ ಪುರಾವೆ ಮಾತ್ರವಲ್ಲದೆ ಒಂದು ಮಹತ್ವಪೂರ್ಣ ಹಣಕಾಸಿನ ಸಾಧನವೂ ಆಗಿದೆ. ಎಲ್ಲಕ್ಕಿಂತಲೂ ಮೇಲಾಗಿ, ಪ್ಯಾನ್ ಕಾರ್ಡ್ ಬಳಸಿ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಈಗ ಕಡ್ಡಾಯವಾಗಿದೆ. ಆದ್ದರಿಂದ, ಶೀಘ್ರವೇ ನಿಮ್ಮ ಪ್ಯಾನ್ ಬಳಸಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಪಡೆಯಲು ಮೇಲೆ ನೀಡಲಾದ ಹೆಜ್ಜೆಗಳನ್ನು ಪಾಲಿಸಿ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಕ್ರೆಡಿಟ್ ಸ್ಕೋರ್ ಪ್ಯಾನ್ ಕಾರ್ಡ್ ಅನ್ನು ಆಧರಿಸಿದೆಯೇ?
ಸಿಬಿಲ್ ಸ್ಕೋರ್ ಪರಿಶೀಲಿಸಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ ಏಕೆಂದರೆ ಒಂದು ಅನನ್ಯ ಪ್ಯಾನ್ ಕೇವಲ ಒಂದು ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುತ್ತದೆ. ಅದಾಗ್ಯೂ, ಕ್ರೆಡಿಟ್ ಸ್ಕೋರ್ ಒಬ್ಬ ವ್ಯಕ್ತಿಯ ಕ್ರೆಡಿಟ್ ಮಾನ್ಯತೆ, ಪಾವತಿ ಇತಿಹಾಸ, ಕ್ರೆಡಿಟ್ ವಿಧ ಮತ್ತು ಅವಧಿ ಮುಂತಾದ ಅಂಶಗಳನ್ನು ಅವಲಂಬಿಸುತ್ತದೆ.
ನಾನು ಪ್ಯಾನ್ ಕಾರ್ಡ್ ಇಲ್ಲದೆ ನನ್ನ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಬಹುದೇ?
ಪರಿಶೀಲಿಸಲು ಪ್ಯಾನ್ ಕಡ್ಡಾಯವಾಗಿದ್ದರೂ, ನೀವಿದನ್ನು ನಿಮ್ಮ ಆಧಾರ್, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯೊಂದಿಗೂ ಪಡೆಯಬಹುದಾಗಿದೆ.