ಭಾರತದಲ್ಲಿ ಮನೆಯಿಂದಲೇ ಹಣ ಗಳಿಸುವುದು ಹೇಗೆ?
ಅನೇಕ ಜನರು ಇನ್ನೂ ಕೊರೊನಾವೈರಸ್‌ನ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಕೆಲವರು ನಮ್ಮ ಮನೆಯೊಳಗೆ ಮಾಡುವ ಚಟುವಟಿಕೆಗಳಿಗಾಗಿ ಎದುರು ನೋಡುತ್ತಿರಬಹುದು, ಇನ್ನೂ ಕೆಲವರು ಮನೆಯಿಂದಲೇ ಸ್ವಲ್ಪ ಹಣ ಗಳಿಸುವುದು ಹೇಗೆಂದು ಯೋಚಿಸುತ್ತಿರಬಹುದು. ಸರಿ, ಈ ಎರಡನ್ನೂ ಏಕೆ ಒಂದಾಗಿ ನೋಡಬಾರದು?
ಇದು ನಿಜವಾಗಿಯೂ ಅಂದುಕೊಂಡಷ್ಟೇ ಸುಲಭ. ನೀವು ಮನೆಯಿಂದಲೇ ಹಣ ಗಳಿಸಲು ಹಲವಾರು ಮಾರ್ಗಗಳಿವೆ, ಮತ್ತು ಅನೇಕ ಕೆಲಸಗಳಿಗೆ ನೀವು ಯಾವುದೇ ಹಣವನ್ನು ಹೂಡಿಕೆ ಮಾಡಬೇಕಾಗಿಲ್ಲ. ಇಂಟರ್ನೆಟ್ ಆನ್‌ಲೈನ್ ಮತ್ತು ಆಫ್‌ಲೈನ್ ಕೆಲಸಗಳಿಂದ ತುಂಬಿದೆ, ಹೂಡಿಕೆಯಿಲ್ಲದೆಯೂ ಕೂಡ ನೀವು ಮನೆಯಿಂದ ಹಣ ಗಳಿಸಬಹುದು.
ಮನೆಯಿಂದಲೇ ಹಣ ಗಳಿಸಲು 15 ಮಾರ್ಗಗಳು
1. ಇನ್ಶೂರೆನ್ಸ್ ಪಿ.ಓ.ಎಸ್.ಪಿ(POSP) ಆಗಿ
ಮನೆಯಿಂದಲೇ ಹಣ ಗಳಿಸುವ ಪ್ರಮುಖ ಮಾರ್ಗವೆಂದರೆ ಪಿ.ಓ.ಎಸ್.ಪಿ (ಪಾಯಿಂಟ್ ಆಫ್ ಸೇಲ್ಸ್‌ಪರ್ಸನ್) ಆಗುವುದು. ಪಿ.ಓ.ಎಸ್.ಪಿ ಎಂದರೆ ಒಂದು ರೀತಿಯ ಇನ್ಶೂರೆನ್ಸ್ ಏಜೆಂಟ್ ಆಗಿದ್ದು, ಇವರು ಗ್ರಾಹಕರಿಗೆ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು, ಇನ್ಶೂರೆನ್ಸ್ ಕಂಪನಿಗಳೊಂದಿಗೆ ಕೆಲಸ ಮಾಡುತ್ತಾರೆ. ಇದು ಶೂನ್ಯ ಹೂಡಿಕೆಯನ್ನು ಒಳಗೊಂಡಿದ್ದು, ಯಾವುದೇ ಸಮಯದ ನಿರ್ಬಂಧಗಳಿರುವುದಿಲ್ಲ, ಮತ್ತು ನೀವು ಮನೆಯಿಂದಲೇ ಆನ್‌ಲೈನ್‌ನಲ್ಲಿ ಕೆಲಸ ಮಾಡಬಹುದು.
ಕೇವಲ ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಆಗ ನೀವು ಐ.ಆರ್.ಡಿ.ಎ.ಐ ನೀಡುವ 15-ಗಂಟೆಗಳ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸಲು ಮತ್ತು ಲೈಸೆನ್ಸ್ ಪಡೆಯಲು ಸಾಧ್ಯವಾಗುತ್ತದೆ. ಮತ್ತು, ನಿಮ್ಮ ಆದಾಯವು ಕಮಿಷನ್‌ಗಳನ್ನು ಆಧರಿಸಿರುವುದರಿಂದ, ನೀವು ಎಷ್ಟು ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡುತ್ತೀರೋ ಅಷ್ಟು ವೇಗವಾಗಿ ನೀವು ಅಧಿಕ ಆದಾಯವನ್ನು ಗಳಿಸಬಹುದು.
2. ಕಂಪನಿಗಳಿಗೆ ಕನ್ಸಲ್ಟ್ ಮಾಡುವುದು
ನೀವು ಹೆಲ್ತ್ ಕೇರ್, ಬಿಸಿನೆಸ್, ಐಟಿ ಮತ್ತು ಹೆಚ್ಚಿನ ವೃತ್ತಿಪರ ಕ್ಷೇತ್ರಗಳಲ್ಲಿ ಸಾಕಷ್ಟು ಅನುಭವವನ್ನು ಹೊಂದಿರುವವರಾಗಿದ್ದರೆ, ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಕೆಲಸಗಳ ಕುರಿತು ವೃತ್ತಿಪರರಿಗೆ ಮತ್ತು ಕಂಪನಿಗಳಿಗೆ ನಿಮ್ಮ ತಿಳುವಳಿಕೆಯನ್ನು ನೀಡಲು ನೀವೊಬ್ಬ ಅಡ್ವೈಸರ್ ಆಗಬಹುದು. ಇದನ್ನು ನೀವು ಕಾಂಟ್ರಾಕ್ಟ್ ಆಧಾರದ ಮೇಲೂ ಮಾಡಬಹುದು. ನೀವು ಅಪ್‌ವರ್ಕ್, ಲಿಂಕ್ಡ್‌ಇನ್, ಇತ್ಯಾದಿಗಳಂತಹ ಸೈಟ್‌ಗಳಲ್ಲಿ ಈ ಕೆಲಸಗಳನ್ನು ಸುಲಭವಾಗಿ ಹುಡುಕಬಹುದು. ನಿಮ್ಮ ಅನುಭವ ಮತ್ತು ಕಾರ್ಯ ಕ್ಷೇತ್ರವನ್ನು ಅವಲಂಬಿಸಿ, ನೀವು ಅಧಿಕ ಆದಾಯ ನೀಡುವ ಕನ್ಸಲ್ಟನ್ಸಿ ಕೆಲಸಗಳನ್ನು ಸುಲಭವಾಗಿ ಹುಡುಕಬಹುದು.
3. ವಿದ್ಯಾರ್ಥಿಗಳಿಗೆ ಟ್ಯೂಟರಿಂಗ್ ಕೊಡುವುದು
ಒಂದು ನಿರ್ದಿಷ್ಟ ವಿಷಯದ ಬಗ್ಗೆ ನಿಮಗೇನಾದರೂ ಹೆಚ್ಚಿನ ಜ್ಞಾನವಿದ್ದಲ್ಲಿ ಆಗ ನೀವು ಕಾಲೇಜು ವಿದ್ಯಾರ್ಥಿಗಳಿಗಾಗಲಿ ಅಥವಾ ಬೇರೆಯವರಿಗಾಗಲಿ ಆನ್‌ಲೈನ್ ಟ್ಯೂಟರ್ ಆಗಬಹುದು. ಶಾಲಾ ಹಂತದಿಂದ ಹಿಡಿದು ಕಾಲೇಜು ಹಂತದವರೆಗಿನ ಅನೇಕ ವಿದ್ಯಾರ್ಥಿಗಳು ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಇತಿಹಾಸ, ಹಾಗೆಯೇ ಸಂಗೀತ ಅಥವಾ ಕರಕುಶಲ ವಿಷಯಗಳಿಗಾಗಿ ಶಿಕ್ಷಕರನ್ನು ಹುಡುಕುತ್ತಾರೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಸಹಾಯ ಬಯಸುತ್ತಾರೆ. ನೀವು ಸೆಟ್ ಮಾಡಬಹುದಾದ ಗಂಟೆಯ ದರವು ನಿಮಗೆ ಪರಿಣಿತಿಯಿರುವ ವಿಷಯ ಮತ್ತು ನೀವು ಕಲಿಸುವ ವಿಷಯವನ್ನು ಅವಲಂಬಿಸಿರುತ್ತದೆ. ಆದರೆ ನೀವು ಗಂಟೆಗೆ ₹200–500 ವರೆಗೆ ಗಳಿಸಬಹುದು.
ಉಡೆಮಿ, ಅಥವಾ ಕೋರ್ಸ್ಎರಾ ನಂತಹ ಆನ್‌ಲೈನ್ ಟ್ಯೂಟರಿಂಗ್ ಪ್ಲಾಟ್‌ಫಾರ್ಮ್‌ನೊಂದಿಗೆ ನೀವು ಸೈನ್ ಅಪ್ ಮಾಡಬಹುದು ಅಥವಾ ನಿಮ್ಮ ಸಾಮಾಜಿಕ ವಲಯಗಳಲ್ಲಿ ಟ್ಯೂಟರಿಂಗ್ ತರಗತಿಗಳ ಅಗತ್ಯವಿರುವ ಜನರನ್ನು ಹುಡುಕಲು ನೀವು ಫೇಸ್ಬುಕ್ ಮತ್ತು ವಾಟ್ಸಾಪ್ ಅನ್ನು ಬಳಸಿಕೊಳ್ಳಬಹುದು.
4. ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡಿ
ಫ್ರೀಲ್ಯಾನ್ಸರ್ ಕೆಲಸವು, ಮನೆಯಿಂದಲೇ ಹಣ ಗಳಿಸುವ ಮತ್ತೊಂದು ಜನಪ್ರಿಯ ಮಾರ್ಗವಾಗಿದೆ. ನೀವು ಬರವಣಿಗೆ, ಪ್ರೋಗ್ರಾಮಿಂಗ್, ಎಡಿಟಿಂಗ್, ಡಿಸೈನಿಂಗ್ ಅಥವಾ ಇನ್ನಿತರ ಹಲವಾರು ಕೌಶಲ್ಯಗಳಲ್ಲಿ ಪ್ರವೀಣರಾಗಿದ್ದರೆ, ಆಗ ನೀವು ಫ್ರೀಲ್ಯಾನ್ಸರ್‌ಗಳೊಂದಿಗೆ ಕೆಲಸ ಮಾಡುವ ಕಂಪನಿಗಳಿಗಾಗಿ ಹುಡುಕಬಹುದು. ಅಪ್‌ವರ್ಕ್, ಪೀಪಲ್‌ಪರ್‌ಅವರ್, ಫೈವರ್, ಅಥವಾ ಟ್ರೂಲ್ಯಾನ್ಸರ್ ನಂತಹ ಪೋರ್ಟಲ್‌ಗಳಲ್ಲಿ ನೀವು ಅಂತಹ ಕೆಲಸಗಳ ಕುರಿತು ಹುಡುಕಬಹುದು.
ಈ ಪೋರ್ಟಲ್‌ಗಳಲ್ಲಿ ರಿಜಿಸ್ಟರ್ ಮಾಡಲು ಸಣ್ಣ ಶುಲ್ಕದ ಅಗತ್ಯವಿರುತ್ತದೆ, ನೀವು ಮಾಡುವ ಕೆಲಸದ ಆಧಾರದ ಮೇಲೆ ನೀವು ಫ್ರೀಲ್ಯಾನ್ಸರ್ ಆಗಿ ಹೆಚ್ಚು ಹಣವನ್ನು ನೀಡುವ ಗಿಗ್‌ಗಳನ್ನು ತ್ವರಿತವಾಗಿ ಕಾಣಬಹುದು.
5. ಬ್ಲಾಗಿಂಗ್ ಶುರು ಮಾಡಿ
ಮನೆಯಿಂದಲೇ ಹಣ ಗಳಿಸುವುದು ಹೇಗೆಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ನೀವು ಮಾಡಬಹುದಾದ ಇನ್ನೊಂದು ಕೆಲಸವೆಂದರೆ, ಬ್ಲಾಗ್ ಅನ್ನು ಪ್ರಾರಂಭಿಸುವುದು. ವರ್ಡ್‌ಪ್ರೆಸ್, ಮೀಡಿಯಮ್, ವೀಬ್ಲಿ, ಅಥವಾ ಬ್ಲಾಗರ್ ನಂತಹ ಬ್ಲಾಗಿಂಗ್ ಸೈಟ್‌ಗಳಲ್ಲಿ ಸೈನ್ ಅಪ್ ಮಾಡಿ. ನಂತರ ನೀವು ಮಾಡಬೇಕಿರುವುದು ಇಷ್ಟೇ, ಅಡುಗೆ ಮತ್ತು ರೆಸಿಪಿಗಳು, ಪುಸ್ತಕ ವಿಮರ್ಶೆಗಳು, ಪ್ರಯಾಣ, ಆರ್ಟ್ ಮತ್ತು ಕ್ರಾಫ್ಟ್ ಮುಂತಾದ ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಹುಡುಕುವುದು.
ನೋಡುಗರ ಮೂಲಕ ನಿಮ್ಮ ಬ್ಲಾಗ್ ಸ್ವಲ್ಪ ಜನಪ್ರಿಯತೆಯನ್ನು ಪಡೆಯಲು ಪ್ರಾರಂಭಿಸಿದ ನಂತರ, ನೀವು ಜಾಹೀರಾತುಗಳ ಮೂಲಕವೂ ಹಣ ಗಳಿಸಬಹುದು. ಮತ್ತು, ಈ ಜನಪ್ರಿಯತೆ, ನಿಮ್ಮ ಸ್ಥಾನ ಮತ್ತು ನಿಮ್ಮ ಓದುಗರನ್ನು ಆಧರಿಸಿ, ಜಾಹೀರಾತಿನಿಂದಾಗಿ ನೀವು ತಿಂಗಳಿಗೆ ₹2,000-15,000 ಗಳಿಸಬಹುದು. ಹೆಚ್ಚುವರಿಯಾಗಿ, ಕಿಚನ್ ರೆಸಿಪಿಗಳು ಅಥವಾ ಕ್ರಾಫ್ಟ್ ಐಡಿಯಾಗಳಿರುವ ನಿಮ್ಮ ಬ್ಲಾಗ್‌ನಲ್ಲಿ ಇ-ಪುಸ್ತಕಗಳು ಅಥವಾ ವಿಶೇಷ ಪಿಡಿಎಫ್ ಗಳನ್ನು ಸಹ ನೀವು ಮಾರಾಟ ಮಾಡಬಹುದು.
6. ಸ್ಟಾಕ್‌ಗಳಲ್ಲಿ ಹೂಡಿಕೆ
ಸ್ಟಾಕ್ ಮಾರ್ಕೆಟ್‌ನಲ್ಲಿ ಮಾಡುವ ಹೂಡಿಕೆಯು ಕಾಲಾನಂತರದಲ್ಲಿ ಅಧಿಕ ಆದಾಯ ಗಳಿಸಲು ಉತ್ತಮ ಮಾರ್ಗವಾಗಿದೆ. ನೀವು ಸ್ಟಾಕ್ ಮಾರ್ಕೆಟ್‌ಗಳಲ್ಲಿ ಹೂಡಿಕೆ ಮಾಡಿದಾಗ, ನೀವು ಮೂಲತಃ ಕಂಪನಿಯ ಷೇರುಗಳನ್ನು ಖರೀದಿಸುತ್ತೀರಿ; ಈ ಷೇರುಗಳ ಮೌಲ್ಯವು ಹೆಚ್ಚಾದಾಗ, ನೀವು ಕಂಪನಿಯಿಂದ "ಡಿವಿಡೆಂಡ್‌ಗಳನ್ನು" ಪಡೆಯುತ್ತೀರಿ. ಲಾಭದಾಯಕ ಷೇರುಗಳು ಹೆಚ್ಚಿನ ಡಿವಿಡೆಂಡ್‌ಗಳನ್ನು ಉಂಟುಮಾಡಬಹುದು ಮತ್ತು ಮನೆಯಿಂದಲೇ ಹಣ ಗಳಿಸಲು ಉತ್ತಮ ಮಾರ್ಗವಾಗಬಹುದು.
ನೆನಪಿಡಿ, ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವಾಗ ಯಾವಾಗಲೂ ಸ್ವಲ್ಪ ರಿಸ್ಕ್ ಇದ್ದೇ ಇರುತ್ತದೆ. ಏಕೆಂದರೆ ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ, ನಿಮ್ಮ ಷೇರುಗಳ ಮೌಲ್ಯವು ಕಡಿಮೆಯಾಗಬಹುದು. ಆದರೆ ನಿಮ್ಮ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸುವ ಮೂಲಕ ನೀವು ಈ ಅಪಾಯವನ್ನು ಕಡಿಮೆ ಮಾಡಬಹುದು.
7. ಬಾಡಿಗೆ ಪ್ರಾಪರ್ಟಿಗಳಲ್ಲಿ ಹೂಡಿಕೆ ಮಾಡಿ
ಮನೆಯಿಂದಲೇ ಆದಾಯ ಗಳಿಸುವ ಇನ್ನೊಂದು ಮಾರ್ಗವೆಂದರೆ ಪ್ರಾಪರ್ಟಿಗಳಲ್ಲಿ ಹೂಡಿಕೆ ಮಾಡುವುದು. ನೀವು ಮನೆಗಳು, ಕಛೇರಿಗಳು, ಅಪಾರ್ಟ್ಮೆಂಟ್ ಕಟ್ಟಡಗಳು ಮತ್ತಿತರ ರೀತಿಯ ರಿಯಲ್ ಎಸ್ಟೇಟ್‌ಗಳನ್ನು ಖರೀದಿಸಬಹುದು. ನಂತರ ಅವುಗಳನ್ನು ಬಾಡಿಗೆಗೆ ನೀಡಬಹುದು. ಈ ರೀತಿಯಾಗಿ, ನೀವು ಪ್ರತಿ ತಿಂಗಳು ನಿಯಮಿತ ಬಾಡಿಗೆಯ ಆದಾಯವನ್ನು ಗಳಿಸಬಹುದು. ಈ ಆದಾಯವು ನೀವು ಹೊಂದಿರುವ ಪ್ರಾಪರ್ಟಿಗಳ ಸಂಖ್ಯೆ ಮತ್ತು ಪ್ರಾಪರ್ಟಿಗಳ ಪ್ರಕಾರವನ್ನು ಅವಲಂಬಿಸಿರುತ್ತದೆ. ಜೊತೆಗೆ ಬಾಡಿಗೆದಾರರ ಸಂಖ್ಯೆ ಹಾಗೂ ಬಾಡಿಗೆ ಮೊತ್ತವನ್ನು ಅವಲಂಬಿಸಿರುತ್ತದೆ. ನೆನಪಿಡಿ, ಯಾವುದೇ ಹಣಕಾಸಿನ ಅಪಾಯಗಳನ್ನು ಕಡಿಮೆ ಮಾಡಲು, ಹೂಡಿಕೆ ಮಾಡುವ ಮೊದಲು ನಿಮ್ಮ ಪ್ರಾಪರ್ಟಿಗೆ ಸರಿಯಾದ ಮಾರುಕಟ್ಟೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
8. ನಿಮ್ಮ ಮನೆ ಅಥವಾ ಕಾರನ್ನು ಬಾಡಿಗೆಗೆ ನೀಡಿ
ನೀವು ಬಾಡಿಗೆಗೆ ಪ್ರತ್ಯೇಕ ಪ್ರಾಪರ್ಟಿಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದಿದ್ದರೂ ಸಹ, ಪ್ರಸ್ತುತ ಹೊಂದಿರುವ ಪ್ರಾಪರ್ಟಿಗಳಿಂದಲೇ ನೀವು ಹಣ ಗಳಿಸಬಹುದು. ನೀವಿದನ್ನು Airbnb, ಟ್ರಿಪ್ಪಿಂಗ್.ಕಾಮ್, Vrbo, 99roomz ಮತ್ತಿತರ ಬಾಡಿಗೆ ಕಂಪನಿಗಳೊಂದಿಗೆ ಪಾರ್ಟ್ನರ್‌ಶಿಪ್ ಮಾಡುವ ಮೂಲಕ ಮಾಡಬಹುದು.
ನೀವು ಸ್ವಲ್ಪ ಸಮಯದವರೆಗೆ ಊರಿನಿಂದ ಹೊರಗಿರಬೇಕಿದ್ದರೆ, ನಿಮ್ಮ ಸಂಪೂರ್ಣ ಜಾಗವನ್ನು ನೀವು ಬಾಡಿಗೆಗೆ ನೀಡಬಹುದು, ಆದರೆ ಸ್ವಲ್ಪ ಹೆಚ್ಚುವರಿ ಹಣವನ್ನು ಮಾಡಲು ನೀವು ಹೆಚ್ಚುವರಿ ಕೊಠಡಿಗಳನ್ನು ಮತ್ತು ನಿಮ್ಮ ಕಾರನ್ನು ಸಹ ಬಾಡಿಗೆಗೆ ನೀಡಬಹುದು. ನೀವು ಎಷ್ಟು ಸಂಪಾದಿಸುತ್ತೀರಿ ಎಂಬುದು ನಿಮ್ಮ ಪ್ರಾಪರ್ಟಿ, ಅದಿರುವ ಸ್ಥಳ ಮತ್ತು ಪಾರ್ಟ್ನರ್ ರೆಂಟಲ್ ಕಂಪನಿಯ ಮೇಲೆ ಅವಲಂಬಿತವಾಗಿರುತ್ತದೆ.
9. ಮನೆಯಲ್ಲಿ ತಯಾರಾದ ವಸ್ತುಗಳನ್ನು ಮಾರಾಟ ಮಾಡುವುದು
ಮನೆಯಿಂದಲೇ ಸುಲಭವಾಗಿ ಹಣ ಗಳಿಸುವ ಇನ್ನೊಂದು ವಿಧಾನವೆಂದರೆ ಕೈಯಿಂದ ತಯಾರಿಸಿದ ಉತ್ಪನ್ನಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದು. ಇದು ಕ್ವಿಲ್ಟ್‌ಗಳು, ಪರಿಮಳಯುಕ್ತ ಮೇಣದಬತ್ತಿಗಳು, ಬೋಟಿಕ್ ಸೋಪ್‌ಗಳು, ಕ್ಯಾಲಿಗ್ರಫಿ, ಪೇಂಟಿಂಗ್‌ಗಳು, ವಾಲ್ ಹ್ಯಾಂಗಿಂಗ್‌ಗಳು, ಟೇಬಲ್ ಮ್ಯಾಟ್‌ಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಒಳಗೊಂಡಿರುತ್ತದೆ.
ಇಟ್ಸಿ, ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್, ಅಮೆಜಾನ್, ಫ್ಲಿಪ್ಕಾರ್ಟ್, ಆಜಿಯೋ ಮತ್ತು ಇಬೇ ನಂತಹ ಸೆಲ್ಲರ್ ಸೈಟ್‌ಗಳಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ, ನಿಮ್ಮ ಮನೆಯಲ್ಲಿ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಹೆಚ್ಚಿನ ಅವಕಾಶಗಳನ್ನು ನೀವು ಕಾಣಬಹುದು. ಅಥವಾ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸೋಷಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಸಂಪರ್ಕಿಸುವ ಗ್ರಾಹಕರಿಗೆ ನೀವು ನೇರವಾಗಿ ಮಾರಾಟ ಮಾಡಲು ಆಯ್ಕೆ ಮಾಡಬಹುದು. ಯಾವುದೇ ರೀತಿಯಲ್ಲಿ, ನಿಮ್ಮ ಗಳಿಕೆಯು ನೀವು ಮಾರಾಟ ಮಾಡುವ ಉತ್ಪನ್ನಗಳನ್ನು ಮತ್ತು ನಿಮ್ಮ ಮಾರ್ಕೆಟಿಂಗ್ ಸ್ಕಿಲ್‌ಗಳನ್ನು ಅವಲಂಬಿಸಿರುತ್ತದೆ.
10. ನಿಮ್ಮ ಡಿಜಿಟಲ್ ಉತ್ಪನ್ನಗಳನ್ನು ಮಾರಾಟ ಮಾಡಿ
ನೀವು ಪ್ರತ್ಯೇಕವಾಗಿ ಡಿಜಿಟಲ್ ಉತ್ಪನ್ನಗಳನ್ನು ರಚಿಸಬಹುದು, ಅಂದರೆ ಡೌನ್‌ಲೋಡ್ ಮಾಡಬಹುದಾದ ಅಥವಾ ಸ್ಟ್ರೀಮ್ ಮಾಡಬಹುದಾದ ಮೀಡಿಯಾ. ಮತ್ತು ಅವುಗಳನ್ನು ಅಮೆಜಾನ್, ಉಡೆಮಿ, ಸ್ಕಿಲ್‌ಶೇರ್, ಕೋರ್ಸ್ಎರಾ, ಅಥವಾ ನಿಮ್ಮ ಸ್ವಂತ ವೆಬ್‌ಸೈಟ್ ಅಥವಾ ಬ್ಲಾಗ್ ಸೈಟ್‌ಗಳ ಮೂಲಕ ವಿತರಿಸಬಹುದು ಮತ್ತು ಮಾರಾಟ ಮಾಡಬಹುದು.
ಆಡಿಯೋ ಅಥವಾ ವೀಡಿಯೋ ಕೋರ್ಸ್‌ಗಳು, ಇ-ಪುಸ್ತಕಗಳು, ಪ್ಲಗ್-ಇನ್‌ಗಳು, ಪಿಡಿಎಫ್ ಗಳು, ಪ್ರಿಂಟೆಬಲ್‌ಗಳು ಅಥವಾ ಯುಎಕ್ಸ್ ಕಿಟ್‌ಗಳು ನಿಮ್ಮ ಆಸಕ್ತಿ ಮತ್ತು ತಿಳುವಳಿಕೆಯ ಆಧಾರದ ಮೇಲೆ ವಿವಿಧ ವಿಷಯಗಳನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ರೆಸಿಪಿ ಕಲೆಕ್ಷನ್‌ಗಳು, ಡಿಸೈನ್ ಟೆಂಪ್ಲೇಟ್‌ಗಳು ಅಥವಾ ವೈರ್‌ಫ್ರೇಮ್‌ಗಳು. ನೀವು ಉತ್ಪನ್ನವನ್ನು ಒಮ್ಮೆ ಮಾತ್ರ ಮಾಡಬೇಕಾಗಿರುವುದರಿಂದ ಹಾಗೂ ನೀವದನ್ನು ಆನ್‌ಲೈನ್‌ನಲ್ಲಿ ಎಷ್ಟು ಬಾರಿ ಬೇಕಾದರೂ ಮಾರಾಟ ಮಾದುವುದರಿಂದ, ಉತ್ತಮವಾಗಿ ತಯಾರಿಸಿದ ಮತ್ತು ವಿಭಿನ್ನ ಉತ್ಪನ್ನಕ್ಕಾಗಿ ನೀವು ಹೆಚ್ಚಿನ ಲಾಭಾಂಶವನ್ನು ಹೊಂದಬಹುದು.
11. ಫುಡ್ ಡೆಲಿವರಿ ಸರ್ವೀಸ್ ಅನ್ನು ಪ್ರಾರಂಭಿಸಿ
ಕುಕಿಂಗ್ ಮತ್ತು ಬೇಕಿಂಗ್ ಎರಡನ್ನೂ ಆನಂದಿಸುವವರು ಫುಡ್ ಡೆಲಿವರಿ ಸರ್ವೀಸ್ ಅನ್ನು ಪ್ರಾರಂಭಿಸುವ ಮೂಲಕ ಮನೆಯಿಂದಲೇ ಹಣ ಗಳಿಸಬಹುದು. ನೀವು ಬೇಕ್ ಮಾಡುವ ಐಟಂಗಳು ಮತ್ತು ಸಿಹಿತಿಂಡಿಗಳಿಂದ ಹಿಡಿದು, ಪ್ರತಿದಿನದ ಪ್ಯಾಕೇಜ್ಡ್ ಊಟದವರೆಗೆ ಎಲ್ಲವನ್ನೂ ಮಾಡಲು ಆಯ್ಕೆ ಮಾಡಬಹುದು, ಅಥವಾ ವಿಶೇಷ ಸಂದರ್ಭಗಳಲ್ಲಿ ಕೇಟರಿಂಗ್ ಸರ್ವೀಸ್ ಅನ್ನು ಸಹ ನೀಡಬಹುದು.
ನಂತರ, ನೀವು ಝೊಮ್ಯಾಟೊ ಮತ್ತು ಸ್ವಿಗ್ಗಿ ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಆಹಾರವನ್ನು ಮಾರಾಟ ಮಾಡಬಹುದು ಅಥವಾ ಸೋಷಿಯಲ್ ಮೀಡಿಯಾದ ಮೂಲಕ ಅಥವಾ ಫೇಸ್‌ಬುಕ್ ಅಥವಾ ವಾಟ್ಸಾಪ್ ನಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಮೂಲಕ ಸರಳವಾಗಿ ಜಾಹೀರಾತು ನೀಡಬಹುದು.
12. ಟ್ರಾವೆಲ್ ಏಜೆಂಟ್ ಅಥವಾ ಟ್ರಾವೆಲ್ ಪ್ಲ್ಯಾನರ್ ಆಗಿ ಕೆಲಸ ಮಾಡಿ
ಮನೆಯಿಂದಲೇ ಹಣ ಗಳಿಸಲು ಉತ್ತಮ ಮಾರ್ಗವಾಗಿರುವ ಟ್ರಾವೆಲ್ ಏಜೆಂಟ್ ಅಥವಾ ಟ್ರಾವೆಲ್ ಪ್ಲ್ಯಾನರ್ ಇದು ಕಡೆಗಣಿಸಲ್ಪಟ್ಟ ಕೆಲಸವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಯಾಣದ ವ್ಯವಸ್ಥೆ ಮಾಡುವುದು ಮತ್ತು ಟಿಕೆಟ್‌ಗಳನ್ನು ಬುಕ್ ಮಾಡುವುದು, ಎಲ್ಲವನ್ನೂ ಆನ್‌ಲೈನ್‌ನಲ್ಲಿ ಮಾಡಬಹುದಾದರೂ, ಬ್ಯುಸಿ ಇರುವವರಿಗೆ ಅಥವಾ ಇಂಟರ್ನೆಟ್‌ನ ಬಗ್ಗೆ ಹೆಚ್ಚು ಪರಿಚಯವಿಲ್ಲದವರಿಗೆ ಇದು ದೊಡ್ಡ ತೊಂದರೆಯಾಗಬಹುದು. ಹೀಗಾಗಿ, ಸಾಮಾನ್ಯವಾಗಿ ಇವರು ಸರಿಯಾಗಿ ಪ್ರಯಾಣದ ವ್ಯವಸ್ಥೆ ಮಾಡುವ ಟ್ರಾವೆಲ್ ಏಜೆಂಟ್‌ಗಳ ಕಡೆಗೆ ಮರಳುತ್ತಾರೆ.
ಆದ್ದರಿಂದ, ಚೀಪ್ ಫ್ಲೈಟ್‌ಗಳು, ಹೋಟೆಲ್ ಬುಕಿಂಗ್ ಮತ್ತು ಇತರ ಉತ್ತಮ ಡೀಲ್‌ಗಳನ್ನು ಹುಡುಕುವುದು ಹೇಗೆ ಎಂದು ನಿಮಗೆ ತಿಳಿದಿದ್ದರೆ, ನೀವು ಅಪ್‌ವರ್ಕ್, ಅವಂತ್‌ಸ್ಟೇ, ಅಥವಾ ಹಾಪರ್‌ನಂತಹ ಸೈಟ್‌ನೊಂದಿಗೆ ಕೆಲಸ ಮಾಡಲು ಸೈನ್ ಅಪ್ ಮಾಡಬಹುದು ಅಥವಾ ಸೆಲ್ಫ್-ಎಂಪ್ಲಾಯ್ಡ್ ಟ್ರಾವೆಲ್ ಏಜೆಂಟ್ ಆಗಿಯೂ ಕೆಲಸ ಮಾಡಬಹುದು. ಆಮೇಲಿನ ನಿಮ್ಮ ಗಳಿಕೆಯು ನಿಮ್ಮ ಗ್ರಾಹಕರು ಮತ್ತು ನೀವು ಕೆಲಸ ಮಾಡುವ ಕಂಪನಿಯನ್ನು ಅವಲಂಬಿಸಿರುತ್ತದೆ.
13. ಡೇಟಾ ಎಂಟ್ರಿ ಕೆಲಸಗಳನ್ನು ಆಯ್ಕೆ ಮಾಡಿ
ಮನೆಯಿಂದಲೇ ಹಣ ಗಳಿಸಲು ಬಯಸುವವರಿಗೆ ಡೇಟಾ ಎಂಟ್ರಿ ಮತ್ತೊಂದು ಆಯ್ಕೆಯಾಗಿದೆ. ಇದು ಸಾಕಷ್ಟು ಕೆಲಸದಲ್ಲಿ ಹೊಂದಾಣಿಕೆಯನ್ನು ನೀಡುತ್ತದೆ ಮತ್ತು ಪಾರ್ಟ್-ಟೈಮ್ ಕೆಲಸಕ್ಕೆ ಉತ್ತಮ ಆಯ್ಕೆಯಾಗಿದೆ. ನಿಮಗೆ ಬೇಕಾಗಿರುವುದು ಕೇವಲ ಕಂಪ್ಯೂಟರ್, ಎಕ್ಸೆಲ್ ಮತ್ತು ಇತರ ಮೈಕ್ರೋಸಾಫ್ಟ್ ಟೂಲ್‌ಗಳ ಬಗೆಗಿನ ಜ್ಞಾನ ಮತ್ತು ನಿಖರತೆ.
ನಂತರ ನೀವು ಆಕ್ಸಿಯಾನ್ ಡೇಟಾ ಎಂಟ್ರಿ ಸರ್ವೀಸಸ್, ಡೇಟಾ ಪ್ಲಸ್, ಫ್ರೀಲ್ಯಾನ್ಸರ್ ಅಥವಾ ಗುರುಗಳಂತಹ ವಿಶ್ವಾಸಾರ್ಹ ಸೈಟ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದು ಮತ್ತು ವಿಶ್ವಾದ್ಯಂತ ಕಂಪನಿಗಳಿಂದ ಡೇಟಾ ಎಂಟ್ರಿ ಕೆಲಸಗಳನ್ನು ಸ್ವೀಕರಿಸಲು ಪ್ರಾರಂಭಿಸಬಹುದು (ನಿಮ್ಮ ವಿವರಗಳನ್ನು ನೀಡುವ ಮೊದಲು ಅವರ ಕಾನೂನುಬದ್ಧತೆಯನ್ನು ಪರೀಕ್ಷಿಸಲು ಮರೆಯದಿರಿ). ಈ ಕೆಲಸಗಳಿಗೆ ನೀವು ಗಂಟೆಗೆ ₹300 ರಿಂದ ₹1,500 ಗಳಿಸಬಹುದು
14. ಕಂಟೆಂಟ್ ರೈಟಿಂಗ್ ಮೂಲಕ
ಬರವಣಿಗೆ ಮತ್ತು ವ್ಯಾಕರಣ ಉತ್ತಮವಾಗಿ ತಿಳಿದಿರುವವರಿಗೆ, ಕಂಟೆಂಟ್ ರೈಟಿಂಗ್ ಮೂಲಕ ಹಣ ಗಳಿಸುವುದು ಮತ್ತೊಂದು ಆಯ್ಕೆಯಾಗಿದೆ. ಫ್ರೀಲ್ಯಾನ್ಸರ್, ಅಪ್‌ವರ್ಕ್, ಟ್ರೂಲ್ಯಾನ್ಸರ್, ಫೈವರ್ ಮತ್ತು ಗುರು ನಂತಹ ಸೈಟ್‌ಗಳು ಸಾಕಷ್ಟು ಅವಕಾಶಗಳನ್ನು ನೀಡುತ್ತವೆ. ನೀವು ಮಾಡಬೇಕಾಗಿರುವುದು ಕೇವಲ ರಿಜಿಸ್ಟ್ರೇಷನ್ ಮಾತ್ರ. ಮತ್ತು ಕೆಲವು ಸ್ಯಾಂಪಲ್ ಆರ್ಟಿಕಲ್‌ಗಳನ್ನು ಹಂಚಿಕೊಳ್ಳುವುದು ಮತ್ತು ಮನೆಯಿಂದಲೇ ಹಣ ಗಳಿಸಲು ನಿಮ್ಮ ಬರವಣಿಗೆಯನ್ನು ಪ್ರಾರಂಭಿಸಿ.
15. ಅಫಿಲಿಯೇಟ್ ಮಾರ್ಕೆಟಿಂಗ್ ಮೂಲಕ
ನೀವು ವೆಬ್‌ಸೈಟ್, ಬ್ಲಾಗ್ ಅಥವಾ ದೊಡ್ಡ ಮೇಲಿಂಗ್ ಲಿಸ್ಟ್ ಇರುವ ದೊಡ್ಡ ಸೋಷಿಯಲ್ ಮೀಡಿಯಾವನ್ನು ಹೊಂದಿದ್ದರೆ, ಆಗ ನೀವು ಅಫಿಲಿಯೇಟ್ ಮಾರ್ಕೆಟಿಂಗ್ ಮೂಲಕ ಮನೆಯಿಂದಲೇ ಹಣ ಗಳಿಸಬಹುದು.
ಅಫಿಲಿಯೇಟ್ ಮಾರ್ಕೆಟಿಂಗ್‌ನೊಂದಿಗೆ, ನೀವು ಅಮೆಜಾನ್ ನಂತಹ ನಿರ್ದಿಷ್ಟ ಬ್ರ್ಯಾಂಡ್ ಅಥವಾ ಕಂಪನಿಗೆ ಅಫಿಲಿಯೇಟ್ ಆಗುತ್ತೀರಿ. ನೀವು ಮಾಡಬೇಕಿರುವುದು ಇಷ್ಟೇ, ಅವರ ಉತ್ಪನ್ನಗಳನ್ನು ನಿಮ್ಮ ಫಾಲೋವರ್‌ಗಳಿಗೆ ಅಥವಾ ಓದುಗರಿಗೆ ಪ್ರಚಾರ ಮಾಡುವುದು ಮತ್ತು ನಿಮ್ಮ ಸೈಟ್‌ನಲ್ಲಿ ಅವರ ಉತ್ಪನ್ನಗಳಿಗೆ ಲಿಂಕ್ ಸೇರಿಸುವುದು. ನಂತರ ನೀವು ಕಮಿಷನ್‌ಗಳ ಆಧಾರದ ಮೇಲೆ ಹಣ ಗಳಿಸುವಿರಿ. ಆದ್ದರಿಂದ ನೀವು ನೀಡುವ ನಿರ್ದಿಷ್ಟ ಲಿಂಕ್ ಅನ್ನು ಬಳಸಿ, ಉತ್ಪನ್ನಗಳನ್ನು ಹೆಚ್ಚು ಜನರು ಖರೀದಿಸಿದಷ್ಟು, ನೀವು ಹೆಚ್ಚು ಗಳಿಸುತ್ತೀರಿ.
ಆದ್ದರಿಂದ, ನಾವು ಹೇಳಿದಂತೆ, ಸ್ವಲ್ಪ ಹೆಚ್ಚು ಪ್ರೊಡಕ್ಟಿವ್ ಆಗುವ ಮೂಲಕ ನೀವು ಮನೆಯಲ್ಲಿಯೇ ಕುಳಿತು ಹಣವನ್ನು ಗಳಿಸಬಹುದು. ಇಂಟರ್ನೆಟ್ ತುಂಬ ನೀವು ಮನೆಯಿಂದಲೇ ಮಾಡಬಹುದಾದಂತಹ ಕೆಲಸಗಳು ತುಂಬಿವೆ. ಅದೂ ಸಹ ನಿಮ್ಮ ಕಡೆಯಿಂದ ಹೆಚ್ಚಿನ ಹೂಡಿಕೆಯಿಲ್ಲದೆಯೇ. ಆದ್ದರಿಂದ, ಇವು ವಿದ್ಯಾರ್ಥಿಗಳು, ಗೃಹಿಣಿಯರು, ನಿವೃತ್ತರು ಮತ್ತು ಯಾರಾದರೂ ಹೆಚ್ಚಿನದನ್ನು ಮಾಡಲು ಬಯಸುವವರಿಗೆ ಉತ್ತಮ ಆಯ್ಕೆಗಳಾಗಿವೆ.
ಮತ್ತು ಈ ರೀತಿಯ ಯಾವುದೇ ಕೆಲಸವು ನಿಮ್ಮ ಆಸಕ್ತಿಗನುಸಾರವಾಗಿ ಸಿಕ್ಕರೆ, ಹೆಚ್ಚುವರಿ ಹಣ ಗಳಿಸುವಾಗ ನೀವು ಆನಂದಿಸುವಂತೆ ಮಾಡಲು ಅವು ಉತ್ತಮ ಮಾರ್ಗಗಳಾಗಿವೆ.
ನಕಲಿ ಏಜೆನ್ಸಿಗಳು, ವಂಚನೆಗಳು ಮತ್ತು ಮೋಸಗಳನ್ನು ತಪ್ಪಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮರೆಯದಿರಿ:
ಯಾವುದೇ ಸೈಟ್ ಅನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಮತ್ತು ಸೈನ್ ಅಪ್ ಮಾಡುವ ಮೊದಲು ಅದರ ಬಗ್ಗೆಯಿರುವ ವಿಮರ್ಶೆಗಳನ್ನೂ ಓದಿರಿ.
ಸೈಟ್ ಅನಗತ್ಯವಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ, ಅದನ್ನು ದೂರವಿರಿಸಲು ಪ್ರಯತ್ನಿಸಿ.
ಅಲ್ಲದೆ, ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಆದರೆ ಕಡಿಮೆ ಹಣವನ್ನು ನೀಡುವ ಕೆಲಸವನ್ನು ಪೋಸ್ಟ್ ಮಾಡುವ ಸೈಟ್‌ಗಳನ್ನು ದೂರವಿರಿಸಿ.
ಯಾವಾಗಲೂ ಸಹಿ ಮಾಡುವ ಮೊದಲು ನಿಮಗೆ ನೀಡಲಾಗುವ ಯಾವುದೇ ಒಪ್ಪಂದವನ್ನು ಪೂರ್ತಿಯಾಗಿ ಓದಿರಿ.