ಡಿಜಿಟ್ ಪಾರ್ಟ್ನರ್ ಆಗಿ
60,000+ ಪಾಲುದಾರರು ಡಿಜಿಟ್‌ನೊಂದಿಗೆ 1000 ಕೋಟಿ+ ಗಳಿಸಿದ್ದಾರೆ.

ಇನ್ಶೂರೆನ್ಸ್ ಏಜೆಂಟ್ ಬಿಸಿನೆಸ್ ಅನ್ನು ಹೇಗೆ ಸೆಟಪ್ ಮಾಡುವುದು

ಇತ್ತೀಚಿನ ದಿನಗಳಲ್ಲಿ, ಬಹಳಷ್ಟು ಜನರು ಹೆಚ್ಚುವರಿ ಆದಾಯದ ಮೂಲವನ್ನು ಹುಡುಕಲು ಬಯಸುತ್ತಾರೆ. ಪಿ.ಓ.ಎಸ್.ಪಿ ಆಗುವ ಮೂಲಕ ಮತ್ತು ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ಇನ್ಶೂರೆನ್ಸ್ ಏಜೆಂಟ್ ಬಿಸಿನೆಸ್ ಅನ್ನು ಪ್ರಾರಂಭಿಸುವುದು ಒಂದು ಅತ್ಯುತ್ತಮ ಮಾರ್ಗವಾಗಿದೆ.

ಪಿ.ಓ.ಎಸ್.ಪಿ (ಅಥವಾ ಪಾಯಿಂಟ್ ಆಫ್ ಸೇಲ್ಸ್ ಪರ್ಸನ್) ಎಂದರೆ ಐ.ಆರ್.ಡಿ.ಎ.ಐ ನಿಂದ ಗುರುತಿಸಲ್ಪಟ್ಟಿರುವ ಒಂದು ವಿಧದ ಇನ್ಶೂರೆನ್ಸ್ ಅಡ್ವೈಸರ್. ನಿರ್ದಿಷ್ಟಪಡಿಸಿದ ತರಬೇತಿಯಲ್ಲಿ ಉತ್ತೀರ್ಣರಾದ ನಂತರ, ಅವರು ಲೈಫ್ ಇನ್ಶೂರೆನ್ಸ್ ಮತ್ತು ಜನರಲ್ ಇನ್ಶೂರೆನ್ಸ್ ವಿಭಾಗಗಳಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು ಸರ್ಟಿಫೈಡ್ ಏಜೆಂಟ್ ಆಗುತ್ತಾರೆ. ಇದು ಮೋಟಾರ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್, ಟ್ರಾವೆಲ್ ಇನ್ಶೂರೆನ್ಸ್ ಹಾಗೂ ಹೆಚ್ಚಿನದನ್ನು ಒಳಗೊಂಡಿರುತ್ತದೆ.

ನೀವು ಪಿ.ಓ.ಎಸ್.ಪಿ ಆದಮೇಲೆ, ಇನ್ಶೂರೆನ್ಸ್ ಪಾಲಿಸಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಇನ್ಶೂರೆನ್ಸ್ ಕಂಪನಿಗಳೊಂದಿಗೆ ಅಥವಾ ಬ್ರೋಕರ್‌ಗಳೊಂದಿಗೆ ಕೆಲಸ ಮಾಡಬಹುದು. ಹಾಗೂ ಈ ಕೆಲಸವನ್ನು ಪಾರ್ಟ್-ಟೈಮ್ ಅಗಿ ಮತ್ತು ಆನ್‌ಲೈನ್‌ನಲ್ಲಿ ಮಾಡುವುದರಿಂದ, ನಿಮ್ಮ ಕೆಲಸಕ್ಕಾಗಿ ನಿಮಗೆ ಬೇಕಿರುವುದು ಕೇವಲ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮತ್ತು ಉತ್ತಮ ಇಂಟರ್ನೆಟ್ ಕನೆಕ್ಷನ್.

ಇನ್ಶೂರೆನ್ಸ್ ಏಜೆಂಟ್ ಬಿಸಿನೆಸ್ ಅನ್ನು ಪ್ರಾರಂಭಿಸುವುದು

ಪಿ.ಓ.ಎಸ್.ಪಿ(POSP) ಆಗಿ ರಿಜಿಸ್ಟರ್ ಮಾಡಿ ಮತ್ತು ಲೈಸೆನ್ಸ್ ಪಡೆಯಿರಿ

ಪಿ.ಓ.ಎಸ್.ಪಿ ಆಗಿ ಕೆಲಸ ಪ್ರಾರಂಭಿಸಲು, ನೀವು ನಿರ್ದಿಷ್ಟ ಕಂಪನಿ ಅಥವಾ ಇನ್ಶೂರೆನ್ಸ್ ಮಧ್ಯವರ್ತಿಯೊಂದಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನೀವು ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ನೀವು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ನಂತರ, ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಲೈಸೆನ್ಸ್ ಪಡೆಯಬೇಕು. ಇದಕ್ಕಾಗಿ ನೀವು ಐ.ಆರ್.ಡಿ.ಎ.ಐ ನಿಂದ ನೀಡುವ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸಬೇಕು. ನೀವು ಕಂಪನಿಯ ಮೂಲಕ ರಿಜಿಸ್ಟರ್ ಮಾಡಿಕೊಂಡಿದ್ದರೆ, ತರಬೇತಿಯನ್ನು ಸಾಮಾನ್ಯವಾಗಿ ಇನ್ಶೂರೆನ್ಸ್ ಕಂಪನಿಯಿಂದಲೇ ನೀಡಲಾಗುತ್ತದೆ. ಒಮ್ಮೆ ನೀವು ತರಬೇತಿಯನ್ನು ಪೂರ್ಣಗೊಳಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ನೀವು ನಿಮ್ಮ ಇ-ಸರ್ಟಿಫಿಕೇಟ್ ಮತ್ತು ಪಿ.ಓ.ಎಸ್.ಪಿ ಲೈಸೆನ್ಸ್ ಅನ್ನು ಪಡೆಯುತ್ತೀರಿ.

ಸೈನ್ ಅಪ್ ಮಾಡಲು ಸರಿಯಾದ ಕಂಪನಿಯನ್ನು ಆಯ್ಕೆ ಮಾಡಿ

ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು ನೀವು ಸೈನ್ ಅಪ್ ಮಾಡಲು ಬಯಸುವ ಇನ್ಶೂರೆನ್ಸ್ ಕಂಪನಿಯನ್ನು ಅಥವಾ ಮಧ್ಯವರ್ತಿಯನ್ನು ತಪ್ಪದೇ ಪರೀಕ್ಷಿಸಿ. ಪರಿಶೀಲಿಸಬೇಕಾದ ಕೆಲವು ವಿಷಯಗಳು: 

  • ನೀವು ನೇರವಾಗಿ ಕಂಪನಿಯೊಂದಿಗೆ ಕೆಲಸ ಮಾಡುತ್ತೀರಾ ಅಥವಾ ಮಧ್ಯವರ್ತಿಗಳು ಭಾಗಿಯಾಗಿದ್ದಾರಾ?

  • ಇನ್ಶೂರೆನ್ಸ್ ಕಂಪನಿಯವರು ಹೆಲ್ತ್, ಮೋಟಾರ್, ಟ್ರಾವೆಲ್, ಹೋಮ್ ಇತ್ಯಾದಿಗಳಂತಹ ವ್ಯಾಪಕ ರೀತಿಯ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತಾರೆಯೇ?

  • ಕಂಪನಿಯು ಆನ್‌ಲೈನ್‌ನಲ್ಲಿಯೇ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತದೆಯೇ ಅಥವಾ ಸುದೀರ್ಘ ಕಾರ್ಯವಿಧಾನಗಳು ಮತ್ತು ಪೇಪರ್‌ವರ್ಕ್ ಅನ್ನು ಹೊಂದಿದೆಯೇ?

  • ನಿಮ್ಮಿಂದ ಪಾಲಿಸಿ ಖರೀದಿಸಿದ ಗ್ರಾಹಕರು ತಮ್ಮ ಪಾಲಿಸಿಯನ್ನು ನವೀಕರಿಸಿದಾಗಲೂ ನೀವು ಕಮಿಷನ್ ಗಳಿಸಲು ಸಾಧ್ಯವಾಗುತ್ತದೆಯೇ?

  • ನೀವು ಮಾರಾಟ ಮಾಡುವ ಪಾಲಿಸಿಗಳ ಆಧಾರದ ಮೇಲೆ ಕಂಪನಿಯು ಕಮಿಷನ್‌ಗಳನ್ನು ನೀಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಪರಿಶೀಲಿಸಿ.

  • ಕಂಪನಿಯು ನಿಮಗೆ ಸಹಾಯ ಮಾಡಲು ಅತ್ಯುತ್ತಮ ಬ್ಯಾಕೆಂಡ್ ಸಪೋರ್ಟ್ ಟೀಮ್ ಅನ್ನು ಹೊಂದಿದೆಯೇ?

ನಿಮ್ಮ ಇನ್ಶೂರೆನ್ಸ್ ಬಿಸಿನೆಸ್ ಅನ್ನು ಪ್ರಾರಂಭಿಸಲು ನಿಮಗೆ ಯಾವ ಟೂಲ್‌ಗಳು ಬೇಕಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಬಿಸಿನೆಸ್ ಸುಗಮವಾಗಿ ಸಾಗಲು ಮತ್ತು ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನೀವು ಹೊಂದಿರಬೇಕಾದ ಕೆಲವು ವಿಷಯಗಳು ಇಲ್ಲಿವೆ:

ಆನ್‌ಲೈನ್ ಟೂಲ್‌ಗಳು

  • ವೆಬ್‌ಸೈಟ್ - ನಿಮ್ಮ ವ್ಯಾಪಾರಕ್ಕಾಗಿ ನೀವೊಂದು ಸೈಟ್ ಅನ್ನು ಹೊಂದುವುದು ನಿಮಗೆ ಲೀಡ್ ಜನರೇಟ್ ಮಾಡಲು ಸಹಾಯ ಮಾಡುತ್ತದೆ ಹಾಗೂ ಸಂಭಾವ್ಯ ಕ್ಲೈಂಟ್‌ಗಳಿಗೆ ಪ್ರಶಂಸಾಪತ್ರಗಳು ಮತ್ತು ಮಾಹಿತಿಯನ್ನು ನೀಡುತ್ತದೆ. ಅಲ್ಲದೇ ಅವರ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅಥವಾ ನಿಮ್ಮನ್ನು ಸಂಪರ್ಕಿಸಲು ಒಂದು ಮಾರ್ಗವಾಗಿದೆ.

  • ಗೂಗಲ್ ಲಿಸ್ಟಿಂಗ್ - ನಿಮ್ಮ ವೆಬ್‌ಸೈಟ್ ಗೂಗಲ್ ನ ಸರ್ಚ್‌ನಲ್ಲಿ ಕಾಣುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಮತ್ತು ಕೆಲವು ಕೀವರ್ಡ್‌ಗಳನ್ನು ಬಳಸಿ ಅಥವಾ ತಜ್ಞರ ಸಹಾಯವನ್ನು ಪಡೆಯುವ ಮೂಲಕ ನೀವಿದನ್ನು ಮಾಡಬಹುದು.

  • ಜಾಹೀರಾತುಗಳು - ನಿಮ್ಮ ಸೈಟ್‌ನ ಜನಪ್ರಿಯತೆಯನ್ನು ಹೆಚ್ಚಿಸಲು ಮತ್ತು ಉತ್ತಮ ಲೀಡ್‌ಗಳನ್ನು ಪಡೆಯಲು ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್‌ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪೇಯ್ಡ್ ಅಡ್ವರ್ಟೈಸಿಂಗ್ ಕಾರ್ಯಕ್ರಮಗಳನ್ನು ಹಾಗೂ ಗೂಗಲ್‌ನಂತಹ ಸರ್ಚ್ ಇಂಜಿನ್‌ಗಳಲ್ಲಿ ಜಾಹೀರಾತುಗಳನ್ನು ಬಳಸಿ.

  • ಫೇಸ್‌ಬುಕ್ ಪೇಜ್ - ಹೆಚ್ಚಿನ ಜನರು ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ಸುಲಭವಾಗಿ ಹುಡುಕಲು ಮತ್ತು ಜನರ ಅಭಿಪ್ರಾಯಗಳನ್ನು ನೋಡಲು ಹಾಗೂ ವಿಚಾರಣೆಗಳನ್ನು ಕೇಳಲು ಫೇಸ್‌ಬುಕ್ ಪೇಜ್ ಒಂದು ಉತ್ತಮ ಮಾರ್ಗವಾಗಿದೆ.

  • ಲಿಂಕ್ಡ್‌ಇನ್ ಪೇಜ್ - ಹೊಸ ಗ್ರಾಹಕರನ್ನು ಪಡೆಯಲು ಲಿಂಕ್ಡ್‌ಇನ್ ಪ್ರೊಫೈಲ್ ಬಳಸಿ. ನಿಮ್ಮ ಉದ್ಯಮಕ್ಕೆ ಸಂಬಂಧಿಸಿದ ಗುಂಪುಗಳನ್ನು ಸೇರಲು ಹಾಗೂ ನಿಮ್ಮ ಕಾಂಟ್ಯಾಕ್ಟ್‌ಗಳು ಮತ್ತು ಕ್ಲೈಂಟ್‌ಗಳೊಂದಿಗೆ ವೃತ್ತಿಪರ ಸಂಬಂಧಗಳನ್ನು ನಿರ್ವಹಿಸಲು ನೀವು ಇವುಗಳನ್ನು ಬಳಸಬಹುದು.

ಆಫ್‌ಲೈನ್ ಟೂಲ್‌ಗಳು

ನೀವು ಬಳಸಬಹುದಾದ ಕೆಲವು ಆಫ್‌ಲೈನ್ ಟೂಲ್‌ಗಳಿದ್ದರೂ, ಜಗತ್ತು ಈಗ ಆನ್‌ಲೈನ್ ಕ್ಷೇತ್ರದತ್ತ ಮುಖ ಮಾಡಿರುವುದರಿಂದ, ಆಫ್‌ಲೈನ್ ಟೂಲ್‌ಗಳು ಅಷ್ಟು ಮುಖ್ಯವೆನಿಸುತ್ತಿಲ್ಲ. ಇವುಗಳಲ್ಲಿ ಕೆಲವು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು:

  • ಆಫೀಸ್ ಸೆಟಪ್ - ನಿಮ್ಮ ಸಂಪೂರ್ಣ ಇನ್ಶೂರೆನ್ಸ್ ಬಿಸಿನೆಸ್ ಅನ್ನು ಮನೆಯಿಂದಲೇ ನಡೆಸಲು ಸಾಧ್ಯವಿದೆ, ವಿಶೇಷವಾಗಿ ನೀವು ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು, ಆದರೆ ಅದಕ್ಕಾಗಿ ನೀವು ವ್ಯವಸ್ಥಿತ ಕಚೇರಿಯೊಂದನ್ನು ಸಹ ನಿರ್ವಹಿಸಬಹುದು.

  • ಲ್ಯಾಂಡ್‌ಲೈನ್ ನಂಬರ್‌ಗಳು - ಸಾಮಾನ್ಯವಾಗಿ ಕೇವಲ ನಿರ್ದಿಷ್ಟ ಮೊಬೈಲ್ ನಂಬರ್ ಒಂದೇ ಸಾಕಾಗುತ್ತದೆ. ಅಲ್ಲದೇ ಕೋಲ್ಡ್ ಕಾಲಿಂಗ್‌ಗಾಗಿ ಮತ್ತು ಸಂಭಾವ್ಯ ಲೀಡ್‌ಗಳು, ಕ್ಲೈಂಟ್‌ಗಳೊಂದಿಗೆ ವ್ಯವಹರಿಸಲು ನೀವು ಲ್ಯಾಂಡ್‌ಲೈನ್ ನಂಬರ್ ಅನ್ನು ಸಹ ಸೆಟಪ್ ಮಾಡಬಹುದು.

  • ಪ್ರಿಂಟ್ ಜಾಹೀರಾತುಗಳು - ನೀವು ಪತ್ರಿಕೆಗಳು, ಇಂಡಸ್ಟ್ರಿ ಟ್ರೇಡ್ ಮ್ಯಾಗಝೀನ್ ಇತ್ಯಾದಿ ಪ್ರಿಂಟ್ ಮೀಡಿಯಾಗಳಲ್ಲಿ ಜಾಹೀರಾತು ನೀಡಬಹುದು.

ನಿಮ್ಮ ಕ್ಲೈಂಟ್ ಬೇಸ್ ಅನ್ನು ಹೇಗೆ ನಿರ್ಮಿಸುವುದು

ಇನ್ಶೂರೆನ್ಸ್ ಏಜೆಂಟ್ ಆಗಿರುವವರಿಗೆ ಅತ್ಯಂತ ಕಷ್ಟಕರವಾದ ಅಂಶವೆಂದರೆ ಉತ್ತಮ ಲೀಡ್‌ಗಳನ್ನು ಕಂಡುಹಿಡಿಯುವುದು. ಬಲ್ಟ್, ಮಾರುಕಟ್ಟೆಯು ಅನೇಕ ಏಜೆಂಟ್‌ಗಳೊಂದಿಗೆ ಸ್ಯಾಚುರೇಟೆಡ್ ಆಗಿದ್ದರೂ, ಭಾರತದಲ್ಲಿ ಇನ್ಶೂರೆನ್ಸ್ ಮಾರುಕಟ್ಟೆಯು ಪ್ರತಿ ವರ್ಷ ಸ್ಥಿರವಾಗಿ ಬೆಳೆಯುವುದರಿಂದ ಇನ್ನೂ ಅನೇಕ ಅವಕಾಶಗಳಿವೆ.

ಇನ್ಶೂರೆನ್ಸ್ ಲೀಡ್‌ಗಳನ್ನು ಹುಡುಕಲು ಕೆಲವು ಅತ್ಯುತ್ತಮ ಉಪಾಯಗಳು ಇಲ್ಲಿವೆ:

ನೆಟ್‌ವರ್ಕಿಂಗ್

ಹೊಸ ಗ್ರಾಹಕರನ್ನು ಕರೆತರಲು ನೆಟ್‌ವರ್ಕಿಂಗ್ ಅತ್ಯಗತ್ಯ. ಇನ್ಶೂರೆನ್ಸಿನ ಅಗತ್ಯವಿರುವ ಅನೇಕ ಜನರಿದ್ದಾರೆ ಮತ್ತು ಅವರೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಮಾರ್ಗವಾಗಿದೆ. ನೀವು ಹಲವಾರು ವಿಭಿನ್ನ ವಿಧಾನಗಳನ್ನು ಬಳಸಿಕೊಂಡು ನೆಟ್‌ವರ್ಕ್ ಮಾಡಬಹುದು, ಉದಾಹರಣೆಗೆ:

  • ಸೋಷಿಯಲ್ ಮೀಡಿಯಾ ಗುಂಪುಗಳಿಗೆ ಸೇರುವುದು.

  • ನಿಮ್ಮ ಹಳೆಯ ಶಾಲಾ ಅಥವಾ ಕಾಲೇಜು ಸಂಘಗಳೊಂದಿಗೆ ಕನೆಕ್ಟ್ ಆಗುವುದು.

  • ರಿಯಲ್ ಎಸ್ಟೇಟ್ ಏಜೆಂಟ್‌ಗಳು, ಫೈನಾನ್ಸಿಯಲ್ ಪ್ಲ್ಯಾನರ್‌ಗಳು ಅಥವಾ ಮಾರ್ಟ್‌ಗೇಜ್ ಬ್ರೋಕರ್‌ಗಳಂತಹ ಇತರ ವೃತ್ತಿಪರರನ್ನು ಸಂಪರ್ಕಿಸುವುದು ಮತ್ತು ನಿಮ್ಮ ಬಿಸಿನೆಸ್ ಅನ್ನು ಪರಸ್ಪರ ಸೂಚಿಸುವ ಲೀಡ್-ಶೇರಿಂಗ್ ಸಂಬಂಧವನ್ನು ಸೆಟಪ್ ಮಾಡುವುದು.

ಜ್ಞಾನ ಹಂಚಿಕೆ

ದುರದೃಷ್ಟವಶಾತ್, ನೀವು ಮಾಡುವ ಪ್ರತಿಯೊಂದು ತಂತ್ರವೂ ಮಾರಾಟಕ್ಕೆ ಕಾರಣವಾಗುವುದಿಲ್ಲ, ಆದ್ದರಿಂದ ನೀವು ಹೆಚ್ಚುವರಿ ಮೌಲ್ಯವನ್ನು ನೀಡುವ ನಿಮ್ಮ ಲೀಡ್‌ಗಳನ್ನು ತೋರಿಸುವುದು ಮುಖ್ಯ. ಇದರಿಂದಾಗಿ ಅವರು ಮುಂದಿನ ಬಾರಿ ಇನ್ಶೂರೆನ್ಸಿನ ಅಗತ್ಯವಿದ್ದಾಗ ನಿಮ್ಮ ಬಿಸಿನೆಸ್ ಅನ್ನು ನೆನಪಿಸಿಕೊಳ್ಳುತ್ತಾರೆ. ಇನ್ಶೂರೆನ್ಸ್ ಸಲಹೆಗಳೊಂದಿಗೆ ನಿಯಮಿತ ಇಮೇಲ್ ನ್ಯೂಸ್‌ಲೆಟರ್‌ಗಳನ್ನು ಕಳುಹಿಸುವ ಮೂಲಕ, ನಿಮ್ಮ ಜ್ಞಾನವನ್ನು ಪ್ರದರ್ಶಿಸುವ ನಿಮ್ಮ ವೆಬ್‌ಸೈಟ್‌ನಲ್ಲಿ, ಬ್ಲಾಗ್‌ಗಳನ್ನು ಬರೆಯುವ ಮೂಲಕ ನೀವು ಇನ್ನಷ್ಟು ಹೆಚ್ಚಿನದನ್ನು ಮಾಡಬಹುದು.

ಬಾಯಿಮಾತಿನ ಮಾರ್ಕೆಟಿಂಗ್

ನಿಮ್ಮ ಬಿಸಿನೆಸ್ ಅನ್ನು ಹುಡುಕಲು ಜನರಿಗೆ ಸಹಾಯ ಮಾಡುವ ಇನ್ನೊಂದು ವಿಧಾನವೆಂದರೆ ಬಾಯಿಮಾತು. ಇದು ಈ ಕೆಳಗಿನವುಗಳನ್ನು ಒಳಗೊಳ್ಳಬಹುದು

  • ಸಂತೃಪ್ತ ಗ್ರಾಹಕರಿಂದ ರೆಫರಲ್‌ಗಳು

  • ನಿಮ್ಮ ಸ್ನೇಹಿತರು, ಕುಟುಂಬ ಅಥವಾ ಮಾಜಿ ಸಹೋದ್ಯೋಗಿಗಳಿಗೆ ಈ ವಿಷಯವನ್ನು ಒಬ್ಬರಿಂದ ಒಬ್ಬರಿಗೆ ಹರಡಲು ಕೇಳುವುದು.

ಪಿ.ಓ.ಎಸ್.ಪಿ(POSP) ಇನ್ಶೂರೆನ್ಸ್ ಏಜೆಂಟ್ ಆಗುವ ಮೊದಲು ಪರಿಗಣಿಸಬೇಕಾದ ಇತರ ವಿಷಯಗಳು

ನೀವು ಪಿ.ಓ.ಎಸ್.ಪಿ ಆಗಲು ಆಯ್ಕೆ ಮಾಡುವ ಮೊದಲು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತು ಪರಿಗಣಿಸಬೇಕಾದ ಕೆಲವು ವಿಷಯಗಳಿವೆ. ಇವುಗಳಲ್ಲಿ ಈ ಕೆಳಗಿನವುಗಳು ಸೇರಿವೆ:

  • ಅನುಭವ ಪಡೆಯಲು ನೀವು ಹೆಚ್ಚುವರಿ ಪ್ರಯತ್ನವನ್ನು ಮಾಡಬೇಕಾಗಬಹುದು - ಪಿ.ಓ.ಎಸ್.ಪಿ ಆಗಲು ಅಗತ್ಯವಿರುವ ಕನಿಷ್ಟ ತರಬೇತಿಯು ಕೇವಲ 15 ಗಂಟೆಗಳಾಗಿರುವುದರಿಂದ, ಗ್ರಾಹಕರ ನಿರ್ವಹಣೆ, ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಮಾರಾಟ ಪೂರ್ವ ಮತ್ತು ಮಾರಾಟ ನಂತರದ ಅಂಶಗಳ ಬಗ್ಗೆ ಹೆಚ್ಚಿನ ಅನುಭವ ಅಥವಾ ಪರಿಣತಿಯನ್ನು ಪಡೆಯಲು, ನೀವು ವೈಯಕ್ತಿಕ ಪ್ರಯತ್ನವನ್ನು ಮಾಡಬೇಕಾಗುತ್ತದೆ.

  • ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ನೀವು ಎಷ್ಟು ಸಮಯವನ್ನು ಹೂಡಿಕೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ - ಪಿ.ಓ.ಎಸ್.ಪಿ ಆಗಿರುವ ಒಂದು ಪ್ರಯೋಜನವೆಂದರೆ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಮನೆಯಿಂದಲೇ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತೀರಿ. ಆದರೆ, ಕೆಲಸ ಪ್ರಾರಂಭಿಸುವ ಮೊದಲು ನೀವು ಈ ಕೆಲಸದಲ್ಲಿ ಎಷ್ಟು ಸಮಯವನ್ನು ಹೂಡಿಕೆ ಮಾಡಲು ಬಯಸುತ್ತೀರಿ ಎಂಬುದನ್ನು ಗಮನದಲ್ಲಿಡಬೇಕು. ನೆನಪಿಡಿ, ಈ ಕೆಲಸ ಹೆಚ್ಚು ಸಮಯ ಮತ್ತು ಹೆಚ್ಚು ಶ್ರಮವನ್ನು ಒಳಗೊಂಡಷ್ಟು, ನೀವು ಹೆಚ್ಚು ಗಳಿಸಲು ಸಾಧ್ಯವಾಗುತ್ತದೆ.

  • ನೀವು ಮಾರಾಟ ಮಾಡುವ ಪಾಲಿಸಿಗಳ ಕ್ಲೈಮ್‌ಗಳನ್ನು ಮತ್ತು ದೂರುಗಳನ್ನು ಯಾರು ಇತ್ಯರ್ಥಪಡಿಸುತ್ತಾರೆ ಎಂಬುದನ್ನು ಪರಿಶೀಲಿಸಿ - ಸಾಮಾನ್ಯವಾಗಿ, ನೀವು ಬ್ರೋಕರ್ ಅಥವಾ ಇನ್ಶೂರೆನ್ಸ್ ಕಂಪನಿಯಿಂದ ಪಿ.ಓ.ಎಸ್.ಪಿ ಯಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಿದಾಗ, ಪ್ರಕ್ರಿಯೆಗೊಳಿಸಬೇಕಾದ ಯಾವುದೇ ಕ್ಲೈಮ್‌ಗಳನ್ನಾಗಲಿ, ದೂರುಗಳನ್ನಾಗಲಿ ಅಥವಾ ಇತರ ಕಸ್ಟಮರ್ ಸಪೋರ್ಟ್‌ನ್ನಾಗಲಿ ಅವರೇ ನಿರ್ವಹಿಸುತ್ತಾರೆ. ಆದಾಗ್ಯೂ, ಪಿ.ಓ.ಎಸ್.ಪಿ ಗಳನ್ನು ಗ್ರಾಹಕರ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಮತ್ತು ಕ್ಲೈಮ್‌ಗಳನ್ನು ನಿರ್ವಹಿಸಲು ಸಹ ನಿರೀಕ್ಷಿಸಬಹುದು. ಆದ್ದರಿಂದ ಪ್ರಕ್ರಿಯೆಯು ಏನೆಂದು ಪರೀಕ್ಷಿಸಲು ಮರೆಯದಿರಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಪಿ.ಓ.ಎಸ್.ಪಿ(POSP) ಎಂದು ಸರ್ಟಿಫಿಕೇಟ್ ಪಡೆಯಲು ತರಬೇತಿ ಪಡೆಯುವುದು ಕಡ್ಡಾಯವೇ?

ಹೌದು, ನೀವು ಪಿ.ಓ.ಎಸ್.ಪಿ ಆಗಿ ಅಗತ್ಯವಿರುವ 15-ಗಂಟೆಗಳ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸಬೇಕು. ಈ ತರಬೇತಿಯು ಇನ್ಶೂರೆನ್ಸಿನ ಮೂಲಭೂತ ವಿಷಯಗಳು, ವಿವಿಧ ಪಾಲಿಸಿ ಪ್ರಕಾರಗಳು, ನಿಯಮಗಳು-ನಿಬಂಧನೆಗಳು, ಪಾಲಿಸಿ ನೀಡುವಿಕೆ ಮತ್ತು ಕ್ಲೈಮ್‌ಗಳ ಪ್ರಕ್ರಿಯೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಪಿ.ಓ.ಎಸ್.ಪಿ(POSP) ಆಗಿ ರಿಜಿಸ್ಟರ್ ಆಗಲು ನೀವು ಯಾವ ಡಾಕ್ಯುಮೆಂಟುಗಳನ್ನು ಹೊಂದಿರಬೇಕು?

ಪಿ.ಓ.ಎಸ್.ಪಿ ಯಾಗಿ ರಿಜಿಸ್ಟರ್ ಆಗುವ ಸಮಯದಲ್ಲಿ, ನೀವು ಈ ಕೆಳಗಿನ ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕಾಗುತ್ತದೆ:

  • 10 ನೇ ತರಗತಿ (ಅಥವಾ ಅದಕ್ಕೂ ಮೇಲಿನ ತರಗತಿ) ಉತ್ತೀರ್ಣ ಪ್ರಮಾಣಪತ್ರ
  • ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ಪ್ರತಿಗಳು (ಮುಂಭಾಗ ಮತ್ತು ಹಿಂಭಾಗ ಎರಡೂ)
  • ಮೇಲೆ ನಿಮ್ಮ ಹೆಸರಿರುವ ಕ್ಯಾನ್ಸಲ್ಡ್ ಚೆಕ್
  • ಇತ್ತೀಚಿನ ಫೋಟೋ

ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಎರಡೂ ಒಂದೇ ಹೆಸರಿನಲ್ಲಿ ಇರಬೇಕೇ?

ಹೌದು, ಅವರೆಡೂ ಒಂದೇ ಹೆಸರಲ್ಲಿರಬೇಕು ಏಕೆಂದರೆ ಇನ್ಶೂರೆನ್ಸ್ ಅನ್ನು ಮಾರಾಟ ಮಾಡುವುದರಿಂದ ನೀವು ಪಡೆಯುವ ಎಲ್ಲಾ ಕಮಿಷನ್‌ಗಳು ಟಿಡಿಎಸ್‌ಗೆ ಒಳಪಟ್ಟಿರುತ್ತವೆ. ಮತ್ತು, ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧರಿಸಿ ಇನ್ಕಮ್ ಟ್ಯಾಕ್ಸ್ ಅಥಾರಿಟಿಗಳಿಗೆ ಟಿಡಿಎಸ್‌ ಅನ್ನು ಕ್ರೆಡಿಟ್ ಮಾಡಲಾಗುತ್ತದೆ.

ಪಿ.ಓ.ಎಸ್.ಪಿ(POSP) ಆಗಿ ನೀವು ಎಷ್ಟು ಗಳಿಸಬಹುದು?

ಪಿ.ಓ.ಎಸ್.ಪಿ ಆಗಿ ನಿಮ್ಮ ಗಳಿಕೆಯು ಐ.ಆರ್.ಡಿ.ಎ.ಐ ನಿಂದ ನಿಗದಿಪಡಿಸಲಾದ ನಿರ್ದಿಷ್ಟ ಕಮಿಷನ್ ವ್ಯವಸ್ಥೆಯನ್ನು ಆಧರಿಸಿರುತ್ತದೆ. ನಿಮ್ಮ ಆದಾಯವು ನೀವು ನೀಡುವ ಪಾಲಿಸಿಗಳ ಸಂಖ್ಯೆಯನ್ನು ಆಧರಿಸಿರುವುದರಿಂದ, ಗಳಿಕೆಗೆ ಯಾವುದೇ ಸ್ಥಿರ ಆದಾಯ ಅಥವಾ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಇದರರ್ಥ ಹೆಚ್ಚಿನ ಗಳಿಕೆಗೆ ಇಲ್ಲಿ ಸಾಕಷ್ಟು ಅವಕಾಶವಿದೆ. ಏಕೆಂದರೆ ನೀವು ಎಷ್ಟು ಹೆಚ್ಚು ಪಾಲಿಸಿಗಳನ್ನು ಮಾರಾಟ ಲ್ಲಮಾಡುತ್ತೀರೋ ಮತ್ತು ನವೀಕರಣಗಳನ್ನು ಪಡೆಯುತ್ತೀರೋ, ಪಿ.ಓ.ಎಸ್.ಪಿ.ಆಗಿ ನೀವು ಅಷ್ಟು ಹೆಚ್ಚುಗಳಿಸಬಹುದು.

ಪಿ.ಓ.ಎಸ್.ಪಿ. (POSP) ಆಗಿ ನೀವು ಯಾವ ಉತ್ಪನ್ನಗಳನ್ನು ಮಾರಾಟ ಮಾಡಬಹುದು?

ಒಬ್ಬ ಪಿ.ಓ.ಎಸ್.ಪಿ. ಲೈಫ್ ಇನ್ಸೂರೆನ್ಸ್ ಮತ್ತು ಜನರಲ್ ಇನ್ಶೂರೆನ್ಸ್ ಎರಡೂ ವಿಭಾಗಗಳ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಬಹುದು. ನೀವು ಕೆಲಸ ಮಾಡುವ ಕಂಪನಿಯನ್ನು ಅವಲಂಬಿಸಿ, ಲೈಫ್ ಇನ್ಶೂರೆನ್ಸ್, ಮೋಟಾರ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್, ಟ್ರಾವೆಲ್ ಇನ್ಶೂರೆನ್ಸ್ ಹಾಗೂ ಇನ್ನೂ ಹೆಚ್ಚಿನದನ್ನು ಇವು ಒಳಗೊಂಡಿರಬಹುದು.

ಪಿ.ಓ.ಎಸ್.ಪಿ.(POSP) ಸರ್ಟಿಫಿಕೇಶನ್ ಅನ್ನು ಪೂರ್ಣಗೊಳಿಸಿದ ನಂತರವೂ ನಿಮ್ಮ ಇನ್ಶೂರೆನ್ಸ್ ಜ್ಞಾನವನ್ನು ನೀವು ಹೆಚ್ಚಿಸಿಕೊಳ್ಳಬಹುದೇ?

ಹೌದು ಖಂಡಿತವಾಗಿಯೂ ನೀವು ಹೆಚ್ಚಿಸಿಕೊಳ್ಳಬಹುದು! ವಿವಿಧ ತರಬೇತಿ ಕಾರ್ಯಕ್ರಮಗಳು ಮತ್ತು ಈವೆಂಟ್‌ಗಳಲ್ಲಿ ಭಾಗವಹಿಸುವ ಮೂಲಕ ನೀವು ನಿಮ್ಮ ಇನ್ಶೂರೆನ್ಸ್ ಜ್ಞಾನವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ನಿಮ್ಮ ಮಾರಾಟ ಮತ್ತು ಸರ್ವೀಸ್ ಸ್ಕಿಲ್‌ಗಳನ್ನು ಸುಧಾರಿಸಿಕೊಳ್ಳಬಹುದು. ಗಮನಹರಿಸಬೇಕಾದ ಕೆಲವು ವಿಷಯಗಳು ಹೀಗಿವೆ: 

  • ಸುಧಾರಿತ ಇನ್ಶೂರೆನ್ಸ್ ಜ್ಞಾನ (ಹೆಚ್ಚು ಕಷ್ಟಕರವಾದ ಪ್ರಕರಣಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡಲು)
  • ಹೊಸ ಮಾರಾಟ ತಂತ್ರಗಳು (ನಿಮ್ಮ ಮಾರಾಟದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡಲು)
  • ಇತ್ತೀಚಿನ ಇನ್ಶೂರೆನ್ಸ್ ಉತ್ಪನ್ನಗಳ ಬಗ್ಗೆ ಕಲಿಯುವುದು (ಪ್ರಗತಿಯೊಂದಿಗೆ ಸಾಗಲು ಮತ್ತು ಅವುಗಳ ಮಾರಾಟದ ತಂತ್ರಗಳನ್ನು ತಿಳಿಯಲು)

ವಾಸ್ತವವಾಗಿ, ನೀವು ಸೈನ್ ಅಪ್ ಮಾಡಿದ ಕಂಪನಿಯು ಈ ಕೆಲವು ಕಾರ್ಯಕ್ರಮಗಳನ್ನು ಸಹ ನೀಡಬಹುದು.

ಪಿ.ಓ.ಎಸ್.ಪಿ. (POSP) ಏಜೆಂಟ್ ಕೇವಲ ಒಂದೇ ಕಂಪನಿಯ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಬೇಕೇ?

ಪಿ.ಓ.ಎಸ್.ಪಿ. ಏಜೆಂಟ್ ಆಗಿ, ನೀವು ವಿವಿಧ ಇನ್ಶೂರೆನ್ಸ್ ಕಂಪನಿಗಳ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಬಹುದು, ಅದಕ್ಕಾಗಿ ಅವರು ಇನ್ಶೂರೆನ್ಸ್ ಮಧ್ಯವರ್ತಿ ಅಥವಾ ಬ್ರೋಕರ್‌ನೊಂದಿಗೆ ಸಂಪರ್ಕ ಹೊಂದಿರಬೇಕು. ಆದಾಗ್ಯೂ, ನೀವು ನಿರ್ದಿಷ್ಟ ಕಂಪನಿಯೊಂದಿಗೆ ಸೈನ್ ಅಪ್ ಮಾಡಿದ್ದರೆ, ಆಗ ನಿಮ್ಮ ಒಪ್ಪಂದವು ಕೇವಲ ಅವರ ಪಾಲಿಸಿಗಳನ್ನು ಮಾತ್ರ ಮಾರಾಟ ಮಾಡಲು ಸೀಮಿತವಾಗಿರುತ್ತದೆ.